Skip to main content

ಅಣ್ಣಾ ನಿಮ್ಮೊಂದಿಗೆ ನಾವೂ ಇದ್ದೀವಣ್ಣ!

ಬರೆದಿದ್ದುAugust 16, 2011
8ಅನಿಸಿಕೆಗಳು

ಹುಶಃ ಈ ಲೇಖನ ಪ್ರಕಟವಾಗುವ ವೇಳೆಗೆ ಅಣ್ಣಾ ಹಜಾರೆಯವರು ಭ್ರಷ್ಟಾಚಾರ ವಿರುದ್ಧದ ನಿರ್ಣಾಯಕ ಹಂತದ ಹೋರಾಟದ ಸಲುವಾಗಿ  ಉಪವಾಸಕ್ಕೆ ಕುಳಿತಿರುತ್ತಾರೆ. ಈ ಬಾರಿಯ ಅವರ ಸತ್ಯಾಗ್ರಹ ಕಳೆದಬಾರಿಗಿಂತ ವಿಭಿನ್ನ!! ಕಳೆದ ಸಾರಿ ಉಪವಾಸಕ್ಕೆ ಕುಳಿತಾಗ ಅದು ಹೊಸತಾಗಿದ್ದರಿಂದಲೋ ಏನೋ ದೇಶದ ಮೂಲೆ ಮೂಲೆಗಳಿಂದ ಅದರಲ್ಲೂ ಸಾಮಾಜಿಕ ತಾಣಗಳಿಂದ ಅತ್ಯಭೂತಪರ್ವ ಬೆಂಬಲ ವ್ಯಕ್ತವಾಗಿತ್ತು. ಅದಕ್ಕೆ ವ್ಯತಿರಿಕ್ತ ಎಂಬಂತೆ ಇದೊಂದು ’ಸಾಮಾನ್ಯ ಓರಾಟ’ ಎಂದು ಕೊಂಡಿದ್ದ ಕೇಂದ್ರ ಸರ್ಕಾರ ಬಹಳ ಪೇಚಿಗೆ ಸಿಲುಕಿತ್ತು. ವಿಧಿಯಿಲ್ಲದೆ ಅಣ್ಣನಿಗೆ ’ಶರಣು’ ಎಂದಿತ್ತು!ಆದರೆ ಈ ಬಾರಿ ಹಾಗಿಲ್ಲ. ನೈಜವಾದ ಕಾಳಜಿಯುಳ್ಳ ಹೋರಾಟಗಳನ್ನೂ ’ಬರೀ ಓರಾಟ’ ಎಂದು ಜನಸಾಮಾನ್ಯರಲ್ಲಿ ಬಿಂಬಿಸಲು ಅಲ್ಪ ಯಶಸ್ಸು ಕಂಡಿರುವ ಕೇಂದ್ರದ ’ಕಪಿ’ ’ಸಿಂಗಲೀಕ’ಪಡೆಗಳು ತಕ್ಕ ಮಟ್ಟಿಗೆ ಹೋರಾಟದಲ್ಲಿ ಒಡಕು ಮೂಡಿಸಿರುವುದು ಒಪ್ಪತಕ್ಕ ಮಾತೆ ಸರಿ. ಈ ಬಾರಿಯೂ ಅದೇ ರೀತಿಯ ಪ್ರಯತ್ನ ಮುಂದುವರೆಸಿರುವ ಅದೇ ತಂಡ ಬೆಟ್ಟ ಅಗೆದು ಸೊಳ್ಳೆ ಹಿಡಿದಂತೆ ಅಣ್ಣಾರವರ ಮೇಲೆ ಗೂಬೆ ಕೂರಿಸಲು ಎತ್ತ ನೋಡಿದರೂ ಅವರಿಗೆ ಸಂಬಂಧವೇ ಇಲ್ಲದ ೨ ಲಕ್ಷ ರೂಗಳ ಭ್ರಷ್ಟಾಚಾರದ ಆರೋಪವನ್ನು ಹೊರಿಸಿ ತನ್ನ ೨೦ ಲಕ್ಷ ಕೋಟಿಗಳ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವುದು ಹಾಸ್ಯಾಸ್ಪದದ ಜೊತೆಗೆ ಜನಸಾಮಾನ್ಯರಲ್ಲಿ ಅಸಹ್ಯ ಮೂಡಿಸಿರುವುದು ಎದ್ದು ಕಾಣುತ್ತದೆ. ಅಲ್ಲದೆ ಗರ್ಭಕೊರಳಿನ ಅರ್ಬುದ ರೋಗ ಚಿಕಿತ್ಸೆಗೆ ಅಮೇರಿಕಕ್ಕೆ ಹಾರಿರುವ ಇಟಲಿಯಮ್ಮನ ಸ್ಥಾನದಲ್ಲಿ ’Programmed ಫಾರಂ ಕೋಳಿ’ ರಾಹುಲ್ ಗಾಂಧಿಯ ಹೆಗಲಿಗೆ ಭ್ರಷ್ಟಾಚಾರವೆಂಬ ಔಷಧವೇ ಇಲ್ಲದ ಅರ್ಬುದ ರೋಗದ ವಿರುದ್ಧ ಸೆಣಸುತ್ತಿರುವ ಹೋರಾಟವನ್ನು ಹತ್ತಿಕ್ಕುವ ’ಗುರುತರ’ ಜವಾಬ್ದಾರಿಯನ್ನು ಹೊಣೆಗೇಡಿ ಸರ್ಕಾರ ಹೊರಿಸಿದೆ. ಮೊದಲೇ ಬೇಜಾವಾಬ್ದಾರಿಯಂತೆ ವರ್ತಿಸುವ ಈ ಗಾಂಧಿ ಕುಡಿಗೆ ದೇಶ ನಡೆಸುವ ಚುಕ್ಕಾಣಿ ಕೊಟ್ಟರೆ ನಮ್ಮನ್ನು, ನಮ್ಮ ದೇಶದ ಮರ್ಯಾದಯನ್ನು ಆ ಭಗವಂತನೇ ಕಾಪಾಡಬೇಕು.