Skip to main content

ಡಾII ಬಿ. ಆರ್. ಅಂಬೇಡ್ಕರರೆಂಬ ಮಹಾನ್ ಚೇತನ

ಇಂದ ವಸಂತ್
ಬರೆದಿದ್ದುApril 15, 2010
9ಅನಿಸಿಕೆಗಳು

[img_assist|nid=6393|title=|desc=|link=node|align=left|width=97|height=90]    ಸುಮಾರು 119 ವರ್ಷಗಳ ಹಿಂದೆ ಒಂದು ಸಾಮಾನ್ಯ ಕುಂಟುಂಬದಲ್ಲಿ ನಮ್ಮ ದೇಶದ ಸಂವಿಧಾನವನ್ನು ರಚಿಸುವ ಒಬ್ಬ ಜ್ಞಾನ ವಂತನನ್ನು ಈ ದೇಶ ಪಡೆಯುತ್ತದೆ ಎಂದು ಯಾರು ಉಹಿಸಿರಲಿಲ್ಲ. ಆದರೆ ಆ ಮಹಾನ್ ಚೇತನ ತೀರಾ ಹಿಂದುಳಿದ ವರ್ಗದ (ದಲಿತ) ಜಾತಿಯಲ್ಲಿ ಹುಟ್ಟಿ ಈ ರಾಷ್ಟ್ರದ ಸಂವಿಧಾನವನ್ನು ರಚಿಸುವ ಸಾಧನೆ ಮಾಡಿತ್ತಾರೆ ಎಂದರೆ?, ಅದು ಮೇಲ್ಜಾತಿಯ ಜನತೆಗೆ ಕನಸಿನ ಮಾತಾಗಿತ್ತು. ಆದರೆ ಆ ವೆಕ್ತಿ ತನ್ನ ಜೀವವನ್ನೆ ದೇಶಕ್ಕಾಗಿ ದಲಿತರ ಉದ್ಧಾರಕ್ಕಾಗಿ ಕಡೆಯವರೆಗು ದುಡಿಯುತ್ತಾ ತನ್ನ ವಿಜಯ ಪತಾಕೆಯನ್ನು ಆರಿಸಿದ್ದು ಅಚ್ಚರಿಯ ಸಂಗತಿಯಾಗಿತ್ತು. ಈ ಮಹತ್ ಕಾರ್ಯವನ್ನು ಮಾಡಿದ್ದು ಬೇರಾರು ಅಲ್ಲ ಡಾII ಬಾಬ ಸಾಹೇಬ್ ಅಂಬೇಡ್ಕರ್ ರವರು. ಇಂತ ಒಂದು ಒಬ್ಬ ಸಾಮಾನ್ಯ ವೆಕ್ತಿ ಇಂತ ಒಂದು ಮೇರು ಹೆಸರನ್ನು ದಕ್ಕಿಸಿಕೊಳ್ಳ ಬೇಕಾದರೆ ಅದರೊಳಗಿನ “ತೀರದ ನೋವು, ಕಾಣದ ಯಾತನೆ ಮತ್ತು ಸಂಘಟನೆ,ಹೋರಾಟ,ಶಿಕ್ಷಣ ವೆಂಬ ಹಲವು ಅಂಶಗಳು ಗೋಷರಿಸದಿರವು. ಈ ಒಬ್ಬ ಧೀಮಂತ ವೆಕ್ತಿ ಭೀಮ್ ರಾವ್ ಆಗಿ 1898ರಲ್ಲಿ ಮಹಾರಾಷ್ಟ್ರದ ಅಂಬಾವಾಡೆ ಎಂಬ ಗ್ರಾಮದಲ್ಲಿ ಶೂದ್ರ ವರ್ಗದಲ್ಲಿ ಹುಟ್ಟುತ್ತಾರೆ. ಇವರ ತಂದೆ ರಾಮಜೀ ಸಕ್ಪಾಲ್ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದರಿಂದ ಇದೇ ಕಾರಣದಿಂದಾಗಿ ಭೀಮ್ ರಾವ್ ಗೆ ಸರಕಾರಿ ಶಾಲೆಯಲ್ಲಿ ಸೀಟು ದೊರಕಿಸಿ ಕೊಳ್ಳುವುದರಲ್ಲೇನೋ ಸಫಲರಾದರು, ನಂತರ ನಡೆದ ಹಲವು ಹಮಾನವೀಯ ಘಟನೆಗಳನ್ನು ಎದುರಾದವು ಶಾಲೇಯಲ್ಲಿ ದಲಿತರನ್ನು ಯಾರು ಮುಟ್ಟುವಂತಿರಲಿಲ್ಲ ಇವರಿಗೆ ದಾಹವಾದಾಗ ಎಲ್ಲರಂತೆ ನೀರು ಕುಡಿಯುವ ಹಾಗಿರಲಿಲ್ಲ ಇವರನ್ನು ಒಂದೆಡೆ ಕುಳ್ಳರಿಸಿ ಬೋಗಸೆಯೊಡ್ಡಿಸಿ ಇವರ ಬಾಯಿಯಲ್ಲಿ ದೂರದಿಂದ ನೀರನ್ನು