ಭಾರತೀಯರು ಮತ್ತು ಅಂತರಿಕ್ಷ ಜಗತ್ತು...
ಹೀಗೆ ಇಂದಿನ ದಿನಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಿದ್ದ ನನಗೆ ಒಂದು ಸುದ್ದಿ ಕುತೂಹಲ ಕೆರಳಿಸಿತು. ಅದು ನಮ್ಮ ರಾಜಸ್ಥಾನದ ಜೈಪುರ್ ಜಿಲ್ಲೆಯ ವಿದ್ಯಾರ್ಥಿಗಳು ಪಡೆದ ನಾಸಾ ಪ್ರಶಸ್ತಿ. ಅವರ "ಹ್ಯುಮನ್ ಸೆಟ್ಟಲ್ಮೆಂಟ್ ಅನ್ ಸ್ಪೇಸ್" ವಿಷಯದ ಬಗ್ಗೆ ಮಾಡಿದ ಪ್ರೋಜೆಕ್ಟ್ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪುರಸ್ಕೃತವಾಗಿದೆ. ಹೆಮ್ಮೆಯ ವಿಷಯವೇನೆಂದರೆ ಅದು ಮಾನವ ಅಂತರಿಕ್ಷಕ್ಕೆ ಕಾಲಿಟ್ಟು ೫೦ ವರ್ಷ ಕಳೆದ ಸುಸಂದರ್ಭಕ್ಕೆ ದೊರೆತ ಮನ್ನಣೆಯೆನ್ನಬಹುದು...
ಈ ಸುದ್ಧಿಯ ಕುರಿತು ಇನ್ನಷ್ಟು ಮಾಹಿತಿ ಹುಡುಕುತ್ತಿದ್ದ ನನಗೆ Ashoka's Secret Society of the "NINE" Unknown Men ವಿಷಯದ ಬಗ್ಗೆ ಚರ್ಚೆಗಳ ಕೊಂಡಿ ಇನ್ನಷ್ಟು ಕುತೂಹಲ ತರಿಸಿತು. ಚಕ್ರವರ್ತಿ ಅಶೋಕನು ತನ್ನ ೯ ಜನ ಪ್ರಖಂಡ ವಿಜ್ಞಾನಿಗಳ ಮೂಲಕ ಬರೆಸಿದ ೯ ಪುಸ್ತಕಗಳು ಅಂದು ದೇಶವು ಹೊಂದಿದ್ದ ಉನ್ನತ ವಿಜ್ಞಾನದ ಬಗ್ಗೆ ತಿಳಿಸುತ್ತದೆ. ಚಕ್ರವರ್ತಿ ಅಶೋಕನು ಈ ಕಾರ್ಯವನ್ನು ಎಷ್ಟು ಗುಪ್ತವಾಗಿ ನಡೆಸಿದ್ದನೆಂದರೆ ಬಹುಶ: ಈ ಪುಸ್ತಕದಲ್ಲಿನ ಮಾಹಿತಿಗಳ ಮೂಲಕ ಸಾಕಷ್ಟು ವಿದ್ವಂಸಕಾರಿ ಅಯುಧಗಳು ಸೃಷ್ಠಿಯಾಗಬಹುದು ಎಂಬ ಮುನ್ಸೂಚನೆಯ ಅರಿತು ಅದನ್ನು ಜಗದ ಬೆಳಕಿಗೆ ಬರದಂತೆ ಗುಪ್ತವಾಗಿ ಅಡಗಿಸಿ ಇರಿಸಿದ್ದನು. ಚೀನಿಯರು ಕೆಲವು ಸಮಯದ ಹಿಂದೆ ಲ್ಹಾಸ ಪ್ರಾಂತ್ಯದಲ್ಲಿ ಕಂಡುಹಿಡಿದ ಕೆಲವು ಸಂಸ್ಕೃತ ಗ್ರಂಥಗಳನ್ನ ಅನುವಾದಿಸಲಿಕ್ಕೆ ಚಂಡಿಗಡ ವಿಶ್ವವಿದ್ಯಾಲಯಕ್ಕೆ ಕಳುಹಿಸಿದ್ದಾಗ ಅದರಲ್ಲಿ ಅಂತರಿಕ್ಷನೌಕಯಾನಗಳ ಬಗ್ಗೆ ಬಹಳಷ್ಟು ಮಾಹಿತಿಗಳಿದ್ದವು..!! (ಹೆಚ್ಚಿನ ಮಾಹಿತಿಯನ್ನ ಇಲ್ಲಿ ಪಡೆಯಬಹುದು: http://www.world-mysteries.com/sar_7.htm#Ancient%20Indian...)
