Skip to main content

123

ಇಂದ Shafeer A.A
ಬರೆದಿದ್ದುApril 14, 2010
34ಅನಿಸಿಕೆಗಳು

[img_assist|nid=6385|title=|desc=|link=node|align=left|width=200|height=200]
ಹಾಯ್ ಪ್ರತಾಪ್...
ನಿನ್ನ ಲೇಖನಗಳನ್ನ ಮೊದಲಿನಿಂದಲೂ ಅತಿ ಹೆಚ್ಚು ಆಸಕ್ತಿಯಿಂದ ಹಾಗೂ ಅಭಿಮಾನದಿಂದ ಓದುತ್ತಾ ಬಂದಿದ್ದೇನೆ. ಕೆಲವು ಬಾರಿ ನಿನ್ನ ಬರಹಗಳಲ್ಲಿನ ದಿಟ್ಟತನಕ್ಕೆ, ನಿರ್ಭೀತತನಕ್ಕೆ ತಲೆದೂಗಿದ್ದೇನೆ. ಮತ್ತೆ ಕೆಲವಾರು ಸಾರಿ ಮುಸ್ಲಿಮರನ್ನು ಶಂಕಿಸುವ ನಿನ್ನ ಲೇಖನಗಳಿಂದ ಮುಜುಗರವನ್ನೂ ಅನುಭವಿಸಿದ್ದೇನೆ. ನೀನೊಬ್ಬ ಜವಾಬ್ದಾರಿಯುತ ಪತ್ರಕರ್ತನಾಗಿರದೇ ಹೋಗಿದ್ದರೆ ನಿನಗೆ ಈ ರೀತಿಯ ಪತ್ರ ಬರೆಯುವ ಅಗತ್ಯ ಬರುತ್ತಿರಲಿಲ್ಲ.
 ಬಲ ಪಂಥೀಯತೆಯನ್ನು ಅತ್ಯುಗ್ರವಾಗಿ ಪ್ರತಿಪಾದಿಸುವ ಎಷ್ಟೋ ಮಂದಿ ಪತ್ರಕರ್ತರು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರುಗಳು, ಲೇಖಕರುಗಳು ನಮ್ಮ ನಡುವೆ ಧಾರಾಳ ಇದ್ದಾರೆ. ಆದರೆ ಅಂತಹವರಲ್ಲಿ ನಿನ್ನದು ಅರ್ಥೈಸಲಾಗದಂತಹ ನಿಗೂಢ ಹೆಜ್ಜೆ ಮತ್ತು ವ್ಯಕ್ತಿತ್ವ.  ಹಾಗಾಗಿ ಪೂರ್ವಾಗ್ರಹ ಪೀಡಿತನಾಗಿ ನಿನ್ನ ಕುರಿತ ಒಂದು ನಿರ್ಧಾರಕ್ಕೆ ಬಂದುಬಿಡುವುದು ತಪ್ಪು ಅಂತ ಅನ್ನಿಸುತ್ತದೆ. ನೀನು ಬಲಪಂಥೀಯತೆಯನ್ನು ಎಷ್ಟೇ ಕಠಿಣವಾಗಿ ಸಮರ್ಥಿಸಿದರೂ ಸತ್ಯದೆಡೆಗೆ ನಿನ್ನ ಕಣ್ಣು ಕುರುಡಲ್ಲ. ಅನ್ಯಾಯವನ್ನು ಪ್ರತಿಭಟಿಸುವಲ್ಲಿ ನಿನ್ನ ನಂಬಿಕೆ ನಿನಗೆ ಅಡಚಣೆಯಾಗದೇ ಇರುವುದು ಇತರರಿಂದ ನಿನ್ನನ್ನು ಭಿನ್ನವಾಗಿಸುತ್ತದೆ.
ಅದಿರಲಿ, ವಿಷಯಕ್ಕೆ ಬರುತ್ತೇನೆ. ನಿನ್ನ ಹಲವಾರು ಲೇಖನಗಳನ್ನು ಓದಿದ ನಂತರ ನನಗೆ ಅನ್ನಿಸಿದ್ದೇನೆಂದರೆ ನಿನ್ನ ಅತ್ಯುಗ್ರ ಮುಸ್ಲಿಂ ವಿದ್ವೇಶದ ಹಿಂದೆ ಪ್ರಬಲ ಹಾಗೂ ಆಸಕ್ತಿದಾಯಕವಾದ ಏನೋ ಹಿನ್ನಲೆ ಇರಬೇಕೋ ಏನೋ ಅನ್ನೋದು. ಪ್ರತಾಪ್...ನಾನೊಬ್ಬ ಹುಟ್ಟಿನಿಂದ ಮುಸ್ಲಿಂ, ಮದ್ರಸಾದಲ್ಲಿ ಓದಿದ್ದೇನೆ. ಅಲ್ಲಾಹನನ್ನು ನಂಬುತ್ತೇನೆ. ನಮಾಜನ್ನೂ ಮಾಡುತ್ತೇನೆ. ಆದರೆ ನನ್ನ ನಂಬಿಕೆ ಯಾವತ್ತೂ ನನ್ನನ್ನು ಸಮಾಜದಿಂದ ವಿಮುಖಗೊಳಿಸಿಲ್ಲ. ಇಸ್ಲಾಂ ಧರ್ಮದ ಯಾವುದೇ ಆಚಾರಗಳನ್ನಾಗಲಿ ಅಳವಡಿಸಿಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸಿ, ವಿಮರ್ಷಿಸಿದ ನಂತರ ಮುಂದುವರೆಯುವುದು ನನ್ನ ಜಾಯಮಾನ.
ಇಸ್ಲಾಂ ಅನ್ನು ಅಧ್ಯಯನ ಮಾಡಿದ ನಂತರ ನಾನು ದೇಶವನ್ನು, ಬಡ ಜನರನ್ನು, ಅನ್ಯ ಧರ್ಮೀಯರನ್ನು ಎಲ್ಲಕ್ಕಿಂತ ಮಿಗಿಲಾಗಿ ಎಲ್ಲ ಮುಗ್ದ ಜನರನ್ನು ಪ್ರೀತಿಸುವುದೇ ನಿಜವಾದ ಇಸ್ಲಾಂ ಅನ್ನೋದನ್ನು ಕಲಿತನೇ ಹೊರತು ಹಿಂದೂಗಳ ತಲೆ ಕಡಿಯಿರಿ ಅನ್ನೋ ಒಂದೇ ಒಂದು ವಾಕ್ಯವನ್ನೂ ಕುರ್ ಆನ್ ನಲ್ಲಿ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ನೀನು ಲೇಖಕ, ವಿಚಾರವಂತ, ಹಾಗೂ ಜ್ಞಾನಿ. ವಿಚಾರಗಳನ್ನು ನೋಡುವ, ವಿಮರ್ಷಿಸುವ ವಿಧಾನವನ್ನು ನಿನಗೆ ಯಾರು ಹೇಳಿಕೊಡ ಬೇಕಾದದ್ದಿಲ್ಲ. ಆದರೂ..... ನಿನ್ನ ಕೆಲವು ಲೇಖನಗಳಲ್ಲಿ ತಿಳಿದೋ ತಿಳಿಯದೆಯೋ ನೀನು ಓದುಗರನ್ನು ತಪ್ಪು ದಾರಿಗೆಳಿದಿದ್ದೀಯಾ. ನೀನು ಪ್ರಜ್ಞಾಪೂರ್ವಕವಾಗಿ ಸತ್ಯವನ್ನು ಮುಚ್ಚಿಟ್ಟು ಮುಸ್ಲಿಮರ ವಿರುದ್ದ ಬರೀತಿದ್ದೀಯಾ ಅಂತ ನಾನು ಹೇಳಲ್ಲ. ಹಾಗೆ ಹೇಳುವುದು ನನ್ನ ಅಲ್ಪತನವಾಗುತ್ತದೆ ಹಾಗೂ ಮುಕ್ತ ಸಂವಾದಕ್ಕಿರುವ ಕಡೆಯ ಬಾಗಿಲನ್ನೂ ಮುಚ್ಚಿ ಹಾಕಿ ನಮ್ಮ ನೆಮ್ಮದಿಯ ನರಳಾಟವನ್ನು ಮತ್ತಷ್ಟು ತೀವ್ರ ಮಾಡುತ್ತೆ  ಎಂಬ ಸ್ಪಷ್ಟ ಅರಿವು ನನಗಿದೆ.
ವಂದೇ ಮಾತರಂ ಕುರಿತಾದ ನಿನ್ನ ಲೇಖನದಲ್ಲಿ ಆ ಗೀತೆಯನ್ನು ಹಾಡಲು ನಿರಾಕರಿಸುವವರೆಲ್ಲರೂ ದೇಶದ್ರೋಹಿಗಳು, ಅಂತವರು ದೇಶಕ್ಕಿಂತ ಹೆಚ್ಚು ಧರ್ಮವನ್ನು ಪ್ರೀತಿಸುವವರು ಎಂಬ ನೇರ ಆಕ್ರೋಶ ಭರಿತ ಆರೋಪವನ್ನು ಮಾಡಿದ್ದೀಯಾ. ನಿನ್ನಂತಹ ಯುವ, ತೀಕ್ಷ್ಣಮತಿಯ ಲೇಖಕನೊಬ್ಬ ತನ್ನ ಬರಹಗಳನ್ನು ಓದುವ , ಅದನ್ನು ನಂಬುವ ಹಾಗೂ ಅದಕ್ಕೆ ಪ್ರತಿಕ್ರಿಯಿಸುವ ಸಾವಿರಾರು ಮಂದಿ ಓದುಗರಿದ್ದಾರೆ ಅನ್ನೋದನ್ನು ಮರೆತು ವಿಪರೀತ ಭಾವಪರವಶನಾಗಿ ಮೊದಲೇ ಭಾವನಾತ್ಮಕ ಹಾಗೂ ಸೂಕ್ಷವಾಗಿರುವ  ವಿಷಯದ ಬಗ್ಗೆ ಬರೆದಿದ್ದು ತುಂಬಾ ನೋವು ತಂತು. ಸ್ವಲ್ಪ Calm ಆಗಿ ಯೋಚಿಸು ಪ್ರತಾಪ್....ನೀನು ಹೇಳಿದ್ದು ನಿಜಕ್ಕೂ ಸರೀನಾ? ಅಷ್ಟ್ಟಕ್ಕೂ ದೇಶ ಅನ್ನೋ ಪದದ ಅರ್ಥ ಏನು ಪ್ರತಾಪ್...? ದೇಶ ಅನ್ನೋದು ಕೇವಲ ಭಾವನಾತ್ಮಕ  ವಿಷಯವಾ? ರಾಜ್ಯಶಾಸ್ತ್ರದಲ್ಲಿ ರಾಜ್ಯದ(ದೇಶ) ಮೂಲಭೂತ ಅಂಶಗಳೆಂದರೆ  ನಿರ್ದಿಷ್ಟ ಭೂ ಪ್ರದೇಶ, ಜನ, ಸರಕಾರ, ಸಾರ್ವಭೌಮತ್ವ ಅಂತ ಓದಿದ ನೆನಪು. ಆ ನೆಲೆಗೆಟ್ಟಿನಲ್ಲಿ ಭಾರತ ಒಂದು ದೇಶ ಎನಿಸಿಕೊಳ್ಳ ಬೇಕಾದರೆ ಜನ ಮುಖ್ಯ. ಈ ಜನರಷ್ಟೂ ಒಂದೇ ಧರ್ಮವನ್ನು, ಒಂದೇ ರಾಜಕೀಯ ಸಿದ್ದಾಂತವನ್ನು ನಂಬ ಬೇಕು ಮತ್ತು ಅದರಂತೆ ಜೀವಿಸ ಬೇಕು ಅನ್ನೋದು ಸರೀನಾ? ಹಾಗೆ ಹೇಳುವುದೇ ಆದರೆ ರಕ್ತ ಪಿಪಾಸು ಹಿಟ್ಲರ್, ಮುಸಲೋನಿಗಳಿಗೂ ನಮಗೂ ಏನಾದ್ರೂ ವ್ಯತ್ಯಾಸ ಅನ್ನೋದು ಇರುತ್ತಾ?
ಒಂದು ಮಾತನ್ನು ಯಾವತ್ತೂ ಅರ್ಥ ಮಾಡಿಕೋ ಪ್ರೀತಿಯ ಪ್ರತಾಪ್. ನಾವು ಯಾವಾಗ ಒಂದು ವಿಷಯದ ಕುರಿತು ಅತಿ ಭಾವುಕತೆಯಿಂದ ಚಿಂತಿಸಲು ಪ್ರಾರಂಭಿಸಿ ಬಿಡುತ್ತೇವೋ ಆವಾಗ ವಾಸ್ತವತೆ ಅನ್ನೋವುದು ನಮ್ಮ ಕಣ್ಣಿಗೆ ಕಾಣಿಸೋಲ್ಲ.  ಪ್ರೇಮದ ಪಾಶಕ್ಕೆ ಬಿದ್ದ ಹದಿಹರೆಯದ ಹುಡುಗ ಹುಡುಗಿಯರಿಗೆ ಹೆತ್ತ ತಾಯಿ ತಂದೆ ಶತ್ರುಗಳಾಗಿಯೂ ತನು ಮನಕ್ಕೆ ಮುದ ಕೊಡುವ Lover ಸ್ವಂತ ಪ್ರಾಣದಂತೆಯೂ ಅನ್ನಿಸಲು ಶುರುವಾಗುತ್ತದೆಯಲ್ಲ..ಹಾಗೆನೇ ಇದೂ ಕೂಡ. ಆದ್ದರಿಂದ ದೇಶಪ್ರೇಮ, ಗೋಹತ್ಯೆ, ಮತಾಂತರ, ಭಯೋತ್ಪಾದನೆಗಳಂತಹ ಸೂಕ್ಷ್ಮ ವಿಷಯಗಳಿಗೆ ಬಂದಾಗ ಭಾವನೆಗಳೆಷ್ಟೇ ಉಕ್ಕಿ ಬಂದರೂ ಅಂತಹ Sentiments ಗಳೆಲ್ಲವನ್ನೂ ಪಕ್ಕಕ್ಕಿಟ್ಟು ಕೊಂಚ Realistic ಆಗಿ ಚಿಂತಿಸ ಬಾರದೇ?
ದೇಶ ಅಂದರೆ ಪಾಕಿಸ್ತಾನವನ್ನು ನೆನಸಿಕೊಂಡು ಡಿಸ್ಕಂಫರ್ಟ್ ಆಗೋ ಬದಲು ನಮ್ಮ ಜನರನ್ನು ಜಾತಿಯ, ಧರ್ಮದ ಹಂಗಿಲ್ಲದೆ ಪ್ರೀತಿಸಲು ಸಾಧ್ಯವಾದರೆ ಅದಕ್ಕಿಂತ ದೊಡ್ಡ ದೇಶಪ್ರೇಮ ಬೇರೇನಿದೆ? ದೇಶವಿಭಜನೆ ಅನ್ನೋದು ಐತಿಹಾಸಿಕ ಮಹಾ ಪ್ರಮಾದ. ಆ ತಪ್ಪು ಸರಿಪಡಿಸಲಾಗದ ವ್ರ‍ಣವಾಗಿ ಹೋಗಿ ಕಾಲಗಳೆಷ್ಟೋ ಉರುಳಿಹೋಗಿವೆ. ಇನ್ನು ಅದನ್ನು ಪರಚಿ ಸದಾ ಈ ದೇಶ ನರಳುತ್ತಿರ ಬೇಕಾ? ವಂದೇ ಮಾತರಂ ಹಾಡಲು ಒಲ್ಲೆ ಅನ್ನೋ ಏಕೈಕ ಕಾರಣಕ್ಕೆ ಮುಸ್ಲಿಮರಿಗೆ ದೇಶಕ್ಕಿಂತ ದೊಡ್ಡದು ಅವರ ಧರ್ಮ, ಒಂದು ವೇಳೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಭಾರತವನ್ನು ಆಕ್ರಮಿಸಿದರೆ ಇಲ್ಲಿನ ಮುಸ್ಲಿಮರು ಸ್ವಧರ್ಮೀಯರು ಅನ್ನೋ ನೆಲೆಯಲ್ಲಿ ಅವರ ಪರ ನಿಲ್ಲಲಾರರು ಅನ್ನೋದಕ್ಕೆ ಏನು ಗ್ಯಾರಂಟಿ? ಅನ್ನೋ ನಿನ್ನ ಪ್ರಶ್ನೆ ತುಂಬಾ childish ತರ ಅನ್ನಿಸಿತು.
ಪ್ರತಾಪ್...ಭಾರತದಲ್ಲಿ ಜರುಗೋದಕ್ಕಿಂತ ಎಷ್ಟೋ ಪಟ್ಟು ಬಾಂಬ್ ಸ್ಪೋಟಗಳು ದಿನ ನಿತ್ಯ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇರಾಕ್ ಗಳಲ್ಲಿ ನಡೆಯುತ್ತಿದೆ. ಅಲ್ಲೆಲ್ಲಾ ಈ ಮುಸ್ಲಿಮರನ್ನು ಕೊಲ್ಲುತ್ತಿರುವುದು ಮುಸ್ಲಿಮರೇ. ಕಾಶ್ಮೀರದಲ್ಲಿ ಮುಸ್ಲಿಮರನ್ನು ಕೊಲ್ಲುತ್ತಿರುವುದೂ ಮುಸ್ಲಿಮರೇ. ಮಸೀದಿಗಳಲ್ಲಿ ಬಾಂಬ್ ಇಟ್ಟು ಅಟ್ಟಹಾಸ ಗೈಯುವರೂ ಮುಸ್ಲಿಮರೇ.. ಅಂದ ಹಾಗೆ ಕಾಶ್ಮೀರದಲ್ಲಿ ಮನೆಗೆ ನುಗ್ಗಿದ ಉಗ್ರನ ಎದೆಗೆ ಗುಂಡಿಟ್ಟ ರುಕ್ಸಾನಳೂ ಮುಸ್ಲಿಮಳೇ.. ಇಸ್ಲಾಮಿನ ಚರಿತ್ರೆಯಲ್ಲೇ ಮುಸ್ಲಿಮರು ಪರಸ್ಪರ ಯುದ್ದ ಮಾಡಿ ಸತ್ತ ನೂರಾರು ಘಟನೆಗಳು ನಡೆದಿದೆ. ಇದನ್ನೆಲ್ಲಾ ಯಾಕೆ ಹೇಳ್ತಿದ್ದೀನಿ ಎಂದರೆ ಪಾಕಿಸ್ತಾನಿಯೊಬ್ಬ ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ಭಾರತೀಯ ಮುಸ್ಲಿಮನಿಗೆ ಪ್ರಿಯವಾಗಿ ಬಿಡುವುದಿಲ್ಲ.
ನೆರೆ ಮನೆಯವನನ್ನು ಪ್ರೀತಿಸು ಎಂದು ಕಲಿಸುವ ಅದೇ ಇಸ್ಲಾಂ ದುರುಳ ಮುಸ್ಲಿಮರ ಕೈ ಕಡಿಯಲಿಕ್ಕೂ, ತಲೆ ಕಡಿಯಲಿಕ್ಕೂ ಹೇಳಿದೆ. ಅಂತಹ ಇಸ್ಲಾಂನಿಂದ ಸ್ಪೂರ್ತಿಪಡೆದ ಭಾರತೀಯ ಮುಸ್ಲಿಂನಿಂದ ಪಾತಕಿ ಮುಸ್ಲಿಮರಿಗೆ ಸಿಗೋದು ಕಾಶ್ಮೀರದ ರುಕ್ಸಾನ ನೀಡಿದಂತಹ ಉತ್ತರವೇ ಹೊರತು ಹೂ ಹಾರದ ಸ್ವಾಗತ ಅಲ್ಲ. ಆದ್ದರಿಂದ ಪ್ರೀತಿಯ ಪ್ರತಾಪ್....ನಿನ್ನಲ್ಲಿ ನನ್ನ ಅತೀ ವಿನಯದ ಕಳಕಳಿ ಏನೆಂದರೆ ವಂದೇ ಮಾತರಂಗೂ ಮುಸ್ಲಿಮರ ದೇಶಭಕ್ತಿಗೂ ನೀನು ವಿಚಿತ್ರ ಸಂಬಂಧ ಕಲ್ಪಿಸಬೇಡ. ಅಷ್ಟಕ್ಕೂ ವಂದೇ ಮಾತರಂ ಅನ್ನು ಯಾವ ಮುಸ್ಲಿಮನೂ ಅವಹೇಳನ ಮಾಡಲ್ಲ.
ಮೂರ್ತಿ ಪೂಜೆ ಮತ್ತು ಭೂಮಿ ಪೂಜೆ ಇಸ್ಲಾಂನ ಮೂಲಭೂತ ನಿಯಮಗಳಿಗೆ ವಿರುದ್ದ ಅನ್ನೋ ಕಾರಣಕ್ಕೆ ಮುಸ್ಲಿಮರು ಮೂಲ ವಂದೇ ಮಾತರಂ ಅನ್ನು ಹಾಡಲು ಒಲ್ಲೆ ಅನ್ನುತ್ತಿದ್ದಾರೆಯೇ ಹೊರತು  ಅದನ್ನು ಇತರರು ಯಾರು ಹಾಡಬೇಡಿ ಅನ್ನುತ್ತಿಲ್ಲ. ಮೂರ್ತಿಪೂಜೆಯನ್ನು ಒಪ್ಪದ ಇಸ್ಲಾಂ ಹೇಗೆ ಇತರ ಧರ್ಮೀಯರ ಧಾರ್ಮಿಕ ಸಂಕೇತ ಹಾಗೂ ಭಾವನೆಗಳನ್ನು ಗೌರವಿಸಿ, ಆದರೆ ದೇವನೊಬ್ಬನನ್ನು ಬಿಟ್ಟು ಬೇರೆ ಯಾರ ಮುಂದೆಯೂ ಮಂಡಿಯೂರದಿರಿ ಅನ್ನುತ್ತದೋ ಇದೂ ಹಾಗೆ. ಅಷ್ಟಕ್ಕೂ "ಸಾರೇ ಜಹಾಂಸೆ ಅಚ್ಚಾ...ಹಿಂದುಸ್ತಾನ್ ಹಮಾರ" ಗೀತೆ ಕೂಡ ಭಾರತದ ವೈಭವವನ್ನು ಕೊಂಡಾಡುವ ಗೀತೆಯೇ ಅಲ್ಲವೇ..? ಧಾರ್ಮಿಕ ನಂಬಿಕೆಗಳಿಗೆ ಮುಜುಗರ ಕೊಡದ ಈ ಗೀತೆಯನ್ನು ಮುಸ್ಲಿಮರು ಹಾಡಿದರೆ ಸಾಲದೇ?
ಕೊನೆಗೊಂದು ಮಾತು ಪ್ರತಾಪ್....ಈವತ್ತು ಇಸ್ಲಾಂ ಹೆಸರಿನಲ್ಲಿ ಜಗತ್ತಿನಲ್ಲಿ ಏನು ನಡೆಯುತ್ತಿದೋ ಅದೆಲ್ಲಾ ಇಸ್ಲಾಮ್ ಸಿದ್ದಾಂತವಂತೂ ಖಂಡಿತ ಅಲ್ಲ. ಹಾಗೆ ಈವತ್ತು ಮುಸ್ಲಿಮರು ಅಂತ ಯಾರಿದ್ದಾರೋ ಅವರೆಲ್ಲಾ ನಿಜವಾದ ಮುಸ್ಲಿಮರೂ ಅಲ್ಲ. ಇವತ್ತಿನ ಮುಸ್ಲಿಮರನ್ನು ಇಸ್ಲಾಂನಿಂದ ಬೇರ್ಪಡಿಸಿದಾಗ ಮಾತ್ರ ಇಸ್ಲಾಮಿನ ನಿಜವಾದ ಚೌಕಟ್ಟನ್ನು ಅರ್ಥೈಸಿಕೊಳ್ಳಲು ಸಾಧ್ಯ. ಹೇಗೆ ವೇದೋಪನಿಷತ್ತುಗಳಿಂದ ಹಿಂದೂ ಸಮಾಜ ಬಹು ದೂರ ಸರಿದಿದೆಯೋ ಹಾಗೆಯೇ ಕೆಲವೊಂದು ಬಾಹ್ಯ ಸಂಕೇತಗಳನ್ನು ಬಿಟ್ಟರೆ ಕುರ್ ಆನ್ ಮತ್ತು ಹದೀಸ್ಗಳಿಂದ ಮುಸ್ಲಿಮರೂ ಭಾರೀ ಪಥಭ್ರಷ್ಟತೆಗೆ ಒಳಗಾಗಿರೋದು ಸತ್ಯ.
ಇಂತಿ ನಲ್ಮೆಯ
Shafeer A.A
Bangalore

