Skip to main content

ಮಾನ್ಯರೇ, ನಮ್ಮ ಕನ್ನಡ ಚಲನ ಚಿತ್ರಗಳು. ನಮ್ಮ ರಾಜ್ಯದಲ್ಲಿ ಹೆಚ್ಚು ದಿನ ಓಡುತ್ತಿಲ್ಲಾ ಏಕೆ? ಇದಕ್ಕೆ ಯಾರು ಕಾರಣ? ಸರ್ಕಾರವೇ, ನಿರ್ಮಾಪಕರೇ, ನಿರ್ದೇಶಕರೇ, ನಟರೇ, ಅಥವಾ ಕನ್ನಡಿಗರೇ ದಯವಿಟ್ಟು ತಿಳಿಸುವಿರಾ ಇದಕ್ಕೆ ಪರಿಹಾರವೇನು?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಜೇಶ ಹೆಗಡೆ ಗುರು, 07/21/2011 - 22:34

ಅನಗತ್ಯವಾಗಿ ನಾಯಕನನ್ನು ಹೊಗಳಿ ಅಟ್ಟಕ್ಕೇರಿಸುವದು, ಕಥೆಯೇ ಇಲ್ಲದಿರುವದು, ನೋಡಲಸಹ್ಯವಾದ ಅತಿರಂಜಿತ ಹಿಂಸೆ, ಲಾಂಗು, ಮಚ್ಚು, ಅದೇ ಹಳಸಲು ಪ್ರೀತಿ ಪ್ರೇಮ ಮತ್ತು ಕನ್ನಡಿಗರು ಈಗಾಗಲೇ ಬೇರೆ ಭಾಷೆಯಲ್ಲಿ ನೋಡಿ ಆನಂದಿಸಿದ ರಿಮೇಕ್ ಒಂದು ಕಡೆ ಕಾರಣವಾದರೆ ಇನ್ನೊಂದು ಕಡೆ ಬದಲಾದ ಜನರ ಅಭಿರುಚಿ. ಈಗ ಮನರಂಜನೆಯ ಸ್ಥಾನವನ್ನು ಟಿವಿ, ವಿಡಿಯೋ ಗೇಮ್, ಕಂಪ್ಯೂಟರ್, ಸಿಡಿ, ಡಿವಿಡಿ ಇತ್ಯಾದಿಗಳೂ ಆಕ್ರಮಿಸಿಕೊಂಡಿದೆ.
ಇದೇ ರೀತಿ ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆ ಸಹ ಹೆಚ್ಚಿದೆ. ಇವುಗಳಲ್ಲಿ ಹೆಚ್ಚಿನದು ಜೊಳ್ಳೇ ಜಾಸ್ತಿ. ಕನ್ನಡಿಗರ ಮನಸೂರೆಗೊಳ್ಳಬಲ್ಲ ಕುಟುಂಬ ಸಹಿತ ನೋಡಬಲ್ಲ ಸುಮಧುರ ಚಿತ್ರಗಳೆಲ್ಲಿವೆ? ಹಾಗೆ ಬಿಡುಗಡೆಯಾದ ಕೆಲವೇ ಕೆಲವೇ ಒಳ್ಳೆಯ ಚಿತ್ರಗಳು ಬೇಸತ್ತ ಕನ್ನಡಿಗರ ನಿರ್ಲಕ್ಷಕ್ಕೆ ಒಳಗಾಗುತ್ತಿದೆ

