Skip to main content

ಅರ್ಥಮಾಡಿಕೊಳ್ಳಲಾಗದವಳ ಪ್ರೇಮಪತ್ರ

ಬರೆದಿದ್ದುSeptember 3, 2011
8ಅನಿಸಿಕೆಗಳು

ಪ್ರೀತಿಯ ಹುಡುಗ,,,
ಅದೇಕೋ  ಬಹಳಷ್ಟು ದಿನಗಳಿಂದ ಮೌನವೇ ಸಂಗಾತಿಯಾಗಿಬಿಟ್ಟಿದೆ.  ಮಾತು ಬಾಯಿಂದ ಹೊರಬರಲಾರನೆಂಬಂತೆ ಹಠ ಹಿಡಿದು ಕುಳಿತುಬಿಟ್ಟಿದೆ.  ಗೆಳೆತನದ ರುಚಿ ಹಿಡಿಸಿಬಿಟ್ಟಿದ್ದಲ್ಲದೆ, ತೀರಾ ಮನಸ್ಸಿಗೆ ಆಪ್ತನೆನಿಸಿದ ಆ ನಿನ್ನ ಪ್ರೀತಿಯ ಪರಿ ಮರೆಯಲಾಗದಂಥದ್ದು.  ಅದೇಕೋ ಕುಳಿತರೂ, ನಿಂತರೂ, ಪ್ರೀತಿಯ ಐಸ್ ಕ್ರೀಮ್ ಚಾಕಲೇಟ್ಗಳನ್ನು ಚಪ್ಪರಿಸುವಾಗಲೂ ಮನ ನಿನ್ನ ಕುರಿತೇ ಕನವರಿಸುತ್ತದೆ... ಅದೆಂಥಾ ಮೋಡಿ ಮಾಡಿಬಿಟ್ಟೆಯೋ ನೀನು ಆ ದೇವರೇ ಬಲ್ಲ.  ಗೆಳೆತನವೆಂದು ಶುರುವಾದ ಈ ಬಾಂಧವ್ಯ ಸತತವಾಗಿ ದಿನ ಸಮಯ ಯಾವುದರ ಪರಿವೆಯೇ ಇಲ್ಲದೆ ಶಾಂತವಾಗಿ ಹರಿಯುತ್ತಿದ್ದರೂ ಅಲ್ಲೊಮ್ಮೆ ಇಲ್ಲೊಮ್ಮೆ ತೊಡಕಾಗುವ ಹುಸಿಕೋಪ ಕಿಂಚಿತ್ ಮತ್ಸರ ಭಿನ್ನಾಭಿಪ್ರಾಯ ವಾದಗಳು ಗೆಳೆತನವನ್ನಂತೂ ಮುರಿದು ಹಾಕಲಿಲ್ಲ. 
ಆದರೆ ಮಧ್ಯದಲ್ಲೆಲ್ಲೋ ಒಮ್ಮೆ ನನಗನಿಸಿದ್ದಂತೂ ನಿಜ.. ಎಲ್ಲಿ ಈ ಗೆಳೆತನ ಪ್ರೀತಿಯಾಗಿ ಮಾರ್ಪಾಡಾಗುತ್ತಿದೆಯೇನೋ ಅಂತ.... ಅದಕ್ಕೆ ಕಾರಣ ಬಹಳ ಸರಳ...ನಿನ್ನ ಕಾಳಜಿ ಪ್ರೀತಿ ಸಾಂಗತ್ಯ ಸಲಿಗೆ ಇತ್ಯಾದಿ ಅಂತಹ ಭಾವನೆಯನ್ನು ನನ್ನ ಮನದಾಳದಲ್ಲೆಲ್ಲೋ ಮೋಡಿಸಿದ್ದಂತೂ ನಿಜ.  ಯಾರಿಗೂ ಯಾವತ್ತೂ ಕದವನ್ನೇ ತೆರೆಯದ ಈ ಮನದೊಳಗೆ ನನಗೇ ಅರಿವಿಲ್ಲದಂತೆ ಮೆಲ್ಲನೆ ಅಡಿಯಿರಿಸಿದ ನಿನ್ನನ್ನು ಅದ್ಯಾವ ಪರಿ ಹಚ್ಚಿಕೊಂಡೆನೆಂದರೆ ನೀನಿಲ್ಲದ ಒಂದು ಕ್ಷಣವೂ ನನ್ನ ಕಲ್ಪನೆಗೆ ನಿಲುಕದಂತಹ ಸ್ಥಿತಿಗೆ ಮಾನಸಿಕವಾಗಿಯೇ ತಲುಪಿಬಿಟ್ಟಿದ್ದೆ...