ಇದಕ್ಕೆಲ್ಲಾ ಕಳಶವಿಟ್ಟಂತೆ, ಮೌನಿ ಮನಮೋಹನ್ ಸಿಂಗ್ ರವರು ಮೌನ ಮುರಿದು ’ಭ್ರಷ್ಟಾಚಾರವನ್ನು ಹತ್ತಿಕ್ಕಲು ಸತ್ಯಾಗ್ರಹಗಳು ಬೇಕಿಲ್ಲ’ ಎನ್ನುವ ನಾಚಿಕೆಗೇಡಿನ ಮೂಲಕ ತಮ್ಮ ಬುದ್ಧಿ ಶಕ್ತಿಯನ್ನು ಎಲ್ಲೋ ಅಡವಿಟ್ಟು ತಾವೊಂದು ’ಸೂತ್ರದ ಬೊಂಬೆ’ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಇದರಿಂದ ಉತ್ತೇಜನ ಗೊಂಡ ದೆಹಲಿ ಪೋಲೀಸರು ಅಣ್ಣಾರವರಿಗೆ ಹಾಕಿರುವ ೨೨ ಅಸಂಬದ್ಧ, ಅಸಂವಿಧಾನಿಕ ಶರತ್ತುಗಳಿಗೆ ಅಂಟಿಕೊಂಡು ಸತ್ಯಾಗ್ರಹದ ಸಮಾಧಿ ಮಾಡಲು ಸಜ್ಜಾಗಿದ್ದಾರೆ. ಈ ನಡೆಯಿಂದಾಗಿ ಭ್ರಷರನ್ನು, ಭ್ರಷ್ಟಾಚಾರವನ್ನು ರಕ್ಷಿಸಲು ತಾನು ಕಟಿಬದ್ದವಾಗಿರುವುದಾಗಿ ಕೇಂದ್ರ ಘೋಷಿಸಿಕೊಂಡಿದೆ. ಅಲ್ಲದೆ ಈ ಹೋರಾಟದ ಶುರುವಿನಿಂದಾಗಿ ಕೇಂದ ಸರ್ಕಾರ ವನ್ನು ಸಿಲುಕಿಸಿ ವಿಲವಿಲ ಒದ್ದಾಡುವ ಸ್ಥಿತಿಯನ್ನು ತಂದೊಡ್ಡಿರುವ ೨ ಜಿ, ಸಿ ಡಬ್ಲ್ಯ್ ಜಿ ಮತ್ತಿತರ ಹಗರಣಗಳಿಂದ ಜನರ ಮನಸನ್ನು ಬೇರೆಡೆಗೆ ತಿರುಗಿಸುವ ಚಾಣಾಕ್ಷತನವನ್ನೂ ಕೇಂದ್ರ ಮೆರೆದಿದೆ. ಅಲ್ಲದೇ ದೃಶ್ಯ ಮಾಧ್ಯಮಗಳಾಗಲಿ ಮುದ್ರಣ ಮಾಧ್ಯಮಗಳಾಗಲಿ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಏಕೆಂದರೆ ಅವುಗಳಿಗೆ ಬರೀ ’ಬ್ರೇಕಿಂಗ್ ನ್ಯೂಸ್’ ಮಾತ್ರವೇ ಮುಖ್ಯವಲ್ಲವೆ?ಅಷ್ಟೇ ಅಲ್ಲದೆ ಕಳೆದಬಾರಿಯ ಹಜಾರೆಯವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದ ಕಾಂಗ್ರೇಸ್ಸೇತರ ಸರ್ಕಾರಗಳು ಈ ಬಾರಿ ಮಗುಮ್ಮಾಗಿ ಉಳಿದಿವೆ. ಅದರಲ್ಲೂ ನಮ್ಮ ಕರ್ನಾಟಕದ ಬಿ ಜೆ ಪಿ ಸರ್ಕಾರ ನಿನ್ನೆಯ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಶಾಸ್ತ್ರಕ್ಕೆಂದು ಭ್ರಷ್ಟಾಚಾರದ ವಿರುದ್ದ ಒಂದೇ ಒಂದು ಸಾಲನ್ನೂ ಸಹ ಉಲ್ಲೇಖಿಸದಿರುವುದು ಶತಾಯಗತಾಯ ’ಮಾಜಿ ಭ್ರಷ್ಟಾಚಾರವನ್ನು’ ಕಾಪಾಡಲು ಟೊಂಕಕಟ್ಟಿದಂತಿದೆ!!ಇಷ್ಟೆಲ್ಲಾ ಇಲ್ಲಗಳ ನೆಗೆಟೀವ್ ಅಂಶಗಳ ನಡುವೆಯೂ ನಾವು ಅಣ್ಣಾರವರನ್ನು ಬೆಂಬಲಿಸಲೇಬೇಕಾದ ಅಗತ್ಯವಿದೆ. ನಮ್ಮದೇಶದಲ್ಲಿ ಇರುವ ಎಲ್ಲಾ ಕಾನೂನುಗಳು ಬಲಿಷ್ಠವಾಗಿದ್ದರೂ ಅವುಗಳನ್ನು ಜಾರಿಗೆ ತರುವವರ ನಿರ್ಲಕ್ಷ್ಯದಿಂದಾಗಿ ಅವು ಕಳಪೆ ಕಾನೂನೆಸುವುದು ಸಹಜ. ಅಲ್ಲದೇ ನಮ್ಮ ಕಾನೂನುಗಳು ನಮ್ಮನ್ನಾಳುವವರ, ಸಿರಿವಂತರ ತಾಳಕ್ಕೆ ಆಗಿಂದಾಗ್ಗೆ ’ತಿದ್ದುಪಡಿ’ಆಗಿವೆ, ಆಗುತ್ತಿವೆ. ಇದೆಲ್ಲದರ ನಡುವೆ ಅಣ್ಣಾರವರು ಪ್ರಸ್ತಾಪಿಸಿರುವ ’ಜನ ಲೋಕಪಾಲ್ ಮಸೂದೆ’ಯು ಸಧ್ಯದ ಮಟ್ಟಿಗೆ ರಾಜಕಾರಣಿಗಳಲ್ಲಿ, ಅಧಿಕಾರಶಾಹಿಯಲ್ಲಿ ಮತ್ತು ಸಿರಿವಂತರಲ್ಲಿ ಚಳುಕು ಹುಟ್ಟಿಸಿರುವುದರಿಂದಲೇ ಅವರೆಲ್ಲಾ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹೋರಾಟವನ್ನು ಹದಗೆಡಸಲು ಪ್ರಯತ್ನಿಸುತ್ತಿದ್ದಾರೆ. ಮುಂದೆ ಆ ಕಾನೂನು ಜಾರಿಯಾದಾಗ ಅದು ಸರಿಯೋ ತಪ್ಪೋ ನಂತರ ಗೊತ್ತಾಗುತ್ತದೆ. ಅಲ್ಲದೆ ಸಧ್ಯ ಮೇಲ್ನೋಟಕ್ಕೆ ಪ್ರಬಲ ಕಾಯ್ದೆಯಂತಿರುವ ’ಜನ ಲೋಕಪಾಲ್’ಮಸೂದೆ ಜಾರಿಗಾಗಿ, ಭ್ರಷ್ಟಾಚಾರವನ್ನು ಹತ್ತಿಕ್ಕುವಸಲುವಾಗಿ ಮುನ್ನುಗ್ಗುತ್ತಿರುವ ಅಣ್ಣನನ್ನು ಬೆಂಬಲಿಸದಿದ್ದಲ್ಲಿ ಮುಂದೊಂದು ದಿನ ನಮ್ಮನ್ನು ನಾವೇ ಶಪಿಸಿಕೊಳ್ಳಬೇಕಾದೀತು!! ಎಲ್ಲರೂ ತಮ್ಮ ಹೊಟ್ಟೆಪಾಡಿನ ಕೆಲಸ ಬಿಟ್ಟು ದಿನ ಪೂರ್ತಿ ಉಪವಾಸದ ಗುಡಾರಗಳಲ್ಲಿ ಕುಳಿತರೆ ಮಾತ್ರ ಅಣ್ಣಾರವರಿಗೆ ಬೆಂಬಲ ಎಂದುಕೊಳ್ಳುವಂತಿಲ್ಲ. ಸಾಂಕೇತಿವಾಗಿ ಧರಣಿಕುಳಿತು, ಕಪ್ಪು ಪಟ್ಟಿ ಧರಿಸಿಯೂ ಸಹ, ಸಾರ್ವಜನಿಕರಲ್ಲಿ ಅರಿವು ಮೂಡಿಸುವುದರ ಮೂಲಕವೂ ಸಹ ಬೆಂಬಲ ವ್ಯಕ್ತಪಡಿಸಬಹುದು! ಅಲ್ಲದೇ ಅಣ್ಣಾರವರು ಕರೆ ನೀಡಿರುವಂತೆ ಪ್ರತಿ ದಿನ ರಾತ್ರಿ ೮ ರಿಂದ ೯ ಗಂಟೆಯವರೆಗೆ ನಮ್ಮ ನಮ್ಮ ಮನೆಯ ದೀಪಗಳನ್ನು ಆರಿಸಿ, ಮನೆಯಿಂದ ಹೊರಬಂದು, ಘೋಷಣೆ ಕೂಗುವುದರ ಮೂಲಕ, ನಿಮ್ಮ ಜಿಲ್ಲಾಧಿಕಾರಿಗಳಿಗೆ, ನಿಮ್ಮ ತಾಲ್ಲೋಕುಗಳಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸುವುದರ ಮೂಲಕ, ಅಥವಾ ನಿಮ್ಮ ಹೋಬಳಿಗಳಲ್ಲಿರುವ ಉಪತಹಶೀಲ್ದಾರರಿಗೆ ಕಾನೂನು ಜಾರಿಗೆ ಮನವಿ ಸಲ್ಲಿಸುವುದರ ಮೂಲಕ ಶಾಂತಿಯುತವಾಗಿಯೂ ಕಾನೂನಿನ ಜಾರಿಗೆ ಒತ್ತಾಯಿಸಬಹುದು.ಜೊತೆಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಶಾಂತಿಯುತ ದಾರಿಗಳು ಇದ್ದೇ ಇರುತ್ತವೆ. ಅವುಗಳೆಲ್ಲವುದರ ಮೂಲಕವೂ ಕೇಂದ್ರ ಸರ್ಕಾರಕದ ಮೇಲೆ ಒತ್ತಡ ತರಬಹುದು. ದಯವಿಟ್ಟು ನಿಮಗೆ ತಿಳಿದಿದ್ದನ್ನು ಮಾಡಿ, ಅದು ಶಾಂತಿಯ ಮಾರ್ಗವಾಗಿರಲಿ ಆದರೆ ಕೇಂದ್ರದ ಮೇಲೆ ಒತ್ತಡವಿರಲಿ. ’ಜನ ಲೋಕಪಾಲ ಮಸೂದೆ’ ಜಾರಿಯಾಗೇ ತೀರಲಿಜೈ ಅಣ್ಣಾ ಹಜಾರೆ!!ಭ್ರಷ್ಟಾಚಾರ ವಿರುದ್ದದ ಹೋರಾಟಕ್ಕೆ ಜಯವಾಗಲಿ!!

