Skip to main content

ಇದು ನಿಜವಾಗ್ಲೂ ಹನಿ ಹನಿ ಪ್ರೇಮಕಹಾನಿ - ಮುಂಗಾರು ಮಳೆ ವಿಮರ್ಶೆ

ಬರೆದಿದ್ದುJanuary 20, 2007
23ಅನಿಸಿಕೆಗಳು

[img_assist|nid=181|title=ಮುಂಗಾರು ಮಳೆ|desc=ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ|link=none|align=left|width=350|height=193] 'ಕರ್ಚೀಪ್ ಕೊಡ್ಲಾsss? ಮಗಾ!!' ಇದು ಮುಂಗಾರು ಮಳೆಯನ್ನು ನೋಡಿ ಕೊನೆಗೆ ಒಬ್ಬ ಪಕ್ಕದಲ್ಲಿದ್ದ ಗೆಳೆಯನಿಗೆ ತಮಾಷೆಗೆ ಕೇಳಿದ ಮಾತು! ಮುಂಗಾರು ಮಳೆ ಇತ್ತೀಚೆಗೆ ಬಂದ ಕನ್ನಡದ್ದೇ ಆದ ಟಚ್ ಹೊಂದಿರುವ ಅತ್ಯುತ್ತಮ ಚಿತ್ರ ಅನ್ನೋದರಲ್ಲಿ ಸಂಶಯನೇ ಇಲ್ಲ. ಇದೇ ರೀತಿಯ ಇನ್ನಿತರ ಚಿತ್ರಗಳೆಂದರೆ ಅಮೃತದಾರೆ, ಜೊತೆಜೊತೆಯಲಿ ಹಾಗೂ ರೀಮೇಕ್ ಅನ್ನೋದನ್ನು ಮರೆತರೆ ಮೈ ಆಟೋಗ್ರಾಫ್ ಅಂತ ನನಗೆ ಅನಿಸುತ್ತದೆ. ಮುಂಗಾರು ಮಳೆಯನ್ನು ಜನ ಒಂದಕ್ಕಿಂತ ಹೆಚ್ಚು ಸಲ ನೋಡುತ್ತಿದ್ಡಾರೆ. (ನಾನೇ ಎರಡು ಬಾರಿ ನೋಡಿದೆ). ಕಥೆ ಸಾಧಾರಣವಾದರೂ ಅನೀರೀಕ್ಷಿತ ತಿರುವುಗಳಿವೆ. ನೀವು ಏನೋ ಯೋಚಿಸ್ತಾ ಇರ್ತೀರಾ ಬೇರೇನೋ ಆಗತ್ತೆ. ಯೋಗರಾಜ ಭಟ್ಟರ ಸಂಭಾಷಣೆ ಅವರ ನಿರ್ದೇಶನದಷ್ಟೇ ಚೆನ್ನಾಗಿದೆ. ಸಂಗೀತ ಮನೋಮೂರ್ತಿಯವರ ಅದ್ಬುತವಾಗಿದೆ. ಅವರು ಕನ್ನಡಿಗರ ಮನಮಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕ್ಯಾಮರಾ ವರ್ಕ್ ಅಂತೂ ಸೂಪರ್ಬ್. ಅದರಲ್ಲೂ ಜೋಗ ಜಲಪಾತದ ಮೇಲೆ ತೆಗೆದ ದೃಶ್ಯವಂತೂ ಮೈ ಜುಂ ಎನಿಸುವಂತಿದೆ.ಎಂತಹ ಧೈರ್ಯವಂತರೂ ಸೀಟ್‌ನ ತುದಿಯಲ್ಲಿ ಕೂರುವಂತೆ ಮಾಡುತ್ತದೆ. ಅಷ್ಟೇ ಅಲ್ಲ ಹಾಡುಗಳಿರಬಹುದು ಅಥವಾ ಫೈಟಿಂಗ್‌ನಲ್ಲೂ ಕ್ಯಾಮರಾ ಕ್ರಿಯೇಟಿವಿಟಿ ಕಾಣಬಹುದು. ಇನ್ನು ಗಣೇಶರವರ ಅಭಿನಯವೂ ಚೆನ್ನಾಗಿದೆ. ಅವರ ಡೈಲಾಗ ಹೇಳುವ ಶೈಲಿ, ಕಾಮಿಡೀ ಟೈಮಿಂಗ್ ಅಷ್ಟೇ ಅಲ್ಲ ನಮ್ಮ ಪಕ್ಕದ ಮನೆ ಹುಡುಗನೋ ಎಂಬಷ್ಟು ಸಾಧಾರಣತನ ಇಷ್ಟವಾಗುತ್ತದೆ. ನಾಯಕಿಯು ತನ್ನ ಕಣ್ಣು, ಮುಖ ಭಾವನೆಯಿಂದಲೆ ಕೆಲವು ಸಂದೇಶಗಳನ್ನು ಹೇಳುವ ರೀತಿ ತುಂಬಾ ಇಷ್ಟವಾಗುತ್ತದೆ.ಇದಕ್ಕೆ ಪೂರಕವಾಗಿ ಅನಂತನಾಗ್‌ರವರೂ ಇದ್ದಾರೆ. ಮಲೆನಾಡಿನ ಸುಂದರ ಪರಿಸರವೂ ಫಿಲಂನಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರದ ಹಾಡುಗಳ ಲಿರಿಕ್ಸ್(ಗೀತೆ) ಕೆಲವೊಮ್ಮೆ ಭಾವಗೀತೆಗಳೋ ಎನ್ನಿಸ್ಸುವಷ್ಟು ಸುಂದರವಾಗಿದೆ.ಜಯಂತ್ ಕಾಯ್ಕಿಣಿ ಹಾಗೂ ಕವಿರಾಜ್‌ರವರ ಈ ಕೆಲಸ ಮೆಚ್ಚುವಂತದ್ದು. ಸೋನುನಿಗಮ್, ಕುನಾಲ್ ಹಾಗೂ ಶ್ರೇಯಾ ಗೋಷಾಲ್ ಕನ್ನಡ ಚಿತ್ರಗಳಲ್ಲಿ ಕಾಯಂ ಆದ್ರೆ ಆಶ್ಚರ್ಯವಿಲ್ಲ. ಇವರ ದ್ವನಿಗಳಲ್ಲಿ ನಮ್ಮ ಕಸ್ತೂರಿ ಕನ್ನಡ ಇನ್ನೂ ಸುಂದರವಾಗಿ ಕೇಳುತ್ತಿದೆ. ಬಹುಶಃ ಅವರೆಲ್ಲ ಕನ್ನಡ ಕಲಿಯುತ್ತಿರಬಹುದು![img_assist|nid=99|title=ಮುಂಗಾರು ಮಳೆ|desc=ಮುಂಗಾರು ಮಳೆ|link=none|align=right|width=300|height=142] ಈ ಫಿಲಂ ಅನ್ನು ಮನೆಮಂದಿಯೆಲ್ಲಾ ಕೂಡಿ ಎಂಜಾಯ್ ಮಾಡಬಹುದು. ಅದರಲ್ಲೂ ಕಾಲೇಜು ಹುಡುಗ, ಹುಡುಗಿಯರಿಗೆ ಇನ್ನೂ ಇಷ್ಟವಾಗುತ್ತದೆ.