Skip to main content

ಬ್ಲಾಗಿಂಗ್ ಮಾಡುವವರಿಗೆ ಸೂಚನೆ

ಬರೆದಿದ್ದುJanuary 20, 2007
5ಅನಿಸಿಕೆಗಳು

ಹಾಯ್,

ವಿಸ್ಮಯ ನಗರಿಯಲ್ಲಿ ಬ್ಲಾಗಿಂಗ್ ಮಾಡುವದರ ಲಾಭಗಳು

* ಈಗ ಸದ್ಯಕ್ಕೆ ಪ್ರತಿದಿನ ಕಡಿಮೆ ಅಂದರೆ 300 (ವೀಕೆಂಡ್‌ಗಳಲ್ಲಿ) ರಿಂದ ಹಿಡಿದು ಸುಮಾರು 500ರವರೆಗೆ ಐ.ಪಿ. ಎಡ್ರೆಸ್ (Unique IP Address) ಪ್ರತಿದಿನ ಭೇಟಿ.ನೆನಪಿಡಿ ಒಂದು ಐಪಿ ಎಡ್ರೆಸ್ಸ್ ಕೆಲವೊಮ್ಮೆ ಇಡೀ ಕಂಪನಿಯಿಂದ ಭೇಟಿ ಕೊಟ್ಟ ಜನರನ್ನು ಓಳಗೊಂಡಿರುತ್ತದೆ. ಇದು ಪ್ರತಿದಿನ ಇನ್ನೂ ಹೆಚ್ಚುತ್ತಾನೆ ಇದೆ.
* ವಿಸ್ಮಯ ನಗರಿಯ ಬ್ಲಾಗ್‌ಗಳಲ್ಲಿ ಚಿತ್ರ, ಲಿಂಕ್ ಹಾಕುವ ಸೌಲಭ್ಯ ಇದೆ.
* ಒಂದಲ್ಲ ಒಂದು ದಿನ ಬ್ಲಾಗ್ ಮಾಡುವವರು ತಮ್ಮ ಬ್ಲಾಗಿಂಗ್ ಗೆ ಸಮಯ ಸಿಗದೆಯೋ ಅಥವಾ ನಿರಾಸಕ್ತಿಯಿಂದ ಬಿಡಬಹುದು ಹಾಗೆ ಆದರೂ ನಿಮ್ಮ ಲೇಖನ ವಿಸ್ಮಯ ನಗರಿಯಲ್ಲಿ ಓದಲ್ಪಡುತ್ತದೆ!!
* ಯಾವುದೇ ವಿಷಯದ ಬಗ್ಗೂ ನೀವು ಬ್ಲಾಗ್ ಮಾಡಬಹುದು. (ಅಶ್ಲೀಲತೆ ಬೇಡ. ಆದರೆ ರಸಿಕತೆ ಓಕೆ.)
* ನಿಮ್ಮ ಬ್ಲಾಗ್‌ಗೆ ಸಪರೇಟ್ ಪಬ್ಲಿಸಿಟಿ ಅಗತ್ಯ ಇಲ್ಲ. ವಿಸ್ಮಯ ನಗರಿಗೆ ಬೇಟಿ ಕೊಡುವವರಿಗೆ ನಿಮ್ಮ ವಿಷಯ ಇಷ್ಟವಾದರೆ ನೋಡೆ ನೋಡುತ್ತಾರೆ.
* ವಿಸ್ಮಯ ನಗರಿಯಲ್ಲಿ ಮುಂದೆ ಉತ್ತಮ ಬ್ಲಾಗ್ ಲೇಖನಗಳನ್ನು ಪ್ರೊಮೋಟ್ ಮಾಡಲಾಗುವದು.
* ನೀವು ಬೇಕಿದ್ದರೆ blogspot ಅಥವಾ blogger.com ಗಳಲ್ಲಿ ಸಹ ಬ್ಲಾಗ್ ಮಾಡಿ. ನಿಮ್ಮ ಲೇಖನ ವಿಸ್ಮಯ ನಗರಿಯಲ್ಲಿ ಪ್ರಕಟವಾಗುಷ್ಟು ಚೆನ್ನಾಗಿದ್ದರೆ ಇಲ್ಲಿ ಹಾಕಿ. ಏಕೆಂದರೆ ಅಲ್ಲಿ ನಿಮಗೆ ಹೆಚ್ಚು ಸೌಲಭ್ಯಗಳು ಲಭ್ಯವಿದೆ.

