ಪ್ರೀತಿ ಕೊಂದ ಕೊಲೆಗಾತಿ... ನೀ ಆಗಬೇಡ ಇತರರಿಗೆ "ಸ್ಪೂರ್ತಿ"...!!!
ಪ್ರೀತಿ ಕೊಂದ ಕೊಲೆಗಾತಿ... ಆದಳು ಈ ಕಥೆಗೆ ಸ್ಪೂರ್ತಿ
[img_assist|nid=6856|title=|desc=|link=node|align=center|width=600|height=600]
ಚಿತ್ರ ಕೃಪೆಃ belleoutandabout.blogspot.com
ಅವರಿಬ್ಬರು ಒಂದೇ ಬಡಾವಣೆಯಲ್ಲಿದ್ದವರು..., ಅದೂ ಒಂದೇ ರಸ್ತೆಯಲ್ಲಿದ್ದ ಎರಡು ಕುಟುಂಬದವರಾಗಿದ್ದರು...ಅವನು ಟೆಕ್ಕಿ, ಇವಳು ಭಾವಿ ಲಾಯರ್. ಇಬ್ಬರು ಕುಟುಂಬದ ಹಿರಿಯರು ಒಟ್ಟಿಗೆ ಸೇರಿ ಒಂದು ದಿನ ಮದುವೆಯ ಮಾತುಕತೆ ನೆಡೆಸಲು, ಪರಸ್ಪರರಲ್ಲಿ ಒಪ್ಪಿಗೆಯಾಗಿ ನಿಶ್ಚಿತಾರ್ಥದ ದಿನವೂ ಬಂದು ಬಿಟ್ಟಿತು. ಹುಡುಗನಿಗೋ ಸಡಗರ... ಎಕೆಂದರೆ ಅಷ್ಟು ಸ್ಪೂರದೃಪಿಯಾಗಿದ್ದಳು ಆ ಹುಡುಗಿ.. ಮತ್ತೇನು, ಅಂತೂ ವಿಜ್ರಂಭಣೆಯಿಂದ ನಿಶ್ಚಿತಾರ್ಥ ಕಾರ್ಯಕ್ರಮ ನೆಡೆಯಿತು. ಹುಡುಗನಿಗೆ ಅವನ ಮನದಾಸೆಯ ಹುಡುಗಿ ಸಿಕ್ಕಿದ್ದಳು..!
ಅದರೆ, ಅವನಿಗೇನು ಗೊತ್ತಿತ್ತು ಆ ಸುಂದರ ಹುಡುಗಿ ತನ್ನ ಕಾಲೇಜಿನ ದಿನಗಳಿಂದ ಒಬ್ಬ ಹುಡುಗನ್ನ ಪ್ರೀತಿಸಿದ್ದಾಳೆ ಅಂತಾ...!!. ನಿಶ್ಚಿತಾರ್ಥ ದಿನದವರೆಗೂ ಸುಮ್ಮನೆ ಒಪ್ಪಿಗೆ ಸೂಚಿಸಿದ್ದ ಅವಳು ಆ ಕಾರ್ಯಕ್ರಮ ಮುಗಿದು ಸಲ್ಪ ದಿನವೂ ಆಗಿರಲಿಲ್ಲ.. ಒಳಗೆ ಸಂಚು ಮಸೆಯುತ್ತಿದ್ದಳು. ಪಾಪದ ಹುಡುಗ ತನ್ನ ಮನದ ಅಸೆಯನ್ನ ತನ್ನ ಹುಡುಗಿಯ ಹತ್ತಿರ ಮುಚ್ಚಿಡದೇ ತೋರ್ಪಡಿಸುತ್ತಿದ್ದ. ಅದರೆ ಆ ಹುಡುಗಿಯ ಸುಂದರ ಮೊಗದ ಹಿಂದೆ ಅಡಗಿದ್ದ ಕ್ರೌರ್ಯ ಬೆಳಕಿಗೆ ಬರಲು ಹೆಚ್ಚು ಸಮಯ ಬೇಕಾಗಿರಲಿಲ್ಲ...!
