Skip to main content
Submitted by Basavaraj G on ಶುಕ್ರ, 05/21/2010 - 14:44
Forums

ಭಾರತದಲ್ಲಿ ಜನ ಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದೆ. ಇದರ ಬಗ್ಗೆ ಯಾವ ರಾಜಕರಣಿಯಾಗಲಿ, ಬುದ್ಧಿಜೀವಿಯಾಗಲಿ, ಅರ್ಥಶಾಸ್ತ್ರಜ್ಞರಾಗಲಿ ಚಿಂತಿಸುತ್ತಿಲ್ಲ ಏಕೆ? ನೋಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮಾನವ ಸಂಪನ್ಮೂಲ ಹೆಚ್ಚಬೇಕು ಎಂದು ನುಡಿದಿದ್ದಾರೆ. ಈ ಮಹಾಶಯ ಇರುವುದು ಇಂಗ್ಲೆಂಡನಲ್ಲಿ. ಇವರಿಗೆ ಗೊತ್ತು ಜನಸಂಖ್ಯೆ ಹೆಚ್ಚಳದಿಂದ ಭಾರತದಲ್ಲಿ ಆಗುತಿರುವ ಸಮಸ್ಯೆಳು. ಇದು ಹೋಗಲಿ ಭಾರತದಲ್ಲಿ ಇರುವ ಹಣಕಾಸು ಆಯೋಗದ ಉಪಾಧ್ಯಕ್ಷ ಅಹುಲ್‌ವಾಲಿಯ ಸಹ ಇದೆ ರಾಗ ಹಾಡಿದ್ದಾರೆ. ಇವರಿಗೆ ದೇಶದ ಸಮಸ್ಯೆಗಳ ಬಗ್ಗೆ ಅರಿವಿದೆಯೇ? ಜನ ಸಂಖ್ಯೆ ಹೆಚ್ಚಳದಿಂದ ದಿನ ದಿನಕ್ಕೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಉದ್ಯೋಗವಿಲ್ಲದೆ ಯುವಕರು ಕೆಟ್ಟ ದಾರಿ ತುಳಿಯುತ್ತಿದ್ದಾರೆ. ಇಂದು ನಕ್ಸಲ್ ಸಮಸ್ಯ, ಮಾವೋವಾದಿಗಳ ಸಮಸ್ಯ, ಭಯೋತ್ಪದಕ ಸಮಸ್ಯ ಉದ್ಭವಿಸಿರುವುದು, ನಿರುದ್ಯೋಗಿ ಯುವಕರು ಮಾಡಲು ಕೆಲಸವಿಲ್ಲದೆ ನಕ್ಸಲ್, ಮಾವೋವಾದಿ, ಭಯೋತ್ಪಕರಾಗುತ್ತಿದ್ದಾರೆ. ಇಂಗ್ಲೀಷನಲ್ಲಿ ಒಂದು ನಾಣ್ನುಡಿ ಇದೆ An idle mind is a devils workshop ಯುವಕರು ನಿಸ್ಸಹಾಯಕ ನಿರುದ್ಯೋಗಿಗಳಾದಗಾ ಈ ಎಲ್ಲ ಸಮಸ್ಯೆಗಳು ಉಂಟಾಗುತ್ತವೆ. ರಾಜಕೀಯ ವ್ಯಕ್ತಿಗಳಿ ಜನಸಂಖ್ಯೆ ಮತಬ್ಯಾಂಕ್, ಬುದ್ಧಿಜೀವಿಗಳಿಗೆ ಪ್ರಚಾರದ ಹುಚ್ಚು, ಅರ್ಥಶಾಸ್ತ್ರಜರಿಗೆ ವಾಸ್ತವದ ಅರಿವಿಲ್ಲ. ಇದೆಲ್ಲ ಕಾಡುತ್ತಿರುವುದು ಸಾಮಾನ್ಯನಿಗೆ ಮಾತ್ರ. ಇದಕ್ಕೆ ಯಾವಾಗ ಪರಿಹಾರ. ಕೊನೆಗೆ ಪ್ರಕೃತಿ ಮುನಿದಾಗ. 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 1466 views