Skip to main content

ಪುಸ್ತಕ

ನಿಮ್ಮ ಕೈನಲ್ಲೇ ಗ್ರಂಥಾಲಯ

ಇಂದ ontipremi
ಬರೆದಿದ್ದುMarch 18, 2016
noಅನಿಸಿಕೆ

ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಹೀಗೇನಿದ್ದರೂ ಸ್ಮಾರ್ಟ್ ಯುಗ. ಕನ್ನಡ ಪುಸ್ತಕಗಳನ್ನು ನೀವು ಇನ್ನು ಮುಂದೆ ನಿಮ್ಮ ಮೊಬೈಲ್ ನಲ್ಲಿಯೇ ಓದಬಹುದು. ಇಂಟರ್ ನೆಟ್ ನ ಅವಶ್ಯಕತೆಯಿಲ್ಲ. ಎಲ್ಲಾವೂ ಉಚಿತ.... ಈಗಾಗಲೇ ಸಾವಿರಕ್ಕೂ ಹೆಚ್ಚು ಪುಸ್ತಕಗಳು ಸೇರಿವೆ. ನಿಮಗೂ ಓದುವ ಹವ್ಯಾಸವಿದೆಯೇ? ಒಮ್ಮೆ ಬೇಟಿ ನೀಡಿ.

ನಂದೂ ಒಂದು ಪುಸ್ತಕ ಓ(ಮೋ)ದಿ....!

ಬರೆದಿದ್ದುJune 28, 2014
noಅನಿಸಿಕೆ

ಇದೇ ಜೂನ್
16 ನೇ ದಿನಾಂಕದಂದು ನಾನು ಬರೆದ ‘ನರೇಂದ್ರ ದಾಮೋದರದಾಸ್ ಮೋದಿ (ಜೀವನ ಚರಿತ್ರೆ)’ ಯು ವಾಸನ್ ಪಬ್ಲಿಕೇಷನ್ಸ್
ರವರಿಂದ ಪ್ರಕಟಿಸಲ್ಪಟ್ಟು ಇದೀಗ ರಾಜ್ಯಾದ್ಯಂತದ ಎಲ್ಲಾ ಪ್ರಮುಖ ಪುಸ್ತಕದಂಗಡಿಗಳಲ್ಲಿ ಲಭ್ಯವಿದೆ.
ಈ ಹಿನ್ನೆಲೆಯಲ್ಲಿ ಪುಸ್ತಕದ ಲೇಖಕನಾದ ನಾನು ನನ್ನದೇ ಪುಸ್ತಕದ ಪರಿಚಯ ಮಾಡಿಕೊಡುವ ಸಣ್ಣ ಪ್ರಯತ್ನವನ್ನಿಲ್ಲಿ
ಮಾಡಿದ್ದೇನೆ. ತಾವೆಲ್ಲರೂ ನನ್ನ ಪುಸ್ತಕವನ್ನು ಓದಿ ತಮ್ಮ ಸಲಹೆ ಸೂಚನೆಗಳನ್ನು ನೀಡುತ್ತೀರೆಂದು ನಂಬಿರುತ್ತೇನೆ.

