ಆತ್ಮಹತ್ಯೆಗೆ ಮುನ್ನ ಕವಿತೆ ಬರೆದಾಗ ಅದು ಹೀಗಿರಬಹುದು.
ತುಂಡುಲಂಗದ ಹುಡುಗಿ ಎದುರಾದಾಗ
ಗಾಳಿಗಾಗಿ ದೇವರಲ್ಲಿ ಪ್ರಾರ್ಥಿಸುವುದಿಲ್ಲ!
ಗಾಳಿ, ಮಣ್ಣ ಕಣಗಳನ್ನು ಹೊತ್ತು
ಕಣ್ಣಿಗೆರೆಚುತ್ತವೆಯೆಂದು ನಾನು ಬಲ್ಲೆ!
ಎಲ್ಲರೂ ಸುಖಾ ಸುಮ್ಮನೆ ನಗುತ್ತಿರುವಾಗ
ಸುಳ್ಳೇ ನಂಬಿಕೆಗಳಲ್ಲಿ ಬದುಕುವಾಗ,
ಪುಟ್ಟ ಮಗುವೊಂದು ಒಣಗಿದ ಕಡ್ಡಿಗೆ ನೀರೆರೆಯುತ್ತಾ
ಗುಲಾಬಿ ಹೂವಿಗಾಗಿ ಕಾಯುತ್ತದೆ.
ವ್ಯರ್ಥವಾದ ಕಾಯುವಿಕೆ ಅಥವಾ ಏಕಾಂಗಿತನ
ನಿದ್ರೆ, ಮಧುಪಾನ ಮತ್ತು ಒಣ ವೇದಾಂತಗಳು
ಬಿಸಿಯಪ್ಪುಗೆ, ಸಂತೋಷ ಕೂಟ, ಒಣಹರಟೆ
ಎಲ್ಲವೂ ನನ್ನನ್ನು ಹುರಿದುಂಬಿಸಲು ಸೋತು ಹೋಗಿವೆ!
ಎಂಥಾ ದಿನಗಳೆಂದರೆ-
ದರಿದ್ರ ಮಂಜು ಕವಿದ ಹಗಲು
ಮೊಳೆಯನ್ನು ತಲೆಗೆ ಜಡಿವ ಮಳೆ, ಕಣ್ಣಿಗೆ ಚುಚ್ಚೋ ಬಿಸಿಲು.
ಆತ್ಮಹತ್ಯೆ ಕೂಡ ಸಾಧ್ಯವಿಲ್ಲದಿದ್ದಾಗ
ನಾನು ಬದುಕಿ ಬದುಕಿ ಸಾಯುತ್ತೇನೆ.
ಸಾಲುಗಳು
- Add new comment
- 907 views
ಅನಿಸಿಕೆಗಳು
chennaagide.
ತುಂಬಾ ಚೆನ್ನಾಗಿದೆ. :(
ತುಂಬಾ ಚೆನ್ನಾಗಿದೆ. :(:(
ಬಾಲ ಚಂದ್ರ.. ನಿಮ್ಮ ಕವಿತೆ
ಬಾಲ ಚಂದ್ರ.. ನಿಮ್ಮ ಕವಿತೆ ಚೆನ್ನಾಗಿದೆ.
ಚನಾಗಿತ್ತು, ಪುಟ್ಟ ಮಗುವೂ೦ದು
ಚನಾಗಿತ್ತು, ಪುಟ್ಟ ಮಗುವೂ೦ದು ಒನಕಡ್ಡೀಗೆ......ಸಾಲು ತು೦ಬಾ ಹಿಡಿಸ್ತು
ತುಂಬಾ ಚೆನ್ನಾಗಿವೆ.............
ತುಂಬಾ ಚೆನ್ನಾಗಿವೆ.............