ಯಾವುದೋ ಒಂದು ಹಂತದಲ್ಲಿ ಗೆಳೆತನದ ಪರಿಮಿತಿಯಲ್ಲಿಯೇ ಹೆಜ್ಜೆಯಿರಿಸುತ್ತಿದ್ದವನು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿಯೇ ಆ ಪರಿಧಿ ದಾಟಿ ಪ್ರೀತಿಯ ಮುದ್ದಾದ ಒಂದು ಹೆಜ್ಜೆಯಿರಿಸಿದವನೇ ಅದು ನನ್ನರಿವಿಗೆ ಬಂತೆಂದು ತಿಳಿದಾಕ್ಷಣ ಹೆಜ್ಜೆ ಹಿಂತೆಗೆದುಕೊಂಡೆಯಾದರೂ ಅದರ ಗುರುತು ಮನದಲ್ಲಿ ಅಚ್ಚಾಗಿಬಿಡುತ್ತದೆಯೆಂಬ ಚಿಕ್ಕ ವಿಷ್ಯಾನೂ ನಿನ್ಗೆ ಅರ್ಥವಾಗದೇ ಹೋಯ್ತಲ್ಲಾ ಹುಡುಗ..... ಪ್ರೀತಿಸಬೇಕೆಂಬ ತುಡಿತವಿದ್ದರೂ ಎದುರಿರುವ ವಾಸ್ತವದ ಅರಿವು ಕಳೆದುಕೊಳ್ಳದೆ ಗೆಳೆತನದ ಪರಿಧಿಗೇ ಮರಳಿದ ನಿನ್ನ ಬಗ್ಗೆ ಮನಸ್ಸು ಹೆಮ್ಮೆ ಪಟ್ಟಿತು.  ಆದರೆ ಇನ್ನೆಲ್ಲೋ ಒಂದು ಕಡೆ ಇಲ್ಲ... ನೀನಂತೂ ಖಂಡಿತಾ ನನ್ನ ಪ್ರೀತಿಸಲಿಲ್ಲ ಎಂದೂ ಅನಿಸಿದ್ದುಂಟು.  ಬಹುಷಃ ಗೆಳೆತನ ಪ್ರೀತಿ ಇವೆರಡರ ಮಧ್ಯದಲ್ಲಿರುವ ಅತ್ಯಂತ ಸೂಕ್ಷ್ಮ ವ್ಯತ್ಯಾಸ ನನ್ನ ಈ ಮೊದ್ದು ತಲೆಗೆ ಹೊಳೆಯಲಿಲ್ಲವೇನೋ... ಒಮ್ಮೆ ಆಪ್ತ ಗೆಳೆಯನಂತೆ ಮತ್ತೊಮ್ಮೆ ಸ್ವಚ್ಛ ಮುಗ್ಧ ಮನಸಿನಿಂದ ಪ್ರೀತಿಸುವ ಪ್ರೇಮಿಯಂತೆ ತೋರುವ ನೀನು ನಿನ್ನ ವ್ಯಕ್ತಿತ್ವ ಯಾಕೋ ನನಗೇ ಗೊತ್ತಿಲ್ಲದಂತೆ ನಿನ್ನನ್ನು 'ಅರ್ಥವಾಗದವನು' ಎಂಬ ಹಣೆಪಟ್ಟಿ ಕೊಡುವಂತೆ ಮಾಡಿದೆ.  ಈ ಗೊಂದಲದಿಂದ ಹೊರಬರಲಾರದೆ ತೊಳಲಾಡುತ್ತಿರುವ ಈ ಹುಚ್ಚಿಗೆ ಏನೆಂದು ಸಾಂತ್ವನ ಹೇಳುವೆಯೋ ಮುದ್ದು ಹುಡುಗ....???????
 
