Skip to main content

ಹನಿಗವನಗಳ ಹಾವಳಿ

ಇಂದ vikrama
ಬರೆದಿದ್ದುJuly 4, 2010
1ಅನಿಸಿಕೆ

ನರಳುವ ನಾಕದಲಿ, ನಲಿವಿನ ಕನಸು ಹೊತ್ತು ಬ೦ದೆ
ಈ ಕನಸಿನ ಕಾರ್ಮೋಡದಲಿ, ತೇಲುವ ಸುಖದೊ೦ದಿಗೆ, ಬೀಳುವ ದುಃಖವನು ಕ೦ಡೆ
           ***
 ಕಳೆವ ಕಾಲದಲಿ ಕಾಲನ ಕಲ್ಪನೆಯ ಕಾನನ, ಕರ್ಕಶವಾಗಿ ಕೂಗುತಿದೆ.....
ಕಾಲ್ಪನೆಯ ಕಾಡು ಕಡಿದು, ಕ್ಷಣಕಾಲ, ಕಾಲಕೆ ಕಣ್ತಪ್ಪಿಸಲು, "ಕಾಲ್ಮನವೇ" ಕೊಸರಾಡುತಿದೆ
             ***
ಮನದ ಮಡದಿಯ ಮನದಾಳದ ಮಾತು ಮೊಳಗಿ, ಮೂಕವಾಯಿತು
                                                                   "ಮನಸು"
ಮನಸುಗಳು, ಮೃದು ಮಾತಲಿ ಮುಳುಗಿ, ಮಾಯವಾಯಿತು
                                                                   "ಮುನಿಸು"
     ***
ನೀನು ನೋಡಿದ ನೋಟಕೆ, ನನ್ನಯ ನಡತಯೇ ನಯವಾಗಿದೆ....
ನಿನ್ನ ನಯನವೇ ನನಗೆ ನಾಟಿ, ನಾಳೆಯೂ ನಿನ್ನೆಯಾಗಬೇಕೆನಿಸುತಿದೆ......!
     ***
ಮನದ ದುಗುಡದ ಮರೆವಿಗೆ, ಮೌನವೇ ಮಾತಾಯಿತಲ್ಲಾ.....?!
ಹೆಮ್ಮರವಾದ ಮೌನವೇ ಮನಕೆ ಬಡಿದು, ಮಾಸದ ಗಾಯವಾಯಿತಲ್ಲಾ.....!
 

ಲೇಖಕರು

vikrama

"ಹನಿಗವನಗಳ ಹಾವಳಿ"

Hi,

ಅನಿಸಿಕೆಗಳು

VAIJUNATH ಮಂಗಳ, 09/21/2010 - 13:34

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.