ಹುಯ್ಯಲಾಗಿತ್ತಿತ್ತು ಈ ಕಾರ್ಯವನ್ನು ಆ ಶಾಲೆಯ ಜವಾನನಿಗೆ ವಹಿಸಲಾಗುತ್ತಿತ್ತು ಒಂದು ವೇಳೆ ಈ ಜವಾನ ಬರದೇ ಇದ್ದ ಪಕ್ಷದಲ್ಲಿ ಆ ದಿನದ ಪೂರ್ತಿ ನೀರು ಇಲ್ಲದೆ ನರಳಬೇಕಿತ್ತು. ಹಳ್ಳಿಯಿಂದ ಹಳ್ಳಿ ಸಾಗುತ್ತಿದ್ದ ಚಕ್ಕಡಿಗಳಲ್ಲಿ ಕೆಳ ವರ್ಗದ ಜನ ಹತ್ತಬಾರದಿತ್ತು ಈಗೆಯೆ ಒಂದು ಬಾರಿ ಬಾಬ ಸಾಹೇಬರು ಶಾಲೆಯಿಂದ ಬರುವಾಗ ಒಂದು ಚಕ್ಕಡಿ ಹೋಗುತ್ತಿತ್ತು ದೂರದ ಹಳ್ಳಿಗೆ ನೆಡೆದೆ ಹೋಗುವುದು ಕಷ್ಟವೆಂದೆನಿಸಿ ಚಕ್ಕಡಿಯಲ್ಲಿ ಹತ್ತುತ್ತಾನೆ ಇದನ್ನು ಕಂಡ ಚಕ್ಕಡಿಯವನು ಹಸುಗಳಿಗೆ ಬಾರಿಸುತ್ತಿದ್ದ ಚಾಟಿಯಿಂದಲೇ ಬಡಿದು ಬಂಡಿಯಿಂದ ಕೆಳ ದಬ್ಬುತ್ತಾನೆ ಮತ್ತೆ ಇಂತಾದೆ ಒಂದು ಪ್ರಸಂಗದಲ್ಲಿ ಬಾಬ ಸಾಹೇಬರು ಸ್ಕೂಲಿಗೆ ಹೋಗುವಾಗ ನಡೆದೆ ಸಾಗಬೇಕಿತ್ತು ನಡೆದು ನಡೆದು ಧಣಿದು ತುಂಬಾ ನೀರಿನ ದಾಹವಾಗುತ್ತದೆ ಆಗಾ ಆ ಹಳ್ಳಿಯಲ್ಲಿದ್ದ ಕೆರೆಯಲ್ಲಿ ನೀರನ್ನು ಕುಡಿಯುತ್ತಾನೆ ಇದನ್ನು ಕಂಡ ಆ ಹಳ್ಳಿಯ ಮೇಲ್ಜಾತಿಯ ವೆಕ್ತಿ ಇವನು ಶೂದ್ರನೆಂಬ ಕಾರಣಕ್ಕೆ ಹಿಗ್ಗಾ ಮುಗ್ಗಾ ಬಡಿದು ಪಂಚಾಯತಿ ಕಟ್ಟೆಯನ್ನು ಸಹ ಸೇರಿಸುತ್ತಾನೆ ಆದರೆ ಆ ಹಳ್ಳಿಯಲ್ಲಿ ನಾಯಿಗಳು, ಕುರಿಗಳು, ಹಸುಗಳು, ಅದೇ ನೀರನ್ನು ಕುಡಿಯುತ್ತಿದ್ದರು ಪಷುಗಳಿಗಿಂತ ಹೀನವಾಗಿ ದಲಿತರನ್ನು ಕಾಣುತ್ತಿದ್ದರೆಂಬ ವಾಸ್ತವಾಂಶ ಇದರಿಂದಲೇ ಅರ್ಥವಾಗಿಬಿಡುತ್ತದೆ. ಇಲ್ಲಿ ಸಮತೋಲನೆಯನ್ನು ಮೇಲ್ಜಾತಿಯ ಜನ ತನ್ನ ಇಷ್ಟಾನುಸಾರವಾಗಿ ಮಾನವತೆಯನ್ನು ಮರೆತು ದಲಿತಂರೆಂದರೆ ಅವರು ಕೀಳು ಜಾತಿಯ ಜನ ಕೇವಲ ನಮ್ಮ ಸೇವೆಗೆಂದೆ ಹುಟ್ಟಿ ಬಂದವರೆಂಬ ಕಾರಣದಿಣದ ದಲಿತರ ಹಕ್ಕುಗಳನ್ನು ಕಿತ್ತುಕೊಂಡು ಸರ್ವಾಧಿಕಾರರಂತೆ ತಮ್ಮ ದೋರಣೆಯನ್ನು ಪರಿಪಾಲಿಸುತ್ತಿದ್ದರು. ಇಂತ ಹಲವಾರು ಪ್ರಸಂಗಗಳು ಡಾII ಬಾಬ ಸಾಹೇಬ್ ಅಂಬೇಡ್ಕರ್ ರವರ ಬಾಳಿನಲ್ಲಿ ಸಾಲು ಸಾಲಾಗಿ ಬಂದು ಸಾಗುತ್ತವೆ. ಇವೆಲ್ಲ ತಿರಸ್ಕಾರಗಳ ನಡುವೆಯು ಬಾಬ ಸಾಹೇಬರು ತಮ್ಮ ಆತ್ಮ ವಿಶ್ವಾಸವನ್ನು ಬೆಳೆಸಿಕೊಂಡು ಉನ್ನತ ಶಿಕ್ಷಣದತ್ತ ಹೆಜ್ಜೆಯನ್ನು ಇಟ್ಟು ಗೇಲಿವಿನ ಹಾದಿಯಲ್ಲಿ ಸಾಗುತ್ತಲೇ ಇರುತ್ತಾರೆ. ಆದರೆ ಇಲ್ಲಿ ಒಂದು ವಿಷಯವನ್ನು ತಿಳಿಸಬೇಕಿದೆ ಬಾಬ ಸಾಹೇಬರವರಲ್ಲಿ ಕಾಳಜಿಯನ್ನಿಟ್ಟುಕೊಂಡಿದ್ದ ಬ್ರಾಹ್ಮಣ ಶಿಕ್ಷಕರೊಬ್ಬರಿದ್ದರು ಅವರ ಹೆಸರು ಮಹಾದೇವ್ ಅಂಬೇಡ್ಕರ್ ಈ ಪ್ರೀತಿ ಹಾಗೂ ಭೀಮ್ ರಾವ್ ಅವರ ಊರು ಮಹಾರಾಷ್ಟ್ರದ ಅಂಬಾವಾಡೆ ಎಂಬ ಗ್ರಾಮ ಎಂಬ ಅಂಶವೂ ಸೇರಿ, ಭೀಮ್ ರಾವ್ ಸಕ್ಪಾಲ್- ಭೀಮ್ ರಾವ್ ಬಾಬ ಸಾಹೇಬರಿರಾದರು. ದಲಿತರಿಗೆ ಆಗುತ್ತಿದ್ದ ಅನ್ಯಾಯವನ್ನು ಮನಗಂಡು ತನಗಾದ ನೋವು ಯಾತನೆ ನನ್ನಂತೆ ಕೀಳು ವರ್ಗದಲ್ಲಿ ಜನಿಸುವ ಮಕ್ಕಳಿಗೆ ಆಗಬಾರದೆಂದು ತಮ್ಮ ಜೀವತಾವದಿಯನ್ನು ಕೆಳವರ್ಗ ಜನರ ಧೀನ ದಲಿತರ ಪರವಾಗಿ ಹೋರಾಡಿದ ಮಹಾನ್ ಚೇತನ ಡಾII ಅಂಬೇಡ್ಕರ್ ರವರು ಅವರು ಎಂದು ಇನ್ನೊಬ್ಬರ ಬಗ್ಗೆ ಹವಹೇಳನದ ಮಾತುಗಳನ್ನು ಹಾಡಿರಲಿಲ್ಲ  ಕೇವಲ ತಮ್ಮ ಹಕ್ಕುಗಳ ಬಗ್ಗೆ ಅರಿವನ್ನು ಹುಂಟುಮಾಡುವಲ್ಲಿ ಯಶಸ್ಸನ್ನು ಕಂಡವರು. ಇವರು ಪ,ಪಂ ಮತ್ತು ಪ,ಜಾತಿಯವರಿಗೆ ತಮ್ಮ ಉನ್ನತವಾದ ನಿಲುವನ್ನು ಪರಿಪಾಲಿಸಿದರು ಇದರ ಪ್ರಕಾರ ಶಿಕ್ಷಣ, ಹೋರಾಟ ಮತ್ತು “ತಮ್ಮ ಹಕ್ಕುಗಳನ್ನು ಕಸಿಯುವಂತವರ ವಿರುದ್ಧ ಹೋರಾಡಿ” ಎಂದು ತಮ್ಮ ಬದುಕಿನುದ್ದಕ್ಕು ಪಟನೆ ಮಾಡುತ್ತಾ ಬಂದವರು ಅವರು ಗಾಂಧೀಜಿಯವರ ಪ್ರಕಾರ ಹಳ್ಳಿಗಳ್ಳಲ್ಲಿನ ದಲಿತರನ್ನು ಹರಿಜನರೆಂದು ಪ್ರತಿಪಾದಿಸಿದ್ದರು. ಇದನ್ನು ಬಾಬ ಸಾಹೇಬರು ಕಟುವಾಗಿ ಟೀಕಿಸಿದ್ದರು ಆಗೆಯೆ ದಲಿತರು ಹಳ್ಳಿಗಳಲ್ಲಿಯೆ ಇದ್ದು ತಮ್ಮನ್ನು ಮುನ್ನಡೆಸುವ ತಂತ್ರವನ್ನು ಗಾಂಧೀಜಿ ಯವರು ತಿಳಿಸಿದ್ದು ಇದಕ್ಕು ಬಾಬ ಸಾಹೇಬರ ವಿರೋಧವಿತ್ತು ಯಾಕೆಂದರೆ ಹಳ್ಳಿಯ ಮುಗ್ಧಜನರು ಹಳ್ಳಿಗಳಲ್ಲಿಯೆ ಇದ್ದರೆ ಅವರ ಉದ್ದಾರವಾಗದು ಅವರು ಪಟ್ಟಣಗಳಿಗೆ ವಲಸೆ ಬಂದು ಸುಶಿಕ್ಷಿತರಾದರೆ ಮುಂದೆ ಅವರು ಉನ್ನತವಾದ ಹಾದಿಯಲ್ಲಿ ನಡೆಯಬಹುದೆಂದು ತಿಳಿಸುತ್ತಿದ್ದರು. ತನ್ನ ಬದುಕಿನುದ್ದಕ್ಕು ಪರ ಸೇವೆಯಲ್ಲಿ ತೊಡಗಿದ ಡಾII ಅಂಬೇಡ್ಕರ್ ರಂತಹವರು ಮತ್ತೆ ಹುಟ್ಟಿ ಬರಲಿ ಎಂದು ಆಶಿಸುತ್ತಾ ನಿಮ್ಮ.     
                                               ವಸಂತ್ ಕೋಡಿಹಳ್ಳಿ
 
