Skip to main content

ಸಂಜು ವೆಡ್ಸ್ ಗೀತಾ... ಸುರಿವ ಮಳೆಯಲ್ಲಿ ಮೂಡಿಬಂದ ಸುಂದರ ಪ್ರೇಮಕಥೆ

ಬರೆದಿದ್ದುApril 13, 2011
18ಅನಿಸಿಕೆಗಳು

[img_assist|nid=8760|title=sanju weds geetha|desc=|link=node|align=left|width=149|height=152] ಸಾಕಷ್ಟು ಕಾಲದಿಂದ ಅದೇ "ಫಾರೀನ್ ಔಟ್ ಡೋರ್ ಲೋಕೇಶನ್" ಲವ್ ಸ್ಟೋರಿ, ಅದೇ ಮಚ್ಚು-ಲಾಂಗ್ ಗಳ ಅರ್ಭಟದಲ್ಲಿ ನಲುಗಿಹೋಗಿದ್ದ ಕನ್ನಡ ಚಿತ್ರರಂಗಕ್ಕೆ ನಾಗಶೇಖರ್ ರವರ "ಸಂಜು ವೆಡ್ಸ್ ಗೀತಾ" ಚಿತ್ರ ಒಳ್ಳೇ ಹಿತಾನುಭವ ತರಿಸಿದೆ. ೨ ಗಂಟೆ ೧೫ ನಿಮಿಷದ ಉದ್ದಕ್ಕೂ ಮುದನೀಡುವ ಕಥೆ ಪ್ರೇಕ್ಷಕರನ್ನ ಮತ್ತೆ ಚಿತ್ರಮಂದಿರಗಳತ್ತ ಬರುವಂತೆ ಮಾಡಿದೆ. ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರದ ವಿಮರ್ಶೆ ನಿಮಗಾಗಿ...
ಇಂಜಿನಿಯರಿಂಗ್ ಪದವಿಯನ್ನ ಪಡೆದು ಆಗಷ್ಟೇ ಊರಿಗೆ ಮರಳಿರುವ ನಾಯಕ, ಹೀಗೆ ಅಂಗಡಿಯೊಂದರ ಬಳಿ ನಿಂತು ಮಾತನಾಡುತ್ತಿರುವಾಗ ನಾಯಕಿಯ ಪ್ರವೇಶ. ಮಾಮೂಲಿಗಿಂತ ಭಿನ್ನವಾದ ಇಂಟ್ರೋಡಕ್ಷನ್...(ನಾಯಕಿಯು ದಾರಿಯಲ್ಲಿ ನಿಂತಿದ್ದ ನಿರ್ಗತಿಕ ಹೆಂಗಸಿಗೆ ಬ್ರೆಡ್, ಹಣ ಕೊಡುವದು, ಯಾರೋ ಗೊತ್ತಿಲ್ಲದ ವ್ಯಕ್ತಿಯನ್ನ ಇಷ್ಟು ಪ್ರೀತಿಸುವ/ಆದರಿಸುವ ನಾಯಕಿಯ ನಡುವಳಿಕೆ ನಾಯಕನನ್ನ ಸೆಳೆಯುತ್ತದೆ... "ಬ್ಯೂಟಿ"... ಪದ ಮೆಚ್ಚುಗೆ ಸೂಸುವಂತೆ ಅವನ ಬಾಯಿಯಿಂದ ಹೊರಬರುತ್ತದೆ...). ನಂತರ ನಾಯಕನು ತನ್ನ ಮಾವನನ್ನ ಪುಸಲಾಯಿಸಿ ನಾಯಕಿಯ ಹಿಂದೆ ಹೋಗುವುದು, ಅವಳ ಮನಸನ್ನ ಗೆಲ್ಲುವುದು (ಆಟೋಪ್ರಯಾಣದ ಸಂದರ್ಭ...), ಅವಳನ್ನ ಮದುವೆಯಾಗುವಂತೆ ಒಪ್ಪಿಸುವುದು ಎಲ್ಲ ನೆಡೆಯುತ್ತದೆ. ಅದರೆ ಇಲ್ಲಿ ಟ್ವಿಸ್ಟ್ ನೀಡಿರುವ ನಿರ್ದೇಶಕರು ನಾಯಕಿಯ ಮಾವ ಬಾಲ್ಯದಲ್ಲಿ ಮಾಡಿದ ಶೋಷಣೆ ಮತ್ತು ಅದೇ ಹುಚ್ಚಿನಿಂದ ಅವನು ನಾಯಕಿಯ ಮೇಲೆ ಮಾಡುವ ಬಲತ್ಕಾರ (ನಾಯಕ-ನಾಯಕಿ ಅಂದು ಮದುವೆಯಾಗುವ ತಯಾರಿಯಲ್ಲಿರುತ್ತಾರೆ...) ಇಬ್ಬರು ಪ್ರೇಮಿಗಳ ಸುಂದರ ಕನಸನ್ನ ನುಚ್ಚುನೂರುಮಾಡಿಬಿಡುತ್ತದೆ. ನಾಯಕನು ಅವನನ್ನ ಕೊಲೆಮಾಡುವ ಸನ್ನಿವೇಶದೊಂದಿಗೆ ಚಿತ್ರ ವಿರಾಮಕ್ಕೆ ಬರುತ್ತದೆ.
