Skip to main content

ಕನ್ನಡ ಬಾಂಧವರೇ, ಕನ್ನಡಿಗರಿಗೆ  ಭಾಷೆ ರಾಜ್ಯ ಕನ್ನಡ ಕಲಿತರೆ ಮಾತ್ರ ಸಾಕೆ? ದೇಶದ ರಾಜ್ಯಗಳೊಂದಿಗೆ ಸಂಪರ್ಕಕ್ಕಾದರು ದೇಶದ ಭಾಷೆ ಹಿಂದಿ ಕಲಿಯಬಾರದೆ. ಜ್ನಾನಕ್ಕಾಗಿ,  ಪರಸ್ಪರ ಅರಿವಿಗಾಗಿ, ಆಧುನಿಕ ಸಂಪರ್ಕಕ್ಕಾಗಿ ಅಂದರೆ, ಮೊಬೈಲ್, ಇಂಟರ್ನೆಟ್ ಬಳಕೆಗಾಗಿ, ಮಾಹಿತಿಗಾಗಿ, ಆಂಗ್ಲ ಭಾಷೆ ಕಲಿಯುವುದು ಬೇಡವೆ? ಕನ್ನಡ ಮಾತ್ರ ಸಾಕು ಎಂದರೆ, ನಾವು, ನಮ್ಮ ಮುಂದಿನ ಪೀಳಿಗೆ ಮೂಕರಾಗುವುದಿಲ್ಲವೇ?  

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Lakshmish ಮಂಗಳ, 09/06/2011 - 15:53

kanditha gelaya, yella bhashegalannu kalibeku

Nanjunda Raju Raju ಮಂಗಳ, 09/06/2011 - 16:26

ಶ್ರೀ ಲಕ್ಷ್ಮೀಶ್ ರವರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ವಂದನೆಗಳೊಡನೆ.

baburao dore ಮಂಗಳ, 12/27/2011 - 12:35

ಸ್ನೇಹಿತರೆ, ನೀವು ಚರ್ಚೆಯಲ್ಲಿ ಆಯ್ಕೆ ಮಾಡಿಕೊ೦ಡಿರುವ "ಕನ್ನಡಿಗರಿಗೆ ಕನ್ನಡ ಭಾಷೆ ಮಾತ್ರ ಸಾಕೆ?" ಈ ವಿಷಯ ಹಿ೦ದೆ೦ದಿಗಿ೦ತಲೂ ಇ೦ದು ಹೆಚ್ಚು ಪ್ರಸ್ತುತವಾಗಿದೆ.ಇ೦ದಿನ ಸ್ಪರ್ದಾತ್ಮಕ ಜಗತ್ತಿನಲ್ಲಿ ಕೇವಲ ಕನ್ನಡ ಭಾಷೆಯೊ೦ದೆ ಕಲಿತರೆ ಸಾಲದು,ಕನ್ನಡದ ಜೋತೆಗೆ ರಾಷ್ಟ್ರೀಯ ಮತ್ತು ಅ೦ತರಾಷ್ಟ್ರೀಯ ಭಾಷೆಗಳಾದ ಹಿ೦ದಿ,ಇ೦ಗ್ಲೀಷಿನ ಜ್ನಾನ ಅವಶ್ಯವಿದೆ.....

Nanjunda Raju Raju ಗುರು, 12/29/2011 - 16:47

ಶ್ರೀ ಬಾಬುರಾವ್ ದೊರೆಯವರೇ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಭಾಷೆ ಎಷ್ಟಾದರೂ ಕಲಿಯಲಿ ಜ್ನಾನಿಯಾಗುತ್ತಾರೆ. ಆದರೆ ಸಾಧ್ಯವಾದಷ್ಟು ಕನ್ನಡ ಬಳಸಲಿ. ಬೇರೆ ದೇಶಗಳಲ್ಲಿ ತಮ್ಮ ಮಾತೃ ಭಾಷೆ ಯಾವುದಾದರಾಗಿರಲಿ ತಮ್ಮ ದೇಶ ಭಾಷೆಯನ್ನು ಬಿಡುವುದಿಲ್ಲ. ಉದಾಃಚೈನಾ, ಜಪಾನ್, ರಷ್ಯ ಮುಂತಾದುವು. ನಮ್ಮ ದೇಶದಲ್ಲಿ ಆ ಪದ್ದತಿ ಇರುವುದಿಲ್ಲ.

ಪ್ರಭುದೇವ್ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 12:54

ಕನ್ನಡದ ಜೊತೆಗೆ ಎಷ್ಟು ಬೇರೆಯ ಭಾಷೆಗಳನ್ನಾದರೂ ಕಲಿಯಲು ತಿಳಿದು ಅಬ್ಯಾಸ ಮಾಡಲು ಅಡ್ಡಿಇಲ್ಲ ಅದರಿಂದ ಎರಡು ರೀತಿಯ ಲಾಭ ಕನ್ನಡಿಗರಿಗೆ ಇದೆ ಒಂದು ಬೇರೆಯ ಭಾಷಿಗರೊಂದಿಗೆ ಸರಳವಾಗಿ ಸಂವಾದಿಸಲು,ಅವರವರ ಭಾಷೆಯಲ್ಲಿನ ಉತ್ತಮ ಸಾಹಿತ್ಯವನ್ನೂ ಕನ್ನಡಿಗರಿಗೆ ಪರಿಚಯಿಸಲು,ಕನ್ನಡಡ ಉತ್ತಮ ಸಾಹಿತ್ಯ ಪ್ರಕಾರಗಳನ್ನು ಇತರ ಭಾಷಿಕರಿಗೆ ಪರಿಚಯಿಸಲು ಮತ್ತು ಭಾಷೆಯ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಬಹಳಷ್ಟು ಅವಕಾಶಗಳಿವೆ.ಭಾಷೆ ಸಂಪರ್ಕ ಮಧ್ಯಮ ಅಷ್ಟೇ ಅಲ್ಲ ಬದುಕು ಸಹ ಮುಖ್ಯವಾದರೆ ಎಲ್ಲ ಭಾಷೆಗಳನ್ನೂ ಗೌರವಿಸಬೇಕು ಭಾಷಾ ದುರಭಿಮಾನದಿಂದ ಕನ್ನಡಿಗರಿಗೇ ಹೆಚ್ಚು ಹಾನಿ.ಕರ್ನಾಟಕದ ಹೊರಗೆ ಬದುಕುವ ಕನ್ನಡಿಗರ ಬಗ್ಗೆ ಯೋಚಿಸಿ

Nanjunda Raju Raju ಗುರು, 12/29/2011 - 16:41

ಶ್ರೀ ಪ್ರಭುದೇವ್ ರವರೇ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಒಳ್ಳೆಯ ಅಭಿಪ್ರಾಯ ಅನುಕರಣೀಯ. ವಂದನೆಗಳೊಡನೆ.

