Skip to main content

ಯೋಗಾಸನಕ್ಕೆ ರಾಜಕೀಯಾಸನ ಗೊತ್ತಿಲ್ಲ....!!!

ಬರೆದಿದ್ದುJune 7, 2011
23ಅನಿಸಿಕೆಗಳು

ಎಂತಹ ವಿಪರ್ಯಾಸವಲ್ಲವೇ?ಮರುಗಟ್ಟಿದ ಮನಸ್ಸಿಗೆ ದಿವ್ಯಚೇತನ ನೀಡುವ ಯೋಗಾಸನ ರಾಜಕೀಯಾಸನದ ಮುಂದೆ ಕೈಕಾಲು ನುಣುಚಿಕೊಂಡು ಬಿಡಿಸಿಕೊಳ್ಳಲಾಗದೆ ಹೇಗೆ ಒದ್ದಾಡುತ್ತಿದೆ ನೋಡಿ. ತಾನು ಕಲಿತ ಯೋಗವಿದ್ಯೆಯನ್ನು ಇತರರಿಗೆ ಹಂಚುತ್ತಾ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಬಾಬಾ ರಾಮದೇವ್ ಅದೇ ಉಮ್ಮಸ್ಸಿನಲ್ಲಿ ಭ್ರಷ್ಟಾಚಾರದ ವಿರುದ್ಧವೇನೋ ಉಪವಾಸ ಕುಳಿತದ್ದೂ ಆಯಿತು. ಅದು ಯಾರ ವಿರುದ್ಧ?!! ಕಾಂಗ್ರೆಸ್ ಮುಂದಾಳತ್ವದ ಯು.ಪಿ.ಎ ವಿರುದ್ಧ. ಜನಸಾಗರದ ಬೆಂಬಲದ ಪೊರೆಯ ಮುಂದೆ ಅದರ ಹೊರಗಿನ ಸತ್ಯ ಮಸುಕಾಗಿ ಗಿತ್ತೋ ಏನೋ? ಬಾಬಾರವರು ರಾಜಕೀಯ ಚದುರಂಗದಾಟದ ನಡೆಗಳನ್ನು ಊಹಿಸುವುದರಲ್ಲಿ ಎಡವಿರುವುದಕ್ಕೆ ಇತ್ತೀಚಿನ ವಿದ್ಯಮಾನಗಳೇ ಸಾಕ್ಷಿ!!ಮೊದಲೇ ಸಿ.ಡಬ್ಲ್ಯು.ಜಿ., ೨ಜಿ., ೩ಜಿ ಇತ್ಯಾದಿ ಹಗರಣಗಳನಡುವೆ ಗಿಜಿಗುಡುತ್ತಾ ಗಬ್ಬೆದ್ದು ಹೋಗಿದ್ದ ಕೇಂದ್ರ ಸರ್ಕಾರದ ಹೆಕ್ಕತ್ತಿನ ಮೇಲೆ ಸತ್ಯಾಗ್ರಹದ ಸುತ್ತಿಗೆಯಿಂದ ಇಕ್ಕಿದ್ದು ಅಣ್ಣ ಹಜಾರೆಯವರು!! ಆರಂಭದಲ್ಲಿ ಇದೂ ಒಂದು ಮಾಮೂಲಿ ಪ್ರತಿಭಟನೆ ಎಂದು ಮೀಸೆ ಮರೆಯಲ್ಲಿ ನಗುತ್ತಾ ಉಡಾಫೆ ತೋರಿದ ದಿಲ್ಲಿ ದಿವಾನರಿಗೆ ಸಾಮಾಜಿಕ ತಾಣಗಳು ಇಟ್ಟ ಬರೆಯಿಂದ ಎಚ್ಚರವಾಯ್ತು!! ಮಿತಿ ಮೀರುತ್ತಿದ್ದ ಭ್ರಷ್ಟಾಚಾರದ ವಿರುದ್ಧ ಲೋಕಪಾಲ ಕಾಯ್ದೆಯ ಬೇಡಿಕೆಗೆ ಅಸ್ತು ಎಂದೇನೋ ಹೇಳಿತು. ಆದರೆ ಅದಕ್ಕೆ ಗೊತ್ತಿತ್ತು! ಜನಗಳು ಕೇಳುತ್ತಿರುವ ಕಾಯ್ದೆ ಜಾರಿಗೆ ತಂದರೆ ’ತಮ್ಮ ಅಂಡಿಗೆ ತಾವೇ ಬರೆಯಿಟ್ಟುಕೊಂಡಂತೆ’ಎನ್ನುವುದು!!ನಮ್ಮದೇಶವನ್ನು ಬಹುಕಾಲ ಆಳಿದ ಆಳುತ್ತಿರುವ ಕಾಂಗ್ರೆಸ್ ಬಹುತೇಕ ಬ್ರಿಟೀಷರ ನೀತಿಗಳನ್ನೇ ನೆಹರೂರವರ ಕಾಲದಿಂದಲೂ ಚಾಚೂ ತಪ್ಪದೆ ಅಳವಡಿಸಿಕೊಂಡು ನಮ್ಮನ್ನಾಳುತ್ತಿದೆ ಮತ್ತು ಹಾಳುಮಾಡುತ್ತಲೂ ಇದೆ. ಅಂದು ಪ್ರಧಾನ ಮಂತ್ರಿಯ ಕುರ್ಚಿಗಾಗಿ ದೇಶವನ್ನೇ ಒಡೆದದ್ದಾಯ್ತು! ನಂತರ ನೋಬೆಲ್ ಪ್ರಶಸ್ತಿಯ ದುರಾಸೆಗೊಳಗಾಗಿ ಕಾಶ್ಮೀರ ಬಲಿಕೊಟ್ಟಿದ್ದಾಯ್ತು!! ಅಕ್ಕಪಕ್ಕದ ನೆರೆಗಳನ್ನು ಅದ್ಧುಬಸ್ತಿನಲ್ಲಿಡುವಾಗ ಶ್ರೀಮಾನ್ ಲಾಲ ಬಹದ್ದೂರ್ ಶಾಸ್ತ್ರಿಯವರ ಪ್ರಾಣ ತೆಗಿದಿದ್ದೂ ಆಯ್ತು!!!. ತನ್ನ ಹೆಣ್ತನವನ್ನು ಬದಿಗೊತ್ತಿ ಅಧಿಕಾರಲಾಲಸೆಗಾಗೆ ಏನೆಲ್ಲಾ ಮಾಡಬಹುದು!! ಎಂದು ತನ್ನ ಮಕ್ಕಳಿಗೆ ಕಲಿಸಿದ್ದೂ ಆಯ್ತು!! ಹಗರಣಗಳನ್ನು