 
 
 

ಲೇಖಕರು

Shafeer A.A

ಹೃದಯದ ಕದ ತೆರೆದು

ಅನಿಸಿಕೆಗಳು

ನಾಗೇಶ ಗೌಡ, ಬೆ೦ಗಳೂರು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/15/2010 - 23:18

ಅಲ್ಲಾ ಸ್ವಾಮಿ ಅವರಿಗೆ ಹೆಸರುವಾಸಿಯಾಗಬೇಕೆ೦ದು ಆಸೆ ಆದ್ದರಿ೦ದ ನೀವು ಬೆಸರಗೊಳ್ಳಬೇಡಿ ಇ೦ತವರು ಭಾರತದಲ್ಲಿ ೨% ಅಥವ ೩% ಇದ್ದಾರೆ ಅಷ್ಟೆ ಕೆಲವರು ಹೀಗೇನೆ ಸ್ಯಾಡಿಷ್ಟುಗಳು. ಸಮಾಜಕ್ಕೆ ಒಳ್ಳೆಯದನ್ನು ಕೊಟ್ಟು ಹೆಸರು ಮಾಡಲು ಇವನಿ೦ದ ಸಾದ್ಯವಿಲ್ಲಾ ಆದ್ದರಿ೦ದ ಇ೦ಥ ಕುಹಕಗಳು ಹುಟ್ಟುತ್ತಾರೆ. ಇವನ ಬರಹಗಳನ್ನು ಇ೦ಥವರೆ ಕೆಲವು ಸ್ಯಾಡಿಷ್ಟುಗಳು ಓದಿ ಕರುಬುತ್ತಾರೆ. ದ್ವೇಶ ಸಾಹಿತ್ಯ ಮಾತ್ರ ಓದೊ ಕಾಯಿಲೆ ಮತ್ತು ಬರಿಯೊ ಕಾಯಿಲೆ ಸ್ವಾಮಿ ಇ೦ಥವರನ್ನು ಹೀಗೆ ಬಿಟ್ಟು ಬಿಡಬೇಕು. ಇವನ ಪತ್ರ ಕರ್ತ ಕೆಲಸವಲ್ಲ ಒ೦ದು ಹಾದರ ಅಷ್ಟೆ.
ನಾಗೇಶ ಗೌಡ, ಬೆ೦ಗಳೂರು

ಬಾಲ ಚಂದ್ರ ಶುಕ್ರ, 04/16/2010 - 10:46

ಪ್ರೀತಿಯ ಶಫೀರ್,
ನಿಮಗಿರುವಷ್ಟು ಸೌಜನ್ಯ, ವಿನಯ, ತನ್ನ ತಪ್ಪನ್ನು ಒಪ್ಪಿಕೊೞುವಷ್ಟು ಋಜುತ್ವ ಎಲ್ಲಾ ಮುಸ್ಲಿಮರಿಗೂ ಇದ್ದಿದ್ದರೆ ಪ್ರತಾಪಸಿಂಹರಿಗೆ ಕೆಲಸವೇ ಇರುತ್ತಿರಲಿಲ್ಲ. ಆದರೂ ನಿಮ್ಮ ಲೇಖನದ ಕೆಲವು ಮಾತುಗಳಿಗೆ ನನ್ನ ಭಿನ್ನಾಭಿಪ್ರಾಯವನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.
ಎಲ್ಲಾ ದೇಶಗಳುಲ್ಲೂ ದೇಶಪ್ರೇಮಿ ಎಂಬ ಪದ ಬಳಕೆಯಲ್ಲಿದೆ. ನಮ್ಮ ಭಾರತದಲ್ಲಿ ಮಾತ್ರ ಅದನ್ನು ದೇಶಭಕ್ತ ಎನ್ನುತ್ತಾರೆ. ಭಾರತೀಯನಾಗಿದ್ದರೆ ಅವನಿಗೆ ಮೊದಲು ದೇಶ ಮುಖ್ಯ, ನಂತರ ಧರ್ಮ. ವಂದೇ ಮಾತರಂ ಎಂಬುದು ನಮ್ಮ ದೇಶವನ್ನು ಹಾಡಿ ಹೊಗಳಿದ ದೇಶಭಕ್ತಿ ಗೀತೆಯಾಗಿರುವಾಗ ಈ ದೇಶದ ಪ್ರತಿಯೊಬ್ಬನೂ ಅದನ್ನು ಹಾಡುವುದು, ಅದಕ್ಕೆ ಗೌರವಿಸುವುದು ಅವನ ಕರ್ತವ್ಯ. ಅವನು ಮುಸಲ್ಮಾನನೇ ಆಗಲಿ ಅವರಪ್ಪನೇ ಆಗಿರಲಿ. ಅದನ್ನು ಹಾಡಬೇಡಿ ಎಂದು ಮುಸ್ಲಿಮರಿಗೆ ಫರ್ಮಾನು ಹೊರಡಿಸಲು ಅವನ್ಯಾವ ತೋಳಾಂಡಿ ನಾಯಕ ಹೇಳಿ. ಅವನಂತಹ ಕರ್ಮಠನಾಗಿದ್ದರೆ ಈ ದೇಶದ ಕೂಳು ಯಾಕೆ ತಿನ್ನಬೇಕು ಹೇಳಿ? ಕರ್ಮಠ ಮುಸ್ಲಿಂ ದೇಶಗಳಾದ ಪಾಕಿಸ್ತಾನ ,ಆಫಘಾನಿಸ್ತಾನ ಇವೆಯೆಲ್ಲ. ಇದನ್ನು ಹಾಡಬೇಡಿ ಅದನ್ನು ಆಚರಿಸಬೇಡಿ ಎಂದರೆ ತಾವೇ ಹೇಳಿದಂತೆ ಅವನ್ಯಾವ ಹಿಟ್ಲರಿಗೆ ಕಡಿಮೆಯಾದಾನು?
ದೇಶಪ್ರೇಮ, ಗೋಹತ್ಯೆ, ಮತಾಂತರ, ಭಯೋತ್ಪಾದನೆಗಳಂತಹ ಸೂಕ್ಷ್ಮ ವಿಷಯಗಳಿಗೆ ಬಂದಾಗ ಭಾವನೆಗಳೆಷ್ಟೇ ಉಕ್ಕಿ ಬಂದರೂ ಅಂತಹ Sentiments ಗಳೆಲ್ಲವನ್ನೂ ಪಕ್ಕಕ್ಕಿಟ್ಟು ಕೊಂಚ Realistic ಆಗಿ ಚಿಂತಿಸ ಬಾರದೇ? ಎಂದು ಪ್ರಶ್ನಿಸಿದ್ದೀರಲ್ಲ. ಇಲ್ಲಿ ಭಯೋತ್ಪಾದನೆಯಿಂದ ತೊಂದರೆಗೊಳಗಾಗುತ್ತಿರುವರು ಯಾರೋ ಕಲ್ಲು ಮಣ್ಣುಗಳಲ್ಲ ಅದನ್ನು ಪಕ್ಕಕ್ಕಿಟ್ಟು ಯೋಚಸಲು. ನಮ್ಮ ಅಣ್ಣ ತಮ್ಮಂದಿರು,ಬಂಧುಗಳು ಬಹುಷಃ ನಾಳೇ ನಾವೂ ಕೂಡಾ. ಯಾಕೆಂದರೆ ಬೆಂಗಳೂರಿನಲ್ಲೂ ಒಮ್ಮೆ ಬಾಂಬ್ ಸ್ಪೋಟವಾಗಿದೆಯಲ್ಲಾ.
ಭಾರತದ ಮುಸ್ಲಿಮರೂ ಕೂಡ,ಬಾಬರಿ ಮಸೀದಿ ದ್ವಂಸ, ಬುರ್ಖಾ, ಮರ್ಯಾದಾ ಹತ್ಯಾ, ವಂದೇ ಮಾತರಂ ನಿಷೇಧ ಮುಂತಾದ sentiments ಗಳೆನ್ನೆಲ್ಲಾ ಪಕ್ಕಕ್ಕಿಟ್ಟು ಕೊಂಚ Realistic ಆಗಿ ಚಿಂತಿಸಬಾರದೇ?
ವಂದೇ ಮಾತರಂ ಹಾಡಲು ಒಲ್ಲೆ ಅನ್ನೋ ಏಕೈಕ ಕಾರಣಕ್ಕೆ ಮುಸ್ಲಿಮರಿಗೆ ದೇಶಕ್ಕಿಂತ ದೊಡ್ಡದು ಅವರ ಧರ್ಮ, ಒಂದು ವೇಳೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಭಾರತವನ್ನು ಆಕ್ರಮಿಸಿದರೆ ಇಲ್ಲಿನ ಮುಸ್ಲಿಮರು ಸ್ವಧರ್ಮೀಯರು ಅನ್ನೋ ನೆಲೆಯಲ್ಲಿ ಅವರ ಪರ ನಿಲ್ಲಲಾರರು ಅನ್ನೋದಕ್ಕೆ ಏನು ಗ್ಯಾರಂಟಿ? ಅನ್ನೋ ನಿನ್ನ ಪ್ರಶ್ನೆ ತುಂಬಾ childish ತರ ಅನ್ನಿಸಿತು.
ಉಫ್!!!!!!! ಶಫೀರಣ್ಣ, ಯಾಕೋ ನಿಮ್ಮ ಮಾತು ತುಂಬಾ childish ಅನ್ನಿಸುತ್ತಿದೆ. ಅವರನ್ನು ಅನುಮಾನಿಸಲು ವಂದೇ ಮಾತರಂ ಹಾಡದೇ ಇದ್ದದ್ದು ಒಂದೇ ಕಾರಣ ಅಂದು ಕೊಂಡರೆ ಅದು ನಿಮ್ಮ utter foolishness.  ನಮ್ಮ ಬೆಂಗಳೂರಿನ ಗುರಪ್ಪನ ಪಾಳ್ಯ, ಮುಂತಾದ ಕಡೆ ವರ್ಷಾನುಗಟ್ಟಲೆಯಿಂದ ವಾಸಿಸುತ್ತಿರುವ ಮುಸ್ಲಿಮರಲಲ್ಲೇ ಕೆಲವರು, ಸ್ವಲ್ಪ ದಿನಗಳ ಹಿಂದೆ ಬಾಂಬು, ಸ್ಯಾಟ್ ಫೋನ್, ಎ ಕೆ ೪೭ ಮುಂತಾದ ಆಟದ ವಸ್ತುಗಳೊಂದಿಗೆ ಸಿಕ್ಕಿಹಾಕಿಕೊಂಡರಲ್ಲ ಅವರೆಲ್ಲ ಹೊಟ್ಟೆಗೆ ಅನ್ನ ತಿನ್ನುತ್ತಿದ್ದರೋ? ಅಥವಾ..............
ಇಂತಹ ಜನದ ಬಗ್ಗೆಯೇ ಅಲ್ಲವೇ ಪ್ರತಾಪ್ ಸಿಂಹ ಅನುಮಾನಿಸಿದ್ದು. ಈಗ ಹೇಳಿ, ಒಂದು ವೇಳೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಭಾರತವನ್ನು ಆಕ್ರಮಿಸಿದರೆ ಇಲ್ಲಿನ ಮುಸ್ಲಿಮರು ಸ್ವಧರ್ಮೀಯರು ಅನ್ನೋ ನೆಲೆಯಲ್ಲಿ ಅವರ ಪರ ನಿಲ್ಲಲಾರರು ಅನ್ನೋದಕ್ಕೆ ಏನು ಗ್ಯಾರಂಟಿ?
ಪ್ರತಾಪ್...ಭಾರತದಲ್ಲಿ ಜರುಗೋದಕ್ಕಿಂತ ಎಷ್ಟೋ ಪಟ್ಟು ಬಾಂಬ್ ಸ್ಪೋಟಗಳು ದಿನ ನಿತ್ಯ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇರಾಕ್ ಗಳಲ್ಲಿ ನಡೆಯುತ್ತಿದೆ. ಅಲ್ಲೆಲ್ಲಾ ಈ ಮುಸ್ಲಿಮರನ್ನು ಕೊಲ್ಲುತ್ತಿರುವುದು ಮುಸ್ಲಿಮರೇ. ಕಾಶ್ಮೀರದಲ್ಲಿ ಮುಸ್ಲಿಮರನ್ನು ಕೊಲ್ಲುತ್ತಿರುವುದೂ ಮುಸ್ಲಿಮರೇ, ಅಂತಾ ಒಂದೇ ಲೈನಿನಲ್ಲಿ ಅವರ ಎರಡೂ ಮುಖಗಳನ್ನು ತೋರಿಸುತ್ತಿದ್ದೀರಲ್ಲಾ ನಿಮಗೆ ಅಭಿನಂದನೆಗಳು.
ಪಾಕಿಸ್ತಾನದಲ್ಲಿ,ಬಾಂಗ್ಲಾದೇಶದಲ್ಲಿ ಇರಾಕ್ ನಲ್ಲಿ ಅವರ ಜನರನ್ನು ಅವರು ಸಾಯಿಸಿಕೊಂಡು ಆನಂದಿಸಲಿ ಇದುವರೆಗೂ ಶಾಂತಪ್ರಿಯತೆಯನ್ನು ಕಾಪಾಡಿಕೊಂಡು ಬಂದಿರುವ ಭಾರತದ ಮೇಲ್ಯಾಕೆ ಅವರ ಕಣ್ಣು? ಹೇಳಿ ಶಫೀರ್
ಕಾಶ್ಮೀರದಲ್ಲಿ ಮುಸ್ಲಿಮರನ್ನು ಕೊಲ್ಲುತ್ತಿರುವುದೂ ಮುಸ್ಲಿಮರೇ ಹಾಗೂ ಹೆಸರುವಾಸಿಯಾಗಿದ್ದ ಸಾವಿರಾರು ಹಿಂದೂ ಬ್ರಾಹ್ಮಣ ಪಂಡಿರನ್ನು ಕೊಂದವರೂ ಮುಸ್ಲಿಮರೇ.ಈ ವಿಷಯ ಗೊತ್ತಿದ್ದೂ ತಾವು ಮುಚ್ಚಿಡುತ್ತೀರಿ ಅಲ್ಲವೇ?
ಮೊನ್ನೆ ಮುಂಬೈ ಸ್ಪೋಟನಡೆದಾಗ ಅಲ್ಲಿನ ಕೆಲವು ಉಗ್ರರು ತಮಗೆ ನೀರು ತಂದು ಕೊಟ್ಟ ವ್ಯಕ್ತಿಯನ್ನು ಹೆಸರು ಕೇಳಿ ಅವನು ಹಿಂದೂ ಎಂದು ಗೊತ್ತಾದಾಗ ಗುಂಡಿಟ್ಟರಲ್ಲವೇ? ಇದಕ್ಕೇನೆನ್ನುತ್ತೀರಿ ಸಾಬ್?
ಕರ್ನಾಟಕದಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶವೊಂದರಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದವರೂ ಮುಸ್ಲಿಮರೇ?
ಇಂದಿಗೂ ಭಟ್ಕಳ, ಉಡುಪಿ, ಹೊನ್ನಾವರ, ಮಂಗಳೂರು ಮುಂತಾದ ಕಡೇ ಸಿಕ್ಕಿಹಾಕಿಕೊಂಡಿರುವ  ನೂರಾರು ಭಯೋತ್ಪಾದಕರು ಹಾಗು ಉಗ್ರಗಾಮಿಗಳೆಂದು ಕರೆಸಿಕೊೞುವ ಷಂಡರೂ ಕೂಡ ಮುಸ್ಲಿಮರೇ. ಅದೂ ಪಾಕಿಸ್ತಾನದವರಲ್ಲ. ನಮ್ಮ ದೇಶದ ಅನ್ನ ತಿನ್ನುತ್ತಿರುವ ಸ್ಥಳೀಯ ಮುಸ್ಲಿಮರು.
ಸಾಕ ಶಫೀರಣ್ಣ.
ಕೊನೆಯದಾಗಿ,
ನೆನಪಿಟ್ಟುಕೊೞಿ ಅವಮಾನ ಆಗಬಾರದೆಂದರೆ ಅನುಮಾನಸ್ಪದವಾಗಿರಬಾರದು.
 ಬದಲಾಯಿಸಲು ಪ್ರಯತ್ನಿಸಬೇಡಿ, ಬದಲಾಗಿ
ದಯವಿಟ್ಟು
 