ಚಿತ್ರದ ನಂತರದ ಭಾಗ ನಾಯಕನ ಹೋರಾಟ, ಮಾನಸಿಕ ಸ್ಥಿಮಿತ ಕಳೆದುಕೊಂಡ ನಾಯಕಿ ದಿಕ್ಕುತಪ್ಪಿ ಕಳೆದುಹೋಗಿ ಬೆಂಗಳೂರಿಗೆ ಬರುವುದು, ನಾಯಕ ಜೈಲಿನಿಂದ ಹೊರಬರುವ ಪ್ರಯತ್ನಕ್ಕೆ ಜೈಲಿನ ಹಳೆಯ ಕೈದಿ ಸಾಥ್ ನೀಡುವುದು, ಪರಾರಿಯಾಗುವ ಸನ್ನಿವೇಶ... ಇವೆಲ್ಲದರ ನಡುವೆ ನಾಯಕ-ನಾಯಕಿ ಮತ್ತೆ ಒಂದಾಗುವರೆ ಎಂಬುದನ್ನ ತಿಳಿಯುವುದಕ್ಕೆ ನೀವು ಈ ಚಿತ್ರವನ್ನ ನೋಡಬೇಕು..
"ಅರಮನೆ" ಚಿತ್ರದ ನಂತರ ನಾಗಶೇಖರ್ ರವರ ಪ್ರಯತ್ನ ನಿಜಕ್ಕೂ ಮೆಚ್ಚುವಂತದ್ದೆ. ಜೆಸ್ಸಿ ಗಿಫ್ಟ್ ಅವರ ಸಂಗೀತದಲ್ಲಿ ಮೂಡಿಬಂದ ಎರಡು ಹಾಡುಗಳು "ಸಂಜು ಮತ್ತು  ಗೀತಾ..." ಹಾಗೂ "ಗಗನವೇ ಬಾಗಿ.." ನಿಜಕ್ಕೂ ಇಂಪಾಗಿವೆ. ಕವಿರಾಜ್ ಮತ್ತು ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಸತ್ಯರವರ ಕೊಡಗಿನ ಸೌಂದರ್ಯದ ಮನೋಹರ ಛಾಯಾಗ್ರಹಣಕ್ಕೆ ಹಾಟ್ಸ್ ಆಫ್..
ಮಳೆ ಹನಿ, ನಾಯಕ ಮತ್ತು ನಾಯಕಿಯ ಬಿಟ್ಟರೆ ಇತರ ಪೋಷಕ ಪಾತ್ರಗಳು ಪಾತ್ರಕ್ಕಣುಗುಣವಂತೆ ಬಂದು ಹೋಗುತ್ತವೆ. ಚರಣ ರವರ ನಾಯಕನ ಮಾವನ ಪಾತ್ರ ಗಮನ ಸೆಳೆಯುತ್ತದೆ. ಇನ್ನುಳಿದಂತೆ ಸುಹಾಸಿನಿ, ಜೈಜಗದೀಶ್, ಶರತ್ ಲೋಹಿತಶ್ವ, ಅರುಣ್ ಸಾಗರ್, ರಂಗಾಯಣ ರಘು ರವರ ಪಾತ್ರಗಳು ದೀರ್ಘವಲ್ಲದಿದ್ದರೂ ಸಂದರ್ಭಕ್ಕೆ ಅನುಗುಣವಾಗಿವೆ...
ಉತ್ತಮ ಚಿತ್ರಗಳ ಬರವಿರುವ ನಮ್ಮ ಸಿನೆಮಾ ರಂಗಕ್ಕೆ ನಿಜಕ್ಕೂ "ಸಂಜು ವೆಡ್ಸ್ ಗೀತಾ..." ಹೊಸಚೈತನ್ಯ ನೀಡುವ ಟಾನಿಕಿನಂತೆ ಬಂದಿದೆ. ಕನ್ನಡ ಚಿತ್ರಾಭಿಮಾನಿಗಳು ಎಂದಿನಂತೆ ತಮ್ಮ ಪ್ರೋತ್ಸಾಹ ನೀಡಿ ಚಿತ್ರದ ಯಶಸ್ಸಿಗೆ ಕಾರಣರಾಗುತ್ತಾರೆ ಎಂಬ ಅಶಯಯೊಂದಿಗೆ ಚಿತ್ರ ಶತದಿನೋತ್ಸವ ಪೂರೈಸಲಿ ಎಂದು ಈ ಕನ್ನಡಿಗನ ಬಯಕೆ...
 