ಹೆಗೆಲ್ಲಾ ಮುಚ್ಚಿಹಾಕಬಹುದು! ಅವುಗಳಿಗೆ ಕಾರಣರಾದವರನ್ನು ಹೇಗೆಲ್ಲಾ ಪಾರುಮಾಡಿ ಅವರವರ ದೇಶಕ್ಕೆ ಬೀಳ್ಕೊಡಬಹುದು!! ಎಂದು ಸಾಯುವ ಮುನ್ನವೇ ಹೇಳಿಕೊಟ್ಟಿದ್ದು ಇದೇ ಕಾಂಗ್ರೆಸ್ಸಿನ ಮಹಾನ್ ಪ್ರಭೃತಿಗಳು!!!!! ಜಾತಿಯ ಹೆಸರೇಳಿ ಹೇಗೆ ಒಂದು ಜ್ಯಾತ್ಯಾತೀತ ರಾಷ್ಟ್ರದಲ್ಲಿ ಪ್ರತಿ ಮನೆ ಮನಗಳನ್ನು ಮೀಸಲಾತಿಯ ಮೂಲಕ ಒಡೆದು ಹಾಳುಮಾಡಬಹುದೆಂದು ಅಂಧಕಾಲತ್ತಿಲ್ ನಿಂದಲೂ ಎಲ್ಲರಿಗೂ ತೋರಿಸಿಕೊಟ್ಟಿದ್ದು ಇದೇ ಕಾಂಗ್ರೆಸ್ ಪಕ್ಷ!!!!! ಇಂತಹ ಹಿನ್ನೆಲೆಯುಳ್ಳ ಪಕ್ಷದ ವಿರುದ್ಧ ಪ್ರತಿಭಟಿಸಿದರೆ ಯಾರಾದರೂ ಉಳಿಯುವುದುಂಟೇ?? ಇಲ್ಲ ಎನ್ನುವುದು ಬಾಬಾ ರಾಮದೇವ ಪ್ರಕರಣದಿಂದ ಸಾಭೀತಾಗಿದೆ!!ತನ್ನುಳಿವಿಗಾಗಿ ಯಾವ ವಾಮಮಾರ್ಗಕ್ಕಾದರೂ ಸಿದ್ಧವಾಗಿರುವ, ಯಾರ ಚಾರಿತ್ರ್ಯವಧೆಗಾದರೂ ಸರಿ, ಎಂತಹ ಅಸಹ್ಯಕರ ರೀತಿಯಲ್ಲಾದರೂ ಸರಿ ಹತ್ತಿಕ್ಕಿ ತೀರಲು ಭಾರತೀಯರನ್ನು ಹೇಗೆಲ್ಲಾ ಸುಲಭವಾಗಿ ದಾರಿ ತಪ್ಪಿಸಿ ಮೂರ್ಖರನ್ನಾಗಿಸಬಹುದೆಂದು ಇಡೀ ಜಗತ್ತಿಗೆ ಮತ್ತೊಮ್ಮೆ ತೋರಿಸಿಕೊಟ್ಟಿದ್ದು ಇದೇ ಕಾಂಗ್ರೆಸ್!! ಇದ್ಯಾವುದನ್ನೂ ಅವಲೋಕಿಸದೆ, ಅವಲೋಕಿಸಿದ್ದರೂ ನಿರ್ಲಕ್ಷಿಸಿದ್ದು ಬಾಬಾರವರು ಮಾಡಿದ ಮೊದಲ ತಪ್ಪು. ಅದಕ್ಕೆ ಹೇಳೋದು ’ಯೋಗಾಸನಕ್ಕೆ ರಾಜಕೀಯಾಸನ ಗೊತ್ತಿಲ್ಲ....!!!’ ಅಂತಅಣ್ಣಾರವರ ಉಪವಾಸದಿಂದ ಎಚ್ಚೆತ್ತುಕೊಂಡ ಸರ್ಕಾರ ಅವರಿಗೆ ಮಾತುನೀಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿತ್ತು!! ನಂತರ ಶುರುವಾಯ್ತು ನೋಡಿ ಕಪಿ(ಲ್)ಚೇಷ್ಠೆ!!! ಸಿ(ಮ)೦ಗನಾಟ!!!ಕಾಯ್ದೆಯಿಂದ ಏನೇನೂ ಪ್ರಯೋಜನವಿಲ್ಲ! ಭ್ರಷ್ಟಾಚಾರ ನಿಯಂತ್ರಣ ಸಾಧ್ಯವೇ ಇಲ್ಲ!! ಎಂದು ಹೇಳುವ ಮೂಲಕ ಇದುವರೆಗೆ ಜಾರಿಗೆ ಬಂದ ಹಲ್ಲಿಲ್ಲದ ಹತ್ತು ಕಾಯ್ದೆಯೊಳಗೆ ಹನ್ನೊಂದನೆಯದನ್ನು ತಂದು ’ಕೈ’ತೊಳೆದುಕೊಳ್ಳುವ ತನ್ನುದ್ದೇಶವನ್ನು ಜಗಜ್ಜಾಹೀರುಗೊಳಿಸಿತು!! ಹಾಗೆ ಮಾಡುವ ಸಲುವಾಗಿಯೇ ಲೋಕಪಾಲ ಸಮಿತಿಯಲ್ಲಿ ಒಡಕು ಮೂಡಿಸಲು ಪ್ರಯತ್ನಿಸಿದ್ದು! ಸಮಿತಿಯಸದಸ್ಯರೇ ಭ್ರಷ್ಟರು!! ಎನ್ನುವ ಹಣೆಪಟ್ಟಿ ಅಂಟಿಸಿದ್ದು!! ಇದುವರೆಗೆ ನಡೆದ ಲೋಕಪಾಲ ಸಭೆಗಳ ನಿರ್ಣಯಗಳನ್ನು ಜನತೆಗೆ ತಿಳಿಸದೆ ಮುಚ್ಚಿಟ್ಟಿರುವುದು! ಆದರೆ ಬಾಬಾರವರ ಘಟನೆಯಿಂದ ಎಚ್ಚೆತ್ತ ಹಜಾರೆಯವರು ಪಟ್ಟು ಬಿಗಿಹಿಡಿದಿರುವುದು ಸಾಮಾನ್ಯರಲ್ಲಿ ಸ್ವಲ್ಪ ಆಶಾಭಾವನೆಯನ್ನು ಚಿಗುರಿಸಿರುವುದು ಸುಳ್ಳಲ್ಲ. ’ಜೂನ್ ೩೦ ರೊಳಗೆ ಕರಡು ಸಿದ್ಧವಾಗಲೇಬೇಕು, ಕರಡು ಸಮಿತಿಯ ಸಭೆಗಳನ್ನು