Skip to main content

ಮಹೇಶ್ ಗಜಬರ್ ನಿಪ್ಪಾಣಿ

ಸದಸ್ಯರು

8 ವರ್ಷಗಳು 9 ತಿಂಗಳು
ಮೊದಲ ಹೆಸರು

ಮಹೇಶ

ಕೊನೆಯ ಹೆಸರು

ಗಜಬರ್

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ಹೇಳಿಕೊಳ್ಳುವಷ್ಟೇನು ದೊಡ್ಡ ವಿವರಗಳಿಲ್ಲ .UVCE ಕಾಲೇಜಿನಲ್ಲಿ B.E- ಮೆಕ್ಯಾನಿಕಲ್ ಮಾಡಿ ಈಗ ಕೆಲಸ ಹುಡುಕ್ತಾ ಇದ್ದೇನೆ. ಊರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕು ಚಿಕ್ಕಲವಾಳ. ನಿಪ್ಪಾಣಿ ನಮ್ಮ ಊರಿನ ಪಕ್ಕದ ನಗರ. ಕನ್ನಡ ಕಥೆ ಕಾದಂಬರಿಗಳು ಅಂದ್ರೆ ಪಂಚ ಪ್ರಾಣ. ಪೂರ್ಣಚಂದ್ರ ತೇಜಸ್ವಿ,ರವಿ ಬೆಳಗೆರೆ,ವಸುಧೇಂದ್ರ,ಶಿವರಾಂ ಕಾರಂತ ,ಪ್ರದೀಪ್ ಕೆಂಜಿಗೆ ನನ್ನ ಇಷ್ಟದ ಲೇಖಕರು. ಮರಾಠಿ ಊರಿನ ಭಾಷೆ ಆದ್ದರಿಂದ ಕನ್ನಡದಷ್ಟೇ ಮರಾಠಿ ಅಭಿಮಾನ್ ಮತ್ತು ಪ್ರೀತಿ.

ಹವ್ಯಾಸಗಳು

ಒಳ್ಳೆ ಹವ್ಯಾಸ ಇರದೇ ಇದ್ರೂ ಕೆಟ್ಟದಂತು ಏನು ಇಲ್ಲ

ಸಿನಿಮಾಗಳು

ಅಪ್ಪು ಅಂದ್ರೆ ಜೀವ. ರೊಮ್ಯಾಂಟಿಕ್,ಅಂಡರ್ ವರ್ಲ್ಡ್,ಹಾಸ್ಯ,ಥ್ರಿಲ್ಲರ್,ಸಸ್ಪೇನ್ಸ ಸಿನಿಮ ಅಂದ್ರೆ ಹುಚ್ಚು. ಫೈಟ್ ಸಿನಿಮ ಅಲರ್ಜಿ. ಇಂಗ್ಲಿಷ್ ನೋಡೇ ಇಲ್ಲ ಅಂತ ಹೇಳಬಹುದು.ಕೇವಲ ೧೦-೧೨ ಮಾತ್ರ.
ಕನ್ನಡ ,ತೆಲಗು,ಹಿಂದಿ ಭಾಷೆ ಆದ್ರೆ ಮೊದಲು ಹಾಜರ್.

ಸಂಗೀತ

ಸುಮಧುರ ಭಾವನೆ ತರೋ ಮಸಸಲ್ಲಿ ಅಚ್ಚು ಒತ್ತೋ ಸಾಹಿತ್ಯ ಇರೋ ಹಾಡುಗಳೆಂದರೆ ಪ್ರಾಣ.ಮುಕೇಶ್ ,ಕಿಶೋರಕುಮಾರ್ ,ಘಂಟಸಾಲ,Dr.ರಾಜಕುಮಾರ್,ಮೆಚ್ಚಿನ ಗಾಯಕರು,ಲತಾ,ಆಶಾ,ಸುನಿಧಿ,ಶ್ರೇಯಾ ಘೋಷಾಲ್.ಕವಿತಾ ಕೃಷ್ಣಮೂರ್ತಿ,ನಂದಿತ ಮೆಚ್ಚಿನ ಗಾಯಕಿಯರು. ಸರಸ್ವತಿ ಚಂದ್ರ ಚಿತ್ರದ "ಚಂದನ ಸಾ ಬದನ ಚಂಚಲ್ ಚಿತ್ತವನ್" ತುಂಬಾ ಇಷ್ಟವಾದ ಗೀತೆ.