 

ಲೇಖಕರು

ವಸಂತ್

ವಸಂತ್

ನನ್ನ ಬಗ್ಗೆ ಹೇಳಿಕೊಳ್ಳುವಂತಹದೇನು ಇಲ್ಲ. ನಾನು ಒಬ್ಬ ಸಾಮಾನ್ಯ ಹುಡುಗ. ನನ್ನ ಹವ್ಯಾಸ ಕಥೆ ಕವನ ಮತ್ತು ಲೇಖನಗಳನ್ನು ಬರೆಯುವುದು ಮತ್ತು ಕೆಲಸ ಮಾಡುವುದಿದ್ದೆ ಇದೆ. ಆದರೆ ನಾನು ಯಾವುದರಲ್ಲು ಪರಿಪಕ್ವವನ್ನುಗಳಿಸಲು ಸಾಧ್ಯವಾಗಲಿಲ್ಲ. ನನ್ನ ಬರಹಗಳು ನನಗೆ ಪೂರ್ಣವಾಗಿ ವಿಶ್ವಾಸವನ್ನು ತಂದುಕೊಟ್ಟ ನಂತರವೇ ಮುಂದಿನ ಮಾತನ್ನು ಹೇಳಬಲ್ಲೆ. ಆದರೂ ಸದಾ ನನ್ನ ಪ್ರಯತ್ನ ಮುಂದುವರೆಯುತ್ತಲೆ ಇರುತ್ತದೆ. ಆ ಪ್ರಯತ್ನವನ್ನೆ ಈ ಬ್ಲಾಗಿನಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ. ನಿಮಗೆ ಇಷ್ಟವಾದರೂ ಓದಿ ಅಥವಾ ಕಷ್ಟವಾದರೂ ಪ್ರತಿಕ್ರಿಯಿಸಲು ಮರೆಯಬೇಡಿ. ನಿಮ್ಮ ಸಲಹೆಗಳನ್ನು ನನ್ನ ಇ ಮೇಲ್ ವಿಳಾಸಕ್ಕೆ ಬರೆಯಲು ಮರೆಯದಿರಿ. ಇಂತಿ ನಿಮ್ಮ ವಸಂತ್. (vasanth3117@gmail.com) ಮತ್ತು ಇದು ನನ್ನ ಬ್ಲಾಗ್ ವಿಳಾಸ (vasanthrr.blogspot.com)

