Skip to main content

praveen sooda

ಸದಸ್ಯರು

10 ವರ್ಷಗಳು 9 ತಿಂಗಳು
ಮೊದಲ ಹೆಸರು

praveen

ಕೊನೆಯ ಹೆಸರು

sooda

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನನ್ನ ಹೆಸರು ಪ್ರವೀಣ್ ಸೂಡ. ಊರು ಉಡುಪಿ ಜಿಲ್ಲೆ. ಹುಟ್ಟಿದ್ದು ಶಿವಮೊಗ್ಗ ಬೆಳದದ್ದು ಬೆಂಗಳೂರು. ಅಯುತಲ್ಲ ಕರಾವಳಿ ಮಲೆನಾಡು ಬಯಲು ಸೀಮೆಯ ಸಂಗಮ. ನಾನು ಕನ್ನಡದೊನು ಅಂತ ಹೇಳ್ಕೊಳ್ಳೋಕೆ ಹೆಮ್ಮೆ ಪಡ್ತೀನಿ. ಜಾತಿ, ಧರ್ಮ, ದೇವರರಲ್ಲಿ ಬೇಧಾ ಇಲ್ಲ. ನಂಬಿಕೆನು ಇಲ್ಲ ಅನ್ನಿ. ಹಾಗಂತ ಎಲ್ಲ ಬಿಟ್ಟಿರೋ ಅಬ್ಬೇಪಾರಿ ಅಲ್ಲ. ದೇವರು ಅನ್ನೋ ಪದಕ್ಕೆ ಬೇರೆ ಅರ್ಥ ಕೊಡೋ ಪ್ರಯತ್ನದಲ್ಲಿದೀನಿ. ಅಂದ್ರೆ ಆ ಅರ್ಥ ನನೀಗೆ ಮಾತ್ರ. ಸಾಧ್ಯ ನಂಗೆ ಬಸವಣ್ಣ, ಗಾಂಧಿ, ಬುದ್ಧ, ಲೆನಿನ್, ಮಾರ್ಕ್ಸ್ ಗಳೆ ದೇವರು. ಪೂಜೆ ಮಾಡೋ ಅಭ್ಯಾಸ ಇಲ್ಲ ಅಷ್ಟೇ. ಕಾರಣ ಇಲ್ದೇ ಸುತ್ತೋ ಅಭ್ಯಾಸ ಸ್ವಲ್ಪ ಜಾಸ್ತಿ. ತುಂಬಾ ಪ್ರವಾಸ ಪ್ರಿಯ ನಾನು. ಬೇಜಾನ್ ಫಿಲ್ಮ್ ನೊಡ್ತಿನಿ. ಇತ್ತೀಚೆಗೆ ಒಳ್ಳೇ ಸಿನಿಮಾ ಮಾತ್ರ ನೊಡ್ಬೆಕು ಅಂತ ನಿರ್ಧಾರ ಮಾಡ್ದೇ ಅದೇ ತಪ್ಪಾಗಿದೆ ತುಂಬಾ ಕಮ್ಮಿ ಸಿನಿಮಾ ನೊಡೊ ಹಾಗಾಗಿದೆ. ಇತ್ತೀಚೆಗೆ ಅಂದ್ರೆ ೩ ೪ ವರ್ಷ ಇಂದ ಸಾಹಿತ್ಯ ಓಡೋ ಅಭ್ಯಾಸ್ ಹಿಡ್ದಿದೆ. ನಂಗೆ ವಿಚಾರ ಸಾಹಿತ್ಯಗಳಲ್ಲಿ ಆಸಕ್ತಿ ಜಾಸ್ತಿ. ಶಿವರಾಂ ಕಾರಂತ, ಕುವೆಂಪು, ತೇಜಸ್ವಿ, ಅಕ್ಕಿಹೆಬ್ಬಾಳು ನರಸಿಂಹ ರಾಯರು, ಡಿವಿಜೀ, ಸಾಹಿತ್ಯಗಳು ಇಷ್ಟ ಆಗ್ತಾವೆ. ಇನ್ನೂ ಸಿನಿಮಾ ಅಂದ್ರೆ ಅಣ್ಣಾವ್ರು ತುಂಬಾ ತುಂಬಾ ಇಷ್ಟ, ಅನಂತ್ ನಾಗ್ ನ ದೇವರಂತ ನಟ ಅಂತೀನಿ, ಲೋಕೇಶ್ ಇಷ್ಟ ಆಗ್ತಾ ಇದ್ರು ಅವರ ಅಭಿರುಚಿ ಹಾಗಿತ್ತು, ಈಗ ಯೋಗ್ರಜ್ ಭಟ್ಟರು, ಸೂರಿ, ನಾಗತಿ, ಗುರುಪ್ರಸಾದ್ ಸಿನಿಮಾಗಳು ಕಂಡಿತಾ ನೊಡ್ಲೆ ಬೇಕು ಅನ್ಸೋ ಚಿತ್ರ ಅಷ್ಟೇ. ಮದುವೆ ಆಗೋ ಆಸೆ ಇದೆ ವಯಸ್ಸಾಗಿಲ್ಲ ಅಷ್ಟೇ.

