Skip to main content
Forums

ಮಾನ್ಯರೇ, ನಮ್ಮ ರಾಷ್ಟ್ರಗೀತೆಯ ಯಥಾವತ್ತಾಗಿ ಕನ್ನಡದಲ್ಲಿ ತಿಳಿದವರು ತರ್ಜುಮೆ ಮಾಡಿ ತಿಳಿಸಲು ಕೋರುತ್ತೇನೆ. ಹಾಗೂ ಪ್ರಸ್ತುತ ಇದು ಹೊಂದುತ್ತದೆಯೇ? ತಿಳಿಸಲು ಕೋರುತ್ತೇನೆ. ವಂದನೆಗಳೊಡನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

umesha ಸೋಮ, 03/03/2014 - 17:23

ಜನಗಣ ಮನ ಮತ್ತು ವಂದೇ ಮಾತರಂ ಇವೆರಡೂ ನಮ್ಮ ರಾಷ್ಟ್ರ ಗೀತೆಗಳು.೧೯೧೯ರಲ್ಲಿ ಕಿಂಗ್ ೫ನೇ ಜಾರ್ಜ್ ಮತ್ತು ಇಂಗ್ಲೆಂಡಿನ ರಾಣಿ ಬಂದಾಗ

ರವಿಂದ್ರ ನಾಥ ಟ್ಯಾಗೊರರು  ರಚಿಸಿದ ಗಿತೆ ಜನ ಗಣ ಮನ.

ವಂದೇ ಮಾತರಂ ನಿಜ ದೇಶ ಭಕ್ತರ, ಕ್ರಾಂತಿಕಾರಿಗಳ ಭಾವನೆ ಬಂಕಿಮ್ ಚಂದ್ರ ಚಟರ್ಜಿಯವರ ಬರಹವಾಯಿತು.ಇಂಗ್ಲಿಷಿನಲ್ಲಿ ಇದರ ಅನುವಾದ ಮತ್ತು ಹಿನ್ನೆಲೆಗಾಗಿ ಈ ಪುಟವನ್ನು

ಕ್ಲಿಕ್ಕಿಸಿ http://toostep.com/insight/meaning-of-national-anthem-of-india---a-must-read

umesha ಸೋಮ, 03/03/2014 - 17:46

ಜನಗಣ ಮನ ಮತ್ತು ವಂದೇ ಮಾತರಂ ಇವೆರಡೂ ನಮ್ಮ ರಾಷ್ಟ್ರ ಗೀತೆಗಳು.೧೯೧೯ರಲ್ಲಿ ಕಿಂಗ್ ೫ನೇ ಜಾರ್ಜ್ ಮತ್ತು ಇಂಗ್ಲೆಂಡಿನ ರಾಣಿ ಬಂದಾಗ

ರವಿಂದ್ರ ನಾಥ ಟ್ಯಾಗೊರರು  ರಚಿಸಿದ ಗಿತೆ ಜನ ಗಣ ಮನ.

ಇದರ ಅನುವಾದ ಮತ್ತು ಹಿನ್ನೆಲೆಗಾಗಿ ಈ ಪುಟವನ್ನು ಕ್ಲಿಕ್ಕಿಸಿ http://toostep.com/insight/meaning-of-national-anthem-of-india---a-must-read

Nanjunda Raju Raju ಸೋಮ, 03/10/2014 - 17:01

ಮಾನ್ಯ ಉಮೇಶ್ ರವರೇ ನಿಮ್ಮ ಸುಧೀರ್ಘವಾದ ಮಾಹಿತಿಗಾಗಿ ಧನವಾದಗಳು. ಆದರೆ ನಾನು ಕೇಳಿದ್ದು ಕನ್ನಡ ಅನುವಾದವನ್ನು ಇದೂವರೆಗೂ ಎಲ್ಲಿಯು ದೊರೆತಿರಲಿಲ್ಲ.

Nanjunda Raju Raju ಸೋಮ, 03/10/2014 - 17:01

ಮಾನ್ಯ ಉಮೇಶ್ ರವರೇ ನಿಮ್ಮ ಸುಧೀರ್ಘವಾದ ಮಾಹಿತಿಗಾಗಿ ಧನವಾದಗಳು. ಆದರೆ ನಾನು ಕೇಳಿದ್ದು ಕನ್ನಡ ಅನುವಾದವನ್ನು ಇದೂವರೆಗೂ ಎಲ್ಲಿಯು ದೊರೆತಿರಲಿಲ್ಲ.

Nanjunda Raju Raju ಸೋಮ, 03/10/2014 - 17:05

ಮಾನ್ಯರೇ, ಬಹುದಿನಗಳ ನಂತರ ಕನ್ನಡ ಅನುವಾದ ವಿಕಿಪೀಡಿಯಾದಲ್ಲಿ ದೊರಕಿತು. ನಿಮ್ಮ ಮಾಹಿತಿಗಾಗಿ ನಮೂದಿಸಿದ್ದೇನೆ. ಪರಿಶೀಲಿಸಿ. ವಂದನೆಗಳೊಡನೆ.