ದೂರದರ್ಶನದ ಮೂಲಕ ನೇರಪ್ರಸಾರ ಮಾಡಬೇಕು’ಎಂದು ಗುಡುಗುವ ಮೂಲಕ ತಾವು ರಾಮದೇವ್ ಬಾಬಾ ರಂತೆ ಮುಗ್ಗರಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸರ್ಕಾರಕ್ಕೆ ರವಾನಿಸಿದ್ದಾರಲ್ಲದೆ ನಾಳೆ ನಡೆಯಬೇಕಿದ್ದ ಕರಡು ಸಮಿತಿಯ ಸಭೆಯನ್ನು ಬಹಿಷ್ಕರಿಸುವ ಮೂಲಕ ಸರ್ಕಾರಕ್ಕೆ ಮುಜುಗರವುಂಟು ಮಾಡಿದ್ದಾರೆ.ಆದರೆ ಈ ನಾಚಿಗೆಗೆಟ್ಟ ಸರ್ಕಾರ "ಮುಂದೊಮ್ಮೆ ಕಪ್ಪು ಹಣ ವಾಪಸ್ಸು ತನ್ನಿ ಎನ್ನುವವರು ದೇಶದ್ರೋಹಿಗಳು" ಎಂಬ ಕೆಟ್ಟ ಕಾನೂನನ್ನು ತರಲು ಹೇಸುವುದಿಲ್ಲವೇನೋ!!! ಎನ್ನಿಸುತ್ತಿದೆ.  ಎಲ್ಲಾ ಕಾಂಗ್ರೆಸ್ ಮಹಾತ್ಮೆ!!! ಅದಕ್ಕೆ ಸಾಕ್ಷಿ ಎಂಬಂತೆ ಕಾಂಗ್ರೆಸ್ ಮುಖಂಡ ದ್ವಿವೇದಿ ಯವರ ಪತ್ರಿಕಾಗೋಷ್ಠಿಯಲ್ಲಿ ನಡೆದ ಚಪ್ಪಲಿ ’ಶೋ’ ಕೂಡಾ ಕಾಂಗ್ರೆಸ್ಸ್ ನಿರ್ದೇಶಿತ ನಾಟಕವೇ!! ಎನ್ನುವುದು ಆ ದೃಶ್ಯಾವಳಿ ನೋಡಿದ ಯಾವ ಮುಠ್ಠಾಳನಿಗೂ ತಿಳಿದುಬಿಡಿತ್ತದೆ. ದ್ವಿವೇದಿ ಬಳಿ ಆತ ಶೂ ಹಿಡಿದು ನಿಂತಾಗ ಆತನ ಅಕ್ಕಪಕ್ಕದಲ್ಲಿ ಯಾರೂ ಇರಲಿಲ್ಲ!!! ಬೇರೆಯವರು ಬಂದು ಹಿಡಿದು ತಳ್ಳುವವರೆಗೂ ಆತ ಶೂ ತೋರಿಸಿತ್ತಾ ಸುಮ್ಮನೆ ನಿಂತಿದ್ದನೇ ಹೊರತು ಹೊಡೆಯುವ ಯತ್ನವನ್ನೂ ಮಾಡಲಿಲ್ಲ!!! ಅವರು ಹೇಳುವಂತೆ ಆತ ನಿಜವಾಗಿಯೂ ಆರ್.ಎಸ್.ಎಸ್.ನ ಕಾರ್ಯಕರ್ತನಾಗಿದ್ದಲ್ಲಿ ಆತನಿಗೆ ಅವರನ್ನು ಒಡೆಯುವ ಉದ್ದೇಶವಾಗಲಿ ಇದ್ದಲ್ಲಿ ಒಡೆದು ತಪ್ಪಿಸಿಕೊಳ್ಳಲು ಪ್ರಯ್ತಿಸುತ್ತಿದ್ದನೇ ಹೊರತು ಸುಖಾಸುಮ್ಮನೆ ಸಿಕ್ಕಿಹಾಕಿಕೊಳ್ಳುತ್ತಿರಲಿಲ್ಲ. ಇದೆಲ್ಲವನ್ನು ನೋಡಿದರೆ ಭ್ರಷ್ಟರನ್ನು ಆದಷ್ಟು ರಕ್ಷಿಸಲು ಹೇಗೆಲ್ಲಾ ಸಾಧ್ಯವೋ ಹಾಗೆಲ್ಲಾವೂ ಸರ್ಕಾರ ಪ್ರಯತ್ನಿಸುತ್ತಿರುವುದು ಸ್ಪಷ್ಟ.ಇಂತಹ ಸ್ಥಿಯಲ್ಲಿ ಬಾಬಾ ರಾಮದೇವ ರವರು ಇನ್ನಾದರೂ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗಿದೆ. ಏಕೆಂದರೆ ಅವರು ಕೈ ಹಾಕಿರುವ ಚಳುವಳಿ ಒಳ್ಳೆಯ ಉದ್ದೇಶದ್ದು. ಬಾಬರವನ್ನು ಕೆಣಕಿ ಅವರಿಂದ ಪ್ರತಿಕ್ರಿಯೆಗಳನ್ನು ಹೊರತೆಗೆದು ಆಟ ಆಡಿಸುತ್ತಾ ಸಮಯ ವ್ಯರ್ಥಮಾಡುತ್ತಾ ಕುಳಿತಿದೆ. ಆದ್ದರಿಂದ ಬಾಬಾ ರವರು ಉಪವಾಸ ಸತ್ಯಾಗ್ರಹದ ಜೊತೆಗೆ ಮೌನವ್ರತವನ್ನೂ ಆಚರಿಸಿದರೆ ಸರ್ಕಾರಕ್ಕೆ ಬಿಸಿಮುಟ್ಟೀತು!! ಏಕೆಂದರೆ ರಾಮದೇವ್ ಬಾಬಾರಿಗೆ ಯೋಗ ಸಿದ್ದಿಸಿದಷ್ಟು ರಾಜಕೀಯದ ಪರಿಚಯವಿಲ್ಲ!! ಅದಕ್ಕೆ ಕಪಿ(ಲ್) ಸಿಂಗ್(ಲೀಕ)ಗಳು ಮೆಲೆರೆಗಿ ಗಾಯಗೊಳಿಸುತ್ತಿರುವುದು. ಇದು ಹೀಗೆ ಮುಂದುವರಿದಲ್ಲಿ ಚಳುವಳಿ ದಾರಿತಪ್ಪುವ ಸಾಧ್ಯತೆಯೇ ಹೆಚ್ಚಲ್ಲವೇ?

