Skip to main content
Submitted by manu on ಸೋಮ, 06/21/2010 - 18:15

ನಮ್ಮಲ್ಲಿ ಏನು ಕೊರತೆ..

ನನ್ನ ಸ್ನೇಹಿತನೊಬ್ಬ ಹೇಳಿದ ಮಾತು ನೆನಪಿಗೆ ಬಂತು...
ನನ್ನ ಸ್ನೇಹಿತ ಬೆಂಗಳೂರಿನ NIMHANSನಲ್ಲಿ ಸಂಶೋಧನೆ ಮಾಡ್ತಿರುವಾಗ ಒಂದು ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹೊರಗಿನ ವಿದ್ಯಾರ್ಥಿಯೊಬ್ಬ ಅಲ್ಲಿನ ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಸೌಲಭ್ಯ, ಹಣಕಾಸಿನ ವ್ಯವಸ್ಥೆ ಬಗ್ಗೆ ಹೇಳುತ್ತಾ ,ಸಂಶೋಧನೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಇಟ್ಟಾಗ ಅಲ್ಲಿನ ಶ್ರೀಮಂತ ಕುಟುಂಬಗಳು,ವಿದ್ಯಾದಾನಿಗಳು,ಮಕ್ಕಳಿಲ್ಲದವರು ತಮ್ಮ ನಂತರ ಆಸ್ತಿ ದಾನ ಮಾಡಲಿಚ್ಚಿಸುವಂತಹವರು ಅವರ ಕುಟುಂಬದ ಹೆಸರಿನಲ್ಲಿ ಹಾಗೂ ಯಾರಾದರು ಅಗಲಿದ ಪ್ರೀತಿಪಾತ್ರರ ಹೆಸರಲ್ಲಿ ಸ್ಕಾಲರ್ಷಿಪ್,ಫಂಡ್ ಎಂದು ಸಂಶೋಧನೆಗೆ ತಗುಲುವ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ನೆರವಾಗುತ್ತಾರಂತೆ.
ಈ ರೀತಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ,ಸಂಶೋಧನೆಗೆ ನೆರವಾಗುವಂತಹ ಹಸ್ತಗಳು ಬಹಳಷ್ಟಿವೆಯಂತೆ...
ಈ ರೀತಿ ದಾನ ಸಂಶೋಧನಾ ಕೇಂದ್ರಗಳಿಗೂ ಸಹ..latest reasearch equipmentsಗೋಸ್ಕರ..
ನಮ್ಮ ದೇಶದಲ್ಲೂ ಸಹ ಅತಿ ಶ್ರೀಮಂತರು ಮಾಡುತ್ತರೆ..
ವಿಪರ್ಯಾಸವೆಂದರೆ ಅದು ಮಠ,ದೇವಸ್ಥಾನ ಇಲ್ಲಿಗೆ ಮೀಸಲ್ಪಟ್ಟಿದೆ...
ಒಮ್ಮೆ ಪತ್ರಿಕೆಯಲ್ಲಿ ___ ಎಂಬ ಶ್ರೀಮಂತರು ತಿರುಪತಿಗೆ ೪೦ಕೋಟಿರೂ ದಾನ,೫೦ಕೋಟಿ ಬೆಲೆಬಾಳುವ ರತ್ನಖಚಿತ
ಕಿರೀಟ ಮಾಡಿಸಿದ್ದಾಗಿ ಮುಖಪುಟದಲ್ಲೇ ಸುದ್ದಿ.
ಅಲ್ಲಿಗೆ ಇಷ್ಟು ದುಡ್ಡು ಅಗತ್ಯವೇ?ಅಲ್ಲಿನ ಹುಂಡಿಗೆ ಪ್ರತಿ ವರ್ಷ ಎಷ್ಟು ಸಂಗ್ರಹವಾಗುತ್ತೆ?
ಟಾಟಾ ರವರು ಇವರಂತೆಯೇ ಯೋಚಿಸಿದ್ದಲ್ಲಿ IISC ಇರುತ್ತಿರಲ್ಲಿಲ್ಲವೆನೊ?
ನಮ್ಮಲ್ಲೂ ದಾನಿಗಳೇಕೆ ಅವರಂತೆ ಮಾಡಬಾರದು?ದಾನ ಎಷ್ಟು ಮುಖ್ಯವೋ ಯಾರಿಗೆ ದಾನ ಅಷ್ಟೇ ಮುಖ್ಯವಲ್ಲವೆ?ವಿದ್ಯಾದಾನವು ಶ್ರೇಷ್ಠವಲ್ಲವೆ?
ನಮ್ಮಲ್ಲಿ ಸಂಶೋಧನೆಯಲ್ಲಿ ಸಿಗುವುದು ೫೦೦೦ ಹೆಚ್ಚೂ ಅಂದ್ರೆ ೧೦೦೦೦ ರೂ ..ಅದೂ ಬೆಂಗಳೂರಿನಲ್ಲಿ...
ಲ್ಯಾಬ್ ಗಳಲ್ಲಿರೊ ಉಪಕರಣಗಳು ೧೦ರಿಂದ ೨೦ ವರ್ಷ ಹಳೆಯ ತಂತ್ರಜ್ಞಾನದ್ದವು.೧೦ವರ್ಷ ಹಳೆಯದ್ದು ಕೊಟ್ಟು ಭವಿಶ್ಯದ ಸಂಶೋಧನೆ ಹೇಗೆ ಸಾಧ್ಯ?
ಅದಕ್ಕೆ ಎಲ್ಲರೂ ವಿದೇಶದ ಹಾದಿ ಹಿಡಿದಿರೋದು.ಹೇಳಲು ದುಃಖ ಆಗುತ್ತೆ ಆದರೂ ನಿಜ.
ನಾನು ನಾಸ್ತಿಕನಲ್ಲ.
ಯಾರಿಗಾದರೂ ಬೇಜಾರು ಮಾಡಿದ್ದಲ್ಲಿ ಕ್ಷಮಿಸಿ.
ಮನು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 10/04/2010 - 13:10