ಹುಡುಗಿಯರಿಗಿಂತ ಹುಡುಗರ ಮನವನ್ನು ಈ ಚಿತ್ರ ಹೆಚ್ಚು ಮಿಡಿಯುತ್ತದೆ. ಅದರಲ್ಲೂ ಹುಡುಗ ಭಗ್ನಪ್ರೇಮಿಯಾಗಿದ್ದರೆ ಫಿಲಂ ಮುಗಿದ ತಕ್ಷಣ ನೀವು ಅವರಿಗೆ ಮಿಸ್ ಮಾಡದೇ ಕೇಳಿ 'ಕರ್ಚೀಪ್ ಕೊಡ್ಲಾsss? ಮಗಾ!!' ಅಂತ. ಯಾಕೆಂದರೆ ಅವರಿಗೆ ಹಿಂದಿನದೆಲ್ಲ ನೆನಪಾಗಿರುತ್ತೆ, ಪಾಪ ತುಂಬಾ ಫೀಲಿಂಗ್ ಮಾಡ್ಕೋತಾ ಇರ್ತಾರೆ! :-) ಇನ್ನೊಂದು ಸಂತೋಷದ ವಿಷಯವೆಂದರೆ ನಾನು ನೋಡಿದ್ದು ಕನ್ನಡ ಸರಿಯಾಗಿ ತಿಳಿಯದ ತಮಿಳು ಜನರೂ ಈ ಚಿತ್ರಕ್ಕೆ ಬರುತ್ತಿರುವದು.ನಾನು ಎರಡನೇ ಬಾರೀ ಹೋದಾಗ ನನ್ನ ಪಕ್ಕದಲ್ಲಿ ಒಬ್ಬ ಅನೇಕ ಸಂಭಾಷಣೆ ಅರ್ಥವಾಗದಿದ್ದಾಗ ಅವನ ಗೆಳತಿಯ ಬಳಿ ಇಂಗ್ಲೀಷನಲ್ಲಿ ಕೇಳುತ್ತಿದ್ದ.ಮೊಬೈಲ್‌ ಕಾಲ್ ಒಂದಕ್ಕೆ ಉತ್ತರಿಸಿದ್ದು ತಮಿಳಿನಲ್ಲಿ! ಅದನ್ನು ನೋಡಿದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣಿದೆ ಅಂತ ಅನಿಸಿತು. ;-) [img_assist|nid=100|title=ಮುಂಗಾರು ಮಳೆ 2|desc=ಒಂದು ಹಾಡಿನ ದೃಶ್ಯ|link=none|align=left|width=300|height=139] ಮಿಸ್ ಮಾಡದೇ ಒಮ್ಮೆ ನೋಡಲೇ ಬೇಕಾದ ಚಿತ್ರ 'ಮುಂಗಾರು ಮಳೆ'. ಅನೇಕ ದಿನಗಳಿಂದ ಬಾಯಾರಿ ಬಳಲಿ ಬೆಂಡಾಗಿದ್ದ ಕನ್ನಡಚಿತ್ರ ಪ್ರೇಕ್ಷಕನಿಗೆ ಹಿತವಾದ ಪನ್ನೀರಿನ ಸಿಂಚನ ಈ ಮುಂಗಾರು ಮಳೆ! ಇಲ್ಲಿ ನಾನು ಹೇಳಿದ ಮಾತು ನಿಮಗೆ ಸ್ವಲ್ಪ ಉತ್ಪ್ರೇಕ್ಷೆ ಎನಿಸಬಹುದು. ಒಮ್ಮೆ ಹೋಗಿ ಮುಂಗಾರು ಮಳೆ ನೋಡಿ ಬನ್ನಿ ನಂತರ ನಿಮ್ಮ ಅಭಿಪ್ರಾಯ ಕೆಳಗೆ ಬರೆಯಿರಿ. ವಿಸ್ಮಯಾ ರೇಟಿಂಗ್: ೬/೭ (6/7) ಹಾಂ ಇನ್ನೊಂದು ವಿಷಯ, ನನಗೆ ಈ ವಿಮರ್ಶೆ ಬರೆಯುವದು ಪ್ರೋಗ್ರಾಮಿಂಗ್ ಮಾಡಿದಷ್ಟು ಸುಲಭ ಅಲ್ಲ:-). ನಿಮ್ಮಲ್ಲಿ ಯಾರಿಗಾದರೂ ಫಿಲಂ ವಿಮರ್ಶೆ ಬರೆಯುವ ಉತ್ಸಾಹ, ಹುಮ್ಮಸ್ಸು,ಆಸಕ್ತಿ ಇದ್ದರೆ ತಿಳಿಸಿ. ವಿಸ್ಮಯಾನಗರಿಗೆ ಇಂತಹ ಜನರ ಸೇವೆ ಬೇಕು. ನೀವು ಎಲ್ಲ ಚಿತ್ರ ನೋಡುತ್ತಾ ಇರಬೇಕಿಲ್ಲ. ನೀವು ಈಗ ಹೇಗೆ ಯಾವ ಫಿಲಂಗೆ ಹೋಗುತ್ತೀದ್ದಿರೋ ಅದಕ್ಕೆ ಹೋಗಿ. ಅದರ ಬಗ್ಗೆ ಬರೆಯಿರಿ. ಕನ್ನಡ, ತಮಿಳು, ಹಿಂದಿ ಮತ್ತು ಇಂಗ್ಲೀಷ್ ಚಿತ್ರಗಳ ವಿಮರ್ಶೆ ಮಾಡಬೇಕು ಹಾಗೂ 7 ಸ್ಟಾರ್ ರೇಟಿಂಗ್‌ನಲ್ಲಿ ಒಂದನ್ನು ಅದಕ್ಕೆ ಕೊಡಬೇಕು. ಯಾವುದೇ ರೀತಿಯ ಉತ್ಪ್ರೇಕ್ಷೆ ಇರಬಾರದು. ಸರಳ ಕನ್ನ್ಡಡ ಭಾಷೆಯಲ್ಲಿ ಬರೆಯಬೇಕು. ವಿಸ್ಮಯಾ ಸಾಫ್ಟ್‌ವೇರ್ ಯಾರು ಯಾವ ಫಿಲಂ ವಿಮರ್ಶೆ ಚೆನ್ನಾಗಿದೆಯೋ ಅದನ್ನು ಮೇನ್ ಫಿಲಂ ವಿಭಾಗದಲ್ಲಿ ಹಾಕುತ್ತದೆ. ಸದ್ಯಕ್ಕೆ ಯಾವುದೇ ಸಂಭಾವನೆ ಇಲ್ಲ. ಆದರೆ ಮುಂದೆ ಕೊಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ ನೋಡೋಣ. ಈ ವಿಮರ್ಶೆಯನ್ನು ನಿಮ್ಮ ಪಿಸುಮಾತು ವಿಭಾಗದಲ್ಲಿ ಬರೆಯಬೇಕು. ವಿಸ್ಮಯಾ ಸಾಫ್ಟ್‌ವೇರ್ ಚೆನ್ನಾಗಿರೋದನ್ನು ಆಯ್ದು ಹೊಸ ಫಿಲಂ ವಿಭಾಗದಲ್ಲಿ ಅದಕ್ಕೆ ಲಿಂಕ್ ಕೊಡುತ್ತದೆ. ಫಿಲಂ ನಿರ್ಮಾಪಕರಿಗೆ, ಪ್ರಚಾರಕರಿಗೆ ವಿಸ್ಮಯಾ ಸಾಫ್ಟ್‌ವೇರ್ ಕನ್ನಡ ಸಿನಿಮಾಗಳ ಪೋಸ್ಟರ್, ಸ್ಟಿಲ್ಸ್, ಟ್ರೈಲರ್, ಹಾಡುಗಳ ವಿಡಿಯೋ ಇತ್ಯಾದಿಗಳನ್ನು ಈ ವೆಬ್‌ಸೈಟ್ ಮೂಲಕ ಪ್ರಪಂಚಾದ್ಯಂತ ಕನ್ನಡ ಸಿನಿಮಾ ಪ್ರೇಮಿಗಳಿಗೆ ತಲುಪಿಸಿ ನಿಮ್ಮ ಸಿನಿಮಾಗೆ ಪಬ್ಲಿಸಿಟಿ ಮಾಡಬಯಸುತ್ತದೆ. ನಿಮ್ಮ ಚಿತ್ರದ ಪಬ್ಲಿಸಿಟಿ ಬೇಕಾಗಿದ್ದರೆ ವಿಸ್ಮಯಾ ಸಾಫ್ಟ್‌ವೇರ್‌ ಅನ್ನು ಸಂಪರ್ಕಿಸಿ.ಈ ಸೌಲಭ್ಯ ಆರಂಭಿಕವಾಗಿ ಉಚಿತವಾಗಿ ಲಭ್ಯ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

