Skip to main content

ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಬಂದಿದೆ ಪಂಚ ತಂತ್ರ

ಇಂದ Shafeer A.A
ಬರೆದಿದ್ದುApril 16, 2010
19ಅನಿಸಿಕೆಗಳು

ಗ್ರಾಮ ಪಂಚಾಯ್ತಿಯ ವ್ಯವಹಾರಗಳು ಹಾಗೂ ಭೂ ದಾಖಲೆಗಳ ನಿರ್ವಹಣೆಗೆ ಸಂಭಂದಿಸಿದಂತೆ ನಡೆಯುವ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಪಂಚತಂತ್ರ ಎಂಬ ಹೊಸ ಸಾಫ್ಟ್ ವೇರ್ ಅನ್ನು ಪರಿಚಯಿಸಿದೆ. ಪಂಚಾಯತ್ ರಾಜ್ ಇಲಾಖೆ ಹಾಗೂ ರಾಷ್ರ‍ೀಯ ಮಾಹಿತಿ ಕೇಂದ್ರ(NIC) ಇವರು ಜಂಟಿಯಾಗಿ ಅಭಿವೃದ್ದಿ ಪಡಿಸಿರುವ ಈ ಸಾಫ್ಟ್ವೇರ್ http://stg1.kar.nic.in/panchatantra ಎಂಬ URL ನಲ್ಲಿ ಲಭ್ಯವಿದ್ದು ಗ್ರಾಮ ಪಂಚಾಯ್ತಿಯ ವ್ಯವಹಾರಗಳ ಸಮಗ್ರ ಮಾಹಿತಿ, ಟೆಂಡರ್ ಪ್ರಕ್ರಿಯೆ,  ಭೂ ದಾಖಲೆಗಳು, ಹಿಡುವಳಿದಾರರ ವಿವರಗಳು, ಸ್ವಾಧೀನತೆ ಕುರಿತಾದ ಹತ್ತು ಹಲವಾರು ಮಾಹಿತಿಗಳನ್ನು ಒಳಗೊಂಡಿದೆ. ಇದರಿಂದಾಗಿ ಅಂತರ್ಜಾಲದ ಮೂಲಕ ವಿದ್ಯಾವಂತರಿಗೆ ಭೂ ದಾಖಲೆಗಳ ಪರಿಶೀಲನೆ, ಮಾಹಿತಿ ಪಡೆಯುವಿಕೆ ಮುಂತಾದವುಗಳು ಸುಲಭವಾಗಲಿದೆ. ಮಾತ್ರವಲ್ಲ ಆನ್ ಲೈನ್ ಮುಖಾಂತರ ಕಂದಾಯ ಪಾವತಿಸುವ ಸೌಲಭ್ಯವು ಕೂಡ ಈ ವೆಬ್ ಸೈಟ್ ನಲ್ಲಿ ದೊರೆಯಲಿದೆ.

ಲೇಖಕರು

Shafeer A.A

ಹೃದಯದ ಕದ ತೆರೆದು

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 04/16/2010 - 12:18

ಇದು Username ಮತ್ತು Password ಕೇಳುತ್ತಿದೆಯಲ್ಲಾ... ಅದನ್ನು ಪಡೆಯುವುದಕ್ಕೆ ಏನು ಮಾಡಬೇಕು ( New User Option ಬೇರೆ ಲಭ್ಯವಿಲ್ಲ..!) - ಶ್ರೀನಿವಾಸ್

Shafeer (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 04/16/2010 - 13:57

ಕೆಳಗಡೆ ಕೊಂಡಿಯಿದೆ ನೋಡಿ ಶ್ರೀನಿವಾಸ್....ಅಲ್ಲಿ ಕ್ಲಿಕ್ ಮಾಡಿ

Shafeer (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 04/16/2010 - 14:02

ಕೆಳಗಡೆ ಡ್ರ್ಯಾಗ್ ಮಾಡಿ ಪಂಚಾಯತಿ ಅಂತರ್ಜಾಲ ತಾಣ
(Panchayat Portal)
ಎಂಬ ಕೊಂಡಿಗೆ ಕ್ಲಿಕ್ಕಿಸಿ...Construction ಪೂರ್ತಿ
ಮುಗಿದಿಲ್ಲ. ಆದರೆ ಸಾಕಷ್ಟು ಮಾಹಿತಿ ಅಪ್ಲೋಡ್ ಆಗಿದೆ

ಮೇಲಧಿಕಾರಿ ಶುಕ್ರ, 04/16/2010 - 22:58
ಸಿದ್ದಪ್ಪಾಜಿ ಬಿ ಎಂ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 09/12/2011 - 16:19