                                                                                                                               "ಅರ್ಥಮಾಡಿಕೊಳ್ಳದವಳು"

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ದೀಪು ಮೈಸೂರು ಧ, 09/07/2011 - 18:59

ತುಂಬಾ ಚೆನ್ನಾಗಿದೆ ಜ್ಯೋತಿ.. :)

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 09/21/2011 - 08:46

 ನಾನು ಇದೆ ಮೊದಲು ಪ್ರಿತಿ ಕಳ್ಕೊಂಡು ಅಳುತಾ ಕುಳಿತೆ ಆದರೆ ತಾಯಿ ಕಳ್ಕೊಂಡರು ಇಷ್ಟು ದು:ಖ ಆಗಿರಲಿಲ್ಲತಾಯಿ ಹುಟ್ಟಿಸಿ ಮರುದಿನವೆ ಹೋದಳು ಆಗರೆ ಪ್ರಿತಿ ಕೊಡುವವಳು ಸಾಯಿಸಿ ಹೋಗತಾ ಇದಾಳೆ 

venkatb83 ಶನಿ, 09/17/2011 - 09:47

ಜ್ಯೋತಿ  ಅವ್ರೆ ,ಬರಹ ಚೆನ್ನಾಗಿದೆ .ಸರಳ ಪದಗಳಲ್ಲಿ ಮನಸ್ಸಿನ ಭಾವನೆಗಳನ್ನ ಅನಾವರಣಗೊಳಿಸಿದ್ದೀರ..ಹೌದು , ಸ್ನೇಹದಲ್ಲಿ ಪ್ರೀತಿ ಆಗೋದು ಮಾಮೂಲಿ - ಆದ್ರೆ    ಸ್ನೇಹಾನ- ಪ್ರೀತೀನ?  ಅನ್ನೋದ್ನ   ಮೊದಲೇ ತೀರ್ಮಾನಿಸುವುದು  ಒಳ್ಳೇದು.ಸ್ನೇಹಿತರನ್ನ ಪ್ರೀತಿ ಮಾಡಬಹುದು-ಅವರಲ್ಲಿ ಪ್ರೀತಿ ಆಗಲೂಬಹುದು, ಆದರೆ ಒಂದು ವೇಳೆ ಇಬ್ಬರಲ್ಲಿ -ಒಬ್ಬರು ,ನಿರಾಕರಿಸಿ ಸ್ನೇಹಕ್ಕೆ  ಮಾತ್ರ ಸೀಮಿತವಾಗಿರು ಎಂದರೆ, ಪ್ರೀತಿಸಿದವರನ್ನ ಸ್ನೇಹಿತರ ತರಹ ನೋಡುವುದು ಕಷ್ಟ .
ಆದರೂ ನನ್ನ ಅಭಿಪ್ರಾಯಾದಲ್ಲಿ ಸ್ನೇಹಕ್ಕು ಮತ್ತು ಪ್ರೀತಿಗೂ ಅದರದೇ  ಆದ  ವಿಶೇಷತೆ ಇದೆ.ಅದು ಅನುಭವಕ್ಕೆ ಮಾತ್ರ  ದಕ್ಕಬಹುದಾದ  ಅನುಭೂತಿ. ನಿಮ್ಮಿಂದ ಇನ್ನಸ್ಟು ಬರಹ ನಿರೀಕ್ಷಿಸುವೆ. ಶುಭವಾಗಲಿ.. 

Jyothi Subrahmanya ಭಾನು, 09/18/2011 - 07:54

ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ....... Smile

ನವೀನ್ ಚ೦ದ್ರ ಮಂಗಳ, 09/20/2011 - 09:29

ಪ್ರೀತಿ ಅನ್ನೋದು ಎಲ್ಲಿ ಹುಟ್ಟುತ್ತೋ ಹೇಳಲಾಗದು,ಬಹಳಸ್ಟು ಪ್ರೀತಿ ಸ್ನೇಹದಿಂದಲೇ ಆರಂಬವಾಗುತ್ತವೆ.ಆದರೆ ಪ್ರೀತಿಗೋಸ್ಕರ ಸ್ನೇಹ ನಾ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಪ್ರೀತಿಗೆ ಹಲವು ರೀತಿಯ ಕವಲುಗಳಿವೆ, ಪ್ರೀತಿ ನಿಜವಾದ ಅರಿವು ಮೂಡುವುದು ಅಗಲಿಕೆಯಾದಗಲೇ, ಎಂಬುದು ನನ್ನ ಅನಿಸಿಕೆ.,,,,,./////////
ನಿಮ್ಮ ಬರವಣಿಗೆ ಚೆನ್ನಾಗಿದೆ.

ಮುನೀರ್ ಅಹ್ಮದ್ … ಶುಕ್ರ, 12/02/2011 - 22:54

 ಜ್ಯೊತಿಯವರೆ ನಿಮ್ಮಲೆಖನ ನಿರಾಸೆ, ನಿರೀಕ್ಶೆ,,ಯಲ್ಲಿರುವ ಪ್ರೀತಿಯತ್ತ ಬೊಟ್ಟು ತೊರಿಸುತ್ತೆ. ಮನುಶ್ಯನಿಗೆ ತ್ರುಪ್ತಿನೀಡುವ ಪ್ರೀತಿ ಮನದಾಳದಿಂದ್ಮ    ಮೂಡಿದ ಪ್ರೀತಿ ಆಗುವುದು, ಅದು ಹ್ರುದಯಗಳನ್ನು ದೂರಮಾಡುವುದಿಲ್ಲ,ಆದರೆ  ಬೆನೆಗಳನ್ನು ನೀಡಾಬಲ್ಲದು.ಆದರೆ ಸತ್ವವನ್ನು ಕಳೆದುಕೊಲ್ಲುವುದಿಲ್ಲ. 

Jyothi Subrahmanya ಶನಿ, 12/03/2011 - 12:33

ತಮ್ಮ ಅನಿಸಿಕೆಗೆ ಧನ್ಯವಾದಗಳು ಮುನೀರ್ ರವರೇ.  ನಾನು ತಿಳಿದ ಮಟ್ಟಿಗೆ ನಿರಾಸೆ ನಿರೀಕ್ಷೆಗಿಂತಲೂ ಗೊಂದಲವನ್ನ ಈ ಲೇಖನ ಒಳಗೊಂಡಿದೆ.  ಸತ್ವ ಕಳೆದುಕೊಳ್ಳುವುದಿಲ್ಲ ಎಂಬ ಮಾತು ನಿಜ ಆದರೆ ಕೊಡುವ ನೋವು ಮರೆಯಲು ಅಸಾಧ್ಯ.ಜ್ಯೋತಿ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 05/31/2012 - 11:13

ತುಂಬಾ ಚೆನ್ನಾಗಿದೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.