ವಿಸ್ಮಯ ಮಕ್ಕಳ ಪುಸ್ತಕ ಪಡೆಯುವ ವಿಧಾನ

ಬರೆದಿದ್ದುMay 12, 2013
noಅನಿಸಿಕೆ

ಕನ್ನಡದಲ್ಲಿ ಅದು ಯಾಕಿಲ್ಲ ಇದು ಯಾಕಿಲ್ಲ ಅನ್ನುವ ಹಲವು ಪ್ರಶ್ನೆ ನಮ್ಮಲ್ಲಿಯೇ ಮೂಡುತ್ತದೆ. ಕನ್ನಡದಲ್ಲಿ ಉತ್ತಮ ಗುಣಮಟ್ಟದ ಜಾಲತಾಣಗಳು ಯಾಕೆ ಕಡಿಮೆ ಎಂಬ ಪ್ರಶ್ನೆಯೊಂದಕ್ಕೆ ಉತ್ತರ ಕಂಡು ಕೊೞಲು ಆರಂಭವಾದ ಯೋಜನೆಯಲ್ಲಿ ವಿಸ್ಮಯ ನಗರಿಯೂ ಒಂದು. ಇದೇ ವಿಸ್ಮಯ ನಗರಿ ತಾಣ ಈಗ "ವಿಸ್ಮಯ ನಗರಿ ಪ್ರಕಾಶನ" ಲಾಂಛನದಲ್ಲಿ ಕನ್ನಡದಲ್ಲಿ ಉತ್ತಮ ಗುಣಮಟ್ಟದ ಮಕ್ಕಳ ಪುಸ್ತಕ ನೀಡಲು ಹೊರಟಿದೆ.

ವಿಸ್ಮಯ ಮಕ್ಕಳ ಪುಸ್ತಕ - ಕನ್ನಡದ ಮಕ್ಕಳ ಪುಸ್ತಕ ಸರಣಿ

ಬರೆದಿದ್ದುApril 28, 2013
noಅನಿಸಿಕೆ

ಸುಮಾರು ಒಂದು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಜಯನಗರದ ಸಪ್ನಾ ಪುಸ್ತಕ ಮಳಿಗೆಗೆ ನನ್ನ ಒಂದೂ ಕಾಲು ವರ್ಷ ವಯಸ್ಸಿನ ಮಗನಿಗೆ ಬಣ್ಣ ಬಣ್ಣದ ಪುಸ್ತಕ ಖರೀದಿಸಲು ಹೋಗಿದ್ದೆ. ಕನ್ನಡ ಮಕ್ಕಳ ಪುಸ್ತಕ ವಿಭಾಗದಲ್ಲಿ ಜನ ಖಾಲಿ ಖಾಲಿ. ಇಂಗ್ಲೀಷ್ ಪುಸ್ತಕ ಮಳಿಗೆಯ ಬಳಿ ನೊಣ ಮುತ್ತಿದಂತೆ ಜನ. ಅಷ್ಟೇ ಅಲ್ಲ ಇಂಗ್ಲೀಷ್ ಅಲ್ಲಿ ನೂರಾರು ವಿಭಿನ್ನ ರೀತಿಯ ಪುಸ್ತಕಗಳ ಆಯ್ಕೆ. ಕನ್ನಡದಲ್ಲಿ ಕೆಲವೇ ಕೆಲವು. ಮುದ್ರಣ ಗುಣಮಟ್ಟದಲ್ಲಿಯೂ ಇಂಗ್ಲೀಷ್ ನದ್ದೇ ಮೇಲುಗೈ ಅಷ್ಟೇ ಅಲ್ಲ ಬೆಲೆಯೂ ಕಡಿಮೆ.

ಅಮೂರ್ತ ಸ್ಪೂರ್ತಿ ಪುಸ್ತಕ ಎಲ್ಲರು ಓದಲೇಬೇಕಾದ ಪುಸ್ತಕ

ಇಂದ K.M.Vishwanath
ಬರೆದಿದ್ದುApril 25, 2013
3ಅನಿಸಿಕೆಗಳು

ಅಮೂರ್ತ ಸ್ಪೂರ್ತಿ ಪುಸ್ತಕ ಎಲ್ಲರು ಓದಲೇಬೇಕು. ಈ ಜಗತ್ತು ಹಲವು ಪುಸ್ತಕಗಳು ಮತ್ತು ಅವುಗಳು ಹೇಳಿಕೊಡುವ ನೀತಿಯಿಂದ ನಡೆದಿದೆ. ನಾವು ಯಾರನ್ನು ರೊಲ್ ಮಾಡೆಲ್ ಎಂದು ಆರಿಸುವುದು ಎನ್ನುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಅದನ್ನು ಹುಡುಕುತ್ತ ಹೋದಾಗ ನನಗೆ ದೊರೆತ ಪುಸ್ತಕ ಅಮೂರ್ತ ಸ್ಪೂರ್ತಿ ಎಸ್.ಉಮೇಶ ಬರೆದ ಈ ಪುಸ್ತಕ ನಮ್ಮ ಜೀವನದಲ್ಲಿ ಯಾರನ್ನು ರೊಲ್ ಮಾಡೆಲ್ ಆಗಿ ನೋಡಬೇಕು ನಮ್ಮ ಸಾಧನೆಯ ಹಾದಿಯಲ್ಲಿ ಯಾರ ದಾರಿ ಯಾವ ದಾರಿ ಅನುಸರಿಸಬೇಕು ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರ ಕೊಡುವತ್ತ ಈ ಪುಸ್ತಕ ದಾರಿದೀಪವಾಗುತ್ತದೆ.