ತ್ರಿನೇತ್ರ ಮಂಗಳ, 05/01/2012 - 11:04

ಮಾನವನ ವಿಕಾಸದ ಹಾದಿಯಲ್ಲಿ ಭಾಷೆಗಳು ಬಹಳ ಪ್ರಾಮುಖ್ಯ ಪಾತ್ರ ವಹಿಸುತ್ತವೆ. ಒಂದು ಪರ ರಾಜ್ಯದ, ರಾಷ್ಟ್ರದ, ಬೇರೆ ಜನಾಂಗ ಅಥವಾ ಅವರ ಕಲೆ ಸಂಸ್ಕೃತಿಯ ಇತ್ಯಾದಿಗಳ ಬಗ್ಗೆ ಚೆನ್ನಾಗಿ ಅರಿಯಬೇಕಾದರೆ ಕೇವಲ ಅದು ಅವರವರ ಮಾತೃ ಭಾಷೆಯನ್ನು ತಿಳಿದಿದ್ದರೇ ಸಾಲದು. ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿತಂತೆಲ್ಲಾ ಆ ಭಾಷೆಯನ್ನು ಮಾತಾಡುವ ಜನರ ರೀತಿ ನೀತಿ ನಡವಳಿಕೆ, ಕಲೆ ಸಂಸ್ಕೃತಿ, ಅದರಲ್ಲಿರುವ ಅನುಕೂಲ ಅನಾನುಕೂಲ ಇವೆಲ್ಲವನ್ನೂ ಅರಿಯಬಹುದಲ್ಲದೇ ಅದರಲ್ಲಿರುವ ಸಊಕರ್ಯಗಳನ್ನು ನಮ್ಮ ಭಾಷೆಯಲ್ಲೂ ಅಳವಡಿಸಿಕೊಂಡು ನಮ್ಮ ಮಾತೃ ಭಾಷೆಯನ್ನು ಮತ್ತಷ್ಟೂ ಸಮೃದ್ಧಗೊಳಿಸಬಹುದು.
ಕೇವಲ ಒಂದೇ ಭಾಷೆ ಅದು ನಮ್ಮದು ಆದನ್ನೇ ಎಲ್ಲಾ ಹಂತದಲ್ಲೂ ಪ್ರಯೋಗಿಸಬೇಕು ಎಂಬ ಕಟ್ಟು ನಿಟ್ಟಿನ ನೀತಿ ನಿಯಮಗಳಿಂದಾಗಿ ಆ ಭಾಷೆಯ ಮಾನವರ ಪ್ರಗತಿಗೆ ಕುಂದು ಬರುತ್ತದೆ. ತಮ್ಮ ಬಾಷೆಗಷ್ಟೇ ಸೀಮಿತವಾದ ವಿಷಯಗಲಲ್ಲಿ ಮಾತ್ರಾ ಪ್ರವೀಣರಾದರೂ ಬೇರೆ ಭಾಷೆ ಕಲಿಯುವುದರಿಂದ ತಿಳಿಯ ಬಹುದಾದ ಹಲವಾರು ವಿಷಯಗಳಿಂದ ಹಾಗೂ ಅದರಿಂದಾಗುವ ಅನುಕೂಲಗಳಿಂದ ವಂಚಿತರಾಗುತ್ತಾರೆ. ಆದ್ದರಿಂದ ತಮ್ಮ ಮಾತೃಭಾಷೆಯ ಜತೆ ಜತೆಗೇ ಇಡೀ ಪ್ರಪಂಚದಲ್ಲಿ ಸಾಮಾನ್ಯವಾಗಿ ಅತೀ ವಿಕಾಸಗೊಂಡು ಪ್ರಚಲಿತವಿರುವ ಇತರೆ ಪ್ರಮುಖ ಭಾಷೆಗಳನ್ನೂ ಕಲಿತಷ್ಟೂ ಅದು ಅವರಿಗೇ ಅನುಕೂಲವೇ ಹೊರತು ಬೇರೆಯವರಿಗಲ್ಲ. ಹಾಗೆಂದು ಹೇಳಿ ಬೇರೆ ಭಾಷೆಗಳನ್ನು ಮಾತ್ರಾ ಕಲಿತು ಕೊನೆಗೆ ನಮ್ಮ ಮಾತೃಭಾಷೆಯನ್ನೇ ಮರೆತು ಅದನ್ನು ಹೀಯಾಳಿಸುವಷ್ಟು ಮೂರ್ಖತನ ಯಾರಿಗೂ ಬಾರದಿರಲಿ. ನಮ್ಮ ನಾಡಿನಲ್ಲಿ ನಮ್ಮ ಭಾಷೆಗೆ ಪ್ರಾಮುಕ್ಯತೆಯಿರಲಿ ಅದನ್ನು ಮತ್ತಷ್ಟು ಬೆಳೆಸಲು ಸಹಕರಿಸಬೇಕು ಆದರೆ ಮರೆಯುವುದು ಬೇಡ.
ಇಲ್ಲಿ ನನ್ನ ಅನುಭವಕ್ಕೆ ಬಂದ ಒಂದು ವಿಚಾರವನ್ನು ಎಲ್ಲರೊಡನೆ ಹಂಚಿಕೊಳ್ಳಬಯಸುತ್ತೇನೆ. ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಬೇರೆ ಭಾಷೆ ಕಲಿಯಲು ಅದರಲ್ಲೂ ನಮ್ಮ ರಾಷ್ಟ್ರಭಾಷೆಯೆಂದು ಪರಿಗಣಿಸಿರುವ ಹಿಂದೀ ಭಾಷೆ ಕಲಿಯಲು ಅತೀ ಪ್ರಯಾಸ ಪಡುವವರು ಬಹುಷಃ ತಮಿಳು ಮಾತೃ ಭಾಷೆಯವರು. ಅದಕ್ಕೆ ಕಾರಣ ಮೊದಲಿನಿಂದಲೂ ನಮ್ಮ ಕರ್ನಾಟಕ, ಕೇರಳ ಆಂದ್ರ ರಾಜ್ಯ ಗಳಲ್ಲಿರುವಂತೆ ಮೂರನೇ ಭಾಷೆಯಾಗಿ ಹಿಂದಿ ಕಲಿಸಲಾಗುವುದಿಲ್ಲ. ಹಾಗಾಗಿ ಅವರಿಗೆ ಕೇಂದ್ರ ಸರ್ಕಾರದ ಕೆಲಸ ಸಿಕ್ಕು ಉತ್ತರ ಭಾರತದ ರಾಜ್ಯಗಳಲ್ಲಿ  ನೆಲೆಸಬೇಕಾಗಿ ಬಂದಾಗ ಅವರಷ್ಟು ಹಿಂದೀ ಭಾಷೆ ಕಲಿಯಲು ಪರದಾಡುವವರನ್ನು ನಾನು ನೋಡಿಲ್ಲ.
ಆದ್ದರಿಂದ ಸ್ವಭಾಷಾ ವ್ಯಾಮೋಹಕ್ಕೆ ಒಳಗಾಗಿ ಪರ ಭಾಷೆ ಎಂದು ನಮ್ಮ ದೇಶದ ಭಾಷೆಯನ್ನೇ ಕಲಿಯಲು ತಿರಸ್ಕರಿಸಿ ಆಂಗ್ಲ ಭಾಷೆಯನ್ನು ಕಲಿಯಲು ಒಲವು ತೋರಿದರೆ ಅದು ದೇಶ ದ್ರೋಹ ಎಂದರೆ ತಪ್ಪಾಗಲಾರದು. ಮೊದಲು ನಮ್ಮ ಮಾತೃ ಭಾಷೆಗೆ ಪ್ರಾಮುಖ್ಯತೆ, ನಂತರ ನಮ್ಮ ರಾಷ್ಟ್ರ ಭಾಷೆಗೆ ಗೌರವ ತದನಂತರ ಉತ್ತಮ ಜ್ನಾನಾರ್ಜನೆಗಾಗಿ ವಿಕಾಸಕ್ಕಾಗಿ ಪ್ರಪಂಚದೆಲ್ಲೆಡೆ ಮಾತನಾಡುವ ಸುಲಭವಾಗಿ ಕಲಿಯಬಹುದಾದ ಆಂಗ್ಲ ಭಾಷೆಯ ಕಲಿಕೆ ಇವುಗಳನ್ನು ಜತೆ ಜತೆಗೇ ಕಲಿತಲ್ಲಿ ಜೀವನದ ಹಾದಿ ಸುಗಮವಾಗಬಲ್ಲದು ಎಂದು ನನ್ನ ಅನಿಸಿಕೆಯಾಗಿರುತ್ತೆ. ಅದರಂತೆ ನಾನು ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಕನ್ನಡ ಓದುತ್ತಾ ಬರೆಯುತ್ತಾ ನಮ್ಮ ಭಾಷೆಯ ಬೆಳವಣಿಗೆಗೂ ಸಾಕಷ್ಟು ಪ್ರಯತ್ನ ಮಾಡುತ್ತಾ ಈ ದೇಶದ ಪ್ರಜೆಯಾಗಿ ನಾಗರೀಕನಾಗಿ ನನ್ನ ಕೈಲಾದಷ್ಟು ಕರ್ತವ್ಯ ನಿರ್ವಹಿಸುತ್ತಿದ್ದೇನೆ.

Nanjunda Raju Raju ಗುರು, 05/10/2012 - 19:17

ನ್ಯ ತ್ರಿನೇತ್ರರವರೇ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ವಿವರವಾದ ಅಭಿಪ್ರಾಯ ನೀಡಿದ್ದೀರಿ. ಆದರೆ ನಮ್ಮ ನೋವೆಂದರೆ, ನಮ್ಮ ರಾಜ್ಯದಲ್ಲಿ ಕನ್ನಡ ಬಾಷೆ ಎಲ್ಲಾ ರೀತಿಯಿಂದಲೂ ಅನಿವಾರ್ಯವೆಂದಾಗಬೇಕು. ನೀವು ತಿಳಿಸಿರುವಂತೆ, ನಮ್ಮ ರಾಜ್ಯದಲ್ಲಿ ಅನ್ಯ ಬಾಷಿಗರಿಗೆ ಸಿಗುವ ಸೌಲಭ್ಯ ಕನ್ನಡಿಗರಿಗೆ ದೊರಕುವುದಿಲ್ಲ.  ಕನ್ನಡಿಗರು ಕೂಲಿ ಕಾರ್ಮಿಕರಾಗುತ್ತಾರೆ. ಏಕೆಂದರೆ ಅವರಿಗೆ ಕನ್ನಡ ಬರುತ್ತದೆ. ಅನ್ಯಬಾಷಿಗರು " ಬಾಸ್ " ಗಳಾಗುತ್ತಾರೆ. ಏಕೆಂದರೆ ಅವರಿಗೆ ಕನ್ನಡ ಬರುವುದಿಲ್ಲ. ಅಲ್ಲವೆ? ವಂದನೆಗಳೊಡನೆ.

