ದೊಡ್ಡ ನಗರದ ಚಿಕ್ಕ ಮಕ್ಕಳು
ಮೊನ್ನೆ ನಾನು b m t c ಬಸ್ಸಲ್ಲಿ ಮನೆಗೆ ಹೋಗುವಾಗ ತುಂಬಾ ಸುಸ್ತಾಗಿತ್ತು.ಪಕ್ಕದಲ್ಲಿ ಒಬ್ಬಳು ಪುಟ್ಟ ಹುಡುಗಿ ಕುಳಿತಿದ್ದಳು. ಪುಟ್ಟ ಕೈ, ಪುಟ್ಟ ಮುಖ , ಮುದ್ದಾದ ಮುಖ ಆದರೆ ಸುಸ್ತಾಗಿರುವ ಹಾಗೆ ಕಾಣುವ ಕಂಗಳು.ಚಿಕ್ಕ ಬೆನ್ನಿನ ಮೇಲೆ ದೊಡ್ಡ ,ಗೋಣಿಚೀಲದಂಥ school bag. ಆ ಹುಡುಗಿಯನ್ನು ಕಂಡು ನನಗೆ ಪಾಪ ಅನ್ನಿಸಿತ್ತು.ನಾನು-- ಪುಟ್ಟಿ ಏನಮ್ಮ ನಿನ್ ಹೆಸ್ರು?ಅವಳು--ಅಭಿಲಾಷಾ.ನಾನು--ಯಾವ class ಲ್ಲಿ ಓದ್ತಿದಿಯ?ಅವಳು--2nd standard ಅಕ್ಕ.ಆಗ ನಾನು ಮನಸ್ಸಲ್ಲಿ ಅಂದುಕೊಂಡೆ, ಅಯ್ಯೊ ಪಾಪ, ದೊಡ್ಡ ನಗರಗಳಲ್ಲಿ, ಚಿಕ್ಕ ಮಕ್ಕಳಮೇಲೆ ಎಷ್ಟೊಂದು ಜವಾಬ್ದಾರಿ ಇರುತ್ತೆಬೆಳಗ್ಗೆ ಎದ್ದು, ಮುಖ ತೊಳೆದು,ತಮ್ಮಷ್ಟಕ್ಕ ತಾವೇ ಸ್ನಾನ ಮಾಡಿ,ಶಾಲೆಯ ಸಮವಸ್ತ್ರ ಧರಿಸಿ, ಅಮ್ಮ ಮಾಡಿದ ತಿಂಡಿಯನ್ನು ತಿಂದು,ಡಬ್ಬಕ್ಕೂ ಹಾಕಿಕೊಂಡು ,city bus ಗಾಗಿ ಕಾದು,ಬಸ್ನಲ್ಲಿ ಎಷ್ಟೇ ನೂಕು-ನುಗ್ಗಲು ಇದ್ದರೂ ಬಸ್ ಹತ್ತಿ, stop ಬಂತಾ ಅಂತ ಕಿಟಕಿಯಿಂದ ಕಣ್ಣು ಹಾಯಿಸಿ, stop ಬಂದಮೇಲೆ ಕೆಳೆಗೆ ಇಳಿಯಬೇಕು.ಅಷ್ಟೆ ಅಲ್ಲ,ಶಾಲೆಯಲ್ಲಿ ಪಾಠ ಕೇಳಿ, ತಿರುಗಿ ಮನೆಗೆ ಬಂದ ಮೇಲೆ home work ಮಾಡಬೇಕು.ಮತ್ತೆ ಟ್ಯುಶನ್ ಗೆ ಹೋಗಬೇಕು, ಅಬ್ಬಬ್ಬಾಇಷ್ಟು ಚಿಕ್ಕ ವಯಸ್ಸಲ್ಲಿ ಮಕ್ಕಳು ಇದನ್ನೆಲ್ಲ ಮಾಡಬಹುದಾ?? ಅವರಿಗೆ ಇದೆಲ್ಲ ದೊಡ್ಡ ಕೆಲ್ಸ ಅಂತ ಅನ್ಸಲ್ಲ್ವ??ಇದೆಲ್ಲ ಅವರಿಗೆ pressure ಆಗಲ್ವಾ??