Kiran (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/22/2007 - 12:12

Nijavaagloo "MUNGAARU MALE" chitra Sakhat aagide. Ee Chitrada Haadugalu mana muttuvantive. Bahu dinada nantara ondu Kannada Chitradadalli intaha haadugalu moodi bandive. Ee chitrada Kavivaryarige nanna namanagalu. Nirdeshaka Yogiraaj avaralli innondu binnaha:- "Ide taraha olle Kannada chitra Innu munde kooda nirdeshisi-Nimma mundina chitra nodalu Kaayuve". Kannada chitra yaavaagloo noduva nanage, idu remake irabekeno annisi snehitana abhipraaya kelidaaga "illa idu hosa chitra" anta keli ellilladastu khushi aagide.Puttanna, Shankar Naag rantaha Kalegaararu innoo Kannadadalli irabahudu ennuva aase matte jeevantavaayitu. Ide tarahada chitragalu baruttiddare ondalla hattu baari bekaadaroo chitra noduvaase ee Kanndiganige.

Dhanyavaadagalu,
Kiran

chetanbs ಗುರು, 01/25/2007 - 11:38

Often some love story based movies are branded as "Old Wine in New Bottle" and most of the times they are discarded as duds. But here is a movie which tells about love and sacrifice(same old stuff !! ) but with a breath-taking effect. Its got all the elements a family entertainer should have - romance, songs, sentiments..... (the list never ends probably for me).

As I told, its about love and sacrifice. "Preeti Madhura Tyaga Amara"(Love is pleasant but sacrifice is eternal). All through the movie we see nothing but love and only at the end we see sacrifice and that too for a truly valid reason.

The story is very simple. Preetam (Ganesh) is a easy going guy who happens to get his eyes on Nandini(Sanjana Gandhi) in a mall and falls in love with her at the first sight. Why only in love, he falls into a manhole also Being a careless son of a rich father(Jaijagadish), he is very attached to his mother(Sudha Belavadi) a lot.

Preetam and his mother set off to Madikeri to visit her mother's friend(Padmaja Rao) and her ex-military man Major Subbaiah(Anantnag). On the way he tells his mother about that girl and his love towards her despite not meeting her. After reaching their destination he finds out that Nandini is his mother's friend's daughter and is heartbroken after getting to know that they are there to attend her wedding seven days from then. Nandini is getting married to a guy who saved her father's life in the battlefield. So they are very He wishes to leave the place suppressing his
feelings but Nandini provokes him and he comes back to woo her and get married to her even at the cost of running away from home with her. And this he does with style. He makes his way into her heart with his love and care towards her. She too reciprocates and they decide to marry each other. At this stage, the story takes a turn wherein some beans are spilt and Preetam will have to sacrifice his love. What we see next is his mental turmoil and pain in facing this and getting over. Will he sacrifice? Or will their romance become eternal? Catch the movie if you want to know !!!

The real hero of the movie is the "mungaaru male"(monsoon rain) wherein all major events and twists take place. Preetam seeing Nandini for the first time at a mall, next on his way to Madikeri, he confessing his love towards her, he breaking down at his helplessness about not being able to get her, Nandini expressing his love towards him, Preetam breaking her heart to get away from her and finally he himself breaking
down after she gets married... all these major events happen in the rain. Most of these are natural and very less artificial. Thats what is good about the movie. Everything is natural. Maybe its used as a symbol to give a feeling that rain brings in new life, clears the mind and cleans up the heart.

Next comes in the hero Ganesh who has done a tremendous job in expressing all kinds of emotions with great sincierity. For almost 12 reels he makes us laugh and finally he makes us feel so sad for him. With a powerful author backed role he emotes well to show both his mirth and pain. [I was initially reluctant to watch this movie because of his comedy time show but now I am damn sure that this guy would give other heroes
here a tough competition with his powerful acting skills and perfect timing sense for delivering the dialogues. All the best Ganesh!]

