Skip to main content

ಅಣ್ಣಾ ಹಜಾರೆ

ಇಂದ anilimfs
ಬರೆದಿದ್ದುAugust 24, 2011
noಅನಿಸಿಕೆ


ಡಾ. ಕಿಷನ್ ಬಾಬುರಾವ್ ಹಜಾರೆ , ಜನಪ್ರಿಯವಾಗಿ ಅಣ್ಣಾ ಹಜಾರೆ (ಜನನ: ಜೂನ್ ೧೫, ೧೯೩೮), ಭಾರತದ ಮಹಾರಾಷ್ಟ್ರರಾಜ್ಯದ ಅಹ್ಮದ್‌ನಗರ ಜಿಲ್ಲೆಯ ರಾಲೇಗನ್ ಸಿದ್ಧಿ ಎಂಬ ಹಳ್ಳಿಯ ಅಭಿವೃದ್ಧಿಗಾಗಿ ನೀಡಿರುವ ಕಾಣಿಕೆಗಳಿಗಾಗಿ ಮತ್ತು ಅದನ್ನು ಒಂದು ಮಾದರಿ ಹಳ್ಳಿಯಾಗಿ ಗುರುತಿಸಲು ಮಾಡಿರುವ ಪ್ರಯತ್ನಕ್ಕಾಗಿ ೧೯೯೨ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ ಪ್ರಶಸ್ತಿ ಗಳಿಸಿರುವ ಒಬ್ಬ ಭಾರತೀಯ ಸಾಮಾಜಿಕ ಕಾರ್ಯಕರ್ತ. ಸಾರ್ವಜನಿಕ ಕಛೇರಿಗಳಲ್ಲಿನ ಭ್ರಷ್ಟಾಚಾರ ತಡೆಗಾಗಿ ಲೋಕಪಾಲ ಕಾಯ್ದೆಯನ್ನು ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ೨೦೧೧ರ ಎಪ್ರಿಲ್ ೫ರಿಂದ ಅವರು ಆಮರಣಾಂತ ಉಪವಾಸ ಕೈಗೊಂಡರು. ಅಭಿವೃದ್ಧಿಯು ಭ್ರಷ್ಟಾಚಾರದಿಂದಾಗಿ ಕುಂಠಿತಗೊಂಡಿದೆ ಎಂದು ಮನಗಂಡು ಅಣ್ಣಾ ಅವರು ೧೯೯೧ರಲ್ಲಿ ಭ್ರಷ್ಟಾಚಾರ ವಿರೋಧೀ ಜನ ಆಂದೋಲನ ಎಂಬ ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕ ಚಳವಳಿ ಆರಂಭಿಸಿದರು. ೪೨ ಅರಣ್ಯಾಧಿಕಾರಿಗಳು ಸರ್ಕಾರಿ ಸಂಸ್ಥೆಯಲ್ಲಿನ ಭ್ರಷ್ಟಾಚಾರದಿಂದಾಗಿ ರಾಜ್ಯ ಸರ್ಕಾರಗಳಿಗೆ ಸಲ್ಲಬೇಕಾದ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದರು ಎಂಬುದು ತಿಳಿದುಬಂದಿತು. ಹಜಾರೆ ಅವರು ಸರ್ಕಾರಕ್ಕೆ ಪುರಾವೆಗಳನ್ನು ಒದಗಿಸಿದರೂ ಆಳುವ ಪಕ್ಷದ ಒಬ್ಬ ಮಂತ್ರಿಯು ಹಗರಣದಲ್ಲಿ ಭಾಗಿಯಾಗಿದ್ದ ಕಾರಣ ಸರ್ಕಾರವು ಆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ನಿರಾಕರಿಸಿತು. ಇದರಿಂದ ಮನನೊಂದ ಹಜಾರೆ ಅವರು ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಗೆ ಹಿಂದಿರುಗಿಸಿದರು. ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ನೀಡಿದ್ದ ವೃಕ್ಷ ಮಿತ್ರ ಪ್ರಶಸ್ತಿಯನ್ನೂ ಕೂಡ ಹಿಂದಿರುಗಿಸಿದರು.ಇದೇ ವಿಷಯದ ಸಲುವಾಗಿ ಅವರು ಆಮರಣಾಂತ ಉಪವಾಸ ಕೈಗೊಂಡರು. ಕೊನೆಗೂ ನಿದ್ದೆಯಿಂದ ಎಚ್ಚೆತ್ತ ಸರ್ಕಾರ ಅಪರಾಧಿಗಳ ವಿರುದ್ಧ ಕ್ರಮ ಕೈಗೊಂಡಿತು. ಛಲ ಬಿಡದ ಹಜಾರೆಯವರ ಈ ಕಾರ್ಯವು ಮಹತ್ತರ ಪರಿಣಾಮ ಬೀರಿತು - ಆರು ಮಂತ್ರಿಗಳು ರಾಜೀನಾಮೆ ಕೊಟ್ಟರು ಮತ್ತು ವಿವಿಧ ಕಛೇರಿಗಳ ನಾನೂರಕ್ಕೂ ಹೆಚ್ಚು ಅಧಿಕಾರಿಗಳು ಮನೆಗೆ ಕಳುಹಿಸಲ್ಪಟ್ಟರು.ಮಾಹಿತಿ ಹಕ್ಕು ಕಾಯ್ದೆ - ೨೦೦೫ ಕಾರ್ಯಗತವಾದ ಮೇಲೆ ಕಾಯ್ದೆಯ ಬಗ್ಗೆ ಅರಿವು ಮೂಡಿಸುತ್ತಾ ಹಜಾರೆಯವರು ರಾಜ್ಯದಲ್ಲಿ ೧೨,೦೦೦ ಕಿ.