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ವಿ.ಎಂ.ಶ್ರೀನಿವಾಸ ಮಂಗಳ, 08/16/2011 - 10:47

ನಮಸ್ತೇ ಬಾಸೂ.ಲೇಖನ ಸಾಂಧರ್ಬಿಕವಾಗಿ ಮೂಡಿಬಂದಿದೆ. ನಿಮ್ಮ ಲೇಖನದಿಂದ  ಉತ್ತೇಜನಗೊಂಡು ನಾನು ಕಪ್ಪಪಟ್ಟಿಯನ್ನು ತೋಳಿಗೆ ಕಟ್ಟಿ, ಈ ಹೋರಾಟಕ್ಕೆ ಬೆಂಲಸೂಚಿಸುತ್ತಿದ್ದೇನೆ.  ಭ್ರಷ್ಠಚಾರದ ವಿಷಯವಾಗಿರುವುದರಿಂದ ನಿಮ್ಮ ಲೇಖನದಲ್ಲಿ ಪ್ರಸ್ತಾವಿಸಲ್ಟಟ್ಟಿರುವ ಅಷ್ಟೂ ವಿಷಯಗಳಿಗೆ ನನ್ನ ಸಹಮತವಿದೆ.  programmed  ಫಾರಂ ಕೋಳಿ ರಾಹುಲ್ ಗಾಂಧಿ, ಮೌನಿ ಮನಮೋಹನ ಸಿಂಗ್, ಇತ್ಯಾದಿ ಬಿರುದುಗಳು ಇಷ್ಟವಾದವು.