Cameraman Krishna does a great job in getting some breath taking views of Jog Falls from different angles. The best shotsa re the ones in which Preetam and Nandini are at the tip of the Jog Falls where she confesses her love towards him and the scene is shot with superb details of the falls with the camera being at almost right above their head. Mostly this is the only film wherein Jog has looked so beautiful. [Wish I could have got more details on how these scenes were shot. Got info that cranes for the cameras were specially got from Mumbai... dont know if thats true] Also
beautifully captured are the estates of Sakleshpur and views of Madikeri. All these scenic beauty captured in rain adds on the feel of the movie that is 'freshness'.

The dialogue writer and director Yograj Bhatt deserves a huge round of applause for handling the old story in a different way and presenting it with a fresh look. That is what is expected from any director. Creativity rules and wins and Yograj has proved that. The dialogues are very catchy and hit the right cord at the right time. They are very funny at times presented with the right punch by Ganesh and at other times its really touching. There are two scenes where the dilogues, director, actor and cameraman deliver their best together. First one is when Preetam is drunk and confesses his love towards Nandini and breaks down saying he just cant forget her and will keep on loving her despite her marriage to someone else. The next one is where Preetam is leaving Nandini's house just before her wedding where he talks about his state of mind and his love to his pet-a rabbit which he names as Devadas(symbolizing sacrifice). These are the two scenes which made a huge impact on me and these two scenes showed the real results of good team work.

Mungaru Male review would not be complete without mention of the music by Mano Murthy who captures the rainy feeling in the music with ultimate grace. The title song sung by Sonu Nigam penned by Yograj Bhatt himself is really great. Next comes the Kunidu Kunidu Baare sung by Udit Narayan, Sunidhi Chauhan, and Stephen. Anisuthide sung by Sonu Nigam and Araluthiru sung by Shreya Ghoshal are like love poems suiting the characters and fitting in at the right time in the movie. These three are penned by the well known writer Jayant Kaykini who has given poetic justice to these three songs. Onde Ondu Sari is a good fast paced number sung by Kunal Ganjawala and Priya Himesh. Suvvi Suvvali is just ok not that catchy like others. For the last two songs mentioned, lyrics are by Shiva. Mano Murthy puts his full efforts into making these songs memorable and hummbable for a long time to go.

Other performances which are good are by AnantNag, Padmaja Rao and SudhaBelavadi. Sanjana is good in her scenes and looks but is completely overshadowed by Ganesh! Some other parallel tracks in the movie which are worth mentioning are about the rabbit Devadas and about the Gautam(Digant) who is the groom in waiting to marry Nandini.

Finally, we come out of the theatre with fresh thoughts about love and sacrifice from the point of view of a normal lover and Preetam. We also remember the breathtaking visuals of Jog, Madikeri, Sakleshpura and each of these in mungaru male.... with all the freshness needed. Thats why I called it "Mungaaru Male - Freshness Galore"

ನಾಗರಾಜ್ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/26/2007 - 00:59

ಈ ಮುಂಗಾರು ಮಳೆಯ ಒಂದೊಂದು ಹನಿಯನ್ನು ನನ್ನ ಕಣ್ಣುಗಳಲ್ಲಿ ಹಿಡಿದಿಟ್ಟಿದ್ದೇನೆ...
ಅನಿಸುತಿದೆ ಯಾಕೋ ಇಂದು ಅವಳೇನೇ ..... ನನ್ನವಳೆಂದು.... ಎಂಥ ಮಧುರ ಕಾವ್ಯ....
ಕಂಗಳಲ್ಲಿ.... ನೀರು ಬಂದರೆ... ನೀವು ಯಾವುದೋ ಹೃದಯದ ಜೊತೆಗೆ....ಹೆಜ್ಜೆ ಹಾಕಬಯಸುವವರೆಂದು ಹೇಳಬಹುದು....
ತುಂಬಾ ಚಂದಾ ಇದೆ....ಹನಿ ಹನಿ ಪ್ರೇಮ್ ಕಹಾನಿ....

Vijay ಶನಿ, 01/27/2007 - 00:15

ಕನ್ನಡಿಗರು ಮುಂಗಾರು ಮಳೇಲಿ ಕೊಚ್ಕೊಂಡು ಹೋದ್ರು ಅನ್ಸುತ್ತೆ. :)
ಇಂಥ ಚಿತ್ರಗಳು ಇನ್ನಷ್ಟು ಬರಲಿ... ಸದಭಿರುಚಿಯ ಚಿತ್ರಗಳಿಂದ ತುಂಬಾ ಕೆಲಸ ಆಗ್ಲಿಕ್ಕಿದೆ ಮಾರಾಯ್ರೆ..

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/30/2007 - 23:11

ಮುಂಗಾರು ಮಳೆಯಂತಹ ಒಂದು ಚಿತ್ರವನ್ನು ನಾನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ. ನಾಲ್ಕು ಬಾರಿ ಚಿತ್ರವನ್ನು ನೋಡಿದ್ದೇನೆ. ಆದರೂ ಸಮಾಧಾನವಿಲ್ಲ. ಇನ್ನೂ ನೋಡುವ ತವಕ. ಹಿಂದೆಂದು ನಾನು ಚಿತ್ರವನ್ನು ಚಿತ್ರ ಮಂದಿರದಲ್ಲಿ ನಾಲ್ಕು ಬಾರಿ ನೋಡಿರಲಿಲ್ಲ.

ಪ್ರತಿ ಬಾರಿಯೂ ಬ್ಲಾಕ್‌ನಲ್ಲಿ 100-150 ರೂಪಾಯಿ ಕೊಟ್ಟು ನೋಡಿದ್ದೇನೆ. ನನ್ನ ಆಫೀಸಿನಲ್ಲಿರುವ ಎಲ್ಲರಿಗೂ ಈ ಚಿತ್ರದ ಬಗ್ಗೆ ಹುಚ್ಚು ಹತ್ತಿಸಿದ್ದೇನೆ. ನನ್ನ ಒಬ್ಬ ಸ್ನೇಹಿತ ಕನ್ನಡ ಚಿತ್ರಗಳನ್ನೇ ನೋಡುತ್ತಿರಲಿಲ್ಲ. ಅವನನ್ನು ಮೊನ್ನೆ ಮುಂಗಾರು ಮಳೆಗೆ ಕಳುಹಿಸಿದ್ದೆ ಮ್ಯಾಟ್ನಿ ಆಟಕ್ಕೆ. ಆತನಿಗೆ ಮುಂಗಾರು ಮಳೆ ಯಾವ ಪರಿ ಮೋದಿ ಮಾಡಿತೆಂದರೆ, ಅವತ್ತಿನ ದಿನವೇ, ಸೆಕೆಂಡ್ ಷೋಗೆ ಮತ್ತೆ ಹೋಗಿ ಮುಂಗಾರು ಮಳೆ ನೋಡಿಕೊಂಡು ಬಂದ. ಈಗ ದಿನ ಪೂರ್ತಿ ಮುಂಗಾರು ಮಳೆ ಹಾಡುಗಳನ್ನು ಕೇಳುತ್ತಾ ಕುಳಿತಿರುತ್ತಾನೆ.

