Skip to main content

ಕನ್ನಡ

ವರ್ಣನೆ

ಕನ್ನಡ ಮತ್ತು ಅದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಇಲ್ಲಿ ಚರ್ಚೆ ನಡೆಸಿ.

ಪರೀಕ್ಷೆಗಳು

ಭಾರತದಲ್ಲಿ ಹಲವಾರು ಪರೀಕ್ಷೆಗಳು(ಉದಾಃ ಸಿ.ಎ,  ಸಿ.ಎಸ್)  ಬರೀ ಹಿ೦ದಿ/ಆ೦ಗ್ಲ ಭಾಷೆಯಲ್ಲೇ ಇರತ್ವೆ..ಕರ್ನಾಟಕದಲ್ಲಾದ್ರು ಕನ್ನಡದಲ್ಲಿ ಉತ್ತರ ಬರೆಯೋ ಸೌಲಭ್ಯ ಇದ್ರೆ ಹೇಗೆ??

ನಾಮಪದ ಮತ್ತು ಕ್ರಿಯಾಪದ.

ಆತ್ಮೀಯರೆ,

ಒಂದೆ ಪದ ನಾಮಪದವಾಗಿಯು ಕ್ರಿಯಾಪದವಾಗಿಯು ಒಂದೆ ವಾಕ್ಯದಲ್ಲಿ ಮೂಡಿಬಂದಿದೆ ಗಮನಿಸಿ.

೧. ಇರುವೆ ನೀ ಎಲ್ಲೆಲ್ಲೂ ಇರುವೆ,

೨. ತಂದೆ ಪೇಟೆಯಿಂದ ನನಗೇನು ತಂದೆ.

೩. ಸರಳ ನಿನ್ನ ಮಾತು ಬಹಳ ಸರಳ

ನಿಮಗೋ ತಿಳಿದಿದ್ದರೆ ದಯಮಾಡಿ ನಮಗೂ ತಿಳಿಸಿ.

ಕನ್ನಡ ಸಾಹಿತಿಗಳು ಪ್ರಚಾರ ಪ್ರಿಯರೇ?

ಇತ್ತೀಚೆಗೆ ಹಿಂದೂ ದೇವರ ನಿಂದನಾ ಹೇಳಿಕೆ ನೀಡಿದ ಕಲಬುರ್ಗಿ, ಅನಂತಮೂರ್ತಿಗಳು ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇವರು ಇಂದು ಕನ್ನಡ ಸಾಹಿತ್ಯದಲ್ಲಿ ಹೊಸ ಕೃಷಿಗಿಂತ ಪ್ರಚಾರಕ್ಕಾಗಿ ವಿವಾದಾತ್ಮಕ ಹೇಳಿಕೆ ರೂಢಿಸಿಕೊಂಡಿದ್ದಾರೆಯೇ?  ನಿಮ್ಮ ಅನಿಸಿಕೆ ಏನು? ಇಂತಹ ಮೂರ್ಖ ಹೇಳಿಕೆಗಿಂತ ಒಂದು ಉತ್ತಮ ಸಾಹಿತ್ಯ ಬರೆಯುವದರಲ್ಲಿ ತೊಡಗಿಸಿ ಕೊಂಡಿದ್ದರೆ ಉತ್ತಮ ಅನ್ನುವದು ನನ್ನ ಅನಿಸಿಕೆ.

ನುಡಿ ತಂತ್ರಾಂಶ ಹೇಗೆ ಬಳಸಬೆಕು

ಎಲ್ಲಾರಿಗೂ ನಮಸ್ಕಾರಗಳು,

ನನಗೆ ನುಡಿ ತಂತ್ರಾಂಶ ಹೇಗೆ ಬಳಸಬೆಕು ಎನ್ನುವ ಬಗ್ಗೆ ಯಾರಾದರೂ ಸಂಪೂರ್ಣ ಮಾಹಿತಿ ನೀಡುವೀರಾ ಪ್ಲೀಸ್ ..ಸದ್ಯ ನಾನು ಮೈಕ್ರೊಸಾಫ್ಟ್ ಕನ್ನಡ ತಂತ್ರಾಂಶ ಬಳಸುತೆದ್ದೆನೆ.. ಆದರೆ 

ಅದು ಸರಿಯಾಗಿ ಕನ್ವರ್ಟ್ ಆಗ್ತಾ ಇಲ್ಲಾ.. ಇದರಿಂದ ನನ್ನ ಬರವಣಿಗೆಗೆ ತುಂಬಾ ತೊಂದರೆಯಾಗ್ತಾ ಇದೆ...ಯಾವುದಾದರು ಲಿಂಕ್ ಇದ್ದರೂ ಪರ್ವಾಗಿಲ್ಲಾ ...ಸಹಾಯ ಮಾಡಿ.

 

ಮೆಟ್ರೋ ಬಂತು ಹಿಂದಿ ತಂತು..