nimma patra oodi ayaoo paapa anisuthade.neeuo keluva prasanege uoothara illa. namma deshdalli samshodhane madabekadare phd madiralee beku. phd aadvarigagi  matra sarakara kotikoti rupai needuthade. videshakke hogale beku thappade .13hechina vivargaligagi e mail madiri nanage.

Nanjunda Raju Raju ಧ, 12/21/2011 - 19:51

ಶ್ರೀ ಮನುರವರೇ, ನಮ್ಮ ದೇಶದಲ್ಲಿ ಯಾವುದೇ ಸಂಶೋಧನೆ ಮಾಡಬೇಕಾದರೂ, ಅದರಿಂದಾಗುವ ಸಾಧಕ ಬಾಧಕಗಳ ಬಗ್ಗೆ ಯೋಚಿಸಬೇಕು. ನಮ್ಮ ದೇಶ ಅಭಿವೃದ್ದಿ ಹೊಂದುತ್ತಿರುವ ದೇಶವಾದರೂ, ಆ ಸಂಶೋಧನೆಯಿಂದ ನಮ್ಮ ದೇಶಕ್ಕಾಗುವ ಅನುಕೂಲವೇನು? ಎಂಬುದು ಮುಖ್ಯ. ಸಾಮಾನ್ಯವಾಗಿ ಹಿಂದಿನ ಮಹಾನ್ ವಿಜ್ನಾನಿಗಳು ಬಡತನದಿಂದಲೇ ಯಾರ ಸಹಾಯವೂ ಇಲ್ಲದೇ ಸಂಶೋಧನೆ ಮಾಡಿ ಯಶಕಂಡರೂ, ಆರ್ಥಿಕವಾಗಿ ಯಾರೂ ಸಹಾಯ ಮಾಡುತ್ತಿರಲಿಲ್ಲ. ಇದರಿಂದ ಕೆಲವು ವಿಜ್ನಾನಿಗಳು ತಮ್ಮ ಜೀವವನ್ನೇ ಬಲಿಕೊಟ್ಟದ್ದು ಉಂಟು.  ಆದರೂ ಸಂಶೋಧಕರು ಯೋಚಿಸಬೇಕು. ನಮ್ಮ ದೇಶ ವ್ಯವಸಾಯ ಪ್ರಧಾನ ದೇಶವಾದರೂ,  ರೈತರ ಬಗ್ಗೆ ಯೋಚಿಸುವುದಿಲ್ಲ. ನಮ್ಮ ದೇಶದ ಬೆನ್ನೆಲುಬು ರೈತನೆಂದರೂ, ನಮ್ಮ ದೇಶದ ನಾಯಕರಿಗೆ ಇಚ್ಚಾಶಕ್ತಿ ಬೇಕು. ನಾವು ನೋಡಿದಂತೆ, ಕೆಲವು ನಾಯಕರು ಬಂದರು. ವ್ಯವಸಾಯದ ಬಗ್ಗೆ ಯೋಚಿಸಿದರು. ನಂತರ, ಬಂದವರು ಸ್ವದೇಶಿ ವಸ್ತುಗಳ ಬಗ್ಗೆ ಗಮನಹರಿಸಿ, ಸ್ವದೇಶಿ ವಸ್ತುಗಳ ಉತ್ಪಾದನೆ ಹೆಚ್ಚಿಸುವುದರೊಂದಿಗೆ, ಸ್ವದೇಶಿ ಕಾರ್ಖಾನೆಗಳನ್ನು ಬಲಪಡಿಸಿದರು. ನಂತರ ಬಂದವರು, ಕಾರ್ಖಾನೆಗಳನ್ನು ಕಡೆಗಣಿಸಿ, ವಿದೇಶಿಗಳು ನಮ್ಮ ದೇಶದಲ್ಲೇ ತಳ ಊರಿ ಉತ್ಪಾದನೆ ಮಾಡುತ್ತಿದ್ದರಾದರು ಸ್ವದೇಶಿ ಉದ್ಯಮ ನೆಲೆ ಕಳೆದುಕೋಡವು. ಸ್ವದೇಶದಲ್ಲೇ ಉತ್ಪಾದನೆಯಾದ ವಿದೇಶಿ ವಸ್ತುಗಳನ್ನು ದುಬಾರಿ ಬೆಲೆಗೆ ಕೊಳ್ಳುವಂತಾಯಿತು.  