ಸಸ್ನೇಹ
ಬಾಲಚಂದ್ರ
 
 
 
 
 
 

Shafeer A.A ಶುಕ್ರ, 04/16/2010 - 13:25

ಪ್ರೀತಿಯ ಬಾಲ ಚಂದ್ರರವರೇ’ನನ್ನ ಬರಹಕ್ಕೆ ಪ್ರತಿಕ್ರಿಯಿಸಿದ ತಮಗೆ botttom of heart ನಿಂದ ತುಂಬಾ ಧನ್ಯವಾದಗಳು. ನಾವು ಯಾವುದೇ ಒಂದು ಸಿದ್ದಾಂತದ ಪರ ಅಥವಾ ವಿರೋಧ ಇದ್ದು ಕೊಂಡು ಚರ್ಚಿಸಲು ಹೊರಟರೆ ನಮ್ಮ ಕಣ್ಣಿಗೆ ಕಾಣುವುದು ಕೇವಲ ಸಮಸ್ಯೆಯ ಒಂದು ಮಗ್ಗುಲು ಮಾತ್ರವೇ ಹೊರತು ವಾಸ್ತವಿಕತೆ ಎಂಬುದಲ್ಲ. ಆದ್ದರಿಂದ ಈ ಚರ್ಚೆಯ ಮಟ್ಟಿಗೆ ಈ ಹಿಂದೂ ಮುಸ್ಲಿಂ ಎಂಬ ಕಮ್ಮಟತನದಿಂದ ನಮ್ಮನ್ನು ಸ್ವಲ್ಪ ದೂರವಿಟ್ಟು Neutral ಆಗಿ ಆಲೋಚಿಸೋಣ. ನಾವೆಲ್ಲಾ ಹಿಂದು, ಮುಸ್ಲಿಂ, ಕ್ರೈಸ್ತ, ಯಹೂದಿ ಹೀಗೆ ನಾನಾ ಧರ್ಮಗಳ ಅನುಯಾಯಿಗಳಾಗಿ ಹುಟ್ಟಿರುವುದು, ಅಥವಾ ಬದುಕುತ್ತಿರುವುದು ಕೇವಲ ಆಕಸ್ಮಿಕವೇ ಹೊರತು ನಮ್ಮ ದೊಡ್ಡಸ್ತಿಕೆಯ ಫಲವಾಗಿ ಅಲ್ಲ.  ಭಾರತದಲ್ಲೇ ಹುಟ್ಟ ಬೇಕು ಅಂತ ನಾನಾಗಲೀ ನೀವಾಗಲಿ ದೇವರಿಗೆ APPLICATION ಏನು ಹಾಕಿರಲಿಲ್ಲ ಅನ್ನೋದು ಸತ್ಯ ತಾನೇ? ನಾವು ಆಕಸ್ಮಿಕವಾಗಿ ಈ ನೆಲದಲ್ಲಿ ಹುಟ್ಟಿದ್ದೇವೆ. ಹುಟ್ಟಿದಾಗ ನಮಗೆ ಜಾತಿ ಇರಲಿಲ್ಲ. ಧರ್ಮ ಇರಲಿಲ್ಲ. ಆಮೇಲೆ  ನಾವು ಈ ಜಾತಿ, ಧರ್ಮ ಎಂಬ ಬಂಧನಕ್ಕೆ ನಾವು ಸಿಲುಕಿ ಕೊಂಡದ್ದು ನಮ್ಮ ಮನೆಯ ವಾತಾವರಣ ಹಾಗೂ ಸುತ್ತ ಮುತ್ತಲಿನ ಸಮಾಜದ ಪ್ರಭಾವದಿಂದ. ಕೆಲವೊಮ್ಮೆ ಇಂತಹ ಅಂಶಗಳು ನಮ್ಮ ಮೇಲೆ ವಿಪರೀತವಾಗಿ ಹಾಗೂ ಅನಾರೋಗ್ಯಕರ ಪ್ರಮಾಣದಲ್ಲಿ ಪ್ರಭಾವ ಬೀರತೊಡಗಿದಾಗ ಮತಾಂಧತೆ ಎಂಬ ಕಾಯಿಲೆ ನಮ್ಮನ್ನು ಭಾಧಿಸಿ ಮೆದುಳನ್ನು ಜಡತ್ವಕ್ಕೆ ತಳ್ಳಿ ಬಿಡುತ್ತದೆ. ಆಮೇಲೆ ನಮ್ಮ ದೃಷ್ಟಿಕೋನ ಕೇವಲ ಏಕಮುಖವಾಗಿ ಕೆಲಸ ಮಾಡತೊಡಗುತ್ತದೆ. ದುರದೃಷ್ಟಕ್ಕೆ ನಮ್ಮಲ್ಲಿ ಹಿಂದು ಹಾಗೂ ಮುಸಲ್ಮಾನರು ಸಮಾನ ಪ್ರಮಾಣದಲ್ಲಿ ಇಂತಹ ಜಡತ್ವಕ್ಕೆ ತಮ್ಮನ್ನು ಅರ್ಪಿಸಿ ಬಿಟ್ಟಿದ್ದಾರೆ. Walk a mile in my shoes
just walk a mile in my shoes
Before you abuse, criticize and accuse
Then walk a mile in my shoesಇಪ್ಪತನೆಯ ಶತಮಾನದ ಪ್ರಸಿದ್ದ ಅಮೇರಿಕನ್ ಗಾಯಕ Elvis Presley ರವರ ಕಂಠದಲ್ಲಿ ಮೊಳಗಿದ ಮೇಲಿನ ಹೃದಯ ಸ್ಪರ್ಶಿ Lyrics ಅನ್ನು ಒಂದು  ನಿವೇದನೆಯ ರೂಪದಲ್ಲಿ ಬಾಲ ಚಂದ್ರರವರ ಮುಂದಿಡುತ್ತೇನೆ.ಬಾಲ ಚಂದ್ರ ಅವರೇ, "ಭಾರತೀಯನಾಗಿದ್ದರೆ ಅವನಿಗೆ ಮೊದಲು ದೇಶ ಮುಖ್ಯ, ನಂತರ ಧರ್ಮ. ವಂದೇ ಮಾತರಂ ಎಂಬುದು
ನಮ್ಮ ದೇಶವನ್ನು ಹಾಡಿ ಹೊಗಳಿದ ದೇಶಭಕ್ತಿ ಗೀತೆಯಾಗಿರುವಾಗ ಈ ದೇಶದ ಪ್ರತಿಯೊಬ್ಬನೂ
ಅದನ್ನು ಹಾಡುವುದು, ಅದಕ್ಕೆ ಗೌರವಿಸುವುದು ಅವನ ಕರ್ತವ್ಯ. ಅವನು ಮುಸಲ್ಮಾನನೇ ಆಗಲಿ
ಅವರಪ್ಪನೇ ಆಗಿರಲಿ. ಅದನ್ನು ಹಾಡಬೇಡಿ ಎಂದು ಮುಸ್ಲಿಮರಿಗೆ ಫರ್ಮಾನು ಹೊರಡಿಸಲು
ಅವನ್ಯಾವ ತೋಳಾಂಡಿ ನಾಯಕ ಹೇಳಿ. ಅವನಂತಹ ಕರ್ಮಠನಾಗಿದ್ದರೆ ಈ ದೇಶದ ಕೂಳು ಯಾಕೆ
ತಿನ್ನಬೇಕು ಹೇಳಿ?"ನಿಮ್ಮ ಮೇಲಿನ ಪ್ರಶ್ನೆಗೆ ನನ್ನ ಉತ್ತರವಿಷ್ಟೆ. ಮಹಾರಾಷ್ಟದಲ್ಲಿರುವರೆಲ್ಲರೂ ಮರಾಠಿಯನ್ನೇ ಮಾತನಾಡ ಬೇಕು. ಮರಾಠಿಗಳಿಗಲ್ಲದೆ ಮಹಾರಾಷ್ಟದಲ್ಲಿ ಸ್ಥಾನವಿಲ್ಲ. ಎಂದು ಫರ್ಮಾನು ಕೊಡುವವರ ಮಾತಿನ ಧಾಟಿಯಲ್ಲೇ ನೀವೂ ಕೂಡಾ ಮಾತನಾಡುತ್ತಿದ್ದೀರಿ. ಅಷ್ಟಕ್ಕೂ ವಂದೇ ಮಾತರಂ ಗೀತೆಗೆ ವಿರೋಧ ವ್ಯಕ್ತಪಡಿಸಿದ್ದು ಕೇವಲ ಜಂಇಯತುಲ್ ಉಲೆಮಾ ಎಂಬ ಮುಸ್ಲಿಂ ಸಂಸ್ಥೆ ಮಾತ್ರವೇ..? ಸ್ವಲ್ಪ ‘Singing of Vande Mataram
against Sikh tenets’


