ಅದೊಂದು ಬೀರಬಲ್ಲ ಕಥೆ ಇದೆ. ಅಕ್ಬರ್ ಬಾದಶಾಹ ಒಮ್ಮೆ ಪ್ರಜೆಗಳಿಗೆ ಹಾಲನ್ನು ಕತ್ತಲಲ್ಲಿ ತಂದು ಒಂದು ದೊಡ್ಡ ಪಾತ್ರೆಯಲ್ಲಿ ಹಾಕುವಂತೆ ಆಜ್ಞೆ ಮಾಡಿದನಂತೆ. ಕೊನೆಗೆ ಬೆಳಿಗ್ಗೆ ನೋಡಿದರೆ ಅದರಲ್ಲಿ ಬರಿ ನೀರು ಮಾತ್ರ ಇತ್ತಂತೆ. ತಾನೊಬ್ಬ ನೀರು ಹಾಕಿದರೆ ಗೊತ್ತಾಗುವದಿಲ್ಲ ಎಂದು ಪ್ರತಿಯೊಬ್ಬರೂ ನೀರನ್ನು ತಂದು ಹಾಕಿದ್ದರಂತೆ.
ನೆರೆ ಸಂತ್ರಸ್ತರ ಪರಿಹಾರ ನಿಧಿ ಕೂಡಾ ಹೆಚ್ಚು ಕಮ್ಮಿ ಹಾಗೆಯೆ ಆಗಿದೆ ಎನ್ನಬಹುದು. ಅಷ್ಟೊಂದು ಪತ್ರಿಕೆಗಳು, ಟಿವಿ ಚಾನೆಲ್ ಅವರು ಹಾಗೂ ರಾಜಕೀಯ ಪುಢಾರಿಗಳು ಅದರ ನೆಪದಲ್ಲಿ ಹಣ ಸಂಗ್ರಹಿಸಿದ್ದಾರೆ. ಆದರೆ ಅದನ್ನು ತಾವೇ ಬಳಸಿದ್ದಾರಾ ಅಥವಾ ನೆರೆ ಸಂತ್ರಸ್ತರಿಗೆ ಹೋಗಿದೆಯಾ ಹೇಗೆ ಹೇಳುವದು? ಆದರೆ ಕಾಂಗ್ರೆಸ್ ಪುಢಾರಿಗಳು ಜನರಿಗೆ ದ್ರೋಹ ಬಗೆದಿದ್ದಾರೆ ಎನ್ನಲು ಅಡ್ಡಿಯಿಲ್ಲ. ಸ್ಮಶಾನದಲ್ಲಿ ಉರಿಯುತ್ತಿರುವ ಚಿತೆಯಿಂದಲೇ ತಮ್ಮ ಸಿಗರೇಟ್ ಹಚ್ಚುವದಕ್ಕೆ ಸಮಾನ ಪ್ರಯತ್ನ ನಡೆಸಿದ್ದಾರೆ! ಯುಡಿಯೂರಪ್ಪನವರು ಸಹ ಸುಮಾರು 700 ಕೋಟಿ ಸಂಗ್ರಹ ಆಯ್ತು ಎಂದೆಲ್ಲ ಹೇಳಿಕೆ ನೀಡಿದ್ದರು. ಆದರೆ ಕಟ್ಟುತ್ತಿರುವ ಮನೆಗಳ ಸಂಖ್ಯೆಗೂ ಇವರೆಲ್ಲರ ಹೇಳಿಕೆಗೂ ತಾಳೆ ಹೊಂದುತ್ತಿಲ್ಲ.
ಮಾತಾ ಅಮೃತಾನಂದಮಯೀ ಮಠದವರು ನೂರು ಮನೆ ಸಂತ್ರಸ್ತರಿಗೆ ದಾಖಲೆ ಸಮಯದಲ್ಲಿ ಕಟ್ಟಿತೇನೋ ನಿಜ. ಆಗ ಆ ಮಠಕ್ಕೆ ಯುಡ್ಡಿಯೂರಪ್ಪನವರು ಬೆಂಗಳೂರಿನ ಕೆಂಗೇರಿಯ ರಾಮಸಂದ್ರದಲ್ಲಿ 15 ಎಕರೆ ಜಮೀನು ಹಾಗೂ 5 ಕೋಟಿ ಕೊಡುವದಾಗಿ ಘೋಷಿಸಿದರು! ಮುಂದೆ? ಸಂತ್ರಸ್ತರಿಗೆ ಉಳಿದ ಮನೆ ಕಟ್ಟಿದ ಸುದ್ಧಿಯಂತೂ ಬರಲಿಲ್ಲ. ಆದರೆ ಮಠಕ್ಕೆ ಜಮೀನು ಹಾಗೂ ದುಡ್ಡು ಕೊಟ್ಟ ಸುದ್ಧಿ ಬರಬಹುದು! ಇದಕ್ಕಾಗಿ ಮಠ ಖರ್ಚು ಮಾಡಿದ ಹಣ ಬರಿ 1.50 ಕೋಟಿ ಮಾತ್ರ. ಇಂತಹ ಬೃಷ್ಟಾಚಾರಕ್ಕೆ ಕೊನೆ ಎಲ್ಲಿ?
ಇನ್ನು ಮುಂದೆ ಈ ಖದೀಮರು ಮತ್ತೊಮ್ಮೆ ಪರಿಹಾರ ನಿಧಿಗೆ ಹಣ ಕೇಳುತ್ತಾ ಬಂದರೆ ಕೊಡುತ್ತೀರಾ? ನಿಮ್ಮ ಅನಿಸಿಕೆ ಏನು?
- 558 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