ನೀವು ಬರೆಯುವ ಕನ್ನಡ ಬ್ಲಾಗ್ ಅಂತರ್ಜಾಲದಲ್ಲಿ ಕನ್ನಡ ಭಾಷೆ ಮೆರೆಯುವಂತೆ ಮಾಡಲಿ ಎಂದು ಬಯಸುವ
-- ವಿಸ್ಮಯ ಸಾಫ್ಟ್‌ವೇರ್

ವಿಸ್ಮಯದಲ್ಲೇ ಕನ್ನಡದಲ್ಲಿ ಬರೆಯುವ ಸೌಲಭ್ಯ ಇದೆ. ಅದರೂ ಕನ್ನಡದಲ್ಲಿ ಬರೆಯಲು ಕ್ವಿಲ್ ಪ್ಯಾಡ್ ಬಳಸಿ.
ಅಥವಾ ಬರಹ ಐಎಂಇಯನ್ನು ಕೂಡ ಡೌನ್‌ಲೋಡ್ ಮಾಡಬಹುದು.

ನಿಮಗೆ ಕನ್ನಡದಲ್ಲಿ ಬ್ಲಾಗಿಂಗ್ (ಪಿಸುಮಾತು) ಮಾಡೋ ಆಸೆ ಇದೆಯೇ ? ಅಷ್ಟೇ ಅಲ್ಲ ನೀವು ಯಾವುದಾರೂ ಒಳ್ಳೇ ಕವನ, ಕಥೆ, ಸಿನಿಮಾ ವಿಮರ್ಶೆ, ಇತಿಹಾಸದ ಬಗ್ಗೆ, ಹಾಸ್ಯ, ನಾಟಕ, ಆರೋಗ್ಯ ಇತ್ಯಾದಿಗಳ ಬಗ್ಗೆ ಲೇಖನ ಬರೆದಿದ್ದು ಅಥವಾ ನಿಮ್ಮ ಫೋಟೊಗ್ರಾಫಿ ಕಲೆಯನ್ನು ಅದನ್ನು ಇಂಟರನೆಟ್‌ನಲ್ಲಿ ಪ್ರಕಟಿಸಲು ಇಷ್ಟಪಟ್ಟಿದ್ದರೆ ವಿಸ್ಮಯಾನಗರಿಯಲ್ಲಿ ನಿಮ್ಮದೇ ಆದ ಪಿಸುಮಾತು ಆರಂಭಿಸಿ ಬರೆಯಬಹುದು. ನೀವು ಎಲ್ಲಾದರೂ ಟ್ರಿಪ್ ಹೋಗಿದ್ದು ಅದರ ಬಗ್ಗೆ ಅನುಭವಗಳನ್ನು ಸಹ ಬರೆಯಬಹುದು.
ಮೊದಲು ನೀವು ವಿಸ್ಮಯಾ ನಗರಿಯ ಪ್ರಜೆಯಾಗಿ ನಂತರ ಪಿಸುಮಾತು ಆರಂಭಿಸಬಹುದು. ನಿಮ್ಮ ಬರವಣಿಗೆ ಸರಳ ಭಾಷೆಯಲ್ಲಿರಲಿ. ತೀರಾ ಗ್ರಾಂಥಿಕ ಭಾಷೆ ಬಳಸಬೇಡಿ. ಇಂಗ್ಲೀಷ್ ಅಥವಾ ಹಿಂದಿ ಪದಗಳ ಬಳಕೆಗೆ ತೀರಾ ಮಡಿವಂತಿಕೆ ಬೇಡ. ಆದರೆ ಆ ಶಬ್ದಗಳನ್ನು ಕನ್ನಡದಲ್ಲೇ ಬರೆಯಿರಿ.

ಲೇಖಕರು

ಅನಿಸಿಕೆಗಳು

kanasugaara ಸೋಮ, 01/29/2007 - 18:54

ನಾನು ಆರೋಗ್ಯದ ಬಗ್ಗೆ ಲೇಖನಗಳನ್ನು ಬರೆಯಬೇಕೆಂದು ಆರಂಭಮಾಡಬೇಕೆಂದು ಕೊಂಡಿದ್ದೇನೆ. ಇಲ್ಲಿ ಆರಂಭಿಸಬಹುದೇ ತಿಳಿಸಿ.

