ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...
ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ
ಸಾಗರನ ಸಾಕ್ಷಿಯಿಟ್ಟು, ಬೆರಳಿಗೆ ಅಲೆಗಳುಂಗುರವಿತ್ತ,
ತಿಳಿ ಬಾನ ಕೇಳಿ ಪಡೆದ ಒಂಟಿ ತಾರೆಯ ಹಣೆಗಿತ್ತ,
ಬಿದಿಗೆ ಚಂದಿರನ ಕರಗಿಸಿ ಮೂಗಿನ ಬೊಟ್ಟಿಗಿಟ್ಟ,
ನನ್ಹೆಸರ ದಾರದಲಿ ನಿನ್ಹೆಸರ ಮಣಿಪೋಣಿಸಿ ಕೊರಳಿಗಿತ್ತ,
ಕೊಟ್ಟು ಬಿಡು ಮತ್ತೊಮ್ಮೆ ನಿನ್ನೊಲವಿನ ಉಡುಗೊರೆಗಳ..
ಕೈಯೊಳಗೆ ಕೈ ಬೆಸೆದು ಮೂಡಿದ್ದ ಕೆಂಪು ಗೆರೆಗಳಾ ಬಳೆಗಳು,
ತೊಳೆದರೂ ತೊಡೆಯದಿದ್ದ ನಿನ್ನ ಹೆಸರಿನಾ ಮದರಂಗಿ,
ನೀನಿತ್ತ ಮುಗುಳ್ನಗೆಯ ಚಿಲುಮೆ ನೂಪುರವಾಗಿತ್ತು ಕಾಲ್ಗಳಿಗೆ,
ನೀನಿತ್ತ ಮಲ್ಲಿಗೆಯ ಕಂಪು ಬಾಡಿದ್ದರೂ ಒಳಗಿತ್ತು ಉಸಿರಾಗಿ,
ತುಂಬಿ ಬಿಡು ಮತ್ತೊಮ್ಮೆ ನನ್ನೊಳಗದೇ ಬಣ್ಣವ...
ಕಣ್ಣಂಚುಗಳಿಂದುದುರುತಿದ್ದ ಹನಿಗಳನ್ನೆಲ್ಲಾ ಪೋಣಿಸಿ,
ಮುತ್ತಿನ ಹಾರವ ಮಾಡಿ ಕೊಟ್ಟಿದ್ದೆ ನೀನೆನಗಂದು,
ಕರಗಿ ಹನಿಯುತಿವೆ, ಒಂದೊಂದಾಗುದುರುತಿವೆಯೀಗ,
ಹನಿ ಹನಿಯೂ ನದಿಯಾಗಿ ಮುಳುಗಿಸುತಿದೆ ಮನವ
ಕೊಡಲಾರೆಯಾ ಮತ್ತೊಮ್ಮೆ ನನಗಾಗಿ ಮಣಿಮಾಲೆಯ ?!
ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ
-ತೇಜಸ್ವಿನಿ ಹೆಗಡೆ
ಸಾಲುಗಳು
- Add new comment
- 1262 views
ಅನಿಸಿಕೆಗಳು
Re: ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...
mam ur poems r superb always..
Re: ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...
ಸಿಸ್ಟರ್ ನಿಮ್ಮ ಸವಿನೆನಪಿನ ಕವನ ಹೊಗಳಲಸಾಧ್ಯ. ನಿಜವಾಗಲೂ ಸು೦ದರ ಪದಗಳ ಜೋಡಣೆ. ಸೂಪರ್ ಸೂಪರ್ ಸಾಹಿತ್ಯ. ಧನ್ಯವಾದಗಳು ನಿಮಗೆ.
Re: ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...
Thanks a lot to Nagu and Kirti :)
Re: ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...
ವಾವ್ ಸೂಪರ್ ಕಣ್ರಿ ನಿಮ್ಮ ನೆನ್ನೆಗಳ ನೆನಪಿನ ಕವಿತೆ .........
Re: ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...
ತುಂಬಾ ಧನ್ಯವಾದಗಳು.
Re: ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...
ತೇಜಸ್ವಿನಿಯವರೇ ಬಹು ದಿನಗಳ ನಂತರ ನಿಮ್ಮ ಕವನ ಓದಿ ತುಂಬಾ ಸಂತೋಷವಾಯಿತು. ಕವನ ತುಂಬಾ ಚೆನ್ನಾಗಿದೆ.
Re: ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...
ತುಂಬಾ ಧನ್ಯವಾದಗಳು.
Re: ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...
ಎಂದಿನಂತೆ ಮತ್ತೊಂದು ಸುಂದರ ಕವನ ನೀಡಿದ್ದಕ್ಕಾಗಿ ಧನ್ಯವಾದಗಳು.
Re: ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...
ತುಂಬಾ ಧನ್ಯವಾದಗಳು.
-Tejaswini Hegde