ಹಾಡು ಹಕ್ಕಿಯ ಕಾಡು ಭೇಟೆ
ಪ್ರಕೃತಿ ಎಂಬುದು ಮಾನವನ ನಿಲುಕಿಗೆ ಸಿಗದ ಒಂದು ಅಧ್ಬುತವೇ ಸರಿ, ಮನುಷ್ಯ ಎಷ್ಟೇ ವೈಜ್ಞಾನಿಕವಾಗಿ ಬೆಳೆದರು ಅವನಿನ್ನೂ ತಿಳಿಯಬೇಕಾದ್ದಷ್ಟು ಬಹಳಷ್ಟಿದೆ ಎಂಬುದನ್ನು ಪ್ರಕೃತಿ ಆಗಾಗ ನೆನಪಿಸುತ್ತಲೇ ಸಾಗುತ್ತದೆ. ನಮ್ಮ ದೈನಂದಿನ ಚಟುವಟಿಕೆಗಳ ಆಳದಲ್ಲಿ ನಮ್ಮ ಸುತ್ತಲಿನ ಎಷ್ಟೋ ವಿಚಾರಗಳು ನಮ್ಮ ಗಮನಕ್ಕೆ ಬಂದಿರುವುದಿಲ್ಲ.