ನನ್ನ ಕನಸಿನ ರಾಣಿಗೆ ಯಾರೆ
ನನ್ನ ಕನಸಿನ ರಾಣಿಗೆ ಯಾರೆ ಯಾರೆ ನೀನು ಚೆಲುವೆ. ಎಲ್ಲಿ ನೀನು ಇರುವೆ, ಯಾವಾಗ ಇಲ್ಲಿ ಬರುವೆ. ಈಗ ಎಲ್ಲಿಗೆ ಹೋಗಿರುವೆ.
ನೀನು ಬರೆದ ಪತ್ರ ತಲುಪಿ ಎಪ್ಟೋ ದಿನಗಳಯ್ತು. ಆದರು ಸ್ವಲ್ಪ ಆಡ್ಚಸ್ಟ್ ಮಾಡ್ಕೊಳ್ತೀನಿ. ನೀನೇ ನನ್ನ ಜೀವ. ನೀನೇ ನನ್ನ ಹಾರ್ಟ್ಸ್ ಬೀಟ್ಸ್ ನಮ್ಮ ಈ ಬಂಧನ ಜನ್ಮ ಜನ್ಮಗಳ ಅನುಬಂಧನ. ನೀನು ನಕ್ಕರೆ ಹಾಲು ಸಕ್ಕರೆ. ಪ್ರೀತ್ಸೊದು ತಪ್ಪಾ ಅಂದೆ ನೀನು, ಪ್ರೀತ್ಸೆ ಪ್ರೀತ್ಸೆ ತಪ್ಪೇನಿಲ್ಲ ಎಂದಾಗ, ನಾನು ನೀನು ಜೋಡಿ ಎಂದು ಹಾಗೆ ಸುಮ್ಮನೆ. ಅರಮನೆಯಲ್ಲಿ ಪಯಣ ಬೆಳೆಸಿ ಸಾಗುತ ದೂರ ದೂರ ಅಂಬಾರಿಯಲ್ಲಿ ನಡೆದು, ಜಸ್ಟ್ ಮಾತ್ ಮಾತ್ನಲ್ಲಿ ಪ್ರೇಮಿ ನಂ.೧ ಅದೆ ನೀನು. ಮರುಭೂಮಿಯಂತಿದ್ದ ನನ್ನ ಮನದಲ್ಲಿ ಶಾಂತಿ ಕ್ರಾಂತಿ ಮಾಡಿ ನನ್ನ ಜೇವನ ಜ್ಯೊತಿ ಬೆಳಗಿಸಿ ಅಮರ ಜ್ಯೊತಿ ಮಾಡಿದ ಬೆಳದಿಂಗಳ ಬಾಲೆ. ಈ ಹುಡುಗಾಟದ ಜೇವನದಲ್ಲಿ, ಚೆಲ್ಲಟದ ಬದುಕು ನಡೆಸುತ್ತಿದ್ದ ದಾರಿ ತಪ್ಪಿದ ಲೋಕೇಶನ Lifeನಲ್ಲಿ ಮಿಂಚಿನ ಓಟದಂತೆ ಬಂದು ಸ್ಪೂರ್ತಿಯ ಜೋಶ್ ತುಂಬಿ ಸಕಲ ಕಲಾವಲ್ಲಭನನ್ನಾಗಿ ಮಾಡಿದ ಚೆಲುವಿನ ರಾಜಕುಮಾರಿಗೆ ಒಲವಿನ ಉಡುಗೊರೆಯಾಗಿ ಮುತ್ತಿನಹಾರ ಕೊಟ್ಟ ಆ ದಿನಗಲ ಜಾಲಿಡೇಸ್ಗಳು, ಅವಿಸ್ಮರಣೀಯ... ಏ ಚಂದ್ರಚಕೋರಿ ನಿನ್ನ ಕಣ್ಣಂಚಲಿ ಏನೋ ಒಂಧರಾ ಮೋಡಿ ಇದೆ ಎಂದು ನಿನ್ನ ಮೊದಲಾಸಲ ಪರಿಚಯದಲ್ಲಿ ನಮ್ಮ ಬೆಸುಗೆಯ ಸಂಗಮದಲ್ಲಿ ನನ್ನ ಸ್ವರ್ಶ ಸವಿದು, ನಾ ನಿನ್ನ ಮರೆಯಲಾರೆ, ನಾ ನಿನ್ನ ಬಿಡಲಾರೆ ಎಂದು ಲಾಲಿ ಹಾಡು ಹಾಡಿ, ಬೆಳದಿಂಗಳ ಬಾಲೆಗೆ, ಮಾತಾಡ್ ಮಾತಾಡು ಮಲ್ಲಿಗೆ ಕೊಟ್ಟಾ ಕೋಟಿಗೊಬ್ಬ ಸತ್ಯಹರಿಶ್ಚಂದ್ರ ನಾನು. ಲೋಕವೇ ಹೇಳಿದ ಮಾತಿದು ಪ್ರೀತಿ ಮಾಡಬಾರದು.