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/15/2010 - 18:30

ಈ ಲೇಖನವನ್ನು ನಿನ್ನೆಯ ಪತ್ರಿಕೆಯೊದರಿಂದ ಯಥಾವತ್ತಾಗಿ ನಕಲಿಸಲಾಗಿದೆ

ವಸಂತ್ ಗುರು, 04/15/2010 - 21:06

 ನೀವು ತಿಳಿದು ಕೊಂಡಂತೆ ಯಥಾವತ್ತಾಗಿ ನಕಲಿಸಲಾಗಿದೆ ಎಂದು ಹೇಳುವುದು ಸತ್ಯಕ್ಕೆ ದೂರವಾದದ್ದು ಡಾII ಬಿ ಆರ್ ಅಂಬೇಡ್ಕರ್ ನನಗೆ ದೈವ ಸಮಾನರು ಅವರ ವಿಷಯಗಳನ್ನು ಎಲ್ಲಾ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ತಾವು ತಿಳಿಸಿಂದಂತೆ ಕೆಲವು ಅಂಶಗಳು ನೆನಪಿಗೆ ಬರದೆ ಇರಬಹುದು ಅಂತ ಸಂರ್ದಬದಲ್ಲಿ ಪತ್ರಿಕೆಗಳ ಮೊರೆ ಹೋಗಬೇಕಾಗುತ್ತದೆ ಆಗೆಯೆ ಡಾII ಬಿ ಆರ್ ಅಂಬೇಡ್ಕರ್ ರವರ ಹುಟ್ಟಿದ ದಿನವನ್ನು ಯಾರು ಬದಲಾಯಿಸಲಾಗುವುದಿಲ್ಲ ಅದು ಸಾದ್ಯವಾಗುವುದು ಇಲ್ಲ ಇವರಂತೆ ಇನ್ನಾರನ್ನೆ ಆಗಲಿ 10 ವರ್ಷಗಳು ಬಿಟ್ಟು ಬರೆದರು ಇದನ್ನೇ ಬರೆಯಬೇಕಾಗುತ್ತದೆ. ಆದರೆ ಕೇವಲ ತಾರೀಕುಗಳು ಮಾತ್ರ ವ್ಯತ್ಯಾಸಗಳಿರುತ್ತವೆ. ನಿಮ್ಮ ಈ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು.
                   ವಸಂತ್ ಕೋಡಿಹಳ್ಳಿ