ಬಹುಶಃ ಇದು ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವುದರ ಪರಿಣಾಮ ಇರಬಹುದು.ಅದೆ, ಹಳ್ಳಿ ಅಥವ ತಾಲೂಕು ಪ್ರದೇಶಗಳಲ್ಲಿ ಈ ರೀತಿಯಲ್ಲ. ಬೆಳಗ್ಗೆ ಎದ್ದಾದಮೇಲೆ ಎಲ್ಲ ಅಮ್ಮಂದಿರೆ ಮಾಡ್ತಾರೆ. ಮತ್ತೆ ಶಾಲೆಯವರೆಗೂ ಬಿಟ್ಟು, ಶಾಲೆ ಬಿಡುವ ವೇಳೆಗೆ ಸರಿಯಾಗಿ ಶಾಲೆಯ ಹತ್ತಿರ ಬಂದು, ತಂತಮ್ಮ ಮಕ್ಕಳಿಗೆ ಕರೆದುಕೊಂಡು ಹೋಗ್ತಾರೆ.ಆಮೇಲೆ home work ಮಾಡಿ ,ಆಟ ಆಡಲು ಹೋಗ್ತಾರೆ.ಏನೇ ಆಗಲಿ, ಮಕ್ಕಳಿಗೆ ಮನೆಯ ಹತ್ತಿರದ ಶಾಲೆಗೆ ಸೇರಿಸುವುದು ಒಳ್ಳೆಯದು ಅಂತ ನನ್ನ ಅನಿಸಿಕೆ. ಕೆಲಸಕ್ಕೆ ಹೋಗುವ ತಾಯಂದಿರಿಗೂ ಮಕ್ಕಳ ಕಡೆಗೆ ಗಮನವಿರಲಿ..ಆ ಸಣ್ಣ ತಲೆಗೆ ತುಂಬ pressure ಕೊಡಬೇಡಿ.
ಸಾಲುಗಳು
- Add new comment
- 664 views
ಅನಿಸಿಕೆಗಳು
ಗೆಳತಿಯವರೇ, ಶಾಲಾ ಮಕ್ಕಳ ಭವಣೆ
ಗೆಳತಿಯವರೇ, ಶಾಲಾ ಮಕ್ಕಳ ಭವಣೆ ಬಗ್ಗೆ ಬರೆದಿದ್ದೀರಿ. ನೀವು ಬಸ್ಸಿನಲ್ಲಿ ಪ್ರಯಾಣ ಮಾಡಿ ಅನುಭವಿಸಿ ಬರೆದಿದ್ದೀರಿ. ಮನೆಯ ಹತ್ತಿರದ ಶಾಲೆ ಎಂದರೆ ಆಗುವುದಿಲ್ಲ. ಒಳ್ಳೆಯ ಶಾಲೆ ಯಾವುದು ಎಂಬುದು ಮುಖ್ಯ. ಆದರೆ, ಅದೇ ರೀತಿ, ಮಕ್ಕಳು ಬಸ್ ಹತ್ತಿ ಇಳಿಯುವಾಗ ಅವರಿಗೆ ಸರಾಗವಾಗಿ ಹತ್ತಿ ಇಳಿಯಲು ದೊಡ್ಡವರಾದ ನಾವು ಅವಕಾಶ ಮಾಡಿಕೊಡಬೇಕು. ಬಸ್ ಚಾಲಕನಿಂದ ಹಿಡಿದು, ನಿರ್ವಾಹಕ, ಸಹ ಪಯಾಣಿಕರು ಅವರನ್ನು ಹೀಯಾಳಿಸುವುದು. " ನಾವೆ ಹತ್ತಲು ಇಳಿಯಲು ಜಾಗವಿಲ್ಲ ಇದರಲ್ಲಿ ಇವನೊಬ್ಬ ಹೊಗಲಿ ಎಂದರೆ, ಬೆನ್ನಿನ ಹಿಂದೆ ಮೂಟೆ ಬೇರೆ " ಎಂದು ಮೊದಲಿಸುತ್ತಾರೆ. ಆಗ ನೊಂದ ಆ ಮಕ್ಕಳ ಮುಖವನ್ನು ನೋಡಲು ನೋವಾಗುತ್ತದೆ. ಸಾಮಾನ್ಯವಾಗಿ ಮಕ್ಕಳು ಬೆಳಗಿನ ತಿಂಡಿ, ಮದ್ಯಾನ್ಹದ ಊಟದ ಡಬ್ಬಿಗಳೊಂದಿಗೆ ಶಾಲಾ ಪುಸ್ತಕ ಅಂದರೆ, ಏಳು ಪಿರಿಯಡ್ ನ ಟೆಕ್ಸ್ಟ್ ಪುಸ್ತಕ, ನೀಟ್ ನೋಟ್, ವರ್ಕ್ ಬುಕ್, ಮುಂತಾದ ಎಲ್ಲಾ ಪುಸ್ತಕಗಳನ್ನು ಬೆನ್ನಿನ್ ಹಿಂಬಾಗದ ಬ್ಯಾಗಿಗೆ ತುಂಬಿಕೊಂಡು ಬೆಳಿಗ್ಗೆ ಮನೆ ಬಿಟ್ಟರೆ, ಶಾಲೆ ಮುಗಿಸಿಕೊಂಡು, ಟ್ಯೂಷನ್ ಮುಗಿಸಿಕೊಂಡು ಮನೆಗೆ ಬರುವುದು ೮ ರಿಂದ್ ೯ ಗಂಟೆಯಾಗಿರುತ್ತದೆ. ಇದರಿಂದ ಅವರ ಮಾನಸಿಕ ಸ್ಠಿತಿ ಹೇಗಿರುತ್ತದೆ ಎಂಬುದು ಊಹಿಸಲಸಾಧ್ಯ. ಇದು ಬಹಳ ವರ್ಷಗಳಿಂದ ಇರುವ ಸಮಸ್ಯೆ. ಇದರ ಬಗ್ಗೆ ಸರ್ಕಾರ, ಶಾಲಾ ಮುಖ್ಯಸ್ಥರು, ಪೊಷಕರು ಕೂಲಂಕಷವಾಗಿ ಚರ್ಚಿಸಿ, ಮಕ್ಕಳು ಅತೀ ಭಾರದ ಶಾಲಾ ಪುಸ್ತಕಗಳನ್ನು ಹೊರುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಈ ಬಗ್ಗೆ ಮಕ್ಕಳು ವಯಸ್ಸಿಗೆ ತಕ್ಕಂತೆ ಇಂತಿಷ್ಟು ಕೆ.ಜಿ. ಬಾರ ಇರಬೇಕು ಎಂಬ ಒಂದು ಕಾನೂನು ತರಬೇಕಷ್ಟೆ ಅದು ಯಾವಾಗ ಆಗುತ್ತದೋ?
ಗೆಳತಿಯವರೆ, ನಿಮ್ಮ ಮಾತು ನಿಜ. ಎ
ಗೆಳತಿಯವರೆ, ನಿಮ್ಮ ಮಾತು ನಿಜ. ಎಜುಕೆಶನ್ ಎ೦ದರೆ pressure ಅನ್ನೊಮಟ್ಟಿಗೆ ಸಮಯ ಬ೦ದಿದೆ. ಮು೦ಬೈ ನಲ್ಲಿ ಚಿಕ್ಕ ಚಿಕ್ಕ ಮಕ್ಕಳು ಮು೦ಜಾನೆ ೫ ಗ೦ಟೆಗೆ ಲೊಕಲ್ ಟ್ರೈನ್ ನಲ್ಲಿ ಸ್ಕೂಲ್ ಹೊಗಿ ಬರುತ್ತಾರೆ ಎ೦ದರೆ ನ೦ಬಲಾಗುವುದಿಲ್ಲ. ನಾನು ಇದನ್ನ ಕೆಳಿ ಆಶ್ಚರ್ಯ ಪಟ್ಟಿದಿನಿ.