ಭಾರತದ ರಾಷ್ಟ್ರಗೀತೆ




ಭಾರತದ ರಾಷ್ಟ್ರಗೀತೆ - ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್ . ಬರೆದ ಗೀತೆ ಅವರು ಸಂಸ್ಕೃತ ಮಿಶ್ರಿತ ಬಂಗಾಳಿಯಲ್ಲಿ ಬರೆದ ಬ್ರಹ್ಮೋ ಮಂತ್ರದ ಮೊದಲ 5 ಪ್ಯಾರಾಗಳನ್ನೇ ನಾವೀಗ ಹಾಡುತ್ತಿರುವುದು .. ಈ ಗೀತೆಯನ್ನು ಜನವರಿ 24,1950 ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು, ಇದಕ್ಕೆ ಸಂಗೀತ ಅಳವಡಿಸಿದ್ದು ರಾಮ್ ಸಿಂಗ್ ರಾಕೂರ್. ರಾಷ್ಟ್ರಗೀತೆಯನ್ನು ರಾಷ್ಟ್ರ ದ್ವಜ .. ವನ್ನು ಹಾರಿಸಿದ ನಂತರ 52 ಸೆಕೆಂಡುಗಳಿಗೆ ಮೀರದಂತೆ ಹಾಡಿ ಮುಗಿಸಬೇಕು ರಾಷ್ಟ್ರಗೀತೆ ಹಾಡುವಾಗ ಎಲ್ಲರೂ ಎದ್ದು ನಿಂತು ಭಾರತ ಮಾತೆಗೆ ವಂದಿಸಬೇಕು, ರಾಷ್ಟ್ರಗೀತೆ ಹಾಡುವುದನ್ನು ಅಡ್ಡಿಪಡಿಸಿದರೆ ಸಂಪರ್ಕಿಸಿ ನಮ್ಮ ಬಗ್ಗೆ ಕಾನೂನಿನಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲ್ಪಡುತ್ತದೆ ಭಾರತದ ಪರಮಹಂಸ ಗಾನ - ವಂದೇ ಮಾತರಮ್ . ಭಾರತದ ರಾಷ್ಟ್ರಗೀತೆ "ಜನ ಗಣ ಮನ" .. ಕನ್ನಡದಲ್ಲಿ ಈ ಮುಂದಿನಂತಿದೆ:


ಜನ - ಗಣ - ಮನ - ಅಧಿನಾಯಕ ಜಯ ಹೇ, ಭಾರತ - ಭಾಗ್ಯ - ವಿಧಾತಾ
ಪಂಜಾಬ ಸಿಂಧ ಗುಜರಾತ ಮರಾಠಾ, ದ್ರಾವಿಡ ಉತ್ಕಲ ಬಂಗ
ವಿಂಧ್ಯ ಹಿಮಾಚಲ ಯಮುನಾ ಗಂಗಾ, ಉಚ್ಛಲ ಜಲಧಿ ತರಂಗ
ತವ ಶುಭ ನಾಮೇ ಜಾಗೇ, ತವ ಶುಭ ಆಶಿಶ ಮಾಗೇ
ಗಾಹೇ ತವ ಜಯ ಗಾಥಾ
ಜನ - ಗಣ - ಮಂಗಲ - ದಾಯಕ ಜಯ ಹೇ, ಭಾರತ - ಭಾಗ್ಯ - ವಿಧಾತಾ
ಜಯ ಹೇ, ಜಯ ಹೇ, ಜಯ ಹೇ
ಜಯ, ಜಯ, ಜಯ, ಜಯ ಹೇ


ರಾಷ್ಟ್ರಗೀತೆಯ ಕನ್ನಡ ಭಾವಾನುವಾದ: -



  • "ಜನ ಸಮುಹದ ಮನಸ್ಸಿಗೆ ಒಡೆಯನಾದಸರ್ವೋಚ್ಚನಾಯಕನೇ ಭಾರತದ ಅದೃಷ್ಟವನ್ನುದಯಪಾಲಿಸುವವನೇ ನಿನಗೆ ಜಯವಾಗಲಿ

  • ಪಂಜಾಬ,ಸಿಂಧು,ಗುಜರಾತ,ಮಹಾರಾಷ್ಟ್ರ,ದಕ್ಷಿಣಭಾರತ,ಒರಿಸ್ಸಾ,ಬಂಗಾಳ,ಹೀಗೆ ಭಾರತದ ನಾಲ್ಕೂ ದಿಕ್ಕಿನ ಪ್ರಾಂತ್ಯಗಳು ವಿಂದ್ಯ, ಹಿಮಾಚಲ ಪರ್ವತಗಳು ಹಾಗೇ ಗಂಗಾ, ಯಮುನೆಯಂತಹ, ಜೀವನದಿಗಳು ಶ್ರೇಷ್ಠವಾದಸಮುದ್ರದ ನೀರಿನ ಅಲೆಗಳು ನಿನ್ನ ಮಂಗಳಕರವಾದ ಹೆಸರನ್ನು ಕೇಳಿ ಜಾಗ್ರತಗೊಳ್ಳುತ್ತವೆ

  • ನಿನ್ನ ಮಂಗಳಕರವಾದ ಆಶೀರ್ವಚನವನ್ನು ಕೇಳಿಕೊಳ್ಳುತ್ತಾ ನಿನ್ನ ಗೆಲುವಿನ ಗೀತೆಯನ್ನು ಹಾಡುತ್ತಿವೆ

  • ಜನ ಸಮೂಹಕ್ಕೆ ಒಳ್ಳೆಯದನ್ನು ಅನುಗ್ರಹಿಸವವನೇ ನಿನಗೆ ಜಯವಾಗಲಿ, ಜಯವಾಗಲಿ. ಭಾರತದ ಭಾಗ್ಯವನ್ನು ಕರುಣಿಸುವವನೇ ನಿನಗೆ ಜಯವಾಗಲಿ. "

"ನಮನ"

  • 5199 views