Prasanna82 (ಪ್ರಮಾಣಿಸಲ್ಪಟ್ಟಿಲ್ಲ.) ಧ, 05/19/2010 - 03:03

ನಮಸ್ಕಾರ ವಸಂತ ಅವರಿಗೆ,
ತಮ್ಮ ಲೆಖನ ಚೆನ್ನಾಗಿದೆ. ಡಾ.ಬಿ ಆರ್ ಅಂಬೆಡ್ಕರ್ ಅವರ ಸಾಧನೆ ನಿಜಕ್ಕು ಶ್ಲಾಘನೀಯ. ಅವರು ಭಾರತ ದೆಶಕ್ಕೆ ಸಂವಿಧಾನ್ವನ್ನು ರಚಿಸಿ ಕೊಟ್ಟಿರುವಂಥ ಗಣ್ನ್ಯ ವ್ಯಕ್ತಿ.
ಆದರೆ ನನ್ನದೊಂದು ಪ್ರಶ್ನೆ, ಆಂಬೆಡ್ಕರ ಅವರ ಹೆಸರು ಯಾವದೆ ಸ್ವಾತಂತ್ರ ಹೊರಾಟದ ಲೆಖನ, ಚೆಳುವಳಿ, ಸಭೆ ಗಳಲ್ಲಿ ಭಾಗವಹಿಸಿದ ನಿರೋಪಣೆ ಇದೆಯಾ..?
ಉತ್ತರ.. ಭಾಗವಹಿಸಿಲ್ಲಾ..
೧೯೩೯ ಅಥವಾ ೧೯೪೨ ರಲ್ಲಿ ಕೋಂಗ್ರೆಸ್ ಇಲೆಕ್ಷನ್ ಗೆದ್ದಾಗ ಮೊಹಮ್ಮದ ಅಲಿ ಜಿನ್ಹಾ ಅವರು "ಡೆ ಓಫ್ ಡೆಲಿವೆರನ್ಸ" ಎಂದು ಘೊಶಿಸಿ ತಮ್ಮದೆ ಆದ ಮುಸ್ಲಿಮ್ ಪಾರ್ಟಿ ತೆಗೆದಾಗ ಅವರ ಹಿಂದೆ ಇದ್ದವರು ನಿಮ್ಮ ಅಂಬೆಡ್ಕರ್ ಅವರು.
ಯಾವಾಗಾ ಸ್ವಾತಂತ್ರ್ಯ ಭಾರತಕ್ಕೆ ಸಿಕ್ಕು ಪಾಕಿಸ್ತಾನ್ ಅನ್ನೊ ದೆಶ ಆಯಿತು, ಅಂಬೆಡ್ಕರ ಅವರಿಗೆ ಕೊಂಗ್ರೆಸ್ ನಲ್ಲಿ ಕೆಳುವವರು ಯಾರು ಇರಲಿಲ್ಲಾ. ಆಗ ಅವರು ವಲ್ಲಭೈ ಪಟೆಲ್ ಅವರ ಮನೆಗೆ ದಿನಾಲು ಹೊಗಿ ಸರ್ಕಾರದಲ್ಲಿ ವಂದು  ಪಾತ್ರ ಕೊಡಲು ಬೆಡಲಾರಂಭಿಸಿದರು. ಇ ಮಾತನ್ನು ಪಟೆಲ ಅವರ ಹೆಂಡತಿಯವರು ಅವರ ಡೈರಿಯಲ್ಲಿ ಬರದದ್ದು. ಪಟೆಲ್ ಅವರ ವತ್ತಾಯದ ಮೆರೆಗೆ ಅವರಿಗೆ ಸಂವಿಧಾನ ರಚಿಸೊ ಪಾತ್ರ ದೊರಕಿದ್ದು.
ಅವರ ಕೆಲಸಾ ಶ್ಲಾಘನೀಯ, ಆದರೆ ಅವರ ವ್ಯಕ್ತಿತ್ವಾ ಪ್ರಶ್ನ್ಯಾತೀತ. 
ನನ್ನ ಲೆಖನಕ್ಕೆ ದಾಖಲೆ, ಅರುಣ ಶೌರಿ ಅವರ ಪುಸ್ತಕ. "ವರ್ಶಿಪ್ಪಿಂಗ ಫಾಲ್ಸ ಗೌಡ್ಸ"

ವಸಂತ್ ಧ, 05/19/2010 - 20:11

       ನೋಡಿ ಪ್ರಸನ್ನರವರೆ ಅಂಬೇಡ್ಕರವರು ಯಾರ ಹಿಂದೆ ಇದ್ದರೊ ಅಥವಾ ವಲ್ಲಬಬಾಯ್ ಪಟೇಲ್ ಮನೆಯಲ್ಲಿ ಹೋಗಿ ಬೇಡಿಕೊಂಡರೊ ಅದು ನನಗೆ ಬೇಡದ ವಿಚಾರ. ನಾನು ಸಹ ಎಲ್ಲರ ಪುಸ್ತಕಗಳನ್ನು ಓದುತ್ತೇನೆ. ಎಲ್ಲರ ಆದರ್ಶಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ. ಇಲ್ಲಿ ಸ್ವಾತಂತ್ರವು ಬರುವುದಿಲ್ಲ ಯಾವುದೇ ಪಾರ್ಟಿಗಳು ಬರುವುದಿಲ್ಲ ಮತ್ತು ನೀವು ತಿಳಿಸಿದಂತೆ ವಲ್ಲಬಬಾಯ್ ಪಟೇಲ್ ಮನೆಯಲ್ಲಿ ಹೋಗಿ ಬೇಡಿಕೊಂಡರು ಎಂದು. ಡಾII ಬಿ.ಆರ್.ಅಂಬೇಡ್ಕರವರು  ಬೇಡಿಕೊಂಡರು ಸಹ ತನ್ನ ಸಾಮರ್ತ್ಯವನ್ನು ಮೀರಿ ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ತಮ್ಮ ಮಾತೃ ಭೂಮಿ ಸೇವೆಯನ್ನು ಮಾಡಿದ್ದಾರೆ. ಮತ್ತು ಅವರ ಸೇವೆಯನ್ನು ಸದಾ ನಾವುಗಳು ಮನನಮಾಡಿಕೊಳ್ಳುತ್ತಿದ್ದೇವೆ ಎನ್ನುವುದನ್ನು ಮರೆಯಬಾರದು. ಮಹಾನ್ ವೆಕ್ತಿಗಳ ಜನ್ಮದಿನವನ್ನು ನಾವು ಮರೆಯಬಾರದು. ಆದರೆ ಅವರ ವ್ಯಕ್ತಿತ್ವವನ್ನು ನಾವು ಯಾಕೆ ಪ್ರಶ್ನೀಸಬೇಕು ಇದಕ್ಕೆ ಅರ್ಥವುಂಟೆ?. ಇದು ನನಗೆ ಬೇಡವಾದ ವಿಚಾರ. ಈಗಾಗಲೇ ನಮ್ಮ ಸಮಾಜದಲ್ಲಿ ಸಾವಿರಾರು ಜಾತಿಗಳು ಹುಟ್ಟುತ್ತಲಿವೆ ಬೆಳೆಯುತ್ತಲಿವೆ ಇದು ಅವರವರ ವಿವೇಚನೆಗೆ ಬಿಟ್ಟವಿಚಾರ. ನಾನು ಡಾII ಬಿ.ಆರ್.ಅಂಬೇಡ್ಕರವರ ಜನ್ಮ ದಿನದ ಸಂದರ್ಭವಾಗಿ ಅವರ ಬದುಕಿನ ಬಗ್ಗೆ ಒಂದು ಚಿಕ್ಕ ಎಳೆಯನ್ನು ಬಿಡಿಸಿದ್ದೇನೆ. ಇಲ್ಲಿ ಯಾರು ಯಾರಿಗೆ ಶತ್ರುಗಳು ಅಲ್ಲ ಆಗೇಯೆ ಮಿತ್ರರು ಅಲ್ಲ. ಎನಿವೆ ನಿಮ್ಮ ಅಭಿಪ್ರಾಯಕ್ಕೆ ನನ್ನ ವಂದನೆಗಳನ್ನು ಸಲ್ಲಿಸುತ್ತೇನೆ.                                                                                                                       ವಸಂತ್