ರಾಜೇಶ ಹೆಗಡೆ ಸೋಮ, 01/29/2007 - 22:59

ಖಂಡಿತವಾಗ್ಲೂ ಕನಸುಗಾರರವರೆ!
ನಿಮ್ಮ ಪಿಸುಮಾತು ಆರಂಭಿಸಿ. ಅದು ತುಂಬಾ ಸಂತೋಷದ ವಿಷಯ.
ನಿಮ್ಮ ಲೇಖನಗಳಿಗೆ ಚಿತ್ರ ಹಾಕುವ ಅಧಿಕಾರ ಬೇಕಿದ್ದರೆ ನಮಗೆ ತಿಳಿಸಿ. ನಾನು ಅದನ್ನು ಕೊಡುತ್ತೇನೆ. ಆಗ ನಾನು ನನ್ನ ಪಿಸುಮಾತುಗಳಲ್ಲಿ ಹಾಕುತ್ತಿರುವಂತೆ ಚಿತ್ರಗಳನ್ನು ನೀವೂ ಹಾಕಬಹುದು. (ಇದು ಬೇರೆಯವರಿಗೂ ಅನ್ವಯಿಸುತ್ತದೆ.)
ನಾನು ಸದ್ಯಕ್ಕೆ ಆಫೀಸ್ ಕೆಲಸಗಳಲ್ಲಿ ತುಂಬಾ ಬ್ಯುಸಿ ಆಗಿರೋದ್ರಿಂದ ನನಗೆ ವಿಸ್ಮಯಾ ನಗರಿಯನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಬರೆಯಲು ಸಮಯ ಸಿಗುತ್ತಿಲ್ಲ. ಇದಕ್ಕಾಗಿ ಕ್ಷಮೆ ಇರಲಿ.

ಪಿಸುಮಾತು ಆರಂಭಿಸಲು ಮುಖಪುಟದಲ್ಲಿ ಎಡ ಬದಿಯಲ್ಲಿರೋ ಹೊಸತನ್ನು ಸೇರಿಸು >> ಪಿಸುಮಾತು ಆಯ್ಕೆ ಮಾಡಿ.
ಹಾಂ ನೆನಪಿಡಿ ಬರೆದದ್ದನ್ನು ನೋಟ್ ಪ್ಯಾಡ್‌ನಲ್ಲಿ ಬರೆದು ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್ ಮಾಡಿ ಇಡಿ. ನಂತರ ಕಾಪಿ ಮಾಡಿ ಪಿಸುಮಾತು ಕ್ರಿಯೇಟ್ ಮಾಡಿ. ಇಲ್ಲದಿದ್ದರೆ ಇಂಟರ್‌ನೆಟ್ ಕನೆಕ್ಷನ್ ಕೈ ಕೊಟ್ಟರೆ ಬರೆದ್ದದ್ದು ವೇಸ್ಟ್ ಆದೀತು. ಎಚ್ಚರ!

ಇನ್ನಷ್ಟು ಪೀಚರ್‌ಗಳು ವಿಸ್ಮಯಾ ನಗರಿಯಲ್ಲಿ ಸದ್ಯಕ್ಕೆ ಬರಲಿವೆ. (ಇದರಲ್ಲಿ ಕನ್ನಡ ಟೈಪಿಂಗ್ ಸೌಲಭ್ಯವೂ ಒಂದು. ಆಗ ನಿಮಗೆ ಬೇರೆ ಸಾಫ್ಟ್‌ವೇರ್ ಬಳಸಬೇಕಾಗಿಲ್ಲ. ವಿಸ್ಮಯಾ ಕೀಲಿಮಣೆ ವಿನ್ಯಾಸ ಕಲಿಯಬೇಕಷ್ಟೆ. ಅದರ ಬದಲು ನೀವು ಈಗ ಬಳಸುತ್ತಿರುವ ಸಾಫ್ಟ್‌ವೇರ್ ಕೂಡಾ ಬಳಸಬಹುದು. :-) )

ಇದು ವಿಸ್ಮಯಾ ನಗರಿ. ನಮ್ಮ ನಿಮ್ಮೆಲ್ಲರ ಕನಸಿನ ನಗರಿ!
-- ಇದು ವಿಸ್ಮಯಾ ಸಾಫ್ಟ್‌ವೇರ್ ಕೊಡುಗೆ

Lakshmipati (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 02/09/2007 - 10:49

ದಯವಿಟ್ಟು ನನಗೆ ಬ್ಲಾಗಿಂಗ್ ಮಾಡುವ ಬಗ್ಗೆ ಮಾಹಿತಿ ಕೊಡಿ. ನಾನು ಪ್ರವಾಸ ಕಥನಗಳನ್ನು ಬರೆಯಬೇಕು ಎಂದು ಕೊಂಡಿದ್ದೇನೆ.

