Skip to main content
Forums

ಮಾರುತಿ ಅಲ್ಟೋ ಹಾಗೂ ಸ್ಯಾಂಟ್ರೋ ಈ ಎರಡು ಕಾರುಗಳಲ್ಲಿ ಯಾವುದು ಉತ್ತಮ ಅನ್ನುವದನ್ನು ಹೇಳುತ್ತೀರಾ? ಇದರ ಮೈಲೇಜ್, ಮೆಂಟೆನನ್ಸ್, ಚಾಲನೆಯ ಗುಣಮಟ್ಟ, ಖರ್ಚು ಇತ್ಯಾದಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಉಮಾಶಂಕರ ಬಿ.ಎಸ್ ಸೋಮ, 04/19/2010 - 11:58

ರಾಜೇಶ್ ಸರ್
ಮಾರುತಿ ಆಲ್ಟೋ ಉತ್ತಮ ಎನ್ನುವುದು ನನ್ನ ಅನಿಸಿಕೆ, ಬೆಲೆ ಕಡಿಮೆ, ಉತ್ತಮ ಮೈಲೇಜ್, ಕಡಿಮೆ ಮೈನ್ಟೈನೆನ್ಸ್, ಆರಾಮಾದಾಯಕ ಅದಕ್ಕೆ ಸರ್

ರಾಜೇಶ ಹೆಗಡೆ ಸೋಮ, 04/19/2010 - 21:31

ಸಲಹೆಗಾಗಿ ಧನ್ಯವಾದಗಳು ಉಮಾಶಂಕರ್ ಅವರೇ,
ಆದರೆ ಅಲ್ಟೋ ಸ್ವಲ್ಪ ಕಿರಿದು ಅನ್ನುವ ಅಭಿಪ್ರಾಯವಿದೆಯಲ್ಲ. ಹಾಗೆಯೇ ಮಾರುತಿ ಅವರ ವ್ಯಾಗನ್ ಆರ್  ವಿಶಾಲವಾಗಿದ್ದು ಮೈಲೇಜ್ ಕೂಡಾ ಚೆನ್ನಾಗಿದೆ ಅನ್ನೋ ಅಭಿಪ್ರಾಯ ಕೇಳಿದೆ.

ಉಮಾಶಂಕರ ಬಿ.ಎಸ್ ಸೋಮ, 04/19/2010 - 21:48

ಹೌದು ಸರ್ ನಿಮ್ಮ ಮಾತು ಸರಿ, Wagon-R ಗೆ ಹೋಲಿಸಿದರೆ Alto ಸ್ವಲ್ಪ ಎತ್ತರ ಚಿಕ್ಕದೇ, ಅಗಲ Wagon-R ನಷ್ಟೇ ಇದೆ. ಇನ್ನು ಮೈಲೇಜ್ Alto ೨೨ - ೨೫ ಕಿ.ಮೀ ವರೆಗೂ ಬರುತ್ತದೆ. Wagon-R ೧೫-೧೮ ರವರೆಗೂ ಇದೆ. ಜೊತೆಗೆ Wagon-R ನ ಬೆಲೆ ಸ್ವಲ್ಪ ಹೆಚ್ಚು.

PANDURANGA ACHARYA ಮಂಗಳ, 05/04/2010 - 11:21

ವ್ಯಾಗನ್ ಆರ್ ಒಂದು ಒೞೆಯ ಕಾರು. ಹೊಸದಾದ ಬದಲಾವಣೆಯೊಂದಿಗೆ ಬಂದಿರುವ ವ್ಯಾಗನ್ ಆರ್ ಬಹಳ ಆಕರ್ಷಕ ವಾಗಿದೆ. ಇನ್ನು ಆಲ್ಟೊ ೮೦೦ ಸಿ ಸಿ ಯ ಕಾರು. ವ್ಯಾಗನ್ ಆರ್ ಕೆ ಸೀರೀಸ್ ಎನ್ಂಜಿನ್ ಹೊಂದಿದ್ದು ಉತ್ತಮ ಮೈಲೇಜ್ ನಿರೀಕ್ಷಿಸ ಬಹುದು. ವ್ಯಾಗನ್ ಆರ್ ಆಲ್ಟೊ ಮತ್ತು ಸಾಂಟ್ರೊಗಳಿಗಿಂತ ಉತ್ತಮ ಕಾರು.
 

  • 1699 views