ಎಂದಿನಂತೆ ಈ ಹುಡುಗನನ್ನು ಹೊರಗೆ ಸುತ್ತಾಡಲು ಕರೆದ ಹುಡುಗಿ, ಒಂದು ಹೋಟಲಿನಲ್ಲಿ ಊಟ ಮುಗಿಸಿ ಹತ್ತಿರದಲ್ಲೇ ಇದ್ದ ಖಾಲಿ ಪ್ರದೇಶಕ್ಕೆ ಕರೆದುಕೊಂಡು ಹೋದಳು. ತನ್ನ ಬಹುದಿನದ ಆಸೆಯಾದ ವಿಮಾನ ಹಾರಾಟವನ್ನು ಹತ್ತಿರದಿಂದ ನೋಡಲು!. ಇನ್ನೇನು ಆ ಹೊತ್ತು ಬರಲು ಹುಡುಗ ಸಡಗರದಿಂದ ತಲೆ ಮೇಲೆತ್ತಿ ಆಕಾಶದತ್ತ ನೋಡುತ್ತಿರಲು.., ಆ ಹೊತ್ತಿನಲ್ಲೇ ಅವನ ತಲೆಗೆ ಹಿಂದಿನಿಂದ ಬಲವಾದ ಪೆಟ್ಟು ಬಿತ್ತು. ಸುಧಾರಿಸಿಕೊಳ್ಳುವ ಸಣ್ಣ ಅವಕಾಶವನ್ನೂ ನೀಡದೇ ಅವನ ಪ್ರಾಣವನ್ನ ಆ ಅಘುಂತಕನು ತಗೆದುಬಿಟ್ಟಿದ್ದನು..!!
ಗಾಬರಿಗೊಂಡ ಈ ಹುಡುಗಿ ತನ್ನಿಬ್ಬರ ಮನೆಯವರಿಗೂ ದರೋಡೆಕೋರರು ಲೂಟಿಮಾಡಲು ಯತ್ನಿಸಿ ಇವನನ್ನು ಕೊಲೆಮಾಡಿ ಓಡಿಹೋಗಿದ್ದಾರೆ ಎಂಬ ಅರ್ಥಬರುವಂತೆ ಸುಳ್ಳು ಕಥೆ ಸೃಷ್ಠಿಸಿ ಹೇಳಲು, ಅನುಮಾನ ಪಟ್ಟ ಹುಡುಗನ ಕಡೆಯವರು ಪೋಲೀಸರಿಗೆ ದೂರುಕೊಟ್ಟು ವಿಚಾರಣೆಕೈಗೊಳ್ಳುವಂತೆ ಮನವಿ ಮಾಡಿದರು. ಅಂತೂ ಪೋಲೀಸರ ಕಾರ್ಯಚರಣೆ ಫಲ ನೀಡೇ ಬಿಟ್ಟಿತು. ಮೊಬೈಲ್ ಕಾಲ್ ಶೀಟ್ ಅನ್ನು ದಕ್ಕಿಸಿಕೊಂಡ ಪೋಲೀಸರು ಅವಳ ಪ್ರಿಯತಮನ ಮನೆಯ ಬಾಗಿಲ ಮುಂದೆ ನಿಂತಾಗ ವಿಧಿಯಿಲ್ಲದೇ ಅವನು ಶರಣಾದ...
ಮುಂದೇನು..., ಪೋಲೀಸರ ವಿಚಾರಣೆ ವಿಸ್ತಾರವಾಗಿ ನೆಡೆದು ಎಲ್ಲಾ ವಿಷಯಗಳು ಬಯಲಾದಾಗ ಆ ಕೊಲೆಯ ಹಿಂದಿನ ಮುಖ್ಯ ಸೂತ್ರಧಾರಿಯಲ್ಲೊಬ್ಬರಲ್ಲಿ ಆ ಹುಡುಗಿಯೂ ಇದ್ದಳು.!!
