Skip to main content
Forums

ನಿಮ್ಮ ಪ್ರೀತಿಯ ಬರಹಗಾರರು ಮತ್ತು ಅವರ ಕೃತಿಗಳು ಹಾಗೂ ನಿಮ್ಮ ಮೆಚ್ಹಿನ ಕಾದಂಬರಿಗಳು, ಕಾರಣ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಜೇಶ ಹೆಗಡೆ ಗುರು, 04/07/2011 - 23:24

ವಂಶಿ ಅವರು ಅನುವಾದಿಸಿದ ಯಂಡಮುರಿ ವಿರೇಂದ್ರ ನಾಥ್ ಕಾದಂಬರಿಗಳು ನನಗೆ ಬಹಳ ಇಷ್ಟ. ಅಷ್ಟಾವಕ್ರ, ತುಳಸಿದಳ ಹೀಗೆ ಹಲವು ಕಾದಂಬರಿಗಳು ಕುತೂಹಲ ಕೆರಳಿಸಿ ಓದಿಸಿಕೊಂಡು ಹೋಗುತ್ತವೆ. ಇದೇ ರೀತಿ ರವಿಬೆಳಗೆರೆಯವರ ಲೇಖನಗಳೂ ಹಾಗೂ ಬರೆಯುವ ಶೈಲಿ ಇಷ್ಟ ಆಗುತ್ತೆ.

ಬಾಲ ಚಂದ್ರ ಗುರು, 04/14/2011 - 12:41

ತ ರಾ ಸುಬ್ಬರಾವ್- ಚರಿತ್ರೆಯ ಘಟನೆಗಳನ್ನು ಕಣ್ಣಮುಂದೆಯೇ ವಿವರಿಸುವಂತಹ ಕಲೆಗಾರಿಕೆಎಂ ಕೆ ಇಂದಿರಾ- ಮಾನವೀಯ ಮೌಲ್ಯಗಳೆಡೆಗೆ ತುಡಿತ, ಹೆಚ್ಚು ಹೆಚ್ಚು ಮಲೆನಾಡಿನ ಚಿತ್ರಣ.ಪೂರ್ಣ ಚಂದ್ರ ತೇಜಸ್ವಿ- ಇವರನ್ನು ಇಷ್ಟ ಪಡಲು ಕಾರಣಗಳೇ ಬೇಕಾಗಿಲ್ಲ.ಎಸ್ ಎಲ್ ಭೈರಪ್ಪ     -ಸರಳವಾದ ಭಾಷೆ, ಗಹನವಾದ ವಿಚಾರಗಳನ್ನೂ ಸರಳವಾಗಿ ಹೇಳುವ ಕಲೆ. ಚಿಂತನೆಗೊಳಪಡಿಸುವ ವಿಷಯಗಳುಬಿ ಜಿ ಎಲ್ ಸ್ವಾಮಿ - ಹಾಸ್ಯಮಯ ಧಾಟಿ, ಸಸ್ಯ ಶಾಸ್ತ್ರ ವಿಷಯದಲ್ಲಿ ಅಗಾಧವಾದ ಪಾಂಡಿತ್ಯ.ಜೋಗಿ ( ಗಿರೀಶ್ ರಾವ್ )- ಏಕೆ ಓದಬೇಕು ಮತ್ತು ಏನು ಓದಬೇಕು ಎಂದು ಕನ್ನಡಿಗರಿಗೆ ತಿಳಿಸಿದ ಮೊದಲ ವಿಮರ್ಶಕ ಮತ್ತು ಕಥೆಗಾರವಸುಧೇಂದ್ರ ಮತ್ತು ಚಂದ್ರಶೇಕರ ಆಲೂರು- ಸುಲಲಿತ ಮತ್ತು ನಮ್ಮದೇ ಅನುಭವ ಎನ್ನಿಸುವ ನಿರೂಪಣಾ ಶೈಲಿ.ಇವರ ಜೊತೆ  ನಿರ್ದಿಷ್ಟವಾಗಿ ಯಾಕಿಷ್ಟ ? ಎಂದು ಕಾರಣ ಹೇಳಲು ಬಾರದ, ಶಿವರಾಮ ಕಾರಂತ, ಆಲನಹಳ್ಳಿ ಚಂದ್ರ ಶೇಖರ್, ಎಂ ವ್ಯಾಸ, ರಾಘವೇಂದ್ರ ಖಾಸನೀಸ, ನಾಗತಿ ಹಳ್ಳಿ ಚಂದ್ರಶೇಖರ್, ಚೇತನ್ ಭಗತ್, ರಸ್ಕಿನ್ ಬಾಂಡ್, ಆರ್ ಕೆ ನಾರಯಣ್, ಬೀchi,  ಯು ಆರ್ ಅನಂತಮೂರ್ತಿ, ಪಿ ಲಂಕೇಶ್, ಖುಷ್ವಂತ್ ಸಿಂಗ್, ದ ರಾ ಬೇಂದ್ರೆ, ನಿರಂಜನ, ಭಾರತೀ ಸುತ, ಆನಂದ.ಮುಂತಾದ ಮಹನೀಯರು ಇಷ್ಟವಾಗುತ್ತಾರೆ.   

