Skip to main content

ನನ್ನ ಹೆಸರು ರೇವಪ್ಪ ಅಂತ... ವಿಸ್ಮಯ ನಗರಿಯ ಪ್ರಜೆ. ವಿಸ್ಮಯ ನಗರಿ ತಾಣ ನೋಡಿದ ದಿನವೇ ನನಗೂ ಒಂದು ಇಂಥ ತಾಣವನ್ನ ತಯಾರಿಸಿ ನಾಲ್ಕು ಜನರಿಗೆ ಜ್ಞಾನ ಹಂಚುವ ಕೆಲಸ ಮಾಡಬೇಕು ಎಂಬಾಸೇ ಮೂಡಿತ್ತು. ಅಂದೇ ನನ್ನ ' ಸಾಫ್ಟ್ ' ಗೆಳೆಯರಿಗೆ ಕೇಳಿ ಏನು ? ಎತ್ತ ? ಗಳ ಬಗ್ಗೆ ವಿಚಾರಿಸಿದೆ. ಅದಕ್ಕೆ ಹತ್ತಿರತ್ತಿರ ಹತ್ತು ಸಾವಿರ ಖರ್ಚಾಗುವ ಬಡ್ಜೆಟ್ ಎದುರಿಗಿಟ್ಟಾಗ ಬೇಡ ಅಂತ ಸುಮ್ಮನಾಗಿದ್ದೆ. ಆದ್ರೆ ಆಮೇಲೆ Blogger ನಲ್ಲಿ ಈಗಾಗಲೇ ಒಂದು ಬ್ಲಾಗ್ ನಡೆಸುತ್ತಿದ್ದ ನನಗೆ ಹೊಳೆದ ಒಂದು " ಹಾಗೇ ಸುಮ್ಮನೆ .... ಐಡಿಯಾ " ಒಂದರ ಫಲವೇ e-ನಾಡು ಕನ್ನಡ ವೆಬ್ ತಾಣ.http://enaadukannada.blogspot.com/ಇದನ್ನ ಇಂದು ನಿಮ್ಮ ಮುಂದೆ ಇಡ್ತಿದೀನಿ. ಒಂದು ಸಾರಿ ಭೇಟಿ ಕೊಟ್ಟು ನಿಮ್ಮ ಅಭಿಪ್ರಾಯ ತಿಳಿಸಿ. ಇಷ್ಟವಾದರೆ ಆ ತಾಣದ FOLLOWER ಆಗಲು ಮರೀಬೇಡಿ. ಅಂದಹಾಗೆ ಆ ತಾಣ ಇನ್ನೂ ಸಿದ್ಧತೆಯ ಹಂತದಲ್ಲಿದೆ. ಸುಮಾರು 40 ಪ್ರತಿಶತ ಮಾಹಿತಿ ಅಲ್ಲಿರಬಹುದು. ಬಾಕಿ ನನ್ನ ನೋಟ್ಸ್ ಗಳಲ್ಲಿದೆ. ಶೀಘ್ರದಲ್ಲೇ ಗಣಕೀಕರಿಸ್ತೇನೆ. ನಿಮ್ಮ ಸಲಹೆ ಸೂಚನೆಗಳನ್ನ enaadukannada@gmail.com ಗೆ ಕಳುಹಿಸಿ.ಇನ್ನೊಂದು ಮಾತು : ಈ ತಾಣದಲ್ಲಿ ಇದನ್ನ ಪ್ರಕಟಿಸಿ ಉಚಿತ ಪ್ರಚಾರ ತಗೊಳ್ಳುವ ದುಷ್ಟ ಇರಾದೆಯಿಂದ ನಾನಿಲ್ಲಿ ಬರೀತಿಲ್ಲ. ಬದಲಿಗೆ ಕನ್ನಡ-ಕರ್ನಾಟಕಕ್ಕಾಗಿ ನಾನು ಪ್ರಯತ್ನಪಟ್ಟ ಅಳಿಲು ಸೇವೆಯೊಂದರ ಪರಿಚಯ ಮಾಡಿಕೊಡುತ್ತಿದ್ದೇನೆ ... ಅಷ್ಟೆ. - ಇಂತಿ ನಿಮ್ಮ,ರೇವಪ್ಪ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 485 views