Prasanna82 (ಪ್ರಮಾಣಿಸಲ್ಪಟ್ಟಿಲ್ಲ.) ಧ, 05/19/2010 - 19:56

ಕ್ಷಮಿಸಿ,
ಶ್ಲಾಘನೀಯ ಪದದ ಅರ್ಥ ನಾನು ತಪ್ಪಾಗಿ ತಿಳಿದಿದ್ದೆ,
ಶ್ಲಾಘನೀಯ ಅಂದರೆ ಪ್ರಶಂಸನೀಯ ಅಂತಾ ಅನ್ಕೊಂಡಿದ್ದೆ.

Prasanna82 (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 05/20/2010 - 05:23

ಮಿತ್ರ ವಸಂತ,ತಮ್ಮ ಮಾತಿಗೆ ನನ್ನ ಸಮ್ಮತಿ ಇದೆ. ನಾನು ಅಂಬೆಡ್ಕರ ವೊಳ್ಲೆ ಕೆಲಸಾ ಮಾದಿದ್ದರೆ ಅಂತಾನೆ ಭಾವಿಸೊ ವ್ಯಕ್ತಿ. ತಮ್ಮ ಲೆಖನದ ಬಗ್ಗೆ ನನ್ನ ಮತ್ತೊಂದು  ಅಭಿಪ್ರಾಯ ಇಲ್ಲ. ಆದರೆ ಅವರ ಚರಿತ್ರೆ ತಿಳಿದುಕೊಂಡ ನನಗೆ ಅವರು ಕೂಡಾ ಭಾರತದ ವಿಭಜನೆಗೆ ಪೂರಕ ವಾದಂಥಾ ವ್ಯಕ್ತಿ ಅನ್ನೊ ಅನಿಸಿಕೆ ಬಂದಿದೆ. ಅದಕ್ಕೆ ನಾನು ಅವರ ಅನುಯಾಯಿ ಅಲ್ಲಾ.ತಮ್ಮ ಬಗ್ಗೆ ಹಾಗು ತಮ್ಮ ಲೆಖನದ ಬಗ್ಗೆ ಮಗುದೊಂದು ಮಾತು ಇಲ್ಲಾ.ಪ್ರಸನ್ನ

mohana (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 05/20/2010 - 21:20

ಪತ್ರಿಕೆಗಳ ಲೇಖನವನ್ನು ಯಥಾವತ್ತಾಗಿ ಇಲ್ಲಿ ಹಾಕುವುದು ಕೃತಿಚೌರ್ಯವಲ್ಲವೆ?