ತ್ರಿನೇತ್ರ ಸೋಮ, 05/14/2012 - 14:22

ಧನ್ಯವಾದಗಳು ನಂಜುಂಡರಾಜು ಅವರೇ..., ನಾನು ನನ್ನ ಲೇಖನವೊಂದರಲ್ಲಿ ತಿಳಿಸಿರುವಂತೆ ದಿನದಿನವೂ ಈ ರೀತಿಯ ಶೋಷಣೆಗೊಳಗಾಗಿರುವ ಶೋಷಣೆಗೊಳಗಾಗುತ್ತಿರುವ ಕನ್ನಡಿಗರು ಎಲ್ಲಿವರೆಗೂ ಕಣ್ಣಿದ್ದೂ ಕುರುಡರಂತೆ ಕಿವಿಯಿದ್ದರೂ ಕಿವುಡರಂತೆ ಹಾಗೂ ಬಾಯಿದ್ದೂ ಮೂಕರಂತೆ ಎಲ್ಲಾ ಸಹಿಸಿಕೊಂಡು ಸುಮ್ಮನಿರುತ್ತಾರೋ ಅಲ್ಲೀವರೆಗೂ ಈ ತಾರತಮ್ಯ, ಅತ್ಯಾಚಾರ ಅನಾಚಾರ ಎಲ್ಲಾ ಮುಂದುವರೆಯುತ್ತಲೇ ಇರುತ್ತದೆ... ಆದ್ದರಿಂದಲೇ ಅಂತಹಾ ಕನ್ನಡಿಗರಿಗೆ ನಾನು ಕಳಕಳಿಯಿಂದ ಕೇಳಿಕೊಂಡಿದ್ದೇನೆ ಇನ್ನಾದರೂ ನಿದ್ರೆಯಿಂದ ಏಳಿ ಎದ್ದೇಳಿ... ಕನ್ನಡಿಗರಾಗಿ ಕನ್ನಡಿಗರಿಗೇ ಅನ್ಯಾಯ ಮಾಡುತ್ತಿರುವವರ ವಿರುದ್ಧ ಶಾಂತಿಯುತವಾಗಿ ಯುದ್ಧ ಸಾರಿ... ಸಮ ಮನಸ್ಕರು ಒಂದಾಗಿ ಅಂತಹವರ ಹುಟ್ಟಡಗಿಸಿ ಎಂದು. ಆ ಒಂದು ಸುಧಿನವನ್ನು ಕಾದುನೋಡೋಣ....!

ಪಿಸುಮಾತು ಮಂಗಳ, 05/08/2012 - 11:22

ಕಂಡಿತ ಕನ್ನಡ ಮಾತ್ರ ಸಾಲದು.ಕನ್ನಡವನ್ನು ಕಡ್ಡಾಯವಾಗಿ (ಕರ್ನಾಟಕದಲ್ಲಿ ವಾಸಿಸುವ) ಎಲ್ಲರೂ ಕಲಿಯಬೇಕು. ನಂತರ ಆಂಗ್ಲವನ್ನೂ ಸಹ ಇಂದಿನ ದಿನಗಳಲ್ಲಿ ಕಲಿಯಲೇ ಬೇಕಾದ ಅನಿವಾರ್ಯತೆ ಇದೆ. ಹಿಂದಿಯನ್ನು ಒಂದು ಐಚ್ಚಿಕ ವಿಷಯವಾಗಿ ಇಡಬೇಕು. ಕಡ್ಡಾಯ ಬೇಡ. ಅಯಾ ವಿದ್ಯಾರ್ಥಿಗಳ ಸಾಮರ್ಥ್ಯಕ್ಕನುಗುನವಾಗಿ ಆಸಕ್ತಿ ಇರುವವರು ಕಲಿಯಬಹುದು.

Nanjunda Raju Raju ಗುರು, 05/10/2012 - 19:40

ಮಾನ್ಯ ಶ್ರೀಪತಿಯವರೇ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಕರ್ನಾಟಕದಲ್ಲಿ ವಾಸಮಾಡುವವರಿಗೆ, ಸರಕಾರಿ ಕಛೇರಿ ಒಂದೇ ಅಲ್ಲ ಖಾಸಗಿ ಕಂಪನಿಗಳಲ್ಲೂ  ಕನ್ನಡ ಬಾಷೆ ಅನಿವಾರ್ಯವಾಗಬೇಕು. ಅದು ಈಗ ಇಲ್ಲ. ಇನ್ನು ಬದುಕಲು ಆಂಗ್ಲ ಬಾಷೆ ಬೇಕೇ ಬೇಕು. ನಮ್ಮ ದೇಶದ ಜನರೊಂದಿಗೆ ಬೆರೆಯಲು, ದೇಶ ತಿಳಿದುಕೊಳ್ಳಲು, ಹಿಂದಿಬೇಡವೆ? ನಾವು ನಮ್ಮ ರಾಜ್ಯ ಬಿಟ್ಟು ಬೇರೆ ರಾಜ್ಯಗಳಿಗೆ ಪ್ರವಾಸ ಹೋದಾಗ ಇದು  ನಮ್ಮ ದೇಶವೇ ಆದರೂ ಸಹ ನಾವು ಮೂಗರಾಗುತ್ತೇವೆ. ಅಲ್ಪ ಸ್ವಲ್ಪ ಹಿಂದಿ ಬಂದರೆ ಅವರೊಂದಿಗೆ ಬೆರೆತು ಎಲ್ಲಾ ಸೌಲಭ್ಯ ಪಡೆಯಬಹುದಲ್ಲವೆ? ಆದುದರಿಂದ ನನ್ನ ಅನುಭವದ ಪ್ರಕಾರ ಐಚ್ಚಿಕ ಎಂಬುದನ್ನು ತೆಗೆದು ಹಿಂದಿಯನ್ನು ಕಡ್ಡಾಯ ಮಾಡಿದರೆ ಅನುಕೂಲವಾಗುತ್ತದೆ. ಬೇರೆ ಬಾಷೆಗಳನ್ನು ಕಲಿಯುವುದು ಬಿಡುವುದು, ಅವರವರಿಗೆ ಬಿಟ್ಟದ್ದು. ಅಲ್ಲವೇ? ವಂದನೆಗಳೊಡನೆ.

ಪಿಸುಮಾತು ಶುಕ್ರ, 05/11/2012 - 12:55

ನಾವು ಹೇಗೆ ಕನ್ನಡದೊಂದಿಗೆ ಇಂಗ್ಲೀಷ್ ಕಲಿಯುತ್ತೇವೆಯೋ ಹಾಗೆಯೇ ಅವರೂ ಹಿಂದಿಯೊಂದಿಗೆ ಇಂಗ್ಲೀಷ್ ಕಲಿಯುತ್ತಿದ್ದಾರೆ. ನಾವು ಅಲ್ಲಿಗೆ ಪ್ರವಾಸ ಹೋದರೆ ಇಂಗ್ಲೀಷ್‌ನಲ್ಲಿ ಮಾತಾಡಿ ಪ್ರವಾಸ ಮಾಡಬಹುದು. ಇಲ್ಲವೆಂದರೆ ಒಂದೊಂದು ರಾಜ್ಯಕ್ಕಾಗಿಯೂ (ತಮಿಳು, ತೆಲುಗು, ಮಲಯಾಳಂ - ಹೀಗೆ ) ಎಲ್ಲಾ ಭಾಷೆಗಳನ್ನೂ ಕಲಿಯಬೇಕಾಗುತ್ತದೆ. ಹಾಗಾಗಿ ಹಿಂದಿ ಕಡ್ಡಾಯ ಮಾಡಿರುವುದನ್ನು ನಾನು ವಿರೋಧಿಸುತ್ತೇನೆ. ಇದು ಕನ್ನಡ ಹಳ್ಳಿಯ ಮಕ್ಕಳಿಗೆ ಮಾರಕ. ಹಿಂದಿಯಿಂದಾಗಿ ಹಳ್ಳಿ ಹುಡುಗರು (ಬಹುತೇಕ ಮಕ್ಕಳು) ಇಂಗ್ಲೀಷನ್ನೂ ಸರಿಯಾಗಿ ಕಲಿಯಲಾಗದೇ ಒದ್ದಾಡುತ್ತಿದ್ದಾರೆ. ಆದರೆ ಹಿಂದಿ ಮಕ್ಕಳಿಗೆ ಹಿಂದಿ ಹಾಗೂ ಇಂಗ್ಲೀಷ್ ಎರಡೇ ಭಾಷೆ. ಇದು ಯಾವ ನ್ಯಾಯ ? 