Nanjunda Raju Raju ಶನಿ, 07/23/2011 - 10:40

ಮಿತ್ರರೇ, ನೀವು ಹೇಳುವುದು ನೂರಕ್ಕೆ ನೂರು ಸರಿ. ಆದರೆ ನಾನು ಇದೂವರೆಗೂ ಗಮನಿಸುತ್ತಿದ್ದೇನೆ. ಸಾಮಾನ್ಯವಾಗಿ, ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ಕನ್ನಡ ಪ್ರೇಕ್ಷಕರು ತಮ್ಮ ಜೀವದ ಹಂಗು ತೊರೆದು, ಅಭಿಮಾನಿಗಳ ಸಂಘ ಕಟ್ಟುವುದೇನು, ದೊಡ್ಡ ದೊಡ್ಡ ಸ್ಟಾರ್ ಗಳನ್ನು ಕಟ್ಟುವುದೇನು. ಟಿಕೇಟಿಗಾಗಿ ಹೊಡೆದಾಡುವುದೇನು. ಇದೆಲ್ಲಾ ಮಾಡುವುದು ಅವರ ಏಳಿಗಾಗಿ ಅಲ್ಲವೆ. ಎಲ್ಲಾ ಮಾಡಿ ಟಾಕೀಸಿನ ಒಳಗೆ ಹೋದರೆ. ಏರ್ ಕಂಡಿಷನ್ ಇರುವುದಿಲ್ಲ. ಫ್ಯನ್ ತಿರುಗುವುದಿಲ್ಲ. ನಂತರ ವಿಕ್ರುತ ಮನಸ್ಸಿನ ಆಪರೇಟರ್ ಗಳು ಸಂಭಾಷಣೆ ಕೇಳದಂತೆ ಹೆಚ್ಚಿನ ಸೌಂಡ್ ಕೊಡುವುದು. ಟಾಕೀಸು ಶುಚಿ ಇಲ್ಲದಿರುವುದು. ಉದ್ದೇಶಪೂರ್ವಕವಾಗಿ, ಹೊಡೆದಾಟಗಳ ದ್ರುಶ್ಯ ಬಂದಾಗ ಹೆಚ್ಚಿನ ಸೌಂಡ್ ಕೊಡುವುದು. ಹೆಂಗರು ಮಕ್ಕಳು ಹೋದರೆ ಕಿಡಿಗೇಡಿಗಳ ಹಾವಳಿ ಬೇರೆ. ಪ್ರೇಕ್ಷಕರಿಗೆ ಸೂಕ್ತ ವಾತಾವರಣ ಕಲ್ಪಿಸದಿದ್ದರೆ ಟಾಕೀಸಿಗೆ ಯಾರು ಹೋಗುತ್ತಾರೆ. ಕನ್ನಡ ಸಿನಿಮಾಗಳು ಸೋಲಲು ಇವೆಲ್ಲಾ ಕಾರಣಗಳಲ್ಲವೇ? ಈ ಬಗ್ಗೆ ಚಿತ್ರ ರಂಗದ ದಿಗ್ಗಜರು ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಲವೆ? ವಂದನೆಗಳೊಡನೆ

  ನಿಮ್ಮಂತವರು ಟಾಕೀಸ್ ಗೆ ಹೋಗಿ ಸಿನಿಮಾ ನೋಡದೆ ಮನೇಲಿ ಕೂತು ವಿಸ್ಮಯನಗರಿ.ಕಾಮ್ ಹರಟೆ ಹೊಡಿತಿರ ಅದಕ್ಕೆ

Nanjunda Raju Raju ಗುರು, 08/18/2011 - 16:54

ಶ್ರೀ ರುದ್ರಸ್ವಾಮಿಸುಜ್ಜಲೂರುರವರೇ ನನ್ನ ಪ್ರಶ್ನೆ ಅರ್ಥ ಮಾಡಿಕೊಳ್ಳಿ ಒಬ್ಬ   ಪ್ರೇಕ್ಷಕನಾಗಿ, ಚಿತ್ರ ಮಂದಿರಗಳಿಗೆ ಹೋಗಿ ಚಲನ ಚಿತ್ರ ನೋಡುವ ವಾತಾವರಣ ಇದೆಯೇ? ಅಂದರೆ, ಟಿಕೇಟ್ ನೀಡುವ ವ್ಯವಸ್ಥೆ, ಗಾಳಿಯ ವ್ಯವಸ್ಥೆ, ಆಸನ ವ್ಯವಸ್ಠೆ, ನೀರು, ಶೌಚಾಲಯ  ವ್ಯವಸ್ಥೆ ಚೆನ್ನಾಗಿದ್ದರೆ ಇನ್ನೂ ಹೆಚ್ಚು ದಿನ ಚಿತ್ರಗಳು ಓಡುತ್ತವಲ್ಲವೆ? ಕೋಟ್ಯಾಂತರ ಖರ್ಚು ಮಾಡಿ ತೆಗೆಯುವ ಚಲನಚಿತ್ರಗಳು ಅವ್ಯವಸ್ಥೆಯಿಂದ ಹಾಕಿದ ಬಂಡವಾಳ ವಾಪಸ್ಸು ಬರಲಿಲ್ಲವೆಂದರೆ, ಹೇಗೆ? ಚಿತ್ರಗಳು ಬಿಡುಗಡೆಯಾಗಿ ವಾರದಲ್ಲೋ, ತಿಂಗಳಲ್ಲೋ ಎತ್ತಂಗಡಿಯಾದರೆ ಹೇಗೆ?

