Skip to main content

ಪಂಚರಂಗಿ - ಡೈಲಾಗುಗಳು,ಹಾಡುಗಳು, ಸುಂದರ ಹೊರಾಂಗಣಗಳು, ಸಮುದ್ರಗಳು -ಸಿನೆಮಾ ಇಷ್ಟೇನೇ!

ಬರೆದಿದ್ದುSeptember 6, 2010
30ಅನಿಸಿಕೆಗಳು

 
 
[img_assist|nid=7300|title=|desc=|link=node|align=left|width=300|height=154]ಸುಮ್ನಿರಕಾಗ್ದೇ ಅದೇನೋ ಮಾಡಿದ್ರೂ ಅಂತಾರಲ್ಲ ಹಂಗೇ ನಾನೂ ನಿನ್ನೆ ಹೋಗಿ 'ಪಂಚರಂಗಿ' ಸಿನೆಮಾ ನೋಡ್ಕಂಡ್ ಬಂದೆ... 'ಗಾಳಿಪಟ' ಪಿಚ್ಚರ್ರಿಗೆ ಆ ಹೆಸ್ರು ಯೋಗರಾಜ್ ಭಟ್ಟರು ಯಾಕಿಟ್ರು ಅಂತಾ ತಲೆ ಕೆಡಿಸಿಕೊಂಡವನಿಗೆ ಈಗ ಈ ಸಿನೆಮಾಕ್ಕೆ 'ಪಂಚರಂಗಿ' ಅಂತಾ ಹೆಸರ್ಯಾಕೆ ಅಂತಾ ತಲೆ ಕೆರೆದುಕೊಳ್ಳೊ ಪರಿಸ್ಥಿತಿಗಳು...
ಶುರುವಿನಲ್ಲಿ ಬರುವ ಕಾಲೇಜು, ಜಯಂತ್ ಕಾಯ್ಕಿಣಿ ಸಾರ್, ಅವರಿಗೇ ಅರ್ಥವಾಗದ ಅವರ ಫಿಲಾಸಫಿ, ಥಿಯರಿ, ಡೈಲಾಗುಗಳು, ಕೈಯಲ್ಲಿರೋ (ಮುಂದೆ ಕತೆಯಲ್ಲಿ ಎಲ್ಲಿಯೂ) ಯಾವುದಕ್ಕೂ ಬರದ ಕಲರ್ಫುಲ್-ಕಲರ್ಲೆಸ್ ಬಟ್ಟೆಯ ಗಿಣಿಗಳು, - ಓ ಇವೆಲ್ಲ ದೂದ್ ಪೇಡಾ 'ದಿಗಂತ್'ನ ಮೊದಲ ಹಾಡಿಗೆ ಕೆಟ್ಟ ಮುನ್ನುಡಿ ಅನ್ನೋದು ಒಂದ್ಸ್ವಲ್ಪ ಟೈಮಾದ ಮೇಲೆ ಜ್ನಾನೋದಯ! ಹಾಡಿಗಿಂತ ಮೊದಲೇ ನಮ್ಮ 'ಜೇಕೇ'ಸಾರು ಮಾಯ (ಸಧ್ಯ, ಅವರು ಗೌರವ ನಟರುಗಳು)!
ಸಧ್ಯ! ಕರಾವಳಿಯ ಬಿಸಿಲು-ಗಾಳಿಯ, ಕಡಲ ತೀರಕ್ಕೆ ಸೀನ್ ಚೇಂಜ್! ಕೊನೆಗೂ ಕತೆ ಶುರುವಾಯ್ತು ಅನ್ನೋ ಸಮಾಧಾನ! ಆದ್ರೆ ಅರೆರೆ! ಇದೇನಿದು, ಕತೆ ಇಲ್ಲೇ ಮುಗಿಯೋಹಾಗೂ ಕಾಣ್ತಿದೆ ಅನ್ನೋ ಅನುಮಾನ-ಅನುಮಾನ ಕೊನೆಗೆ ನಿವಾರಣ!
ಕುರಾಸಾವಾ, ಹಿಚ್ಕಾಕ್, ಟಿಮ್ ಬರ್ಟನ್-ಗಳಂತವರೆಲ್ಲ ತಮ್ಮ ಪ್ರತೀ ಸಿನೆಮಾಗಳಲ್ಲೂ ಅವೇ ನಟ/ನಟಿಯರನ್ನ ಉಪಯೋಗಿಸ್ಕೊಂಡಿರ್ತಾರೆ ನೋಡೀ ಹಾಗೇ ಇದ್ರಲ್ಲೂ ಭಟ್ಟರ ಫೇವರಿಟ್ ನಟರೇ ಇದ್ದಾರೆ - ಅನಂತನಾಗ್, ಅಪ್ಪ, ಅಪ್ಪ, ಅತ್ತೆ, ಮಾವ ಇತ್ಯಾದಿ ಇಥ್ಯಾದಿಯಾಗಿ ಅದೇ ಬೆಳವಾಡಿ ಸುಧಾ, ಸುಂದರರಾಜ್ ಇತ್ಯಾದಿ ಇತ್ಯಾದಿಗಳು...
ಕರಾವಳಿಯ (ಅರಬ್ಬಿ) ಸಮುದ್ರತೀರದ ಒಂದು ನಿರ್ಮಾನುಷ ಹೞಿ (ಯಾಕೇಂದ್ರೆ, ಇಡೀ ಹೞಿಯಲ್ಲಿ ಸಿನೆಮಾ ನಡೆಯುವ ಮನೆ ಬಿಟ್ಟರೆ ಬೇರೆ ಯಾರೂ ಕಾಣೋದಿಲ್ಲ - ಕಡೇ ಪಕ್ಷ ಬಸ್ ನಿಲ್ದಾಣ, ಸಂತೆ, ಗೂಡಂಗಡಿ, ಕರಾವಳಿಯ ಮೀನುಗಾರರು, ಊಂಹೂ! ಯಾವುದೋ ಕಚಪಿಚಿ ಹಾಡಿನಲ್ಲಿ ಬೋಟಿನ ಮೇಲೆ ಅರ್ಧ ಹಾಡಿಗೆ ಬಂದು ಹೋಗುವ ಪ್ರಿಯಾಂಕಾ (ಉಪೇಂದ್ರ)ರ ಜೊತೆ ಇಡೀ ಹಳ್ಳಿಯ ಜನರು ಮಂಗಮಾಯ!), ಅದರಲ್ಲಿ  ಕವಳ ಜಗಿಯುವ ಅಪ್ಪ, ಪ್ರೀತಿಯ ಅಮ್ಮ, ಎಸ್ಸೆಸ್ಸೆಲ್ಸಿ ಮಾಡಿರೋ ಮಗಳು ಪ್ಲಸ್ ಎಲೆಕ್ಟ್ರಾನಿಕ್ಸ್ ಓದ್ತಾ ಇರೋ (ಹೀರೋಯಿನ್) ತಮ್ಮನ ಮಗಳು, ಮಸ್ತ್ ಇಂಗ್ಲೀಷ್ ಮಾತಾಡೋ (ನನಗಿಷ್ಟ ಆದ ಪಾತ್ರ) ಮನೆಗೆಲಸದವಳು, ಕರಡಿಯಂತ ಅವರಣ್ಣ!