Nanjunda Raju Raju ಮಂಗಳ, 05/15/2012 - 16:52

ಮಾನ್ಯ ಶ್ರೀಪತಿಯವರೇ, ನಮ್ಮ ದೇಶ ಹಿಂದೂ ದೇಶ. ನಾವು ಹಿಂದಿ ಬೇಡವೆಂದರೆ ಹೇಗೆ. ನಮಗೆ ಅಷ್ಟು ಸ್ವಾಭಿಮಾನ ಬೇಡವೆ? ಅದೇ ಪ್ರಪಂಚದಲ್ಲಿಯೇ ಮುಂದುವರಿದ ರಾಷ್ಟ್ರಗಳಾದ ಚೀನಾ, ಜಪಾನ್, ರಷ್ಯ, ತಮ್ಮ ರಾಷ್ಟ್ರ ಭಾಷೆಗಳನ್ನು ಬಿಟ್ಟುಕೊಡುವುದಿಲ್ಲ. ಕೆಲವು ಸಾರಿ ರಾಷ್ಟ್ರೀಯ ನಾಯಕರು ಬೇರೆ ದೇಶಗಳಿಗೆ ಬೇಟಿ ನೀಡಿದಾಗ ದುಭಾಷಿಗಳನ್ನು ಬಳಸುವುದನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡಿದ್ದೇವೆ. ರಷ್ಯದಲ್ಲಿ ಬೇರೆ ದೇಶದ ಒಂದೆರಡು ಪುಸ್ತಕಗಳನ್ನು ತರಿಸಿಕೊಂಡು, ತಮ್ಮ ದೇಶ ಭಾಷೆಗೆ ತರ್ಜುಮೆ ಮಾಡಿ, ತಮ್ಮ ದೇಶದ ಜನತೆಗೆ ಬಿಡುಗಡೆ ಮಾಡುತ್ತಾರೆಂದು ಕೇಳಿದ್ದೇವೆ. ನಮ್ಮ ದೇಶದಲ್ಲಿ ಮುಕ್ಕಾಲು ಪಾಲು ಜನರಿಗೆ ಹಿಂದಿ ಬರುತ್ತದೆ.  ಅದೇ ನನ್ನ ಅನುಭವದ ಪ್ರಕಾರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ೭-೮ ವರ್ಷದ ಮಕ್ಕಳು ಆಡುತ್ತಲೇ ಹಿಂದಿ ಅಥವಾ ಉರ್ದು,ತೆಲುಗು, ಕನ್ನಡ ಕಲಿತಿರುತ್ತಾರೆ. ಇನ್ನು ಶಾಲೆಗೆ ಹೋಗಿ ಎಸ್.ಎಸ್.ಎಲ್.ಸಿ ವರೆಗೂ ಓದಿದರೆ, ಇಂಗ್ಲೀಷ್ ಭಾಷೆ ಕಲಿತಿರುತ್ತಾರೆ. ಅವರು ಅವಕಾಶ ಸಿಕ್ಕಿದರೆ, ಪ್ರಪಂಚದಲ್ಲಿ ಎಲ್ಲಿ ಬೇಕಾದರು ಬದುಕುತ್ತೇವೆ ಎನ್ನುತ್ತಾರೆ. ಅಕ್ಕಪಕ್ಕದ ರಾಜ್ಯಗಳೆಂದರೆ ಅವರಿಗೆ ಸೋದರರಿದ್ದಂತೆ, ಅದೇ ನಮಗೆ ಬೇರೆ ರಾಜ್ಯಗಳಿಗೆ ಹೋದರೆ, ಏನು ಕೇಳುವುದು ಎಲ್ಲಿ ಹೋಗುವುದು ಎನ್ನುವಂತಾಗುತ್ತದೆ. ಇದರಿಂದ ಕೆಲವು ಸಾರಿ ಕನ್ನಡಿಗರಾದ ನಾವು ಹಿಂದುಳಿಯುತ್ತೇವೆ.
ಇಲ್ಲಿ ಒಂದು ಉದಾಹರಣೆ ತಮಗೆ ಕೊಡಲಿಚ್ಚಿಸುತ್ತೇನೆ. ನಮ್ಮ ಪರಿಚಯಸ್ಠರೊಬ್ಬರ ಹುಡುಗ, ಒಳ್ಳೆಯ ಬುದ್ದಿವಂತ, ಆದರೆ ಓದಿದ್ದು ಕನ್ನಡ ಮಾಧ್ಯಮದಲ್ಲಿ ಪದವಿ ನಂತರ ಕಾನೂನು ಪದವಿ. ಆದರೆ, ಆ ಹುಡುಗನಿಗೆ ಒಂದು ತೊಂದರೆ ಎಂದರೆ ಇಂಗ್ಲೀಷ್ ಮಾತನಾಡಲು ಬರುವುದಿಲ್ಲ. ಹಿಂದಿಯಂತು ಇಲ್ಲವೇ ಇಲ್ಲ. ಬದುಕಲು ಸಾಕಷ್ಟು ಅವಕಾಶಗಳಿವೆ ಆದರೆ ಅವನಿಗೆ ಭಾಷೆ ಬರದಿರುವುದು ಇದೊಂದು ಅಡ್ಡಗೋಡೆ.
ಬಳ್ಳಾರಿಯ ೮ ವರ್ಷದ ಮುಸ್ಲಿಂ ಹುಡುಗಿ, ತನ್ನ ಕುಟುಂಬದ ಸಮಸ್ಯೆ ಹೇಳಿಕೊಳ್ಳಲು ಒಬ್ಬಳೇ ರೈಲಿನಲ್ಲಿ  ದೆಹಲಿಗೆ ಹೋಗಿ ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ಬೇಟಿ ಮಾಡಿ ಬಂದಿದ್ದಳು. ಅದು ಪತ್ರಿಕೆಯಲ್ಲಿ ದಿಲ್ಲಿ ದೂರ್ ನಹಿ ಎಂಬ ಶೀರ್ಷಿಕೆಯಡಿ ಪ್ರಕಟವಾಗಿತ್ತು. ಅದೇ ನಾವು ಕನ್ನಡಿಗರು ಹೋಗಲು ಸಾಧ್ಯವೇ?
ಇದೇ ಸಮಸ್ಯೆಯನ್ನು ನಮ್ಮ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ ದೇವೇಗೌಡರವರು ಎದುರಿಸಿದ್ದರು. ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆಯ ದಿನ ಬಾವುಟ ಹಾರಿಸಿ ಹಿಂದಿಯಲ್ಲಿ ಭಾಷಣ ಮಾಡಲು ತುಂಬಾ ಕಷ್ಟಪಟ್ಟರೆಂದು ಕೇಳಿದ್ದೇವೆ. ದೇಶ ಭಾಷೆ, ರಾಜ್ಯ ಭಾಷೆ, ಮಾತೃ ಭಾಷೆ ಕಲಿತರೆ ಚೆನ್ನ ಇಲ್ಲವಾದರೆ ನಾವು ಒಂದು ರೀತಿಯಲ್ಲಿ ಅನಾಥರಾಗುತ್ತೇವೆ. ಅಲ್ಲವೆ? ವಂದನೆಗಳೊಡನೆ.