Tribune News Service  http://www.tribuneindia.com/2006/20060907/delhi.htm#11
ಕೊಂಡಿಗೆ ಕ್ಲಿಕ್ಕಿಸಿ ನ್ಯೂಸ್ ಓದಿ. ಆಮೇಲೆ ಹೇಳಿ ನಿಮ್ಮ ಪ್ರಕಾರ ಸಿಕ್ಕರು ಕೂಡಾ ದೇಶ ದ್ರೋಹಿಗಳೇ ಅಲ್ಲವೇ. ವಂದೇ ಮಾತರಂ ಹಾಡಬೇಡಿ ಎಂದು ಸಿಕ್ಕರಿಗೆ ಕರೆಕೊಟ್ಟ Shiromani Gurudwara Parbandhak Committee or SGPC, the paramount representative body in the
Sikh Panth ಹಾಗೂ ಪ್ರಧಾನಿ ಮನ್ಮೋಹನ್ ಸಿಂಗ್ ಕೂಡಾ ದೇಶ ದ್ರೋಹಿಗಳ ಪಟ್ಟಿಗೆ ಸೇರ್ತಾರೆ ಅಲ್ವ? ಅಷ್ಟೇ ಅಲ್ಲ. ಹಿಂದೂ ಭಾಂಧವರಲ್ಲೇ ಕ್ರಾಂತಿಕಾರಕ ಪಂಥವಾಗಿ ಹುಟ್ಟಿದ, ಮೂರ್ತಿ ಪೂಜೆಯನ್ನು ವಿರೋಧಿಸುವ ಆರ್ಯ ಸಮಾಜ ಕೂಡಾ ಸ್ವಾತಂತ್ರ್ಯಾ ನಂತರ ವಂದೇ ಮಾತರಂ ರಾಷ್ಟ ಗೀತೆಯಾಗ ಬೇಕೆಂಬ ವಾದವನ್ನು ಬಲವಾಗಿ ವಿರೋಧಿಸಿದ್ದರು.ಯಾಕೆ ಗೊತ್ತಾ..? ವಿದ್ವೇಶ ಬೆಳಸುವ ಸಾಹಿತ್ಯ ಎಂಬ ವಿವಾದಕ್ಕೆ ಗುರಿಯಾದ  ಆನಂದ ಮಠ ಎಂಬ ಬಂಕಿಮ ಚಂದ್ರರ ಕಾದಂಬರಿಯಲ್ಲಿ ಬರುವ ವಂದೇ ಮಾತರಂ ಗೀತೆಯಲ್ಲಿ ಅಕ್ಷರಶಃ ಭಾರತ ಭೂಮಿಯನ್ನು ದುರ್ಗಾ ದೇವಿಗೆ ಹೋಲಿಸಿ ನಮಿಸಲಾಗಿದೆ. ಆದ್ದರಿಂದ ನಿಮ್ಮ ವಾದವನ್ನು ಒಪ್ಪಿಕೊಳ್ಳುವುದಾದರೆ ಭಾರತದಲ್ಲಿರ ಬೇಕಾದರೆ ಎಲ್ಲರೂ ನಿಮ್ಮಂತೆ ಹಿಂದೂ ಧರ್ಮದ ದೇವರನ್ನು ಪೂಜಿಸಬೇಕು. ನಾಸ್ತಿಕರು ಈ ದೇಶದಲ್ಲಿರಲು ನಾಲಾಯಿಕ್ಕುಗಳು. ಇದೇ ಅಲ್ಲವೇ ನಿಮ್ಮ ವಿಚಾರ ಧಾಟಿ ?ಇನ್ನು ನಿಮ್ಮ ಉಳಿದ CONCERN ಗಳ ಬಗ್ಗೆ. ಕರ್ನಾಟಕದ ಮುಸ್ಲಿಂ ಬಾಹುಳ್ಯವಿರೋ ಪ್ರದೇಶವೊಂದರಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಅಂತ ಸಿಡುಕು ವ್ಯಕ್ತ ಪಡಿಸಿದ್ದೀರಿ. ಒಂದು ವಿಷಯ ಅರ್ಥ ಮಾಡಿಕೊಳ್ಳಿ ಹೊಳೆದಂಡೆರವರೇ. ಪಾಕಿಸ್ತಾನ ಬಳಸುತ್ತಿರುವುದು ಇಸ್ಲಾಮಿಕ್ ಧ್ವಜ. ಇಸ್ಲಾಮಿನ ಮೂಲ ಧ್ವಜದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಪಾಕಿಸ್ತಾನ ತನ್ನ ಧ್ವಜ ರೂಪಿಸಿಕೊಂಡಿದೆ. ಮೇಲ್ನೋಟ್ಟಕ್ಕೆ ಭಾರತದಲ್ಲಿ ದರ್ಗಾಗಳಲ್ಲಿ, ಉರೂಸ್ ಸಮಾರಂಭಗಳಲ್ಲಿ ಹಾರಿಸುವ ಹಸಿರು ಧ್ವಜ ಪಾಕ್ ಧ್ವಜವನ್ನು ಹೋಲುತ್ತಾದರೂ ಅದಕ್ಕಿಂತ ಇದು ಭಿನ್ನ. ( Personally I oppose flag culture)ಪಾಕಿಸ್ತಾನ ಇಸ್ಲಾಮಿಕ ಧ್ವಜ ಬಳಸುತ್ತದೆ ಎಂದ ಮಾತ್ರಕ್ಕೆ ಪಾಕಿಸ್ತಾನ ವಿರೋಧಿ ದೇಶಗಳಲ್ಲಿನ ಮುಸ್ಲಿಮರೆಲ್ಲರೂ ಇಸ್ಲಾಂ ಧ್ವಜವನ್ನು ತ್ಯಜಿಸ ಬಿಡಬೇಕಾ? ಹಾಗೊಂದು ವೇಳೆ ನಮ್ಮ ನ್ಯಾಯಾಂಗ, ಸಂವಿಧಾನ ಇವು ಆ ರೀತಿ ಹೇಳಿದಿದ್ದರೆ ಆ ಆದೇಶ ಪಾಲಿಸಲು ಮುಸ್ಲಿಮರು ಬಾಧ್ಯಸ್ತರು.ಹಾಗೆ ಸಾಂಧರ್ಭಿವಾಗಿ ಇಲ್ಲೊಂದು ವಿಚಾರ. ದೇಶಭಕ್ತಿಯ ಬಗ್ಗೆ ದೊಡ್ಡದಾಗಿ ಮಾತನಾಡುವ ಆರ್,ಎಸ್.ಎಸ್. National flag ಗಿಂತ ಹೆಚ್ಚು ಮಹತ್ವ ಕೊಡುವುದು ಭಾಗ ಧ್ವಜಕ್ಕೆ. ಹಾಗೆ ಗಾಂಧೀಜಿಗಿಂತ ಗೌರವದಿಂದ ಕಾಣುವುದು ಗೋಡ್ಸೆಯನ್ನು. ನಮ್ಮ ದೇಶದ ಮಹಾನು ಭಾವರುಗಳನ್ನು, ಸಂಕೇತಗಳನ್ನು ಗೌರವಿಸಲು ರಾಜನಿರ್ದೇಶಕ ತತ್ವಗಳಡಿ ಸ್ಪಷ್ಟವಾಗಿ ಹೇಳೋ ಸಂವಿಧಾನಕ್ಕೆ ಅಗೌರವ ತೋರುವ ಇವರು ಮಾಡುತ್ತಿರೋದು ದೇಶದ್ರೋಹವಲ್ಲವೇ? ಮಾಲೆಗಾವ್ನಲ್ಲಿ, ಹಾಗೂ ನಾಗಪುರ ಪ್ರಕರಣದಲ್ಲಿ ಹಿಂದು EXTREMIST ಬಾಂಬ್ ಸ್ಫೋಟಿಸಿ ಸಿಕ್ಕಿ ಬಿದ್ದಿದ್ದರು. ಹೇಮಂತ್ ಕರ್ಕರೆ ಎಂಬ ಧೀಮಂತ ಪೋಲೀಸ್ ಆಫೀಸರ್ ಇವತ್ತಿಗೂ ಬದುಕಿದ್ದರೆ ಭಾರತದಲ್ಲಿ ನಡೆಯುತ್ತಿರುವ ಬಾಂಬ್ ಸ್ಪೋಟಗಳಲ್ಲಿ ಮುಸ್ಲಿಂ ಕಮ್ಮಟರ ಜತೆ ಹಿಂದು ಮತಾಂಧರ ಪಾಲು ಎಷ್ಟು ಅನ್ನೋದು ಸ್ಪಷ್ಟವಾಗಿ ಜಗಜ್ಜಾಹೀರಾಗುತ್ತಿತ್ತೇನೊ?ಆದರೆ ದುರದೃಷ್ಟಕ್ಕೆ ಹೇಮಂತ್ ಕರ್ಕರೆ ಉಳಿಯಲಿಲ್ಲ. ಅವರು ಉಳಿಯ ಬಾರದು ಅನ್ನೋದು ಮುಸ್ಲಿಂ ಹಾಗೂ ಹಿಂದೂ ಉಗ್ರರ ಸಮಾನವಾದ ಬಯಕೆ ಯಾಗಿತ್ತು. AFTER ALL ಈ ಮುಸ್ಲಿಂ ಹಾಗೂ ಹಿಂದೂ ಮತಾಂಧತೆ ಪರಸ್ಪರ ಪೂರಕ ಶಕ್ತಿಗಳೇ ಅಲ್ಲವಾ? ಪ್ರೀತಿಯ ಬಾಲಚಂದ್ರರವರೆ,  ಇನ್ನೂ ಇದೆ....ಉಳಿದ CONCERN ಗಳಿಗೆ ಉತ್ತರಿಸುತ್ತೇನೆ...ಈ ವತ್ತು ಸಂಜೆಯೊಳಗೆ..ಸಸ್ನೇಹ ಶಫೀರ್   
   I bow to thee, Mother,
richly-watered, richly-fruited,
cool with the winds of the south,
dark with the crops of the harvests,
the Mother!

Her nights rejoicing
in the glory of the moonlight,
her lands clothed beautifully
with her trees in flowering bloom,
sweet of laughter,
sweet of speech,
The Mother,
giver of boons, giver of bliss!

vande mātaram
sujalāṃ suphalāṃ
malayajaśītalām
śasya śyāmalāṃ
mātaram
vande mātaram

śubhra jyotsnā
pulakita yāminīm
phulla kusumita
drumadalaśobhinīm
suhāsinīṃ
sumadhura bhāṣiṇīm
sukhadāṃ varadāṃ
mātaram
vande mātaram

bônde matorom
shujolang shufolang
môloeôjoshitolam
shoshsho shêmolang
matorom
bônde matorom

shubhro jotsna
pulokito jaminim
fullo kushumito
drumodôloshobhinim
shuhashining
shumodhuro bhashinim
shukhodang bôrodang
matorom
bônde matorom

ಬಾಲ ಚಂದ್ರ ಶನಿ, 04/17/2010 - 15:34

ಪ್ರಿಯ ಶಫೀರ್,
೧)ನೀವು ಮೊದಲು ಭಾರತೀಯರು ನಂತರ ಮುಸ್ಲಿಮರು ಎಂದು ದಯವಿಟ್ಟು ನೆನಪಿಟ್ಟುಕೊೞಿ. ತಾವು ಭಾರತೀಯರಾಗಿ ಹುಟ್ಟಲು ಅಪ್ಲಿಕೇಶನ್ ಹಾಕದೇ ಇರಬಹುದು. ಆದರೆ ಭಾರತೀಯನಾಗಿ ಹುಟ್ಟಿದ ಮೇಲೆ ಇಲ್ಲಿನ ಸಂವಿಧಾನ, ಕಾನೂನು ಮುಂತಾದವುಗಳನ್ನು ಪಾಲಿಸುವುದು ನಿಮ್ಮ ಕರ್ತವ್ಯ. ಹಾಗೂ ಅದನ್ನು ಉಲ್ಲಂಘಿಸುವುದು ಅಪರಾಧ.
೨) ಭಾರತದಲ್ಲೇ ಹುಟ್ಟ ಬೇಕು ಅಂತ ನಾನಾಗಲೀ ನೀವಾಗಲಿ ದೇವರಿಗೆ APPLICATION ಏನು ಹಾಕಿರಲಿಲ್ಲ ಅನ್ನೋದು ಸತ್ಯ ತಾನೇ? ಎಂಬ ಒಂದೇ ಮಾತು ನಿಮ್ಮ ದೇಶ ಭಕ್ತಿಯನ್ನು ತೋರಿಸುತ್ತದೆ. ಹಾಗಾದರೆ ತಾವು ಮುಸ್ಲಿಮರಾಗಿ ಹುಟ್ಟಲು ಅಪ್ಲಿಕೇಶನ್ ಹಾಕಿದ್ದಿರಾ? ಇಲ್ಲ ತಾನೆ ?ಹಾಗಾದರೆ  ಯಾಕೆ ಬೇರೆ ಧರ್ಮಕ್ಕೆ ಬದಲಾಗಬಾರದು? ಪ್ರತಾಪ್ ಸಿಂಹ ಎಲ್ಲ ಮುಸ್ಲಿಮರ ಬಗ್ಗೆ ಕಳವಳ ವ್ಯಕ್ತಪಡಿಸಲಿಲ್ಲ. ನಿಮ್ಮಂತಹ ಕೆಲವು ದೇಶಾಭಿಮಾನ ಶೂನ್ಯ ಧರ್ಮಾನುಯಾಯಿ ಮುಸಲ್ಮಾನರನ್ನು ಮಾತ್ರ ಸಂಶಯಿಸಿದ್ದು.
೩) ಪಾಕಿಸ್ತಾನದ ದ್ವಜ ಹಾಗೂ ಇಸ್ಲಾಂ ಧ್ವಜದ ಬಗ್ಗೆ ನನಗೂ ಗೊತ್ತಿದೆ. ಯಾವುದೋ ಇಸ್ಲಾಂ ದ್ವಜವನ್ನು ಪಾಕಿಸ್ತಾನದ ದ್ವಜ ಎಂದು ಕೊೞಲ್ಲು ನಾನು ಮೂರ್ಖನಲ್ಲ. ಆದರೆ ನಡೆದ ಕಥೆಯೇ ಬೇರೆ. ಕರ್ನಾಟಕದ ಪ್ರದೇಶವೊಂದರಲ್ಲಿ ಆಗಸ್ಟ್ ೧೪ ನೇ ತಾರೀಖು ಪಾಕಿಸ್ತಾನದ  ಸ್ವಾತಂತ್ರ್ಯೋತ್ಸವವನ್ನು ಆಚರಿಸಿ ಅಕ್ಷರಷಃ ಪಾಕಿಸ್ತಾನಿ ದ್ವಜವನ್ನು ಹಾರಿಸಲಾಯಿತು.
ಈ ವಿಷಯ ಬಿಡಿ ಕಳೆದ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತದ ಎದುರು ಪಾಕಿಸ್ತಾನಿಗಳು ಹೀನಾಯವಾಗಿ ಸೋತಾಗ ಭಾರತದಲ್ಲಿ ಕೆಲವು ಜಾಗಗಳಲ್ಲಿ ಭಾರತದ ಧ್ವಜವನ್ನು ಸುಡಲಾಯಿತು. ಪಾಪ Personally you oppose flag culture ನಿಮಗಿದು ಗೊತ್ತಿರಲಿಕ್ಕಿಲ್ಲ.
೪) ದಯವಿಟ್ಟು RSS ನ ಬಗ್ಗೆ ತಾವು ಚಕಾರವೆತ್ತಬೇಡಿ. ಅಲ್ಲಿನ ಅಂಗಳದಿಂದ ಸಾವಿರಾರು ಸ್ವಾತಂತ್ರ್ಯ ಯೋಧರು ಎದ್ದು ಬಂದಿದ್ದಾರೆ. ಅವರನ್ನು ಹೆಸರಿಸುತ್ತಾ ಹೋದರೆ ಈ ಪುಟ ಸಾಲದೇನೋ? ಅವರು ಭಗವಾದ್ವಜಕ್ಕೆ ಗೌರವಿಸಿದರು.ಆದರೆ ರಾಷ್ಟ್ರಧ್ವಜವನ್ನೆಂದೂ ಅವಮಾನಿಸಲಿಲ್ಲ. ಪಾಕಿಸ್ತಾನಿ ಬಾವುಟವನ್ನು ಕೂಡ ಹಾರಿಸಲಿಲ್ಲ.
೫) ಮಾತೆತ್ತಿದರೆ ಮಾಲೆಗಾಂವ್ ಎಂಬುದು ಇತ್ತೀಚಿನ ಗೋಸುಂಬೆ ಜಾತ್ಯಾತೀತವಾದಿಗಳ ಹುನ್ನಾರಗಳಲ್ಲೊಂದು. ಸಾವಿರಾರು ಸ್ಪೋಟಗಳು, ಸಾವಿರಾರು ಮುಸ್ಲಿಂ ಭಯೋತ್ಪಾದಕರು, ಲಕ್ಷಾಂತರ ಜನರ ಮಾರಣ ಹೋಮಗಳನ್ನು ಬರೀ ೭ ಮುಸ್ಲಿಮರ ಸಾವಿಗೆ ತುಲನೆ ಮಾಡಿದರೆ ಲೆಕ್ಕಾಚಾರ ಚುಕ್ತಾ ಆಗುವುದಿಲ್ಲ. ಮೊನ್ನೆ ನಡೆದ ಮುಂಬೈ ಸ್ಪೋಟಕ್ಕೆ ಹೋಲಿಸಿದರೆ ೭ ಜನ ಮುಸ್ಲಿಮರ ಸಾವು  does'nt matter.
ಮುಂದುವರೆಯುವುದು..............................................
ಸಸ್ನೇಹ
ಬಾಲ ಚಂದ್ರ

