Skip to main content

ಬದಾಮಿ ಬನಶಂಕರಿ ಜಾತ್ರೆಯ ಸಂಭ್ರಮ

ಬರೆದಿದ್ದುApril 8, 2011
6ಅನಿಸಿಕೆಗಳು

ಈ ಲೇಖನವನ್ನು ಗದಗದ ಪತ್ರಿಕಾ ವರದಿಗಾರರಾದ ಬಸವರಾಜ ಪಿ. ದಂಡಿನ ಅವರು ಕಳುಹಿಸಿದ್ದಾರೆ.ಬರೆದವರುಃ ಬಸವರಾಜ ಪಿ. ದಂಡಿನ, ಗದಗಲೆನಾಡಿನ ರಮ್ಯ ನಿಸರ್ಗವನ್ನು ನೆನಪಿಸುವ ಬಾಗಲಕೋಟೆ ಜಿಲ್ಲೆಯ ಬದಾಮಿ ಬಯಲು ಪ್ರದೇಶವಾಗಿದ್ದರೂ ತೆಂಗು, ಬಾಳೆ, ವಿಳ್ಯೆಯಿಂದಾಗಿ ಹಸಿರು ಬನರಾಶಿಯ ಸುಂದರ ಐತಿಹಾಸಿಕ ಪ್ರದೇಶವಾಗಿ ಖ್ಯಾತಿ ಪಡೆದಿದೆ.
 ಬದಾಮಿ ಸೇರಿದಂತೆ ಉತ್ತರ ಕರ್ನಾಟಕ ಅಷ್ಟೇ ಏಕೆ ಕರ್ನಾಟಕದ ಕೋಟ್ಯಾಂತರ ಭಕ್ತರಿಗೆ ಬದಾಮಿ ಸುಕ್ಷೇತ್ರದ ಬನಶಂಕರಿ ಆರಾಧ್ಯ ದೈವ. ಪ್ರತಿ ವರ್ಷ ಬನದ ಹುಣ್ಣಿಮೆಗೆ ಇಲ್ಲಿ ವೈಭವದ ಜಾತ್ರೆ ನಡೆಯುತ್ತದೆ. ಕನ್ನಡ ನಾಡಿನ ಸಾಂಸ್ಕೃತಿಕ ಪ್ರತೀಕವಾದ ಬದಾಮಿ ಕ್ಷೇತ್ರದಲ್ಲಿ ಒಂದು ತಿಂಗಳವರೆಗೂ ಜಾತ್ರೆಯ ಸಡಗರದಲ್ಲಿ ಈ ಭಾಗದ ಜನ ಸಂಭ್ರಮಿಸುತ್ತಾರೆ.
 ಹರಿದ್ರಾ ತೀರ, ಸರಸ್ವತಿ ತೀರಗಳ ಮಧ್ಯ ನಿತ್ಯ ಹರಿದ್ವರ್ಣದ ಗಿಡಮರಗಳಿಂದ ಕಂಗೊಳಿಸುವ ಪ್ರಶಾಂತ ಮತ್ತು ಜಾಗೃತ ಪರಿಸರದಲ್ಲಿ ತಾಯಿ ಬನಶಂಕರಿ ಭಕ್ತರ ಇಷ್ಟಾರ್ಥಗಳಿಗೆ ಅಭಯಹಸ್ತ ನೀಡಿ ಆಶೀರ್ವದಿಸುತ್ತಾಳೆ ಎಂದೇ ಪ್ರತಿ ವರ್ಷ ಇಲ್ಲಿಗೆ ಲಕ್ಷೊಪಲಕ್ಷ ಭಕ್ತ ಸಮೂಹ ಹರಿದು ಬರುತ್ತದೆ.
 ಸಿಂಹವಾಹಿನಿಯಾದ ಬನಶಂಕರಿಯ ಕೃಷ್ಣ ವರ್ಣದ ಸುಂದರ ವಿಗ್ರಹ ವೀಕ್ಷಿಸಿದವರಿಗೆಲ್ಲ ಭಕ್ತ ಭಾವ ಸ್ಪುರಿಸುವಂತಿದೆ. ದ್ರಾವಿಡ ಶೈಲಿಯಲ್ಲಿರುವ ಇಲ್ಲಿನ ಬನಶಂಕರಿಯ ಮೂಲ ದೇವಾಲಯ 9 ನೇ ಶತಮಾನದೆಂದು ಇತಿಹಾಸಕಾರರ ಅನಿಸಿಕೆ. ವಿಜಯನಗರದ ಅರಸರು, ಪೇಶ್ವೆಗಳು ಹಾಗೂ ರಾಷ್ಟ್ರಕೂಟರೂ ಈ ಶಕ್ತಿ ದೇವತೆಯನ್ನು ಆರಾಧಿಸುತ್ತಿದ್ದರು ಎಂಬುದು ಇತಿಹಾಸದ ಪುಟದಿಂದ ತಿಳಿದು ಬರುತ್ತದೆ.