"ಕರ್ವಾಲೋ" ಕೃತಿಯಿಂದ ಕನ್ನಡಿಗರ ಮನಸೆಳೆದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಇಂದ K.M.Vishwanath
ಬರೆದಿದ್ದುApril 23, 2013
2ಅನಿಸಿಕೆಗಳು

ಅಂದು ನನ್ನ ಪ್ರಾರ್ಥಮಿಕ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆಯಿತ್ತು ವಿಷಯ ಪರಿಸರ ಅದನ್ನು ವಿಶ್ವ ಬ್ಯಾಂಕ್ ನೆರವಿನಿಂದ ಒಂದು ಸಂಸ್ಥೆ ನಮ್ಮ ಊರಿನ ಶಾಲೆಯಲ್ಲಿ ಹಮ್ಮಿಕೊಂಡಿತ್ತು. ನಾನು ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದೆ. ಅದರ ಫಲವಾಗಿ ನನಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಯವರು ಬರೆದ ಪರಿಸರದ ಕತೆ ಪುಸ್ತಕ ಬಹುಮಾನವಾಗಿ ನೀಡಿದ್ದರು. ಮನೆಗೆ ಹೋಗಿ ಅದನ್ನು ಓದಲು ಕುಳಿತರೆ ಅರ್ಥವೆ ಆಗಲಿಲ್ಲಾ ಈ ವಿಷಯವನ್ನು ನನ್ನ ಗುರುಗಳ ಹತ್ತಿರ ಕೇಳಿದೆ.

ಶಿವಾ ಟ್ರೈಯಾಲಾಜಿ ವರ್ಸಸ್ ಎಸ್ ಎಲ್ ಭೈರಪ್ಪರ ಪರ್ವ

ಬರೆದಿದ್ದುApril 18, 2013
1ಅನಿಸಿಕೆ

ಸುಮಾರು ಎರಡು ವರ್ಷಗಳ ಹಿಂದಿನಿಂದ ನಡೆದ ಮಾತು. ಪ್ರತಿದಿನ ಆಫೀಸಿನ ಬಸ್ಸಿನಲ್ಲಿ ಕೆಲವರ ಕೈಲಿ ಸುಮಾರು ಐನೂರು ಆರುನೂರು ಪುಟ ಇರಬಹುದು. ಅಷ್ಟು ದಪ್ಪದ ಪುಸ್ತಕ. ಕುತೂಹಲದಿಂದ ಓದುತ್ತಿದ್ದಾರೆ.

ಇಮ್ಮಾರ್ಟಲ್ಸ್ ಆಫ್ ಮೆಲುಹಾ, ನಾಗಾಸ್ ಹಾಗು ಇತ್ತೀಚೆಗೆ ಓತ್ಸ್ ಆಫ್ ವಾಯು ಪುತ್ರ. ಬೇರೆ ಪುಸ್ತಕ ಓದುವದು ಕಾಣ ಸಿಗುತ್ತಾದರೂ ಅದು ಬಲು ಅಪರೂಪ. ಆಫೀಸು, ಕ್ಯಾಂಟೀನು, ಬಸ್ಸು ಎಲ್ಲಿ ನೋಡಿದರೂ ಅದರ ಕಥೆಯ ಚರ್ಚೆ.