ರುದ್ರಮುನಿ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 07/18/2011 - 23:12

ನಿಮ್ಮ ಎಲ್ಲ ಅನುಭವಗಳು ಅದ್ಭುತವಾಗಿವೆ. ಆದರೆ ಯು ಆರ್ ಅನಂತ ಮೂರ್ತಿ ರವರ ಬರಹಗಳು ಯಾಕೆ ಮೆಚ್ಚಿಗೆಯಾಗಿವೆ , ದಯವಿಟ್ಟು ಕಾರಣ ಕೊಡಿ.

ಉಮಾಶಂಕರ ಬಿ.ಎಸ್ ಗುರು, 04/14/2011 - 20:28

ಈ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟ, ಕನ್ನಡದ ಎಲ್ಲಾ ಕಥೆ ಕಾದಂಬರಿಗಳು ಹಾಗು ಅವರ ಕತೃಗಳು ಇಷ್ಟವಾಗುತ್ತಾರೆ
ಅದಕ್ಕಿಂತ ಹೆಚ್ಚಾಗಿ ಕವಿಗಳ ಕವನಗಳು ಮನದಕದವನ್ನು ಬಹುಬೇಗ ತಟ್ಟುತ್ತವೆ
ಪ್ರೇಮ ಕವಿ ಕೆ.ಎಸ್. ನ ರವರ ಮೈಸೂರು ಮಲ್ಲಿಗೆ ಕವನ ಸಂಕಲನ ನೆಚ್ಚಿನ ಪುಸ್ತಕ
ಪು ತಿ ನ ರವರ ದೈವ ಕಾವ್ಯಗಳು, ರಸಋಷಿ ಕುವೆಂಪುರವರ ಪ್ರಕೃತಿ ಕವನಗಳು, ಕವನಗಳನ್ನು ಸರಳ ಭಾಷೆಯಲ್ಲಿ ಬರೆವ ಕೆ ಎಸ್ ನಿಸಾರ್ ಅಹ್ಮದ್, ಹೇಳುತ್ತಾ ಹೋದರೆ ಪಟ್ಟಿ ಮುಗಿಯುವುದೇ ಇಲ್ಲವೆನಿಸುತ್ತದೆ