 
 
(ವಿಸ್ಮಯ ನಗರಿ ಸಮೂಹ ಈಗ Orkut ನಲ್ಲಿ..., ಸದಸ್ಯರಾಗಲು ಈ ಲಿಂಕ್ ಅನ್ನು ಕ್ಲಿಕಿಸಿ: http://www.orkut.co.in/Main#Community?cmm=96442553)
ಹಳೆಯ, ಸುಮಧುರ ಕನ್ನಡ ಚಿತ್ರ ಹಾಡುಗಳ ಸಾಹಿತ್ಯಕ್ಕಾಗಿ ನನ್ನ ಬ್ಲಾಗ್ ತಾಣ nannaishtadahaadu.blogspot.com ಗೆ ಒಮ್ಮೆ ಭೇಟಿ ನೀಡಿ...

ಲೇಖಕರು

ವಿನಯ್_ಜಿ

ಮನದ ಮಾತು...

ಹುಟ್ಟಿದ್ಧು: ಉಡುಪಿ ಓದಿದ್ದು, ಬೆಳೆದದ್ದು: ಬೆಂಗಳೂರು ಹವ್ಯಾಸ: ಇಂಟರ್ನೆಟ್ ಬ್ರೌಸಿಂಗ್, ಬೀದಿ ಸುತ್ತುವುದು..... ( ಅದೆಲ್ಲಾ ಮಾಡಿ ಸಮಯ ಉಳಿದರೆ ಪುಸ್ತಕ ಓದುವುದು.... :) )

ಅನಿಸಿಕೆಗಳು

ವ್ಹಾವ್!!! this movie is very very nice!!! ಈ ಸಿನಿಮಾದಲ್ಲಿ "ಗಗನೆವೆ ಬಾಗಿ"ಎಂಬ ಹಾಡಂತು ತುಂಬಾ ತುಂಬಾನೆ ಚೆನ್ನಾಗಿ ಮೂಡಿಬಂದಿದ್ದೆ!!ಕಿವಿಗೆ ಕೇಳಲು ಇಂಪಾಗಿದೆ

ವಿನಯ್_ಜಿ ಗುರು, 04/14/2011 - 12:26

ಪ್ರತಿಕ್ರಿಯಿಸಿದಕ್ಕೆ ಬಹಳ ಧನ್ಯವಾದಗಳು ವೆಂಕಟೇಶ್ ರವರೆ... :)

ವೆಂಕಟೇಶ.ಕುಲ್ಕರ್ಣೀ ಗುರು, 04/14/2011 - 13:45

HELLO VINAY EDDIYA????????

