ಪೋರ ನಾನು
ಮನಸೆಂಬ ಹೃದಯದಲ್ಲಿ ನಿನ್ನನ್ನು ಇರಿಸಿ ಕನಸು ಕಾಣುತ್ತಿರುವ ಪೋಲಿ ನಾನು ಅಂದು ಕನಸುಕಾಣುತ್ತಿದ್ದ ಪೋಲಿ ನಾನು ಈ ಸುಂದರ ಜೀವನದಲಿ ನಿನ್ನನ್ನು ಅರಸಿ ಬದುಕಿನ ದಾರಿ ಹುಡುಕುತ್ತಿರುವ ಪೋರ ನಾನು ಯವ್ವನದ ಕಾವಿನಲಿ ನಿನ್ನ ಈ ವಯ್ಯಾರದಲಿ ನನ್ನ ಗುರಿಯೆಂಬುದಕ್ಕೆ ಮಾರ್ಗ ಹುಡುಕುತ್ತಿರುವ ಪೋಲಿ ನಾನು ನನ್ನ ಈ ಎಲ್ಲ ನೋವಿನಲಿ ನಲಿವನ್ನು ಕಾಣುತಿರು ಪೋರ ನಾನು ನಿನ್ನನ್ನು ನೋಡುತ, ಕನಸುನ್ನು ಕಾಣುತ ಬದುಕ ಮರೆತಿದ್ದ ಹುಡುಗ ನಾನು ಅಂದು ಬದುಕ ಮರೆತಿದ್ದ ಹುಡುಗ ನಾನು ದಿನಗಳು ಮುಗಿದಂತೆ, ಕಾಲಳೆದಂತೆ ನನಗಿದು ಹೊಳೆದಾಗ ಬದುಕ ನೆನೆಯುತಿಹ ಪೋರ ನಾನು, ಬದುಕ ನೆನೆಯುತಿಹ ಪೋರ ನಾನು ಪ್ರೀತಿಯ ಕೈ ಯಲಿ ಸಿಕ್ಕಿ ಮನಸ್ಸಿನ ಆಟದಲಿ ಗೆದ್ದು ಕನಸು ಕೈ ಸೇರುವ ಕಾಲ ಬಂದಾಗ ಬದುಕ ನೆನಪಿಸಿಕೊಂಡ ಪೋರ ನಾನು ಬದುಕ ನೆನಪಿಸಿಕೊಂಡ ಪೋರ ನಾನು ವರುಷಗಳು ಕಳೆದಂತೆ ನನ್ನ ಮನದಲ್ಲಿ ಮೊಡಿದ ಭಾವನೆ ನೀನು ಆ ಭಾವನೆಯ ಪ್ರತಿಧ್ವನಿಗಾಗಿ ಕಾಯುತ್ತಿರುವ ಪೋಲಿ ನಾನು ತುಂಬ ಸುಂದರ ಈ ಪ್ರೀತಿ ತುಂಬ ಸುಂದರ ಈ ರೀತಿ ನನ್ನ ಶುಭ ಅಶಕಿ ನೀನು ನಿನಗಾಗಿ ಕಾಯುವ ಪೋರ ನಾನು.
ಸಾಲುಗಳು
- 589 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