Skip to main content

ಮನದ ಮಾತು

ಬರೆದಿದ್ದುSeptember 3, 2011
8ಅನಿಸಿಕೆಗಳು

ಒಂಟಿತನ ಎಂದರೆ ಯಾವಾಗಲೂ ಮಾರು ದೂರ ಹಾರುತ್ತಿದ್ದವಳಿಗೆ ಇಂದು ಅದೇಕೋ ಒಂಟಿತನವೇ ಅಪ್ಯಾಯಮಾನವಾಗಿದೆ.. ಮನಸ್ಸಿನೊಂದಿಗೆ ಮಾತನಾಡಿ ಬಹಳ ಸಮಯವಾಗಿತ್ತು.. ಯಾವಾಗಲೂ ಇತರರೊಡನೆ ಹರಟೆ ಹೊಡೆಯುವ ಬಾಯಿ ಮನದೊಡನೆ ಮಾತನಾಡಿದ್ದೇ ಕಡಿಮೆ; ಅಥವಾ ಮಾತನಾಡಲು ಸಮಯ ದೊರಕಿರಲಿಲ್ಲವೇನೋ.. ಇಂದಿಡೀ ಕೆಲಸ ಮಾಡಿದ ಬಳಲಿಕೆಯಿದ್ದರೂ, ಕೈ ಕೆಲಸ ಮಾಡೋವಾಗ ಮನಸ್ಸು ಬುದ್ಧಿಯೊಂದಿಗೆ ಹರಟುತ್ತಾ ಇತ್ತು.  ಕಷ್ಟ-ಸುಖ, ತಪ್ಪು-ಸರಿ, ಭವಿಷ್ಯದ ಬಗೆಗಿನ ಕನವರಿಕೆಗಳು, ಹಿಂದೆ ನಡೆದುದರ ಕುರಿತಾಗಿನ ಸಿಂಹಾವಲೋಕನ, ಇತ್ಯಾದಿಗಳ ಯೋಚನೆಯಲ್ಲಿ ದಿನ ಕಳೆದುದೇ ತಿಳಿಯಲಿಲ್ಲ.  ರಾತ್ರಿ ಮಲಗುವಾಗ ಮನಸ್ಸು ಹತ್ತಿಯಷ್ಟು ಹಗುರ ಹಗುರ.. ಮನಸ್ಸನ್ನು ಭಾರವಾಗಿಸಿದ ತಪ್ಪು ಭಾವನೆಗಳು, ಕೋಪ-ಜಗಳಗಳೆಲ್ಲವೂ ಕಣ್ಣೀರಿನ ರೂಪದಲ್ಲಿ ಹೊರಬಂದ ಕಾರಣವೋ ಏನೋ ಮನ ಈಗ ಮುಗುಳ್ನಗುತ್ತಿದೆ.  ಮನದ ಎಲ್ಲಾ ಭಾವನೆಗಳಿಗೂ, ಯೋಚನೆಗಳಿಗೂ, ಪರಿಮಿತಿಯೊಳಗೇ ನರಳುತ್ತಿದ್ದ ಆಸೆಗಳಿಗೂ ಸ್ಪಷ್ಟೀಕರಣ ನೀಡಿದ, ಎಚ್ಚರಿಸಿದ ಒಂದು ರೂಪು-ರೇಷೆ ನೀಡಿದ ಬುಧ್ಧಿ  ತಾನೇನೋ ಘನ ಕಾರ್ಯ ಸಾಧಿಸಿದಂತೆ ಬೀಗುತ್ತಿತ್ತು.  ವಿವೇಚನೆ ಎಂಬುದನ್ನು ಜಾಗೃತಗೊಳಿಸಲಾದರೂ ಬಹುಷಃ ಮನಸ್ಸು-ಬುದ್ಧಿಯ ಮಾತುಕತೆ ಅನಿವಾರ್ಯ ಅನಿಸುತ್ತೆ.........

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

Pattar ಭಾನು, 09/04/2011 - 15:52

ನಿಮ್ಮ ಬರಹಗಳು ಓದುತ್ತಿದ್ದರೆ ನೀವು ತು೦ಬಾ ವಿಚಾರವಾದಿಗಳು ಅನಿಸುತ್ತದೆ ಜ್ಯೋತಿಯವರೇ....

Jyothi Subrahmanya ಸೋಮ, 09/05/2011 - 20:48

ಇರಬಹುದೋ ಏನೋ ಗೊತ್ತಿಲ್ಲ.... ಃ)

ದೀಪು ಮೈಸೂರು ಧ, 09/07/2011 - 18:54

ನೀವ್ ಹೇಳಿದ್ದು ಸತ್ಯ ಜ್ಯೋತಿ... ತುಂಬಾ ಚೆನ್ನಾಗಿದೆ..;)

venkatb83 ಶನಿ, 09/17/2011 - 10:00

ಜ್ಯೋತಿ  ಅವ್ರೆ,ಈಗ ನಿಮ್ಮ ಮನಸ್ಸಲ್ಲಿ ಬಂದ ಭಾವನೆಗಳು ಎಲ್ಲರ ಜೀವನದಲ್ಲೋ ಕೆಲವೊಂದು ಕಾಲ ಘಟ್ಟದಲ್ಲಿ ಮನಸ್ಸಿಗೆ ಬಂದೇ ಬರುತ್ತವೆ....ಜಂಜಾಟ-ಗಡಿಬಿಡಿಯಲ್ಲಿ  ಬೆಂದು ನೊಂದವರ್ಗೆ ಯಾವೊಂದು-ಯಾರೊಬ್ಬರ ಸಾಂತ್ವಾನ- ಸಲಹೆ ಸಹಕಾರ ರುಚಿಸದೆ ಹೋದಾಗ, ಏಕಾಂತವೆ ಸುಖ ಕೊಡುತ್ತದೆ-ಕೊಡಬಹುದೇನೋ ಎಂದನಿಸುವುದರಲ್ಲಿ  ತಪ್ಪೇನಿದೆ?..ಆದರೂ ಸಮೂಹ ಜೀವಿಗಳಾದ  ನಾವು  ಸಹಬಾಳ್ವೆ ಸಾಮರಸ್ಯದಿಂದ,  ಕಷ್ಟ -ಸುಖ ಹಂಚಿಕೊಂಡು  ಬದುಕಲೇಬೇಕು.'ಧನಾತ್ಮಕ ಯೋಚನೆ' ಇಲ್ಲಿ ಮುಖ್ಯ ಅಸ್ಟೇ.ನೀವು ಆಶಾವಾದಿ ಅಲ್ಲವೇ? 
ಚಿಕ್ಕ-ಚೊಕ್ಕ-ಪರಿಣಾಮಕಾರಿ ಬರಹ 
ಶುಭವಾಗಲಿ..

Jyothi Subrahmanya ಗುರು, 09/22/2011 - 19:12

ಆಶಾವಾದಿಗಳು ಧನಾತ್ಮಕ ಯೋಚನೆ ಮಾಡೋದಿಲ್ಲ ಅಂತ ಯಾಕೆ ತಿಳಿದುಕೊಳ್ತೀರಾ? ಎಂಥಾ ಆಶಾವಾದಿಗೂ ತನ್ನ ಮನಸ್ಸಿನ ಜೊತೆ ಬುದ್ಧಿ ಜೊತೆ ಮಾತಾಡೋದು ತುಂಬಾ ಅಗತ್ಯವಾಗಿರ್ತದೆ.  ಮೊದಲು ನಮ್ಮನ್ನ ಅರ್ಥ ಮಾಡಿಕೊಂಡ್ರೆ ಮಾತ್ರ ಬೇರೆಯವರನ್ನ ಅರ್ಥ ಮಾಡಿಕೊಳ್ಳೋಕೆ ಸಾಧ್ಯ ಅನ್ನೋದು ನನ್ನ ಅಭಿಪ್ರಾಯ.  ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ನವೀನ್ ಚ೦ದ್ರ ಶುಕ್ರ, 09/23/2011 - 09:34

ಜೀವನ ಎಂದ ಮೇಲೆ ಕಷ್ಟ-ಸುಖ,ನೋವು-ನಲಿವು,ಕೋಪ-ಮುನಿಸು-ಜಗಳ,ತಪ್ಪು-ಸರಿಗಳೆಲ್ಲವೂ ಇದ್ದೆ ಇರುತ್ತೆ ಜ್ಯೋತಿಯವರೆ, ಎಲ್ಲವನ್ನು ಸಮಚಿತ್ತದಿಂದ ಅನುಭವಿಸಲೇ ಬೇಕು.ಆಗಲೇ ಜೀವನದ ವಿವಿದ ಮಜಲುಗಳು ಅರಿವಾಗುವುದು.ಇಲ್ಲೆ ಸ್ವರ್ಗ-ಇಲ್ಲೆ ನರಕ ಎನ್ನುವ ಹಾಗೇ ಎಲ್ಲವನ್ನು  ನೋಡಲೇಬೇಕಲ್ಲವೇ? ಒಂಟಿತನ ಮತ್ತು ಸಮೂಹ ಜೀವನ ಎರಡು ನಮ್ಮಗಳ ಜೀವನದಲ್ಲಿ ಇದ್ದೆ ಇರುತ್ತೆ, ಕೆಲವೂಮ್ಮೆ ಎಕಾಂಗಿತನ,ಮತ್ತೆ ಕೆಲವೂಮ್ಮೆ ಸಮೂಹ ಜೀವನ ಇಷ್ಟವಾಗುತ್ತದೆ.ನೀವು ಹೇಳುವ ಹಾಗೇ ಇವೆಲ್ಲದರ ಸಿಂಹಾವಲೋಕನ ಮಾಡಿದಾಗ ಜೀವನದ ನಿಜವಾದ ಅರ್ಥ ಅರಿವಾಗುತ್ತದೆ,
 

SANTOSHKUMAR M… ಮಂಗಳ, 10/18/2011 - 19:58

ತುಂಬಾ ವೇಗವಾಗಿ ಓದಿಸಿಕೊಂಡ ಲೇಖನ. ಯೋಚಿಸುವಂತೆ ಮಾಡಬಲಷ್ಟು ಪರಿಣಾಮಕಾರಿ... ಹೀಗೆ ಮುಂದುವರೆಯಲಿ

Jyothi Subrahmanya ಶುಕ್ರ, 10/21/2011 - 17:29

ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ.......Smile

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.