ಕಾನೂನಿನ ಮುಂದೆ ಎಲ್ಲರೂ ಸಮಾನರು, ತಾಯಿಗಿಂತ ಬಂಧುವಿಲ್ಲ,ಉಪ್ಪಿಗಿಂತ ರುಚಿಯಿಲ್ಲ ಎನ್ನುವ ಹಾಗೇ ಕಾನೂನಿಗಿಂತ ದೂಡ್ಡವರಿಲ್ಲ. ಆದ್ದರಿಂದ ಪ್ರತಿಯೊಬ್ಬರು ಕಾನೂನಿಗೆ ತಲೆಭಾಗಲೇಬೇಕು, ಎಂಬುದನ್ನು ನಾವು ಆಗಾಗ ಕೇಳುತ್ತಿರುತ್ತೀವಿ ಅಲ್ಲವೇ? ಹಾಗಿದ್ದರೆ!
ಈ ಕಾನೂನು ಇಲ್ಲದಿದ್ದರೆ ಏನಾಗುತ್ತದೆ? ಕಾನೂನು ನಮಗೆ ಏಕೆ ಬೇಕು? ಕಾನೂನಿನಿಂದಾಗುವ ಅನುಕೂಲ ಮತ್ತು ಅನಾನುಕೂಲಗಳೇನು?
ಅನಿಸಿಕೆಗಳು
ಈ ಕಾನೂನು ಇಲ್ಲದಿದ್ದರೆ ಏನಾಗುತ್ತದೆ? ಕಾನೂನು ನಮಗೆ ಏಕೆ ಬೇಕು? ಕಾನೂನಿನಿ
ಶ್ರೀ ನವೀನ್ ಚಂದ್ರರವರೇ, ಕಾನೂನಿಂದ ಅಪರಾಧಗಳು ತಡೆಯಾಗುತ್ತವೆ. ಕಾನೂನು ಇಲ್ಲದಿದ್ದರೆ ಸಮಾನತೆ ಇರುವುದಿಲ್ಲ. ತಪ್ಪಿತಸ್ತರಿಗೆ ಶಿಕ್ಷೆಯಾಗುವುದಿಲ್ಲ. ತಪ್ಪಿತಸ್ತರಿಗೆ ಶಿಕ್ಷೆಯಾದಾಗ ಪ್ರಮಾಣಿಕನಿಗೆ ನ್ಯಾಯ ಸಿಗುತ್ತದೆ. ಉತ್ತಮ ಆಡಳಿತಕ್ಕೆ ಅನುಕೂಲವಾಗುತ್ತದೆ. ಇದರಿಂದ ನಮಗೆ ಕಾನೂನು ಬೇಕು. ಕಾನೂನಿನಿಂದ ಅನುಕೂಲವೇ ಹೆಚ್ಚು. ಆದರೆ ಅದನ್ನು ಬಳಸುವವನು ಪ್ರಮಾಣಿಕನಾಗಿರಬೇಕು. (ಉದಾಃಪೊಲೀಸರು, ನ್ಯಾಯವಾದಿಗಳು)ಇಲ್ಲವಾದರೆ, ಪ್ರಮಾಣಿಕರಿಗೆ, ಅಮಾಯಕರಿಗೆ, ತೊಂದರೆಯಾಗುತ್ತದೆ. ಕಾನೂನಿನ ಬುನಧಿಯಾದ ೧೦೦ ಜನ ಅಪರಾದಿಗಳು ತಪ್ಪಿಸಿಕೊಂಡರೂ ಪರವಾಗಿಲ್ಲ. ಆದರೆ ಒಬ್ಬ ನಿರಪರಾದಿಗೆ ಶಿಕ್ಷೆಯಾಗಬಾರದು. ಎಂಬ ನೀತಿಗೆ ವಿರುದ್ದವಾಗುತ್ತದೆ. ಅಲ್ಲವೇ? ವಂದನೆಗಳೊಡನೆ.