ಈ ಕಡೆ ಆ ಕುಟುಂಬಕ್ಕೆ ಹೆಣ್ಣು ನೋಡೋಕೆ ಬರ್ತಾ ಇರೋ ಇನ್ನೊಂದು ಫ್ಯಾಮಿಲಿ, ಅಪ್ಪ, ಅಮ್ಮ, ಹದಿನೈದು ದಿನಗಳ ಮದ್ವೆ (ಆಗೋಕೆ) ರಜಕ್ಕೆ ಅಮೇರಿಕಾದಿಂದ ಬಂದಿರೋ ಅಣ್ಣ, ಬೀಯೇ ಮಾಡ್ಕಂಡು, ಕನ್ನಡ ಎಮ್ಮೇ ಮಾಡ್ಕೋೞೋಕೆ ಸೀರೆ ಅಂಗಡಿಯಲ್ಲಿ ಗೊಂಬೆಗಳಿಗೆ ಸೀರೆ ಸುತ್ತೋ  ವೇಸ್ಟ್ ಬಾಡಿ ತಮ್ಮ, ಟೀವಿ ಭವಿಷ್ಯ ಹೇಳೋ ನಿತ್ಯಾನಂದ ಸ್ವರೂಪಿ ಸೋದರ ಮಾವ, ಮದುವೆ ಬ್ರೋಕರ್ರು, ಬಸ್ ಡ್ರೈವರ್ರು, ಅವರಪ್ಪ ಕುರುಡ, ಮತ್ತೆ (ಮುಂಗಾರುಮಳೆಯ ದೇವದಾಸನಂತೆ) ಒಂದು ಫ್ಯಾಮಿಲಿ ನಾಯಿ!
ಇನ್ನ್ನೇನು, ಹೞಿಗೆ ಬಂದಾಯ್ತಲ್ಲ, ಹೆಣ್ಣು ನೋಡುವಾಗಲೂ ಸದಾ ಎಸ್ಸೆಮ್ಮೆಸ್ಸಿನಲ್ಲಿ ಮುಳುಗಿರೋ (ಬಿಸ್ಲೇರಿ ಕುಡಿಯೋ) ಅಣ್ಣ, ಸದಾ ಡೈಲಾಗುಗಳನ್ನೇ ಉದುರಿಸುವ ತಮ್ಮ, ಬೈಯ್ಯೋ ಅಮ್ಮ, ರೇಗೋ ಅಪ್ಪ, ಬಿಟ್ಟಾಕು ಅಂತಾ ಸಮುದ್ರದ ತೀರಕ್ಕೆ ಬಂದರೆ ಅಲ್ಲಿ ಸಮುದ್ರ, ಬಾಗಿರೋ ತೆಂಗಿನ ಮರ, ಮರದ ಮೇಲೆ ಹೀರೋಯಿನ್ನು ತೀರದ ಮರಳಿನಲ್ಲಿ ಕಂಠಮಟ್ಟ ಹುದುಗಿಹೋಗಿರೋ ಅನಂತನಾಗ್, ಸಿನೆಮಾ ಇಷ್ಟೇನೇ!
ಕತೇನೇ ಇಲ್ದೇ ಸಿನೆಮಾ ಮಾಡಬಲ್ಲೆ ಅನ್ನೋ ಭಟ್ಟರ ಪ್ರಯತ್ನ 'ಗಾಳಿಪಟ'ಕ್ಕಿಂತಾ ಸುಧಾರಿಸಿದೆ! ಅಲ್ಲಿಲ್ಲಿ ಸಿನೆಮಾ ಇನ್ನೂ ಒಳ್ಳೆಯದಾಗಬಹುದಾಗಿದ್ದ ಥೀಮ್-ಗಳು ಕಾಣಿಸಿಕೊಂಡರೂ ಭಟ್ಟರಿಗೆ ಅವುಗಳ ಮೇಲೆ ಕರುಣೆ/ನಂಬಿಕೆ ಇಲ್ಲವಾಗಿ ಅವೆಲ್ಲ ಅಲ್ಲೇ ಮಟ್ಯಾಶ್!
ದಿಗಂತ್ 'ಗಳು'ಗಳ ಡೈಲಾಗುಗಳು ಕೊನೇಕೊನೇಗೆ ಜಾಸ್ತಿ-ಜಾಸ್ತಿ ಅನ್ನಿಸಿದರೆ ಅದು ನಿಮ್ಮ ತಪ್ಪಲ್ಲ! ಅಯ್ಯೋ ಪ್ರಿಯಾಂಕಾ(ಉಪೇಂದ್ರ) ಇನ್ನೊಂಚೂರು ಇರಬೇಕಿತ್ತು ಅನ್ನಿಸಿದ್ರೂ ತಪ್ಪಲ್ಲ. ಇದೇನಿದು ಅನಂತನಾಗ್ ಇಷ್ಟೇನಾ ಅಂತಾ ಅನಿಸಿದ್ರೆ ಅವರ ಗೀತೋಪದೇಶಕ್ಕೆ ಪಿಚ್ಚರ್ ಕೊನೇ ತನಕ ಕಾಯಬೇಕು! ಹೊರಾಂಗಣ ಚಿತ್ರೀಕರಣ (ನನ್ನ ಫೇವರಿಟ್) ಸಮುದ್ರ, ರಾತ್ರಿಯ ಅಲೆಗಳು, ದಿಗಂತ್-ನಿಧಿ ನಡುವಿನ ಕೆಲವು ಕ್ಷಣಗಳು ಅದ್ಭುತ, ಸಹ್ಯ-ಸಹ್ಯ! ಮನೋಮೂರ್ತಿ ಸಂಗೀತ ಪರ್ವಾಗಿಲ್ಲ, ಸೋನು ನಿಗಮ್ ಹಾಡಿರೋ ಸಿಗ್ನೇಚರ್ ಸಾಂಗು ಕೂಡಾ ಪರ್ವಾಗಿಲ್ಲ!
ಮುಂಗಾರುಮಳೆಯಿಂದ ಹಿಡಿದು ಇಂಥಾ ಒಳ್ಳೊಳ್ಳೆ ಸಿನೆಮಾಗಳನ್ನ ಕೊಡ್ತಾ ಇರೋ ದಿಗಂತನನ್ನ ಹಾಕ್ಕಂಡು ಭಟ್ಟರು ಬಿಟ್ಟು ಕನ್ನಡದ ಬೇರೆ ಯಾರೂ ಯಾಕೆ ಸಿನೆಮಾ ಮಾಡ್ತಾ ಇಲ್ಲಾ ಅನ್ನೋದೊಂದು ಕೊನೇ ಪ್ರಶ್ನೆ!
ಐದ್ರಲ್ಲಿ ಮೂರು ನನ್ನ ಸ್ಕೋರು