ಲೇಖಕರು

ಉಮಾಶಂಕರ ಬಿ.ಎಸ್

ಕಾಡುವ ಮನದ ಕನವರಿಕೆಗಳು.....

ಪೂರ್ತಿ ಕಪ್ಪಗೆ, ಸರಾಸರಿ ಎತ್ತರ, ನೋಡಿದ ಕೂಡಲೆ ಕಾಣುವ ಬಿಳಿ ಹಲ್ಲು, ನೀಟಾಗಿ ಬಾಚಿದ ಕೂದಲು, ವಟಗುಟ್ಟುವ ಕಪ್ಪೆ ಹಾಗೆ ಮಾತನಾಡುವವರು ಯಾರಾದರು ಎದುರು ಬಂದರೆ ಅದು ಖಂಡಿತ ನಾನೇ ಆಗಿರುತ್ತೇನೆ

ಅನಿಸಿಕೆಗಳು

ವಿನಯ್_ಜಿ ಮಂಗಳ, 06/07/2011 - 13:07

ಉಮಾಶಂಕರ್ ರವರೆ,
ನಿಮ್ಮ ಲೇಖನ ಇಂದಿನ ರಾಜಕೀಯ ಪರಿಸ್ಥಿತಿಗೆ ಕೈಗನ್ನಡಿ ಹಿಡಿದಂತಿದೆ. ಹೌದು, ಬಾಬರವರು ಹಲವು ಕಡೆ ಎಡವಿದ್ದಾರೆ. ಅದು ಅವರು ಘಟನೆ ನೆಡೆದ ಮರುದಿನ ಕೊಟ್ಟ ಸಂದರ್ಶನದಲ್ಲಿ ಚೆನ್ನಾಗಿ ಗೊತ್ತಾಗುತ್ತಿತ್ತು. He was virtually shaken..!!
ನೀವೇ ಹೇಳಿದಂತೆ "ಇದ್ಯಾವುದನ್ನೂ ಅವಲೋಕಿಸದೆ, ಅವಲೋಕಿಸಿದ್ದರೂ ನಿರ್ಲಕ್ಷಿಸಿದ್ದು ಬಾಬಾರವರು ಮಾಡಿದ ಮೊದಲ ತಪ್ಪು." ಹೌದು, ಅದು ಅಣ್ಣಹಜಾರೆಯವರ ಪ್ರತಿಭಟನೆಯಷ್ಟೇ ಹೆಸರುಗಳಿಸಬಹುದು ಎಂಬ ಸಣ್ಣ ಆಸೆ ಹೊತ್ತಿದ್ದರೇನೋ...! ಅದರೆ ನಮ್ಮ "ಘನ ಕೇಂದ್ರ ಸರ್ಕಾರ" ದ "ಮಾಸ್ಟರ್ ಪ್ಲಾನಿಂಗ್" ನಿಂದ ಏಡವಟ್ಟಾಯಿತಷ್ಟೇ...!

ಉಮಾಶಂಕರ ಬಿ.ಎಸ್ ಮಂಗಳ, 06/07/2011 - 23:01

ವಿನಯ್ ಸರ್ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು, ಮುಂದೇನಾಗುವುದೆಂದು ಕಾದು ನೋಡೋಣಇತಿಉಮಾಶಂಕರ

ವಿ.ಎಂ.ಶ್ರೀನಿವಾಸ ಮಂಗಳ, 06/07/2011 - 13:39

ತನ್ನೊಳಗಿನ ಅಷ್ಟೂ ಆಕ್ರೋಶವನ್ನು ಒಂದೇ ಉಸಿರಿಗೆ ಬಿಚ್ಚಿಟ್ಟಿದ್ದೀರಿ. ಕಾಂಗ್ರೆಸ್ ಸಂಸ್ಕೃತಿ ಬಗ್ಗೆ ಮಾತನಾಡದಿರುವುದು ಉತ್ತಮ. ಆದರೆ ಈ ಕಾಂಗ್ರೆಸ್ಸಿಗರು ನಮ್ಮ ಮೌನವನ್ನು ಬೇಕಾದರೆ ಪ್ರಶಂಸೆ ಎಂದು ಭಾವಿಸುವ ಅಪಾಯವಿರುವುದರಿಂದ, ಇನ್ನಷ್ಟು ಹರಿತವಾದ ಲೇಖನಗಳು, ಹೋರಾಟಗಳು ನಡೆಯಬೇಕಾಗಿದೆ. ಆದರೆ ನಮ್ಮ ಯುವ ಸ್ನೇಹಿತರಿಗೆ, ಅಣ್ಣಾ ಹಜಾರೆಗಿರುವಷ್ಟು ದೇಶಾಭಿಮಾನ  ಇಲ್ಲವಾಯಿತೇ ಎಂಬ ಅನುಮಾನ ನನ್ನನ್ನು ಆಗಾಗ ಕಾಡಿದ್ದಿದೆ.  ಅಂತರ್ಜಾಲದ ಸಾಮಾಜಿಕ ತಾಣದಲ್ಲೊಂದು ಸಂದೇಶ ಕಳುಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರೆ ಮುಗಿಯಿತು ಎನ್ನುವ ಮನಸ್ಥಿತಿ ಬದಲಾಗಿ, ಹೋರಾಟಗಳಲ್ಲಿ ಭಾಗವಹಿಸುವಂತಾದರೆ ನಿಜಕ್ಕೂ ಈ ದೇಶದ ಯಾವುದೇ ಸಮಸ್ಯೆಯನ್ನು ನೀರು ಕುಡಿದಷ್ಟು ಸಲೀಸಾಗಿ ಬೇರು ಸಹಿತ ಕಿತ್ತೊಗೆಯಬಹುದು.ಉಮಾಶಂಕರ್ ಜಿ  ನಿಮ್ಮ ಲೇಖನದಲ್ಲಿ ವ್ಯವಸ್ಥೆಯ ಬಗ್ಗೆ ಸಿಟ್ಟಿದೆ, ಕಾಂಗ್ರೆಸ್ ಬಗ್ಗೆ ಆಕ್ರೋಶವಿದೆ ಜೊತೆಜೊತೆಗೆ ನಿರಾಶೆಯ ಛಾಯೆ ದಟ್ಟವಾಗಿದೆ, ಈ ನಿರಾಶೆಯನ್ನು ಬದಿಗೊತ್ತಿ ದೈರ್ಯದಿಂದ ಏನನ್ನಾದರೂ ಮಾಡಬೇಕೆನಿಸುತ್ತಿಲ್ಲವೇ..? ಒಂದು ವೇಳೆ ಮಾಡಬೇಕು ಅನಿಸಿದರೆ ನನ್ನನ್ನೂ ಕರೆಯಿರಿ, ನನ್ನೊಂದಿಗೆ 100 ಜನರನ್ನು ಕರೆತಂದು,  ನಿಮ್ಮ ಜೊತೆಯಾಗ್ತೀನಿ.  

ಉಮಾಶಂಕರ ಬಿ.ಎಸ್ ಮಂಗಳ, 06/07/2011 - 23:00

ಶ್ರೀನಿವಾಸ್ ಸರ್ ನಿಮ್ಮ ಅಭಿಪ್ರಾಯಗಳಿಗೆ ಅನಂತಾನಂತ ಧನ್ಯವಾದಗಳು, ಕಾಲಕೂಡಿ ಬಂದಾಗ ಸಮಾಜದ ಒಳಿತಿಗಾಗಿ ಎಲ್ಲರೂ ಒಟ್ಟಾಗೋಣಇತಿಉಮಾಶಂಕರ

ಎಚ್ಡಿ.ರೇವಣ್ಣ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/07/2011 - 20:40

