Skip to main content

ಪತ್ರಿಕೆಗಳ ಮೆಲೀನ ಜನರ ನಂಬಿಕೆ ಕಡಿಮೆ ಆಗುತ್ತಿದೆಯೇ?
ನೀವೇನಂತರೀ...?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಜೇಶ ಹೆಗಡೆ ಭಾನು, 12/26/2010 - 19:20

ಹಾಯ್ ಅಚ್ಯುತ್ ಅವರೇ,
ಯಾವ ಪತ್ರಿಕೆ ಬಗ್ಗೆ ಜನರು ವಿಶ್ವಾಸ ಕಳೆದು ಕೊಳ್ಳುತ್ತಿದ್ದಾರೆ? ಎಲ್ಲ ಪತ್ರಿಕೆ ಬಗ್ಗೆ ಜನರಲೈಸ್ ಆಗಿ ಈ ಮಾತನ್ನು ಹೇಳಲು ಸಾಧ್ಯವಿಲ್ಲ ಎಂಬುದು ನನ್ನ ಅನಿಸಿಕೆ. ವಿಜಯ ಸಂಕೇಶ್ವರ್ ಅವರು ನಡೆಸುತ್ತಿರುವಾಗ ವಿಜಯ ಕರ್ನಾಟಕ ಅವರ ಕನ್ನಡ ನಾಡು ಪಕ್ಷದ ಪ್ರಚಾರ ಪತ್ರಿಕೆ ತರ ವರ್ತಿಸುತ್ತಿತ್ತು ಅನ್ನುವದನ್ನು ಬಿಟ್ಟರೆ ಈಗ ಅದು ಸ್ವಲ್ಪ ಸುಧಾರಿಸಿದೆ.
ಗುಣ ಮಟ್ಟದ ವಿಚಾರ ಬಂದಾಗ ಕನ್ನಡ ಪತ್ರಿಕೆಗಳ ಸುಧಾರಣೆಗೆ ಇನ್ನೂ ಅವಕಾಶವಿದೆ. ಬರಿ ಸಭೆ, ಉದ್ಘಾಟನಾ ಸಮಾರಂಭಗಳ ವರದಿ, ಅವರು ಹಾಗೆ ಮಾಡಿದ್ದರೆ ಹೀಗಾಗುತ್ತಿತ್ತು ಎಂದರು, ಅವರು ಕರೆ ನೀಡಿದರು ಎನ್ನುವ ದಾಟಿಯ ಏಕತಾನತೆಯಿಂದ ಬೋರು ಹೊಡೆಸುವ ಸುದ್ಧಿಯ ಚಕ್ರವ್ಯೂಹ ದಿಂದ ಹೊರ ಬರಬೇಕಿದೆ. ಅದಕ್ಕೆ ಬದಲಾಗಿ ಇನ್ನೂ ಪ್ರೋ-ಆಕ್ಟಿವ್ ವರದಿ ತಂತ್ರ ರೂಡಿಸಿಕೊಳ್ಳಬೇಕಿದೆ.
ಬೆಳಿಗ್ಗೆ ಬೇಗ ಆಫೀಸಿಗೆ ಓಡಿ ಹೋಗಿ ಸಂಜೆ ಲೇಟಾಗಿ ಬರುವ ಈಗಿನ ವೃತ್ತಿಪರರಿಗೆ ಸ್ಕ್ಯಾನ್ ಮಾಡಲು ಅನುಕೂಲವಾಗುವಂತೆ ಹೆಚ್ಚು ಗ್ರಾಫಿಕ್ಸ್ ವಿನ್ಯಾಸ ಬಳಸಬೇಕಿದೆ. ಸ್ವಲ್ಪ ಮಟ್ಟಿಗೆ ಅದು ರೂಡಿಯಲ್ಲಿದ್ದರೂ ಟೈಮ್ಸ್ ಆಫ್ ಇಂಡಿಯಾ, ಬೆಂಗಳೂರು ಮಿರರ್ ಮುಂತಾದ ಕೆಲವು ಆಂಗ್ಲ ಪತ್ರಿಕೆಗಳನ್ನು ನೋಡಿದಾಗ ಕೆಲವು ಕನ್ನಡ ಪತ್ರಿಕೆಗಳನ್ನು ಇನ್ನೂ ಚೆನ್ನಾಗಿ ರೂಪಿಸಬಹುದೇನೋ ಅನ್ನಿಸುವದಂತೂ ನಿಜ.

Achyutkumar . ಸೋಮ, 12/27/2010 - 16:51

ಮಾದ್ಯದಲ್ಲಿ ಪ್ರಕಟವಾಗುತ್ತಿರುವ ಎಲ್ಲಾ ಸುದ್ದಿಗಳು ನಿಜವಾಗಿರುವದಿಲ್ಲಾ..ರಾಜೇಶ್.   ವರದಿಗಾರ ಕೆಲವೋಮ್ಮೆ ಸುದ್ದಿಯ ಸ್ರಶ್ಟೀಕರ್ತನು ಆಗುತ್ತಾನೆ..

ಅಭಿರಾಮ ಧ, 01/19/2011 - 21:13

ಮೊದಲು ಕೆಲ ಪತ್ರಿಕೆಗಳು ತಮ್ಮ ಅನಿಸಿಕೆಯನ್ನು ಓದುಗನ ಮೇಲೆ ಹೇರುತ್ತಿದ್ದವು ಅದು ಈಗ ಸ್ವಲ್ಪ ಕಡಿಮೆಯಾಗಿದ್ದರೂ
ಬ್ರೇಕಿಂಗ್ ನ್ಯೂಸ್ ಅಬ್ಬರ ಬಹಳವೇ ಹೆಚ್ಚಾಗಿದೆ ಅನ್ನಿಸುತ್ತಿದೆ.
ಹಾಗಾಗಿ ಪತ್ರಕರ್ತ ತನ್ನ ಕಾಲಂ ಹೆಚ್ಚುಮಾಡಲು ಹಲವಾರು ಗಿಮಿಕ್ ಮಾಡುತ್ತಿರುವುದು ಓದುಗನ ದಿಕ್ಕು ಸ್ವಲ್ಪಮಟ್ಟಿಗೆ ತಪ್ಪಲು ಕಾರಣ ವಾಗಿದೆಯೇನೋ...
ಪತ್ರಕರ್ತ ಮಿತ್ರರ ಒಂದು ಬ್ಲಾಗಿಗೆ ನಾನು ಉತ್ತರಿಸಿದ್ದು ಇಲ್ಲಿ ಕೊಂಡಿ ಕೊಡುತ್ತಿದ್ದೇನೆ.http://abhiramahegde.blogspot.com/

parshuram ಶನಿ, 01/29/2011 - 12:37

indina dinamanagalalli patrikaegala prabhava kadime enu agilla adare indu
patrikegalu "kasigagi suddi" idarinda patrikegala gunamatta kadime agide e ondu
kasigagi suddi kadime adare patrikegala prabhava innu hechalide endu nanna abhipraya

rajudavanagere ಭಾನು, 01/30/2011 - 16:42

!passwordಎಲ್ಲ ಪತ್ರಕರ್ತರೂ ರಾಜಕಾರಣಿಗಳ ರೀತಿಯೇ ಆಗಿಹೋಗಿದ್ದಾರೆ.  ಹೇಳುವಿದೆ ಒಂದು ಮಾಡುವುದೇ ಒಂದು
ರಾಜು
rajudavanagere@gmail.com

  • 1229 views