ನಿಜ ನಂಜುಂಡರವರೇ ಕಾನೂನು ಎಂಬುದು
ನಿಜ ನಂಜುಂಡರವರೇ ಕಾನೂನು ಎಂಬುದು ಬೇಕೇ ಬೇಕು ಇಲ್ಲದಿದ್ದರೆ ಮಾನವರು ಕಡಿವಾಣವಿಲ್ಲದ ಪ್ರಾಣಿಗಳಾಗುತ್ತಾರೆ.,ಅದರಲ್ಲೂ ಭಾರತದಂತ ವೈವಿದ್ಯತೆಯ ದೇಶಕ್ಕೆ ಅದು ಅತ್ಯವಶ್ಯಕ. ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ನಂಜುಂಡರವರೇ..,,//

ಕಾನೂನು ಸಲಹೆ ಬಗ್ಗೆ.
ಶ್ರೀ ನವೀನ್ ಚಂದ್ರರವರೇ, ನಮ್ಮ ಮನೆಯ ಹತ್ತಿರ ಹೊಡೆದಾಟ ನಡೆದಿರುತ್ತದೆ. ಹಲ್ಲೆಗೊಳಗಾದ ರಾಮನು ದೂರು ನೀಡಿರುತ್ತಾನೆ. ಹಲ್ಲೆ ಮಾಡಿದ ಭೀಮನು ಬಂದನಕ್ಕೆ ಒಳಗಾಗಿರುತ್ತಾನೆ. ಪೊಲೀಸರು ಪ್ರಕರಣ ದಖಲಿಸಿಕೊಂಡು. ಆ ಹೊಡೆದಾಟವನ್ನು ಸೋಮ ಎಂಬುವವನು ನೋಡಿಯೂ ಇರುವುದಿಲ್ಲ ಕೇಳಿಯೂ ಇರುವುದಿಲ್ಲ. ಮುಗ್ದ ನಾಗಿರುತ್ತಾನೆ. ಯಾವತ್ತು ನ್ಯಾಯಾಲಕ್ಕೆ ಹೋಗಿರುವುದಿಲ್ಲ. ಪೋಲಿಸರು ಬಲವಂತವಾಗಿ ಸಾಕ್ಷಿ ಹೇಳಲು ಹೆದರಿಸಿ ಸಹಿ ಪಡೆಯುತ್ತಾರೆ. ನಂತರ ನ್ಯಾಯಾಲಯದಿಂದ ಸಮನ್ಸ್ ಬರುತ್ತದೆ. ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರೆ ನಿನ್ನನ್ನು ಬಿಡುವುದಿಲ್ಲವೆಂದು ಅಪರಾಧಿ ಹೆದರಿಸುತ್ತಾನೆ. ಹೇಳಿದಂತೆ ಕೇಳಿ ಸಾಕ್ಷಿ ಹೇಳದಿದ್ದರೆ ನಿನ್ನನ್ನು ಜೈಲಿಗೆ ಕಳುಹಿಸುತ್ತೇವೆಂದು ಪೊಲೀಸರು ಹೆದರಿಸುತ್ತಾರೆ. ಇಂತಹ ಸಮಯದಲ್ಲಿ ಪ್ರಮಾಣಿಕನು, ಮುಗ್ದನೂ ಆದ ಸೋಮ ಏನು ಮಾಡಬೇಕು. ತಿಳಿಸುವಿರಾ? ವಂದನೆಗಳೊಡನೆ.