ಮೇಲಧಿಕಾರಿ ಶನಿ, 02/10/2007 - 09:02

ಹಾಯ್ ಲಕ್ಷ್ಮೀಪತಿಯವರೆ,
ಬ್ಲಾಗಿಂಗ್ ಮಾಡೋದು ಹೇಗೆ ಅಂತಾ ಸ್ವಲ್ಪಾ ಜಾಸ್ತೀನೇ ಬರೆದಿದ್ದೇನೆ ಓದಿಕೊಳ್ಳಿ. :-)
ವಿಸ್ಮಯಾ ನಗರಿಯಲ್ಲಿ ಬ್ಲಾಗಿಂಗ್‌ಗೆ "ಪಿಸುಮಾತು" ಅಂತಾ ಕರೆಯಲಾಗುತ್ತದೆ. ಅದು ನಿಮ್ಮ ಮನಸ್ಸಿನ ಮಾತು. ಎಲ್ಲರೊಂದಿಗೆ ಹಂಚಿಕೊಳ್ಳುವ ಬಯಸುವ ಮಾತು.

ಹೀಗೆ ಪಿಸುಮಾತು ಆರಂಭಿಸಲು ಈ ಮುಂದೆ ಹೇಳಿರುವಂತೆ ಮಾಡಿ.
೧. ವಿಸ್ಮಯಾ ನಗರಿಯ ಪ್ರಜೆಯಾಗಿ. ಮೇಲೆ ಪ್ರಜೆಯಾಗು ಎಂಬ ಲಿಂಕ್ ಇದೆ ಕ್ಲಿಕ್ ಮಾಡಿ. ಆಗ ಬರುವ ಅರ್ಜಿ ತುಂಬಿ ಕಳುಹಿಸಿ.
ತಕ್ಷಣ ಬರುವ ಈಮೇಲ್ ನಲ್ಲಿರುವ ರಹಸ್ಯಶಬ್ದ ಬಳಸಿ ಪ್ರವೇಶಿಸಿ. ನಿಮ್ಮ ರಹಸ್ಯ ಶಬ್ದ ಚೇಂಜ್ ಮಾಡಿ. ಯಾಕೆಂದರೆ ನಾವು ಕಳುಹಿಸಿರುವ ರಹಸ್ಯಶಬ್ದ ಒಮ್ಮೆ ಮಾತ್ರ ಬಳಸಬಹುದು.

೨. ನನ್ನ ವಿಸ್ಮಯಾ >> ಬದಲಾಯಿಸು
ಅಲ್ಲಿ ನಿಮ್ಮ ಫೋಟೊ ಅಪ್‌ಲೋಡ್ ಮಾಡಿ.

೩. ನನ್ನ ವಿಸ್ಮಯಾ >> ಬದಲಾಯಿಸು >> ವಿಸ್ಮಯಾ ಪಿಸುಮಾತಿನ ಆಯ್ಕೆಗಳು
ನಿಮ್ಮ ಬ್ಲಾಗ್‌ಗೆ ಒಂದು ಚೆನ್ಣಾಗಿರೋ ಅರ್ಥಪೂರ್ಣ ಹೆಸರು ಕೊಡಿ. ಉದಾ: "ಮನಸ್ಸಿನ ಆಳದಿಂದ" ಇತ್ಯಾದಿ ಇತ್ಯಾದಿ.

ಈ ಮೇಲಿನದಲ್ಲೆವನ್ನು ಮೊದಲ ಬಾರಿ ಮಾತ್ರ ಮಾಡಬೇಕು.
ಇನ್ನು ಮುಂದೆ ನೀವು ವಿಸ್ಮಯಾ ಪ್ರಜೆಯಾಗಿ ಪ್ರವೇಶಿಸಿದ್ದರೆ ಸಾಕು.

ಈಗ ನಿಮ್ಮ ಪಿಸುಮಾತು (ಬ್ಲಾಗ್) ಆರಂಭಿಸಿ.
೪. ನಿಮ್ಮ ಲೇಖನವನ್ನು ಪೂರ್ತಿಯಾಗಿ ನೋಟ್‌ಪ್ಯಾಡ್‌ನಲ್ಲಿ ಬರೆದು ಸೇವ್ ಮಾಡಿ ಇಟ್ಟುಕೊಳ್ಳಿ.