ಲೇಖಕರು

ಶಿವಕುಮಾರ ಕೆ. ಎಸ್.

ನನ್ನ ತಲೆ'ಹರಟೆ'ಗಳು

ನಾನೊಬ್ಬ ಏಕಾಂಗಿ(ಇದೂವರೆಗೂ) ಸಂಚಾರಿ. ಸಮಯ, ಸಂದರ್ಭ, ವ್ಯಕ್ತಿಗಳೆಡೆಯಿಂದ ಪಯಣಿಸುತ್ತ, ಎಲ್ಲವನ್ನೂ ಅರ್ಥೈಸಿಕೊಳ್ಳುತ್ತ, ಕಲಿತುಕೊಳ್ಳುತ್ತ, ಯಾರನ್ನೂ ದೂರದೇ, ಪ್ರಜ್ಞಾಪೂರ್ವಕವಾಗಿ ಯಾವುದರ ಬಗೆಗೂ ಪೂರ್ವ-ನಿರ್ಧಾರಿತ ಆಲೋಚನೆಗಳನ್ನಿಟ್ಟುಕೊಳ್ಳದೇ ಸಾಗುತ್ತಿರುವೆ.

ಅನಿಸಿಕೆಗಳು

ಬಾಲ ಚಂದ್ರ ಮಂಗಳ, 09/07/2010 - 12:49

ಶಿವಣ್ಣನವರಿಗೆ ನಮಸ್ಕಾರಗಳು,
ನನ್ನ ಕೆಲವು ಅನಿಸಿಕೆಗಳು
* ಚಿತ್ರದಲ್ಲಿ ಕೆಲವು ಪಂಚಿಗ್ ಡೈಲಾಗ್ ಗಳು, ಹಿರೋಯಿನ್ ನ ಮುದ್ದಾದ ಸ್ಮೈಲುಗಳು, ಲಂಗ ದಾವಣಿಯಲ್ಲಿ ಕೊಡುವ ಬ್ಯೂಟಿಫುಲ್ ಲುಕ್ಕುಗಳು, ಬಿಟ್ಟರೆ- ಒಂದಕ್ಕೊಂದು ಸಂಭಂಧವಿಲ್ಲದಿದ್ದರೂ ಎಲ್ಲಾ ಪಾತ್ರಗಳು ಚೆನ್ನಾಗಿ ನಟಿಸಿದ್ದಾರೆ. ನಾನೂ ಕೂಡ ನಿಮ್ಮಂತೆ ಮನೆಗೆಲಸದವಳ ಅಭಿಮಾನಿಯಾಗಿಬಿಟ್ಟೆ.
* ಚಿತ್ರದ ನಾಯಕಿಯ ಬಗ್ಗೆ ನೀವು ಒಂದು ಸಾಲೂ ಬರೆದಿಲ್ಲ. ಆದರೆ ಗೌರವ ನಟಿ ಪ್ರಿಯಾಂಕ ಬಗ್ಗೆ ಹಲವಾರು ಸಾಲುಗಳಿವೆ. ಇದು ನಿಮ್ಮ ಸೌಂದರ್ಯ ಪ್ರಿಯಾಂಕತೆಯನ್ನು ತೋರಿಸುತ್ತದೆ.Wink
* ಚಿತ್ರದ ಬಗ್ಗೆ ಜಾಸ್ತಿ ಕಟು ವಿಮರ್ಶಿಸಬೇಡಿ " ನಾಗ್ಯಾ ಮತ್ತು ಸಗಣಿ ಹುಳದ ಕಥೆ " ನೆನಪಿದೆಯಲ್ಲಾ?
* ಮತ್ತೊಂದು ಎಚ್ಚರಿಕೆಃ- ಯೋಗರಾಜ ರಾಜ್ ಭಟ್ಟರ ಬಗ್ಗೆ ಬರೆಯುವಾಗ " ಅಖಿಲ ಭಾರತ ಯೋಗರಾಜ್ ಭಟ್ ಅಭಿಮಾನಿ ಸಂಘ" ದ ಸಂಸ್ಥಾಪಕ ಅಧ್ಯಕ್ಷರೂ, ಕಾರ್ಯದರ್ಶಿಗಳೂ, ಖಂಜಾಂಚಿ, ಮತ್ತು ಏಕೈಕ ಸದಸ್ಯರೂ ಆದ ಶ್ರೀ ಶ್ರೀ ಶ್ರೀ ಗಂಧ ಅವರ ಬಗ್ಗೆ ಹುಶಾರಾಗಿರಿ.
 
ಸಸ್ನೇಹ
ಬಾಲ ಚಂದ್ರ

ಉಮಾಶಂಕರ ಬಿ.ಎಸ್ ಮಂಗಳ, 09/07/2010 - 17:41

ಏನೇ ಆದ್ರೂ ಶಿವಣ್ಣ ಭಟ್ಟರ ಬತ್ತಳಿಕೆ ಸಂಪೂರ್ಣವಾಗಿ ಖಾಲಿಯಾಗಿದೆಯೆಂಬ ಅನುಭವ ಪಂಚರಂಗಿ ನೋಡಿದವರೆಲ್ಲರಿಗೂ ತಿಳಿದುಬಿಡುತ್ತದೆ. ಅಲ್ವೇ ಸರ್?

Basavaraj G ಭಾನು, 09/19/2010 - 11:48

ಹಿಂದೆ ತೆಲುಗು ಭಾಷೆ ಚಿತ್ರರಂಗದಲ್ಲಿ ಶ್ರೀ ದಾಸರಿ ನಾರಾಯಣರಾವ್ ಅಂತ ಇದ್ರು, ಸದಾಭಿರುಚಿಯ ಕಥಾ ಹಂದಾರ ಇರುವಂತಹ ಚಿತ್ರ ತೆಗೆಉತ್ತಿದ್ದರು. ಕನ್ನಡದಲ್ಲೂ ಎರಡು ಚಿತ್ರ ನಿರ್ದೇಶಿಸಿದ್ರು. ಅವರ ಚಿತ್ರ ಕಥೆ ನಿರೂಪಣೆ, ದಕ್ಷ ನಿರ್ದೇಶನದಲ್ಲಿ ಬಹಳ ಚಿತ್ರ ತಯಾರದವು. ಅಷ್ಟೇ ಜನಪ್ರಿಯ ಸಹ ಆದವು. ನಂತರ ದಿನಗಳಲ್ಲಿ  ಅವರ ಚಿತ್ರಗಳು ಜನಪ್ರಿಯತೆ ಕಳೆದುಕೊಂಡವು, ಕಾರಣ ಉಮಾಶಂಕರ್ ಹೇಳುವಂತೆ ಅವರ ಬತ್ತಳಿಕೆ ಖಾಲಿಯಾಗಿತ್ತು. ಅದೇ ರೀತಿ ಕೇವಲ ಕೆಲವೇ ಚಿತ್ರಗಳನ್ನು ತೆಗೆದು ನಂತರ ಭಟ್ಟರ ಬತ್ತಳಿಕೆಯಲ್ಲ ಮಸ್ತಿಷ್ಕವು ಖಾಲಿಯಾದಂತೆ ಇದೆ.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಧ, 09/08/2010 - 11:19

ಸಿನಿಮದ ಬಗ್ಗೆ ವಿಮರ್ಶೆ ಬರೆಯುವುದು ಸುಲಭ ಅದ್ರೆ ಆದೆ ಸಿನಿಮ ಮಾಡುವವರ ಕಷ್ಟ ತಮಗೆ ಅರ್ಥ ವಾಗದು ಸ್ವಾಮಿ.. 
-  ಯೋಗರಾಜ ರಾಜ್ ಭಟ್ಟರ ಅಭಿಮಾನಿ

ಅನಾಮಿಕ ಮಹಾಶಯರೇ ಅಷ್ಟು ಕಷ್ಟಪಟ್ಟು ಸಿನಿಮಾ ಮಾಡೋದು ನೋಡಿ ಕುಶಿಪಡ್ಲಿ ಅಂತಾ ಅಲ್ವಾ? ಆ ಸಿನಿಮಾ ನೋಡಿದ್ರೆ ಖುಷಿ ಆಗ್ದೇ ಇದ್ರೆ ಯಾರು ಜವಾಬ್ದಾರರು? ಸಿನಿಮಾ ಮಾಡಿ ಏನು ಪ್ರಯೋಜನ? ಅಲ್ವೇ ಸರ್/ ಮೇಡಂ.

Srinivas.H.N (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 10/03/2010 - 18:25

ಅನಾಮಿಕ ಮಹಾಶಯರೇ ಅಷ್ಟು ಕಷ್ಟಪಟ್ಟು ಸಿನಿಮಾ ಮಾಡೋದು ನೋಡಿ ಕುಶಿಪಡ್ಲಿ ಅಂತಾ ಅಲ್ವಾ? ಆ ಸಿನಿಮಾ ನೋಡಿದ್ರೆ ಖುಷಿ ಆಗ್ದೇ ಇದ್ರೆ ಯಾರು ಜವಾಬ್ದಾರರು? ಸಿನಿಮಾ ಮಾಡಿ ಏನು ಪ್ರಯೋಜನ? ಅಲ್ವೇ ಸರ್/ ಮೇಡಂ....................
ಸ್ವಾಮಿ ಸಿನಿಮಾ ನೋಡಿ ಯಾರು ಖುಷಿ ಪಟ್ಟಿರಲ್ಲ ಅಂತ ನೀವೇ ನಿರ್ಧಾರಕ್ಕೆ ಬಂದಿರೋ ಹಾಗಿದೆ. ಫ್ರೀ ಇದ್ದಾಗ ಯಾವ್ದಾದ್ರೂ ಒಂದು ಶೋ ಗೆ ಹೋಗಿ ಜನರ ನಗು ಖುಷಿ ನೋಡಿ ಬನ್ನಿ. ಅದು ಬಿಡಿ ನಿಮ್ ಅಡ್ರೆಸ್ ಫೋನ್ ನಂಬರ್ ಕೊಡ್ತೀರಾ. ಎಲ್ಲ ನಿರ್ಮಾಪಕರಿಗೂ ಕೊಟ್ಟು ಮೊದಲು ನಿಮ್ಗೆ ತೋರಿಸಿ ಖುಷಿ ಆಯ್ತಾ ಇಲ್ವಾ ಕೇಳಿ ಮುಂದುವರಿಯೋ ಐಡಿಯಾ ಕೊಡಣ ಅಂತ ಇದೀನಿ. ನಿಮ್ಮಂಥೋರೆಲ್ಲ ಇರೋದು ಗೊತ್ತಿಲ್ಲದೇ  ಸಿನಿಮಾ ಮಾಡ್ತ ಇದರೆ ಸ್ವಾಮಿ ಸಿನಿಮಾ ನೋಡಿ ಯಾರು ಖುಷಿ ಪಟ್ಟಿರಲ್ಲ ಅಂತ ನೀವೇ ನಿರ್ಧಾರಕ್ಕೆ ಬಂದಿರೋ ಹಾಗಿದೆ. ಫ್ರೀ ಇದ್ದಾಗ ಯಾವ್ದಾದ್ರೂ ಒಂದು ಶೋ ಗೆ ಹೋಗಿ ಜನರ ನಗು ಖುಷಿ ನೋಡಿ ಬನ್ನಿ. ಅದು ಬಿಡಿ ನಿಮ್ ಅಡ್ರೆಸ್ ಫೋನ್ ನಂಬರ್ ಕೊಡ್ತೀರಾ. ಎಲ್ಲ ನಿರ್ಮಾಪಕರಿಗೂ ಕೊಟ್ಟು ಮೊದಲು ನಿಮ್ಗೆ ತೋರಿಸಿ ಖುಷಿ ಆಯ್ತಾ ಇಲ್ವಾ ಕೇಳಿ ಮುಂದುವರಿಯೋ ಐಡಿಯಾ ಕೊಡಣ ಅಂತ ಇದೀನಿ. ನಿಮ್ಮಂಥೋರೆಲ್ಲ ಇರೋದು ಗೊತ್ತಿಲ್ಲದೇ  ಸಿನಿಮಾ ಮಾಡ್ತ ಇದರೆ ಸ್ವಾಮಿ ಸಿನಿಮಾ ನೋಡಿ ಯಾರು ಖುಷಿ ಪಟ್ಟಿರಲ್ಲ ಅಂತ ನೀವೇ ನಿರ್ಧಾರಕ್ಕೆ ಬಂದಿರೋ ಹಾಗಿದೆ. ಫ್ರೀ ಇದ್ದಾಗ ಯಾವ್ದಾದ್ರೂ ಒಂದು ಶೋ ಗೆ ಹೋಗಿ ಜನರ ನಗು ಖುಷಿ ನೋಡಿ ಬನ್ನಿ. ಅದು ಬಿಡಿ ನಿಮ್ ಅಡ್ರೆಸ್ ಫೋನ್ ನಂಬರ್ ಕೊಡ್ತೀರಾ. ಎಲ್ಲ ನಿರ್ಮಾಪಕರಿಗೂ ಕೊಟ್ಟು ಮೊದಲು ನಿಮ್ಗೆ ತೋರಿಸಿ ಖುಷಿ ಆಯ್ತಾ ಇಲ್ವಾ ಕೇಳಿ ಮುಂದುವರಿಯೋ ಐಡಿಯಾ ಕೊಡಣ ಅಂತ ಇದೀನಿ. ನಿಮ್ಮಂಥೋರೆಲ್ಲ ಇರೋದು ಗೊತ್ತಿಲ್ಲದೇ  ಸಿನಿಮಾ ಮಾಡ್ತ ಇದರೆ...

