ಮರೆತೇನಂದರ ಮರೆಯಲಿ ಹ್ಯಾಂಗ: "ನೆನಪುಗಳೇ ಕಾಡದಿರಿ please"
ನಿನ್ನೊಂದಿಗೆ ಕಳೆದ ದಿನಗಳು ಮರೆಯಲು ಸಾಧ್ಯವೇ? ನಿನ್ನ ಜೊತೆ ಕಳೆದ ಆ ಸುಂದರ ದಿನಗಳ ಸವಿನೆನಪುಗಳು, ಆ ಸುಂದರ ಸಂಜೆಗಳ ಒಡನಾಟ, ಆ ತುಂಟಾಟ... ಆ ನೆನಪುಗಳೇ ಹಾಗೆ ಬಿಟ್ಟು ಬಿಡದೆ ಕಾಡುತ್ತವೆ.
ನೆನಪುಗಳೇ ನೀವೇಕೆ ಹೀಗೆ? ಆಫೀಸಿನಲ್ಲಿ ದುಡಿದು ದಣಿದ ಕಣ್ಣುಗಳಿಗೆ ವಿಶ್ರಾಂತಿ ಕೊಡಲೆಂದು ಸ್ವಲ್ಪ ಕಣ್ಣರೆಪ್ಪೆ ಮುಚ್ಚಿದರೆ ಸಾಕು, ದಾಳಿ ಆರಂಭ. "ನೆನಪುಗಳೇ ಕಾಡದಿರಿ please". ಹೀಗೆನ್ನಲು ಕೂಡಾ ಭಯ.!!!
ನಾನು ಹಾಗೆ ಹೇಳಿದೆನೆಂದು ನೀವು ಮುನಿಸಿಕೊಂಡು ಬರದೇ ಹೋದರೆ?, ನಾನು ನನಗೆ ಮತ್ತೆ ಸಿಗದೇ ಕಳೆದು ಹೋಗಬಹುದು. ನಾನು "ನಾನೇ" ಎಂಬುದನ್ನು ಜ್ಞಾಪಿಸ ಲಾದರು ನೀವು ತಿರುಗಿ ಬರಬೇಕು. ಆದರೂ ಇಷ್ಟೊಂದು ಕಾಡದಿರಿ please. ನಾನು ಯಾರೆಂಬುದನ್ನು ಜ್ಞಾಪಿಸುತ್ತಾ, ನಾನೇನಾಗಬೇಕೊ ಅದನ್ನು ಮರೆಯಿಸದಿರಿ, ನನ್ನ ದಾರಿ ತಪ್ಪಿಸದಿರಿ ನೆನಪುಗಳೇ... ಅರ್ಜೆಂಟಾಗಿ ನಾನು ಏನೋ ಆಗಬೇಕಾಗಿದೆ, ಏನೋ ಸಾಧಿಸಬೇಕಾಗಿದೆ. ದೊಡ್ಡ ಊರಿಗೆ ಹೋದವನು ದೊಡ್ಡದಾಗಿ ಏನೋ ಸಾಧಿಸುತ್ತಾನೆಂದು ಮನೆಯಲ್ಲಿ ಎಲ್ಲರೂ "ಕನಸು" ಕಾಣುತ್ತಿದ್ದಾರೆ, ಅವರ ಕನಸುಗಳನ್ನು ಕೊಲ್ಲದಿರಿ ನೆನಪುಗಳೇ...
ಹಾಗೆಂದು ಬರದೇ ಹೋಗದಿರಿ, ನೀವಲ್ಲದೇ ಈ ಊರಲ್ಲಿ ನನಗಾರು ಹೇಳಿ? ಹೊಸ ಊರಲ್ಲಿ ಹೊಸ ಪರಿಚಯಗಳಾಗಬೇಕು, ಹೊಸ ಗೆಳೆತನ ಬೆಳೆಯಲೇಬೇಕು ಆದರೆ ಅದು ಹಳೆಯ ಗೆಳೆತನದ ಸಾವಲ್ಲ. ನೆನಪುಗಳೇ ದಯವಿಟ್ಟು ಮುನಿಯದಿರಿ, ಮುನಿದು ನನ್ನ ನೂಯಿಸದಿರಿ. ಈ ಹೊಸ ಗೆಳೆಯರು ಕೊಡಾ ಯಾವೊತ್ತೊ ಮುಂದೊಂದು ದಿನ ನಿಮ್ಮೊಡನೆ ಸೇರಿ ಮತ್ತೆ ನನ್ನನ್ನೇ ಕಾಡುತ್ತೀರಿ. ಕೊನೆಯಲ್ಲಿ ಒಂಟಿಯಾಗುವನು ನಾನೇ. "ನೆನಪುಗಳೇ ಕಾಡದಿರಿ please".
"ಬಾಳ ದಾರಿಯಲಿ ಬೇರೆಯಾದರೂ, ಚಂದಿರ ಬರುವನು ನಮ್ಮ ಜೊತೆ,
ಕಾಣುವೆನು ಅವನಲಿ ನೀನ್ನನೇ...
ಇರಲಿ ಗೇಳೆಯಾ... ಈ ಅನುಭಂದ ಹೀಗೆ ಸುಮ್ಮನೇ..."
ಸಾಲುಗಳು
- Add new comment
- 978 views
ಅನಿಸಿಕೆಗಳು
Re: ಮರೆತೇನಂದರ ಮರೆಯಲಿ ಹ್ಯಾಂಗ: "ನೆನಪುಗಳೇ ಕಾಡದಿರಿ please"
ಮನುಷ್ಯನಿಗೆ ದೇವರು ಕೊಟ್ಟ ಅತಿ ದೊಡ್ಡ ವರ ಅಂದ್ರೆ ಮರೆವು.
ಇಲ್ಲದಿದ್ದರೆ ಹಳೆಯ ನೋವುಗಳು ಜೀವನ ಇಡೀ ಕಾಡಿ ಕೊಂದು ಬಿಡುತ್ತಿದ್ದವು.
ಈರಣ್ಣನವರೇ ಚೆನ್ನಾಗಿದೆ ಕಣ್ರಿ.