Shafeer A.A ಶುಕ್ರ, 04/16/2010 - 15:47

ಪ್ರೀತಿಯ ಬಾಲಚಂದ್ರ ರವರೇ...ನಿಮ್ಮ ಪ್ರತಿಕ್ರ‍ಿಯೆಯಲ್ಲಿ ಎತ್ತಲಾದ ಕೆಲವು ಪ್ರಶ್ನೆಗಳಿಗೆ ಈ ಮೊದಲು ಉತ್ತರಿಸಿದ್ದೇನೆ. ಉಳಿದವುಗಳನ್ನೂ ಇಲ್ಲಿ ಉತ್ತರಿಸುತ್ತಿದ್ದೇನೆ.ನೀವು ಹೇಳಿದ್ರಿ "ಹೆಸರುವಾಸಿಯಾಗಿದ್ದ ಸಾವಿರಾರು ಹಿಂದೂ ಬ್ರಾಹ್ಮಣ ಪಂಡಿರನ್ನು ಕೊಂದವರೂ ಮುಸ್ಲಿಮರೇ.ಈ
ವಿಷಯ ಗೊತ್ತಿದ್ದೂ ತಾವು ಮುಚ್ಚಿಡುತ್ತೀರಿ ಅಲ್ಲವೇ?" ಅಂತ. ಇಲ್ಲಿ ನಾನೊಂದು ಪ್ರಶ್ನೆ ಕೇಳ ಬಯಸುತ್ತೇನೆ, ಬ್ರಾಹ್ಮಣರಾದ ರಾಜೀವ್ ಗಾಂಧಿಯನ್ನು ಕೊಂದದ್ದು ಹಿಂದುಗಳಾದ ಎಲ್.ಟಿ.ಟಿ.ಈ. ಅಲ್ಲವಾ? ಉನ್ನತ ಜಾತಿಗೆ ಸೇರಿದ ಹಾಗು ಶ್ರೀ ರಾಮನ ಭಕ್ತರೂ ಆದ ಅಹಿಂಸಾವಾದಿ ಗಾಂಧೀಜಿಯನ್ನು ಕೊಂದಿದ್ದು ಮುಸ್ಲಿಮರಾ? ಪ್ರಮೋದ್ ಮಹಾಜನ್ ಕೊಲೆ ಮಾಡಿದ ಅವರದೇ ಸಹೋದರ ಮುಸ್ಲಿಮನಾ?  ಕೊಲೆಗಾರರಿಗೆ ಯಾಕೆ ಸ್ವಾಮಿ ನೀವು ಹೀಗೆ ಜಾತಿ ಧರ್ಮದ ಲೇಬಲ್ ಅಂಟಿಸಿ ಕಾಶ್ಮೀರಿ ಪಂಡಿತರನ್ನು ಮುಸ್ಲಿಮರು ಕೊಂದರು ಅಂತೀರಿ?ಕಂಬಾಲ ಪಲ್ಲಿಯಲ್ಲಿ ಹಿಂದುಗಳೆಂದು ನೀವು ಕರೆಯುವ ದಲಿತರನ್ನು ಬ್ರಾಹ್ಮಣರು ಸುಟ್ಟು ಕೊಂದಾಗ ಸವರ್ಣೀಯರಿಂದ ಅವರ್ಣೀಯರ ಕೊಲೆ ಎಂದು ಹೇಳಿ ತೆಪ್ಪಗಾಗಿ ಬಿಡುತ್ತೀರಿ...ಆದ್ದರಿಂದ ಪ್ಲೀಸ್...ಕೊಲೆಗಾರರನ್ನು, ಭಯೋತ್ಪಾದ್ಕರನ್ನು ಧರ್ಮದ PREFIX ಬಳಸಿ ಗುರುತಿಸುವುದನ್ನು ನಿಲ್ಲಿಸಿ.ಭಯೋತ್ಪಾದನೆಯಿಂದ ಈವತ್ತು ಜಗತ್ತಿನಲ್ಲಿ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿರುವವರು ಮುಸ್ಲಿಮರು. ಈ ಭಯೋತ್ಪಾದನೆಯನ್ನು ಅನ್ನ ನೀರೆರೆದು ಪೋಷಿಸುತ್ತಿರುವುದು ಅಮೇರಿಕಾ ಮತ್ತು ಇಸ್ರೇಲ್.. ಬಿನ್ ಲಾಡೆನ್ ನನ್ನು SUPPORT ಮಾಡಿ ಈ ಎತ್ತರಕ್ಕೆ ಬೆಳಸಿ ಈಗ ಆತ ಅಂತರಾಷ್ಟೀಯ ಭಯೋತ್ಪಾದಕ ಅಂತ ಬೊಬ್ಬೆ ಹಾಕ್ತಿದ್ದಾರೆ. ಇರಾನ್ ವಿರುದ್ದ ಸದ್ದಾಂ ನನ್ನು ಎತ್ತಿ ಕಟ್ಟಿ ಮಜಾ ನೋಡಿದ U.S.A ಕೊನೆಗೆ ಆತನನ್ನೂ ಮುಗಿಸಿ ಗಹಹಹಿಸಿ ನಗುತ್ತಿದೆ. ಪಾಕಿಸ್ತಾನಕ್ಕೆ ಆಯುಧ ಕೊಟ್ಟು ಭಾರತದೊಳಗಕ್ಕೆ ನುಸುಳು ಅಂತ ಉಗ್ರರಿಗೆ PUSH ಮಾಡುತ್ತಾ ಮತ್ತೊಂದೆಡೆ ಭಾರತದೊಡನೆ NUCLEAR ಕರಾರನ್ನೂ ಮಾಡಿಕೊಳ್ಳುವ ನರಿ ಬುದ್ದಿಯ ಅಮೇರಿಕಾದ ಕೃತ್ಯಗಳನ್ನು ಕ್ರೈಸ್ತ ಉಗ್ರವಾದ ಎಂದೂ, ಇಸ್ರೇಲ್ ಮಾಡುತ್ತಿರುವುದನ್ನು ಯಹೂದಿ ಉಗ್ರವಾದ ಎಂದೂ ಕಂಬಾಲಿ ಪಲ್ಲಿಯ ಹಾಗೆ ಭಾರತದಲ್ಲಿ ಮೇಲ್ವರ್ಗಗಳಿಂದ ನಡೆದ ಅಸಂಖ್ಯಾತ ದಲಿತರ ಹತ್ಯೆಗಳನ್ನು ಬ್ರಾಹ್ಮಣ ಉಗ್ರವಾದ ಎಂದೂ ಕರೆದು ಬಿಡಿ ಬಾಲ ಚಂದ್ರ.ಪ್ರೀತಿಯ ಮಿತ್ರ....ಇದನ್ನೆಲ್ಲ ನಾನು ಇಲ್ಲಿ ಹೇಳುತ್ತಿರೋದು ಯಾರನ್ನು ಕೆಣಕುವ, ಅಥವಾ ನೋಯಿಸುವ ಉದ್ದೇಶದಿಂದ ಅಲ್ಲ. ನಾವು ತಿಳಿದು ಕೊಂಡಿದ್ದಕ್ಕಿಂತಲೂ ಆಚೆಗಿನ ಪರಿಧಿಯಲ್ಲಿ ಕೆಲವು ನಗ್ನ ಸತ್ಯಗಳು ಬಚ್ಚಿಟ್ಟು ಕೂತಿದೆ. ಮೇಲ್ನೂಟಕ್ಕೆ ಕಾಣದ ಹಲವು ಷಡ್ಯಂತ್ರಗಳಿಗೆ ನಮ್ಮ ಭಾರತ ಇಂದು ಬಲಿಯಾಗಿದೆ. ಅಸಲಿಗೆ ಈ ಭಯೋತ್ಪಾದಕರೆಲ್ಲರೂ ಸಾಮ್ರಾಜ್ಯಶಾಹಿ ವಾದದ ಪ್ರೋಡಕ್ಟ್. ಭಾರತದಲ್ಲಿ ಅಧಿಕಾರಕ್ಕಾಗಿ ರಾಮ ಜನ್ಮ ಭೂಮಿ ವಿವಾದವನ್ನು MISSUSE ಮಾಡಿದ ಭಾ.ಜ.ಪ. ದೇಶಕ್ಕೆ ಮೋಸ ಮಾಡಲಿಲ್ಲವೇ?ಮತ್ತೊಂದು ಬಹಳ ಮುಖ್ಯ ವಿಷಯ ಫ್ರೆಂಡ್....ವಿನಾ ಕಾರಣ ಭಯ ಯಾವತ್ತೂ ನಮ್ಮ ಪ್ರಗತಿಗೆ ಒಳ್ಳೆಯದಲ್ಲ. ಕೇವಲ ೪ ರಾಜ್ಯಗಳನ್ನು ಹೊಂದಿದ್ದು, ಭಾರತದ ಸೈನ್ಯ ಶಕ್ತಿಯ ೨೫% ನಷ್ಟೂ  ಸೈನ್ಯಬಲ ಇಲ್ಲದ ಪಾಕಿಸ್ತಾನದಿಂದ ಭಾರತ ದೇಶವನ್ನು ಏನು ಮಾಡಲಿಕ್ಕೂ ಸಾಧ್ಯ ವಿಲ್ಲ. ಕಾಶ್ಮೀರಿ ಪಂಡಿತರ ಕೊಲೆ ಮಾಡಿ ಭಾರತದಲ್ಲಿ ಹಿಂದೂ ಮುಸ್ಲಿಂ ಭಾಂಧವ್ಯವನ್ನು ಹದೆಗೆಡಿಸಿದ್ದು ಪಾಕಿಸ್ತಾನದ ಐ.ಎಸ್.ಐ ಯೇ ಹೊರತು ನೈಜ ಮುಸ್ಲಿಮರಲ್ಲ. ಈ ಐ.ಎಸ್,ಐ ಪಾಕಿಸ್ತಾನ ಎಂಬ ಗರೀಭ ರಾಷ್ಟ್ರದ ಬೇಹುಗಾರಿಕೆ ಸಂಸ್ಥೆ. ಸರಿಯಾಗಿ ಇಂಗ್ಲೀಶ್ ಮಾತನಾಡಲಿಕ್ಕೂ ಬರದ ಪಾಕಿಸ್ತಾನಿಗಳು ಸ್ಯಾಟ್ ಲೈಟ್ ಫೋನ್ ತಯಾರಿಕೆ, ಅಣ್ಣ್ವಸ್ತ್ರ ತಯಾರಿಕೆಯಲ್ಲಿ ನಿಪುಣರು ಎಂದಿದ್ದರೆ ಅವರಿಗೆ ಸಹಾಯ ಮಾಡುತ್ತಿರೋದು U.S.A ಅನ್ನೋದನ್ನು ನಾವು ಅರ್ಥಮಾಡಿಕೊಳ್ಳ ಬೇಕು. ಹಿಂದೆ ರಷ್ಯಾದ ವಿರುದ್ದ ತಾಲಿಬಾನಿಗಳಿಗೆ ಆಯುಧ ಕೊಟ್ಟು ತಮಾಷೆ ನೋಡಿದ U.S.A ಈಗ ತಾಲಿಬಾನಿಗಳ ವಿರುದ್ದ ಯುದ್ದ ಮಾಡುತ್ತಿದೆ. ಹಾಗೆ ಭಾರತ ಸೂಪರ್ ಪವರ್ ಆಗ ಬಾರದೆಂದು ಇಲ್ಲಿ ನಕ್ಸಲಿಸಂ, ಇಸ್ಲಾಮಿಕ್ ಭಯೋತ್ಪಾದನೆ, ಹಿಂದು ಉಗ್ರವಾದ, ಇವೆಲ್ಲವನ್ನೂ ವ್ಯವಸ್ಥಿತವಾಗಿ ಬಿತ್ತುತ್ತಾ ಬರುತ್ತಿರೋದು ಅಮೇರಿಕಾದ CIA ಮತ್ತು ಇಸ್ರೇಲ್ ನ ಮೊಸಾದೋ ಎಂಬುದನ್ನು ನಾವು ಅರ್ಥಮಾಡಿಕೊಂಡರೆ ಒಳ್ಳೆಯದು,ಇನ್ನು ಕೊನೆಯದಾಗಿ Walk a mile in my shoes, just walk a mile in my shoes, Before you abuse, criticize and accuse ...ಮುಸ್ಲಿಮರ ಹೃದಯದ ನೋವು ಗೊತ್ತಾಗ ಬೇಕಿದ್ದರೆ, ದೇಶ ವಿಭಜನೆಯಿಂದ ಹಾಗೂ ಪ್ರತಿಯೊಂದು ಬಾಂಬ್ ಸ್ಪೋಟವಾದಾಗ ಮುಸ್ಲಿಮರ ತೊಳಲಾಟ, ಮನಮಿಡಿತ, ಕಂಬನಿ ಅರ್ಥವಾಗಬೇಕಿದ್ದರೆ ಪ್ಲೀಸ್ just walk a mile in their shoesಸಸ್ನೇಹಶಫೀರ್   

ಬಾಲ ಚಂದ್ರ ಶನಿ, 04/17/2010 - 16:11

ಮಿತ್ರ ಶಫೀರ್,
೧)ರಾಜೀವ್ ಗಾಂಧಿ, ಪ್ರಮೋದ್ ಮಹಾಜನ್, ಹಾಗೂ ಮಹಾತ್ಮ ಗಾಂಧಿಯನ್ನು ಕೊಂದಿದ್ದು ಹಿಂದೂಗಳೆಂದು ತಮಗೆ ಸಂತೋಷವಾಗಿರಬಹುದು. ಆದರೆ ಇವರ್ಯಾರೂ ಜಿಹಾದಿಗಳಲ್ಲ. ಮತ್ತು ಭಯೋತ್ಪಾಕರೂ ಅಲ್ಲ. ಕೊಲೆಗಾರರಿಗೆ ಧರ್ಮದ ಲೇಬಲ್ ಅಂಟಿಸಬಾರದು ಅನ್ನುವುದಾದರೆ ಕಾಶ್ಮೀರಿ ಭಯೋತ್ಪಾದಕರು ಯಾವ ಧರ್ಮಕ್ಕೆ ಹುಟ್ಟಿದವರು ಹೇಳಿ?
೨) ನೀವು ಕಂಬಾಲಪಲ್ಲಿಯ ಒಂದು ಉದಾಹರಣೆ ಕೊಡುವುದು ಸಾಧ್ಯವಾದರೆ, ಮುಖ್ತಾರ್ ಮಾಯಿಯಂತಹ ಸಾವಿರಾರು ಉದಾಹರಣೆಗಳನ್ನು ನಾವೂ ಕೊಡಬಹುದಲ್ಲವೇ?
೩)ಕ್ರೈಸ್ತ ಉಗ್ರವಾದ ಹಾಗೂ ಯಹೂದಿ ಉಗ್ರವಾದಗಳೆಲ್ಲ ಬದಿಗಿರಲಿ. ಯಾರೋ ಹೊರಗಿನವರ ದ್ವೇಷವನ್ನಾದರೆ ತಡೆಯಬಹುದು. ಇಲ್ಲಿನ ಸ್ಥಳೀಯ ಮುಸ್ಲಿಮರು ಅದರಲ್ಲಿ ಭಾಗಿಯಾಗಿರುವುದಕ್ಕೆ ತಾವು ಉತ್ತರಿಸುವುದಿಲ್ಲವೇಕೆ?
೪) ರಾಮಜನ್ಮ ಭೂಮಿ ವಿಷಯವನ್ನು missuse  ಮಾಡಿದ್ದು ಭಾಜಪ ಭಾರತಕ್ಕೆ ಮಾಡಿದ ಮೋಸವಾದರೆ, ಅಖಂಡ ಹಿಂದೂಗಳ ಶ್ರದ್ದಾಕೇಂದ್ರವಾದ ಅಯೋಧ್ಯೆ, ಕಾಶಿ ಮುಂತಾದ ದೇವಾಲಯಗಳ ಸ್ಥಳಗಳಲ್ಲಿ ಮಸೀದಿಗಳು ಎದ್ದು ಕೂತಿರುವುದು ಪವಾಡ ಎನ್ನಿಸುತ್ತಿದೆ.
೫)ಕೇವಲ ೪ ರಾಜ್ಯಗಳನ್ನು ಹೊಂದಿದ್ದು, ಭಾರತದ ಸೈನ್ಯ ಶಕ್ತಿಯ ೨೫% ನಷ್ಟೂ  ಸೈನ್ಯಬಲ ಇಲ್ಲದ ಪಾಕಿಸ್ತಾನದಿಂದ ಭಾರತ ದೇಶವನ್ನು ಏನು ಮಾಡಲಿಕ್ಕೂ ಸಾಧ್ಯ ವಿಲ್ಲ, ಎಂಬುದನ್ನು ನಾನೂ ಬಲ್ಲೆ. ಆದರೆ ಕಳವಳ ಅದಲ್ಲ ನಮ್ಮ ಮನೆಯೊಳಗಿದ್ದು ಹೊರಗಿನವರಿಗೆ support ಮಾಡುತ್ತಿರುವ ಒಳಗಿನ ಶತ್ರುಗಳ ಬಗ್ಗೆ ಏನು ಹೇಳುತ್ತೀರಿ?
೬)ಈ ಐ.ಎಸ್,ಐ ಪಾಕಿಸ್ತಾನ ಎಂಬ ಗರೀಭ ರಾಷ್ಟ್ರದ ಬೇಹುಗಾರಿಕೆ ಸಂಸ್ಥೆ. ಸರಿಯಾಗಿ ಇಂಗ್ಲೀಶ್ ಮಾತನಾಡಲಿಕ್ಕೂ ಬರದ ಪಾಕಿಸ್ತಾನಿಗಳು ಸ್ಯಾಟ್ ಲೈಟ್ ಫೋನ್ ತಯಾರಿಕೆ, ಅಣ್ಣ್ವಸ್ತ್ರ ತಯಾರಿಕೆಯಲ್ಲಿ ನಿಪುಣರು ಎಂದಿದ್ದರೆ ಅವರಿಗೆ ಸಹಾಯ ಮಾಡುತ್ತಿರೋದು U.S.A ಅನ್ನೋದನ್ನು ನಾವು ಅರ್ಥಮಾಡಿಕೊಳ್ಳ ಬೇಕು.
ಆಷಾಡಭೂತಿತನ ಎಂದರೆ ಇದೇ ಎನ್ನಿಸುತ್ತಿದೆ. ಸ್ಯಾಟ್ ಲೈಟ್ ಫೋನ್, ಎಕೆ ೪೭, ಮುಂತಾದವುಗಳು ಯಾರೇ ಮಾಡಿಕೊಟ್ಟಿರಲಿ. ಅದು ನಮ್ಮ ದೇಶದಲ್ಲಿ ಯಾಕೆ ಕಾನೂನು ಬಾಹಿರವಾಗಿ ಪ್ರಯೋಗಿಸಲ್ಪಡಬೇಕು. ಅದನ್ನು ಪ್ರಯೋಗಿಸುವವರು ಯಾಕೆ ವರ್ಶಾನುಗಟ್ಟಲೆಯಿಂದ ನಮ್ಮ ದೇಶದ ಪ್ರಜೆಗಳಾಗಿರಬೇಕು ಹಾಗು ಅವರ್ಯಾಕೆ ಬಹುತೇಕ ಮುಸ್ಲಿಮರೇ ಆಗಿರಬೇಕು? ಎಂಥಾ ಕಾಕತಾಳೀಯ ನೋಡಿ ಸಾರ್?
how about walking in our shoes to unerstand the plight that we have sufferd?
 I am not denying that muslims also have suffered,nor am i generalising that alla muslim sufferd.  but stop trying to live in sympathy. and wake acknowledge the overbearing evidence. That hasbeen put forth.
ಸಸ್ನೇಹ
ಬಾಲ ಚಂದ್ರ
 

ಪಾ೦ಡುರ೦ಗ, ಬಿಜಾಪುರ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/17/2010 - 00:11

ಬಾಲ ಚ೦ದ್ರ ಇಲ್ಲ್ ವಸಿ ನೋಡ್ರಪ  ಸುಮ್ಕೆ ಯಾಕ್ ಯಾರ್ದೊ ತಲಿ ಮ್ಯಾಲ್ ಗೂಬೆ ಕೂರಿಸ್ತೀರ್
http://www.milligazette.com/dailyupdate/2010/20100328_003_Headley-Saga-Mumbai-attack-was-joint-IB-CIA-Mossad-RSS-project.htm
 

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/17/2010 - 09:20

ಗುರುವೇ ಪುಂಡ ಪಾಂಡು ನೀವು ಕೊಟ್ಟ ಲಿಂಕ್ ಕೇವಲ ಮುಸ್ಲೀಮರಿಗಾಗಿ, ಮುಸ್ಲೀಮರಿಂರ, ಮುಸ್ಲೀಮರಿಗೋಸ್ಕರವೇ ಪ್ರಕಟವಾದ ವೆಬ್ ಸೈಟು ಅದರಿಂದ ಇದಕ್ಕಿಂತಾ ಕೆಟ್ಟದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ದಯವಿಟ್ಟು ಆರೋಗ್ಯಕರ ಚರ್ಚೆ ಮಾಡು ಪುಂಡ ಪೋಕರಿತನ ಬೇಡ. http://www.milligazette.com/subscribe.htm
ಇದು ನೀನು ಕೊಟ್ಟ ಲಿಂಕ್ ನ ಮುಖಪುಟದ ಲಿಂಕ್ ಸ್ವಲ್ಪ ತೆರೆದು ನೋಡು ಆಮೇಲೆ ನಿಂಗೇ ತಿಳಿಯುತ್ತೆ, ಅದು ಏನು ಅಂತಾ