ಫಾರಂ ಕೋಳೀನ ನಾಟಿ ಕೋಳಿ ಅನ್ನೋಕಾಗೊಲ್ವೆ? ಮೌನಿಯನ್ನ ವಾಕ್ಚತುರ ಅನ್ನೋದು ಸಾಧ್ಯವೇ?ನಿಮ್ಮ ಬೆಂಬಲಕ್ಕೆ ಅಭಿಪ್ರಾಯಕ್ಕೆ ಅನಂತಾನಂತ ಧನ್ಯವಾದಗಳುನಿಮ್ಮಉಮಾಶಂಕರ

venkatb83 ಮಂಗಳ, 08/16/2011 - 14:20

ಒಂದು ಯಾಡ್ ನಲ್ಲಿ ನಾ  ಓದಿದ್ದು ಹೀಗಿತ್ತು." ಅಬ್ ಹಣ್ಣಾ ಹಜಾರೊ ಹೈ" ಅದು ಸತ್ಯ ಈಗ ಒಬ್ಬ ಹಣ್ಣ ಅವ್ರ ಪ್ರಯತ್ನದಿಂದಾಗಿ  ಪ್ರತಿಯೊಬ್ಬ ಭಾರತೀಯ  ಪ್ರಜೆ ಸಿಡಿದೆದ್ದಿದ್ದಾರೆ. ನಿಮ್ಮ ಕಳಕಳಿ ನನ್ಗರ್ಥವಾಯ್ತು. ಒಬ್ಬ ಭಾರತದ ಪ್ರಜೆಯಾಗಿ ನಮ್ಮ ಸ್ವಾರ್ಥವನ್ನಸ್ತೆ ಯೋಚಿಸಿ  ದೇಶ ಮರ್ತ್ರೆ ಹೇಗೆ?ದೇಶ ಮೊದಲು ಆಮೇಲೆ ನಾವು. ಹಣ್ಣಾ ಗೆ ನಮ್ಮ ಬೆಂಬಲ ಇರ್ತೆ.ನಿಮ್ಮ ಬರವಣಿಗೆಯಲ್ಲಿ ಕೆಲವರನ್ನ  'ತಿವಿಯುವ ಪದಗಳು'’ಕಪಿ’ ’ಸಿಂಗಲೀಕ’ಪಡೆಗಳು  ಇಟಲಿಯಮ್ಮನ ಸ್ಥಾನದಲ್ಲಿ ’Programmed ಫಾರಂ ಕೋಳಿ’ ರಾಹುಲ್ ಗಾಂಧಿಮೌನಿ ಮನಮೋಹನ್ ಸಿಂಗ್ , ’ಸೂತ್ರದ ಬೊಂಬೆ’ 
 ನನಗೆ ಹಿಡಿಸಿದವು.