  ನಿಮ್ಮಂತವರು ಟಾಕೀಸ್ ಗೆ ಹೋಗಿ ಸಿನಿಮಾ ನೋಡದೆ ಮನೇಲಿ ಕೂತು ವಿಸ್ಮಯನಗರಿ.ಕಾಮ್ ಗೆ ಹೋಗಿ ಹರಟೆ ಹೊಡಿತಿರ ಅದಕ್ಕೆ

Jyothi Subrahmanya ಗುರು, 09/01/2011 - 11:38

ಎಲ್ಲಾ ಕಾರಣಗಳೂ ಸರಿ.  ಸಿನಿಮಾಗಳು ಉತ್ತಮವಾಗಿದ್ರೆ, ಸದಭಿರುಚಿಯದಾಗಿದ್ರೆ ನಾವು ನೋಡೋಲ್ಲ ಅಂತೀವಾ?  ಹೊಸ ನಟರ ಅಥವಾ ಹೊಸ ಪ್ರಯೋಗಗಳ ಚಿತ್ರ ಓಡೋದಿಲ್ಲ ಅನ್ನೋದಾದ್ರೆ, ಮುಂಗಾರು ಮಳೆ ಹೇಗೆ ಪ್ರೇಕ್ಷಕರನ್ನ ಸೆಳೀತು?????? ಅಪ್ಪ ಲೂಸಾ, ಅಮ್ಮ ಲೂಸಾ, ಕಚ್ಚಿ ಕಚ್ಚಿ ನಿನ್ನ ತಿನ್ನಲಾ, ಇತ್ಯಾದಿ ಅಸಭ್ಯ ಹಾಡುಗಳು ಅತಿರಂಜಿತ ಹಿಂಸೆ ದ್ವಂದ್ವಾರ್ಥಗಳಿರುವ ಸಂಭಾಷಣೆ ಕೇವಲ ಮೈ ತೋರಿಸೋದಕ್ಕಾಗಿ ನಿರ್ಮಾಣವಾದ ನಟಿಮಣಿಯರ ಪಾತ್ರಗಳು ಇವೆಲ್ಲಾ ನೋಡೋದಿಕ್ಕೆ ಕಾಸು ಖರ್ಚು ಮಾಡಿಕೊಂಡು, ಸೊಳ್ಳೆ ಹತ್ರ ಕಚ್ಚಿಸ್ಕೊಂಡು ಸಿನೆಮಾ ಮಂದಿರದಲ್ಲಿ ಉಸಿರು ಕಟ್ಟಿ ಕೂತ್ಕೊಂಡು ( ಬರೋ ಕೆಲವು ಪ್ರೇಕ್ಷಕರು ಪಾಪ ಚಲನಚಿತ್ರ ನೋಡೋದಿಕ್ಕೆ ತಾಕತ್ ಬರ್ಲಿ ಅಂತ ಮದ್ಯಪಾನ ಮಾಡಿ ಬಂದಿರ್ತಾರೆ!!!! ) ಕನ್ನಡಾಭಿಮಾನದಿಂದ ಸಿನೆಮಾ ನೋಡೋದಿಕ್ಕೆ ಸಾಧ್ಯಾನಾ?  ಒಳ್ಳೆ ಸಿನಿಮಾ ಬರ್ಲಿ ಎಲ್ಲಾ ಕನ್ನಡಿಗರೂ ನೋಡ್ತೀವಿ.  ಹಾಳು ಪೋಲಿ ಸಿನೆಮಾ ತಲೆ ನೋವು ತರಿಸೋ ಸಿನೆಮಾ ನೋಡಿ ತಾಳ್ಮೆಯನ್ನ ಪರೀಕ್ಷಿಸಿಕೊಳ್ಳೋದಿಕ್ಕೆ ಎಲ್ಲರಿಗೂ ಸಮಯ ಇರೋದಿಲ್ಲ. ಕನ್ನಡಾಭಿಮಾನ ಅಂದ್ರೆ ನಿರ್ದೇಶಕರಿಗೆ ನಿರ್ಮಾಪಕರಿಗೆ ದುಡ್ಡಾಗ್ಲಿ ಅಂತ, ಸಿನೆಮಾ ಮಂದಿರಕ್ಕೆ ಹೋಗಿ ಎಲ್ಲಾ ರೀತಿಯ ಸಿನೆಮಾ ನೋಡೋದಲ್ಲ!!! ಕೆಟ್ಟ ಸಿನೆಮಾಗಳನ್ನ ನೋಡದೆ ವಿರೋಧಿಸುವುದೂ ಕೇವಲ ಅರ್ಥಪೂರ್ಣವಾದ ಒಳ್ಳೆ ಸಿನೆಮಾಗಳನ್ನು ನೋಡಿ ಪ್ರೋತ್ಸಾಹಿಸೋದೂ ಕನ್ನಡಿಗರಾದ ನಮ್ಮ ಕರ್ತವ್ಯ ಅಲ್ವಾ?

Nanjunda Raju Raju ಗುರು, 09/01/2011 - 16:40

ಜ್ಯೋತಿ ಸುಬ್ರಮಣ್ಯರವರೇ,  ಹೌದು ನಿಮ್ಮ ಅಭಿಪ್ರಾಯ ಸರಿ. ಧನ್ಯವಾದಗಳು ಹಾಗೂ  ನಿಮಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು. ವಂದನೆಗಳೊಡನೆ.

robin ಶನಿ, 09/03/2011 - 12:49

ಸರಿಯಾದ ಕಥೆ ಇಲ್ಲದಿರುವದು, ಒಳ್ಳೆಯ ಚಿತ್ರಗಳಿಗೆ ಸರಿಯಾದ ಚಿತ್ರಮಂದಿರ ದೊರಕದಿರುವದು, ಬೇರೆ ಭಾಷೆ ಚಿತ್ರಗಳಿಗೆ ಹೋಲಿಸಿದರೆ ತಾಂತ್ರಿಕವಾಗಿ ಇನ್ನೂ ಹಿಂದಿಳಿರುವದು, ಚಿತ್ರಮಂದಿರಗಳು ಕಮ್ಮಿ, ... 

Nanjunda Raju Raju ಶನಿ, 09/03/2011 - 21:40

ಮಾನ್ಯ ರೋಬಿನ್ ರವರೇ ನಿಮ್ಮ ಅನಿಸಿಕೆಗೆ ಧನ್ಯವಾದಗಳು. ವಂದನೆಗಳೊಡನೆ.

ಮಲ್ಲಿಕಾರ್ಜುನ ೮೧ ಶನಿ, 04/07/2012 - 18:54

ಕನ್ನದ ಸಿನಿಮಾಗಳು ಕರ್ನಾಟಕದಲ್ಲಿ ಏಕೆ ಒಡುತ್ತಿಲ್ಲವೆ೦ದರೆ ? ನನ್ನ ಪ್ರಕಾರ ಮೊದಲು ಕನ್ನಡ ಚಲನ ಚಿತ್ರ ಮ೦ಡಳಿ ಸರಿಯಾಗಿ ಕಾರ್ಯ ನಿರ್ವಹಿಸುತಿಲ್ಲಾ , ಚಿತ್ರರ೦ಗಕ್ಕೆ ಸ೦ಬ೦ಧ ಪಟ್ಟಿರುವ ದೊರುಗಳಿಗೆ  ಮ೦ಡಳಿ ಕೊಡುವ ಹೆ!ಳಿಕೆಗಳು ಹಾಸ್ಯವಾಗಿರುತ್ತವೆ.  