ತನ್ನ ಇಷ್ಟದ ವಿರುದ್ದ ನೆಡೆಯುತ್ತಿದ್ದ ಮದುವೆಯ ಪ್ರಸ್ತಾಪವನ್ನ ತಡೆಯಲು ತನ್ನ ಕೈಯಲ್ಲಿ ಎಂದು ಆಗಲಿಲ್ಲವೋ ಅಂದೇ ಅವಳು ಒಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದಳು. ಸುಮ್ಮನೆ "ಹೆಸರಿಗೆ" ತನ್ನ ಒಪ್ಪಿಗೆಯನ್ನು ಸೂಚಿಸಿ ನಂತರ ತನ್ನ ಕಾರ್ಯಮಾಡುವ "ಐಡಿಯಾ". ತನ್ನ ಪ್ರಿಯಕರ, ಅವನ ಕಸಿನ್ ಮತು ಮತ್ತೊಬ್ಬ ರೌಡಿಯ ಸಹಾಯದಿಂದ ಒಂದು ಮಾಸ್ಟರ್ ಪ್ಲಾನ್ ರೆಡಿಮಾಡಿಯೇಬಿಟ್ಟರು ಈ ನಾಲ್ವರು... ಕೊನೆಗೆ ಈ "ಪ್ಲಾನಿನ" ಸಹಾಯದಿಂದ ದುರಂತ ಅಂತ್ಯ ಕಂಡವನು ಅ ಮುಗ್ಧ ಯುವಕ...
-- ಈ ಸತ್ಯಕಥೆ ನೆಡೆದದ್ದು ಏಳು ವರ್ಷದ ಹಿಂದೆ.., ಹೆಸರುಗಳ ಪ್ರಸ್ತಾಪ ಇಲ್ಲಿ ಬೇಡವಾದರೂ ತನ್ನ "ಪ್ರೀತಿಯ ಶೋಕಿಗೆ" ಬಗ್ಗದಿದ್ದ ಮನೆಯವರು ಮದುವೆ ನಿಶ್ಚಯ ಮಾಡಿದಾಗ ಸುಮ್ಮನೆ ತೆಪ್ಪಗೆ ಕುಳಿತ ಹುಡುಗಿ, ತನ್ನ ಪ್ರಿಯಕರನಿಗಾಗಿ ಮತ್ತೊಬ್ಬ ನಿಷ್ಪಾಪಿ ಹುಡುಗನ ಜೀವ ತಗೆದಳಲ್ಲಾ.. ಇದೆಂತಾ ನ್ಯಾಯ..??. ತನ್ನಗೆ ಒಲ್ಲದ ಮದುವೆಯನ್ನ ಸರಿಸಾಟಾಗಿ ತಿರಸ್ಕರಿಸಿ ತಾನು ಪ್ರೀತಿಸಿದ ಹುಡುಗನನ್ನೇ ಧೈರ್ಯವಾಗಿ ಮದುವೆಯಾಗುವ ಬದಲೋ ಅಥವಾ ತನಗೆ ಈ ಮದುವೆಯ ಪ್ರಸ್ತಾಪ ಇಷ್ಟವಿಲ್ಲ, ದಯವಿಟ್ಟು ನಮ್ಮ ಮನೆಯವರಿಗೆ ಹೇಳಿಬಿಡಿ ಎಂದು ಸೂಚಿಸುವ ಬದಲೋ ಕೊಲೆ ಮಾಡುವ ಹುನ್ನಾರ ಮಾಡಿಬಿಟ್ಟಳಲ್ಲಾ ಆ ಹುಡುಗಿ.. ಅದಕ್ಕೇನ್ನೋಣ ಹೇಳಿ. ಸರಿಸುಮಾರು ೭ ವರ್ಷ ಎಳೆದ ಈ ಕೇಸ್, ಅಂತೂ ಹುಡುಗನ ಮನೆಯವರ ಛಲ ಮತ್ತೆ ಪೋಲೀಸ್-ನ್ಯಾಯವಾದದ ನಡುವೆ ಮಂಡಿ ಊರಲೇಬೇಕಾಯಿತು. ಕೊಲೆಮಾಡಿದ ಪ್ರಮುಖ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನ ಕೋರ್ಟ್ ವಿಧಿಸಿತು. ಒಂದು ದು:ಖದ ವಿಚಾರವೆನೆಂದರೆ ತನ್ನ ಮಗನಿಗಾದ ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದ ಅವನ ತಂದೆ ಕೋರ್ಟಿನ ತೀರ್ಪು ಹೊರಬರುವ ಮೊದಲೇ ಮಗನ ದುರಂತ ಸಾವಿನ ನೋವಿನಲ್ಲೇ ಇಹಲೋಕ ತ್ಯಜಿಸಿಬಿಟ್ಟರು!!