ಮುಂಗಾರು ಮಳೆ - ಕನ್ನಡಿಗರ ಹೆಮ್ಮೆ.

ashu (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 02/01/2007 - 12:16

elru chithrada bagge bareethira olledu,

odoke sakath kushi kooda, aaadre :(

nang yaako, kannada film industry avranna, kayyalli donne thagondu, higga mugga baarisovastu sittu...

hyderabad ge bandu ondu varsha aaythu (huttininda iddaddu kannada naadinalle), bandaaga jogi chitra theatre nalli itthu..

kannada chitra alwa, 4 sathi, nanna telgu snehitharannu karkondu hogi nodi bande...

ad aad mele?????

ond movie, ond saar onde ond movie nu bandilla..

mungaaru male movie ist hit aagirbekaare, horanaad kannadigaru nodo thara, arrengments maadodalva..

ade telgu movies nodi, belagaaviyallu 50 dayz odthaa ide (naanu belagaaviyava)..

hogli, district ondu antha beda, atleast dodda shaharagalaada, hyderabad, mumbai, kolkotha, atleast alli yaadru ondu print kalisodalva... ondu theatre arrange maadodalva...

duddina problem antha idre, onchuru jaasthi ne thagolli, daily 4 shows idoke kasta aadre onde ond show idli...

- yaarigaadaru kannada film industry parichaya idre ee ahavaalannu dayavittu thilisi..

sadhyadalle bidugade aada appu abhinayada 'arasu' aadru barutthe anthaa kaaythaa idde,
adakku katthari... che, namma kannada film ragale ne istu :x

-inthi nonda,

ashu

itsVijay (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 02/01/2007 - 22:32

Hi nonda horanaada kannadiga please send a mail to seafeliz_vijay@yahoo.es asap...I have something to tell

ಮೇಲಧಿಕಾರಿ ಗುರು, 02/01/2007 - 22:51

ಹಾಯ್ ಅಶು ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿದೆ. ಕನ್ನಡವನ್ನು ಇಂಗ್ಲಿಷ್‌ ಲಿಪಿಯಲ್ಲಿ ಬರೆದಾಗ ಓದಲು ಓದ್ದಾಡಬೇಕಾಗುತ್ತದೆ. ನೀವು www.quillpad.com/kannada ಬಳಸಿ ಕನ್ನಡದಲ್ಲಿ ಬರೆಯಬಹುದಾಗಿದೆ. ಇರಲಿ ನೀವು ಬರೆದದ್ದನ್ನು ಓದಲು ಸುಲಭವಾಗಲೆಂದು ನಾನು ಕನ್ನಡದಲ್ಲಿ ಬರೆದು ನೀಡುತ್ತಿದ್ದೇನೆ. ಕ್ಷಮೆ ಇರಲಿ.
ಇದು ಅಶು ಅವರು ಹೈದರಾಬಾದ್‌ನಿಂದ ಬರೆದಿರೋದು. ಅವರ ನಿಜವಾದ ಅಭಿಪ್ರಾಯ ಮೇಲ್ಗಡೆ ಇಂಗ್ಲೀಷ್‌ ಲಿಪಿಯಲ್ಲಿ ಆದರೂ ಕನ್ನಡದಲ್ಲೇ ವಾಕ್ಯ ಇದೆ..

ಎಲ್ರೂ ಚಿತ್ರದ ಬಗ್ಗೆ ಬರೀತೀರಾ ಒಳ್ಳೇದು.
ಓದೋಕೆ ಸಕತ್ ಖುಷಿ ಕೂಡಾ, ಆದ್ರೆ :-(

ನಂಗ್ ಯಾಕೋ ಕನ್ನಡ ಫಿಲಂ ಇಂಡಸ್ಟ್ರಿ ಅವರನ್ನಾ ಕೈಯಲ್ಲಿ ದೊಣ್ಣೆ ತಗೊಂಡು, ಹಿಗ್ಗಾ ಮುಗ್ಗಾ ಬಾರಿಸುವಷ್ಟು ಸಿಟ್ಟು...
ಹೈದರಾಬಾದಗೆ ಬಂದು ಒಂದು ವರ್ಷ ಆಯ್ತು.(ಹುಟ್ಟಿನಿಂದ ಇದ್ದದ್ದು ಕನ್ನಡ ನಾಡಿನಲ್ಲೇ), ಬಂದಾಗ ಜೋಗಿ ಚಿತ್ರ ಥಿಯೇಟರ್‌ನಲ್ಲಿ ಇತ್ತು.
ಕನ್ನಡ ಚಿತ್ರ ಅಲ್ವಾ, ೪ ಸರ್ತಿ ನನ್ನ ತೆಲುಗು ಸ್ನೇಹಿತರನ್ನು ಕರ್ಕೊಂಡು ಹೋಗಿ ನೋಡಿ ಬಂದೆ...
ಅದು ಆದ ಮೇಲೆ??????

ಒಂದ್ ಮೂವಿ, ಒಂದ್ ಸಾರ್ ಒಂದೇ ಒಂದ್ ಮೂವಿನೂ ಬಂದಿಲ್ಲಾ...
ಮುಂಗಾರು ಮಳೆ ಫಿಲಂ ಇಷ್ಟು ಹಿಟ್ ಆಗಿರ್ಬೇಕಾದ್ರೆ, ಹೊರನಾಡ ಕನ್ನಡಿಗರು ನೋಡೋ ತರಾ ಎರೇಂಜ್‌ಮೆಂಟ್ಸ್ ಮಾಡೊದಲ್ವಾ?..
ಅದೇ ತೆಲುಗು ಫಿಲಮ್ ನೋಡಿ, ಬೆಳಗಾವಿಯಲ್ಲೂ ೫೦ ದಿನ ಓಡ್ತಾ ಇದೆ.(ನಾನು ಬೆಳಗಾವಿಯವ)..
ಹೋಗ್ಲಿ, ಡಿಸ್ಟ್ರಿಕ್ಟ್ ಒಂದು ಅಂತಾ ಬೇಡಾ, ಎಟ್‌ಲೀಸ್ಟ್ ದೊಡ್ಡ ಶಹರಗಳಾದ ಹೈದರಾಬಾದ್, ಮುಂಬೈ, ಕಲ್ಕತ್ತಾ ಎಟ್‌ಲೀಸ್ಟ್ ಅಲ್ಲಿಯಾದ್ರು ಒಂದು ಪ್ರಿಂಟ್ ಕಳಿಸೋದಲ್ವಾ?..
ಒಂದು ಥಿಯೇಟರ್ ಎರೆಂಜ್ ಮಾಡೊದಲ್ವಾ?