ಆದರೂ ಮೊಗ್ಗಿನ ಮನಸಲ್ಲಿ ನೀ ಜೊತೆಯಾಗಿ ಪ್ರೀತಿ ಕುರುಡು ಎಂದು ತಿಳಿದಿದ್ದೆ. ನನ್ನ ಕುರುಡಿಗೆ ಕನ್ನಡಕ ಕೊಟ್ಟೆ . ನಿನ್ನ ನೆನೆದರೆ ’ಅಮೃತಧಾರೆಯ ನೀ ಅಮೃತಧಾರೆ, ಕೋಟೆ ಜನ್ಮ ಜೊತೆಗಾರ್ತಿ ........ ಅಂಬಾರಿಯ ಯಾರೆ ನೀ ದೇವತೆಯಾ ನನಗೆ ನೀ ಸ್ನೇಹಿತೆಯಾ ಹಾಗು ಮಳೆಯಲಿ ಜೊತೆಯಲಿ ಚಿತ್ರದ ನೀ ಸನಿಹಕೆ ಬಂದರೆ ಹೃದಯದ ಗತಿ ಏನು ಹೆಳು ನಿನ್ನು....... ಹಾಡುಗಳು ನೆನಪಾಗಿತ್ತದೆ ಮುಸ್ಸಂಜೆ ಸಮಯದಲ್ಲಿ ವಿಜಯನಗರ ಪಾರ್ಕ್ನಲ್ಲಿ ನನ್ನವಳು ನನ್ನವಳು ಸುಮ್ಮನೆ ಬಂದಿಹಳು ಕನಸಲ್ಲಿ ಬರುವವಳು ಪ್ರೀತಿಯನ್ನು ತರುವವಳು ಉಡುಗೊರೆ ಕೊಡಲು ನನಗಾಗಿ ಕಾಯುವಳು.......Lifeನ ಲ್ಯೆಟಾಗಿ Time Waste ನಗಿ ಸ್ಟ್ರಾಂಗಾಗಿ ಖರ್ಚನ್ನೇ ಬೇಕಾಬಿಟ್ಟಿಯಾಗಿ, ಮಾಡ್ತಿದ್ದ ತರ್ಲೆ ನನ್ ಮಗ ನಾನೇನಾ ಅನಿಸುತ್ತೆ ...... ನನ್ನ ಕುಶಲವೇ ಕ್ಸೇಮವೆ ಕೇಳಿ ಈ ದುನಿಯಾದ ಪ್ರೆಮಲೋಕದಲ್ಲಿ ಅರುಣೋದಯದಂದು I Love You ಎಂದು ಚೆಲುವೆ ನಿನ್ನ ನೋಡಲು ನಮ್ಮೂರಿನಿಂದ ಇಲ್ಲಿಗೆ ಪ್ರಯಾಣಿಸುವಾಗ ಆಕ್ಸಿಡೆಂಟ್ ಆದಾಗಲೂ ನನ್ನ ಮನಸಾರೆ ನೀ ನನ್ನ ಬದುಕಲಿ ಬಂದ ಕಾದಂಬರಿ ಓದುತ್ತಾ TIME ಪಾಸ್ ಮಾಡುತ್ತಾ, ನೋವನ್ನು ಮರೆತೆ..... ನಾ ನಿನ್ನ ಜೊತೆಗಾರ, ನೀ ನನ್ನ ಜೊತೆಗಾರ್ತಿ, ನೂರು ಜನ್ಮಕೂ ನಿನ್ನೆ ಪ್ರೀತಿಸುವೆ ಈ ಪ್ರೀತಿಯ ಹಂಗಾಮದಲ್ಲಿ ಗೆದ್ದೆ ಗೆಲ್ಲುವೆ ಒಂದು ದಿನ ಎಂದು ಮುಸ್ಸಂಜೆ ಮಾತ್ನಲ್ಲಿ, ಕಾಫಿ ಡೇ ಕ್ಲಬ್ ನಲ್ಲಿ ನಿನ್ನ ಪ್ರೊಪೊಸೆ ಮಾಡಿದ ಆ ಶುಭ ಘಳಿಗೆ ಇನ್ನೊಂದ್ಸಾರಿ ಬರದೆ ಹಾಗೆ ಮಾಡಿದೆ.....