ವಿಸುಮಯ ನಗರಿಯ ನಿತ್ಯ ವಿಸುಮಯಗಳೇ,ಅಂಗಾರೆ ರಾಂದೇವು ಒಳ್ಳೇ ಮನಿಸ್ಯಾ....ಕಾಂಗ್ರೇಸಿನವ್ರು ಸ್ವಿಜ್ಜರ್ಲಾಂಡಿನಾಗೆ ಹಣಾ ಊತಿಟ್ಟ ದೇಸದ್ರೋವಿಗಳು ಅಂತ ನಿರುಣಯ ಆಗೋಗಯ್ತೆ ಅಂದಾಯ್ತು.ರಾಂದೇವು ಐವತ್ಸಾವ್ರ ತೆರೋರ್ಗೆ ಯೋಗಶಿಬಿರ್ದಾಗೆ ಸ್ಟೇಜಿನ ಮುಂದುಕ್ಕೆ ಜಮ್ಖಾನ ಹಾಸಿ ಕುಂಡ್ರಸಾದು, ಸಾವ್ರ ತೆತ್ತೋರ್ಗೆ ಕಡೇ ಲೈನಿಗೆ ಹಾಕಾದೂ ನಾವೆಲ್ಲ ನೋಡಿದ್ರೂ ಯೋಳ್ಬಾರ್ದಪ. ಕಾಂಗ್ರೇಸಿನವ್ರು ಮಾತ್ರ ದುಡ್ಡಿಗೆ ಮಣೆ ಹಾಕವ್ರು. ರಾಂದೇವು ಜಮ್ಕಾನ ಹಾಸಿದ್ದಲ ಅದುಕ್ಕೇ ಬಿಟ್ಟುನಡಿಬೇಕು.ಸೈಕೋಲಿಗೆ ಪಂಚರಾಕ್ಸಕ್ಕಾಗ್ದೇ ಓಡಾಡ್ಕಂಡಿದ್ದವ್ನು ಈವತ್ತು ಪ್ರೈವೇಟು ಜ್ಯಟ್ಟು, ಯಲಿಕಾಪ್ಟರಲ್ಲೇ ಬತ್ತಿಯಲೋ ದಾಡೀ ಬೈರ... ಎಲ್ಲಿಂದೋ ಬಂತು ಕಾಸು ? ಅಂದ್ರೆ, "ಕಂಡಿದಿನಿ ಕುಂತ್ಗಣಲೇ... ಆರೂಮುಕ್ಕಾಲು ವರುಸದಾಗೆ ಐವತ್ತು ಸಾವಿರ ಜನುಗೋಳತ್ರ ಚಂದಾ ಯತ್ತಿ ಮಾಡಿ ಮಡಗಿರೊದಲೇ ನನ್ ದುಡ್ಡು" ಅಂತ ಆ ಮನಿಸ್ಯ ಯೋಳ್ತನೆ. ನಮ್ಮೂರ್ನಾಗೆ ಬೆವರರ್ಸಿ ದುಡಿದಿರೋನು ಇಪ್ಪತ್ತು ರೂಪಾಯಿ ಮಡಗಕ್ಕೆ ಯಿಂದೆ ಮುಂದೆ ನೋಡೋವಾಗ, ಹಡಬೇಲಿ ದುಡ್ಡೂ ದುಗ್ಗಾಣಿ ಮಾಡ್ಕಂಡವ್ರು ದೇವಸ್ತಾನಕ್ಕೆ, ಸ್ವಾಮ್ಗೋಳ್ಗೆ ಯಕ್ಕ ಮಕ್ಕ ಚಂದಾ ಕೋಡೋ ಪರಿಸ್ತಿಥಿ ಯಿರೋವಾಗ, ಐವತ್ತು ಸಾವಿರ ಜನುಗೋಳತ್ರ ಚಂದಾದಲೇ ಒಂದುಸಾವ್ರದ ಒನ್ನೂರು ಕೋಟಿ ದುಡಿದವ್ನು ಭಾರಿ ಒಳ್ಳೇವ್ನಪ ಬಿಡಿ ಮತ್ತೆ. ಚಂದಾ ಕ್ವಟ್ಟವ್ರೆಲ್ಲ ವಳ್ಳೇತನದಾಗೇ ದುಡಿದು ಕ್ವಟ್ಟವ್ರೆ ಅಂದ್ಕಣನ ಬಿಡಿ ಮತ್ತೆ.ಹೂ ಕನಣ್ಣ ... ಬ್ರಸ್ಟಾಚಾರ ಬಾರಿಯಾಗೋಗೈತೆ... ಸೊಲುಪ ಯಡೀಯೂರಪ್ನ ನೋಡ್ರಯ್ಯ ... ಅಂದ್ರೆ ಅಡವಾಣಿ ಅದುಮಿಕಂಡು ಕುಂತೈತೆ, ಸುಸ್ಮ ಸುಂಕೈತೆ, ರಾಜ್ನಾತು ರಾಜಿಯಾಗೈತೆ, ರಾಂದೇವು ಸ್ವಂಟಕ್ಕೆ ಚೂಡಿದಾರ ಕಟ್ಕಂಡು ಉಡುಗಿರ ಯಗಲ ಮೇಲೆ ಗಾಂದೀ ತಾತುನಂಗೆ ಕೈ ಮಡೀಕಂಡು ಓಡ್ತೈತೆ. ಯಾಕಂದ್ರೆ ಯಡೀಯೂರಪ್ಪಂಗೆ ಇಂಗ್ಲೀಸೇ ಬರಲ್ಲ. ಇನ್ನೆಲ್ಲಿಂದ ಸಿಜ್ಜರ್ಲಾಂಡು. ಅದಕ್ಕೇ ಇಲ್ಲೇ ಮಕ್ಳು, ಮರಿಗೆಲ್ಲ ಸೈಟು ಕೊಟ್ಕಂಡು ಸೀಮಗ್ಗಿಲಿ ಕ್ವಾಲೇಜು ಮ್ಯಾಕೆ ಕ್ವಾಲೇಜು ಕಟ್ತವ್ನೆ. ಅವಂದು ಬ್ರಸ್ಟಾಚಾರ ಅಲ್ಲಪ್ಪ. ಬಿಡಿ ಮತ್ತೆ.ಅಲ ಈ ಬೀಜೇಪ್ಯೋರು ಇದ್ರಲ ಆರು ವರ್ಸ ಅಧಿಕಾರ್ದಾಗೆ.. ಆಗೇನ್ಲ ಆಗಿತ್ತು ಕಪ್ಪಣ,ಕೆಂಪಣ,ನೀಲಿಯಣ ವಾಪಾಸು ತರಕ್ಕೆ? ಆಗೇನು ತೌಡಾ ತಿಂತಿದ್ರು ವಟ್ಟೆಗೆ?ಅಲ ಈ ಕಪ್ಪಣ ವಾಪಾಸು ಬಂತು ಅಂದಿಟ್ಕಣ್ರಪ. ಅಮ್ಯಾಕೇನು? ಅದನ್ನೇನು ನಮಿಗೆಲ್ಲ ತಲೆಗೊಂದು ಕೋಟಿ ಅಂತ ಅಂಚ್ತಾರ? ಅಥುವ ಬಂದಿರೋ ಹಣುಕ್ಕೆ ಇನ್ನಷ್ಟು ಸ್ಕೀಮಾಕಿ ಇನ್ಯಾರೋ ಬ್ಯಾರೆಯೋರು ದೋಚ್ತವ್ರಾ?ಲೇಕ್ನಕ್ಕಿಂತ ಉದ್ದ ಕಮೆಂಟು ಬರೆದವ್ನೆ ಕ್ಯಲಸಿಲ್ದವ್ನು ಅನ್ಬೇಡ್ರಪಾ ಮತ್ತೆ.ಇಂತಿ ಪಿರೂತಿಯ-ಎಚ್ಡಿ.ರೇವಣ್ಣ  