Submitted by pavu on ಗುರು, 11/24/2011 - 13:56

ನಮ್ಮ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ನಿಜಕ್ಕೂ ಸಂತೋಷವನ್ನು ತಂದಿದೆ ಆದರೆ ಅದರ ಜೊತೆಗೆ ಭಾಷಾಂತರ ನೀತಿಯಿಂದ ಬೆಂಗಳೂರಿನ ಜನತೆಗೆ ದುಃಖವನ್ನು ಉಂಟು ಮಾಡಿದೆ. ಮೆಟ್ರೋದಲ್ಲಿ ಅನಗತ್ಯವಾಗಿ ಹಿಂದಿ ನಾಮಫಲಕಗಳನ್ನು ಹಾಕಿದ್ದು ಅಲ್ಲಿಯ ಸಿಬ್ಬಂದಿಗಳಿಗೆ ಕನ್ನಡ ಮಾತನಾಡಲು ಬಾರದಿರುವುದು ನಿಜಕ್ಕೂ ವಿಷಾದನೀಯ. ತ್ರಿ ಭಾಷಾ ಸೂತ್ರ ಎಂದು ಹೇಳಿ ಹಿಂದಿಯನ್ನು ಮಾತ್ರ ಬಳಕೆ ಮಾಡಿರುವುದು ನುಂಗಲಾರದ ಒಂದು ತುತ್ತು ಎಂದು ಹೇಳಬಹುದು.ಹೆಚ್ಚತ್ತವಾಗಿ ಕನ್ನಡಿಗರು ಇರುವ ಬೆಂಗಳೂರಿನಲ್ಲಿ ಹಿಂದಿ ಬರುವ ಕಡಿಮೆ ಜನಗಳಿಗೆ ಸಹಾಯ ಮಾಡುತ್ತಿರುವ ಮೆಟ್ರೋ ಕನ್ನಡಿಗರನ್ನು ತುಳಿಯುತ್ತಿದೆ. ಈ ಕೆಲಸ ಹೇಗಿದೆ ಎಂದರೆ ಒಬ್ಬರಿಗಾಗಿ ೨೦ ಜನರನ್ನು ಸಾಯಿಸುವಂತಿದೆ.. ಇದೇ ರೀತಿ ಮುಂದುವರೆದರೆ ಮುಂದೆ ಕನ್ನಡ ಎಂಬ ಹೆಸರು ಅಳಿದು ಹೋಗುತ್ತದೆ.

ಕನ್ನಡಿಗರಿಗೆ ಕನ್ನಡ ಭಾಷೆ ಮಾತ್ರ ಸಾಕೆ?

ಕನ್ನಡ ಬಾಂಧವರೇ, ಕನ್ನಡಿಗರಿಗೆ  ಭಾಷೆ ರಾಜ್ಯ ಕನ್ನಡ ಕಲಿತರೆ ಮಾತ್ರ ಸಾಕೆ? ದೇಶದ ರಾಜ್ಯಗಳೊಂದಿಗೆ ಸಂಪರ್ಕಕ್ಕಾದರು ದೇಶದ ಭಾಷೆ ಹಿಂದಿ ಕಲಿಯಬಾರದೆ. ಜ್ನಾನಕ್ಕಾಗಿ,  ಪರಸ್ಪರ ಅರಿವಿಗಾಗಿ, ಆಧುನಿಕ ಸಂಪರ್ಕಕ್ಕಾಗಿ ಅಂದರೆ, ಮೊಬೈಲ್, ಇಂಟರ್ನೆಟ್ ಬಳಕೆಗಾಗಿ, ಮಾಹಿತಿಗಾಗಿ, ಆಂಗ್ಲ ಭಾಷೆ ಕಲಿಯುವುದು ಬೇಡವೆ? ಕನ್ನಡ ಮಾತ್ರ ಸಾಕು ಎಂದರೆ, ನಾವು, ನಮ್ಮ ಮುಂದಿನ ಪೀಳಿಗೆ ಮೂಕರಾಗುವುದಿಲ್ಲವೇ?  

ನಿರೀಕ್ಷಿತ ಮಟ್ಟದಲ್ಲಿ ವಿಸ್ಮಯ ನಗರಿ ತಾಣ ಓದುಗರು ತಲುಪುತ್ತಿಲ್ಲ ಏಕೆ?

ಪ್ರಿಯ ವಿಸ್ಮಯ ನಗರಿ ಓದುಗ ಮಿತ್ರರೇ, ನಮ್ಮ ವಿಸ್ಮಯ ನಗರಿ ತಾಣ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ತಾಣ. ಇದಕ್ಕೆ ಎರಡು ಮಾತಿಲ್ಲ. ಆದರೆ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ತಲುಪುತ್ತಿಲ್ಲ. ಎಲ್ಲಾ ರೀತಿಯ ಮಾಹಿತಿಗಳು ಈ ತಾಣದಲ್ಲಿ ದೊರೆಯುತ್ತವೆ. ಕವಿತೆಗಳಿವೆ, ಕಥೆಗಳಿವೆ, ಲೇಖನಗಳಿವೆ, ವೈಜ್ನಾನಿಕ ಲೇಖನಗಳಿವೆ, ಮನಸ್ಸಿಗೆ ಮುದನೀಡುವ ಲೇಖನಗಳಿವೆ, ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಲೇಖನಗಳಿವೆ ಆದರೂ ಓದುಗರಿಗೆ ಏಕೆ ಮುಟ್ಟುತ್ತಿಲ್ಲಾ? ಇದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕು? ಬಲ್ಲ ಮಿತ್ರರು ತಿಳಿಸುವಿರಾ?