venkatb83 ಶನಿ, 04/16/2011 - 13:24

ನನ್ನ ಮೆಚ್ಚಿನ ಲೇಖಕರು ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ಈ ಎರಡು ಕಾದಂಬರಿಗಳನ್ನ ಅದೆಷ್ಟು ಸಾರಿ ಮತ್ತೊಮ್ಮೆ ಮಗದೊಮ್ಮೆ ಓದಿದ್ದೇನೋ ನನಗೆ ಲೆಕ್ಕ ಇಲ್ಲ ಅವೆರಡು ಓದಿದ ಮೇಲೆ ಮಲೆನಾಡ ಕಡೆಗೊಮ್ಮೆ ಹೋಗಿ ಬರಲೇಬೇಕು ಅಲ್ಲಿ ಬದುಕಿ ಬಾಳಿದರೆ ಎಷ್ಟು ಚೆನ್ನ ,ಎಂದೆನಿಸದೆ ಇರದು.ಮಲೆನಾಡ ವರ್ಣನೆ ಓದುವಾಗ ನಾವು ಮಲೆನಾದಲ್ಲೇ ಇದೀವೀ ಎನ್ನೋ ಭಾವನೆ ಬರದೆ ಇರದು. ಇನ್ನು ಮಲೆಗಳಲ್ಲಿ ಮದುಮಗಳು ಓದುವಾಗ ನಾವೇ ಮದುಮಗರಾಗಿ ನಮ್ಮ ಮನಸಲ್ಲಿರುವವರೇ ಆ ಮದುಮಗಳಾಗಿ ಕಲ್ಪನೆಯ ವಸ್ತುವಗದಿದ್ದರೆ ಕೇಳಿ.. ಇನ್ನು ಸುಬ್ಬಮ್ಮ ಹೆಗ್ಗಡತಿಯ ಮುದುಕ ಗಂಡನೊಡನೆ ಮನಸ್ಸಿನ ಭಾವನೆ ಹತ್ತಿಕ್ಕುತ್ತ ಬದುಕುವ ಪರಿ ಓದಿದಾಗ ಗಂಟಲು ಅರ್ದವಾಗದಿರದು . ಎನೆನ್ಲ್ಲ ಆಸೆ ಪಟ್ಟ ಕಥಾ ನಾಯಕ ವೈರಾಗ್ಯದಿಂದ ಯೋಗಿಯಾಗುವುದು, ಒಂದೇ ಎರಡೇ ನೂರಾರು ಕಾರಣಗಳು ಆ ೨ ಕಾದಂಬರಿಗಳು ಮತ್ತೆ ಮತ್ತೆ ಓದಲು. ಕನ್ನಡದ ಈ ೨ ಅಪೂರ್ವ ಕಾದಂಬರಿಗಳು ಕುವೆಂಪು ಅವರ ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಕೊಡುಗೆಗಳು. ಇನ್ನು ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು, ತ ರಾ ಸು ಅವರ ದುರ್ಗಾಸ್ತಮಾನ ಬೀ ಛೀ ಹಾಸ್ಯ ಸಾಹಿತ್ಯ ಬಿ ವಿ ಅನಂತರಾಮ್ ಕೌಂಡಿನ್ಯ ಏನ್ ನರಸಿಂಹಯ್ಯ ವಂಶಿ ಹೀಗೆ ಎಸ್ಟೆಲ್ಲ ಪತ್ತೇದಾರಿ ಲೇಖಕರ ಕಾದಂಬರಿಯ, ಕಥೆಗಳು ನನಗೆ ಅಚ್ಚು ಮೆಚ್ಚು ... ಇದಲ್ಲದೆ ತೆಲುಗು, ಹಿಂದಿ, ಆಂಗ್ಲ ಬಹು ಪಾಲು ಕೃತಿಗಳನ್ನು ಆಗಾಗ ಓದಿದ್ದೇನೆ ,ಓದುತ್ತಿರುತ್ತೇನೆ. ಒಟ್ಟಿನಲ್ಲಿ ಓದುಆಗ ಸಿಗುವ ಮಜಾ ಅದ್ರ (ಕೃತಿಯ) ಸಿನಿಮಾ ಬಂದಾಗಾ ಸಹಾ ಸಿಗುವುದಿಲ್ಲ.. ಕಥೆ ಕಾದಂಬರಿ ಓದುವಾಗ ಅಲ್ಲಿಯ ಪಾತ್ರಧಾರಿಗಳು ನಾವೇ ಆಗಿ ಕಲ್ಪಿಸಿಕೊಂಡು ಓದುವುದೇ ಬೇರೆ, ಸಿನಿಮಾದಲ್ಲಿ ಇನ್ನ್ಯಾರೋ ಅದನ್ನು ನಿರ್ವಹಿಸುವ ಬಗೆಯೇ ಬೇರೆ.. ನನ್ನ ಇಷ್ಟದ ಕಥೆಗಾರರು,ಕವಿಗಳು,ಕಾದಂಬರಿಕಾರರನ್ನು ಪಟ್ಟಿ ಮಾಡುತ್ತಾ ಕುಳಿತರೆ ಇದೆ ದೊಡ್ಡ ಲೇಖನವಾಗುತ್ತೆ..

Prashanth k j oseph ಧ, 08/03/2011 - 15:30

 ಪ್ರೀತಿಯ ವೆಂಕಟೇಶ್ M,ನೀವು ತಿಳಿಸಿದಂತೆ, ನಾನು ಕೂದ ಕುವೆಂಪುರವರ ಅಭಿಮಾನಿ. ಅವರ  ಕಾನೂರು ಸುಬ್ಬಮ್ಮ ಹೆಗ್ಗಡತಿ ಈ  ಕಾದಂಬರಿಯನ್ನು ನಾನು ಕೂಡ ಅನೇಕ ಸಾರಿ ಓದಿದ್ದೇನೆ. ಅವರ ಕೃತಿಯನ್ನು ೩ ಸಾರಿ ಓದಿದ ಮೇಲೆನೇ ನನಗೆ ಅರ್ಥವಾಗಿದ್ದು.  ಅ ಪ್ರತಿ ನನ್ನ ಬಳಿ ಇದೆ. ಈಗಲೂ ಬೇಸರವಾದಾಗ ಓದುತ್ತೇನೆ.

  • 2929 views