Srinivas.H.N (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 10/03/2010 - 18:29

 ನಮ್ಮ ತಿಳುವಳಿಕೆಗೆ ಬಾರದೇ ಹೀಗೆ ಜಾಸ್ತಿ ಸರಿ ಪೇಸ್ಟ್ ಗಳು ಆಗಿವೆ... ಕ್ಷಮಿಸಿ. 

srinivas ಧ, 09/08/2010 - 12:18

 
Try to appreciate the movie Swamake movie not remake by any other languages ,,,, what your expecting from the movies tell me first ..... Just watch it & forget it.. its for entertainment man, i think u may have seen Telagu "Magadheera" nothing is grt in that movie Telagu people made Super duper Hit ever made in that Industry, see in Karnataka what we are making trying find some thing not there in that movie….Kannada people we should try promote the Industry man instead of writing some thing else
 

Basavaraj G ಭಾನು, 09/19/2010 - 11:40

ಕನ್ನಡದ ಬಗೆಗಿನ  ನಿಮ್ಮ ಅಭಿಮಾನದ ಬಗ್ಗೆ ಧನ್ಯವಾದಗಳು. ನಾವು ಇಲ್ಲಿ ಸ್ವಮೇಕ್-ರಿಮೇಕ್ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಒಬ್ಬ ಸೃಜನಶೀಲ ನಿರ್ದೇಶಕರಾಗಿ ಭಟ್ಟರು ಒಂದು ಕಥಾ ಹಂದರ ಇಲ್ಲದೆ ಚಲನಚಿತ್ರ ತೆಗೆದಿರುವುದು ಸಮಂಜಸವಲ್ಲ. ಯಾವುದೋ ನಿರ್ದೇಶಕರ ಸಿನಿಮಾದ  ಬಗ್ಗೆ ಮಾತಡಿದ್ದರೆ ಈ ಈ ಟೀಕೆ ಬರುತ್ತಿರಲಿಲ್ಲ. ಆದರೆ ಒಬ್ಬ ಸೃಜನಶೀಲ ನಿರ್ದೇಶಕರಾಗಿ ಕೇವಲ ದೃಶ್ಯ ವೈಭವದ ಚಿತ್ರ ತೆಗೆದರೆ ಸಾಲದು, ಈ ಕೆಲಸವನ್ನು ಮಾಡಲು ರವಿಚಂದ್ರನ್ ತರಹದ ನಿರ್ದೇಶಕರಿದ್ದಾರೆ. ಕಾರಣ ದೃಶ್ಯವೈಭವ, ತಾಂತ್ರಿಕತೆ, ಮಧುರವಾದ ಸಂಗೀತ ಇರುವಂತಹ ಚಿತ್ರ ತೆಗೆಯಲು ಸೃಜನಶೀಲತೆ ಬೇಕಾಗಿಲ್ಲ. ಆದ್ದರಿಂದ ಇತರೆ ನಿರ್ದೇಶಕರಿಂದ ಪ್ರತ್ಯೇಕತೆ ಗುರುತಿಸಿಕೊಲಳ್ಳುವಂತಹ ಚಿತ್ರ ತೆಗೆಯೆಬೇಕೆ ಹೊರತು, ವೈಭವದ ಚಿತ್ರಗಳನ್ನಲ್ಲ. ಆದ್ದರಿಂದ ಶಿವಕುಮಾರ್, ಬಾಲಚಂದ್ರ ಇವರ ಅಭಿಪ್ರಾಯ ಸರಿಯಾಗಿಯಿದೆ.  ಮಸಾಲೆ  ಟ್ರೆಂಡ್ ನಿರ್ಮಾಣ ಮಾಡುವಂತಹ ನಿರ್ದೇಶಕರಿಂದ ಚಿತ್ರ ಬಂದಾಗ ಇಂತಹ ಟೀಕೆ ಬಂದಿದ್ದರೆ, ನೀವು ಹೇಳಿದಂತೆ ತೆಲುಗು ಚಿತ್ರಗಳ ಹೋಲಿಕೆ ಮಾಡಬಹುದಿತ್ತು.

" ಅಖಿಲ ಭಾರತ ಯೋ… (ಪ್ರಮಾಣಿಸಲ್ಪಟ್ಟಿಲ್ಲ.) ಧ, 09/08/2010 - 18:12

swamy neev cinema noDo abhiruchi beLuskolli. amele vimarshe mattakke banni. "ಕಡೇ ಪಕ್ಷ ಬಸ್ ನಿಲ್ದಾಣ, ಸಂತೆ, ಗೂಡಂಗಡಿ, ಕರಾವಳಿಯ ಮೀನುಗಾರರು, ಊಂಹೂ! ಯಾವುದೋ ಕಚಪಿಚಿ ಹಾಡಿನಲ್ಲಿ ಬೋಟಿನ ಮೇಲೆ ಅರ್ಧ ಹಾಡಿಗೆ ಬಂದು ಹೋಗುವ ಪ್ರಿಯಾಂಕಾ (ಉಪೇಂದ್ರ)ರ ಜೊತೆ ಇಡೀ ಹಳ್ಳಿಯ ಜನರು ಮಂಗಮಾಯ!....." kathege beDde iro intha ithyadigalanna torsoke iden nim S. Naani cinema kettoyta? ಒಂದಕ್ಕೊಂದು ಸಂಭಂಧವಿಲ್ಲದಿದ್ದರೂ ಎಲ್ಲಾ ಪಾತ್ರಗಳು ಚೆನ್ನಾಗಿ ನಟಿಸಿದ್ದಾರೆ.. Sanbhamda khandita ide. matte cinema noDi yaaradru swalpa buddhivantara jote adu bittu ekaeki neeve nirdhaara maaDidri henge?
ಮತ್ತೊಂದು Suchane- ಯೋಗರಾಜ ರಾಜ್ ಭಟ್ಟರ ಬಗ್ಗೆ ಬರೆಯುವಾಗ " ಅಖಿಲ ಭಾರತ ಯೋಗರಾಜ್ ಭಟ್ ಅಭಿಮಾನಿ ಸಂಘ" ದ ಸಂಸ್ಥಾಪಕ ಅಧ್ಯಕ್ಷರೂ, ಕಾರ್ಯದರ್ಶಿಗಳೂ, ಖಂಜಾಂಚಿ, ಮತ್ತು ಏಕೈಕ ಸದಸ್ಯರೂ ಆದ ಶ್ರೀ ಶ್ರೀ ಶ್ರೀ ಗಂಧ ಅವರ jote nannantha koti jana idaare. Sangha namdu baala chandra avare nammellara ichcheyante namma Shrigandha avaru aa ella sthanana nibaaysta idare.
 