ದುಡ್ಡಿನ ಪ್ರಾಬ್ಲಂ ಅಂತಾ ಇದ್ರೆ, ಒಂಚೂರು ಜಾಸ್ತಿನೇ ತಗೋಳ್ಳಿ, ಡೇಲಿ ನಾಲ್ಕು ಶೋ ಇಡೋಕೆ ಕಷ್ಟ ಆದ್ರೆ ಒಂದೇ ಒಂದ್ ಶೋ ಇಡಲಿ...

ಯಾರಿಗಾದ್ರು ಕನ್ನಡ ಫಿಲಂ ಇಂಡಸ್ಟ್ರಿ ಪರಿಚಯ ಇದ್ರೆ ಈ ಅಹವಾಲನ್ನು ದಯವಿಟ್ಟು ತಿಳಿಸಿ.

ಸಧ್ಯದಲ್ಲೆ ಬಿಡುಗಡೆ ಆದ ಅಪ್ಪು ಅಭಿನಯದ 'ಅರಸು' ಆದ್ರು ಬರುತ್ತೆ ಅಂತಾ ಕಾಯುತ್ತಾ ಇದ್ದೆ.
ಅದಕ್ಕೂ ಕತ್ತರಿ... ಛೆ, ನಮ್ಮ ಕನ್ನಡ ಫಿಲಂ ರಗಳೇನೆ ಇಷ್ಟು :x

-ಇಂತಿ ನೊಂದ
ashu (ಅಶು)

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 02/01/2007 - 19:51

ಮುಂಗಾರು ಮಳೆ ಸಿನೆಮಾ ನೋಡದಿದ್ದ ರೆ ನೀವು ಜೀವನದಲ್ಲಿ ಕೆಲವು ಮಧುರವಾ ದ ಕ್ಷಣಗಳನ್ನು ಕಳೆದುಕೊಳ್ಳುತ್ತೀರಾ. ಇದು ಒಂದು ಲೈಫ್ ಟೈಮ್ ಸಿನಿಮಾ. ಕನ್ನಡದ ಮಟ್ಟಿಗೆ ಹೇಳುವುದಾದರೆ ಇದೊಂದು ಹೊಸ ಚರಿತ್ರೆಯನ್ನು ಹುಟ್ಟು ಹಾಕುವಂತಹ ಚಿತ್ರ. ನೀವು ಎಲ್ಲೇ ಹೋಗಿ, ಜನ ಮುಂಗಾರು ಮಳೆ ಸಿನೆಮಾ ಬಗ್ಗೆ ಮಾತನಾಡುವುದನ್ನು ನೀವು ಕೇಳಿಸಿಕೊಳ್ಳಬಹುದು.
ಅದನ್ನು ನೋಡಿದವರೇ ಮತ್ತು ಮತ್ತು ನೋಡುತ್ತಿರುವುದು ಮತ್ತೊಂದು ಸೋಜಿಗ. ಇನ್ನೂ ಮುಂಗಾರು ಮಳೆಯನ್ನು ನೋಡಿಲ್ಲ ದ ವರ ಸಂಖ್ಯೆ ಬಹಳಷ್ಟಿದೆ. ಅವರೆಲ್ಲರೂ ಈ ಸಿನೆಮಾವನ್ನು ನೋಡಿಬಿಟ್ಟರೆ, ಇದು ಕನ್ನಡ ಆಲ್ ಟೈಮ್ ಗ್ರೇಟ್ ಲಿಷ್‌ಟ್‌ನಲ್ಲಿ ಸೇರುವುದು ಖಂಡಿತ.
ನಾನು ಈಗಾಗಲೇ ಹೇಳಿರುವ ಹಾಗೆ, ಮುಂಗಾರು ಮಳೆಯನ್ನು 4 ಬಾರಿ ನೋಡಿದ್ದೇನೆ. ಆದರೆ, ಇನ್ನೂ ಸಮಾಧಾನ ಇಲ್ಲ. ಮತ್ತೆ ಮತ್ತೆ ನೋಡುವ ತವಕ. ಅದರ ಗುಂಗಿನಿಂದ ಆಚೆ ಬರಲು ಮನಸ್ಸೇ ಇಲ್ಲ. ದಿನದ 24 ಘಂಟೆಗಳು ಅದರ ಬಗ್ಗೆ ನೆನೆದು, ನೆನೆದು ಖುಷಿ ಪಡುತ್ತೇನೆ. ಅದರದ್ದೇ ಹಾಡನ್ನು ಕೇಳುತ್ತಿರುತ್ತೇನೆ. ಹಿಂದೆಂದು ಈ ರೀತಿ ನನಗಾಗಿರಲಿಲ್ಲ. ಎಷ್ಟೋ ಸಿನಿಮಾಗಳನ್ನು ನೋಡಿದ್ದೇನೆ, ಇಷ್ಟ ಪಟ್ಟಿದ್ದೇನೆ. ಆದರೆ ಒಂದು ಸಿನಿಮಾ ಈ ರೀತಿ ನನ್ನನ್ನು ಆವರಿಸಿದ ಉದಾಹರಣೆ ಇಲ್ಲ.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 02/01/2007 - 19:58

ಇನ್ನೂ ನೀವು ಮುಂಗಾರು ಮಳೆ ಸಿನೆಮಾ ನೋಡಿಲ್ವ?

ಹಾಗಾದ್ರೆ ನೀವು ಈ ಭೂಮಿ ಮೇಲೆ ಇರೋದೇ ದಂಡ ಬಿ ಡಿ ಮಾರಾಯ್ರೇ ..

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 01/24/2009 - 12:15

ನೀನು ನೋಡಿದಾ

ಆಗಾದ್ರೆ ತುಂಬಾ ದಡ್ದ ಬಿಡು ನೀನು

ashu ಶುಕ್ರ, 02/02/2007 - 11:14

ಕನ್ನಡಕ್ಕೆ ಅನುವಾದ ನೀಡಿದ ಹಾಗೂ quillipad software ಲಿಂಕ್ ನೀಡಿದ್ದಕ್ಕೆ ಅಡ್ಮೀನ್ ಅವರಿಗೆ ಧ್ಯಾನವಾದಗಳು.
ಹಾಗೆ ವಿಜಯ್ ಅವರೇ, ತಾವು ನನಗೆ ಏನೋ ಹೇಳುವದಿದೆ ಅಂದಿದ್ದೀರಿ, ನಾನು ನಿಮಗೆ ಮೈಲ್ ಮಾಡಿದ್ದೀನಿ. ದಯವಿಟ್ಟು ಹೇಳಬಯಸಿದ್ದನ್ನು ಹೇಳಿ :)