ನಮ್ಮ ಈ ಪ್ರೀತಿಯ ಸವಾರಿ, ಹೀಗೆ ಜೋಶ್ ನಲ್ಲಿ ಇರಲಿ. ಕುಣಿದು ಕುಣಿದು ಬಾರೆ ಈ ಮುಂಗಾರು ಮಳೆಯಲ್ಲಿ ಜೊತೆಯಲ್ಲಿ ಮಾಂಗಲ್ಯಂ ತಂತು ನಾನೇನಾ ಮಾಡಿಕೊಂಡು ಪ್ರೇಮಿ ನಂ.೧ ನಿಂದ ಡ್ಯಾಡಿ ನಂ.೧ ಗೆ ಪ್ರೊಮೋಪನ್ ಕೊಡು. ಒಲವೇ ಜೀವನ Sakshatkara ಹೋಗಿ ಒಲವೇ ಜೀವನ ಲೆಕ್ಕಾಚಾರವಾಗಿದೆ. ಯಾವ ದೇವ್ರ ಬೇಡಿದರೂ ಈ ಲೆಕ್ಕಾಚಾರಗಳಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ.ಹಿಂದೆ ರಾಯರು ಬಂದರು ಮಾವನ ಮನೆಗೆ ಎನ್ನುತ್ತಿದ್ದರು. ಈಗ ಲಾಯರ್ ಬಂದರು ಮಾವನ ಮನೆಗೆ ದಿವೊರ್ಚೆ ಕೊಡ್ಸೋಕೆ ಎನ್ನುತ್ತಿದ್ದಾರೆ ನಾವು ಹಿಂದಿನ ಕಾಲದ ಹಾಗೆ ಇರೋಣ ಮುಂದೆ ಜನುಮದ ಜೋಡಿ ರಿಯಾಲಿಟೀ ಶೋನಲ್ಲಿ ನಾವು ಗೆಲ್ಲಲೇ ಬೇಕು ..ನೆನೆಪಿರಲಿ ತಾಜ್ ಮಹಲ್ ಒಂದು ಪ್ರೇಮದ ಕಾಣಿಕೆ, ನೀ ನನಗೆ ದೇವರು ಕೊಟ್ಟ ಪ್ರೇಮದ ಕಾಣಿಕೆ ...... Lifeನಲ್ಲಿ ನೀ ಲೇಟ್ ಆಗಿ ಬಂದರೂ ಮರೆಯದ ಮಾಣಿಕ್ಯವಾಗಿ ಪ್ಯಾರಿಸ್ ನಲ್ಲಿ ಪ್ರಣಯ ಮಾಡಿ, ಜೀವನದ ಜೋಕಾಲಿ ಆಡುತ್ತಾ ನಮ್ಮ ಕೆಲಸ ಎನ್ಜೊಯ್ ಮಾಡುತ್ತಾ ಜೋಡಿ ಹಕ್ಕಿಯಾಗಿ ಹೀಗೆ ಹಾರುತ್ತಿರೋಣ ಜೊತೆ ಜೊತೆಯಲಿ..... ಸಾಗೋಣ ದೂರ ಸ್ವಲ್ಪ ದೂರ
ಇಂತಿ ನಿನ್ನ ಪ್ರೀತಿಯ ಫಿಲ್ಮೀ ಪ್ರೇಮ ಪತ್ರ
ಸಾಲುಗಳು
- 610 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