ಕಾನೂನು ಸಲಹೆ
ಆತ್ಮೀಯ ನಂಜುಂಡರವರೇ ಒಳ್ಳೆಯ ಪ್ರಶ್ನೆಯನ್ನೆ ಕೇಳಿದ್ದೀರಾ, ನೋಡಿ ನಂಜುಂಡರವರೇ ನ್ಯಾಯಲಯ ಎಂಬುದು ಒಂದು ದೇವಸ್ಥಾನವಿದ್ದಂತೆ ಅಲ್ಲಿಗೆ ಒಳ್ಳೆಯವರು ಕೆಟ್ಟವರೆಲ್ಲರೂ ಬರುತ್ತಾರೆ. ಇಲ್ಲಿ ಮುಖ್ಯವಾದ ವಿಷಯವೆಂದರೆ 'ಭಯ' ಆದುದರಿಂದ ಮೊದಲು ಭಯವನ್ನು ಬಿಡಲು ಸೋಮನಿಗೆ ಹೇಳಿ. ಪ್ರತಿಯೊಬ್ಬ ಮನುಷ್ಯರಿಗೂ ಹಲವು ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ನೀಡಲಾಗಿದೆ.ಅದರಂತೆ ಇಲ್ಲಿ ಯಾವುದೇ ವ್ಯಕ್ತಿಯ ಹಕ್ಕಿಗೆ ಚ್ಯುತಿಯಾಗದಂತೆ ನಡೆದುಕೊಳ್ಳುವುದು ಪೋಲಿಸರ ಕರ್ತವ್ಯ ಆದ್ದರಿಂದ ಸೋಮನನ್ನು ಸಾಕ್ಷಿ ಹೇಳುವಂತೆ ಬಲವಂತ ಪಡಿಸುವ ಹಾಗಿಲ್ಲ,ಮತ್ತೆ ಇಲ್ಲಿ ಜೈಲಿಗೆ ಕಳುಹಿಸುವ ಅಧಿಕಾರವಿರುವುದು ನ್ಯಾಯಾಲಯಕ್ಕಷ್ಟೆ ಪೋಲಿಸರಿಗಲ್ಲ,ನ್ಯಾಯಲಯದಿಂದ ಸಮನ್ಸ್ ಬಂದಿದ್ದರೆ ನ್ಯಾಯಾಲಯಕ್ಕೆ ಗೌರವ ಕೊಡುವುದು ಪ್ರತಿಯೊಬ್ಬರ ಕರ್ತವ್ಯ. ಆದುದರಿಂದ ನ್ಯಾಯಾಲಯಕ್ಕೆ ಹೋಗಿ ತನಗೆ ಏನು ಗೂತ್ತಿದ್ದಿಯೊ ಅದನ್ನು ನ್ಯಾಯಾಲಯಕ್ಕೆ ಹೇಳಿದರೆ ಸಾಕು. ಏನಾದರೂ ಪೋಲಿಸರು ಹೆದರಿಸಿದ್ದರೆ ಅದನ್ನು ನ್ಯಾಯಾಧೀಶರಿಗೆ ತಿಳಿಸಬಹುದು ಇಲ್ಲಿ ಹೆದರುವ ಅವಶ್ಯಕತೆ ಇಲ್ಲ,, ಅಲ್ಲದೇ ಸಾಕ್ಷಿಯನ್ನು ಯಾರಿಂದಲೂ ಬಲವಂತದಿಂದ ಪಡೆಯುವ ಹಾಗಿಲ್ಲ.ಆದುದರಿಂದ ಭಯವನ್ನು ಬಿಟ್ಟು ಭಾರತ ಸಂವಿಧಾನದಲ್ಲಿ ನೀಡಿರುವ ನಾಗರೀಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವುದು ಉತ್ತಮ. ಈ ಮೇಲಿನ ಸಲಹೆಯಲ್ಲಿ ಏನಾದರೂ ಅನುಮಾನಗಳಿದ್ದರೆ ಪರಿಹರಿಸಿಕೊಳ್ಳಬಹುದು ನಂಜುಂಡರವರೆ ನಿಮ್ಮ ಕಾನೂನಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸ್ವಾಗತ...
ವಂದನೆಗಳೊಂದಿಗೆ,,,,,,, ನವೀನ್ ಚಂದ್ರ

- 1348 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