Skip to main content

ನಮ್ಮ ನಾಯಕ ನಟ/ನಟಿಯರಿಗೆ ಏಕೆ ಲಕ್ಷಾಂತರ ರುಪಾಯಿ ಸಂಭಾವನೆ ಕೊಡಬೇಕು? ಕನ್ನಡದ ಹೆಸರಲ್ಲಿ ನಡೆಸ್ತಾಯಿರೋ ವ್ಯಾಪಾರ ಅನ್ನಿಸುವುದಿಲ್ಲವೇ? ಕನ್ನಡಕ್ಕಾಗಿ ಅವರು ಏನು ಮಾಡಿದ್ದಾರೆ? ಹೊಟ್ಟೆಪಾಡಿಗೆ ಅಭಿನಯಿಸೋ ಸಹಕಲಾವಿದರಿಗೆ ಕೊನೆಗಾಲದಲ್ಲಿಯೊ ಸಹಾಯಮಾಡದ ನಮ್ಮ ನಾಯಕ ನಟರ ನಡುವಳಿಕೆ ಸರಿನಾ? ಸಮಾಜಸೇವೆ ಅಂತ ಲಕ್ಷಾಂತರ ನುಂಗೋ ನಮ್ಮ ರಾಜಕಾರಣಿಗಳಿಗೂ, ಕನ್ನಡ ಕನ್ನಡ ಅಂತ ಲಕ್ಷಾಂತರ ಸಂಭಾವನೆ ಪಡೆಯುವ ನಟ/ನಟಿಯರಿಗೂ ಏನಾದರೂ ವ್ಯತ್ಯಾಸ ಇದೆಯಾ? ರಾಜಕೀಯನೂ ದುಡ್ಡು ಹಾಕಿ ದುಡ್ಡು ತೆಗೆಯೋ ವ್ಯವಹಾರ ಆಗಿರೋವಾಗ, ಸಿನಿಮಾನೋ ಹಾಗೆ ಆಗಿದೆ ಅಂದ ಮೇಲೆ ಸೇವೆ ಅನ್ನೋದು ಎಲ್ಲಿಂದ ಬಂತು? ನಮ್ಮ ಶಾಸಕ/ಸಂಸದರು ನಮ್ಮ ತೆರಿಗೆ ದುಡ್ಡಿನಲ್ಲಿ ಮೆರೆತಾರೆ ಹಾಗೆ ನಮ್ಮ ದುಡ್ಡಲ್ಲಿ ನಮ್ಮ ನಾಯಕ ನಟ/ನಟಿ, ನಿರ್ದೇಶಕರು ಮಜಾಮಾಡ್ತಾರೆ ಅಲ್ವಾ! ಇಬ್ಬರೂ ಜನರಿಂದಲೇ ಬೆಳಿತಾರೆ, ಜನಕ್ಕೆ, ಸಮಾಜಕ್ಕೆ ಏನೂ ಮಾಡಲ್ಲ. ಇವರಿಬ್ಬರ ನಡುವೆ ಯಾವ ವ್ಯತ್ಯಾಸವೂ ಇಲ್ಲ.
ಇದು ಸರಿನಾ?
ಸ್ನೇಹಿತರೇ ನೀವು ಏನು ಹೇಳ್ತೀರ? ನಿಮ್ಮಂದ ಒಳ್ಳೆ ಅಭಿಪ್ರಾಯಗಳನ್ನು ನಿರೀಕ್ಷಿಸುತ್ತೇನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 430 views