ಉಮಾಶಂಕರ ಬಿ.ಎಸ್ ಮಂಗಳ, 06/07/2011 - 22:55

ಪ್ರಿಯ ಎಚ್. ಡಿ ರೇವಣ್ಣನವರೆನಿಮ್ಮ ಪ್ರತಿಕ್ರಿಯೆಗಳಿಗೆ ನನ್ನ ಅನಂತಾನಂತ ಧನ್ಯವಾದಗಳು.ಮೊದಲಿಗೆ ನನ್ನ ಲೇಖನದಲ್ಲೆಲ್ಲೂ ರಾಮದೇವ್ ಒಳ್ಳೆಯ ಮನುಷ್ಯ ಎಂದು ಹೇಳಿಲ್ಲ ತಾವು ಈ ಅಭಿಪ್ರಾಯಕ್ಕೆ ಬರುವ ಮುನ್ನಈ ಲಿಂಕನ್ನು http://www.vismayanagari.com/vismaya11/node/9126 ಸ್ವಲ್ಪ ಗಮನಿಸಿ. ನನ್ನ ಈ ಲೇಖನದ ಉದ್ದೇಶ ಇಷ್ಟೆ ಉತ್ತಮವಾದ ಆಶಯವುಳ್ಳ ಒಂದು ಚಳುವಳಿ ಹೇಗೆ ಹಳಿ ತಪ್ಪಿ ಹಳ್ಳಹಿಡಿಯುತ್ತಿದೆ ಎನ್ನುವುದು. ಅದಕ್ಕಾಗಿ ಸರ್ಕಾರ ಮಾಡುತ್ತಿರುವ ಕಿತಾಪತಿಗಳನ್ನು ಮತ್ತು ಆ ಸರಕಾರದ ಮನಸ್ಥಿತಿಗಳನ್ನು ತೋರಿಸುವ ಒಂದು ಉದ್ದೇಶ ಅಷ್ಟೇ. ಅಲ್ಲದೆ ಯಡ್ಡ್ಯೂರಪ್ಪನವರು ಸಾಚ ಎಂದು ಎಲ್ಲಿಯೂ ಹೇಳಿಲ್ಲ ಹಾಗೆ ಹೇಳಿಬಿಟ್ಟರೆ ಭ್ರಷ್ಟರ ಚಕ್ರವರ್ತಿ ಎಂಬ ಬಿರುದನ್ನು ಕಿತ್ತಿಕೊಂಡರಲ್ಲ ಎಂಬ ಕೊರಗಿನಿಂದ ಮತ್ತೊಮ್ಮೆ ರಾಷ್ಟ್ರಪತಿಗಳ ಮುಂದೆ ಶಾಸಕರ ಪೆರೇಡ್ ನಡೆಸಿಯಾರು!! ಇನ್ನು ಕಪ್ಪುಹಣ ಇಟ್ಟಿರುವವರ ಪಟ್ಟಿಯಲ್ಲಿ ಕಾಂಗ್ರೀಸ್ಸಿನವರಷ್ಟೇ ಅಲ್ಲ ಸಾಮಾನ್ಯವಾಗಿ ಎಲ್ಲಾ ಪಕ್ಷದವರೂ ಸಿಕ್ಕೇ ಸಿಗುತ್ತಾರೆ. ಸಹಜವಾಗಿ ನಮ್ಮ ದೇಶವನ್ನು ಹೆಚ್ಚುಕಾಲ ಆಳಿದವರು ಕಾಂಗ್ರೇಸ್ಸಿಗರೇ ಹಾಗಾಗಿ  ಅವರಿಗೆ ಆಡಳಿತದ ಅನುಭವದ ಜೊತೆಗೆ ಕಾನೂನಿನ ತೂತುಗಳನ್ನು ಚೆನ್ನಾಗಿ ಬಲ್ಲವರು ನಿಮ್ಮ ಯಡ್ಡ್ಯೂರಪ್ಪನವರಹಾಗೆ ದಡ್ಡರಲ್ಲ. ಮೇಲೆ ತಿಳಿಸಿದ ಲಿಂಕನ್ನು ತಾವು ನೋಡಿದಲ್ಲಿ ನನ್ನ ಈ ಲೇಖನದ ಉದ್ದೇಶ ಮನದಟ್ಟಾದೀತು. ಇತಿಉಮಾಶಂಕರ

ಹೆಚ್ಡಿಕೆ (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/08/2011 - 09:58

ಉಮಾಶಂಕರರೆ, ಇ ರಾಜ್ಯದ ಪ್ರಜೆಯಾದ ನಿಮ್ಮಲ್ಲಿ ನಾನು ಹೇಳ ಬಯಸುವುದೇನೆಂದರೆ, ನನ್ನ ಅಣ್ಣನವರಾದ ರೇವಣ್ಣನವರು ಹೇಳಿದ ಮಾತುಗಳಾವವೂ ತಳ್ಲಿಹಾಕ ತಕ್ಕಂತ ಮಾತುಗಳಲ್ಲ. ನೀವು ಬ್ರಷ್ಟರಾದ ಯಡಿಯೂರಪ್ಪನವರಂತವರ ವಿಚಾರ ಪ್ರಸ್ತಾವಿಸದೆ ಕೇವಲ ಕಾಂಗ್ರೆಸ್ಸಿನ ವಿಚಾರವನ್ನಷ್ಟೆ ಎತ್ತಿರುವಂತದ್ದು ನಿಮ್ಮ ಘನತೆಗೆ ತಕ್ಕುದಾದುದಲ್ಲ ಎಂಬುದು ನನ್ನ ಅಭಿಪ್ರಾಯ
 

ಶ್ರೀಮಾನ್ ಎಚ್ಡೀಕೆ ರವರೆ,ತಾವು ತಮ್ಮ ಅಣ್ಣ ನವರ ಪ್ರಶ್ನೆಗೆ ಕೊಟ್ಟ ಉತ್ತರವನ್ನು ಸರಿಯಾಗಿ ಓದಿಲ್ಲವೆನಿಸುತ್ತದೆ. ಒಮ್ಮೆ ಓದಿನೋಡಿ ನಂತರ ಪ್ರತಿಕ್ರಿಯಿಸಿಏಕೆಂದರೆ ಯಡಯೂರಪ್ಪನವರ ಭ್ರಷ್ಟತೆಯ ಬಗ್ಗೆ ಬರೆಯಲು ಕುಳಿತರೆ ತಿಂಗಳುಗಳುರುಳಿದರೂ ಮುಗಿಯುವುದಿಲ್ಲ. ಇಲ್ಲ ಅದನ್ನು ಪ್ರಸ್ತಾಪಿಸಲು ನಾನು ಹೋಗಿಲ್ಲ. ನನ್ನ ಈ ಲೇಖನದ ಉದ್ಧೇಶವಿಷ್ಟೆ ಒಂದು ಅತ್ಯುತ್ತಮವಾದ ಚಳುವಳಿ ತಮ್ಮ ಅಂಡಿಗೆ ಬಂದಾಗ ಅದನ್ನು ಹತ್ತಿಕ್ಕಲು ಕಾಂಗ್ರೆಸ್ ಎಷ್ಟೆಲ್ಲಾ ಹೀನವಾಗಿ ನಡೆದುಕೊಳ್ಳುತ್ತದೆ ಮತ್ತು ನಡೆದುಕೊಳ್ಳುತ್ತಿದೆ ಎನ್ನುವುದನ್ನು ತೋರಿಸುವ ಸಣ್ಣಪ್ರಯತ್ನ. ಮತ್ತು ಆ ನಡೆಗಳು ಜನರ ಮನದಲ್ಲಿ ಪ್ರಭಾವಬೀರಿ ಚಳುವಳಿ ಎಲ್ಲಿ ದಿಕ್ಕು ತಪ್ಪುತ್ತದೋ ಎಂಬ ಆತಂಕದಿಂದ ಬರೆದದ್ದೇ ಹೊರತು ಇನ್ಯಾವ ಉದ್ದೇಶದಿಂದಲ್ಲ. ಇನ್ನುಳಿದಂತೆ ಭ್ರಷ್ಟಾಚಾರ ರಾಮದೇವ್ ಮಾಡಿದರೂ ತಪ್ಪೇ  ಒಂದು ವೇಳೆ ಅಣ್ಣಾಹಝಾರೆ ಮಾಡಿದರೂ ತಪ್ಪೇ. ಅದನ್ನು ಸಮರ್ಥಿಸುವ ಪ್ರಶ್ನೆಯೇ ಇಲ್ಲನಿಮ್ಮಉಮಾಶಂಕರ