ಅದನ್ನು ಗ್ರಾಮಪಂಚಾಯಿತಿಗಳಿಗೆ ನೀಡಿರುತ್ತಾರೆ. ಅದು ಸಾರ್ವಜನಿಕವಲ್ಲ

ಅರಸೋಜಿ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/27/2010 - 11:45

ಇದು ತುಂಬ ಚೆನ್ನಾಗಿದೆ ಮತ್ತು ಯಾವುದೆರೀತಿಯಲ್ಲಿ ಜನತೆಗೆ ಕಂದಾಯದಲ್ಲಿ ಮೋಸವಾಗದಂತೆ ಹೆಚ್ಚರಿಸಿರುವುದು ಸ್ವಾಗತಾರ್ಹ ಎಂಬುದಾಗಿ ತಿಳಿಸಲು ಇಚ್ಚಿಸುತ್ತೇನೆ.
                                 ದನ್ಯವಾದಗೊಂದಿಗೆ
 

ವಿನೋದ್ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/29/2010 - 09:56

       ನಿಮ್ಮ ಈ ತಂತ್ರಜ್ಞಾನ ತುಂಬ ಚನ್ನಾಗಿದೆ ಆದರೆ ಇದರ ಬಗ್ಗೆ ಸ್ವಲ್ಪ ಮಟ್ಟಿ ಗಾದರು ಕನ್ನಡದಲ್ಲಿ  ಇದರ ಉಪಯೋಗದ ಬಗ್ಗೆ ಮಾಹಿತಿಯನ್ನ ಹೊದಗಿಸಿದರೆ ಇದನ್ನು ಮಾಡುವವರಿಗೆ ತುಂಬ ಒಳ್ಳೆಯದಾಗುತ್ತದೆ.

ಬಿ.ಮಲ್ಲಿಕಾರ್ಜು… (ಪ್ರಮಾಣಿಸಲ್ಪಟ್ಟಿಲ್ಲ.) ಧ, 07/14/2010 - 18:49

ಪಂಚತಂತ್ರ ಬಂದಿರುವುದರಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಕಟ್ಟುನಿಟ್ಟಾಗಿ ಗ್ರಾಮ ಪಂಚಾಯಿತಿಯ ಎಲ್ಲಾ ವಿಷಯಗಳನ್ನು ಇದರಲ್ಲಿ ನಮೂದಿಸಿದಲ್ಲಿ ಮಾತ್ರ ಪಂಚಾಯಿತಿಗಳಲ್ಲಿ ಆಗುವ ಅವ್ಯವಹಾರವನ್ನು ತಡೆಯಬಹುದು. ಮತ್ತು ಇದರಿಂದ ಪಂಚಾಯಿತಿಯಲ್ಲಿನ ಹಾಗು ಹೋಗುವ ವ್ಯವಹಾರಗಳನ್ನು ಜನ ಸಾಮನ್ಯರು ಸಹ ಈ ತತ್ರಾಂಶದಲ್ಲಿ ನೋಡಬಹುದು ಅದ್ದರಿಂದ ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯಿತಿಗಳು ಇದನ್ನು ಬೇಗನೆ ಅಳವಡಿಸಿಕೊಂಡಲ್ಲಿ ಮಾತ್ರ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬಹುದು.
ಇಂತಿ
ಮಲ್ಲಿಕಾರ್ಜುನ ಮಧುಗಿರಿ
 

A.k Aboobakker (ಪ್ರಮಾಣಿಸಲ್ಪಟ್ಟಿಲ್ಲ.) ಧ, 07/28/2010 - 14:25

ತುಂಬ ಉಪಯುಕ್ತ ಮಾಹಿತಿಯನ್ನೊಳಗೊಂದ ಯಿ ಅಂತರ್ಜಾಲ ತಾಣ ನಾಡಿನ ಜನತೆಗೆತುಂಬಾ ಸಹಕಾರಿಯಾಗಲಿದೆ.ಅಭಿನಂದನೆಗಳು.  