Nanjunda Raju Raju ಸೋಮ, 04/09/2012 - 11:27

ಮಾನ್ಯ ಮಲ್ಲಿಕಾರ್ಜುನರವರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಕನ್ನಡ ಚಲನ ಚಿತ್ರ ವಾಣಿಜ್ಯ ಮಂಡಳಿಯ ಉದ್ದೇಶ ಕನ್ನಡ ಚಲನ ಚಿತ್ರಗಳ ಹಿತ ಮತ್ತು ನಿರ್ಮಾಪಕರ, ನಿರ್ದೇಶಕರ, ಕಲಾವಿದರ, ತಂತ್ರಜ್ನರ ಹಿತ ಮುಖ್ಯಅಲ್ಲವೇ? ಇದರಿಂದಲೇ ಕೆಲವು ಉತ್ತಮ ಕಲಾವಿದರು, ತಂತ್ರಜ್ನರು, ಬೇರೆ ಭಾಷೆಗಳಿಗೆ ಹೋಗುತ್ತಿದ್ದಾರೆ. ಅಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದರೆ. ಹಾಗೆಯೇ ನಮ್ಮ ರಾಜ್ಯದ ಚಲನ ಚಿತ್ರ ಮಂದಿರಗಳ ಗುಣಮಟ್ಟ ಹೆಚ್ಚಬೇಕು. ಅವುಗಳಕಡೆ ಯಾರು ಗಮನ ಹರಿಸುವುದಿಲ್ಲ. ಇದು ವಾಣಿಜ್ಯ ಮಂಡಳಿಯ ಕೆಲಸವಲ್ಲವೇನೋ? ಈ ಬಗ್ಗೆ ಚಲನ ಚಿತ್ರ ವಾಣಿಜ್ಯ ಮಂಡಳಿ ಯೋಚಿಸಬೇಕು ಅಲ್ಲವೇ? ಒಬ್ಬ ಹಿರಿಯ ಕಲಾವಿದರು, ಈ ಹಿಂದೆ ಡಾಃರಾಜ್ಕುಮಾರ್ ಇದ್ದಾಗ ಅವರು ಹೇಳಿದಂತೆ ಕೇಳುತ್ತಿದ್ದರು. ಈಗಿನ ಪರಿಸ್ಥಿತಿಯಲ್ಲಿ ಯಾರ ಮಾತನ್ನು ಯಾರೂ ಕೇಳುವುದಿಲ್ಲ. ಯಾಜಮಾನನಿಲ್ಲದ ಮನೆಯಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸುಧಾರಣೆ ಸಾಧ್ಯವಿಲ್ಲವೆ? ಕಾದು ನೋಡೋಣ! ವಂದನೆಗಳೊಡನೆ.