ತನ್ನ ಸುಖಕ್ಕಾಗಿ ಮುಗ್ಧ ಹುಡುಗನ ಬಾಳನ್ನ, ಅವನ ಕುಟುಂಬದ ಸಂತೋಷವನ್ನ ಬಲಿತಗೆದುಕೊಂಡ ಆ ಹುಡುಗಿಗೆ ಇದರಿಂದ ಸಿಕ್ಕಿದಾದರೂ ಏನು...? -- ಜೀವಾವಧಿ ಸೆರೆಮನೆ ವಾಸ!!!.
ತನ್ನ ಸ್ವಾರ್ಥಕ್ಕಾಗಿ ಮುಗ್ಧ ಹೃದಯಗಳನ್ನು ಕೊಲ್ಲುವ "ಘೋರ" ಜೀವಿಗಳೇ... ಕೊಲ್ಲುವ ಮುಂಚೆ ಒಮ್ಮೆ ಯೋಚಿಸಿಬಿಡಿ, ಸ್ವರ್ಗ-ನರಕ ಎಲ್ಲಾ ಈ ಭೂಮಿಯಲ್ಲೇ ಇದೆ. ನೀವು ಮಾಡುವ ತಪ್ಪಿನ ಶಿಕ್ಷೆ ಇಲ್ಲೇ ಅನುಭವಿಸಿ ತೀರಬೇಕು...
ಅದಕ್ಕೆ ಅನ್ನೊದೇನೋ... "ಪ್ರೀತಿ ಮಾಯೇ ಹುಷಾರು" ಅಂತ...!!
(ವಿಸ್ಮಯ ನಗರಿ ಸಮೂಹ ಈಗ Orkut ನಲ್ಲಿ..., ಸದಸ್ಯರಾಗಲು ಈ ಲಿಂಕ್ ಅನ್ನು ಕ್ಲಿಕಿಸಿ: http://www.orkut.co.in/Main#Community?cmm=96442553)
ಸಾಲುಗಳು
- Add new comment
- 1956 views
ಅನಿಸಿಕೆಗಳು
Re: ಪ್ರೀತಿ ಕೊಂದ ಕೊಲೆಗಾತಿ... ನೀ ಆಗಬೇಡ ಇತರರಿಗೆ "ಸ್ಪೂರ್ತಿ"...!!!
ಕಥೆಯ ಆರಂಭದಲ್ಲಿ ಚಿತ್ರ ನೋಡಿದಾಗ ಯಾಕೋ ಅತಿಯಾಯ್ತು ಅನ್ನಿಸಿದ್ದು ಹೌದು. ಆದರೆ ಕಥೆ ಓದಿದಾಗ ಚಿತ್ರ ಸರಿಯಾಗಿಯೇ ಇದೆ.
Re: ಪ್ರೀತಿ ಕೊಂದ ಕೊಲೆಗಾತಿ... ನೀ ಆಗಬೇಡ ಇತರರಿಗೆ "ಸ್ಪೂರ್ತಿ"...!!!
ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ಸತೀಶ್ ರವರೆ,
ಹೌದು, ನಾನು ಅಯ್ದುಕೊಂಡ ಹಲವಾರು ಚಿತ್ರಗಳಲ್ಲಿ ಈ ಚಿತ್ರ ಲೇಖನಕ್ಕೆ ಪೂರಕವಾಗಿತ್ತು.
-- ವಿನಯ್
Re: ಪ್ರೀತಿ ಕೊಂದ ಕೊಲೆಗಾತಿ... ನೀ ಆಗಬೇಡ ಇತರರಿಗೆ "ಸ್ಪೂರ್ತಿ"...!!!
That type of ladies should be hanged. Life imprisonment is not sufficient.
Re: ಪ್ರೀತಿ ಕೊಂದ ಕೊಲೆಗಾತಿ... ನೀ ಆಗಬೇಡ ಇತರರಿಗೆ "ಸ್ಪೂರ್ತಿ"...!!!
... :)
Re: ಪ್ರೀತಿ ಕೊಂದ ಕೊಲೆಗಾತಿ... ನೀ ಆಗಬೇಡ ಇತರರಿಗೆ "ಸ್ಪೂರ್ತಿ"...!!!