ಪಾಡುರ೦ಗ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/17/2010 - 12:19

ಅಮರೆಶ್ ಮಿಶ್ರ ಸಮ್ಮಾನ್ಯ ವ್ಯಕ್ತಿ ಅಲ್ಲ  ಇಡಿ ಪ್ರಪ೦ಚಕ್ಕೆ ಗೊತ್ತಿರುವ ವ್ಯಕ್ತಿ. ಈ ಲೆಖನ ಬರೆದಿರುವುದು ಯಾರೊ ಮುಸ್ಲಿಮನಲ್ಲ.
 "  ಆರೋಗ್ಯಕರ ಚರ್ಚೆ "  ಆರೋಗ್ಯಕರ ಚರ್ಚೆ ಅ೦ದ್ರೆ ನೀವು ಉಪಯೋಗಿದ್ದೀರಲ್ಲಾ ಆ ಭಾಷೆ ಎ೦ದು ಅರ್ಥವೊ ?
" ತನ್ನ ತಟ್ಟೆಯಲ್ಲಿ ಹೆಗ್ಗಣ - ಪಕ್ಕದ ತಟ್ಟೆಯಲ್ಲಿ ನೊಣ "
ಇದು ಮುಸ್ಲಿ೦ ಎ೦ಬ ಚರ್ಚೆ ಯಾಕೆ.  ಸತ್ಯ ಅರಗಿಸಿಕೊಳ್ಲಲು ಸಾದ್ಯವಿಲ್ಲಾ  ಅ೦ತ ಒ೦ದೆ ಮಾತಿನಲ್ಲಿ ಹೇಳಿದರೆ ಮುಗಿಯಿತಲ್ಲ.  
 ಸ್ವಾಮಿ ಅನಾಮಿಕರೆ ಇತ್ತಿಚೆಗೆ  ದಲಿತನೊಬ್ಬ ದೇವಸ್ತಾನಕ್ಕೆ ಹೋದಾಗ  ಬ್ರಾಹ್ಮಣರು ಮಾಡಿದ ಘನ೦ಧಾರಿ ಕೆಲಸವೇನು ಎ೦ದು ಪ್ರತ್ಯೇಕ ಹೇಳಬೇಕಾಗಿಲ್ಲ.
ಆತ್ಮಾವಲೋಕನ ಮಾಡೊಣ. ಜನಿವಾರ ಇಲ್ಲದ ಕಾರಣ ಊಟದ ಎಲೆಯ ಮು೦ದೆ ಕೂತ ಮನುಷ್ಯನನ್ನು  ಅಲ್ಲಿ೦ದ ಹೊರಹಾಕಲಾಯಿತು ಇನ್ನು ಮತ್ತೇನು ಬರೆಯಲಿ ಬರಿ ಪ್ರತಾಪ ಸಿ೦ಹ (ಬ್ರಾಹ್ಮಣನ) ಹಿ೦ದೆ ಯಾಕೆ ಹೋತೀರಿ.
ನಾವೆಲ್ಲ ದಲಿತರೆ೦ದ ಮಾತ್ರಕ್ಕೆ ಮನುಷ್ಯರಲ್ಲವೆ

ಕನ್ನಡಿಗ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/17/2010 - 12:31

ಒ೦ದು ವೆಬ್ ಸೈಟು ಯಾವ ಕೋಮಿನದ್ದು ಎ೦ಬ ಪ್ರಶ್ನೆ ನಿಮ್ಮದು.
ಹಾಗಾದರೆ ಪ್ರತಾಪಸಿ೦ಹ ಬ್ರಾಹ್ಮಣ ಬ್ರಾಹ್ಮಣಗರಿಗಾಗಿ -  ಗೋಸ್ಕರ -  ರಿಗೆ  ಎ೦ದು ನಿಮ್ಮ ಅರ್ಥ.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/17/2010 - 09:49

ನೋಡು ಶಫೀರಣ್ಣ ನೀನು ಏನೇ ವಾದ ಮಾಡಿದ್ರೂ ''ಮುಸ್ಲೀಮರೆಲ್ಲಾ ಭಯೋತ್ಪಾದಕರಲ್ಲ ನಿಜ ಆದರೆ ಎಲ್ಲಾ ಭಯೋತ್ಪಾದಕರು ಮುಸ್ಲೀಮರೇ'' ಅನ್ನುವ ಸತ್ಯವನ್ನು ನಿನ್ನಂತಹ ಸಾವಿರ ಉತ್ತಮಲೇಖಕರೂ ಒಪ್ಪಬೇಕಾದಂತಹ ನಗ್ನ ಸತ್ಯ. ಬೇರೆಯವರು ಭಯೋತ್ಪಾದನೆ ಮಾಡ್ತಾರೆ, ನೀವು ಹಿಂದುಗಳು ಗುದ್ದಾಡೊಲ್ವ ಅಂತಾ ಕೇಳಿ ದಾರಿ ತಪ್ಪಿಸುವುದಕ್ಕೆ ನೋಡಬೇಡ. ಅದು ನಿನ್ನ ಹತಾಶೆಯ ಸಮರ್ಥನೆ ಅಷ್ಟೇ. ಅದನ್ನೇ ಹಿಂದೂ ಭಯೋತ್ಪಾದನೆ ಎಂದು indairect ಆಗಿ ತಪ್ಪು ದಾರಿಗೆಳೆಯಬೇಡ. ಆ ಕಲಹಗಳೆಲ್ಲಾ ಆಯಾ ಸ್ಥಳಗಳಲ್ಲಿ ಅಲ್ಲಿನ ಸಾಮಾಜಿಕ ಕಾರಣಗಳಿಗೆ ಮತ್ತು ಕ್ಷುಲ್ಲಕ ಕಾರಣಗಳಿಗಾಗಿ ಆಗಿವೆ ಅನ್ನುವುದು ನಿನಗೂ ಗೊತ್ತು ನಮಗೂ ಗೊತ್ತು. ಏಕೆ ನಿಮ್ಮನಿಮ್ಮಲ್ಲೇ ಕೆಲ ಒಳ ಜಗಳಗಳು ನಡೆಯುವುದಿಲ್ಲವೆ? ನಿಮ್ಮ ಪಂಗಡಗಳಲ್ಲೇ ಹೊಡೆದಾಟ ಬಡಿದಾಟ ನಡೆಯುದಿಲ್ಲವೆ? ಅವುಗಳನ್ನು ನಾವೇನು ಭಯೋತ್ಪಾದನಾ ಘಟನೆಗಳೆಂದು ಕರೆದಿಲ್ಲವಲ್ಲ? ಆ ಘಟನೆಗಳಿಂದ ಆಯಾ ಸ್ಥಳಗಳಿಗೆ ತೊಂದರೆಯಾಗಿದೆ ಆದರೆ ಅಂಥಹ ಘಟನೆಗಳು ದೇಶದ ಇತರ ಭಾಗದ ಜನರಲ್ಲಿ ಭಯವನ್ನೇನೂ ಉತ್ಪಾದಿಸಿಲ್ಲ, ಹಾಗೂ ಅವುಗಳಿಗೆ ಪರಿಹಾರ ಹುಡುಕಿ ಅವು ಮರುಕಳಿಸದಂತೆ ತಡೆಯಲಾಗಿದೆ. ಆದರೆ ಮುಸಲ್ಮಾನ ಭಯೋತ್ಪಾದಕರಿಂದ ಇರುವ ಜೀವ ಭಯಕ್ಕೆ ಭದ್ರತೆಯ ಖಾತ್ರಿ ಕೊಡಲು ನಿನ್ನಿಂದ ಸಾಧ್ಯವೇ?
ಇನ್ನು ಎಲ್ ಟಿ ಟಿ ಈ ಮತ್ತು ನಕ್ಷಲ್ ಭಯೋತ್ಪಾದನೆಯನ್ನು ತನ್ನ ಜಾಲಕ್ಕೆ ಸೇರಿಸಿಕೊಂಡು ತೆರೆಮರೆಯಲ್ಲಿ ಅಟ್ಟಹಾಸ ಮೆರೆಯುತ್ತಿರುವುದು ಇದೇ ಮುಸ್ಲೀಮ್ ಭಯೋತ್ಪಾದನೆ ಎನ್ನುವುದನ್ನು ನೀನು ಇತರೆ ತಾಣಗಳಲ್ಲಿ ಬರೆದಿರುವ ಲೇಖನಗಳಿಂದಲೇ ತಿಳಿದುಕೊಂಡಿದ್ದೇನೆ, ಇಲ್ಲೇಕೆ ಈ ವೈರುದ್ಯ? ನೀನೇ ಉತ್ತರಿಸಬೇಕು.
ನೀನು ಏನೇ ಸಮರ್ಥನೆ ನೀಡಿದರೂ, ಅನಾಮಿಕರ ಹೆಸರಿನಲ್ಲಿ ಯಾವುದೇ ತಾಣಗಳ ಲಿಂಕ್ ನೀಡಿದರೂ ಕೆಲ ಸತ್ಯಗಳು ಸತ್ಯಗಳಾಗಿಯೇ ಉಳಿಯುತ್ತವೆಯಲ್ಲವೇ?

ತಲೆಹರಟೆ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/17/2010 - 14:09

ಪ್ರಿಯ ಶಫೀರ್ ಅವರೆ,
ನಿಮ್ಮ ಸಾಮಾಜಿಕ ಕಳಕಳಿ, ಬುದ್ಧಿವಂತಿಕೆ ಮತ್ತು ವಿಷಯ ಮಂಡನೆ ಚತುರತೆಯನ್ನು ಮೆಚ್ಚುತ್ತಾ ನನ್ನ ಕೆಲವು 'ಸಹಜ' ಅನಿಸಿಕೆಗಳನ್ನು ಹಂಚಿಕೊೞ ಬಯಸುತ್ತೇನೆ ಃ
೧. ರಾಜೀವ ಗಾಂಧಿ 'ಬ್ರಾಹ್ಮಣ' ಎಂಬುದು ನಿಮ್ಮ ಹೊಸ ಆವಿಷ್ಕಾರ!. ಬಹುಷಃ ಯಾವುದೇ 'DNA'  ಪರೀಕ್ಷೆಗೂ ನಿಲುಕದ ಜಾತಿ ಅವರದ್ದು. ತಾತ, ತಂದೆ, ತಾಯಿ, ಹೆಂಡತಿ ಇತ್ಯಾದಿ ಯಾರೊಬ್ಬರೂ ಒಂದೇ ಜಾತಿಗೆ ಸೇರಿದವರಲ್ಲ - ಅವರನ್ನು ಹೇಗೆ 'ಬ್ರಾಹ್ಮಣ' ಮಾಡಿಬಿಟ್ರಿ ಸ್ವಾಮೀ ...? ಇರ್ಲಿ..
೨. ಬ್ರಾಹ್ಮಣರಾದ ರಾಜೀವ್ ಗಾಂಧಿ, ಉಚ್ಚ ಜಾತಿಯವರಾದ ಗಾಂಧಿ, ಹಿಂದೂ ಪ್ರಮೋದ್ ಮಹಾಜನ್ ಮುಂತಾದವರನ್ನು ಕೊಂದಿದ್ದು ಹಿಂದೂಗಳೆ ಅಲ್ವೆ ? ಅಂತ ಪ್ರಶ್ನೆ ಮಾಡಿದ್ದೀರಿ - ಕೊಂದವರು ಅವರ ಜಾತಿಯನ್ನು ನೋಡಿ ಕೊಂದಿಲ್ಲ - ಅವರ ಮೇಲೆ ವೈಯಕ್ತಿಕ ಹಗೆ ಸಾಧಿಸಲು ಕೊಂದಿದ್ದಾರೆ ತಾನೆ ? ಕೊಂದವರು ಯಾವುದೇ ಜನಾಂಗದ ವಿರುದ್ಧ 'ಜಿಹಾದ್' ಯುದ್ಧ ಸಾರಿದವರಲ್ಲ, ಬದಲಾಗಿ 'ಕ್ರಿಮಿನಲ್' ಗಳು ಎಂಬುದು ನಿಮ್ಮ ವಕೀಲಿ ಬುದ್ಧಿಗೇಕೆ ಹೊಳೆಯಲಿಲ್ಲ ಸಾರ್ ?
೩. 'ಅಭಿವ್ಯಕ್ತಿ ಸ್ವಾತಂತ್ರ' ಹೆಸರಿನಲ್ಲಿ 'ಎಂ.ಎಫ್.ಹುಸೇನ್' ಎಂಬ ಮತಾಂಧನು ಹಿಂದೂ ದೇವ ದೇವತೆಗಳ ನಗ್ನ ಮತ್ತು ಅತ್ಯಂತ ಕೀಳು ಅಭಿರುಚಿಯ ಚಿತ್ರಗಳನ್ನು ಬರೆದು ಮೆರೆದಾಗ ಯಾವನೇ ಒಬ್ಬ ಮುಲ್ಲ ಕೂಡಾ ಅವನ ವಿರುದ್ಧ 'ಫಟ್ವಾ' ಹೊರಡಿಸಲಿಲ್ಲವಲ್ಲ ? ಅದೇ, ಪತ್ರಿಕೆಯಲ್ಲಿ ಯಾರೋ ಬರೆದ ಕಥೆಯಲ್ಲಿ ಪೈಗಂಬರ್ ಗೆ  ಅವಮಾನ ಅಯಿತು ಅಂತ ರಾಜ್ಯವಿಡೀ ದೊಂಬಿ ಮಾಡಿದವರು 'ಪರಧರ್ಮ ಸಹಿಷ್ನುಗಳು' ಅಲ್ವೆ ? ಹೋಗಲಿ, ಬಿಡಿ..
೪. ೫೦-೬೦ ವರ್ಷಗಳ ಹಿಂದೆ ನನ್ನ ತಾತನವರು ಸ್ತಳೀಯ ಮುಸ್ಲಿಮರು - 'ತಮ್ಮದೊಂದು ಮಸೀದಿ ಕಟ್ಟಿಕೊೞಲು ಜಾಗ ಬೇಕೆಂದು' ಕೇಳಿದಾಗ ಇರಲಿ, ತಮ್ಮ ಹ್ರದಯ ವೈಶಾಲ್ಯವನ್ನು ಮೆರೆದು, ಅವರಿಗೆ ರಸ್ತೆ ಬದಿಯ ೨ ಎಕರೆ ಜಮೀನನ್ನು ಪುಕ್ಕಟೆ ಕೊಟ್ಟ ಅವರ ವಂಶಸ್ಥರಾದ ನಾವು ಇಂದು ದಿಸೆಂಬರ್ ೬ ರಂದು ಆ ರಸ್ತೆಯಲ್ಲಿ ನಡೆದಾಡಲೂ ಬಿಡುವುದಿಲ್ಲ ಎಂದಾಗ ನಾವು ಯಾರನ್ನು ಹಳಿಯಲಿ - ಭೂಮಿ ಕೊಟ್ಟ ನಮ್ಮ ತಾತನನ್ನೆ ? ಅಥವಾ ಈ ಮತಾಂಧರನ್ನೆ ?
೫. ಕಾಶ್ಮೀರದಲ್ಲಿ ಸಾವಿರಾರು ಹಿಂದೂ ಪಂಡಿತರನ್ನು ನಿರ್ದಯವಾಗಿ ಕೊಂದು, ಉಳಿದವರನ್ನು ಹೊಡೆದೋಡಿಸಿ ಅವರನ್ನು ಅವರ ದೇಶದಲ್ಲೇ ನಿರಾಶ್ರಿತರ ನ್ನಾಗಿ ಮಾಡಿರುವವರ ಬಗ್ಗೆ ಹೆಮ್ಮೆ ಪಡಲೆ ? ಯಾಕೆ ಯಾವೊಬ್ಬ ಮುಸ್ಲಿಮ್ ಗೂ ಅವರ ನೆನಪು ಬರುತ್ತಿಲ್ಲ ?
೬. ಮುಸ್ಲಿಮರು ಪ್ರಪಂಚದಲ್ಲಿ ಎಲ್ಲಾದರೂ ಬೇರೆಯವರರೊಂದಿಗೆ ಶಾಂತಿಯಿಂದ ಬಾಳುವುದನ್ನು ಕಂಡಿದ್ದೀರಾ ? ೨೧ನೇ ಶತಮಾನದಲ್ಲೂ ಉಳಿದವರು 'ಕಾಫಿರ'ರು ಎಂಬ ಮನಸ್ಥಿತಿಯಿಂದ ಹೊರಬಾರದೇಕೆ ? ಹಿಂಸೆಯಿಂದಲೇ ಎಲ್ಲವೂ ಸಾಧ್ಯವೆ ?
೭. ಧರ್ಮದ ಮತ್ತು ನಂಬಿಕೆಯ ಚೌಕಟ್ಟು ದೇಶಭಕ್ತಿಗಿಂತ ದೊಡ್ಡದು ಅನ್ನುವ ಅರ್ಥದಲ್ಲಿ ಬರೆದಿದ್ದೀರಿ - ಇದಕ್ಕೆ 'ದೇಶದ್ರೋಹ' ಎಂಬ ಮಾತನ್ನು ನಮ್ಮ ದೇಶದಲ್ಲಿ ಬಳಸುತ್ತಾರೆ. ಅಂಥವರನ್ನು ಸೈನ್ಯದಲ್ಲಿ, ಪೋಲಿಸ್ ಅಥವಾ ಗುಪ್ತಚರ ಇಲಾಖೆಗಳಲ್ಲಿ ನೇಮಿಸಿದರೆ ದೇಶಕ್ಕೆ ಬೇರೆ ವೈರಿಗಳ ಅಗತ್ಯವಿದೆಯೆ ? 
೮. 'ಮುಸ್ಲಿಮ್' ಮತ್ತು 'ಇಸ್ಲಾಮ್' ಇವೆರಡನ್ನು ಬೇರ್ಪಡಿಸಬೇಕೆಂದು ಹೇಳಿದ್ದೀರಿ - ಖಂಡಿತವಾಗಿಯೂ, ಇಂದಿನ ಸಮಸ್ಯೆಗಳಿಗೆ ಇದು ಅತ್ಯಂತ ಪ್ರಸ್ತುತ ಮತ್ತು ಅಗತ್ಯವಾದ ಪರಿಹಾರ. ಯಾವ ಧರ್ಮವೂ ಕೆಟ್ಟದ್ದಲ್ಲ - ದೇವರನ್ನು ಕಾಣಲು, ಸಾತ್ವಿಕವಾಗಿ ಬಾಳಲು ಇರುವ ದಾರಿಗಳಷ್ಟೆ. ಆದರೆ ಅದನ್ನು ತಮಗೆ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊೞುತ್ತಿರುವವರಿಂದ ಇಡೀ ಸಮಾಜವೇ ಕುಲಗೆಡುತ್ತಿರುವುದು ಆತಂಕದ ವಿಷಯ. ಶುಕ್ರವಾರದಂದು ನಮಾಜಿನ ಸಮಯ ಮೈಕ್ ಹಾಕಿ ಕೋಮು ದ್ವೇಶವನ್ನು ತುಂಬಿಸುವ ಮುಲ್ಲಾಗಳ 'ಸಾತ್ವಿಕ ಬುದ್ಧಿ'ಯ ಪರಿಚಯ ನಿಮಗೆ ಇರಬಹುದು - ಅಲ್ವೆ ?
೯. ಇನ್ನು ಎಷ್ಟು ಕಾಲ ಮುಸ್ಲಿಮರು ರಾಜಕೀಯ 'ವೋಟ್ ಬ್ಯಾಂಕ್' ಮಾತ್ರ ಆಗಿರಲು ಸಾಧ್ಯ ? ಮುಖ್ಯವಾಹಿನಿಯಿಂದ ಹೊರಗಿದ್ದು ಇನ್ನಷ್ಟು 'isolate'  ಆಗಲು ಯಾರು ಕಾರಣ ? ಅಧಿಕಾರಕ್ಕಾಗಿ ಮಾತ್ರ ಕಣ್ಣೀರು ಸುರಿಸಿ ತಮ್ಮ ಬೇಳೆ ಬೇಯಿಸುವ ದೇವೆಗೌಡ, ಮುಲಾಯಮ್, ಲಲ್ಲೂ ಪ್ರಸಾದ್, ಸೋನಿಯಾ ಗಳು ಮುಸ್ಲಿಮರನ್ನು ಇನ್ನೆಷ್ಟು ಕಾಲ ಮುಸ್ಲಿಮರನ್ನು 'ಉಪಯೋಗಿಸ'ಬಹುದು ?
೧೦. USA, Israel ಗಳು ಇರಾಕ್, ಪಾಕಿಸ್ತಾನ್ ಇತ್ಯಾದಿ ದೇಶಗಳನ್ನು, ಆ ದೇಶಗಳ ಅಮಾಯಕ ಜನರು ಮತ್ತು ಸರಕಾರಗಳನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸುತ್ತಿವೆ ಎಂದು ಬರೆದಿದ್ದೀರಿ - ನಿಜಾಂಶ ಇರುವ ವಿಚಾರ. ಆದರೆ ಅಂತಹ ಷಡ್ಯಂತರಗಳಿಗೆ ಪದೇ ಪದೇ ಬಲಿ ಬೀಳುವ ಪಾಕಿಗಳು ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಅನುಮಾನ ಬರುವುದಿಲ್ಲವೇ ?. ಅಲ್ಲದೆ, ಪಾಕಿಸ್ತಾನದ 'ISI'ಹಾಗೂ ಇತರ ಭಯೋತ್ಪಾದಕ ಸಂಘಟನೆಗಳ ಜಾಲಕ್ಕೆ ಮಾರು ಹೋಗಿ ನಮ್ಮವರನ್ನೇ ಮುಗಿಸಲು ಹೊರಟ ಭಾರತದ ಮುಸ್ಲಿಮರ ಬಗ್ಗೆ ಅಭಿಮಾನ ಪಡಬೇಕೆ ?  ಯಾವುದು ಸರಿ, ಯಾವುದು ತಪ್ಪು ಎನ್ನುವ ವಿವೇಚನೆ ಅವರ್ಯಾರಿಗೂ ಇಲ್ಲವೆ ?
ಶಫೀರ್ ಅಣ್ಣ, ಇವೆಲ್ಲದರ ಬಗ್ಗೆ ನಿಮ್ಮ ನಿಲುವು ಸರಿಯಾಗಿರುತ್ತದೆ ಎಂಬುದು ನನ್ನ ನಂಬಿಕೆ. ರಾಜಕಾರಣಿಗಳು 'ವೋಟ್ ಬ್ಯಾಂಕ್' ಮತ್ತು 'ಸೆಕ್ಯುಲರಿಸಂ' ಹೆಸರಿನಲ್ಲಿ ಕಳೆದ ೬೦ ವರ್ಷಗಳಲ್ಲಿ ಈ ದೇಶದ ಜನರನ್ನು, ಅವರ ಮಧ್ಯೆ ಇದ್ದ ಬಾಂಧವ್ಯವನ್ನು ಸಾಕಷ್ಟು ವಿಭಜಿಸಿದ್ದಾರೆ. ಸಮಸ್ಯೆಯನ್ನು ಬಗೆಹರಿಸಬೇಕಾದರೆ ಅದನ್ನು ಸರಿಯಾಗಿ ವಿಶ್ಲೇಷಿಸಿದರೆ, ಮೂಲ ಕಾರಣ ಹುಡುಕಿದರೆ ಮಾತ್ರ ಪರಿಹಾರ ಸಾಧ್ಯ. ಹಿಂದೂಗಳೆಲ್ಲರೂ ಸರಿ, ಮುಸ್ಲಿಮರು ಮಾತ್ರ ತಪ್ಪು ಎಂದು ಯಾರೂ ಹೇಳ್ತಾ ಇಲ್ಲ. ಆದರೆ, ಇಂಥಹ ಜಟಿಲ ವಿಷಯಗಳು ಚರ್ಚಿತವಾದಾಗ ಪೂರ್ವಾಗ್ರಹಗಳು ಎದುರಾಗುವುದು ಸಹಜ. ಆದರೂ ನಾವೆಲ್ಲ ಈ ದೇಶದಲ್ಲೇ ಒಂದಾಗಿ ಬಾಳಬೇಕಾದವರು - ನಿಮ್ಮಂಥ ಸಹ್ರ್ದದಯಿಗಳು ಮುಂದೆ ಬಂದರೆ, ವಿಷಯಗಳು ಮುಕ್ತವಾಗಿ ಚರ್ಚಿತವಾದರೆ ಒೞೆಯ ದಿನಗಳು ಬರಬಹುದು ಎಂಬುದು ನನ್ನ ಆಶಯ.
ನಿಮ್ಮ,
ತಲೆಹರಟೆ  