 ಶಕ್ತಿ ಸ್ವರೂಪಿಣೆಯಾದ ಬನಶಂಕರಿಯ ರಥೋತ್ಸವ ಅತ್ಯಂತ ವೈಭವದಿಂದ ನಡೆದು ಬಂದ ವಾಡಿಕೆ ಇದ್ದು ರಥೋತ್ಸವದ ಮುನ್ನಾ ದಿನ ಬನದ ಸಿರಿಯ ಈ ದೇವಿಗೆ ವಿಶೇಷ ಅಲಂಕಾರ ಪೂಜೆ ನಡೆಸಿ 108 ವಿಧದ ಕಾಯಿಪಲ್ಲೆಗಳನ್ನು ನೈವೇದ್ಯ ಮಾಡಿ ಪಲ್ಲೇದ ಹಬ್ಬ ಆಚರಿಸಿಕೊಂಡು ಬಂದಿರುವದು ಇಲ್ಲಿನ ವಿಶೇಷ. ಹಿಂದೂ ಮುಸ್ಲಿಂ ಸರ್ವ ಧಮರ್ಿಯರೂ ಭಕ್ತಿ ಶೃದ್ಧೆಯಿಂದ ಇಲ್ಲಿ ನಡೆದುಕೊಳ್ಳುತ್ತಾರೆ, ಜಾತ್ರೆಯಲ್ಲಿ ಭಕ್ತಿಯಿಂದ ಪಾಲ್ಗೋಳ್ಳುತ್ತಾರೆ. ಕನರ್ಾಟಕ ಅಷ್ಟೇ ಅಲ್ಲ ಬೇರೆ ಬೇರೆ ರಾಜ್ಯಗಳಿಂದಲೂ ಭಕ್ತರು ಜಾತ್ರೆಗೆ ಆಗಮಿಸುವದು ಇಲ್ಲಿನ ವಿಶೇಷ.
 ಜಾತ್ರೆಯ ಹಿನ್ನಲೆಯಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ಧಾಮರ್ಿಕ ಕಾರ್ಯಕ್ರಮಗಳು ವಿಧಿ ವಿಧಾನದೊಂದಿಗೆ ನಡೆದರೆ ದೇವಸ್ಥಾನದ ಹೊರ ವಲಯದ ಸುತ್ತ ಒಂದೆರಡು ಕಿಲೋ ಮೀಟರ್ವರೆಗೂ ಜಾತ್ರೆಯ ಟೆಂಟು, ಅಂಗಡಿ ಮುಗ್ಗಟ್ಟುಗಳು ಸಾಲು ಸಾಲಾಗಿ ತಿಂಗಳವರೆಗೂ ವ್ಯಾಪಾರ ವಹೀವಾಟು ನಡೆದಿರುತ್ತದೆ. ಮಕ್ಕಳ ಆಟಿಕೆಗಳಿಂದ ಹಿಡಿದು, ಮಿಠಾಯಿ ಬೆಂಡು ಬೆತ್ತಾಸ, ಪೂಜಾ ಹಾಗೂ ಮಂಗಳ ಕಾರ್ಯಕ್ಕೆ ಬೇಕಾಗುವ ಸಾಮಗ್ರಿಗಳು, ಅಡುಗೆ ಮನೆಗೆ ಬೇಕಾದ ಎಲ್ಲ ಸಾಮಗ್ರಿಗಳು, ಕೃಷಿ ಚಟುವಟಿಕೆಗೆ ಬೇಕಾಗುವ ಸಾಮಗ್ರಿಗಳು, ಹೊಳೆಆಲೂರಿನ ಕಲಾತ್ಮಕ ಸುಂದರ ಕೆತ್ತನೆಯ ಬಾಗಿಲು ಕಿಟಕಿಗಳು, ಅಲಂಕಾರಕ ವಸ್ತುಗಳು ತಿಂಡಿ ತಿನಿಸುಗಳು, ಮನರಂಜನೆಗಾಗಿ ಟೋರಿಂಗ ಟಾಕೀಜು, ನಾಟಕ, ಮೋಜು ಮಜದ ಜಾತ್ರೆ. ತಂದೆ ತಾಯಿಯನ್ನು ಬಿಟ್ಟು ಇಲ್ಲಿ ಎಲ್ಲವೂ ಸಿಗುತ್ತದೆ ಎಂದು ಅಪ್ಪಟ ಉತ್ತರ ಕರ್ನಾಟಕದ ಆಡು ಭಾಷೆಯಲ್ಲಿ ಹೇಳಲಾಗುವಷ್ಟರ ಮಟ್ಟಿಗೆ ಜಾತ್ರೆ ಸಂಭ್ರಮ ಸಡಗರದೊಂದಿಗೆ ನಡೆಯುತ್ತದೆ.
 ನವದಂಪತಿಗಳು ಅದರಲ್ಲೂ ವಿಶೇಷವಾಗಿ ಮಕ್ಕಳಾಗದ ದಂಪತಿಗಳು ಇಲ್ಲಿ ಭಕ್ತಿಯೊಂದಿಗೆ ಹರಕೆ ಹೊತ್ತರೆ ದೇವಿ ಮಕ್ಕಳ ಭಾಗ್ಯ ಕರುಣಿಸುವಳು ಎಂಬುದು ಇಲ್ಲಿನ ಜನಪದರ ನಂಬಿಕೆ. ಮಕ್ಕಳಾದ ನಂತರ ಮುಂದಿನ ಜಾತ್ರೆಗೆ ಮಗುವಿನೊಂದಿಗೆ ಜಾತ್ರೆಗೆ ಬರುವ ದಂಪತಿಗಳು ತಮ್ಮ ಮಗುವನ್ನು ಬಾಳೆ ಎಲೆಯ ತೊಟ್ಟಿಲಲ್ಲಿ ಮಲಗಿಸಿ ದೇವಸ್ಥಾನದ ಮುಂದಿರುವ ಹರಿದ್ರಾ ತೀಥದಲ್ಲಿ ತೇಲಿಸಿ ಮಗುವಿಗೆ ದೇವಿಯ ಆಶೀರ್ವಾದ ಪಡೆಯುತ್ತಾರೆ.