Dayavittu ondu olle abhiruchi iro cinemana noDoke munche athava adanna vimarshe maaDoke munche nimmalli ondu olle abhiruchi belili...

ಬಾಲ ಚಂದ್ರ ಧ, 09/08/2010 - 19:19

ಪ್ರೀತಿಯ ಯೋಗರಾಜ್ ಭಟ್ ಅಭಿಮಾನಿಗಳೇ,
ನಿಮ್ಮ ಬರಹದ ಶೈಲಿ, ನಿಮ್ಮ ವಾಕ್ಪಟುತ್ವ ಎಲ್ಲವೂ ನನಗೆ ಹಳೇ ಗೆಳೆಯ " ಪ್ರವೀಣ್ ಸೂಡಾ" ಅವರನ್ನು ನೆನಪಿಸಿತು. ನೀವು ಇಂಗ್ಲೀಶ್ ನಲ್ಲಿ ಕನ್ನಡ ಟೈಪು ಕುಟ್ಟದೆ, ಎಲ್ಲೂ ಕತ್ತರಿ-ಆಂಟಿಸು ಪ್ರಯೋಗ ಮಾಡದೆ ನೀವು ಶುದ್ದ ಕನ್ನಡದಲ್ಲಿ ಒಂದು ಸಾಲು ಬರೆದರೆ, ನೀವು ಯಾರೆಂದು ನಾನು ಹೇಳುತ್ತೇನೆ.
ಇರಲಿ ಬಿಡಿ
ಯೋಗರಾಜ್ ಭಟ್ ರ ಬೆಂಬಲಕ್ಕೆ ನಾವು ಕೋಟ್ಯಾಂತರ ಜನ ಇದ್ದೇವೆ ಎಂದು ಬರೆದಿದ್ದೀರಿ. ಸಂತೋಷ,  ಕನ್ನಡದಲ್ಲಿ ಇಷ್ಟೊಂದು ಅಭಿಮಾನಿ ಬಳಗವನ್ನು ಹೊಂದಿದ ಇನ್ನೊಬ್ಬ ನಿರ್ದೇಶಕರಿರಲಾರರು.ನಿಮ್ಮಂತಹ  ಕೋಟ್ಯಾಂತರ ಜನ ಅಭಿಮಾನಿಗಳ ಬೆಂಬಲವಿದ್ದರೂ ಕೂಡ "ಮನಸಾರೆ" ಮಕಾಡೆ ಮಲಗಿತು. ಪಾಪ ಅಭಿಮಾನಿ ಬಳಗವೆಲ್ಲಾ ಸಿನಿಮಾ ನೋಡಲಿಲ್ಲ ಎನಿಸುತ್ತದೆ.
ಆದರೆ ಪಂಚರಂಗಿಯನ್ನು ತಾವು ವಾಚಾಮಗೋಚರ ಹೊಗಳುತ್ತಿರುವ ರಭಸ ನೋಡಿದರೆ, ಅದು ಅಣ್ಣಾವ್ರ " ಬಂಗಾರದ ಮನುಷ್ಯ" ರೆಕಾರ್ಡು ಮುರಿಯುವುದರಲ್ಲಿ ಸಂದೇಹವಿಲ್ಲ ಎನ್ನಿಸುತ್ತದೆ.
ಇನ್ನು ಐವತ್ತು ದಿನಗಳ ನಂತರ "ಪಂಚರಂಗಿ" ಎಷ್ಟು ಸಿನಿಮಾಗೃಹಗಳಲ್ಲಿ ಪ್ರದರ್ಶನ ಕಾಣುತ್ತಿರುವುದೋ ನೋಡೋಣ.
ಸಸ್ನೇಹ
ಬಾಲ ಚಂದ್ರ

praveen sooda.. (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 10/04/2010 - 16:40

ನನ್ ಬಾಯಿಗ್ ಸರಿಯಾಗ್ ಬರತ್ತಿವಾಗ.. ಅಲ ನಿಮ್ ಮುಸುಡಿಗೆ ಯಾರ್ ಬೈದ್ರು ನಾನೇ ಅಂತ ಯಾಕ್ರ ಅಂಕೋತೀರಾ? ನನ್ ಹಾಗೆ ಇರೋ ತುಂಬಾ ಜನ ಬುದ್ಧಿವಂತರು ಇರ್ಬೋದು.. ಹುಡ್ಕೋಳಿ. ಇಲ್ವಾ ಉಗೀಸ್‌ಕೊಳ್ಳೋ ಬರವಣಿಗೆ ಬಿಡಿ. ಧನ್ಯವಾದಗಳು.

ಡಮಾರ್ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 02/15/2011 - 10:54

ನಿಮ್ಮ ಹಾಗೆ ತುಂಬಾ ಜನ ಬುದ್ದಿವಂತರು ಇರಬಹುದು, ನಿಜ. ಆದರೆ ನಿಮ್ಮಷ್ಟು ಬುದ್ದಿವಂತರು ಎಷ್ಟೋ ಕೋಟಿಗೊಬ್ಬರು.(ಅಂದ ಹಾಗೆ ಈ ಸಾರಿ ತಪ್ಪು ಕಡಿಮೆ ಇದೆ, ಯಾರ ಕೈಲಿ ಟೈಪು ಮಾಡಿಸಿದಿರಿ) 

neevan ಸೋಮ, 10/04/2010 - 17:14

ನಮಸ್ಕಾರಗಳು,ತಾವುಗಳು ಭಟ್ಟರ ಮೇಲೆ ವೈಯಕ್ತಿಕ ದ್ವೇಶ ಎನಾದ್ರು ಇಟ್ಟಿದಿರಾ ಮಹನೀಯರೆ.sorry i tried typin gin kann cant write now. in future i promise type in kannada. illi annavaru anta matettidke heltin keli. annavrudu ella picture hit agidya? i have nothing against the great dr. raj. he was one of the finest actor and more than acting he was a wonderful singer.well picture galu janarigoskara tagilebardu.janakke hing madidre nagtare hang torsidre altare anta cinema yaak madbeku.adakkinta nive janagalu nimgansidd imagine madi alri nagri. obba individual tanagansiddan hangange picturise madbeku. thats why sanjay leela bhansali antavrela gr8 ansudu. see what he made of devdas. shyam benegal antaavru yaak asht gr8 agtare. look whats happened to him now that he is making films to please people. all utter flops. not only commercially but in every sense.yograj bhat is one of the finest creator of films. because he is changing the grammer of cinema. look mungaru male was a very ordinary movie but it became such a hit only because of its timing. people were fed up of nonssense kannada movies then and they fell for a simple old story. why did it fail in telugu where its made in grand scale again because of yograj s creativity.be broadminded and think of what it is and not how it should be. may be u cannot digest the format in which its been layed before u. dialogues style repetitive andrala. why not u take it as a regular language adu ond style alva. manasaare flop  agirbaud( jasti dina theatre nal ildidke. but u cant  say its flop commercially. adar business enitto who knows. enthiran bari  erdu vaara odidre it will recover full 150 cr.).but it was a good film for the way its adopted from some foreign novel/play.style kanri style. ade lovvu,tyaga, kanniru, hoklad mel drakshi sorry sir .........thank u yograj sir thank u for all the pain u take in giving us those gems..................

manku timma (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 10/04/2010 - 18:51

Neevan avre enri neevu..... kannada baralvanimge vyaakrara ella sari balasi amele "bala"ngochigalu nimma maana tagitaare... haha... 