ವಿನಯ್_ಜಿ ಗುರು, 04/14/2011 - 14:24

hello venkatesh...

ಹೇಮಂತ ಭಾನು, 04/17/2011 - 15:10

ಇನ್ನು ನೊಡಿಲ್ಲ, ನೀವು ಹೇಳಿದಮೆಲೆ ನೊಡಲೇ ಬೇಕು ಅನ್ಸುತ್ತೆ ..ಖ೦ಡಿತ ನೊಡ್ತೆನಿ.. Cool

ವಿನಯ್_ಜಿ ಸೋಮ, 04/18/2011 - 11:35

ಧನ್ಯವಾದಗಳು ಹೇಮಂತ್ ರವರೆ,
ಚಿತ್ರವನ್ನ ನೋಡಿ ನಿಮ್ಮ ಅಭಿಪ್ರಾಯವನ್ನ ಇಲ್ಲಿ ದಯವಿಟ್ಟು ಬರೆಯಿರಿ... :)
-- ವಿನಯ್

ಹೇಮಂತ ಭಾನು, 04/24/2011 - 12:02

ಸ೦ಜು ವೆಡ್ಸ್ ಗೀತಾ ಚಿತ್ರ ಉತ್ತಮವಾಗಿ  ಮೂಡಿ ಬ೦ದಿದೆ... ಯಾವುದೆ ಚಿತ್ರ ಬ೦ದರು ಅದಕ್ಕೆ ಟಿಕೆ ಟಿಪ್ಪಣಿ ಇದ್ದೆ ಇರುತ್ತೆ.. ಯಾವುದು ಪರಿಪೂಣ೯ ಅಲ್ಲ..ಹಾಗೆ ಈ ಚಿತ್ರದ ಕಥೆಯಲ್ಲಿ ಕೆಲವೊ೦ದು ಬದಲಾವಣೆ ಆಗಬೆಕಿತ್ತು ಅ೦ತ ನನ್ನ ಭಾವನೆ....ಆದರೂ ಸದ್ಯದದಲ್ಲಿ ಕನ್ನಡ ಚಿತ್ರಗಳು  ಅಷ್ಟೆನು ಯಶಸ್ವಿ ಪ್ರದರ್ಶನ ಕಾಣುತಾ ಇಲ್ಲ.. .. ಇದ್ದಿದ್ದರಲ್ಲೆ ಈ ಸಿನಿಮಾ ಚೆನಾಗಿದೆ..ಮತ್ತೊಮ್ಮೆ ಮು೦ಗಾರು ಮಳೆಯ ದೃಶ್ಯ ಗಳನ್ನು ನೆನಪಿಗೆ ತರುತ್ತದೆ..ಚಿತ್ರದುದ್ದಕ್ಕೂ ಮಳೆ, ಇಂಪಾದ ಹಾಡುಗಳು, ತಂಪಾದ ಪ್ರಕೃತಿ ದೃಶ್ಯಗಳು, ರಮ್ಯಾಳ ಸ್ನಿಗ್ದ ಸೌಂದರ್ಯ, ಕಿಟ್ಟಿಯ ಆಶೆಯ ಕಣ್ಣುಗಳು,  ಸಹಜ ಅಭಿನಯ, ತಬಲಾ ನಾಣಿಯಯವರ ಹಾಸ್ಯಭರಿತ ತತ್ವದ ಮಾತುಗಳು, ಒಟ್ಟಿನಲ್ಲೇ ಒಮ್ಮೆ ನೋಡಲೇಬೇಕಾದ ಚಿತ್ರ ಸಂಜು ವೆಡ್ಸ್ ಗೀತಾ ... 