ವಸಂತ್ ಶುಕ್ರ, 05/21/2010 - 07:22

ಮೋಹನ್ ರವರೆ ನೀವು ಪತ್ರಿಕೆಯನ್ನು ಗಮನಿಸದೆ ಕೃತಿಚೌರ್ಯ ಎನ್ನುವುದು ತಪ್ಪು. ನನ್ನ ಲೇಖನಕ್ಕು ಪತ್ರಿಕೆಯಲ್ಲಿನ ಲೇಖನಕ್ಕು ಯಥಾವತ್ತಾಗಿ ಕಾಪೀ ಯಾಗಿದ್ದಲ್ಲಿ ಅದು ಕೃತಿಚೌರ್ಯವಾಗುತ್ತದೆ ನಿಜ. ಹಾಗೇನಾದರು ಯಥಾವತ್ತಾಗಿ ಕಾಪೀ ಯಾಗಿದ್ದಲ್ಲಿ ನಾನು ನನ್ನ ಬರವಣಿಗೆಯನ್ನೆ ನಿಲ್ಲಿಸುತ್ತೇನೆ. ಇಲ್ಲಿ ಯಾವ ಆಂಶಗಳನ್ನು ಯಥಾವತ್ತಾಗಿ ನಕಲು ಮಾಡಿದ್ದೇನೆ  ಎಂಬುದನ್ನು ದಯವಿಟ್ಟು ತಿಳಿಸಿಕೊಡಿ?                                                                                                       ವಸಂತ್

Basavaraj G ಶನಿ, 08/21/2010 - 19:12

ವಸಂತ ಕೋಡಿಹಳ್ಳಿ ಇವರ ಲೇಖನ ಮತ್ತು ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಓದಿದೆ. ಅವರ ಲೇಖನ ಕೃತಿ ಚೌರ್ಯ ಎನ್ನುವ ಅಂಶಕ್ಕಿಂತ ಮುಂಚೆ ಕೆಲವೊಂದು ಅಂಶಗಳ ಬಗ್ಗೆ ತಿಳಿಯಬೇಕಾಗುತ್ತದೆ. ಯಾವುದೇ ವ್ಯಕ್ತಿಯ ವ್ಯಕ್ತಿ ಚಿತ್ರಣ ಕೊಡುವಾಗ  ಆ ವ್ಯಕ್ತಿಯ ಬದುಕಿನ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ಬರೆದಂತಹ ಗ್ರಂಥಗಳು ಮೂಲವಾದ ಲೇಖನಗಳಾಗಿರುತ್ತವೆ ಅಥವಾ ಅವರನ್ನು ಬಲ್ಲ ಸಮಕಾಲೀನ ವ್ಯಕ್ತಿಗಳು ಬರೆಯುವ ಲೇಖಲನಗಳು ಮೂಲ ಲೇಖನಗಳಾಗಿರುತ್ತವೆ. ಆದರೆ ಇತರೆ ಎಲ್ಲಾ ವ್ಯಕ್ತಿಗಳು ಅವರ ಬಗ್ಗೆ ಬರೆಯುವ ಲೇಖನಗಳು ಸಂಗ್ರಹವಾಗಿರುತ್ತವೆ ಅಥವಾ ಪ್ರೇರಿಪಿತವಾಗಿರುತ್ತವೆ. ಇವುಗಳನ್ನು ಕೃತಿ ಚೌರ್ಯ ಎನ್ನಲಿಕೆ ಬರುವುದಿಲ್ಲ. ಕೆಲವು ಧೀಮಂತ ವ್ಯಕ್ತಿಗಳ ಕುರಿತು ಅಭಿನಂದನ ಗ್ರಂಥಗಳನ್ನು ಬಿಡುಗಡೆ ಮಾಡಲಾಗುತ್ತದೆ. ಈ ಗ್ರಂಥಗಳಲ್ಲಿ ಆ ವ್ಯಕ್ತಿಯನ್ನು ಬಲ್ಲವರು, ಒಡನಾಡಿಗಳು, ಮತ್ತು ಸ್ನೇತರು ತಮ್ಮದೆ ಅನುಭಗಳನ್ನು ಬರೆಯುತ್ತಾರೆ. ಇವು ಮೂಲ ಲೇಖನಗಳು. ಇಂತಹ ಅನೇಕ ಲೇಖನಗಳಿಂದ ಸಂಗ್ರಹಿಸಿ ಬರೆದ ಲೇಖನಗಳು ಕೃತಿ ಚೌರ್ಯ ಎನ್ನಲು ಬರುವುದಿಲ್ಲ. ವಸಂತಕೋಡಿಹಳ್ಳಿ ಇವರ ಲೇಖನ ಅದೇ ವರ್ಗಕ್ಕೆ ಸೇರಿರಬಹುದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.