ಪಿಸುಮಾತು ಮಂಗಳ, 05/15/2012 - 20:40

@ Nanjunda Raju Raju
ಹಿಂದುವಿಗೂ ಹಿಂದಿಗೂ ಎಲ್ಲಿಯ ಸಂಬಂಧ ಸ್ವಾಮೀ ? ನಾವು ಸ್ವಾಭೀಮಾನಿಗಳಲ್ಲದಿರುವುದಕ್ಕೇ ಹಿಂದಿಯನ್ನು ನಮ್ಮ ಮೇಲೆ ಹೇರುತ್ತಿರುವುದು.
"ಚೀನಾ, ಜಪಾನ್, ರಷ್ಯ, ತಮ್ಮ ರಾಷ್ಟ್ರ ಭಾಷೆಗಳನ್ನು ಬಿಟ್ಟುಕೊಡುವುದಿಲ್ಲ." ಹಾಗಂತ ನಮ್ಮದು ಹಿಂದಿ ರಾಷ್ಟ್ರಭಾಷೆ ಅಂತ ಹೇಳಲು ಹೊರಟಿದ್ದೀರಾ ? ಹಿಂದಿಯ ಜೊತೆ ಕನ್ನಡವೂ ರಾಷ್ಟ್ರಭಾಷೆಯೇ. ಹಿಂದಿಗೆ ಮಾತ್ರ ಯಾವ ವಿಶೇಷ ಸ್ಥಾನಮಾನವೂ ಇಲ್ಲ. 
"ನಮ್ಮ ದೇಶದಲ್ಲಿ ಮುಕ್ಕಾಲು ಪಾಲು ಜನರಿಗೆ ಹಿಂದಿ ಬರುತ್ತದೆ." ಅನ್ನುವುದು ತಪ್ಪು. ಸುಮಾರು ಶೇಕಡಾ ೪೦%ರಷ್ಟು ಜನ ಮಾತ್ರ ಹಿಂದಿ ಮಾತಾಡುತ್ತಾರೆ. 
"ಅದೇ ನನ್ನ ಅನುಭವದ ಪ್ರಕಾರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ೭-೮ ವರ್ಷದ ಮಕ್ಕಳು ಆಡುತ್ತಲೇ ಹಿಂದಿ ಅಥವಾ ಉರ್ದು,ತೆಲುಗು, ಕನ್ನಡ ಕಲಿತಿರುತ್ತಾರೆ." ಕೆಲವೊಂದು ಕಡೆ ಹಿಂದಿ/ಉರ್ದು/ ಮರಾಠಿ ಪ್ರಭಾವ ಇರುವ ಕಡೆ ಈ ರೀತಿ ಇದೆ. ಮತ್ತು ಸಹಜ ಕೂಡಾ. ಆದರೆ ಇದು ತುಂಬಾ ವಿರಳ.  ಆಂಧ್ರಕ್ಕೆ ಹೊಂದಿಕೊಂಡ ಗಡಿಭಾಗದಲ್ಲಿ ತೆಲುಗು, ತಮಿಳುನಾಡು ಗಡಿಭಾಗದಲ್ಲಿ ತಮಿಳು ಸಹಜವಾಗಿಯೇ ಮಕ್ಕಳು ಕಲಿಯುತ್ತಿದ್ದಾರೆ. ಅದಕ್ಕಾಗಿ ಇಡೀ ಕರ್ನಾಟಕದವರ ಮೇಲೆ ಹಿಂದಿ ಹೇರಿಕೆ ಅಕ್ಷಮ್ಯ. ನೀವು ಕೊಟ್ಟ ಉದಾಹರಣೆಯಲ್ಲಿ ಹುಡುಗನಿಗೆ ಇಂಗ್ಲೀಷ್ ಬಾರದಿದ್ದರಿಂದ ತೊಂದರೆ ಆಗಿದೆ. ಅದನ್ನು ನಾನೂ ಒಪ್ಪುತ್ತೇನೆ. ಕನ್ನಡದ ಜೊತೆ ಎಲ್ಲರಿಗೂ ಇಂಗ್ಲೀಷ್ ಕಲಿಸಬೇಕಾಗಿದೆ. ಆದರೆ ಹಿಂದಿ ಹೇರಿಕೆ ಮಾಡಿ ಕನ್ನಡದ ವಿದ್ಯಾರ್ಥಿಗಳು ಇಂಗ್ಲೀಷನ್ನೂ ಪೂರ್ಣ ಪ್ರಮಾಣದಲ್ಲಿ ಕಲಿಯಲು ಆಗದಂತೆ ಮಾಡಲಾಗಿದೆ.  ಮುಸ್ಲಿಂ ಹುಡುಗಿಗೆ ಸಹಜವಾಗಿ ಹಿಂದಿ ಬರುತ್ತದೆ. ಉರ್ದು ಹಾಗೂ ಹಿಂದಿಗೆ ಸಾಮ್ಯತೆ ಇರುವುದರಿಂದ ಅವರು ಬೇಗ ಹಿಂದಿ ಕಲಿಯುವ ಸಾಧ್ಯತೆ ಇದೆ. ಆದರೆ ಕನ್ನಡಿಗರಿಗೆ ಕಷ್ಟ. ಕೆಂಪು ಕೋಟೆಯ ಮೇಲೆ ಹಿಂದಿಯಲ್ಲೇ ಭಾಷಣ ಮಾಡಬೇಕು ಎಂದು ಸಂವಿಧಾನದಲ್ಲಿ ಇಲ್ಲವೆಂದು ನಾನು ಭಾವಿಸಿದ್ದೇನೆ. ಒಂದು ವೇಳೆ ಇದ್ದರೆ ಅದು ತಪ್ಪು. ದೇಶದ ಹದಿನೆಂಟು ಭಾಷೆಗಳಲ್ಲಿ ಯಾವುದರಲ್ಲಾದರೂ ಭಾಷಣ ಮಾಡುವ ಆಯ್ಕೆ ಇರಬೇಕು. (ಇದೆ ಎಂದು ನನ್ನ ಭಾವನೆ). ಹಿಂದಿಯೊಂದೇ ರಾಷ್ಟ್ರಭಾಷೆ ಎಂಬ ಮೂಢ ನಂಬಿಕೆ ದೇವೇಗೌಡರಿಗೂ ಇರಬಹುದು. ದೇಶಭಾಷೆ ಅಂದರೆ ಹಿಂದಿಯೊಂದೇ ಅಲ್ಲ. ಅದನ್ನು ಕಡ್ಡಾಯವಾಗಿ ಕಲಿಯುವ ಅಗತ್ಯ ಇಲ್ಲ. ಕನ್ನಡದ ಜೊತೆ ಆಂಗ್ಲ ಕಲಿತರೆ ನಾವು ಅನಾಥರಾಗುವುದಿಲ್ಲ. ಆಸಕ್ತಿ ಹಾಗೂ ಸಾಮರ್ಥ್ಯ ಇರುವವರು ಫ್ರೌಢಶಾಲೆಯಿಂದ ಅಥವಾ ಪಿಯುಸಿಯಿಂದ ಹಿಂದಿಯನ್ನು ಒಂದು ಭಾಷೆಯಾಗಿ ತೆಗೆದುಕೊಂಡು ಕಲಿಯುವ ವ್ಯವಸ್ಥೆ ಆಗಬೇಕು. ಅಲ್ಲಿಯವರೆಗೆ ಕನ್ನಡ ಇಂಗ್ಲೀಷ್ ಎರಡೇ ಭಾಷೆ ಸಾಕು. ಹಿಂದಿ ಹೇರಿಕೆ ಕನ್ನಡಿಗರಿಗೆ ಮಾರಕ. ಹಿಂದಿಯ ಮಕ್ಕಳು ಇಂದು ಎರಡೇ ಭಾಷೆ ಕಲಿಯುವುದರಿಂದ ನಮಗಿಂತಾ ಮುಂದಿದ್ದಾರೆ. ಕನ್ನಡಿಗರ ಮೇಲೆ ಹಿಂದಿ ಹೇರಿ ನಮ್ಮನ್ನು ತುಳಿಯಲಾಗುತ್ತಿದೆ.

Nanjunda Raju Raju ಶುಕ್ರ, 05/25/2012 - 12:53

ಮಾನ್ಯ ಶ್ರೀಪತಿಯವರೇ, ನನಗೆ ತಿಳಿದ ಮಟ್ಟಿಗೆ ನಮ್ಮ ರಾಷ್ಟ್ರಭಾಷೆ ಹಿಂದಿ ಎಂದು ತಿಳಿದಿದ್ದೇನೆ. ಹಾಗಾದರೆ ನಮ್ಮ ರಾಷ್ಟ್ರ ಭಾಷೆ ಯಾವುದು. ಕನ್ನಡ ನಮ್ಮ ರಾಜ್ಯ ಭಾಷೆ ಎಂದು ತಿಳಿದಿದ್ದೇನೆ.


 ಪ್ರಸ್ತುತ ನಾವು ಬದುಕಬೇಕಾದರೆ, ಅನಿವಾರ್ಯವಾಗಿ ಹಲವು ಭಾಷೆಗಳನ್ನು ಕಲಿಯಬೇಕಾಗುತ್ತದೆ. ನಾವು ಕರ್ನಾಟಕದಲ್ಲಿ ಹುಟ್ಟಿ ಹೊರಗೆ ಎಲ್ಲಿಯೂ ಹೋಗುವುದಿಲ್ಲ ಇಲ್ಲಿಯೇ ಬದುಕುತ್ತೇನೆ ಎನ್ನುವವನಾದರೆ, ಕನ್ನಡ ಮಾತ್ರ ಸಾಕು. ಬದುಕಬಹುದು. ಅದೇ ಒಬ್ಬ ವ್ಯಾಪಾರಸ್ಠ, ತನ್ನ ವ್ಯಾಪಾರದಲ್ಲಿ ಪ್ರಗತಿ ಸಾಧಿಸಲು ಮನಸ್ಸು ಒಪ್ಪದಿದ್ದರೂ ಆಯಾ ಭಾಷೆಗಳನ್ನು ಅನಿವಾರ್ಯವಾಗಿ ಕಲಿಯಬೇಕಾಗುತ್ತದೆ. ಇದಕ್ಕೆ ಉದಾಹರಣೆ, ಬೆಂಗಳೂರು ನಗರದ ಸಿಟಿ ಮಾರುಕಟ್ಟೆಯ ವ್ಯಾಪಾರಿಗಳು ಮತ್ತು ದಳ್ಳಾಳಿಗಳು ಎಲ್ಲಾ ಭಾಷೆಗಳನ್ನು ಕಲಿತಿರುತ್ತಾರೆ. ದೇಶದ ಪ್ರಮುಖ ಕಂಪನಿಗಳಲ್ಲಿ ಕಾರ್ಯನಿರ್ವಾಹಕನಾಗಿ ಕೆಲಸ ಮಾಡುವವನು ಕಾರ್ಯನಿಮಿತ್ತ ಆಯಾರಾಜ್ಯಗಳಿಗೆ ಹೋದಾಗ ಆಯಾರಾಜ್ಯದ ಭಾಷೆಗಳಲ್ಲಿ ಮಾತನಾಡಿದರೆ, ಅಥವಾ ಕನಿಷ್ಠ ಹಿಂದಿಯಲ್ಲಾದರೂ ಮಾತನಾಡಿದರೆ, ಕೆಲಸ ಸುಗಮವಾಗುತ್ತದೆ. ಇಲ್ಲವಾದರೆ ಅವರು ಹೇಳಿದ್ದು ಅವರಿಗೆ ನಾವು ಹೇಳಿದ್ದು ನಮಗೆ.


ಇನ್ನು ಒಬ್ಬ ವಕೀಲನ ಬಗ್ಗೆ ಹೇಳಿದ್ದೆ. ಅವನಿಗೆ ಇಂಗ್ಲೀಷ್ ಬಾರದಿದ್ದರೆ ಹೋಗಲಿ ಅನಿವಾರ್ಯವಾಗಿ ದೆಹಲಿಯ ಸುಪ್ರೀಂ ಕೋರ್ಟಿಗೆ ಹೋಗಿ ಬರಬೇಕಾದರೆ, ಕನಿಷ್ಟ ಹಿಂದಿ ಬಂದಿದ್ದರೆ, ಸುಗುಮವಾಗಿ ಕಾರ್ಯನಿರ್ವಹಿಸಿ ಬರಬಹುದಿತ್ತು.


ನೀವೇ ಒಪ್ಪಿಕೊಂಡಿರುವಂತೆ, ಅದೃಷ್ಟವಾಶಾತ್ ಆಗಿಯೋ ಅಥವಾ ಹಿಂದಿಗೆ ಹತ್ತಿರವಾಗಿರುವ ಮಾತೃ ಭಾಷೆ ಇರುವವರಿಗೆ   ಈ ಭಾಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ಹೇಗಾದರು ಬದುಕುತ್ತಾರೆ.


ಕೆಂಪು ಕೋಟೆಯ ಮೇಲೆ ಹಿಂದಿ ಭಾಷೆಯಲ್ಲಿಯೇ ಭಾಷಣ ಮಾಡಬೇಕೆಂದು ಸಂವಿಧಾನದಲ್ಲಿ ಕಡ್ಡಾಯವಿಲ್ಲವೆಂದು ನಾನು ಭಾವಿಸುತ್ತೇನೆ. ಆದರೆ, ಅದು ನಮ್ಮ ರಾಷ್ಟ್ರ ಭಾಷೆ ಅಲ್ಲಿ ಸೇರುವ ಎಲ್ಲಾ ಜನರಿಗೂ ಹಿಂದಿ ಅರ್ಥವಾಗುತ್ತದೆ. ಎಂಬ ಭಾವನೆಯಿಂದ ಹಿಂದಿ ಭಾಷಣ ಮಾಡಿರಬಹುದು.