ವಿನಯ್_ಜಿ ಸೋಮ, 04/25/2011 - 11:52

ಹೇಮಂತ್ ರವರೆ,
ನಿಮ್ಮ ಅನಿಸಿಕೆಯನ್ನ ವಿಸ್ಮಯನಗರಿಯಲ್ಲಿ ಹಂಚಿಕೊಂಡಿದಕ್ಕೆ ತುಂಬು ಹೃದಯದ ಧನ್ಯವಾದಗಳು... :)
-- ವಿನಯ್

sanatanam (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 04/24/2011 - 11:08

ಚಿತ್ರವಂತೂ ಚೆನ್ನಗಿದೆ.ಆದರೆ ಒಂದು ಚಿತ್ರಕ್ಕೆ ಇಷ್ಟು ಹಾಡುಗಳು ಇರಲೇಬೇಕು ಎಂದು ಕಡ್ಡಾಯವೇನ್ನಿಲ್ಲ ಆದರೂ ಕಿಟ್ಟಿ ಚಿತ್ರದಲ್ಲಿ ಬರುವಾಗ ಹಾಡಿನ ಅವಶ್ಯಕತೆಯಂತು ಇರಲ್ಲಿಲ್ಲ

ವಿನಯ್_ಜಿ ಸೋಮ, 04/25/2011 - 11:49

ಸನಾತನಮ್ ರವರೆ,
ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು. ಹೌದು, ಆ ಹಾಡಿನ ಅವಶ್ಯಕತೆ ನಿಜಕ್ಕೂ ಇರಲಿಲ್ಲ. ಆದರೆ "ಹೀರೋ ಇಂಟ್ರೋಡಕ್ಷನ್" ಅನ್ನೋ concept ಮುಂದೆ ಎಲ್ಲಾ ignored ಡೇ ಬಿಡಿ...!!

Pattar ಸೋಮ, 05/09/2011 - 10:50

ವಿನಯ್ ಅವರೇ "ಸ೦ಜು ವೆಡ್ಸ್ ಗೀತಾ" ಚಿತ್ರವನ್ನು ನಾನು ಮೊನ್ನೆ ನೊಡಿದೆ ಇದೊ೦ದು ದುರ೦ತ ಪ್ರೇಮಕಥೆಯಾದರೂ ಸು೦ದರ ಚಿತ್ರಣ...ಸ೦ಜು ಮತ್ತು ಗೀತಾ ಅನ್ನೋ ಹಾಡು ಮು೦ಗಾರು ಮಳೆ ಚಿತ್ರದ "ಅನಿಸುತಿದೆ ಯಾಕೋ ಇ೦ದು" ಅನ್ನೋ ಹಾಡಿನ ಹಾಗೆ ಅಸ೦ಬದ್ಧವಾಗಿ ಮೂಡಿಬ೦ದಿದೆ... ಆ ಸನ್ನಿವೇಶ ಮನಕಲುಕುವ೦ತಿದೆ ಅ೦ತದ್ರಲ್ಲಿ ಸ೦ಜು ಮತ್ತು ಗೀತಾ ಸೇರಬೇಕು ಅ೦ದ್ರೆ ಕೊನೆಗೆ ಸೇರಿಸ್ಲೇಬೇಕಾಗಿತ್ತು...ದುರ೦ತ ಸಾವಿನ ಜೊತೆ ಸೇರಿದ ಪ್ರೇಮಿಗಳನ್ನು ನೋಡಿದ ಪ್ರೇಕ್ಷಕ ಮನಸ್ಸು ಪಿಚ್ಚೆನಿಸದೇ ಹೊರಗೆ ಬರಲಾರ...""""""ಕಾಲ್ಪನಿಕತೆಗೆ ಮನಸೋಲುವ ಮನುಷ್ಯ ನೈಜತೆಗೆ ಸ್ವಲ್ಪವೂ ಬೆಲೆ ಕೊಡುವುದಿಲ್ಲ"""" 