ಶಂಕ್ರಪ್ಪ ಹೊನ್ನತ್ತಿ (ಪ್ರಮಾಣಿಸಲ್ಪಟ್ಟಿಲ್ಲ.) ಧ, 07/28/2010 - 16:14

ಈ ಪಂಚತಂತ್ರದಿಂದ ಸಾಮಾನ್ಯ ಜನರಿಗೂ ಗ್ರಾಮ ಪಂಚಾಯತಿಯ ಮಾಹಿತಿ ಯಾವುದೆ ಸಮಯದಲ್ಲಿ ಪಡೆಯಲು ಅನಕೂಲವಾಗಿದೆ. ಯಾವುದೇ ಅವ್ಯವಹಾರ ನೆಡೆವುದಿಲ್ಲಾ.ಹಾಗೂ ಗ್ರಾಮ ಪಂಚಾಯತಿಯ ಆಸ್ತಿ ಉತಾರಗಳು ಆನ್ ಲೈನ ನಲ್ಲಿ ದೊರೆಯುವಂತಾಗಬೇಕು
     

ಈರಣ್ಣ ಸಿ.ಹೆಚ್. (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 08/26/2010 - 16:37

ಪಂಚತಂತ್ರ ವ್ಯವಸ್ತೆಯು ನಿಜಕ್ಕೂ ಅದ್ಬುತವಾಗಿರುವುದರ ಜೊತೆಗೆ ಸಂಪೂರ್ಣ ಪಾರದರ್ಶಕವಾಗಿದ್ದು, ಈ ವ್ಯವಸ್ತೆಯಲ್ಲಿ ಅಕೌಂಟಿಂಗ್    ಸಮಗ್ರವಾಗಿ ಹಾಗೂ ಸರಿಯಾಗಿ ಅಳವಡಿಸಬೇಕಾದಲ್ಲಿ ಅಭಿವೃದ್ದಿ ಅಧಿಕಾರಿಗಳು,ಕಾರ್ಯದರ್ಶಿಗಳು ಮತ್ತು ಡಾಟಾ ಆಪರೇಟರುಗಳಿಗೆ ಇನ್ನೂ ಹೆಚ್ಚಿನ ತರಭೇತಿ ಕೊಡಿಸುವುದು ಒಳಿತು

ಎಸ್.ಎಂ.ಜಗದೀಶಯ್ಯ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 10/12/2010 - 13:40

ಯಾವುದೆರೀತಿಯಲ್ಲಿ ಜನತೆಗೆ ಕಂದಾಯದಲ್ಲಿ ಮೋಸವಾಗದಂತೆ ಹೆಚ್ಚರಿಸಿರುವುದು. ಹಾಗೂ ಪಂಚಾಯ್ತಿಯಲ್ಲಿನ ಕೆಲಸಗಳು ಸುಗಮವಾಗಿ ಸಾಗುತ್ತವೆ. ಈ ಸಾಪ್ಟ್ ವೇರ್ ಬಹಳ ಅತ್ಯಾವಶ್ಯಕವಾಗಿದೆ.

ಎಸ್.ಎಂ.ಜಗದೀಶಯ್ಯ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 10/12/2010 - 13:45

ಗ್ರಾಮ ಪಂಚಾಯ್ತಿಯಲ್ಲಿ ಪಂಚತಂತ್ರವನ್ನು ಅಳವಡಿಸಿಕೊಂಡಿರುವುದರಿಂದ ಗ್ರಾಮ ಪಂಚಾಯ್ತಿಯ ವ್ಯವಹಾರಗಳ ಸಮಗ್ರ ಮಾಹಿತಿ, ಟೆಂಡರ್ ಪ್ರಕ್ರಿಯೆ,  ಭೂ ದಾಖಲೆಗಳು, ಹಿಡುವಳಿದಾರರ ವಿವರಗಳು, ಸ್ವಾಧೀನತೆ ಕುರಿತಾದ ಹತ್ತು ಹಲವಾರು ಮಾಹಿತಿಗಳನ್ನು ನಾವು ಎಲ್ಲಿ ಬೇಕಾದರೂ ನೋಡಿಕೊಳ್ಳಬಹುದು.

pavu (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/06/2011 - 13:16

ಪಂಚತಂತ್ರ ಭ್ರಷ್ಟಾಚಾರವನ್ನು ತಡೆಯುವ ಕ್ರಮವಾದರೂ ಅದು ಭ್ರಷ್ಟಾಚಾರವನ್ನು ಬ್ರೇಕ್ ಹಾಕಲು ಸಾದ್ಯಾವಾಗಿಲ್ಲ. ಇದು ನಮ್ಮ ಮುಂದೆ ನಡೆಯುತ್ತಿರುವ ಭ್ರಷ್ಟಚಾರವನ್ನು ನೋಡಿ ಹೇಳುತ್ತಿರುವ ಮಾತು ಇದಾಗಿದೆ.....................