ಸಿನಿಮಾಗಳು

ನಾನು ಹುಟ್ಟಿದಾಗಿಂದ ಇದುವರೆಗೂ ತಪ್‌ದೇ ಮಾಡ್ತ ಇರೋ ಕೆಲ್ಸಾ ಅಂದ್ರೆ ಸಿನಿಮಾ ನೋಡೋದು... ನಾನು ಅನ್ನವರ ಅಭಿಮಾನಿ, ಜೊತೆ ಅನಂತ್ ನಾಗ್, ಲೋಕೇಶ್ ಚಿತ್ರಗಳು ಇಷ್ಟ ಆಗ್ತಾವೆ, ಭೂತಯ್ಯನ ಮಗ ಅಯ್ಯು, ಬಂಧನ, ನಾಗರ ಹಾವು, ದ್ವೀಪ, ಇಂತೀ ನಿನ್ನ ಪ್ರೀತಿಯ, ಇನ್ನೂ ಎಷ್ಟೊಂದು

ಸಂಗೀತ

ಸಂಗೀತ.... ನನ್ನ ಒಬ್ಬ ಸ್ನೇಹಿತ ಅಂದ್ರೂ ಕಮ್ಮಿನೆ. ಅಮ್ಮನ ಎಷ್ಟ್ ಇಷ್ಟ ಪದಟ್‌ನಿನೋ ಇದನ್ನು ಅಷ್ಟೇ ಇಷ್ಟ ಪಡ್ತೀನಿ... ಏಂಜ್ ಹಳೆ ಹಾಡು ಅಂದ್ರೆ ತುಂಬಾ ಇಷ್ಟ.. ಇತ್ತೀಚೆಗೆ ಕಾಯ್ಕಿಣಿ ಬರೀತಾ ಇರೋ ಹಾಡನ್ಥು ನಂಗೆ ಹುಚ್ಚೆ ಹಿಡಿಸ್ತಾ ಇದೆ.. ಅದು ಬಿಟ್ರೆ ಹಿಂದಿ ಹಳೆ ಹಾಡು ತುಂಬಾ ಇಷ್ಟ ಆಗತ್ತೆ..

ಟಿವಿ

ನಿಜವಾಗ್ಲೂ ಕರ್ಮ ಕಾಂಡ ಕಣ್ರೀ ಈ ಟೀವೀ. ಬಾರಿ ಬಬ್ಲೀಗಮ್ ಧಾರಾವಾಹಿಗಳು ಅಷ್ಟೇ. ಆದ್ರೆ ಕ್ರಿಕೆಟ್ ಇದ್ರೆ ಮಾತ್ರ ಖುಷಿ ಇಂದ ಟೀವೀ ನೊಡ್ತಿನಿ. ಅದು ಬಿಟ್ರೆ ಕೆಲವೇ ಕೆಲವು ತುಂಬಾ ಇಷ್ಟ ಪಟ್ಟು ನೊಡ್ತ ಇದ್ದ ಧಾರಾವಾಹಿಗಳು ಇದೆ. ಅದ್ರಲ್ಲಿ ಪ್ರೀತಿ ಇಲ್ಲದ ಮೇಲೆ ಒಂದು

ಪುಸ್ತಕಗಳು

ವೈಚಾರಿಕ ಹಿನ್ನೆಲೆ ಇರೋ ಪುಸ್ತಕಗಳು ಇಷ್ಟ ಆಗ್ತಾವೆ. ಮೂರ್ತಿರಾಯರ ದೇವರು, ಕಾರಂತರ ಬಾಳವೆಯೇ ಬೆಳಕು, ಮೂಕಜ್ಜಿಯ ಕನಸು, ಕುವೆಂಪು ಅವರ ಎಲ್ಲ ಕೃತಿಗಳು, ಡಿವಿಜೀಯ ಮಂಕುತಿಮ್ಮನ ಕಗ್ಗ, ಬಾರ್ಕ್ ವೈಟ್ ಕಂಡ ಭಾರತ, ಇನ್ನೂ ಹಲವಾರು. ಜೊತೆ ಅನಂತಮೂರ್ತಿ ಕೃತಿಗಳು ಇಷ್ಟ ಆಗ್ತಾವೆ

ಡ್ರೆಸ್ಸು , ಬಟ್ಟೆ
0