Skip to main content
Submitted by Basavaraj G on ಶುಕ್ರ, 02/11/2011 - 22:02
Forums

ದೇಶದ ಎಲ್ಲಾ ಪತ್ರಿಕೆಗಳು ಸುದ್ಧಿಗಳನ್ನು ಓದಿ ಹೆಚ್ಚಿನ ಜನಪ್ರಿಯ ಪತ್ರಿಕೆಗಳು ಕನಸು ಕಟ್ಟಿ ಕೊಡುವ ಪತ್ರಿಕೆಗಳು. ಜನ ಸಾಮಾನ್ಯನ ಬಗ್ಗೆ ಕಿಂಚಿತು ಯೋಚನೆ ಇಲ್ಲ. ಪತ್ರಿಕೆಗಳಲ್ಲಿ ಬರುವ ಲೇಖನಗಳು ಸಲ್ಮಾನ್ ಖಾನ್ ಕತ್ರಿನಕೈಫ್ ಸರಸಾಟಾ, ಏಂಜೋಲಿನಾ ಜೋಲಿಗೆ ಮಗುವಾಯಿತು ಇತ್ಯಾದಿ. ಇದು ಬಿಟ್ಟರೆ ರಾಜಾ ೨ಜಿ ಹಗರಣ, ಆದರ್ಶ ಬಹುಮಹಡಿ ಕಟ್ಟದ ಹಗರಣ, ಇಸ್ರೋ ಒಪ್ಪಂದ ರದ್ದು, ಮೊಬೈಲ್ ಸೇವೆ ತಟ್ಟಿ, ಟ್ರೈ ಅನ್ನುವಂತಹ ಒಂದು ಸ್ವಾಯತ್ತ ಸಂಸ್ಥೆ ಇದೆ. ಇದು ೨ಜಿ ಹಗರಣ ನಡೆಯುವ ಸಮಯದಲೂ ಇತ್ತು, ಈಗಲೂ ಇದೆ. ಈ ಸಂಸ್ಥೆ ಶಿಫಾರಸ್ಸು ಏನೆಂದರೆ, ೨ಜಿ ಹಗರಣದದಿಂದ ಆಗಿರುವ ನಷ್ಟವನ್ನು ೬ ಪಟ್ಟು ದುಬಾರಿ ಮಾಡಿ ಬಳಕೆದಾರರಿಂದ ವಸೂಲಿ ಮಾಡುವುದು. ಇಸ್ಕೊಂಡವನ್ನು ಇರಭದ್ರ ತಿಂದವನು ಕೋಡಂಗಿ ಅನ್ನುವಂತೆ. ತಿಂದಾವರು ಈ ಕೀಳು ಮಟ್ಟದ ರಾಜಕಾರಣಿಗಳು, ಅದರ ಹೊರೆ ಬಳಕೆದಾರನ ಮೇಲೆ. ೨ಜಿ ಹಂಚಿಕೆ ವೇಳೆ ಈ ಟ್ರಾಯ್ ಏನು ಗೆಣಸು ತಿನ್ನುತ್ತಾ ಇತ್ತ. ಹಗರಣ ಬಯಲಾದ ಮೇಲೆ ಬಳಕೆದಾರನ ಮೇಲೆ ಹೊರೆ ಹಾಕುಲು ಹೊರಟಿದೆ. ಭಾರತ ದೇಶದ ಪರಿಸ್ಥಿತಿನೆ ಹೀಗೆ. ಅದಕ್ಕೆ  ಪುರಂದರದಾಸರು ಹೇಳಿದ್ದಾರೆ ಯಾರಿಗು ಯಾರುಂಟು. ಭಾರತದ ಬಗ್ಗೆ ಬರೆಯಲು ಪ್ರಪಂಚದ ಯಾವ ಮೂಲೆಯಲ್ಲು ಸ್ಥಳವಿಲ್ಲ. ಇನ್ನೂ ಕರ್ನಾಟಕ ರಾಜ್ಯದ ಪರಿಸ್ಥಿತಿ ತೀರ ಅಧೋಗತಿ. ತಿಕ್ಕಲ ರಾಜ್ಯ ರಾಜ್ಯಪಾಲ.ಆಯೋಗ್ಯ ಮುಖ್ಯಮಂತ್ರಿ. ವಿರೋಧ ಪಕ್ಷ ಚಿಂದಿ ಚಿತ್ರನ್ನ, ಮಂತ್ರಿಮಂಡಲು ಮೂರ್ಖರ ಸಮೂಹ ಬೆಲೆ ಏರಿಕೆ ಬಗ್ಗೆ ಯಾರಿಗೂ ಯೋಚಿಸುವ ವ್ಯವದಾನವಿಲ್ಲ. ಕೇಂದ್ರದಲ್ಲಿ ಪ್ರಧಾನಿ ಸಮ್ಮೋಹನಸಿಂಗ್,ರಾಜ್ಯಗಳಲ್ಲಿ ಯಟವಟ್ಟಪ್ಪನವರು. ದೇಶದ ಪ್ರಜೆಗಳ ಏನಾಗಬೇಕು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/11/2011 - 09:17

ಅಹ ನಿಜವಾದ ಮಾತು

  • 518 views