ಬಾಲ ಚಂದ್ರ ಹೇಳಿದ್ದು ತಪ್ಪು ಮನಸಾರೆ ಚಿತ್ರ ಸೋತಿದೆ ಎಂದು ನಿಮಗೆ ಹೇಳಿದವರಾರು?...ಆ ಚಿತ್ರದ ಯಶಸ್ಸು ಪಂಚರಂಗಿ ಹುಟ್ಟಿಗೆ ಕಾರಣ ತಿಳಿದುಕೊಳ್ಳಿ..

ರಾಜೇಶ ಹೆಗಡೆ ಶನಿ, 09/11/2010 - 11:23

ಹಾಯ್ ಶಿವಕುಮಾರ್ ಅವರೇ,
ನಿಮ್ಮ ವಿಮರ್ಶೆಯ ಶೈಲಿ ತುಂಬಾ ಚೆನ್ನಾಗಿದೆ. ಈ ಪಂಚರಂಗಿ ಚಿತ್ರ ನೋಡಬೇಕು ಎಂದು ಕೊಂಡಿದ್ದೇನೆ. ವಿಭಿನ್ನತೆಯ ಹುಡುಕಾಟದ ಉತ್ಸಾಹದಲ್ಲಿ ಭಟ್ಟರು ಈ ಚಿತ್ರ ನಿರ್ಮಿಸಿದ್ದಾರೆ ಎಂಬುದು ಇದರ ಹಾಡುಗಳನ್ನು ನೋಡಿದಾಗ ಅನ್ನಿಸಿತು. 

@ಬಾಲಚಂದ್ರ ಮತ್ತು ಶಿವಕುಮಾರಮೊದಲನೆಯದಾಗಿ ನಾನು ಭಟ್ಟರ ಅಭಿಮಾನಿಯೇನು ಅಲ್ಲ. ಇನ್ನು ದಿಗಂತನ ಅಭಿಮಾನಿ ಎಂದು ಹೇಳುವ ಹಾಗೆಯೇ ಇಲ್ಲ.  ಪಂಚರಂಗಿ ಸಿನಿಮಾದಲ್ಲಿ ಕಥೆ ಇಲ್ಲ ಸತ್ಯ. ಅದನ್ನು ಒಪ್ಪಿಕೊೞುತ್ತೇನೆ. ಆದರೆ ನಾವು ಅಂದರೆ ನಮ್ಮಂತ ಪ್ರೇಕ್ಷಕರಿಗೆ ಒಂದು ಸಿನಿಮಾದಿಂದ ಬೇಕಾಗಿರುವುದು ತಮ್ಮ ನಿತ್ಯ ತಂಟೆ ತಾಪತ್ರಯ ಗಳಿಂದ ಮುಕ್ತಿಯೇ ಹೊರತು ಕಥೆಯಲ್ಲ. ಅವರು ಆ ಎರಡೂವರೆ ಗಂಟೆಗಳ ಕಾಲ ಸಂತೋಷಪಡಲು ಬರುತ್ತಾರೆ ಹೊರತು ಕಥೆ ಹಾಗಿದೆ, ಹೀಗಿದೆ ಎಂದು ವಿಮರ್ಶೆ ಮಾಡುವುದಕ್ಕಲ್ಲ. ನಿಮಗೆ ಆ ಹಾಡು ಶುರುವಾಗುವ ಸಮಯ ಇಷ್ಟವಾಗಿಲ್ಲದಿರಬಹುದು. ಆದರೆ ನೀವು ಮೊದಲಿನಿಂದ ಆ ಹಾಡು ಶುರುವಾಗುವ ವರೆಗೂ ನಡೆಯುವ ತುಂಬಾ ವೇಗವಾದ ಸಂಭಾಷಣೆ, ದೃಶ್ಯಗಳನ್ನು ಗಮನಿಸಿದರೆ ನಿಮ್ಮ ಗೊಂದಲಕ್ಕೆ ಅಲ್ಲಿಯೇ ಪರಿಹಾರ ಸಿಗುತ್ತದೆ.ಇನ್ನು "ಬಸ್ ನಿಲ್ದಾಣ, ಸಂತೆ, ಗೂಡಂಗಡಿ, ಕರಾವಳಿಯ ಮೀನುಗಾರರು" ಇವೆಲ್ಲಾ ಸಿನಿಮಾದಲ್ಲಿ ತುಂಬಾ ಅವಶ್ಯಕತಯೇ? ಎಂಬುದು ನನ್ನ ಪ್ರಶ್ನೆ.ಕೊನೆಯದಾಗಿ ನಿಮ್ಮಿಬ್ಬರ ವಿಮರ್ಶೆ ಕೆಲವರನ್ನು ಬೈಯ್ಯುವುದಕ್ಕೆಂದೇ ಬರೆದ ಹಾಗಿದೆ.

ಆದೇಶ್ ಕುಮಾರ್.ಸಿ.ಟಿ ಮಂಗಳ, 09/28/2010 - 22:12

ಆತ್ಮೀಯ ಶಿವು,  ಯೋರಾಭರ ಮೇಲಿನ ನಿಮ್ಮ ಪ್ರೀತಿ ನನಗೆ ತುಂಬಾ ಇಷ್ಟವಾಯಿತು. "ಪ್ರೇಕ್ಷಕರಿಗೆ ಬೇಕಾಗಿರೋದು "ತಮ್ಮ ನಿತ್ಯ ತಂಟೆ ತಾಪತ್ರಯ ಗಳಿಂದ ಮುಕ್ತಿಯೇ ಹೊರತು
ಕಥೆಯಲ್ಲ" ಅಂತಾ ನಂಬಿ ಮಾಡಿರೋ ಎಷ್ಟೊಂದು ಸಿನೆಮಾಗಳ ನಿರ್ಮಾಪಕರು ತಮ್ಮ ಬುಡ
ಸುಟ್ಟುಕೊಂಡಿದ್ದಾರೆ, ಎಷ್ಟೊಂದು ನಿರ್ದೇಶಕರು ಕೆಲಸ ಕಳೆದುಕೊಂಡಿದ್ದಾರೆ ಗೊತ್ತಾ?" ಎಂಬುದು ನಿಜವಾಗಿಯೂ ಸತ್ಯವಾದ ಮಾತು. ಆದರೆ ಆ ಸೂತ್ರವು ಯಶಸ್ವಿಯಾದಾಗ ಅದನ್ನು ಪ್ರೋತ್ಸಾಹಿಸಬೇಕಲ್ಲವೆ?  ಕಥೆ ಇಟ್ಟುಕೊಂಡು ಎರಡೂವರೆ ಗಂಟೆಗಳ ಕಾಲ ಸಿನಿಮಾ ಮಾಡಲಾಗುವುದಿಲ್ಲ ಎಂದು ಯಾರಾದರೂ ಹೇಳಿದರೆ ಅದನ್ನು ನಿಮ್ಮ ಹಾಗೆ ನಾನೂ ಕೂಡ ಖಂಡಿಸುತ್ತೇನೆ. ನಾನು ಹೇಳಿದ್ದು ಪ್ರೇಕ್ಷಕನಿಗೆ ಸಂತೋಷವಾಗುವಂತ ಸಿನಿಮಾದಲ್ಲಿ ಕಥೆ ಇದ್ದರೇನು ಇಲ್ಲದಿದ್ದರೇನು? ಅವನನ್ನು ಖುಷಿ ಪಡಿಸುವುದೇ ಸಿನಿಮಾ ಧರ್ಮ ಅಲ್ಲವೇ?(ಈ ಅಭಿಪ್ರಾಯ ತಪ್ಪಾಗಿದ್ದರೆ ದಯಮಾಡಿ ನನ್ನನ್ನು ತಿದ್ದಿ).  ಆದರೆ ನಿಮಗೆ ಚಿತ್ರದಲ್ಲಿ ಪಾಪ ಮನುಷ್ಯರೇ ಇಲ್ಲವಲ್ಲ ಎಂಬುದೇ ಸಮಸ್ಯೆ ಆಗಿರುವಂತಿದೆ. ಯಾರಿಗೊತ್ತು ಶಿವು ಎಲ್ರೂ ಗುಳೇ ಹೊರಟೋಗಿರಬಹುದು? ಇನ್ನು ಪೂಜಾರಿ ವಿಷಯಕ್ಕೆ ಬಂದ್ರೆ ಪಾಪ ಅದೇನ್ ಕೆಲ್ಸ ಇತ್ತೋ ಅವ್ರಿಗೆ ಬರೋಕ್ ಆಗಿಲ್ಲ ಅನ್ಸುತ್ತೆ. ಹೋಗ್ಲಿ ಬಿಡ್ರಿ. ಹೀಗೆ ಬರೀತಾ ಇರಿ. ಕಿತ್ತಾಡ್ತ ಇರೋಣ.....!!!

sagar malli (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 09/20/2010 - 17:25

Do you know what is a movie??? What do u expect from a movie???, fights? non-veg jokes, rape scenes, useless songs, all masala things if you are expecting these u watched a useless movie because u better watch either Darshan's or Sudeep's movie becos there will be no story(that means remake movies) and unwanted songs, jokes and heroism. Have you observed one thing no one walked in the movie until the end with a smily face he will be very happy as he saw one good movie. If you say you are a movie lover I say you are a liar. You are a kind of person you never be happy in life as you dont know how to see the best thing.
 