ಐ.ಟಿ. ಬಿ.ಟಿ ಎಂದು ಹೇಳುತ್ತಾ ಕೆಲವೇ ಮಂದಿ ಬುದ್ದಿವಂತರಿಗೆ ಹೆಚ್ಚಿನ ಆದಾಯ ಬರುವಂತೆ ಮಾಡಿ, ವಿದ್ಯಾವಂತ ಪದವಿದರ ನಿರುದ್ಯೋಗಿಗಳನ್ನು ಸೃಷ್ಟಿ ಮಾಡಿದರು. ಅವರೆಲ್ಲಾ ಬದುಕಲು ದಾರಿ ಕಾಣದೆ, ಸಾಮಾಜ ಘಾತುಕ ಶಕ್ತಿಗಳಾಗಿ ಬೆಳೆಯುತ್ತಿದ್ದಾರೆ.   ವಿಜ್ನಾನಿಗಳು ಅಥವಾ ಸಂಶೋಧಕರು ಸಹ ದೇಶದ ಬಗ್ಗೆ ಸಮಾಜದ ಬಗ್ಗೆ ಯೋಚಿಸಬೇಕು. ನಮ್ಮ ಸಂಶೋಧನೆಯಿಂದ ನಮ್ಮ ದೇಶಕ್ಕೆ ನಮ್ಮ ಜನಕ್ಕೆ ಏನಾದರೂ ಅನುಕೂಲವಿದೆಯೇ? ಇಲ್ಲಿ ಪ್ರೋತ್ಸಾಹ ಮುಖ್ಯವೆಂಬುದು ನಿಜ. ಇಲ್ಲವಾದರೆ ನಮ್ಮ ದೇಶದ ಅಮೂಲ್ಯ ಆಸ್ತಿಗಳಾದ ಪ್ರತಿಭೆಗಳು ಪಲಾಯನ ಮಾಡುತ್ತವೆ. ಹಣವೇ ಮುಖ್ಯವೆಂದರೆ, ವಿದೇಶಕ್ಕೆ ಹೋಗಬಹುದು. ಪ್ರತಿಯೊಬ್ಬ ವಿದ್ಯಾವಂತ ನಿರುದ್ಯೋಗಿಗಳಿಗೂ ಉದ್ಯೋಗ ನೀಡುವುದು ಸರಕಾರದ ಕರ್ತವ್ಯ. ವಿಜ್ನಾನಿಗಳಿಗೂ, ಸಂಶೋಧಕರಿಗೂ ಪ್ರೋತ್ಸಾಹ ನೀಡಬೇಕು.
               ಆದರೆ, ಇಲ್ಲಿ ಮತ್ತೊಂದು ಸಮಸ್ಯೆ ಎಂದರೆ, ದೇವರ ಮೇಲೆ ಅಪಾರ ನಂಬಿಕೆ ಇರುವವರು ನೂರಾರು ಜನರಿಗೆ ಅನುಕೂಲವಾಗುತ್ತದೆ. ದೇವಸ್ಥಾನದ ಆಡಳಿತ ಮಂಡಳಿಯವರು ಲಕ್ಷಾಂತರ  ಜನಕ್ಕೆ ಊಟ, ವಸತಿ, ವಿಧ್ಯಾದಾನ ಮಾಡುತ್ತಾರೆಂಬ ನಂಬಿಕೆಯಿಂದ ಕೊಡುತ್ತಾರೆ. ಇಂತಹ ಸಂಸ್ಥೆಗಳವರು ಸಂಶೋಧನೆಗೂ ಗಮನ ಕೊಡಬೇಕು. ಕೊಡುವುದಿಲ್ಲ. ಈ ಕಾಲದಲ್ಲಿ ಇದನ್ನೂ ದುರುಪಯೋಗ ಮಾಡಿಕೊಳ್ಳುವುದನ್ನು ಆಗಾಗ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಅಲ್ಲವೇ? ದನ್ಯವಾದಗಳು, ವಂದನೆಗಳೊಡನೆ.

  • 771 views