Nanjunda Raju Raju ಸೋಮ, 04/09/2012 - 15:30

ಶ್ರೀ ಮಲ್ಲಿಕಾರ್ಜುನರವರೇ, ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು. ಹೌದು ಕನ್ನಡ ಚಲನಚಿತ್ರ ರಂಗ ಬೆಳೆಯಲು, ಅನುಕೂಲವಾಗುವಂತೆ, ಪ್ರರಂಭವಾದ ಸಂಸ್ಥೆ ಇದು. ಆದರೆ, ಅದು ಏನೋ ಇದ್ದರೂ ಇಲ್ಲದಂತೆ, ಚಲನಚಿತ್ರ ರಂಗದ ಸಮಸ್ಯೆಗಳನ್ನು ಕಣ್ಣಿದ್ದು ಕುರುಡುತನವೆಂಬಂತೆ ವರ್ತಿಸುತ್ತಿದೆ. ಇದರ ಸದಸ್ಯರು, ಅದ್ಯಕ್ಷ್ಯರು, ಏಕೋ ಕೈಕಟ್ಟಿ ಕುಳಿತಿದ್ದಾರೆ. ನಮ್ಮ ಕಾಲಾವಧಿಯಲ್ಲಿ ಇರುವ ಸಮಸ್ಯೆಗಳನ್ನು ನಿವಾರಿಸಿದ್ದೇವೆ ಎಂದು ಹೇಳಿಕೊಳ್ಳುವವರು ಯಾರು ಇಲ್ಲವಾಗಿದ್ದಾರೆ. ಹತ್ತಾರು ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತಿದ್ದರೂ, ಎಲ್ಲರೂ ಅಧೀರರು, ಭದ್ರ ಬುನಾಧಿ ಇಲ್ಲದೆ ಹಾಕಿದ ಬಂಡವಾಳ ಹಿಂತಿರುಗಿ ಬರುತ್ತದೆ ಎಂಬ ನಂಬಿಕೆ ಕನ್ನಡ ಚಿತ್ರರಂಗದಲ್ಲಿ ಇಲ್ಲ. ಇದರಿಂದ ಕೆಲವು ಕಲಾವಿದರು, ತಂತ್ರಜ್ನರು, ನಿರ್ಮಾಪಕರು, ನಿರ್ದೇಶಕರು, ಅನ್ಯ ಭಾಷೆಯಕಡೆಗೆ ಹೋಗಿ ಅಲ್ಲಿ ಒಳ್ಳೆಯ ಹೆಸರು ಮಾಡುತ್ತಿದ್ದಾರೆ.  ಒಂದು ಕಾಲದಲ್ಲಿ ಏನೂ ಅನುಕೂಲವಿಲ್ಲದ ಕಾರಣ ಬೇರೆ ರಾಜ್ಯಗಳಿಗೆ ಹೋಗಿ ಕನ್ನಡ ಚಿತ್ರ ತೆಗೆಯಬೇಕಾಗಿತ್ತು.
ಈಗ ಇಲ್ಲಿ ಎಲ್ಲವೂ ಇದೆ, ವ್ಯವಸ್ಥೆ ಸರಿ ಇಲ್ಲದ ಕಾರಣ, ಪುನಃ ಬೇರೆ ರಾಜ್ಯಗಳಿಗೆ ಹೋಗಬೇಕಾಗುತ್ತದೆ. ಒಟ್ಟಿನಲ್ಲಿ ಈ ಸಂಸ್ಠೆ ಬೇಕೆ? ಎಂಬ ಪ್ರಶ್ನೆ ಉದ್ಬವಿಸುತ್ತದೆ. ಅಲ್ಲವೆ? ವಂದನೆಗಳೊಡನೆ.

Vinit (ಪ್ರಮಾಣಿಸಲ್ಪಟ್ಟಿಲ್ಲ.) ಧ, 05/16/2012 - 09:05

ಸುಮರು ೧೯೭೦ ರಿ೦ದ ನೊದಿದರೆ ಕನ್ನಡ ಚಿತ್ರರ೦ಗದಲ್ಲಿ ಕಥೆಗಳು, ಸಾಹಿತ್ಯ, ಸ೦ಗಿತ, ನಟರು ಎಲ್ಲದರ ಬೆರೆಕೆ ಅತ್ಯದ್ಭುತ ಆಗಿತ್ತು...
ನಿರ್ಮಾಪಕರು, ನಿರ್ದೆಶಕರು, ನಟರು ಜೊತೆಗೆ ಕೂತು ಎಲ್ಲ ವಿಶಯಗಳ ಬಗ್ಗೆ ಚರ್ಚೆ ಮಾಡಿ ಸಿನೆಮಾ ಮಾಡುತ್ತಿದ್ದರು.
ಒ೦ದು ಚಲನಚಿತ್ರ ಮಾಡೊಡು ಅ೦ದ್ರೆ ಒ೦ದು ದಿವ್ಯ ಭಾವ.
ಈಗ ಅದು ಕಾಣುತ್ತಿಲ್ಲ. ಸಿನೆಮಾ ಅನ್ನೊದು ಪಕ್ಕಾ ಡುಡ್ದು ಮಾಡೊ ಕೆಲಸ ಅ೦ತಾ ಆಗಿದೆ ಎನೊ ಅನ್ನೊ ಅನಿಸಿಕೆ ಮೂಡುತ್ತಿದೆ.
ಓಳೊಳ್ಲೆ ಕಥೆಗಳು ಇವೆ, ಹುಡುಕಬೆಕಶ್ತೆ. ಓಳೊಳ್ಲೆ ಕಲಾವಿದರು ಇದಾರೆ ಹುಡುಕಬೆಕಶ್ತೆ.
ಕನ್ನಡ ಸಿನೆಮಾ ಪೆಚಾಡುತ್ತಿದೆ, ನರಲುತ್ತಿದೆ, ಅಲ್ಲೊನ್ದು ಇಲ್ಲೊ೦ದು ಒಳ್ಲೆ ಸಿನೆಮಾ ಬನ್ದರು ಎಲ್ಲ್ ಫ್ಲೊಪ್ ಮಧ್ಯ ಮರೆಯಾಗುತ್ತಿವೆ.
ಕನ್ನಡ ಉಳಿಯಲಿ.

