ಅವ್ಯಕ್ತ
ಸುತ್ತಮುತ್ತಲೆಲ್ಲಾ ಕಡು
ಹಸಿರು ತುಂಬಿದಾ ಕಾಡು
ಮಳೆಹನಿಗಳ ತಂಪಿಂದ
ಬಿಸಿಯಾಗಿದ್ದ ಭುವಿ
ತನ್ನೆಲ್ಲಾ ಧಗೆಯನ್ನು
ಹೊಗೆಯಾಗಿಸಿ, ಆಗಸಕ್ಕೆ
ಹಾರಿ ಬಿಡುತಿತ್ತು ಬೆಳ್ಮುಗಿಲಾಗಿ....
ಹಾಸಿದ್ದ ಡಾಮರು ರಸ್ತೆಯ ಮೇಲೆ
ಉರುಳುತಲಿದ್ದ ನಾಲ್ಕು ಗಾಲಿಗಳೂ
ನಿಸರ್ಗದ ಸೊಬಗ ಕಣ್ತುಂಬಿಕೊಂಡು
ನಿಧಾನವಾಗಿ ಹಿಂಬಿಡುತ್ತಿರಲು,
ತಟ್ಟೆಂದು ನನ್ನ ನೋಟ
ಪಚ್ಚೆ ಹಸಿರು ಗದ್ದೆಯ
ನಟ್ಟ ನಡುವೆ ನಿಂತಿದ್ದ
ಒಂಟಿ ಮರದಲ್ಲೇ ನೆಟ್ಟಿತೇಕೋ....!
ಚಿತ್ರಕೃಪೆ : bharata.sulekha.com/.../comment/1633572.htm]
- ತೇಜಸ್ವಿನಿ ಹೆಗಡೆ
ಸಾಲುಗಳು
- Add new comment
- 594 views
ಅನಿಸಿಕೆಗಳು
Re: ಅವ್ಯಕ್ತ
ವ್ಯಕ್ತಪಡಿಸಲಾಗದಷ್ಟು ನಿಮ್ಮ "ಅವ್ಯಕ್ತ" ಕವನ ಚೆನ್ನಾಗಿದೆ ಸಿಸ್ಟರ್.....ಸೂಪರ್ (ಅಕ್ಕಾ ನೀವು ಪರಿಸರ ಪ್ರೇಮಿನಾ?)
Re: ಅವ್ಯಕ್ತ
ಧನ್ಯವಾದಗಳು ನಾಗು ಅವರೆ.
ಹೊದು ನಾನು ಪರಿಸರ ಪ್ರೇಮಿ. ಪ್ರತಿಯೊಬ್ಬನೂ ಈ ಪ್ರೇಮಿಯ ಸಖ/ಸಖಿಯಾದರೆ ಪ್ರಕೃತಿಯ ಅಳಿವು ನಿಲ್ಲಬಹುದೇನೋ...!