inthi nimmava,
-Ashu

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 02/02/2007 - 16:31

ಮುಂಗಾರು ಮಳೆ ಕನ್ನಡದಲ್ಲಿ ಬಂದಿರುವ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ ನಿಲ್ಲುತ್ತದೆ. ನಮ್ಮ ಚಿತ್ರರಂಗದ ಬ್ರಹ್ಮ ಎಂದೆ ಖ್ಯಾತ ರಾಗಿದ್ದ ಪುಟ್ಟಣ್ನನವರು ಮತ್ತೆ ಹುಟ್ಟಿ ಬಂದು ಈ ಚಿತ್ರವನ್ನು ನಿರ್ದೇಶಿಸಿದ್ದಾರೇನೋ ಎನ್ನುವ ಮಟ್ಟಿಗೆ ಈ ಚಿತ್ರ ನಿಮ್ಮನ್ನು ತಟ್ಟು ತ್ತದೆ, ಮನಸ್ಸು ಕಲಕುತ್ತದೆ. ಇಂಥ ಒಂದು ತಂಪಾದ ಯಶಸ್ಸಿನ ಮಳೆ ನಮ್ಮ ಚಿತ್ರರಂಗಕ್ಕೆ ಬೇಕಿತ್ತು. ಈಗ, ಮುಂಗಾರು ಮಳೆ ಜನಪ್ರಿಯವಾಗುತ್ತಿರುವ ಪರಿ ನೋಡಿದರೆ, ಒಮ್ಮೆ ದಿಗಿಲಾಗುತ್ತದೆ. ಈ ಚಿತ್ರ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೆ ಅದರಲ್ಲಿ ಅತಿಶಯೋಕ್ತಿ ಏನಿಲ್ಲ. ಒಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕೆ ಸುಗ್ಗಿ ಕಾಲ.

ಹಲೋ ಕನ್ನಡಿಗರೇ...

ಸ್ವಾಮಿ... ನಾನೊಬ್ಬ ಹೊರ ನಾಡ ಕನ್ನಡಿಗ... ಹೈದೇರಾಬಾದ್ ನನ್ನ ಮನೆ ಈಗ... ಈನಾಡುವೆ "ಮುಂಗಾರಿನ ಮಳೆ" ಬಗ್ಗೆ ಟಿವಿ ನಲ್ಲಿ ತುಂಬನೆ ಬರುತಾದೆ... ಆದ್ರೆ ನನಗೆ ಅಂತ ಒಳ್ಳೇ ಸಿನೆಮಾ ನೋಡೋ ಪುಣ್ಯ ಇಲ್ಲವಾಗಿದೆ ಆದರೂ ಹಾಡುಗಳ್ಳನ್ನು ಇಂಟರ್‌ನೆಟ್‌ನಲ್ಲಿ ಕ್ಲಿಪ್ಸ್ ನೋಡಿ ಸಂತೋಷ ಪಡಬೇಕಾಗಿದೆ...

ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿಯ ಕನ್ನಡಿಗರಿಗೆ ಕನ್ನಡ ಸಿನೆಮಾ ನೋಡೋ ಸೌಕರಿಯ ಯಾಕೆ ಇಲ್ಲ. ಎಲ್ಲ ತೆಲುಗು ಹಾಗೂ ತಮಿಳು ಸಿನೆಮಾ ಬೆಂಗ್ಳೂರಿಗೂ ಬರುತ್ತೆ...

ಇಣ್ನುಮೇಲಾದರೂ... ಯಾರಾದರೂ... ನಮ್ಮ ಬಗ್ಗೆ ಯೋಚನೆ ಮಾಡಲಿ ಅಂತ ಕಳಕಳಿಯಿಂದ ಬೇಡಿಕೊಳ್ಳುತಿದ್ದೇನೆ.

ಇನ್ನೂ "ಮುಂಗಾರಿನ ಮಾಲಿ" ಬಗ್ಗೆ ಹೇಳಬೇಕೆಂದ್ರೆ... ನಾನು ಸಿನೆಮಾ ನೋಡಿಲ್ಲವಾದರೂ... ಹಾಡುಗಳು, ಛಾಯಾಚಿತ್ರೀಕರಣ ಅದ್ಭುತವಾಗಿದೆ... ಸ್ಟೋರೈ ಕೂಡ ಚೆನ್ನಾಗೆ ಇರುತೆ ಅಂತ ಅಂಕೊಂತೀನಿ...

ಗಣೇಶ್ ತೂಬಣೆ ಸ್ಟೈಲಿಷಾಗಿದ್ದಾರೆ... ಆವೃನ್ನ ಚಿಕ್ಕ ತೆರೆ ಮೇಲೆ ನೋಡಿರುವುದರಿಂದ... ನಮಗೆ ಅಭಿನಾನ ಹೆಚ್ಚು... ಹಾಡುಗಳಲ್ಲಿ.... ಫೆಂಟಸ್ತಿಕಾಗಿದ್ದಾರೆ...

ವೆಲ್... ಆದಷ್ತ್ತುಬೇಗ ಬೆಂಗುಳೂರಿಗೆ ಬಂದು ಸಿನೆಮಾ ನೋಡೋ ಹುಚ್ಚು ಹೆಚ್ಚಾಗಿದೆ...

ಅನಿವೀ ಹೊರನಾಡು ಕನ್ನಡಿಗರಿಗೂ ಕನ್ನಡ ಸಿನೆಮಾ ತೋರಿಸಿ ಸ್ವಾಮಿ...

ಇತಿ ನೊಂಧ ಹೊರನಾದ ಕನ್ನಡಿಗ...
ಭಾರಾದ್ವಜ್ ಗುರುರಾಜ್ ಬೆಂಗಳೂರು

chetanbs ಧ, 02/14/2007 - 15:07

"Nim touchu,nim beauty,nim voiceu,nim nota, e biknaasi maLe,nim gejje saddhu, aah watchu, aah rascal devdasa gante saddhu
ella mix aagi nan life alle repairi madakkagade iro gaaya madide
Nangotthagoythu kanri neev nange sigolla antha Bitkotbitte kanri,
Nimmanna pataisi loafer anskoLLodakintha obba descent hudgnaagi idbitre saaku ansbittide kanri.
Aadre ondh vishya tiLkoLi nannastu nimmann ista padonu e bhumimele yaru sigalla"