ಮಧು ಟ.ಜೆ ಶುಕ್ರ, 01/07/2011 - 13:57

ನೋಡಿ ಶಫೀರ್ ರವರೇ ನೀವು ಹೇಳಿರುವುದು ಖಂಡಿತವಾಗಿಯು ನಿಜ ನಾನು ಸಹ ಒಬ್ಬ ಗ್ರಾಮ ಪಂಚಾಯಿತಿಯ ಸಿಬ್ಬಂದಿಯಾಗಿ ಹೇಳುತ್ತೀದ್ದೇನೆ ಗ್ರಾಮ ಪಂಚಾಯಿತಿಗಳ ಅವ್ಯವಹಾರಗಳನ್ನ ತಡೆಗಟ್ಟಲು ಬಂದಿದೆ ಪಂಚತಂತ್ರ ನಮ್ಮ ಸರ್ಕಾರ ಯಾವುದೇ ತಂತ್ರಗಳನ್ನ ಹುಡುಕಿದರು ಗ್ರಾಮ ಪಂಚಾಯಿತಿಯಲ್ಲಿ ತಂತ್ರಗಳನ್ನು ಕುತಂತ್ರವನ್ನಾಗಿ ಮಾಡಿ ಅದನ್ನ ಆಳು ಮಾಡುವ ಮಟ್ಟಿಗೆ ಕೊಂಡೋಯ್ಯ್ದಿದೆ ನನಗೆ ತುಂಬಾ ಇಷ್ಟವಾದ ವೆಬ್ ಸೈಟ್ ಅಂದರೆ ಪಂಚ ತಂತ್ರ ಆದರೆ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರ ಹಾಗು ಇನ್ನೀತರರಿಂದ ಈ ವೆಬ್ ಸೈಟ್ ನನಗೆ ಬೇಜಾರಾಗಿ ಬಿಟ್ಟಿದೆ ಏಕೆಂದರೆ ಇವರು ಮೋಸದಿಂದ ತಿಂದು ತೇಕಿ ನಂತರ ಲೆಕ್ಕವನ್ನ ನನಗೆ ಕೊಟ್ಟು ಇದು ಸತ್ಯವಾದದ್ದು ಇದರ ಖರ್ಚನ್ನು ಪಂಚತಂತ್ರದಲ್ಲಿ ಲೆಕ್ಕ ತೋರಿಸು ಎಂದರೆ ನನಗೆ ಬೇಜಾರಾಗುತ್ತೋ ಇಲ್ಲವೋ ನೀವೇ ಹೇಳಿ ಇದನ್ನ  ಪೂರ್ಣವಾಗಿ ಸರಿಗೊಳಿಸಲು ಗ್ರಾಮ ಪಂಚಾಯಿತಿ ಡೆಟಾ ಎಂಟ್ರಿ ಆಪರೇಟರ್ ಗಳಿಗೆ ಜವಬ್ದಾರಿ ಕೊಟ್ಟರೆ ಉತ್ತಮ ಎಂದು ನನ್ನ ಅನಿಸಿಕೆ

ಎಮ.ವಿ.ಪ್ರಕಾಶ್,… (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 06/10/2011 - 16:23