ಊಟಾ ಮಾಡ ಬರ್ರೀ ಬರ್ರೀ ಅಣ್ಣಾವ್ರ, ಬರ್ರೀ ಅಕ್ಕಾವ್ರ ಕೆನಿ ಮೊಸರು, ಮಜ್ಜಿಗಿ ಕುಡಿ ಬರ್ರೀ. ಕಾಳು ಪಲ್ಲ್ಯಾ, ಎಣಗಾಯ್ ಬದ್ನಿಕಾಯಿ, ಗುರೆಳ್ಳ ಚಟ್ನಿ, ಶೇಂಗಾ ಚಟ್ನಿ ಐತಿ ಊಟಾ ಮಾಡಬರ್ರೀ ಎಂದು ದೇವಸ್ಥಾನದ ಸುತ್ತಲೂ ಜಾತ್ರೆಯ ಸುತ್ತಲೂ ಟೆಂಟು ಇರುವ ಕಡೆ ಕೇಳಿ ಬರುವ ಅಪ್ಪಟ ಉತ್ತರ ಕರ್ನಾಟಕದ ಮಾತಿದು.
 10 ರೂಪಾಯಿ ಕೊಟ್ರ ಉತ್ತರ ಕರ್ನಾಟಕದ ಅಪ್ಪಟ ಊಟ. 1 ಸಜ್ಜೆ ರೊಟ್ಟಿ, 1 ಬಿಳಿಜೋಳದ ಖಡಕ್ ರೊಟ್ಟಿ ಮೊಸರು, ಪಲ್ಯೆ ಬೇಕಾದ ಚಟ್ನಿ ಊಟ ಮಾಡಿ ಗಟ್ಟಿಯಾಗಿ ಜಟ್ಟಿ ಹಂಗ್ ಜಾತ್ರ್ಯಾಗ ಅಡ್ಡಾಡಬಹುದು. ಜಾತ್ರೆಗೆ ಬಂದವರು ಸಮೀಪದಲ್ಲಿಯೇ ಇರುವ ಬದಾಮಿ ಮೇಣಬಸದಿ, ಮ್ಯೂಜಿಯಂ ನೋಡಬಹುದು. ಶಿವಯೋಗ ಮಂದಿರ, ಐಹೊಳೆ, ಪಟ್ಟದಕಲ್ಲು ಹೋಗಿ ಬರಬಹುದು ಅಷ್ಟೇ ಏಕೆ ಕೂಡಲಸಂಗಮ, ಬಿಜಾಪೂರ ಗೂಲಗುಂಬಜಕ್ಕೂ ಪ್ರಯಾಣಿಬಹುದು.
 ಹುಬ್ಬಳ್ಳಿ, ಗದಗ, ಬಾಗಲಕೋಟೆಯಿಂದ ಬದಾಮಿಗೆ ಸಾಕಷ್ಟು ಬಸ್, ರೈಲು, ಟೆಂಪೋಗಳಿದ್ದು ಪ್ರಯಾಣಿಕರಿಗೆ ತೊಂದರೆ ಎನಿಸದು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಜಾತ್ರೆಗಾಗಿ ವಿಶೇಷ ಬಸ್ ವ್ಯವಸ್ಥೆಯನ್ನೂ ಮಾಡಿದೆ.
ಲೇಖಕರುಃ ಬಸವರಾಜ ಪಿ. ದಂಡಿನ
ಗದಗ[img_assist|nid=8719|title=ಬಾದಾಮಿ ೧|desc=|link=node|align=center|width=624|height=539]  
 [img_assist|nid=8720|title=ಬಾದಾಮಿ|desc=|link=node|align=center|width=416|height=624][img_assist|nid=8721|title=ಬಾದಾಮಿ ೩|desc=|link=node|align=center|width=624|height=483][img_assist|nid=8722|title=ಬಾದಾಮಿ ೪|desc=|link=node|align=center|width=468|height=624][img_assist|nid=8723|title=ಬಾದಾಮಿ ೫|desc=|link=node|align=center|width=624|height=452]