ಟಿವಿ

ರಾಜಕೀಯ ಅಂದ್ರೆ ಪಂಚ ಪ್ರಾಣ ಅದಕ್ಕೆ news channel ಜಾಸ್ತಿ ನೋಡ್ತೀನಿ. TV9,आज तक ,NDTV,TIMES NOW ಫೇವರಿಟ್ ಚಾನೆಲ್ ಗಳು. ಮನೋರಂಜನೆಗೆ ಈ -ಟಿವಿ ಕನ್ನಡ,ಉದಯ ,U2,ಸುವರ್ಣ ,ಕಸ್ತೂರಿ ಅಷ್ಟೇ ಅಚ್ಚು ಮೆಚ್ಚು. U2 ನ ನಿರೂಪಕಿ ಹೇಮಲತಾ ಕಾರ್ಯಕ್ರಮ ಅಂದ್ರೆ ಟಿವಿ ಮುಂದೆ ಹಾಜರ್.

ಆಟಗಳು

ಜಾಸ್ತಿ ಗೊತ್ತಿಲ್ಲ ಬಿಡಿ

ಅಡಿಗೆ

ಸಸ್ಯಾಹಾರ ಜೀವ.ಮೊಟ್ಟೆ ಅಂದ್ರೆ ಪ್ರಾಣ.ಅಡಿಗೆ ಮಾಡೋಕ್ಕಂತು ಬರೋಲ್ಲ .ಜೋಳದ ರೊಟ್ಟಿ ಮನಹಿಡಿಸುವ ದಿನನಿತ್ಯದ ಊಟ. ಬೆಂಗಳೂರಿಗೆ ಬಂದ ಮೇಲೆ ರಾಗಿ ಮುದ್ದೆ ಕೂಡ ಅಭ್ಯಾಸ ಆಗಿ ಹೋಯ್ತು.

ತಾಣಗಳು

vismayanagari.com
vijaykarnatakaepaper.com
prajavaniepaper.com
thatskannada.com
google.com

ಪುಸ್ತಕಗಳು

ರವಿ ಬೆಳಗೆರೆ ,ವಸುಧೇಂದ್ರ,ನಾಗತಿಹಳ್ಳಿ ಚಂದ್ರಶೇಖರ್ ,ಪೂರ್ಣಚಂದ್ರ ತೇಜಸ್ವಿ,ಪ್ರದೀಪ್ ಕೆಂಜಿಗೆ,ಶಿವರಾಂ ಕಾರಂತ್ ಕನ್ನಡದ ಮನ ಮಿಡಿಯೋ ಲೇಖಕರು.
"ಪ್ಯಾಪಿಲಾನ್ " ನನ್ನ ಅತ್ಯುತ್ತಂ ಮೆಚ್ಚಿದ ಕೃತಿ. ಕಾಡಿನ ಕಥೆಗಳು ,ಕರ್ವಾಲೋ, ಬಾಟಮ್ ಐಟಂ ,ಗಾಂಧಿ ಹತ್ಯೆ ಮತ್ತು ಗೋಡ್ಸೆ,ನಮ್ಮಮ್ಮ ಅಂದ್ರೆ ನಂಗಿಷ್ಟ.ಚೋಮನಾ ದುಡಿ ಮೆಚ್ಚಿನ ಕೃತಿಗಳು .ಚೇತನ್ ಭಗತ್ ರವರ "3 mistakes of life", ಡಾನ್ ಬ್ರೌನ್ ರವರ "angles & demons","da vinci code". ಇಂಗ್ಲಿಷಿನ ಇಷ್ಟದ ಕಾದಂಬರಿಗಳು. ಇನ್ನು ಹೆಚ್ಹು ಇಂಗ್ಲಿಷ್ ಸಾಹಿತ್ಯ ಓದೋ ಪ್ರಯತ್ನ ಮಾಡ್ತ ಇದ್ದೇನೆ. ನಮ್ಮ ಭೈರಪ್ಪನವರ ಒಂದು ಕೃತಿ ಓದಿಲ್ಲ. ಅದನ್ನು ಓದೋ ಪ್ರಯತ್ನಮಾಡ್ತೀನಿ.

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್