ಸುಹಾಸ್.ವಿ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/06/2007 - 16:55

ನನ್ನ ಹೆಸರು ಸುಹಾಸ್.ನಾನು ಬೆಂಗಳೂರಲ್ಲಿದ್ದೀನಿ.
ನಾನು ಚಿತ್ರ ಮಂದಿರಕ್ಕೆ ಅಂತ ಹೋದ್ರೆ ಅದು ಕನ್ನಡ ಚಿತ್ರಗಳಿಗೆ ಮಾತ್ರ.ನಾನು ಕನ್ನಡದ ಪ್ರೇಮಿ.ಅತ್ಯುತಮವಾದ ಕನ್ನಡ ಚಿತ್ರಗಳನ್ನ ಮಾತ್ರ ನಾನು ನೋಡೋದು.
ಮುಂಗಾರು ಮಳೆ........!!!!!!!!!
ಹನಿ ಹನಿ ಪ್ರೇಮ ಕಹಾನಿ........................
ಒಂದು ಸಾಧಾರಣ ಕಥೆಯನ್ನ ಹೇಗೆ ಅಸಾಧಾರಣವಾಗಿ ತೋರಿಸಬಹುದು ಅಂತ ಈ ಚಿತ್ರ ಹೇಳುತ್ತೆ.
ಇಂಥ ಪ್ರೇಮ ಕಥೆಗಳು ಎಷ್ಟೋ ಬಂದಿವೆಯಾದ್ರೂ ಯಾಕೆ ಜನ ಮುಗಿಬಿದ್ಧು ಈ ಚಿತ್ರವನ್ನು ನೋಡ್ತಿದ್ದಾರೆ...???
ಯಾಕಂಡ್ರೆ.... ಈ ಚಿತ್ರದಲ್ಲಿ ಒಂದು ಹೊಸತನದ ಘಮ ಇದೆ.ನಮ್ಮ ನಾಡಿನ ಸೌಂದರ್ಯದ ಸಿರಿಯಲ್ಲಿ ಒಂದು ನವಿರಾದ ಪ್ರೇಮ ಕಾವ್ಯ ಬರೆದಿದ್ದಾರೆ ನಮ್ಮ ಯೋಗರಾಜ್ ಭಟ್.

ಗಣೇಶ್ ಅಭಿನಯವನ್ನ್ ಕಂಡಾಗ ಎಷ್ಟು ಸಂತೋಷವಾಗುತ್ತೆ.ಒಂದು ಚೂರು ತಡೆ ಇಲ್ಲದ ಅಭಿನಯ,ಸಂಭಾಷಣೆ...ಅದ್ಭುತ...!!!!!!!!
ಸುಮಧುರ ಹಾಗೂ ಸುಂದರ ಹಾಡುಗಳು (ಜಯಂತ್ ಕಾಯೈಕಿನಿ,ಕವಿ ರಾಜ್)
ಮೈ ನವಿರೆಳಿಸುವ ಹೊರಂಗಣ (ಕೃಷ್ಣ)
ಆಧ್ಭುತ ದರ್ಶಕತ್ವ ( ಯೋಗರಾಜ್ ಭಟ್)

ಇಡೀ ಚಿತ್ರ ತಂಡದ ಒಟ್ಟಾರೆ ಪರಿಶ್ರಾಮದ ಕೂ ಸು ಈ ಮುಂಗಾರು ಮಳೆ.

"ಭಟ್ರೆ............. ಹ್ಯಾಟ್ಸ್ ಆಫ್ ಟು ಯು"

ಇದೆ ತರದ ಒಳ್ಳೇ ಚಿತ್ರ ಗಳನ್ನ ಕನ್ನಡ ಚಿತ್ರ ರಂಗಕ್ಕೆ ಕೊಡಿ ಅನ್ನೋದು ನಿಮ್ಮ ಅಭಿಮಾನಿ ಸುಹಾಸ್ ನ ಅನಿಸಿಕೆ.

ಅಭಿ.....ನಂ.... ದನೆಗಳು..... ಮುಂಗಾರು ಮಳೆಯೇ....................!!!!!!!!!!!!!!!!!

Appu ಶುಕ್ರ, 04/27/2007 - 17:52

ಅಪ್ಪು ....

ನಿಜವಾಗಲು ಇದು ತುಂಬಾ ಚನ್ನಾ ಗೀಡೆ

ಪ್ರೀಮಿಗಳಿಗೆ ಇದು ಒಂದು ಸೂಪರ್ಬ್ ಫಿಲ್ಮ್ ಸಾರ್ ಎಲ್ಲ ನೊಂದ ಪ್ರೀಮಿಗಳು ನೋಡಲೇ ಬೇಕಾದ ಸಿನಿಮಾ ಇದು ಸಾರ್

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 08/21/2007 - 16:45

Namaskaara,
Thumba varshgala nanthara nodida chithra mungaaru male nanage thumbaane hidusthu. Sambhaashane, chithreekarana, haadu, natane yella superb. Yograaj Bhatravaru innashtu intha quality chithragalanna tharabeku endu nannase. Adonde allade kannada chithragalu yaaru nodthilla, parabhaasha chithra kannadakkintha chennagi odthaaide ennuva maathu illi sullagathe yaakandre olle cinema kotre yaava bhaashe jana bekaadru nodthare annodakke mungaaru male ondu udaaharane aagide endu heluththa mathomme mungaaru male success hinde iruva ellarigu nana vandanegalu.

mungaaru male rocks!!!!!!!!!!!!

Gireesha K S (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/15/2008 - 12:36

Naa Mungaaru Male pichchar nodilla, yaakandre irodu Sharjah dalli.
aadre haadugaLanna kElideeni, TV nalli haadu nidideeni.

nijwaaglu tumbaa sogasaagive.

namm Sharjah manenalli iro Maleyalli friends kooda ee 'Mungaaru Male' ya moDige biddidaare. namm Manenalli iro yella Maleyaaligalu tumbaa chennagi "Anisutide yaako indu.." haadannu baaLa sogasaagi haadtaare.

ist saakalwa Mungaaru Male hit annodakke.

-
Gireesha KS
IT System Administrator
Sharjah, UAE
Cell:+971-50-9459311

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 01/24/2009 - 12:13

ಏನ್ ಡಬ್ಬ ಗುರು

ತುಂಬಾ ಬೋರಿಂಗ್

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 05/13/2009 - 11:25

"ಮುಂಗಾರು ಮಳೆ" ಕನ್ನಡ ಸಿನಿಮಾ ರಂಗದಲ್ಲಿ ಮರೆಯಲಾಗದ ಅತ್ಯುತ್ತಮ ಚಾಪು ಮುಡಿಸಿದೆ.
ಈಗಲೂ ಸಹ ಆ ಚಿತ್ರವನ್ನು ನೋಡ್ಬೇಕೆನ್ನಿಸುತ್ತದೆ.
ನನ್ನ ಜೀವನದಲ್ಲಿ ಈ ಚಿತ್ರ ಬಹಳ ಪಾಟ ಕಲಿಸಿದೆ....
I Like Thise films!!!!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.