Skip to main content

ಆರೋಗ್ಯದ ಲೇಖನಗಳು

ಇಂದ kanasugaara
ಬರೆದಿದ್ದುMarch 22, 2007
39ಅನಿಸಿಕೆಗಳು

ಬೂಸಾ(ಫೈಬರ್) ೨೮-೧೦-೨೦೦೫ ಬೂಸಾ ತಿನ್ನಿರಿ, ಎಂದೆಂದಿಗೂ ಡಾಕ್ಟರರಿಗೆ ಸುರಿಯದೆ ಆರೋಗ್ಯವಾಗಿರಿ. ಕೆಂಪು ಅಕ್ಕಿಯ ಬೂಸಾ ದೇಹಕ್ಕೆ ಮತ್ತು ಮನಸ್ಸಿಗೆ ತುಂಬಾ ತುಂಬಾ ಒಳ್ಳೆಯದು. ಇದರಲ್ಲಿ ಹೇರಳವಾಗಿ ಜೀವಸತ್ವ(ನ್ಯೂಟ್ರಿಶನ್) ಗಳಿವೆ. ಅತ್ಯಧಿಕ ಪೌಷ್ಟಿಕಾಂಶಗಳು ಇವೆ. ನೀವು ಇದನ್ನು ತಿನ್ನುವುದರಿಂದ ನಿಮಗೆ ಕುದುರೆಗಿರುವಷ್ಟು ಬಲ, ಆನೆಗಿರುವಷ್ಟು ಬಲ ಬರುತ್ತದೆ. ಮೆದುಳು ಚುರುಕಾಗುತ್ತದೆ. ದೇಹದಲ್ಲಿ ಸೇರಿರುವ ಟಾಕ್ಸಿನ್(ವಿಷ) ಒಂದೇ ದಿನದಲ್ಲಿ ಹೊರದೂಡಲ್ಪಡುತ್ತದೆ. ಮನಸ್ಸು ಆನಂದಮಯವಾಗಿರುತ್ತದೆ. ಆ ಅನಂದವನ್ನು ಹೇಳತೀರದಾಗಿದೆ. ದೇಹವು ಅತ್ಯಂತ ಬಲಿಷ್ಟ ವಾಗುತ್ತದೆ. ಒಂದು ಚೂರೂ ಸುಸ್ತಾಗುವುದಿಲ್ಲ. ಇಡೀ ದಿನ ಮನಸ್ಸು ಪ್ರಫುಲ್ಲವಾಗಿರುತ್ತದೆ. ಎಲ್ಲಾ ಧಾನ್ಯದ ಬೂಸಾಗಳು ಅತ್ಯುತ್ತಮವಾಗಿರುತ್ತದೆ. ಆದರೆ ಕೆಂಪು ಅಕ್ಕಿಯ ಬೂಸಾ ತುಂಬಾ ತುಂಬಾ ತಂಪುಗುಣವನ್ನು ಹೊಂದಿರುತ್ತದೆ.

ಲೇಖಕರು

kanasugaara

ಆರೋಗ್ಯವೇ ಮಹಾಭಾಗ್ಯ

ನಾನು ಹುಟ್ಟಿದ ಊರು ಚನ್ನಪಟ್ಟಣ-ಬೆಂಗಳೂರು ಡಿಸ್ಟ್ರಿಕ್ಟ್. ನಾನು ಓದಿದ್ದು, ಬೆಳೆದಿದ್ದು ಎಲ್ಲಾ ಚನ್ನಪಟ್ಟಣದಲ್ಲೇ. ನಾನು ೧೯೬೧ ನೇ ಇಸವಿಯಲ್ಲಿ ಬೆಂಗಳೂರಿಗೆ
ಬಂದು ಬಸವನಗುಡಿ ಕೋ-ಆಪರೇಟೀವ್ ಸೊಸೈಟಿಯಲ್ಲಿ ಕೆಲಸಕ್ಕೆ ಸೇರಿದೆ. ನಂತರ ೧೯೬೩ ರ february ಯಲ್ಲಿ ಮೈಕೋ ಗೆ ಸೇರಿದೆ. ಅಲ್ಲಿ ಸುಮಾರು ೨೫ ವರ್ಷಗಳ
ಸರ್ವೀಸ್ ಮಾಡಿದೆ. ೧೯೮೭ ಸೆಪ್ಟೆಂಬರ್ ೩೦ ರಂದು ವಾಲಂಟರಿ ರೆಟೈರ್ಮೆಂಟ್ ತೆಗೆದುಕೊಂಡೆ.
ನಾನು ತುಂಬಾನೇ ಸೋಷಿಯಲ್, ಎಲ್ಲರ ಜೊತೆಗೂ ಹೊಂದಿಕೊಳ್ಳುವವನು, ಅದರಲ್ಲೂ ನನ್ನ ರುಚಿ ಏನಿದೆಯೋ ಅದೇ ರುಚಿ ಉಳ್ಳವರ ಜೊತೆ ಬೇಗ ಹೊಂದಿಕೊಳ್ಳುವವನು.
ನನ್ನನ್ನು ಒಂದು ಸಲ ನೀವು ನೋಡಿದರೆ, ಮಾತಾಡಿಸಿದರೆ ಸಾಕು ನಿಮ್ಮ ಹೃದಯದಲ್ಲಿ ನಾನು ನಿಂತುಬಿಡುತ್ತೇನೆ. ನಾನು ಹೊಸಾ ಥರಹ ಅಸ್ಟ್ರಾಲಜರ್, ಪ್ರಕೃತಿ ಚಿಕಿತ್ಸೆ ಯ ಬಗ್ಗೆ
ಆಸಕ್ತಿ. ನಮ್ಮ ಆಹಾರದಲ್ಲೇ ನಮ್ಮ ರೋಗಗಳನ್ನು ಗುಣಪಡಿಸಿಕೊಳ್ಳಬಹುದು. ಮತ್ತು ನಾನು ಮತ್ತು ನನ್ನ ಸ್ನೇಹಿತರು ಸೇರಿ ಒಂದು ಕನ್ನದ ಮಾಸಿಕ ಪತ್ರಿಕೆಯನ್ನು ನಡೆಸುತ್ತಿದ್ದೇವೆ
ಅದರ ಹೆಸರು "ಸಹಾರ" ಎಂದು.

ಅನಿಸಿಕೆಗಳು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.