ವೆಂಕಟ್ ಸರ್ನಿಮ್ಮ ಬೆಂಬಲಕ್ಕೆ ಅಭಿಪ್ರಾಯಗಳಿಗೆ ಅನಂತನಾಂತ ಧನ್ಯವಾದಗಳುನಿಮ್ಮಉಮಾಶಂಕರ

ಬಾಲ ಚಂದ್ರ ಮಂಗಳ, 08/16/2011 - 15:23

ಅಣ್ಣಾ,ನಿಮಗೆ ಅಡ್ಬಿದ್ದೋ,ನೂರಾರು ಜನರ ಹೃದ್ಗತ ನಿಮ್ಮ ಮುಖೋದ್ಗತವಾಗಿ ಬಂದಿದೆ ( ಸ್ವಲ್ಪ ಓವರ್ರಾಯಿತಾ? )ಎಲ್ಲರಲ್ಲೂ ಅರ್ಧ ಶತಮಾನದಿಂದ ಎದೆಯೊಳಗೆ ಮದ್ದಿಟ್ಟುಕೊಂಡು ಕಾಯುತ್ತಿದ್ದರೇನೋ ಎನ್ನಿಸುತ್ತಿದೆ. ಆ ಮದ್ದನ್ನು ಅಂಟಿಸಲು ಅಣ್ಣಾ ಹಜಾರೆ ಎಂಬ ಮಿಂಚಿನ ಕಿಡಿಯೇ ಬರಬೇಕಾಯಿತು.ನೂರು ಮಾತುಗಳಲ್ಲಿ ಹೇಳುವುದನ್ನು ಎರಡೇ ಮಾತುಗಳಲ್ಲಿ ಹೇಳಿ ಮುಗಿಸಿತ್ತೇನೆ. ಇದನ್ನು ನಿನ್ನೆ ವಾಹಿನಿಯೊಂದರಲ್ಲಿ ಮಾ.ಹಿರಣ್ಣಯ್ಯ ಅವರು ಹೇಳಿದ್ದು" ಇಂದಿನ ಪರಿಸ್ಥಿತಿಗೆ ಯುವ ಜನಾಂಗವೇ ಅಪರೋಕ್ಷವಾಗಿ ಯುವ ಜನಾಂಗದ ಮನಸ್ಥಿತಿಯೇ ಕಾರಣ. ಭ್ರಷ್ಟಾಚಾರ, ಜಾತೀಯತೆ, ಮುಂತಾದ ಬೃಹತ್ ಪಿಡುಗುಗಳು ಇವರಎರಡೇ ಎರಡು ಮಾತಿನಿಂದ ಹುಟ್ಟಿ ಹೆಮ್ಮರವಾಗಿವೆ. ಆ ಎರಡು ಮಾತುಗಳೆಂದರೆ೧) ನನ್ನೊಬ್ಬನ ಕೈಲಿ ಏನಾಗುತ್ತೆ?೨) ಸುಮ್ನೆ ನಿಮಗ್ಯಾಕೆ ಇದೆಲ್ಲಾ ಉಸಾಬರಿ? "ಬೇರೆ ವಿವರಣೆಯ ಅವಶ್ಯಕತೆ ಇದೆಯೇ?ಸಸ್ನೇಹಬಾಲ ಚಂದ್ರ   

ಪ್ರಿಯ ಬಾಲಣ್ಣಇಂದಿನ ಪರಿಸ್ಥಿತಿಗೆ ಯುವ ಜನಾಂಗವೇ ಅಪರೋಕ್ಷವಾಗಿ ಯುವ ಜನಾಂಗದ ಮನಸ್ಥಿತಿಯೇ ಕಾರಣ                     ಎಂಬ ನಿಮ್ಮ ಮಾತು ಸತ್ಯಾತಿಸತ್ಯ. ಆ ಯುವ ಗುಂಪಿನಲ್ಲಿ ನಾವು ನೀವೂ ಸಹ ಇದ್ದೇವೆ, ಎನ್ನುವುದು ಅಷ್ಟೇ ಕಟು ಸತ್ಯ.ನಿಮ್ಮ ಬೆಂಬಲಕ್ಕೆ ಮತ್ತು ಸದಭಿಪ್ರಾಯಗಳಿಗೆ ಅನಂತಾನಂತ ಧನ್ಯವಾದಗಳುನಿಮ್ಮ ಉಮಾಶಂಕರ್ 

