Skip to main content

ಪ್ರತಾಪ್ ಸಿಂಹ ರವರೆ, ಒಬ್ಬರ ಮೇಲೆ ಒಬ್ಬರು ಕೆಸರು ಎರಚಾಡುತ್ತಾ  ನಿಮ್ಮ ಒಳ
ಮರ್ಮಗಳನ್ನು  ಜನರ ಎದುರು ಬಯಲು ಮಾಡಿಕೊಳ್ಳುತ್ತಿದ್ದಿರಿ. ಅವನು ಅಷ್ಟು ಕದ್ದ  ನಾನು
ಇಷ್ಟೇ  ಕದ್ದೆ  ಅಂತ ಸಮಜಾಯಿಸಿಗಳನ್ನು ನೀಡುತ್ತಿರುವುದನ್ನು  ನೋಡಿದರೆ ತಮ್ಮ ಉಳಿವಿಗೆ
ಜನ ಏನೆಲ್ಲಾ ಮಾಡುತ್ತಿದ್ದಾರೆ ಎಂಬುದರ ಬಗ್ಗೆ  ಅಸಹ್ಯ ವಾಗುತ್ತಿದೆ.  ನನ್ನ ಪತ್ರ
ಖಾರವಾಗಿದ್ದರೂ  ಮನಸಿನ ನೋವಿನಿಂದ  ಬರೆಯುತ್ತಿದ್ದೇನೆ.
> ಅದಕೆ ಕದ್ದರೂ ಕಳ್ಳನೇ ಆನೆ ಕದ್ದರೂ ಕಳ್ಳನೇ
> ಸಚಿವ ಸುರೇಶ ಕುಮಾರ ರವರಿಂದ ಮೈಸೂರಿನಲ್ಲಿ  ಸೈಟ್  ಮಂಜೂರು ಮಾಡಿಸಿಕೊಂಡೆ  ಅಂತ
ಪತ್ರಿಕೆಯಲ್ಲಿ ಹೇಳಿಕೆ ಕೊಡುತ್ತಿರಾ  ಯಾಕೆ ಸ್ವಾಮೀ ನಿಮ್ಮ ಸಂಸಾರವನ್ನು
ಕೊನೆಯವರೆವುಗೂ ಕಾಪಾಡಿಕೊಂಡು ಹೋಗಲು  ವಿಧ್ಯೆ, ಬುದ್ಧಿ, ಕಾಯಕ  ಕೊಟ್ಟಿಲ್ಲವೆ
ದೇವ್ರು.
> ತಾನು ಇಷ್ಟು ಎಕರೆ ತಮ್ಮ ಮಕ್ಕಳಿಗೆ ಕೊಟ್ಟೆ ಅನ್ನುವ ಯಡಿಯೂರಪ್ಪ , ಕುಮಾರಸ್ವಾಮಿ
 ಎಷ್ಟು ಕೋಟಿ ಆಸ್ತಿ ಮಾಡಿದ್ದರೆ ಅಂತ ಸಮಜಾಯಿಸಿ ಕೊಡುವ ಹಾಗೆ ನೀವು ಅದೇ
ನಿಟ್ಟಿನಲ್ಲಿ  ಉತ್ತರ ಕೊಡುತ್ತಿದ್ದಿರಿ. ಅಂಗವಿಕಲೆ ಯಾ ಕೈ ಹಿಡಿದ ನಿಮ್ಮ ಉದಾರ
ಮನಸಿಗೆ  ಪ್ರೀತಿಗಿಂತ ಸೈಟ್ ಹೆಚ್ಚ್ಕಾಯಿತೆ ? ಆಡು ರಾಜಕಾರಣಿಗಳ ನೆರವಿನಿಂದ. ನಾನು
ಅಷ್ಟು ಆಸ್ತಿ ಮಾಡಿದೆ, ಆ ಕಾರು ಕೊಂಡೆ ಅನ್ನುವ ನೀವೂ ರಾಜ್ಯದ ಬಗ್ಗೆ  ಸ್ವಲ್ಪ
ಚಿಂತಿಸಿ ಹೇಗೋ ಬದುಕಿದರಾಯಿತು ಎನ್ನುವ ಬದಲು ಶಾಶ್ವತವಾಗಿ ಉಳಿಯುವಂಥ  ಕೆಲಸಗಳನ್ನು
 ಮಾಡಿ.
>
> ಪತ್ರಿಕೋದ್ಯಮ ಅನ್ನೋದು  ಪವಿತ್ರ ವಾದುದು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ
 ಗಳಿಗಿಂತ  ಅತಿ ದೊಡ್ಡ ಶಕ್ತಿ ಅದನ್ನು ಈ ಸಮಾಜದ ಉಳಿವಿಗಾಗಿ ಬಳಸಿ ಸ್ವಾಮೀ ,
ವಿಶ್ವೇಶ್ವರ ಭಟ್ರು ವಿಜಯಕರ್ನಾಟಕ ಬಿಟ್ಟರು ಮುಂದೇನು ? ಎಂಬ ಪ್ರಶ್ನೆಗೆ ಅವರ
 ವೆಬ್ಸೈಟ್ನಲ್ಲಿ ನೂರಾರು  ಪತ್ರಗಳು. ನಾನು ಹಿರಿಯ ಪತ್ರಕರ್ತರು ಈ ರಾಜ್ಯಕ್ಕೆ ಅಂಟಿದ
 ಭ್ರಷ್ಟಾಚಾರ ದ ವಿರುದ್ಧ  ಒಂದು ಕ್ರಮ ಕೈಗೊಳ್ಳಿ ಅಂತ ಅವರ ಕೆಳ್ರಪ್ಪೂ ಕೇಳಿ
ಅಂಕಣಕ್ಕೆ ಬರೆದಿದ್ದೆ ಆಯಿತು. ಅವರ ಇಮೇಲ್ ಗೆ ಬರೆದಿದ್ದೆ ಆಯಿತು. ಪ್ರತಿಕ್ರಿಯೆ
ಇಲ್ಲ.
> ಇದು ಯಾಕೆ ಬರೆದೆ  ನಿಮ್ಮ  ಜಗಳಗಳ ಮಧ್ಯೆ  ಭ್ರಷ್ಟಾಚಾರ  ಅಳಿಸಲು  ಏನಾದರೂ ಆಲೋಚನೆ ಮಾಡಿದ್ದಿರಾ ? ಇಲ್ಲ ?
> ರವಿ ಬೆಳೆಗೆರೆಯಂತಹ  ಮಾರ್ಜಾಲಗಳನ್ನು ಅಪ್ಪಿಕೊಂಡವರು ಅವರ ನ್ಯಾಯಕ್ಕೆ ಬಲಿಯಾಗಲೇ ಬೇಕು. ಅದೇನು ವಿಶೇಷವಲ್ಲ .
> ಪ್ರತಾಪ ಸಿಂಹರವರೆ,
> ನೀವಾದರೂ ನಮ್ಮಂತಹ ಅಮಾಯಕರ ಓದುಗರ ಪ್ರಜೆಗಳ ನಾಗರಿಕರ ಮಾತುಗಳಿಗೆ  ಓ ಎನ್ನುತ್ತೀರಾ ?
> ಹಾಗಾದರೆ
> ನನ್ನ ಇಮೇಲ್ ಗೆ ಉತ್ತರಿಸಿ
> rajudavanagere@gmail.com

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 439 views