ವಿ.ಎಂ.ಶ್ರೀನಿವಾಸ ಗುರು, 06/09/2011 - 12:24

ಹಾಯ್ ರೇವು,ನಿಮಗನ್ನಿಸಿದ್ದನ್ನು ಹೇಳಿದ್ದೀರಿ ನಿಮ್ಮ ಅಭಿಪ್ರಾಯವೇನೇ ಇರಲಿ, ನೀವು ಬರೆದ ದಾಟಿ ಮಾತ್ರ ಸೊಗಸಾಗಿದೆ. ಇದೇ ದಾಟಿಯಲ್ಲಿ ವಿಸ್ಮಯನಗರಿಯಲ್ಲಿ ಲೇಖನಗಳನ್ನು ಬರೆಯುವಂತಾದರೆ, ವಿಸ್ಮಯನಗರಿಯ ಸೊಬಗು ಇನ್ನಷ್ಟು ಹೆಚ್ಚಾಗಬಹುದು.ಗುಡ್ ಲಕ್.   

ಗಂಧ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/09/2011 - 09:49

"ಅಂಧಕಾಲತ್ತಿಲ್" ಅಂದರೇನು ಗುರುವರ್ಯಾ?? ಅದು "ಅಂದಕಾಲತ್ತಿಲ್" ಎಂದಾಗಬೇಕಿತ್ತಲ್ಲವೊ??
ಇಂತಿ ನಿಮ್ಮ ಪ್ರೀತಿಯ,
ಗಂಧ
 

ವಿ.ಎಂ.ಶ್ರೀನಿವಾಸ ಗುರು, 06/09/2011 - 12:27

ಹಾಯ್ ಗಂಧ.ತುಂಬಾ ದಿನಗಳಾಗಿ ಹೋದವು, ಎಲ್ಲಿ ಹೋಗಿದ್ದಿರಿ, ಆರೋಗ್ಯ ತಾನೆ.? ಅಂದಕಾಲತ್ತಿಲ್ ಎಂಬ ನಿಮ್ಮ ತಿದ್ದುಪಡಿ ಸರಿಯಾದುದಾಗಿದೆ.ಸಿಗೋಣ.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/09/2011 - 14:10

ನಮಸ್ಕಾರ ಶೀನಣ್ಣ. ನನ್ನ ಆರೋಗ್ಯದ ಕಥೆ ಹಾಗಿರಲಿ, ನೀವೇನು ಶ್ರೀರಾಮಚಂದ್ರ ಎದೆಗೆ ಬಿಲ್ಲೇರಿಸಿದಂತೆ ತಾವು ಕ್ಯಾಮರಾ ಏರಿಸಿ ಬಂಡೆಗಲ್ಲನ್ನು ತಳ್ಳಲು ಪ್ರಯತ್ನ ಪಡುತ್ತಿರುವುದು? ಉಮಾಶಂಕರರ ಬ್ರಷ್ಟಾಚಾರ ವಿರೋಧಿ ಚಳುವಳಿಯ ಮೆರವಣಿಗೆಗೆ ದಾರಿ ಮಾಡಿಕೊಡಲೊ?????

ವಿ.ಎಂ.ಶ್ರೀನಿವಾಸ ಗುರು, 06/09/2011 - 14:22

ಯಾಕಾಗಬಾರದು ತಮ್ಮಾ..? ಜೊತೆಗೆ ನೀ ಬರೋಲ್ವೆ.!!

ಉಮಾಶಂಕರ ಬಿ.ಎಸ್ ಗುರು, 06/09/2011 - 13:06

ಪ್ರಿಯ ಗಂಧ ರವರೆ,ನೀವು ಹೇಳಿದ್ದು ಸರಿಯಾಗಿಯೇ ಇದೆ ಆದರೆ ನಾನು ಬೇಕಂತಲೇ 'ಅಂಧಕಾಲತಿಲ್' ಎಂದೇ ಉಪಯೋಗಿಸಿದ್ದೇನೆನೀವು ತಿಳಿದಂತೆ 'ಅಂದಕಾಲತ್ತಿಲ್' ಎನ್ನುವುದು ತಮಿಳು ಮೂಲದ ಆ ಕಾಲದಲ್ಲಿ ಎನ್ನುವ ಅರ್ಥ ಕೊಡುವಂತದ್ದು.ಇಲ್ಲಿ ನಾನು ಉಪಯೋಗಿಸಿರುವುದು ಜನರಿಗೆ ಏನೂ 'ತಿಳಿಯದ ಕಾಲ' ಜನರನ್ನು ಕತ್ತಲೆಯಲ್ಲಿಟ್ಟಂತಹ ಕಾಲ ಎಂಬ ಅರ್ಥದಲ್ಲಿ ಬಳಸಿದ್ದೇನೆಆದರೆ ಆ ಪದ ಕನ್ನಡಲ್ಲಿ ಇದೆಯೋ ಇಲ್ಲವೋ ಎನ್ನುವ ಗೋಜಿಗೆ ಹೋಗಿಲ್ಲ. ತಪ್ಪಿದ್ದರೆ ಕ್ಷಮೆಯಿರಲಿ, ಎಲ್ಲಕ್ಕಿಂತ ಹೆಚ್ಚಾಗಿ ಬಹಳದಿನಗಳನಂತರನಿಮ್ಮನ್ನು ವಿಸ್ಮಯದಲ್ಲಿ ನೋಡಿ ಖುಷಿಯಾಯ್ತುಇತಿಉಮಾಶಂಕರ