Basavaraj G ಗುರು, 08/18/2011 - 19:21

ಭ್ರಷ್ಟಚಾರದ ವಿರುದ್ಧ ಹೋರಾಟವೇನು ಬೆಂಬಲಿಸುವಂತಹ ಮಹತ್ವದ ವಿಷಯ.ಅದರೆ ನಮ್ಮ ದೇಶದಲ್ಲಿ ಗಾಂಧಿ ಜನಿಸಿ ಸಾಕಷ್ಟ ನೀತಿ ನಿಯಮಗಳನ್ನು ನೀಡಿ ಅದರಂತೆ ಬದಕಲು ತಿಳಿಸಿದರು. ಆದರೆ ಇಂದಿನ ಯುವ ಜನಾಂಗ ಎತ್ತ ಸಾಗಿದೆ ತತ್ವಗಳನ್ನು ಮರೆತು ವೈಭೋಗದ ಜೀವನ ನಡೆಸುವತ್ತ ಕನಸು ಕಾಣುತ್ತಿದೆ. ಅದೆ ಯುವಜನಾಂಗ ಹಜಾರೆಯವರನ್ನು ಬೆಂಬಲಿಸುತ್ತಿದೆ. ಸಾರ್ವಜನಿಕ ಜೀವನದಲ್ಲಿ ಕ್ರಮಶಿಕ್ಷಣವೇ ಇಲ್ಲ. ತತ್ವ ಆದರ್ಶಗಳೇ ಇಲ್ಲ. ಗಾಂಧೀಜೀಯವರ ತತ್ವ ಆದರ್ಶಗಳನ್ನು ಗಾಳಿಗೆ ತೂರಿ ಜೀವನ ರೂಪಿಸಿಕೊಳ್ಳುತ್ತಿರುವ ಇಂದಿನ ಯುವ ಪೀಳಿಗೆ ಮುಂದೆ ಹಜಾರೆಯವರ ಸಿದ್ಧಾಂತಗಳನ್ನು ಮುನ್ನೆಡೆಸಿಕೊಂಡು ಹೋಗುತ್ತಿದೆಯೇ. ಅಕ್ಟೋಬರ್ ಒಂದರಂದು ಗಾಂಧಿ ಜಯಂತಿ ಆಚರಿಸುವಂತೆ ಲೋಕಪಾಲ ಮಸೂದೆ ಜಾರಾಗಿಯದ ದಿನವನ್ನು ಹಜಾರೆಯವರ ಜಯಂತಿಯೆಂದು ಆಚರಿಸಬಹುದೇನೋ. ಪ್ರತಿಯೊಬ್ಬ ವ್ಯಕ್ತಗೂ ದೇಶದ ಬಗ್ಗೆ, ಸಾಮಾಜದ ಬಗ್ಗೆ ವೈಯುಕ್ತಿಕ ಕಾಳಜಿ ಉಂಟಾಗದೆ ಯಾವ ಕಾನೂನು ಏನನ್ನೂ ಮಾಡದು. ಇದು ಇಂದಿನ ಯುವಜನಾಂಗದ ಮನೋಗತ. ಧನ್ಯವಾದಗಳು.