೫. ವಿಸ್ಮಯಾ ಮುಖಪುಟದ ಎಡ ಭಾಗದಲ್ಲಿ ಹೊಸತನ್ನು ಸೇರಿಸು >> ಪಿಸುಮಾತು ಕ್ಲಿಕ್ ಮಾಡಿ.

೬. ಅಲ್ಲಿ ಅದರ ಟೈಟಲ್ ಮತ್ತು ಲೇಖನಗಳನ್ನು ನೋಟ್‌ಪ್ಯಾಡ್‌ನಿಂದ ಕಾಪಿ ಮಾಡಿ ಹಾಕಿ. ಹಾಂ ಟೈಟಲ್ ಚುಟುಕಾಗಿ ಮತ್ತು ಆಕರ್ಷಕ ವಾಗಿರಲಿ. ನಿಮ್ಮ ಲೇಖನದ ಉದ್ದೇಶವನ್ನು ತಿಳಿಸಲಿ.

೭. ಹಾಂ ನೆನಪಿಡಿ ಸರಳ ಕನ್ನಡ ಬಳಸಿ. ಸ್ವಲ್ಪ ರಸವತ್ತಾಗಿರಲಿ. ತೀರಾ ಗ್ರಾಂಥಿಕ ಕನ್ನಡ ಅನವಶ್ಯಕವಾಗಿ ಬಳಸಬೇಡಿ.

೮. ಲೇಖನದಲ್ಲಿ ಕಂಟ್ಯುನಿಟಿ ಇರಲಿ. ಅದು ಹೆಚ್ಚು ಜನರಿಗೆ ಉಪಯುಕ್ತವಾಗುವಂತೆ ಇರಲಿ. ಎಲ್ಲರಿಗೂ ಹೆಚ್ಚು ಹೊತ್ತು ಓದುತ್ತಾ ಕೂರುವ ತಾಳ್ಮೆ ಇರುವದಿಲ್ಲ ನೆನಪಿರಲಿ.

೯. ತುಂಬಾ ದೊಡ್ಡದಾಗಿದ್ದರೆ ಅದನ್ನು ದಾರಾವಾಹಿ ರೂಪದಲ್ಲಿ ಪ್ರಕಟಿಸಿ. ಆ ದಾರಾವಾಹಿ ಕಂತನ್ನು ೨ ಅಥವಾ ೩ ದಿನಗಳಿಗೊಮ್ಮೆ ಒಂದು ಪ್ರಕಟ ಮಾಡಿ.

೧೦. ಕಳುಹಿಸು ಕ್ಲಿಕ್ ಮಾಡಿ. ನೆನಪಿರಲಿ ತಕ್ಷಣ ವಿಸ್ಮಯಾ ನಗರಿಯ ಮುಖಪುಟದಲ್ಲಿ ನಿಮ್ಮ ಲೇಖನ ಬರುತ್ತದೆ! ಆದ್ದರಿಂದ ಅರ್ಧಮರ್ಧ ಲೇಖನ ಬರೆದು ಕಳುಹಿಸು ಕ್ಲಿಕ್ ಮಾಡಬೇಡಿ.

ಸಾವಿರಾರು ಕನ್ನಡಿಗರು ವಿಸ್ಮಯಾ ನಗರಿ ನೋಡುತ್ತಿದ್ದಾರೆಂಬ ಅರಿವು ನಿಮಗಿರಲಿ.

೧೧. ನಿಮ್ಮ ಚಿತ್ರಗಳಿದ್ದರೆ ಚಿತ್ರಶಾಲೆಯಲ್ಲಿ ಹಾಕಿ, ನನಗೆ ತಿಳಿಸಿ. ನಾನು ಲೇಖನದಲ್ಲಿ ಹಾಕುತ್ತೇನೆ. ಒಮ್ಮೆ ವಿಸ್ಮಯಾ ನಗರಿಯಲ್ಲಿ ಬ್ಲಾಗಿಂಗ್ ಮಾದುವದು ನೀವು ಕಲಿತ ಮೇಲೆ ನಾನು

ನಿಮಗೆ ಚಿತ್ರವನ್ನು ಲೇಖನಗಳಲ್ಲಿ ಹಾಕುವ ಅಧಿಕಾರ ಹಾಗೂ ಹೇಗೆ ಎಂಬುದನ್ನು ತಿಳಿಸುತ್ತೇನೆ.