ಮೀಗೂ ಹೆಚ್ಚು ದೂರ ಸಂಚರಿಸಿದ್ದಾರೆ. ಎರಡನೇ ಹಂತದಲ್ಲಿ ಇವರು ಒಂದು ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳೊಂದಿಗೆ ಸಂವಹನ ನೆಡೆಸಿದ್ದಾರೆ ಮತ್ತು ರಾಜ್ಯದ ೨೪ ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನೂ ಆಯೋಜಿಸಿದ್ದಾರೆ. ಮೂರನೇ ಹಂತವು ೧೫೫ ತೆಸಿಲ್ (tehsil) ಜಾಗಗಳಲ್ಲಿ ಪ್ರತಿದಿನ ೨-೩ ಸಾರ್ವಜನಿಕ ಸಭೆಗಳನ್ನು ಒಳಗೊಂಡಿತ್ತು. ಈ ಮಹಾಚಳವಳಿಯಲ್ಲಿ ಭಿತ್ತಿಪತ್ರಗಳು ಪ್ರದರ್ಶನಗೊಂಡವು ಮತ್ತು ಕಾಯ್ದೆಯ ನಿಬಂಧನೆಗಳ ಪುಸ್ತಕಗಳು ಸಾಮಾನ್ಯ ದರದಲ್ಲಿ ವಿತರಿಸಲಾಯಿತು. ಇದು ಸಾಕಷ್ಟು ಜಾಗೃತಿಯನ್ನುಂಟುಮಾಡಿತು ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಜನರು ತಿಳಿದುಕೊಂಡರು.೨೦೧೧ರಲ್ಲಿ ಅಣ್ಣಾ ಹಜಾರೆಯವರು ಭಾರತದ ಸಂಸತ್ತಿನಲ್ಲಿ ಪ್ರಬಲವಾದ ಭ್ರಷ್ಟಾಚಾರ-ವಿರೋಧಿ ಲೋಕಪಾಲ (ಲೋಕಾಯುಕ್ತ) ಮಸೂದೆ ಮಂಡನೆಗೆ ಆಂದೋಲನದ ನಾಯಕತ್ವ ವಹಿಸಿದರು. ಈ ಆಂದೋಲನದ ಭಾಗವಾಗಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳು ಮತ್ತು ಕರ್ನಾಟಕದ ಲೋಕಾಯುಕ್ತರಾದ ಎನ್. ಸಂತೋಷ್ ಹೆಗ್ಡೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾಧಿಗಳಾದ ಪ್ರಶಾಂತ್ ಭೂಷಣ್, ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಲನದ ಸದಸ್ಯರೊಂದಿಗೆ ಹೆಚ್ಚು ಕಟ್ಟುನಿಟ್ಟಾದ ನಿಬಂಧನೆಗಳು ಮತ್ತುಲೋಕಪಾಲ ರಿಗೆ ಹೆಚ್ಚಿನ ಅಧಿಕಾರ ನೀಡುವ ಜನ ಲೋಕಪಾಲ ಮಸೂದೆ (ಜನರ ಲೋಕಪಾಲ ಮಸೂದೆ) ಎಂಬ ಪರ್ಯಾಯ ಮಸೂದೆಯ ಕರಡನ್ನು ಸಿದ್ದಪಡಿಸಿದರು.[೨] ಸರ್ಕಾರ ಮತ್ತು ಸಾರ್ವಜನಿಕ ಸಮಾಜದ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಿತಿಯನ್ನು ರಚಿಸುವ ಬೇಡಿಕೆಯನ್ನು ಭಾರತದ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ರವರು ತಿರಸ್ಕರಿಸಿದ ನಂತರ ೫ ಏಪ್ರಿಲ್ ೨೦೧೧ರಿಂದ ಬೇಡಿಕೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಆಮರಣಾಂತ ಉಪವಾಸ ಕೈಗೊಳ್ಳಲು ಹಜಾರೆಯವರು ನಿರ್ಧರಿಸಿದರು[೩].ಮಾಧ್ಯಮಗಳ ಮೂಲಕ ಆಂದೋಲನವು ಬಹುಬೇಗ ಗಮನ ಸೆಳೆಯಿತು. ಸಾವಿರಾರು ಜನರು ಹಜರೆಯವರ ಕಾರ್ಯಕ್ಕೆ ಬೆಂಬಲ ನೀಡಲು ಕೈಜೋಡಿಸಿದ್ದಾರೆಂದು ವರದಿಯಾಗಿದೆ. ೧೫೦ರಷ್ಟು ಜನರು ಹಜರೆಯವರ ಜೊತೆ ಉಪವಾಸದಲ್ಲಿ ಪಾಲ್ಗೊಂಡಿದ್ದರೆಂದು ವರದಿಯಾಗಿದೆ.[೪] ಅಂತರ್ಜಾಲದ ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್ ಮತ್ತು ಫ಼ೇಸ್‌ಬುಕ್‌ಗಳ ಮೂಲಕವೂ ಜನರು ಬೆಂಬಲ ಸೂಚಿಸಿ ಸೇರಿದ್ದಾರೆ. ಶೇಖರ್ ಕಪೂರ್, ಸಿದ್ಧಾರ್ಥ್ ನಾರಾಯಣ್,ಅನುಪಮ್ ಖೇರ್, ಮಧುರ ಭಂಡಾರ್ಕರ್, ಪ್ರಿತಿಶ್ ನಂದಿ, ಪ್ರಕಾಶ್ ರಾಜ್,ಆಮೀರ್ ಖಾನ್ ಮುಂತಾದ ಹಲವು ಪ್ರಸಿದ್ಧವ್ಯಕ್ತಿಗಳು ತಮ್ಮ ಬೆಂಬಲವನ್ನು ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದರು. [೫]  

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.