ಬಾಲ ಚಂದ್ರ ಗುರು, 06/09/2011 - 17:11

ಪ್ರೀತಿಯ ಉಮಾಶಂಕರ್,
ಚೆನ್ನಾಗಿದೆ ಬಿಜೆಪಿಯೋ? ಕಾಂಗ್ರೆಸ್ಸೋ? ಯಾವುದಾದರೂ ಸರಿ, ಭ್ರಷ್ಟಾಚಾರದ ವಿರುದ್ದ ಒಂದು ಪ್ರಬಲವಾದ ಕಾಯ್ದೆಯನ್ನು ತರಲು ಯಾರಿಗೂ ಇಷ್ಟವಿಲ್ಲ. ಇಂತಹ ಸಮಯದಲ್ಲಿಎಲ್ಲರ ಮನದ ಆಕ್ರೋಶ ನಿಮ್ಮ ವಿವೇಕಯುಕ್ತ ಬರಹದಿಂದ ಹೊರಬಂದಿದೆ ಎನ್ನಬಹುದು.ಇಲ್ಲಿ ಬಾಬಾ ರಾಂದೇವ್ ಅವರ ಸಾಚಾತನ ಪ್ರಶ್ನಿಸುವ ಅಗತ್ಯವಿಲ್ಲವೆಂದು ನನ್ನ ಅನಿಸಿಕೆ. ಯಾಕೆಂದರೆ ಭ್ರಷ್ಟಾಚಾರದ ವಿರುದ್ದ ಯಾರೇ ಹೋರಾಡಲಿ ಅವರಿಗೆ ಬೆಂಬಲ ಕೊಡುವುದೇ ಒಳ್ಳೆಯದು. ಇಂದಲ್ಲ ನಾಳೆ ಅಂತಹ ಕಾಯ್ದೆ ಜಾರಿಗೆ ಬಂದರೆ, ರಾಂದೇವ್ ಕೂಡ ಅದಕ್ಕೆ ಒಳಪಡುವರೆಂದು ಆಶಿಸೋಣವೇ?
ಮೆಚ್ಚುಗೆಗಳೊಂದಿಗೆ,
ಸಸ್ನೇಹಬಾಲಚಂದ್ರ

ಬಾಲಣ್ಣಪ್ರತಿಕ್ರಿಯೆಗೆ ತಡವಾಗಿ ಪ್ರತಿಕ್ರಿಯಿಸಿದ್ದಕೆ ಕ್ಷಮೆ ಇರಲಿ.ಪ್ರಸ್ತುತದಲ್ಲಿ ಅಂತದ್ದೊಂದು ಕಾಯ್ದೆ ಆಗುವುದಿಲ್ಲ ಎನ್ನುವುದನ್ನು ಪ್ರಚಲಿತ ಬೆಳವಣಿಗೆಗಳು ತೋರಿಸುತ್ತಿವೆಕಾದು ನೋಡೋಣಇತಿ ನಿಮ್ಮ ಉಮಾಶಂಕರ

yaddi (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 06/09/2011 - 18:42

ನನ್ನ ಎನು ಮಾದೊಕೆ ಅಗೊಲ್ಲ, ನನ್ನ ಹತ್ರ್ ದೆವರ ಆಶಿರ್ವಾದ ಇದೆ. ದೆವರ್ಗೆ ದುದ್ದು ಕೊದು ನನ್ನ ಯಾರು ಎನು ಮದೊಲ್ಲ. ಅನ್ನ ಹಅಜಾರೆ ಮತ್ತು ರುಮ್ಮ್ ದೆವಗೆ ಲಕ್ವ ಹೊದ್ದಿಲೆ ಅನ್ತ ವಾಮಚರ ಮಾದ್ತೆಸ್ತೆನ್,ಯದ್ದಿ ಜಿನ್ದಬಾದ್, ದ

venkatesha (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 06/19/2011 - 09:13

ಉಮಾ ಶನ್ಕರ್ ನಿಮ್ಮ ಬರಹ ಇಸ್ತವಾಯ್ತು. ಇಮ್ಮಿನ್ದ ಇನ್ನಸ್ತು ಇನ್ತ ಬರಹಗಲನ್ನ ನಿರೀಕ್ಶಿಸುತ್ತೆನೆ.

ಯಡ್ಡಿ ಮತ್ತು ವೆಂಕಟೇಶ್ ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು

Nalini ಶುಕ್ರ, 06/24/2011 - 15:05

ಯಾವ ಪಕ್ಷವು ಸರಿ ಇಲ್ಲ ಜನರ ನೆಮ್ಮದಿ ಹಾಳು ಮಾಡೊ ನಿಯಮಗಳನ್ನು ತರ್ತಾರೆ ನ್ಯಾಯ ಕೇಳಿದ್ರೆ ನೀನ್ ಸಾಚನ ಅಂತ ಕೇಳುತ್ತಾರೆ. ಭಾರತ ಪ್ರಾಜಾಪ್ರಭುತ್ವ ರಾಷ್ಟ್ರ ಅಂತ ಎಲ್ರು ಹೇಳ್ತಾರೆ ನಡೆಯುತ್ತಿರುವುದು ಹಾಗೆನಾ ಅಂತ ನಾವು ಯೋಚಿಸಬೇಕಾಗಿದೆ.
ಕಾಂಗ್ರೆಸ್ ಕೇಂದ್ರದಲ್ಲಿ ದೇಶ ಹಾಳು ಮಾಡೊ ಕೆಲಸ ಮಾಡುತ್ತಿದ್ದರೆ ಇಲ್ಲಿ ಬಿಜೆಪಿಯವರು ರಾಜ್ಯ ಹಾಳ್ಮಾಡ್ತಿದಾರೆ. ಒಟ್ಟಿನಲ್ಲಿ ಭಾರತ ಮಾತೆ ಧನ್ಯ ಇಂತ ಮನೆಹಾಳು ಜನರಿಗೆ ಜನ್ಮ ನೀಡಿದ್ದಕ್ಕೆ.Cool

ಉಮಾಶಂಕರ ಬಿ.ಎಸ್ ಶನಿ, 07/09/2011 - 11:05

ನಲಿನಿ ಮೇಡಂನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳುನಿಮ್ಮ ಮಾತು ಒಪ್ಪತಕ್ಕದ್ದೇ. ಇಂದು ಯಾವ ರಾಜಕೀಯ ಪಕ್ಷಗಳು ಜನಸಾಮಾನ್ಯನಲ್ಲಿ ನಂಬಿಕೆಯುಳಿಸಿಕೊಂಡಿಲ್ಲ.ಹಾಗೆಂದು ನಾವು ಸುಮ್ಮನೆ ಕೂರಲೂ ಆಗುವುದಿಲ್ಲ, ಏಕೆಂದರೆ ಇದು ನಾವೇ ಒಪ್ಪಿ ಅಪ್ಪಿಕೊಂಡಿರುವ ವ್ಯವಸ್ಥೆ.ನಿಮ್ಮಉಮಾಶಂಕರ

belstaff jackets (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 06:55


Dad is busy every day outside, do not have belstaff jackets time to read. He will do regret belstaff bags it? Sometimes I really want to belstaff jackets discuss these books determined to Dad, which can be thought belstaff uk of six mother goes on the bleak white belstaff uk powder coated long face, the same belstaff jackets block as the wall on the road the north face uk , immediately give up north face the idea. Each hospital has a mulberry bagssmall door set with a narrow mulberry bags sale garden path connected to mulberry handbags the left, leading to the garden. cyh12-29

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/01/2012 - 11:54

tumba utama lekana

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.