ನಾನು ಹೇಳಿವುದಿಷ್ಟೆ ಪ್ರಸ್ತುತ ಪ್ರಪಂಚದಲ್ಲಿ ಬದುಕಬೇಕಾದರೆ, ಮಾತೃ ಭಾಷೆ, ದೇಶ ಭಾಷೆ, ನೆರೆ ರಾಜ್ಯ ಭಾಷೆಗಳನ್ನು ಕಲಿತಾಗ ಎಲ್ಲರೂ ಸಾಮರಸ್ಯದಿಂದಿರಬಹುದು.


 ನನ್ನ ಪ್ರಶ್ನೆ ಇಷ್ಟೆ  ಕನ್ನಡಿಗರಿಗೆ ಕನ್ನಡ ಭಾಷೆ ಮಾತ್ರ ಸಾಕೆ? ಈಗಿನ ಕಂಪ್ಯೂಟರ್ ಯುಗದಲ್ಲಿ ನಮ್ಮ ಮಾತೃ ಭಾಷೆಯೊಂದಿಗೆ ಎಲ್ಲಾ ಭಾಷೆಗಳನ್ನು ಕಲಿತಾಗ ನಮ್ಮ ಮನಸ್ಸು ಹೃದಯ ವಿಶಾಲವಾಗುತ್ತದೆ. ಅಲ್ಲವೇ? ವಂದನೆಗಳೊಡನೆ.


 

ಪಿಸುಮಾತು ಶುಕ್ರ, 05/25/2012 - 15:31

ಮಾನ್ಯ Nanjunda Raju ಅವರೆ,


ನೀವು ಹಿಂದಿಯ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದೀರಿ. "ನಮ್ಮ ರಾಷ್ಟ್ರಭಾಷೆ ಹಿಂದಿ" ಎಂದು ಹಿಂದಿನಿಂದಲೂ ನಮ್ಮನ್ನು ನಂಬಿಸುತ್ತಾ, ಅದೊಂದೇ ರಾಷ್ಟ್ರಭಾಷೆ, ಉಳಿದವು ರಾಜ್ಯಭಾಷೆಗಳು ಎಂದು ನಂಬಿಸಿದ್ದಾರೆ. ಇದೂ ಕೂಡಾ ಕೇಂದ್ರದಲ್ಲಿ ಪ್ರಭಲವಾಗಿರುವ ಹಿಂದೀ ರಾಜಕಾರಣಿಗಳ ಕುತಂತ್ರ. ಅವರೆದುರು ಧನಿ ಎತ್ತಲು ಸ್ಥೈರ್ಯವಿಲ್ಲದ ನಮ್ಮ ಕನ್ನಡ ರಾಜಕಾರಣಿಗಳು ಅದನ್ನೇ ಮಹಾ ಪ್ರಸಾದ ಎಂದು ತೆಗೆದುಕೊಂಡು ಪಠ್ಯದಲ್ಲೂ ಹಿಂದಿಯೇ ರಾಷ್ಟ್ರಭಾಷೆ ಎಂದೆಲ್ಲಾ ಸೇರಿಸಿ ಕನ್ನಡವನ್ನು ಕೆಳಗಿಳಿಸಿದ್ದಾರೆ. ನಮ್ಮ ಸಂವಿಧಾನದಲ್ಲಿ ರಾಷ್ಟ್ರಭಾಷೆ ಅನ್ನುವುದು ಯಾವುದೂ ಇಲ್ಲ. ದೇಶದ ಒಟ್ಟು 22 ಭಾಷೆಗಳು (ಕನ್ನಡವೂ ಸೇರಿ) ಆಡಳಿತ ಭಾಷೆಗಳೆಂದು ತಿಳಿಸಲಾಗಿದೆ. ಅಂದರೆ ಎಲ್ಲವೂ ಸರಿಸಮಾನವೆಂದೇ ಅರ್ಥ. ಹಿಂದಿಗೆ ಯಾವ ಪ್ರಾಮುಖ್ಯತೆಯನ್ನೂ ಸಂವಿಧಾನ ನೀಡಿಲ್ಲ. ಅದನ್ನು ನೀಡಿರುವುದು ಬಡಪಾಯಿ ಕನ್ನಡಿಗರು ಮಾತ್ರ. [ ಗುಜರಾಥ್ ಹೈಕೋರ್ಟ್‌‌ನ ಈ ತೀರ್ಪು ಗಮನಿಸಿ : http://articles.timesofindia.indiatimes.com/2010-01-25/india/28148512_1_national-language-official-language-hindi ]ಇನ್ನುಳಿದಂತೆ ಪ್ರಸ್ತುತ ನಾವು ಎಷ್ಟು ಭಾಷೆ ಕಲಿತರೂ ಒಳ್ಳೆಯದೇ. ಅದರ ಬಗ್ಗೆ ವಿರೋಧವಿಲ್ಲ. ಹಿಂದಿಯ ಅಗತ್ಯ ಇರುವವರು ಮೂರರಿಂದ ಆರು ತಿಂಗಳಲ್ಲಿ ಮಾತಾಡಲು ಕಲಿಯಬಹುದು. ಅದಕ್ಕಾಗಿ ವಿದ್ಯಾರ್ಥಿಗಳಿಗೆ ಅದನ್ನು ಹೇರುವ ಅಗತ್ಯ ಇಲ್ಲ. ಆದರೆ ಹಿಂದಿಯ ಹೇರಿಕೆ ಒಪ್ಪುವಂತಹುದಲ್ಲ. ಇಲ್ಲಿ ಒಂದು ಗೊಂದಲ ಗಮನಿಸಿ, ಹಿಂದಿ ನಮ್ಮ ರಾಷ್ಟ್ರಭಾಷೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಅದನ್ನು ಕಲಿಸುತ್ತಾರೆ ಎಂದೇ ವಾದಿಸಿದರೆ, ಒಂದು ವೇಳೆ ಹಿಂದಿಯ ಬದಲಾಗಿ ಸಂಸ್ಕೃತ ತೆಗೆದುಕೊಂಡರೆ ? ಆಗ ಮಾತ್ರ ಹಿಂದಿ ರಾಷ್ಟ್ರಭಾಷೆಯಾಗಿರದೇ ಸಂಸ್ಕೃತ ಆಗಿ ಹೋಗುತ್ತದೆಯೇ ? ಸಂಸ್ಕೃತ ಕಲಿತ ವಿದ್ಯಾರ್ಥಿ ದೆಹಲಿ ಹೋಗಿ ಸಂಸ್ಕೃತದಲ್ಲಿ ಮಾತಾಡಲು ಸಾಧ್ಯವೇ ? ಅಂದರೆ ಇದರರ್ಥ ಇಷ್ಟೇ, ಇದೆಲ್ಲಾ ಹಿಂದೀ ರಾಜಕಾರಣಿಗಳ ಕುತಂತ್ರ. ತಮ್ಮ ಭಾಷೆಯನ್ನು ಹೇಗಾದರೂ ಮಾಡಿ ಎಲ್ಲರಿಗೂ ಕಲಿಸಬೇಕು ಅನ್ನುವ ಯೋಜನೆ. ತಾವು ಮಾತ್ರ ಬೇರೆ ಭಾಷೆ ಕಲಿಯಬಾರದು. ಆದರೆ ಉಳಿದವರು ತಮ್ಮ ಭಾಷೆ ಕಲಿಯಬೇಕು.


ಹಿಂದಿ ಕಲಿತರೆ ದೆಹಲಿಗೆ ಹೋಗಿ ಬರಬಹುದು ಅನ್ನುವುದು ಸರಿ. ಆದರೆ ಅದರ ಬದಲು ಇಂಗ್ಲೀಷ್ ಕಲಿತರೆ ದೇಶ ವಿದೇಶಗಳಿಗೂ ಹೋಗಿ ಬರಬಹುದು. 


ಕನ್ನಡದ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಹತ್ತನೇ ತರಗತಿ ವರೆಗೆ ಕಲಿಸಬೇಕು. ಒಂದನೇ ತರಗತಿಯಿಂದಲೇ ಇಂಗ್ಲೀಷನ್ನು ಒಂದು ಕಡ್ಡಾಯ ಭಾಷೆಯಾಗಿ ಕಲಿಸಿದರೆ ಅದು ಕರಗತವಾಗುತ್ತದೆ. ಹೈಸ್ಕೂಲಿನಿಂದ ಹಿಂದಿ ಅಥವಾ ಅವರು ಇಚ್ಚಿಸುವ ಯಾವುದಾದರೊಂದು ಭಾಷೆಯನ್ನು ಐಚ್ಚಿಕವಾಗಿ ತೆಗೆದುಕೊಳ್ಳುವಂತಿದ್ದರೆ ಸಾಕು. ಓದಿನಲ್ಲಿ ಮುಂದಿರುವ ವಿದ್ಯಾರ್ಥಿಗಳು ಅದನ್ನು ತೆಗೆದುಕೊಳ್ಳುತ್ತಾರೆ. ಕನ್ನಡ - ಇಂಗ್ಲೀಷ್‌ ನಲ್ಲೇ ಕಷ್ಟ ಪಡುವ ವಿದ್ಯಾರ್ಥಿಗಳು ಎರಡು ಭಾಷೆಗಳನ್ನು ಕಲಿಯುತ್ತಾರೆ. ಆದರೆ "ಹಿಂದಿ ನಮ್ಮ ರಾಷ್ಟ್ರಭಾಷೆ" ಎಂದು ಸುಳ್ಳು ಹೇಳಿ ಅದನ್ನು ಹೇರುವುದನ್ನು ನಾನು ವಿರೋಧಿಸುತ್ತೇನೆ.

maaysa ಶುಕ್ರ, 07/27/2012 - 20:33

ನುಡಿ ಅರಿವನ್ನು ಗಳಿಸಲು ಬೆಳೆಸಲು ಇರುವ ಒಂದು ಟೂಲ್.