ಸಾಗರ್ ಮಲ್ಲಿಯವರೇ, ಸುದೀಪು, ದರ್ಶನ್-ಗಳೂ, ಸಾಯಿಕುಮಾರ್ಗಳೂ, ಕಿಲ್ಲರ್ ಮಂಜುಗಳೂ ಮತ್ತು ಯೋರಾಭರೂ ಬೇರೇ ಬೇರೇ ಅಂತಾ ಅಂದ್ಕೋಂಡಿರೋದಕ್ಕೇ ನಾನು ಬರೀ ಯೋರಾಭರ ಸಿನೆಮಾಗಳ ಬಗ್ಗೆ ಬರ್ದಿರೋದು...
ನೀವು ಸಿನೆಮಾ ಅಂದ್ರೇ ಏನೂಂತಾ ಪ್ರಶ್ನೆ ಕೇಳಿರೋದಕ್ಕೇ ಬಚಾವಾಗಿದೀನಿ, ಬದಲಾಗಿ ಸಿನೆಮಾ ಅಂದ್ರೇ (ಪಂಚರಂಗಿಯನ್ನ ತೋರಿಸಿ) ಇದೇ ಅಂತಾ ಹೇಳಿ ತಾವು ನನ್ನ ಜೀವನದ ಅತೀಪ್ರೀತಿಯ ಹವ್ಯಾಸವೊಂದನ್ನ ಆಜೀವಪರ್ಯಂತ ದ್ವೇಷಿಸೋಹಾಗೆ ಮಾಡಲಿಲ್ಲವಲ್ಲ ಅದಕ್ಕೇ ನಾನು ನಿಮಗೆ ಚಿರಋಣಿ ಕಣ್ರೀ. ಅಂದಹಾಗೇ ರೀಮೇಕ್ ಸಿನೆಮಾಗಳಲ್ಲಿ ಕತೆ ಇರೋಲ್ಲಾ ಅಂತಾ (ಹಾಗೂ ಪಂಚರಂಗಿಯಲ್ಲಿ ಕತೆ ಇದೆ ಅಂತಾ) ಯಾರು ಹೇಳಿದ್ದು ನಿಮಗೆ?
ಧನ್ಯವಾದಗಳು ಕಣ್ರೀ, ನಿಮ್ಮುನ್ನ ನೀವು ಅರ್ಥ ಮಾಡ್ಕಂಡಿದೀರೋ ಇಲ್ವೋ (ನಿಮಗೆ ಅದರ ಅವಶ್ಯಕತೆ ಇದೆಯೋ ಇಲ್ವೋ) ಗೊತ್ತಿಲ್ಲ, ನನ್ನನ್ನಂತೂ ಸರಿಯಾಗೇ ಅರ್ಥ ಮಾಡ್ಕಂಡಿದೀರಾ! ನಾನೊಬ್ಬ ಸುಳ್ಳ, ಬದುಕಿನಲ್ಲಿ ಒಳ್ಳೆಯದನ್ನು ನೋಡೋಕಾಗ್ದೇ, ಅನುಭವಿಸೋಕಾಗ್ದೇ, ತನ್ಮೂಲಕ (ಪಂಚರಂಗಿಯನ್ನು ನೋಡಿಯೂ) ಸಂತೋಷವನ್ನೇ ಪಡದ ಕಡುಪಾಪಿ ಕಣ್ರೀ ನಾನು! ಹಹ್ಹಹ್ಹಾ! ನಿಮ್ಮ (ಪಂಚರಂಗಿಯ) ಸಂತೋಷದ ಸಗ್ಗದೊಳಗೆ ನನಗೆ ಪ್ರವೇಶವೇ ಬೇಡ! ಬಹಳ ಡೀಪು ಬಿಡ್ರೀ ನೀವು, ನಿಮ್ಮ ಯೋಚನೆಗಳೂ... SmileSmile

ಬಾಲ ಚಂದ್ರ ಮಂಗಳ, 09/21/2010 - 16:07

ಪ್ರೀತಿಯ ಅದೇಶ್ ಕುಮಾರ್, ಸಾಗರ್ ಮಲ್ಲಿ ಹಾಗೂ ಶ್ರೀನಿವಾಸ್
*ಮೊದಲನೆಯದಾಗಿ ನಾನು ಹಾಗು ಈ ಲೇಖನದ ಲೇಖಕರಾದ ಶಿವಕುಮಾರ್ ಯೋಗರಾಜ್ ಭಟ್ ಅವರ ದ್ವೇಷಿಗಳಲ್ಲವೆಂದು ಸ್ಪಷ್ಟ ಪಡಿಸುತ್ತೇನೆ. ವಿಮರ್ಶೆಯೆಂದರೆ ಗುಣ ಹಾಗೂ ದೋಷ ಎರಡನ್ನೂ  ಹೇಳಬೇಕು. ಕೇವಲ ಗುಣವನ್ನು ಮಾತ್ರ ಹೊಗಳಿದರೆ ಅದು ಪೂರ್ವಾಗ್ರಹವಾಗುತ್ತದೆ. ಇವರ ಲೇಖನದಲ್ಲಿರುವ ಪ್ರಶಂಸೆಯ ಅಂಶಗಳನ್ನು ತಾವ್ಯಾರೂ ಗಮನಿಸಿಲ್ಲವೇಕೆ?
* ಸಿನಿಮಾ ಬಿಡುಗಡೆಯಾಗುವುದಕ್ಕೆ ಮೊದಲು ಯೋಗರಾಜ್ ಭಟ್ ಅವರು ಪತ್ರಿಕಾ ಗೋಷ್ಠಿಯೊಂದರಲ್ಲಿ ಉದುರಿಸಿದ ಅಣಿಮುತ್ತುಗಳು
೧) ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಖಂಡಿತಾ ಬರುತ್ತದೆ
೨) ಅನಂತ ನಾಗ್ ಅವರಿಗೆ ಈ ಚಿತ್ರದಿಂದ ರಾಷ್ಟ್ರಮಟ್ಟದ ಶ್ರೇಷ್ಠನಟ  ಪ್ರಶಸ್ತಿ ದೊರೆಯುತ್ತದೆ. 
೩) ಈ ಚಿತ್ರದ ಛಾಯಾಗ್ರಹಣಕ್ಕೂ ಸಹ ಪ್ರಶಸ್ತಿ ಗ್ಯಾರಂಟಿ
ಈ ಮಾತುಗಳನ್ನು ನಂಬಿಕೊಂಡು ನಾವು ಪಿವಿಆರ್ ಮೊತ್ತಮೊದಲ ದಿನವೇ ರಾತ್ರಿ ದೌಡಾಯಿಸಿದೆವು. ಯಾಕೊ ಪೈಸಾ ವಸೂಲ್ ಚಿತ್ರ ಅನ್ನಿಸಲಿಲ್ಲ
* ವಾಚಾಳೀ ನಾಯಕನೇ ಕಥಾ ಕೇಂದ್ರ. ಮುಂಗಾರು ಮಳೆಯಲ್ಲಿ ಚೆನ್ನಾಗಿತ್ತು, ಗಾಳಿ ಪಟದಲ್ಲಿ ಇಷ್ಟ ಆಯ್ತು. ಮನಸಾರೆಯಲ್ಲಿ ಮನಸಾರೆ ಕೋಪ ಬಂದ್ರೂ ಸಹಿಸಿಕೊಂಡ್ವಿ ಈಗ ಮತ್ತದೇ ಕಥೆ.
ಒಮ್ಮೆ ಕ್ಲಿಕ ಆದ ಐಡಿಯಾಗಳನ್ನೇ ಮತ್ತೆ ಮತ್ತೆ ತಿರುವಿ ಹಾಕಿದರೆ ಏನೆನ್ನಬೇಕು?
ಯೋಚಿಸಿ ನೋಡಿ
ಹಾಗಂತ ನಾವೇನೂ ರೀಮೇಕ್ ಅಭಿಮಾನಿಗಳಲ್ಲ( ನನ್ನ ಇತರ ಸಿನಿಮಾ ವಿಮರ್ಶೆ ಲೇಖನಗಳನ್ನು ವೀಕ್ಷಿಸಿ)
ಒಬ್ಬ ಸೃಜನಶೀಲ ನಿರ್ದೇಶಕ ಹಾಳಾಗುತ್ತಿರುವಾಗ ತೋರುವ ಕಳಕಳಿ ಅಷ್ಟೇ ಶಿವಕುಮಾರ್ ಅವರು ತೋರಿಸಿದ್ದು.
 