ನಾನು ಚಿಕ್ಕಮಗಳೂರು ತಾಲ್ಲೂಕು ದೊಡ್ಡಮಾಗರವಳ್ಳಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ/ಪಿಡಿಒ ಆಗಿದ್ದೇನೆ. ಈ ಪಂಚತಂತ್ರ ತತ್ರಾಂಶವನ್ನು ಅಭಿವೃದ್ದಿ ಮಾಡಲು ನಾನು ಕೂಡ ನಮ್ಮ ಇಲಾಖೆಯು ಬೆಂಗಳೂರಿನಲ್ಲಿ ಸಭೆಕರೆದಾಗ ನಮ್ಮ ಜಿಲ್ಲಾಪಂಚಾಯಿತಿಯು ಅವಕಾಶ ನೀಡಿದ್ದರಿಂದ ಹಾಜರಾಗಿದ್ದೆ. ಹಾಗೂ ಕೆಲವು ಸಲಹೆಗಳನ್ನು ಪಂಚಾಯಿತಿ ಪರವಾಗಿ ನೀಡಿದ್ದೆನು. ನಿಜವಾಗಿಯು ಈ ತತ್ರಾಂಶವು ಬಹಳ ವರ್ಷಗಳ ಹಿಂದೆ ಬಂದಿದ್ದರೆ ಈಗ ಪಂಚಾಯಿತಿಗಳೆಲ್ಲ ಆನ್ ಲೈನ್ ಆಗಿರುತ್ತಿದ್ದವು. ಹಾಗೂ ಪ್ರಸ್ತುತ ಪಂಚಾಯಿತಿಯ ಎಲ್ಲಾಯೋಜನೆಗಳಲ್ಲಿ ವಿಷೇಷವಾಗಿ ಎನ್.ಆರ್.ಇ.ಜಿಯಲ್ಲಿ ಆಗುತ್ತಿರುವ ಗೊಂದಲ , ಅಸಮಾನ ಕಾರ್ಯಕ್ಷಮತೆ , ಪಂಚಾಯಿತಿಯ ಅಸಮಾನ ಕರ್ತವ್ಯ ನಿರ್ವಹಣೆ, ಎಲ್ಲವನ್ನು ದೂರ ಮಾಡಬಹುದಿತ್ತು. ಸಾಮಾಜಿಕ ಬದ್ದತೆಯನ್ನು ಕಾಪಾಡಬಹುದಿತ್ತು. ಈ ಪಂಚತಂತ್ರದಿಂದ ಈಗ ಎಲ್ಲಾ ಪಂಚಾಯಿತಿಗಳು ಪಾರದರ್ಶಕತೆಯಿಂದ ಕೆಲಸ ಮಾಡುವುದಲ್ಲದೆ , ಕೆಲಸವನ್ನು ಸಮಾನ ರೀತಿಯಿಂದ ಮಾಡಲು ಸಾದ್ಯವಾಗುತ್ತಿದೆ. ಏಕೆಂದರೆ ಎಷ್ಟೋ ಪಂಚಾಯಿತಿಗಳಲ್ಲಿ ಕಂದಾಯ ಪರಿಷ್ಕರಣೆ ಮಾಡದೆ ಹಲವಾರು ವರ್ಷಗಳೆ ಆಗಿದೆ, ಹಾಗೂ ಆಸ್ತಿಗಳಿಗೆ ಸರಿಯಾದ ಕಂದಾಯ ನಿಗದಿಯಾಗಿರುವುದಿಲ್ಲ. ಬಡ್ಜೆಟ್ ಸರಿಯಾಗಿ ಮಾಡುವುದಿಲ್ಲ, ಬೇಡಿಕೆಗೂ ವಸೂಲಾತಿಗೂ ಬಹಳ ಅಂತರವಿರುತ್ತದೆ. ಇದರಿಂದ ಸರ್ಕಾರದ ಅಂಕಿ ಅಂಶದಲ್ಲಿ ತುಂಬಾ ಏರುಪೇರುಗಳಿವೆ. ಪ್ರಸ್ತುತ ಈ ಎಲ್ಲಾ ಸಮಸ್ಯೆಗಳು ಈ ತತ್ರಾಂಶದಿಂದ ನಿವಾರಣೆಯಾಗುತ್ತವೆ. ಏಕೆಂದರೆ ಈ ತತ್ರಾಂಶದಲ್ಲಿ ಮಾಹಿತಿ ತುಂಬಲು ಎಲ್ಲವೂ ಸರಿಯಾಗಿರಬೇಕು. ಈ ರೀತಿಯ ವ್ಯವಸ್ತೆಯು ನನ್ನ ಕನಸಾಗಿತ್ತು. ಈಗ ಅದು ನೆರವೇರುವ ಹಂತದಲ್ಲಿದೆ. ನಿಜವಾಗಿಯು ಸರ್ಕಾರದ ಪ್ರಯತ್ನ ಶ್ಲಾಘನೀಯ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 02/27/2012 - 15:33

ಪಂಚತಂತ್ರದ ಬಗ್ಗೆ  ಡಾಟಾ ಆಪರೇಟರುಗಳಿಗೆ ಇನ್ನೂ ಹೆಚ್ಚಿನ ತರಭೇತಿ ಕೊಡಿಸುವುದು ಒಳತು

ಮಣಿಕಂಠ ಸೋಮ, 07/30/2012 - 14:44

ಈ ಪಂಚತಂತ್ರದಿಂದ ತುಂಬಾ ಸಾಮಾನ್ಯ ಜನರಿಗೆ ತುಂಬಾ ಉಪಯುಕ್ತವಾಗುತ್ತಿದೆ......

ಮಣಿಕಂಠ ಸೋಮ, 07/30/2012 - 14:45

ಈ ಪಂಚತಂತ್ರದಿಂದ ತುಂಬಾ ಸಾಮಾನ್ಯ ಜನರಿಗೆ ತುಂಬಾ ಉಪಯುಕ್ತವಾಗುತ್ತಿದೆ......

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.