ಸರ್ ಈ ಕೇಸಿನಲ್ಲಿ ನ್ಯಾಯವೇನೋ ಸಧ್ಯಕ್ಕೆ ಸಿಕ್ಕಿದೆ. ಆದರೆ ಅದಿನ್ನೂ ಜಾರಿಗೆ ಬರಲು ಹೈಕೋರ್ಟ್, ಸುಪ್ರೀಂ ಕೋರ್ಟ್ ಕೇಸುಗಳು ಮುಗಿಯಲು ಇನ್ನೆಷ್ಟು ವರ್ಷಗಳು ಕಾಯಬೇಕೋ? ಗೊತ್ತಿಲ್ಲ ಅಲ್ವೆ ಸರ್
Re: ಪ್ರೀತಿ ಕೊಂದ ಕೊಲೆಗಾತಿ... ನೀ ಆಗಬೇಡ ಇತರರಿಗೆ "ಸ್ಪೂರ್ತಿ"...!!!
ಉಮಾಶಂಕರ್ ರವರೆ,
ಹೌದು, ಕೆಲವು ಕೇಸುಗಳು ಹಾದಿ ತಪ್ಪಿಹೋಗುವ ಸಂದರ್ಭಗಳೇ ಹೆಚ್ಚು. ಅದರೆ ನ್ಯಾಯಾಂಗ ಮತ್ತು ಸಮಾಜ ಹೀಗಾಗದಂತೆ ಹದ್ದಿನಕಣ್ಣಿಟ್ಟರೆ ಶೋಷಿತರಿಗೆ ನ್ಯಾಯ ಸಿಕ್ಕಸಿಗುತ್ತದೆ ಎಂದು ನನ್ನ ನಂಬಿಕೆ -- ವಿನಯ್
Re: ಪ್ರೀತಿ ಕೊಂದ ಕೊಲೆಗಾತಿ... ನೀ ಆಗಬೇಡ ಇತರರಿಗೆ "ಸ್ಪೂರ್ತಿ"...!!!
ಜೀವಾವಧಿ ಶಿಕ್ಷೆ ಬರಿ ೧೭ ವರ್ಷ ಮಾತ್ರವಂತೆ...
Re: ಪ್ರೀತಿ ಕೊಂದ ಕೊಲೆಗಾತಿ... ನೀ ಆಗಬೇಡ ಇತರರಿಗೆ "ಸ್ಪೂರ್ತಿ"...!!!
ಶ್ರೀನಿಧಿ ಯವರೆ,
ಕೆಳಗೆ ಕೊಟ್ಟಿರುವ ಲಿಂಕಿನ ಪ್ರಕಾರ (ಮಾಹಿತಿ ಅಂಗ್ಲ ಭಾಷೆಯಲ್ಲಿದೆ..) ಜೀವಾವಧಿ ಶಿಕ್ಷೆಯ ಅವಧಿ ಬರಿ ೧೪ ಅಥವಾ ೧೭ ವರ್ಷ ಮಾತ್ರ ಅಲ್ಲ, ಅದು ಆರೋಪಿಯು ಮಾಡಿರುವ ಶಿಕ್ಷೆಯ ಪ್ರಮಾಣದ ಮೇಲೆ ಹೋಗುತ್ತದೆ. ಕೆಲವೊಮ್ಮೆ ಆ ಆರೋಪಿ ಮೃತನಾಗುವವರೆಗೂ ಶಿಕ್ಷೆ ಜಾರಿಯಲ್ಲಿರುತ್ತದೆ ( ಈ ಲಿಂಕಿನಲ್ಲಿರುವ ಮಾಹಿತಿ ಪ್ರಕಾರ ಮುರಳಿ ಮನೋಹರ್ ಮಿಶ್ರಾ ಎಂಬಾತನಿಗೆ ಶಿಕ್ಷೆ ಮುಗಿಸಿ ಮುಕ್ತನಾಗಿ ಜೈಲಿನಿಂದ ಹೊರಬರುವ ಹಾಗೆಯೇ ಇಲ್ಲ!!)
http://timesofindia.indiatimes.com/india/Life-sentences-getting-longer-than-14-years/articleshow/5323917.cms
-- ವಿನಯ್
ಪ್ರೀತಿಗಾಗಿ ಹಂಬಲಿಸಿದವರಿಗೆ
ಪ್ರೀತಿಗಾಗಿ ಹಂಬಲಿಸಿದವರಿಗೆ ನಿಜವಾದ ಪ್ರೀತಿ ದೊರಕಲ್ಲ ಆದ್ರೆ time pass ಮಾದೋರಿಗೆ ಜೀವ್ ಕೊದೊ ಪ್ರೀತಿ ಸಿಗುತ್ತೆ.