ತ್ರಿನೇತ್ರ ಧ, 05/16/2012 - 10:40

ನಮ್ಮ ಕನ್ನಡ ಚಿತ್ರರಂಗದಲ್ಲಿ ಗುಣಮಟ್ಟದ ಕೊರತೆಗಳು ದಿನದಿಂದ ದಿನಕ್ಕೆ ಹೆಚುತ್ತಿರುವುದೇ ಕಾರಣ ಎಂದು ನನ್ನ ಅನಿಸಿಕೆ. ಇದೇ ವಿಷಯದ ಬಗ್ಗೆ ಇದು ಕನ್ನಡ ಪ್ರೇಮವೇ...? ಎಂಬ ನನ್ನ ಲೇಖನವನ್ನೂ ಓದಿ.  

Nanjunda Raju Raju ಧ, 05/16/2012 - 13:20

ಮಾನ್ಯ ತ್ರಿನೇತ್ರರವರೇ ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು.  ಹಾಗೂ ನೀವು ತಿಳಿಸಿದಂತೆ, ಇದು ಕನ್ನಡ ಪ್ರೇಮವೇ? ಲೇಖನ ಕೂಡ ಓದಿರುತ್ತೇನೆ. ಕನ್ನಡ ಚಿತ್ರರಂಗ ಕೆಲವೇ ಪಟ್ಟಭದ್ರರ ಕೈಯ್ಯಲ್ಲಿದೆ. ಹಾಗೂ ಹಣವಿದ್ದವರು ಹಾಡಿದ್ದೇ ಮಾತು ತೆಗೆದದ್ದೇ ಚಿತ್ರ. ಹೀಗಿರುವಾಗ, ಕೇಳುವವರು ಯಾರು? ಅಲ್ಲವೆ? ವಂದನೆಗಳೊಡನೆ.

Nanjunda Raju Raju ಧ, 05/16/2012 - 13:35

ಶ್ರೀ ವಿನಿತ್ ರವರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ಕನ್ನಡಿಗರು ಇದನ್ನು ಅತ್ಯಾವಶ್ಯಕವಾಗಿ, ಗಮನಿಸಬೇಕು. ಹಾಗೂ ಹೀಗೂ ಹಿರಿಯ ಕಲಾವಿದರೆಲ್ಲ ಮರೆಯಾಗಿಹೋದರು. ಹೊಸ ಕಲಾವಿದರು ಬೆರಳೆಣಿಕೆಯಷ್ಟು. ಒಂದೆರಡು ಸಿನಿಮಾಕ್ಕೆ ಮರೆಯಾಗುತ್ತಾರೆ. ಅನ್ಯ ಭಾಷೆಯ ಕಲಾವಿದರು ಹೆಚ್ಚಾಗುತ್ತಿದ್ದಾರೆ. ನೀವು ತಿಳಿಸಿದಂತೆ, ಒಂದು ಚಿತ್ರ ತಯಾರಿಸಬೇಕಿದ್ದರೆ. ಸಾಕಷ್ಟು ಪೂರ್ವ ತಯಾರಿ ಮಾಡುತ್ತಿದ್ದರು. ಈಗ, ಬೀದಿ ಬದಿಯ ಅಂಗಡಿಗಳಲ್ಲಿ ತಯಾರಿಸುವ ನೂಡಲ್ ಗಳಂತೆ ಚಿತ್ರ ತಯರಾಗುತ್ತಿವೆ. ಒಟ್ಟಿನಲ್ಲಿ ಒಳ್ಳೆಯ ವಿಮರ್ಶೆ ಬರೆದಿದ್ದೀರಿ ವಂದನೆಗಳು.

  • 6024 views