ಕನ್ನಡದಲ್ಲಿ ಎಚ್ ಡಿ ಚಾನೆಲ್ ಯಾಕಿಲ್ಲ?
ಕನ್ನಡದಲ್ಲಿ ಎಚ್ ಡಿ ಚಾನೆಲ್ ಯಾಕಿಲ್ಲ? ಈ ಪ್ರಶ್ನೆ ಹಲವು ವರ್ಷಗಳಿಂದ ನನ್ನ ಕೊರೆಯುತ್ತಿದೆ. ಹಿಂದಿಯಲ್ಲಿ, ತಮಿಳಲ್ಲಿ ಎಚ್ ಡಿ ಚಾನೆಲ್ ಆರಂಭವಾಗಿ ೫ ವರ್ಷ ಆಯ್ತು. ಆದರೂ ಕನ್ನಡದಲ್ಲಿ ಎಚ್ ಡಿ ಚಾನೆಲ್ ಬರುವ ಸುಳಿವು ಕಾಣಿಸುತ್ತಿಲ್ಲ.
ಕನ್ನಡದಲ್ಲಿ ಎಚ್ ಡಿ ಚಾನೆಲ್ ಯಾಕಿಲ್ಲ? ಈ ಪ್ರಶ್ನೆ ಹಲವು ವರ್ಷಗಳಿಂದ ನನ್ನ ಕೊರೆಯುತ್ತಿದೆ. ಹಿಂದಿಯಲ್ಲಿ, ತಮಿಳಲ್ಲಿ ಎಚ್ ಡಿ ಚಾನೆಲ್ ಆರಂಭವಾಗಿ ೫ ವರ್ಷ ಆಯ್ತು. ಆದರೂ ಕನ್ನಡದಲ್ಲಿ ಎಚ್ ಡಿ ಚಾನೆಲ್ ಬರುವ ಸುಳಿವು ಕಾಣಿಸುತ್ತಿಲ್ಲ.
ನಿನ್ನೆ ಈ ಟಿವಿ ಕನ್ನಡದಲ್ಲಿ ಶ್ರೀನಿವಾಸ ಕಲ್ಯಾಣ ನೋಡುತ್ತಿದ್ದೆ. ಆಗ ನನ್ನ ಗಮನ ಸೆಳೆದಿದ್ದು ಅದರ ನಾಟಕೀಯ ಡೈಲಾಗ್ ಡೆಲಿವರಿ. ತೀರಾ ಕೃತಕ ಹಾಗೂ ಗದ್ಯವನ್ನು ಓದಿದಂತೆ ಎನಿಸುವ ಈ ಡೈಲಾಗ್ ಅನ್ನು ಕೇಳಿದಾಗ ಆಕಳಿಕೆ ಬರುವದು ಒಂದೇ ಬಾಕಿ! ಕೆಲವೊಂದು ಕಡೆ ನಾಟಕ ನೋಡಿದಂತೆ ಭಾಸವಾಗುತಿತ್ತು. ಅದಕ್ಕೆ ತಕ್ಕಂತೆ ನಿದಾನಗತಿಯ ನಿರೂಪಣೆ.
ಇಪ್ಪತ್ತು ವರ್ಷಗಳ ಹಿಂದಿನ ಮಾತಿರಬಹುದು. ಆಗ ಕೆಲವು ಪುಸ್ತಕ, ಸಂಯುಕ್ತ ಕರ್ನಾಟಕ, ಕಸ್ತೂರಿ ಮೊದಲಾದ ಪತ್ರಿಕೆಗಳಲ್ಲಿ ಪುಟಗಳ ಸಂಖ್ಯೆ, ಅಂಕೆಗಳು ಎಲ್ಲ ಕನ್ನಡ ಅಂಕೆಗಳಲ್ಲೇ ಬರುತ್ತಿತ್ತು. ಕಾಲಕ್ರಮೇಣ ಆ ಪತ್ರಿಕೆಗಳು ಎಲ್ಲ ಇಂಗ್ಲೀಷ್ ಅಂಕೆಗೆ ತಲೆಬಾಗಿದವು. ಇಂದು ಕನ್ನಡ ಅಂಕೆಗೆ ನಾವು ತಿಲಾಂಜಲಿ ನೀಡಾಗಿದೆ.