ನಮಗೆ ಆಸಕ್ತಿಯಿರುವ ಅರಿವನ್ನು ತಿಳಿಯಲು ಯಾವ ನುಡಿಯಲ್ಲಿ ಆ ಅರಿವು ಹೇರಳ ಹಾಗು ಸರಳವಾಗಿ ಸಿಗುವುದೋ ಆ ಭಾಷೆ ಕಲಿಯಬೇಕು.

 

ಇಂಗ್ಲೀಶು ಒಂದು ಸಾಕು ತುಂಬಾ ಕಡಮೆ ಭಾಷೆ ಕಲಿಯಬೇಕು ಅಂತ ಇರೋರಿಗೆ.

Nanjunda Raju Raju ಶನಿ, 07/28/2012 - 11:59

ಮಾನ್ಯರೇ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

Nanda Kumar ಧ, 04/03/2013 - 20:01

 ಭಾಷೆ ಎಷ್ಟಾದರೂ ಕಲಿಯಲಿ ಜ್ನಾನಿಯಾಗುತ್ತಾರೆ. ಆದರೆ ಸಾಧ್ಯವಾದಷ್ಟು ಕನ್ನಡ ಬಳಸಲಿ. 

Nanjunda Raju Raju ಗುರು, 04/04/2013 - 15:50

ಮಾನ್ಯರೇ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

bhanu ಶನಿ, 01/25/2014 - 16:52

ನಾವು ಕನ್ನಡದವರೇ ಇರಬಹುದು ಆದರೆ ನಮಗೆ ಎಲ್ಲಾ ಭಾಷೆ ಅಗತ್ಯ ಇರುತ್ತದೆ.

ನನಗೂ ಕೂಡ ಕನ್ನಡ ಬಿಟ್ಟು ಬೇರೆ ಬರೋಲ್ಲ ಕಲಿಯೋಕೂ ಯಾಕೋ ಹಾಗುತ್ತಿಲ್ಲ

ಯಾಕೆ? ತಿಳಿಯದು... ನನಗೆ ತಿಳಿದಿರುವ ಮಟ್ಟಿಗೆ ಎಲ್ಲಾ ಭಾಷೆಯನ್ನೂ ನಾವು ಕಲಿಯಬೇಕು...

Nanjunda Raju Raju ಶನಿ, 01/25/2014 - 20:05

ಮಾನ್ಯ ಭಾನುರವರೇ, ನಿಮ್ಮ ಅಭಿಪ್ರಾಯ ಸರಿ. ಬಹುತೇಕ ಎಲ್ಲಾ ಕನ್ನಡಿಗರಿಗೂ ಇದೇ ಸಮಸ್ಯೆ. ಸಾಮಾನ್ಯವಾಗಿ ಇಂಗ್ಲೀಷ್, ಹಿಂದಿ,ಕನ್ನಡ ಭಾಷೆಗಳನ್ನು ಕಲಿಯಲು ಅದು ಒಂದು ವಯಸ್ಸು ಆ ವಯಸ್ಸಿನಲ್ಲಾದರೆ ಸುಲಭವಾಗಿ ಕಲಿಯಬಹುದು. ತಾತ್ಸಾರ ಮಾಡಿದರೆ ಪಶ್ಚ್ಯತಾಪ ಪಡಬೇಕಾಗುತ್ತದೆ. ಉದಾಹರಣೆಗೆ ಹೇಳುವುದಾದರೆ, ಜೀವ ವಿಮಾ ಪಾಲಿಸಿ ತೆಗೆದುಕೊಂಡರೆ ಅದರಲ್ಲಿ ನಿಯಮಗಳು ನಿಬಂಧನೆಗಳೆಲ್ಲಾ ಇಂಗ್ಲೀಷಿನಲ್ಲೇ ಇರುತ್ತವೆ. ಅದನ್ನು ಬೇರೆಯವರಿಂದ ಓದಿಸಿ ತಿಳಿದುಕೊೞಬೇಕು. ಇಲ್ಲವಾದರೆ ಅವರು ಕೊಟ್ಟದ್ದು ನಾವು ತೆಗೆದುಕೊಂಡದ್ದು ಅಷ್ಟೆ. ನಮಗೆ ಸಂವಿದಾನದ ಹಕ್ಕಿದ್ದರೂ ಕನ್ನಡದಲ್ಲೇ ಕೊಡಿ ಎಂದು ಹೇಳಲು ಬರುವುದಿಲ್ಲ. ಹಾಗೆಯೇ ವಾಹನದ ವಿಮೆ ಅದು ಅಷ್ಟೆ ಅದೂ ಕೂಡ ಇಂಗ್ಲೀಷಿನಲ್ಲಿಯೇ ಇರುತ್ತದೆ. ಅದೂ ಹೋಗಲಿ ಎಂದರೆ, ವಾಹನ ಸಂಖ್ಯೆಯನ್ನು  ನಾವು ಕನ್ನಡಿಗರೆಂದು ಹಿಂದೆಯೋ ಮುಂದೆಯೋ ಒಂದು ಕಡೆ ಕನ್ನಡದಲ್ಲಿ ಬರೆಸಿದರೆ ನಮ್ಮ ಪೊಲೀಸರೇ ಭಾರತೀಯ ಮೋಟಾರು ಕಾಯಿದೆಯಂತೆ ಮೊಕದ್ದಮೆ ಹೂಡುತ್ತಾರೆ. ಅದು ನ್ಯಾಯಾಲದಲ್ಲಿ ದಂಡಕಟ್ಟಬೇಕು. ಹೀಗಿದೆ ನಮ್ಮ ಪರಿಸ್ಥಿತಿ. ಇನೂ ಮುಖ್ಯವಾಗಿ ಹೇಳಬೇಕೆಂದರೆ, ಕನ್ನಡಿಗರೆಂದರೆ ಕೇವಲ ಮಾತನಾಡುವ ಕನ್ನಡಿಗರಷ್ಟೆ.  ಬರೆಯಲು, ಕನ್ನಡ ಪತ್ರಿಕೆಗಳನ್ನು ಪುಸ್ತಕಗಳನ್ನು ಓದುವ ಕನ್ನಡಿಗರು ನಾವು.

 

usha moorthy ಶನಿ, 02/01/2014 - 22:22

ಮಾನ್ಯ ನಂಜುಂಡ ರಾಜು ಅವರೇ

ಕನ್ನಡಿಗರು ಮಾತ್ರವೇ  ಬೇರೆ ಯಾವುದೇ ಭಾಷೆಯ ಜನರೊಂದಿಗೆ ಸಲೀಸಾಗಿ ಅವರವರ ಭಾಷೆಗಳಲ್ಲಿಯೇ (ಅದು ಹರಕು ಮುರುಕಾದರೂ ಸರಿಯೇ) ಮಾತನಾಡುವ ಪ್ರವೃತ್ತಿ ಯುೞವರು.

ಬೇರೆ ಭಾಷೆಗಳನ್ನು ಕಲಿಯಬೇಡವೇ ಎಂದು ಪ್ರಶ್ನಿಸಿದ್ದಿರಿ. ಕನ್ನಡಿಗರು ಶುದ್ಧ ಕನ್ನಡ ಒಂದು ಬಿಟ್ಟು ಮತ್ತೆಲ್ಲ ಭಾಷೆಗಳನ್ನು ಸಲೀಸಾಗಿ ಮಾತನಾಡುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತಿಲ್ಲವೇ

ನಮ್ಮ ಯವ ಜನಾಂಗದ ಬಾಯಲ್ಲಿ ಮರೆತಾದರೂ ಒೞೆಯ ಕನ್ನಡವನ್ನು ಕೇಳುತ್ತಿರುವಿರಾ? ಕನ್ನಡ ಭಾಷೆಯನ್ನು ಪ್ರೀತಿಯಿಂದ ಓದುವವರ ಸಂಖ್ಯೆ ಗಮನಾರ್ಹವಾಗಿ ಇಳಿಮುಖವಾಗುತ್ತಿರುವುದು ತಿಳಿದಿದೆ ತಾನೆ? ನಾವಿಂದು ಮಾತೃಭಾಷೆಯೊಂದನ್ನು ಬಿಟ್ಟು ಉಳಿದೆಲ್ಲ ಭಾಷೆ

ಕಲಿಯುವ ಸಾಹಸ ಮಾಡುತ್ತಿರುವುದರಿಂದಲೇ ಯಾವುದೇ ಭಾಷೆಯಲ್ಲೂ ಪ್ರಾವೀಣ್ಯತೆ ಸಾಧಿಸಲು ಸಾಧ್ಯವಾಗದೇ , ಕೊನೆಗೆ ನಮ್ಮ ನಾಡು ನುಡಿಗಳಿಗೂ ಸಹ ಅನ್ಯರಾಗುತ್ತಿರುವುದು. ನಮ್ಮ ಜನ ಮೊದಲು ನಮ್ಮ ಭಾಷೆಯ ಮೇಲೆ ಹಿಡಿತ ಸಾಧಿಸಲಿ ನಂತರ ಬೇರೆ ಭಾಷೆಗಳನ್ನು 

ಅಗತ್ಯ ಬಿದ್ದರೆ ಕಲಿಯಲಿ. 