ಹಾಗೆ ನಮ್ಮ ನಾಡಿನವರಾದ ಶ್ರೀ ಟಿ. ಸುಬ್ಬರಾಯಶಾಸ್ತ್ರಿಗಳ ಸಂಶೋಧನೆಯ ಫಲದಿಂದ ಮೂಡಿಬಂದ "ವಿಮಾನ". ಅದೇ ನಂತರ ರೈಟ್ ಬ್ರದರ್ಸ್ ಹೆಸರ ಪಾಲಾದದ್ದು ದುರಂತವೋ, ನಮ್ಮ ದೌರ್ಭಾಗ್ಯವೋ... ಆ ದೇವನೇ ಬಲ್ಲ..!!
ನಮ್ಮ ದೇಶದ ಅನೇಕ ಯುವ ಮನಸ್ಸು ಸೂಕ್ತ ಪ್ರೋತ್ಸಾಹವಿಲ್ಲದೇ ಎಲೆಮರೆಯ ಕಾಯಿಗಳಂತೆ ಕಣ್ಮರೆಯಾಗುತ್ತಿವೆ. ಹಗರಣಗಳಲ್ಲೇ ಕಾಲ ಸವೆಸುವ ಸರ್ಕಾರ, ಅಧಿಕಾರಿಗಳ ಅಸಡ್ಡೆತನ... ಇವೆಲ್ಲ ಇವರಿಗೆ ಮುಳುವಾಗದಿರಲಿ, ರಾಷ್ಟ್ರ ಇಂತಹ "ಯುವ" ಪೀಳಿಗೆಯಿಂದ ಪ್ರೇರಣೆ ಪಡೆದು ಸಂಪತ್ಭರಿತವಾಗಲಿ ಎಂಬ ಸಣ್ಣ ಬಯಕೆಯೊಂದಿಗೆ ಈ ಪುಟ್ಟ ಲೇಖನ...
(ವಿಸ್ಮಯ ನಗರಿ ಸಮೂಹ ಈಗ Orkut ನಲ್ಲಿ..., ಸದಸ್ಯರಾಗಲು ಈ ಲಿಂಕ್ ಅನ್ನು ಕ್ಲಿಕಿಸಿ: http://www.orkut.co.in/Main#Community?cmm=96442553)
ಹಳೆಯ, ಸುಮಧುರ ಕನ್ನಡ ಚಿತ್ರ ಹಾಡುಗಳ ಸಾಹಿತ್ಯಕ್ಕಾಗಿ ನನ್ನ ಬ್ಲಾಗ್ ತಾಣ nannaishtadahaadu.blogspot.com ಗೆ ಒಮ್ಮೆ ಭೇಟಿ ನೀಡಿ...
ಸಾಲುಗಳು
- Add new comment
- 1079 views
ಅನಿಸಿಕೆಗಳು
ಹಲೋ ಸರ್ ಮಾನವ ಅಂತರಿಕ್ಷಕ್ಕೆ
ಹಲೋ ಸರ್ಮಾನವ ಅಂತರಿಕ್ಷಕ್ಕೆ ಕಾಲಿಟ್ಟು ೫೦ ವರ್ಷ ಕಳೆದ ಸುಸಂದರ್ಭದಲ್ಲಿ ನಿಮ್ಮ ಲೇಖನ ಸಕಾಲಿಕವಾಗಿದೆಉಮಾಶಂಕರ ಬಿ. ಎಸ್
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಬಹಳ
ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಬಹಳ ಧನ್ಯವಾದಗಳು ಉಮಾಶಂಕರ್ ರವರೆ... :)