ಲೇಖಕರು

ಅನಿಸಿಕೆಗಳು

kmurthys ಶುಕ್ರ, 04/08/2011 - 13:47

ಚೊಕ್ಕ ವರದಿ, ಸುಂದರ ಚಿತ್ರಗಳು. ಧನ್ಯವಾದಗಳು!

ಬಸವರಾಜ್ ಶುಕ್ರ, 04/08/2011 - 15:39

ಸಜ್ಜಿ ರೊಟ್ಟಿ, ಕಾಳ ಪಲ್ಲೆ. ಬಳ್ಳೊಳ್ಳಿ ಚಟ್ನಿ... ಮೊಸರು... ಮನಿ ಊಟಾ ನೆನಪು ಆಇತು...:P

sangamesh kerutagi ಶನಿ, 04/09/2011 - 14:33

ಒಳ್ಳೆಯ ನಿರೂಪನೆ, ಉತ್ತಮ ಫೋಟೊಗಳು.

ಉಮಾಶಂಕರ ಬಿ.ಎಸ್ ಮಂಗಳ, 04/12/2011 - 10:54

ಬಸವರಾಜ್ ಸರ್,ಎಣ್ಣೆಗಾಯಿ ಹೆಸರೇಳಿ ಬಾಯಲ್ಲಿ ನೀರೂರುಸಿದ್ದೀರಾ!!!! ಖಂಡಿತಾ ಈ ರಜೆಯಲ್ಲಿ ಬಾದಾಮಿಗೆ ಭೇಟಿ ಕೊಡುತ್ತೇನೆ, ನಿಮ್ಮ ಸೊಗಸಾದ ನಿರೂಪಣೆಗೆ ಧನ್ಯವಾದಗಳುಉಮಾಶಂಕರ ಬಿ ಎಸ್

belstaff jackets (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 06:55


Dad is busy every day outside, do not have belstaff jackets time to read. He will do regret belstaff bags it? Sometimes I really want to belstaff jackets discuss these books determined to Dad, which can be thought belstaff uk of six mother goes on the bleak white belstaff uk powder coated long face, the same belstaff jackets block as the wall on the road the north face uk , immediately give up north face the idea. Each hospital has a mulberry bagssmall door set with a narrow mulberry bags sale garden path connected to mulberry handbags the left, leading to the garden. cyh12-29

belstaff jackets (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 06:55


Dad is busy every day outside, do not have belstaff jackets time to read. He will do regret belstaff bags it? Sometimes I really want to belstaff jackets discuss these books determined to Dad, which can be thought belstaff uk of six mother goes on the bleak white belstaff uk powder coated long face, the same belstaff jackets block as the wall on the road the north face uk , immediately give up north face the idea. Each hospital has a mulberry bagssmall door set with a narrow mulberry bags sale garden path connected to mulberry handbags the left, leading to the garden. cyh12-29

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.