ತಲೆಹರಟೆ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/17/2010 - 14:09

ಪ್ರಿಯ ಶಫೀರ್ ಅವರೆ,
ನಿಮ್ಮ ಸಾಮಾಜಿಕ ಕಳಕಳಿ, ಬುದ್ಧಿವಂತಿಕೆ ಮತ್ತು ವಿಷಯ ಮಂಡನೆ ಚತುರತೆಯನ್ನು ಮೆಚ್ಚುತ್ತಾ ನನ್ನ ಕೆಲವು 'ಸಹಜ' ಅನಿಸಿಕೆಗಳನ್ನು ಹಂಚಿಕೊೞ ಬಯಸುತ್ತೇನೆ ಃ
೧. ರಾಜೀವ ಗಾಂಧಿ 'ಬ್ರಾಹ್ಮಣ' ಎಂಬುದು ನಿಮ್ಮ ಹೊಸ ಆವಿಷ್ಕಾರ!. ಬಹುಷಃ ಯಾವುದೇ 'DNA'  ಪರೀಕ್ಷೆಗೂ ನಿಲುಕದ ಜಾತಿ ಅವರದ್ದು. ತಾತ, ತಂದೆ, ತಾಯಿ, ಹೆಂಡತಿ ಇತ್ಯಾದಿ ಯಾರೊಬ್ಬರೂ ಒಂದೇ ಜಾತಿಗೆ ಸೇರಿದವರಲ್ಲ - ಅವರನ್ನು ಹೇಗೆ 'ಬ್ರಾಹ್ಮಣ' ಮಾಡಿಬಿಟ್ರಿ ಸ್ವಾಮೀ ...? ಇರ್ಲಿ..
೨. ಬ್ರಾಹ್ಮಣರಾದ ರಾಜೀವ್ ಗಾಂಧಿ, ಉಚ್ಚ ಜಾತಿಯವರಾದ ಗಾಂಧಿ, ಹಿಂದೂ ಪ್ರಮೋದ್ ಮಹಾಜನ್ ಮುಂತಾದವರನ್ನು ಕೊಂದಿದ್ದು ಹಿಂದೂಗಳೆ ಅಲ್ವೆ ? ಅಂತ ಪ್ರಶ್ನೆ ಮಾಡಿದ್ದೀರಿ - ಕೊಂದವರು ಅವರ ಜಾತಿಯನ್ನು ನೋಡಿ ಕೊಂದಿಲ್ಲ - ಅವರ ಮೇಲೆ ವೈಯಕ್ತಿಕ ಹಗೆ ಸಾಧಿಸಲು ಕೊಂದಿದ್ದಾರೆ ತಾನೆ ? ಕೊಂದವರು ಯಾವುದೇ ಜನಾಂಗದ ವಿರುದ್ಧ 'ಜಿಹಾದ್' ಯುದ್ಧ ಸಾರಿದವರಲ್ಲ, ಬದಲಾಗಿ 'ಕ್ರಿಮಿನಲ್' ಗಳು ಎಂಬುದು ನಿಮ್ಮ ವಕೀಲಿ ಬುದ್ಧಿಗೇಕೆ ಹೊಳೆಯಲಿಲ್ಲ ಸಾರ್ ?
೩. 'ಅಭಿವ್ಯಕ್ತಿ ಸ್ವಾತಂತ್ರ' ಹೆಸರಿನಲ್ಲಿ 'ಎಂ.ಎಫ್.ಹುಸೇನ್' ಎಂಬ ಮತಾಂಧನು ಹಿಂದೂ ದೇವ ದೇವತೆಗಳ ನಗ್ನ ಮತ್ತು ಅತ್ಯಂತ ಕೀಳು ಅಭಿರುಚಿಯ ಚಿತ್ರಗಳನ್ನು ಬರೆದು ಮೆರೆದಾಗ ಯಾವನೇ ಒಬ್ಬ ಮುಲ್ಲ ಕೂಡಾ ಅವನ ವಿರುದ್ಧ 'ಫಟ್ವಾ' ಹೊರಡಿಸಲಿಲ್ಲವಲ್ಲ ? ಅದೇ, ಪತ್ರಿಕೆಯಲ್ಲಿ ಯಾರೋ ಬರೆದ ಕಥೆಯಲ್ಲಿ ಪೈಗಂಬರ್ ಗೆ  ಅವಮಾನ ಅಯಿತು ಅಂತ ರಾಜ್ಯವಿಡೀ ದೊಂಬಿ ಮಾಡಿದವರು 'ಪರಧರ್ಮ ಸಹಿಷ್ನುಗಳು' ಅಲ್ವೆ ? ಹೋಗಲಿ, ಬಿಡಿ..
೪. ೫೦-೬೦ ವರ್ಷಗಳ ಹಿಂದೆ ನನ್ನ ತಾತನವರು ಸ್ತಳೀಯ ಮುಸ್ಲಿಮರು - 'ತಮ್ಮದೊಂದು ಮಸೀದಿ ಕಟ್ಟಿಕೊೞಲು ಜಾಗ ಬೇಕೆಂದು' ಕೇಳಿದಾಗ ಇರಲಿ, ತಮ್ಮ ಹ್ರದಯ ವೈಶಾಲ್ಯವನ್ನು ಮೆರೆದು, ಅವರಿಗೆ ರಸ್ತೆ ಬದಿಯ ೨ ಎಕರೆ ಜಮೀನನ್ನು ಪುಕ್ಕಟೆ ಕೊಟ್ಟ ಅವರ ವಂಶಸ್ಥರಾದ ನಾವು ಇಂದು ದಿಸೆಂಬರ್ ೬ ರಂದು ಆ ರಸ್ತೆಯಲ್ಲಿ ನಡೆದಾಡಲೂ ಬಿಡುವುದಿಲ್ಲ ಎಂದಾಗ ನಾವು ಯಾರನ್ನು ಹಳಿಯಲಿ - ಭೂಮಿ ಕೊಟ್ಟ ನಮ್ಮ ತಾತನನ್ನೆ ? ಅಥವಾ ಈ ಮತಾಂಧರನ್ನೆ ?
೫. ಕಾಶ್ಮೀರದಲ್ಲಿ ಸಾವಿರಾರು ಹಿಂದೂ ಪಂಡಿತರನ್ನು ನಿರ್ದಯವಾಗಿ ಕೊಂದು, ಉಳಿದವರನ್ನು ಹೊಡೆದೋಡಿಸಿ ಅವರನ್ನು ಅವರ ದೇಶದಲ್ಲೇ ನಿರಾಶ್ರಿತರ ನ್ನಾಗಿ ಮಾಡಿರುವವರ ಬಗ್ಗೆ ಹೆಮ್ಮೆ ಪಡಲೆ ? ಯಾಕೆ ಯಾವೊಬ್ಬ ಮುಸ್ಲಿಮ್ ಗೂ ಅವರ ನೆನಪು ಬರುತ್ತಿಲ್ಲ ?
೬. ಮುಸ್ಲಿಮರು ಪ್ರಪಂಚದಲ್ಲಿ ಎಲ್ಲಾದರೂ ಬೇರೆಯವರರೊಂದಿಗೆ ಶಾಂತಿಯಿಂದ ಬಾಳುವುದನ್ನು ಕಂಡಿದ್ದೀರಾ ? ೨೧ನೇ ಶತಮಾನದಲ್ಲೂ ಉಳಿದವರು 'ಕಾಫಿರ'ರು ಎಂಬ ಮನಸ್ಥಿತಿಯಿಂದ ಹೊರಬಾರದೇಕೆ ? ಹಿಂಸೆಯಿಂದಲೇ ಎಲ್ಲವೂ ಸಾಧ್ಯವೆ ?
೭. ಧರ್ಮದ ಮತ್ತು ನಂಬಿಕೆಯ ಚೌಕಟ್ಟು ದೇಶಭಕ್ತಿಗಿಂತ ದೊಡ್ಡದು ಅನ್ನುವ ಅರ್ಥದಲ್ಲಿ ಬರೆದಿದ್ದೀರಿ - ಇದಕ್ಕೆ 'ದೇಶದ್ರೋಹ' ಎಂಬ ಮಾತನ್ನು ನಮ್ಮ ದೇಶದಲ್ಲಿ ಬಳಸುತ್ತಾರೆ. ಅಂಥವರನ್ನು ಸೈನ್ಯದಲ್ಲಿ, ಪೋಲಿಸ್ ಅಥವಾ ಗುಪ್ತಚರ ಇಲಾಖೆಗಳಲ್ಲಿ ನೇಮಿಸಿದರೆ ದೇಶಕ್ಕೆ ಬೇರೆ ವೈರಿಗಳ ಅಗತ್ಯವಿದೆಯೆ ? 
೮. 'ಮುಸ್ಲಿಮ್' ಮತ್ತು 'ಇಸ್ಲಾಮ್' ಇವೆರಡನ್ನು ಬೇರ್ಪಡಿಸಬೇಕೆಂದು ಹೇಳಿದ್ದೀರಿ - ಖಂಡಿತವಾಗಿಯೂ, ಇಂದಿನ ಸಮಸ್ಯೆಗಳಿಗೆ ಇದು ಅತ್ಯಂತ ಪ್ರಸ್ತುತ ಮತ್ತು ಅಗತ್ಯವಾದ ಪರಿಹಾರ. ಯಾವ ಧರ್ಮವೂ ಕೆಟ್ಟದ್ದಲ್ಲ - ದೇವರನ್ನು ಕಾಣಲು, ಸಾತ್ವಿಕವಾಗಿ ಬಾಳಲು ಇರುವ ದಾರಿಗಳಷ್ಟೆ. ಆದರೆ ಅದನ್ನು ತಮಗೆ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊೞುತ್ತಿರುವವರಿಂದ ಇಡೀ ಸಮಾಜವೇ ಕುಲಗೆಡುತ್ತಿರುವುದು ಆತಂಕದ ವಿಷಯ. ಶುಕ್ರವಾರದಂದು ನಮಾಜಿನ ಸಮಯ ಮೈಕ್ ಹಾಕಿ ಕೋಮು ದ್ವೇಶವನ್ನು ತುಂಬಿಸುವ ಮುಲ್ಲಾಗಳ 'ಸಾತ್ವಿಕ ಬುದ್ಧಿ'ಯ ಪರಿಚಯ ನಿಮಗೆ ಇರಬಹುದು - ಅಲ್ವೆ ?
೯. ಇನ್ನು ಎಷ್ಟು ಕಾಲ ಮುಸ್ಲಿಮರು ರಾಜಕೀಯ 'ವೋಟ್ ಬ್ಯಾಂಕ್' ಮಾತ್ರ ಆಗಿರಲು ಸಾಧ್ಯ ? ಮುಖ್ಯವಾಹಿನಿಯಿಂದ ಹೊರಗಿದ್ದು ಇನ್ನಷ್ಟು 'isolate'  ಆಗಲು ಯಾರು ಕಾರಣ ? ಅಧಿಕಾರಕ್ಕಾಗಿ ಮಾತ್ರ ಕಣ್ಣೀರು ಸುರಿಸಿ ತಮ್ಮ ಬೇಳೆ ಬೇಯಿಸುವ ದೇವೆಗೌಡ, ಮುಲಾಯಮ್, ಲಲ್ಲೂ ಪ್ರಸಾದ್, ಸೋನಿಯಾ ಗಳು ಮುಸ್ಲಿಮರನ್ನು ಇನ್ನೆಷ್ಟು ಕಾಲ ಮುಸ್ಲಿಮರನ್ನು 'ಉಪಯೋಗಿಸ'ಬಹುದು ?
೧೦. USA, Israel ಗಳು ಇರಾಕ್, ಪಾಕಿಸ್ತಾನ್ ಇತ್ಯಾದಿ ದೇಶಗಳನ್ನು, ಆ ದೇಶಗಳ ಅಮಾಯಕ ಜನರು ಮತ್ತು ಸರಕಾರಗಳನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸುತ್ತಿವೆ ಎಂದು ಬರೆದಿದ್ದೀರಿ - ನಿಜಾಂಶ ಇರುವ ವಿಚಾರ. ಆದರೆ ಅಂತಹ ಷಡ್ಯಂತರಗಳಿಗೆ ಪದೇ ಪದೇ ಬಲಿ ಬೀಳುವ ಪಾಕಿಗಳು ಹೊಟ್ಟೆಗೆ ಏನು ತಿನ್ನುತ್ತಾರೆ ಎಂದು ಅನುಮಾನ ಬರುವುದಿಲ್ಲವೇ ?. ಅಲ್ಲದೆ, ಪಾಕಿಸ್ತಾನದ 'ISI'ಹಾಗೂ ಇತರ ಭಯೋತ್ಪಾದಕ ಸಂಘಟನೆಗಳ ಜಾಲಕ್ಕೆ ಮಾರು ಹೋಗಿ ನಮ್ಮವರನ್ನೇ ಮುಗಿಸಲು ಹೊರಟ ಭಾರತದ ಮುಸ್ಲಿಮರ ಬಗ್ಗೆ ಅಭಿಮಾನ ಪಡಬೇಕೆ ?  ಯಾವುದು ಸರಿ, ಯಾವುದು ತಪ್ಪು ಎನ್ನುವ ವಿವೇಚನೆ ಅವರ್ಯಾರಿಗೂ ಇಲ್ಲವೆ ?
ಶಫೀರ್ ಅಣ್ಣ, ಇವೆಲ್ಲದರ ಬಗ್ಗೆ ನಿಮ್ಮ ನಿಲುವು ಸರಿಯಾಗಿರುತ್ತದೆ ಎಂಬುದು ನನ್ನ ನಂಬಿಕೆ. ರಾಜಕಾರಣಿಗಳು 'ವೋಟ್ ಬ್ಯಾಂಕ್' ಮತ್ತು 'ಸೆಕ್ಯುಲರಿಸಂ' ಹೆಸರಿನಲ್ಲಿ ಕಳೆದ ೬೦ ವರ್ಷಗಳಲ್ಲಿ ಈ ದೇಶದ ಜನರನ್ನು, ಅವರ ಮಧ್ಯೆ ಇದ್ದ ಬಾಂಧವ್ಯವನ್ನು ಸಾಕಷ್ಟು ವಿಭಜಿಸಿದ್ದಾರೆ. ಸಮಸ್ಯೆಯನ್ನು ಬಗೆಹರಿಸಬೇಕಾದರೆ ಅದನ್ನು ಸರಿಯಾಗಿ ವಿಶ್ಲೇಷಿಸಿದರೆ, ಮೂಲ ಕಾರಣ ಹುಡುಕಿದರೆ ಮಾತ್ರ ಪರಿಹಾರ ಸಾಧ್ಯ. ಹಿಂದೂಗಳೆಲ್ಲರೂ ಸರಿ, ಮುಸ್ಲಿಮರು ಮಾತ್ರ ತಪ್ಪು ಎಂದು ಯಾರೂ ಹೇಳ್ತಾ ಇಲ್ಲ. ಆದರೆ, ಇಂಥಹ ಜಟಿಲ ವಿಷಯಗಳು ಚರ್ಚಿತವಾದಾಗ ಪೂರ್ವಾಗ್ರಹಗಳು ಎದುರಾಗುವುದು ಸಹಜ. ಆದರೂ ನಾವೆಲ್ಲ ಈ ದೇಶದಲ್ಲೇ ಒಂದಾಗಿ ಬಾಳಬೇಕಾದವರು - ನಿಮ್ಮಂಥ ಸಹ್ರ್ದದಯಿಗಳು ಮುಂದೆ ಬಂದರೆ, ವಿಷಯಗಳು ಮುಕ್ತವಾಗಿ ಚರ್ಚಿತವಾದರೆ ಒೞೆಯ ದಿನಗಳು ಬರಬಹುದು ಎಂಬುದು ನನ್ನ ಆಶಯ.
ನಿಮ್ಮ,
ತಲೆಹರಟೆ  