ವಂದನೆಗಳು

 

usha moorthy ಶನಿ, 02/01/2014 - 22:22

ಮಾನ್ಯ ನಂಜುಂಡ ರಾಜು ಅವರೇ

ಕನ್ನಡಿಗರು ಮಾತ್ರವೇ  ಬೇರೆ ಯಾವುದೇ ಭಾಷೆಯ ಜನರೊಂದಿಗೆ ಸಲೀಸಾಗಿ ಅವರವರ ಭಾಷೆಗಳಲ್ಲಿಯೇ (ಅದು ಹರಕು ಮುರುಕಾದರೂ ಸರಿಯೇ) ಮಾತನಾಡುವ ಪ್ರವೃತ್ತಿ ಯುೞವರು.

ಬೇರೆ ಭಾಷೆಗಳನ್ನು ಕಲಿಯಬೇಡವೇ ಎಂದು ಪ್ರಶ್ನಿಸಿದ್ದಿರಿ. ಕನ್ನಡಿಗರು ಶುದ್ಧ ಕನ್ನಡ ಒಂದು ಬಿಟ್ಟು ಮತ್ತೆಲ್ಲ ಭಾಷೆಗಳನ್ನು ಸಲೀಸಾಗಿ ಮಾತನಾಡುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತಿಲ್ಲವೇ

ನಮ್ಮ ಯವ ಜನಾಂಗದ ಬಾಯಲ್ಲಿ ಮರೆತಾದರೂ ಒೞೆಯ ಕನ್ನಡವನ್ನು ಕೇಳುತ್ತಿರುವಿರಾ? ಕನ್ನಡ ಭಾಷೆಯನ್ನು ಪ್ರೀತಿಯಿಂದ ಓದುವವರ ಸಂಖ್ಯೆ ಗಮನಾರ್ಹವಾಗಿ ಇಳಿಮುಖವಾಗುತ್ತಿರುವುದು ತಿಳಿದಿದೆ ತಾನೆ? ನಾವಿಂದು ಮಾತೃಭಾಷೆಯೊಂದನ್ನು ಬಿಟ್ಟು ಉಳಿದೆಲ್ಲ ಭಾಷೆ

ಕಲಿಯುವ ಸಾಹಸ ಮಾಡುತ್ತಿರುವುದರಿಂದಲೇ ಯಾವುದೇ ಭಾಷೆಯಲ್ಲೂ ಪ್ರಾವೀಣ್ಯತೆ ಸಾಧಿಸಲು ಸಾಧ್ಯವಾಗದೇ , ಕೊನೆಗೆ ನಮ್ಮ ನಾಡು ನುಡಿಗಳಿಗೂ ಸಹ ಅನ್ಯರಾಗುತ್ತಿರುವುದು. ನಮ್ಮ ಜನ ಮೊದಲು ನಮ್ಮ ಭಾಷೆಯ ಮೇಲೆ ಹಿಡಿತ ಸಾಧಿಸಲಿ ನಂತರ ಬೇರೆ ಭಾಷೆಗಳನ್ನು 

ಅಗತ್ಯ ಬಿದ್ದರೆ ಕಲಿಯಲಿ. 

ವಂದನೆಗಳು

 

usha moorthy ಶನಿ, 02/01/2014 - 22:22

ಮಾನ್ಯ ನಂಜುಂಡ ರಾಜು ಅವರೇ

ಕನ್ನಡಿಗರು ಮಾತ್ರವೇ  ಬೇರೆ ಯಾವುದೇ ಭಾಷೆಯ ಜನರೊಂದಿಗೆ ಸಲೀಸಾಗಿ ಅವರವರ ಭಾಷೆಗಳಲ್ಲಿಯೇ (ಅದು ಹರಕು ಮುರುಕಾದರೂ ಸರಿಯೇ) ಮಾತನಾಡುವ ಪ್ರವೃತ್ತಿ ಯುೞವರು.

ಬೇರೆ ಭಾಷೆಗಳನ್ನು ಕಲಿಯಬೇಡವೇ ಎಂದು ಪ್ರಶ್ನಿಸಿದ್ದಿರಿ. ಕನ್ನಡಿಗರು ಶುದ್ಧ ಕನ್ನಡ ಒಂದು ಬಿಟ್ಟು ಮತ್ತೆಲ್ಲ ಭಾಷೆಗಳನ್ನು ಸಲೀಸಾಗಿ ಮಾತನಾಡುತ್ತಿರುವುದು ನಿಮ್ಮ ಗಮನಕ್ಕೆ ಬರುತ್ತಿಲ್ಲವೇ

ನಮ್ಮ ಯವ ಜನಾಂಗದ ಬಾಯಲ್ಲಿ ಮರೆತಾದರೂ ಒೞೆಯ ಕನ್ನಡವನ್ನು ಕೇಳುತ್ತಿರುವಿರಾ? ಕನ್ನಡ ಭಾಷೆಯನ್ನು ಪ್ರೀತಿಯಿಂದ ಓದುವವರ ಸಂಖ್ಯೆ ಗಮನಾರ್ಹವಾಗಿ ಇಳಿಮುಖವಾಗುತ್ತಿರುವುದು ತಿಳಿದಿದೆ ತಾನೆ? ನಾವಿಂದು ಮಾತೃಭಾಷೆಯೊಂದನ್ನು ಬಿಟ್ಟು ಉಳಿದೆಲ್ಲ ಭಾಷೆ

ಕಲಿಯುವ ಸಾಹಸ ಮಾಡುತ್ತಿರುವುದರಿಂದಲೇ ಯಾವುದೇ ಭಾಷೆಯಲ್ಲೂ ಪ್ರಾವೀಣ್ಯತೆ ಸಾಧಿಸಲು ಸಾಧ್ಯವಾಗದೇ , ಕೊನೆಗೆ ನಮ್ಮ ನಾಡು ನುಡಿಗಳಿಗೂ ಸಹ ಅನ್ಯರಾಗುತ್ತಿರುವುದು. ನಮ್ಮ ಜನ ಮೊದಲು ನಮ್ಮ ಭಾಷೆಯ ಮೇಲೆ ಹಿಡಿತ ಸಾಧಿಸಲಿ ನಂತರ ಬೇರೆ ಭಾಷೆಗಳನ್ನು 

ಅಗತ್ಯ ಬಿದ್ದರೆ ಕಲಿಯಲಿ. 

ವಂದನೆಗಳು

 

Nanjunda Raju Raju ಭಾನು, 02/02/2014 - 09:09

ಮಾನ್ಯ ಉಷಾ ಮೂರ್ತಿಯವರೇ, ಕನ್ನಡ ಉಳಿಯಬೇಕೆಂದರೆ, ಎಲ್ಲಾ ರೀತಿಯಲ್ಲಿಯೂ ಕನ್ನಡ ಅನಿವಾರ್ಯವಾಗಬೇಕು. ಕಡ್ಡಾಯವೂ ಆಗಬೇಕು.

ಆಗ ನಮ್ಮ ಭಾಷೆ ಉಳಿಯುತ್ತದೆ. ಇದಕ್ಕೆ ಸರ್ಕಾರ, ಸಂಸದರು,ಶಾಸಕರು, ಅಧಿಕಾರಿಗಳು, ಮತ್ತು ನಾವು ಕನ್ನಡಿಗರು ಇಚ್ಚಾಶಕ್ತಿಯಿಂದ ಬಳಸಿದರೆ

ಕನ್ನಡ ಉಳಿಯುತ್ತದೆ. ಅದರಲ್ಲೂ ಮುಖ್ಯವಾಗಿ ಸರಕಾರಿ ಕಛೇರಿಗಳಲ್ಲಿ ಕನ್ನಡ ಹೊರತುಪಡಿಸಿ, ಬೇರೆ ಭಾಷೆ ಬಳಸದಂತೆ ಕಡ್ಡಾಯ ಮಾಡಬೇಕು.

ಇದಕ್ಕೆ ಸಂವಿದಾನ ಮುಂತಾದ ಸಬೂಬು ಹೇಳಿ ನುಣುಚಿಕೊೞುವುದು ಸರಿಯಲ್ಲ. ಈಗ ಆಡಳಿತದಲ್ಲಿ ಕಂಪ್ಯೂಟರೀಕರಣ ಎಂದು ಹೇಳುತ್ತಾ

ಅಲ್ಲಿಯೂ ಇಂಗ್ಲೀಷೇ ನುಸುಳುತ್ತದೆ. ನಮ್ಮ ನೆರೆ ರಾಜ್ಯಗಳಲ್ಲಿ ಈ ಗೊಂದಲ, ಸಮಸ್ಯೆ ಇಲ್ಲವೆಂದು ಕಾಣುತ್ತದೆ.

  • 7270 views