Basavaraj G ಶುಕ್ರ, 10/07/2011 - 23:04

ಆಗಸ್ಟ್ ೧೮ ೨೦೧೧ ರಂದು ನಾನು ಪ್ರತಿಕ್ರಿಯಿಸಿದ್ದೆ, ಮತ್ತೆ ನಾನು ಇಲ್ಲಿ ಪ್ರತಿಕ್ರಿಯಿಸಲು ವಿಷಯ ಬಂದಿದೆ ಕಳೆದ ಎರಡು ದಿನಗಳಿಂದ Times Now ಚಾನಲ್‍ನಲ್ಲಿ ಕಳೆದ ಎರಡು ದಿನಗಳಿಂದ ಅಣ್ಣ ಹಜಾರೆಯವರ ಲೋಕಪಾಲ್ ಬಿಲ್ ಬಗ್ಗೆ ಚರ್ಚೆಯಾಗುತ್ತಿದೆ. ಇದರಲ್ಲಿ ದಿನಾಂಕಃ ೫-೧೦-೨೦೧೧ ರಂದು ನಡೆದ ಚರ್ಚೆಯಲ್ಲಿ ಅಣ್ಣ ಹಜಾರೆ ತಂಡದ ಒಬ್ಬ ವ್ಯಕ್ತಿ (ಹೆಸರು ನೆನಪಿಲ್ಲ) ಕಾಂಗ್ರೆಸ್ ಪಕ್ಷ ಪಾರ್ಲಿಮೆಂಟ್‌ನಲ್ಲಿ ಲೋಕಪಾಲ್ ಮಸೂದೆ ತರಲು ಮನಸು ಮಾಡುತ್ತಿಲ್ಲ, ಕಾರಣ ನಾವು ಉತ್ತರ ಭಾರತದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ದ ಪ್ರಚಾರ ಮಾಡುತ್ತೇವೆ. ಆಯ್ತು, ಪಾರ್ಲಿಮೆಂಟ್‌ನಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಇರುವುದು ಉಳಿದ ಪಕ್ಷಗಳಲ್ಲಿವೇ. ಉಳಿದ ಪಕ್ಷಗಳು ಬೆಂಬಲಿಸುತ್ತೇವೆಯೇ. ಸರಿ ಉಳಿದ ಪಕ್ಷಗಳಲ್ಲಿ ಭ್ರಷ್ಟರಿಲ್ಲವೆ. ನೀವು ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಿದೋದಿಸುವುದಾದರೆ ನಿಮಗೆ ಬೆಂಬಲಿಸಲು ಅಥವಾ ಮತದಾರರಿಗೆ ಬೆಂಬಲಿಸಲು ಉಳಿದಿರುವ ಶುದ್ಧ ಪಕ್ಷ ಯಾವುದು. ದಿನಾಂಕಃ ೭-೧೦-೨೦೧೧ ರಂದು ಇದೆ ವಿಷಯವಾಗಿ ಚರ್ಚೆಯನ್ನು ಗೋಸ್ವಾಮಿಯವರು ನಡೆಸಿದರು ಇದರಲ್ಲಿ ಅಣ್ಣ ಹಜಾರೆ ತಂಡದ ಕಿರಣ ಬೇಡಿ ಭಾಗವಹಿಸಿದ್ದರು. ಅವರಿಗೂ ಇದೆ ಪ್ರಶ್ನೆಯನ್ನು ಕೇಳಲಾಯಿತು. ನೀವು ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ವಿದೋದಿಸುವುದಾದರೆ ನಿಮದು ರಾಜಕೀಯ ಅಜೆಂಡ ಲೋಕಪಾಲ ಮಸೂದೆ ಬಗೆಗಿನ ಅಜೆಂಡ ಅಲ್ಲ. ಹಾಗದರೆ ನೀವು ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವುದಾದರೆ. ಮತದಾರ ಉತ್ತರ ಪ್ರದೇಶದಲ್ಲಿ ಭ್ರಷ್ಟರಾದ ಮಾಯಾವತಿ, ಯಾದವರನ್ನು ಮತ್ತು ಇತರೆ ರಾಜ್ಯಗಳಲ್ಲಿ ಭ್ರಷ್ಟರಾದ ಬಿಜೆಪಿಯನ್ನು ಬೆಂಬಲ್ಲಿಸಬೇಕೆ. ನಿಮ್ಮ ಈ ವಿರೋಧಿ ನಿಲುವಿನಿಂದ ಮತದಾರನಿಗೆ ಇರುವ ಆಯ್ಕೆ ಯಾವುದು. ಕರ್ನಾಟಕದಲ್ಲಿ ಬಿಜೆಪಿಯ ಭ್ರಷ್ಟತನವನ್ನು ಬಯಲಿಗೆಳೆದ ಮಾನ್ಯ ಸಂತೋಷ್ ಹೆಗಡೆಯವರು ಈ ತಂಡದಲ್ಲಿ ಭಾಗವಹಿಸಿದ್ದಾರೆ. ಅಂದರೆ ಕರ್ನಾಟಕದಲ್ಲಿ ಭ್ರಷ್ಟರಾದ ಬಿಜೆಪಿ ಉತ್ತರ ಪ್ರದೇಶದಲ್ಲಿ ಶುದ್ಧವಾಗಿದೆಯೇ ಅಣ್ಣ ಹಜಾರೆಯವರೆ ಹೇಳಲ್ಲಿ..Times Now ಚಾನಲ್‍ನಲ್ಲಿ ಭಾಗವಹಿಸಿದ ಮೂರು ಮಂದಿ  ಮಾನ್ಯರು ಮತ್ತು ಗೋಸ್ವಾಮಿಯವರು ಕೇಳಿದ  ಪ್ರಶ್ನೆಗಳಿಗೆ ಕಿರಣ್ ಬೇಡಿಯವರಿಂದ ಸರಿಯಾದ ಉತ್ತರವೇ ಬರಲಿಲ್ಲ. ಇಂತಹ ತಂಡದಿಂದ ಭಾರತೀಯ ನಾಗರೀಕ ಏನನ್ನು ನೀರಿಕ್ಷಿಸಬಹುದು.ಅಣ್ಣ ತಂಡ ರಾಜಕೀಯ ಅಜೆಂಡ ಬಿಟ್ಟಲ್ಲಿ ಜನಬೆಂಬಲ ದೊರೆಯಬಹುದು. ಮತ್ತೊಂದು ಪ್ರಶ್ನೆ ಇವರ ಕಾಂಗ್ರೆಸ್ ವಿರೊಧಿ ನಿಲುವಿನಿಂದ ಆಯ್ಕೆಯಾಗಿ ಬರುವ ಇತರೆ ಪಕ್ಷದ ಎಂ.ಪಿಗಳು ಈ ಬಿಲ್ಲು ಪಾರ್ಲಿಮೆಂಟ್‌ನಲ್ಲಿ  ಬೆಂಬಲ ಪಡೆದು ಬರಲೆಂದು ಆಶಿಸುತ್ತೇನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.