ವಿನಯ್_ಜಿ ಮಂಗಳ, 05/10/2011 - 12:30

ಚಿತ್ರವನ್ನ ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ಬಹಳ ಧನ್ಯವಾದಗಳು ಪತ್ತಾರ್ ರವರೆ, 
ಹೌದು, ಅವರಿಬ್ಬರು ಕೊನೆಗೆ ಸೇರಿದ್ದರೆ ಚಿತ್ರದ ಕ್ಲೈಮಾಕ್ಸ್ ಗೆ ಏನು ತೊಂದರೆಯಾಗುತ್ತಿರಲಿಲ್ಲ. ಅದರೆ ದುರಂತ ಅಂತ್ಯವೂ ಪರವಾಗಿಲ್ಲ. ನಾಗಶೇಖರ್ ರವರು "ಅರಮನೆ" ಚಿತ್ರದಲ್ಲೂ ಹೇಗೆ ಮಾಡಿದ್ದಾರೆ. ಅದರೆ ಕಥೆಯ ನಿರೂಪಣೆ ಅದಕ್ಕಿಂತ ಉತ್ತಮವಾಗಿದೆ.
""""""ಕಾಲ್ಪನಿಕತೆಗೆ ಮನಸೋಲುವ ಮನುಷ್ಯ ನೈಜತೆಗೆ ಸ್ವಲ್ಪವೂ ಬೆಲೆ ಕೊಡುವುದಿಲ್ಲ""""  -- :) ಹೌದು, ನೈಜತೆ ವಾಸ್ತವಿಕತೆಯಂತೆ ಕಣ್ಣು ಕುಕ್ಕುವುದರಿಂದ ಎಲ್ಲರೊ ಅದರಿಂದ ದೂರ ಓಡುವವರೇ ಹೆಚ್ಚು.. :(
-- ವಿನಯ್

ದೀಪಾ ಪಿ.ಎನ್ ಶನಿ, 05/21/2011 - 16:12

ಪ್ರೀತಿ ಪ್ರೇಮ ಅನ್ನೋದು ಆಕಷಣೆ ಅಷ್ಟ ಅದನ್ನು ಮುಂದುವರೆಸಿ ಜೀವನ ಹಾಳು ಮಾಡಿಕೊಳ್ಳ ಬೇಡಿ

ವಿನಯ್_ಜಿ ಸೋಮ, 05/23/2011 - 11:42

ದೀಪಾ ರವರೆ, ಇದು ಚಿತ್ರವನ್ನು ನೋಡಿದ ಮೇಲೆ ಬಂದ ಅನಿಸಿಕೆಯಾ...?

ashwini_patil ಧ, 05/18/2011 - 23:09

sanju mate gita serbeku anta song veru nicee

ವಿನಯ್_ಜಿ ಗುರು, 05/19/2011 - 11:49

ಹೌದು ಅಶ್ವಿನಿ, ಈ ಹಾಡಿನ picturisation ಮತ್ತು ಸಂಗೀತ ಏರಡೂ ಚೆನ್ನಾಗಿವೆ :)
-- ವಿನಯ್

mahadesha ಭಾನು, 05/22/2011 - 15:30

ಸ೦ಜು ವೆಡ್ಸ್ ಗೀತಾ ಚಿತ್ರ ಉತ್ತಮವಾಗಿ ಮುಡಿಬಂದಿದೆ, ಇಂಪಾದ ಹಾಡುಗಳು ಇದರಲ್ಲು ಎರಡು ಹಾಡುಗಳು  ತುಂಬ ಸುಂದರವಾಗಿದೆ. ಎಲ್ಲಾರ ಮಾತಿನಲ್ಲು ಆ ಹಾಡಿನದೆ ತುಣುಕು.
Good Job.

ವಿನಯ್_ಜಿ ಸೋಮ, 05/23/2011 - 11:41

ಚಿತ್ರವನ್ನ ನೋಡಿ ಮೆಚ್ಚಿದಕ್ಕೆ ಬಹಳ ಧನ್ಯವಾದಗಳು ಮಹದೇಶ್ ರವರೆ... ಃ)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.