ಸಸ್ನೇಹ
ಬಾಲ ಚಂದ್ರ     
 

ಆತ್ಮೀಯ ಬಾಲಚಂದ್ರ ಅವರೆ,ನೀವು ಹೇಳಿರುವ ಹಾಗೆ ವಾಚಾಳಿ ನಾಯಕನ
ಪಾತ್ರವನ್ನು ಭಟ್ಟರು ಬಳಸಿಕೊಂಡಿರಬಹುದು. ಆದರೆ ಆ ವಾಚಾಳಿತನವನ್ನು ಅವರು ಬೇರೆ ಬೇರೆ
ರೀತಿಯಲ್ಲಿ ಪ್ರಯೋಗಿಸಿದ್ದಾರೆ ಎಂಬುದು ನಾವು, ನೀವು, ಎಲ್ಲರೂ ಒಪ್ಪಿಕೊಳ್ಳಲೇಬೇಕಾದ
ಸತ್ಯ. ಇನ್ನು ಯಾವುದೇ ನಿರ್ದೇಶಕನೂ ತನ್ನ ಚಿತ್ರ ಚೆನ್ನಾಗಿ ಓಡುತ್ತದೆ,
ಪ್ರಶಸ್ತಿ ಕೂಡ ಬರುತ್ತದೆ ಎಂದುಕೊಳ್ಳುವುದು ತಪ್ಪೇನಲ್ಲ. ಆದರೆ ಭಟ್ಟರು ತಮ್ಮ ಅತಿಯಾದ
ಆತ್ಮವಿಶ್ವಾಸದಿಂದ ಹಾಗೆ ಹೇಳಿರಬಹುದು. ಈ ವಿಷಯದಲ್ಲಿ ನಾನು ನಿಮ್ಮ ಪರ. ಆದರೆ
ನನಗೆ ಚಿತ್ರದ ಕೊನೆಯ ಭಾಗವನ್ನು ನೋಡಲು ತುಂಬಾ ಬೇಜಾರಾಯಿತು. ಮೊದಲಿನಿಂದ ಕೊನೆಯ ತನಕ ನಗಿಸುವ ದಿಗಂತ್ ಕೊನೆಗೆ ಅಳುವುದನ್ನು ನನಗೆ ನೋಡಲಾಗಲಿಲ್ಲ.

sagar malli ಶುಕ್ರ, 09/24/2010 - 23:20

ಸಿನಿಮಾ ನೋಡೋಕೆ ಚೆಂದ ಇದೆ. ನಿಧಿ ಅಧ್ಬುತ!!! ಯಾರ್ ಏನೇ ಅಂದರು ಫಿಲ್ಮ್ ಸೂಪರ್, ಫಿಲ್ಮ್ ನೋಡಿ ಮಜ ಮಾಡಿ. ಫಿಲ್ಮ್ ಎಲ್ಲೂ ಬೇಜಾರ್ ಆಗೋಲ್ಲ, ಒಳ್ಳೇ ಹಾಡುಗಳು, ನಿಧಿ ಸೂಪರ್!!!.

manku timma (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 10/03/2010 - 18:38

ಶಿವಕುಮಾರ"ಗಳು" ಕಾಲು ಎಳಿತಾರೆ ಅಂದ್ರೆ ಬಾಲಚಂದ್ರ"ಗಳು" ಆಂತೋರು ಸಹಾಯಕ್ಕೆ ಸಿದ್ದರಾಗಿರ್ತಾರೆ. ಒಂದು ನೆನಪಿರಲಿ ಭಟ್ಟರು ಅಂತ ಅಲ್ಲ ಹೀಗೆ ಗೆದ್ದೋರೆಲ್ಲ ನಿಮ್ ಅಂತ ಎಷ್ಟೋ ಜಾಣರ ಕೈಗೆ ಕಾಲು ಕೊಟ್ಟೆ ಬಂದಿರ್ತಾರೆ ಎಳಿತಾ ಇರಲಿ ಅಂತ. You people please continue... ಇನ್ನೂ ಜೋರಾಗಿ

Madhu kumar S K (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 10/04/2010 - 19:42

ಯಾರ ಅಭಿಪ್ರಾಯ ಏನೋ ನನಗೆ ಬೆಡ ಆದರೆ ಪಂಚರಂಗಿ ಅಂತೂ ನಿಜಕ್ಕೂ ತುಂಬಾ ಒಳ್ಳೇ ಚಿತ್ರ.. ಅಪರೂಪದ ಚಿತ್ರ.. ನನಗೆ ತೇಜಸ್ವಿ ಅವರ ಕಥೆ ಓದಿದಾಗ ಸಿಗುವ ಖುಷಿ ಪಂಚರಂಗಿ ನೋಡಿದಾಗ ಸಿಕ್ತು.. ಯೋಗರಾಜ್ ಭಟ್ಟರಿಗೆ ನನ್ನ ಅನಂತ ಧನ್ಯವಾದಗಳು.

siri (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 10/30/2010 - 15:06

ಅಯ್ಯೋ ಶಿವಕುಮಾರ ಇವೆಲ್ಲ ಅಭಿಪ್ರಾಯಗಳು ಇರಲಪ್ಪ ನಿಮ್ಮ ಇತ್ತೀಚಿನ ಲೇಖನ ಹುಡುಕಿ ಹುಡುಕಿ ಸಾಕಾಗಿದೆ.  ಯಾವುದು ಬಂದಿಲ್ಲವೋ ಅಥವಾ ನನಗೆ ಸಿಗುತ್ತಿಲ್ಲವೋ ಕಾಣೆ ಯಾಕೆಂದರೆ ನಾನು ನೆಟ್ ಹೊಸಬಳು ಪ್ಲೀಸ್ ಎಲ್ಲಿದ್ದೀರ ನಿಮ್ಮ ಲೇಖನ ವನ್ನು 3 ದಿನಗಳಿಂದ ಹುಡುಕುತ್ತಿರುವೆ ಸಿಗುತ್ತಿಲ್ಲ ನಾನು ನಿಮ್ಮ ಅಭಿಮಾನಿ ಪ್ಲೀಸ ಎಲ್ಲಿರುವಿರಿ.

Arjun Gatti ಧ, 02/23/2011 - 08:36

ಶಿವಕುಮಾರ ಶೇಷಪ್ಪ ಕುಂದೂರುravare
Kannada Filmnalli innenu enu Beku Nimge
Kottiro Kasige Nimgellu Mosa agilvalla.
Bidi, Nimgoskarne BhaTru "Parmathma" madthidhare Aduna nodi
E Charchena Munduvarsona. illige saaku.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 02/25/2011 - 23:44

ಹಾಯ್ ಶಿವು ಎಲ್ಲಿದ್ದೀರಾ?  ಯಾಕೆ ನೀವು ಏನು ಬರೆದಿಲ್ಲ ನಿಮ್ಮ ಲೇಖನಕ್ಕೋಸ್ಕರ ಕಾಯುತ್ತಿರುವೆ.  ಪ್ಲೀಜ್ ರಿಪ್ಲೈ ಮಾಡಿ ನಿಮ್ಮ ಭಂಡಾರ ಖಾಲಿಯಾಗಬಾರದು ಅಕ್ಷಯ ಪಾತ್ರೆಯ ಹಾಗಿರಲಿ ಸದಾ! ಆದಷ್ಟು ಬೇಗ ವಿಸ್ಮಯ ನಗರಿಯಲ್ಲಿ ಕಾಣಿಸಿಕೊಳ್ಳೀ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.