೧೨. ನೀವು ರೆಗ್ಯುಲರ್ ಆಗಿ ಉತ್ತಮ ರೀತಿಯಲ್ಲಿ ಬ್ಲಾಗ್ ಮಾಡುತ್ತಿರಾ ಎಂದು ತಿಳಿದಾಕ್ಷಣ ನಿಮಗೆ abc.vismayanagari.com ಎಂಬ ಯು.ಆರ್.ಎಲ್ ಕೊಡಲಾಗುವದು. ಅದು ನಿಮ್ಮ

ಬ್ಲಾಗ್‌ಗೆ ಲಿಂಕ್ ಆಗಿರುತ್ತದೆ. ನೀವು ನಿಮ್ಮ ಗೆಳೆಯರಿಗೆ ಆ ಲಿಂಕ್ ಹಂಚಬಹುದು.
abc ಏನು ಆಗಿರಬೇಕು ಅನ್ನುವದು ನೀವು ಆಯ್ಕೆ ಮಾಡಬಹುದು.

೧೩. ನೀವು ಯಾವುದೇ ವಿಷಯದ ಬಗ್ಗೆ ಕೂಡಾ ಬ್ಲಾಗ್ ಮಾಡಬಹುದು. ಇಂಗ್ಲಿಷ್ ಹೆಚ್ಚು ಬಳಸಬೇಡಿ. ಬಳಸಿದರೂ ಅದರ ಕನ್ನಡ ಅನುವಾದ/ಲಿಪಿಯಲ್ಲಿ ಕೂಡಾ ಕೊಡಿ.
ಅಶ್ಲೀಲತೆ ಬೇಡ. ಆದ್ರೆ ರಸಿಕತೆ, ಹಾಸ್ಯ ಒಕೆ.

೧೪. ಹಾಂ ನಿಮ್ಮ ಬ್ಲಾಗ್‌ಗೆ ಸ್ಪೆಶಲ್ ಕಲರ್ ಇಲ್ಲ ಅಂತಾ ಬೇಸರ ಮಾಡಿಕೊಳ್ಳ ಬೇಡಿ. ಯಾಕೆಂದರೆ ವಿಸ್ಮಯಾ ನಗರಿಗೆ ಬೇಟಿ ಕೊಡುವವರು ಉತ್ತಮ ಲೇಖನಗಳನ್ನು ಓದಬಯಸುತ್ತಾರೆ

ಹೊರತು ನಿಮ್ಮಿಂದ ಕಲರ್‌ಪುಲ್ ಇಂಟರ್‌ಫೇಸ್ ಅಲ್ಲ. ಇಲ್ಲಿ ಬರುವವರಿಗೆ ವಿಸ್ಮಯಾ ನಗರಿಯ ಇಂಟರ್‌ಫೇಸ್ ರೂಡಿ ಆಗಿರುತ್ತದೆ. ಆಗ ಹೆಚ್ಚು ಹೆಚ್ಚು ಲೇಖನ ಓದುತ್ತಾರೆ. ಲೇಖನ

ಚೆನ್ನಾಗಿದ್ದರೆ ಯಾರೇ ಬ್ಲಾಗ್ ಮಾಡಿರಲಿ ಓದುತ್ತಾರೆ. ನಿಮ್ಮ ಬ್ಲಾಗ್‌ಗೆ ಸಪರೇಟ್ ಪಬ್ಲಿಸಿಟಿ ಅಗತ್ಯ ಇಲ್ಲ.

ವಿಸ್ಮಯಾ ನಗರಿಯ ಪ್ರಜೆಗಳು, ಅನಾಮಿಕ ಅತಿಥಿಗಳು ನಿಮ್ಮ ಬ್ಲಾಗ್‌ಗೆ ಪಿಸುಮಾತಿಗೆ ಎದುರು ನೋಡುತ್ತಿದ್ದಾರೆ. ಯಾಕೆ ತಡ ಆಡಿ ಪಿಸುಮಾತನ್ನು ನಿಮ್ಮ ಅನುಭವದ ಪುಟಗಳಿಂದ.

meghariya ಧ, 05/27/2009 - 15:02

ಮೇಲಧಿಕಾರಿಯವರೆ ತುಂಬಾ ಧನ್ಯವಾದಗಳು ಬ್ಲಾಗ್ಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ.ವಿಸ್ಮಯನಗರಿ "ಕನ್ನಡಕ್ಕೊಂದೇ ಕನಸಿನ ನಗರಿ.ಅಂತರ್ಜಾಲದಲ್ಲಿ ಮಿನುಗುವ ತಾರಾ ಕುವರಿ".

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.