ರಕ್ಷಾ ಬಂಧನ
ರಕ್ಷಾ ಬಂಧನ ಎಂದರೆ ಹೇಳಲಾಗದಷ್ಟು ಸಂಭ್ರಮ. ವಿಸ್ಮಯ ನಗರಿಯ ಎಲ್ಲ ಗೆಳೆಯ-ಗೆಳೆತಿಯರಿಗೂ ರಕ್ಷಾ ಬಂಧನದ ಶುಭಾಷಯಗಳು.ಅಣ್ಣ-ತಂಗಿ, ಅಕ್ಕ-ತಮ್ಮ ಎಂಬ ಬಿಡಿಸಲಾಗದ ನವಿರಾದ ಸಂಬಂಧಗಳ ಸಂಕೇತ ಈ ಹಬ್ಬ.ಪ್ರತಿ ಹೆಣ್ಣು ತನ್ನ ಅಣ್ಣ, ತಮ್ಮಂದಿರಿಗೆ ರಾಖಿ ಕಟ್ಟಲು ತಿಂಗಳುಗಳಿಂದ ಕಾತುರಳಾಗಿ ಕಾಯಿವಳು.ತನ್ನ ಒಡ ಹುಟ್ಟಿದವರಿಗಾಗಿ ಸುಂದರವಾದ, ಅವರ ಕೈಗೆ ಒಪ್ಪುವ ರಾಖಿಗಳನ್ನು ಕೊಂಡುಕೊಳ್ಳುತ್ತಾಳೆ.ಯಾವಾಗಲೂ ಆಟ, ಜಗಳ, ಹೊಡೆದಾಟ,ಹಟ, ತರ್ಲೆ, ವಾದ-ವಿವಾದಗಳಲ್ಲಿಯೆ ಉಳಿದುಹೋದ ಒಡ ಹುಟ್ಟಿದವರ ಸಂಬಂಧ ,ಈ ದಿನ ಪ್ರೀತಿ-ವಾತ್ಸಲ್ಯ ಗಳನ್ನು ಹಂಚಿಕೊಳ್ಳುವ ದಿನ.ಪ್ರತಿದಿನ school,college,office, ಅಂತ ನಿರತವಾಗಿರುವವರಿಗೆ ,ಇಂದು ತಮ್ಮ ತಮ್ಮ ಅನ್ನ,ಅಕ್ಕ,ತಂಗಿ.ತಮ್ಮಂದಿರೊಟ್ಟಿಗೆ ಕಾಲ ಕಳೆಯಲು ಸುದಿನ.
ಸಾಲುಗಳು
- 567 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