ಬಾಲ ಚಂದ್ರ ಶನಿ, 04/17/2010 - 17:06

ಪ್ರಿಯ ಪಾಂಡುರಂಗ,
ಇವು ಮೇಲೆ ನೀವು ಕೊಟ್ಟಿರುವ ಲಿಂಕ್ ನಲ್ಲಿರುವ ಲೇಖನಕ್ಕೆ ಬಂದ ಅಭಿಪ್ರಾಯಗಳು
೧)  ಅಲ್ಲ ರೀ ಸತೀಶ್, ಭದ್ರತಾ ಪಡೆಗಳನ್ನ ಭಯೋತ್ಪಾದಕರಂತೆ ಚಿತ್ರಿಸುತ್ತಿರುವ ನಿಮ್ಮಿ ಲೇಖನ , ಭದ್ರಾತಪದೆಗಳು ಈ ಸ್ಥಿತಿಗೆ ಬಂದು ತಲುಪಲು ಅಲ್ಲಿನ ಜನ ಎಷ್ಟು ಕಾರಣ ಅಂತ ಯಾಕೆ ಹೇಳುತ್ತಿಲ್ಲ? ಭಯೋತ್ಪಾದಕರನ್ನ ಸಾಕಿ ಬೆಳೆಸಿದವರು ಯಾರು? ಕಾಶ್ಮೀರಿ ಪಂಡಿತರನ್ನ ಕಣಿವೆಯಿಂದ ಓಡಿಸಲು,ಸಾಯಿಸಲು ನೆರವಿದುವಾಗ ಈ ಜನರ ಮಾನವೀಯತೆ ಸತ್ತು ಹೊಗಿತ್ತಾ? one sided article ರಾಕೇಶ್ ಶೆಟಅಲ್ಲ ರೀ ಸತೀಶ್, ಭದ್ರತಾ ಪಡೆಗಳನ್ನ ಭಯೋತ್ಪಾದಕರಂತೆ ಚಿತ್ರಿಸುತ್ತಿರುವ ನಿಮ್ಮಿ ಲೇಖನ , ಭದ್ರಾತಪದೆಗಳು ಈ ಸ್ಥಿತಿಗೆ ಬಂದು ತಲುಪಲು ಅಲ್ಲಿನ ಜನ ಎಷ್ಟು ಕಾರಣ ಅಂತ ಯಾಕೆ ಹೇಳುತ್ತಿಲ್ಲ? ಭಯೋತ್ಪಾದಕರನ್ನ ಸಾಕಿ ಬೆಳೆಸಿದವರು ಯಾರು? ಕಾಶ್ಮೀರಿ ಪಂಡಿತರನ್ನ ಕಣಿವೆಯಿಂದ ಓಡಿಸಲು,ಸಾಯಿಸಲು ನೆರವಿದುವಾಗ ಈ ಜನರ ಮಾನವೀಯತೆ ಸತ್ತು ಹೊಗಿತ್ತಾ? one sided article ರಾಕೇಶ್ ಶೆಟ್ಟಿ...
೨) ಸತೀಶ್ ಅವರು ಪಾಕಿಸ್ತಾನದ website ಅಥವಾ ಪತ್ರಿಕೆ ನೋಡಿ ಬರೆಯುತ್ತಾರೇನೋ ?...
೩)ಸತೀಶ್ ಹೇಳಿಕೆ ಸಮಂಜಸ ಅನ್ನಿಸುತ್ತಿಲ್ಲ .... ರಕ್ತಪಾತ ಮಾಡುವ ಭಯೋತ್ಪದಕರಗಿಂತ ಸೈನಿಕರನ್ನೇ ಆರೋಪಿಗಳನ್ನಗಿಸಿರುವುದು ಅಕ್ಷಮ್ಯ .......
೪)ಪಾಕಿಸ್ತಾನದಿ೦ದ ಪ್ರತಿ ದಿನ ಟೆರರಿಸ್ಟ ಗು೦ಪು ಗಡಿ ದಾಟಿ ಭಾರತದ ಕಾಶ್ಮೀರದೊಳಗೆ ಬ೦ದು ಭಯೋತ್ಪಾದಕ ಸ್ತಿತಿ ನಿರ್ಮಿಸಿರುವದು ಎಲ್ಲರಿಗೂ ಗೊತ್ತಿದ್ದ ಸ೦ಗತಿ. ಭದ್ರತಾಪಡೆಗಳು ತಮ್ಮ ಕಾರ್ಯ ನಿರ್ವಹಿಸಲು ಅಲ್ಲಿ ನೆಲೆಸಿರುವುದೆ ಹೊರತು ಹಣ ಗಳಿಸಲು ಅಲ್ಲ. ಕೆಲವೆಡೆ ಘಟನೆಗಳು ನಡೆದಿರಬಹುದು. ಕಳೆದ ದಶಕದಿ೦ದ ಹಲವಾರು ಭದ್ರತಾಪಡೆಯ ಸೈನಿಕರು ನಮ್ಮ ದೇಶಕ್ಕಾಗಿ ಕಾಶ್ಮೀರದಲ್ಲಿ ಅಸು ನೀಗಿದ್ದಾರೆ. ಹಾಗಿರುವಾಗ ಕಾಶ್ಮೀರದಲ್ಲಿ ಶಾ೦ತಿ ನೆಲೆಸಿದರೆ ಆರು ಲಕ್ಷ ಜನ ಭದ್ರತಾಪಡೆಗಳಿಗೆ ಅಪಾರ ಹಣ ಮತ್ತು ಸಿಗುತ್ತಿರುವ ಸೌಲಭ್ಯಗಳ ಗತಿಯೇನು ಎ೦ಬ ತಮ್ಮ ಹೇಳಿಕೆ ನಿಮ್ಮ ಸ೦ಕುಚಿತ ಭಾವನೆಯನ್ನು ಎದ್ದು ತೋರಿಸುತ್ತದೆ....
೫)ಭಯೋತ್ಪಾದಕ ಸ್ತಿತಿ ಕಾಶ್ಮೀರದಲ್ಲಿ ಕಳೆದ ಹಲವು ವರುಷಗಳಿ೦ದ ನೆಲೆಸಿದ್ದರಿ೦ದ, ಸಹಜವಾಗಿ ಭದ್ರತಾಪಡೆಗಳು ಸುರಕ್ಷಿತೆಯ ದ್ರಷ್ಟಿಯಿ೦ದ ತಮ್ಮ ಕಾರ್ಯ ನಿರ್ವಹಿಸುತ್ತಿರುವುದನ್ನು ನಾವು ಗಮನಿಸಬೇಕು. ಕಾಶ್ಮೀರದಲ್ಲಿ ಶಾ೦ತಿ ನೆಲೆಸಿದರೆ ಆರು ಲಕ್ಷ ಜನ ಭದ್ರತಾಪಡೆಗಳಿಗೆ ಅಪಾರ ಹಣ ಮತ್ತು ಸಿಗುತ್ತಿರುವ ಸೌಲಭ್ಯಗಳ ಗತಿಯೇನು ಎ೦ಬ ನಿಮ್ಮ ಹೇಳಿಕೆ ಸಮ೦ಜಸ ಕಾಣುವಿದಿಲ್ಲ. ತಮ್ಮ ಬರವಣಿಗೆಯು ಲೇಖನವೇ ಅಥವಾ ದೈನ೦ದಿನ ವಾರ್ತೆಯೆ? ಎ೦ಬುದು ತಿಳಿಯುವದಿಲ್ಲ..... ಶ್ರೀಹರಿ
೬)ನಾವು 12 ಜನ ಅಮರ್ನಾಥಿಗೆ ಹೋಗಿದ್ದೆವು . ಆರ್ಮಿ, BSf ಅವರನ್ನು ಮಾತನಾಡಿಸಿದ್ದೆವು ಆದರೆ ಅವರೆಲ್ಲ ನಮ್ಮ ಹತ್ತಿರ ಒಳ್ಳೆಯ ರೀತಿಯಲ್ಲಿ ಮಾತನಾಡಿಸಿದ್ದರು(even in Srinagar). ನಾವು ಆರ್ಮಿ ಅವರಿಗೆ respect ಕೊಡಬೇಕು ಏಕೆಂದರೆ ನಮಗೋಸ್ಕರ ಗಡಿಯನ್ನು ಕಾಯುತ್ತಾರೆ . ಮತ್ತೆ local support ಇಲ್ಲದೆ ಯಾವ terroist or naksalet orgenisation ಬೆಳೆಯಲಾರದು. ಜಮ್ಮುವಿನಲ್ಲಿ ಅಷ್ಟು ಇಲ್ಲ ಏಕೆ ?...
 
ಕೊನೆಯದಾಗಿ,
ಮುಂಬೈನಲ್ಲಿ, ಕೊಲ್ಕೊತ್ತಾದಲ್ಲಿ ಹಾಗೂ ಬೆಂಗಳೂರಿನಲ್ಲಿ ( ನಾನು ಈ ಸಾಲು ಬರೆಯುವಷ್ಟರಲ್ಲಿ ಬೆಂಗಳೂರಿನಲ್ಲಿ ಇನ್ನೊಂದು ಸ್ಪೋಟವಾಗಿದೆ) ಕಲ್ಲು ಹೊಡೆದದಕ್ಕೇ ಉಗ್ರಗಾಮಿಗಳು ಬಾಂಬ್ ಹಾಕಿದರಾ?
ಸಸ್ನೇಹ
ಬಾಲ ಚಂದ್ರ

ಪಾ೦ಡುರ೦ಗ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/17/2010 - 19:46

ಬಾಲ ಚ೦ದ್ರ ರವರೆ  ಸತೀಷ್ ರವರ ಎಲ್ಲಾ ಲೇಖನಗಳನ್ನು ಓದಿ ಅದರ ಪ್ರತಿಕ್ರಿಯೆಗಳನ್ನು ಓದಿ ಆಮೆಲೆ ನೀವೆ ತೀರ್ಮಾನಿಸಿ.

ಬಾಲ ಚಂದ್ರ ಶನಿ, 04/17/2010 - 21:30

ಖಂಡಿತಾ ಸರ್,
 
ಸಸ್ನೇಹ
ಬಾಲ ಚಂದ್ರ

ಕೆಎಲ್ಕೆ ಶನಿ, 04/17/2010 - 14:25

ಶಫೀರ್ ಭಾಯ್,
ಕೆಲವೊಮ್ಮೆ ಭಾವನಾತ್ಮಕವಾಗಿ ಬಲಕ್ಕೆ, ವೈಚಾರಿಕವಾಗಿ ಎಡಕ್ಕೆ, ಇನ್ನೊಮ್ಮೆ ಇದರ ಉಲ್ಟಾ ವಾಲುವ ವ್ಯಕ್ತಿ ನಾನು. ಭಾವನೆಗೆ ಪ್ರಾಮುಖ್ಯತೆ ನೀಡಬೇಕೋ, ವೈಚಾರಿಕತೆಗೆ ನೀಡಬೇಕೊ ಎಂಬ ವಾದ ಸದ್ಯಕ್ಕೆ ಬೇಡ. ಮುಸ್ಲಿಮ್ ದ್ವೇಶ ದೆಶಕ್ಕೆ ಯಾವರೀತಿ ಸಹಾಯಕ ಎಂಬುದು ನನಗಿನ್ನೂ ಅರ್ಥವಾಗದ ಸಂಗತಿ. ಅಂತೇ, Walk a mile in my shoes ಎಂಬ ನಿಮ್ಮ ಅಳಲನ್ನು ನಾನು ಅರಿಯಬಲ್ಲೆ. ಅದರಬಗ್ಗೆ ಹಾಗೂ ಭಾರತದ ಮುಸ್ಲಿಮ್ ರ ಸ್ಥಿತಿ ಗತಿಯ ಬಗ್ಗೆ ಅನುಕಂಪ ವಿಷಾದ ಎರಡೂ ಇದೆ.
ಅಂದಹಾಗೆ, ನಿಮ್ಮ ಈ ಮೇಲಿನ ಲೇಖನದಲ್ಲಿ ಎರಡು ವಿಷಯಗಳ ಬಗ್ಗೆ ನಾನು ಹೇಳುವುದು:
 
""ಹಿಂದೂಗಳ ತಲೆ ಕಡಿಯಿರಿ ಅನ್ನೋ ಒಂದೇ ಒಂದು ವಾಕ್ಯವನ್ನೂ ಕುರ್ ಆನ್ ನಲ್ಲಿ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ "" ಎಂದು ಹೇಳಿದ್ದೀರಿ. 'ಹಿಂದೂಗಳ ತಲೆ' ಅಂತಾ ಸ್ಪೆಸಿಫಿಕ್ ಆಗಿ ಇಲ್ಲದಿರಬಹುದು; ಇಸ್ಲಾಂ ಅನುಯಾಯಿಗಳಲ್ಲದವರ ತಲೆ ಕಡಿದರೆ ಪಾಪವೇನೂ ಇಲ್ಲ ಅಂತ ಅನೇಕಕಡೆ, ನೇರವಾಗಿ, ಪರೋಕ್ಷವಾಗಿ ಹೇಳಿದೆ ಎಂಬುದನ್ನು ನಾನು ಬಲ್ಲ ಮೂಲಗಳಿಂದ ಬಲ್ಲೆ. ತಾವೂ ಬೇಕಾದರೆ ಭೈರಪ್ಪನವರ 'ಆವರಣ' ಓದಿ ಖಚಿತ ಪಡಿಸಕೊಳ್ಳಬಹುದು. 
 
ಅಲ್ಲದೆ, ಅಮೇರಿಕಾ ಎಂಬ ದೇಶ ಜಗತ್ತಿನ ಅತಿ ದೊಡ್ಡ ಭಯೋತ್ಪಾದಕ ಎಂಬುದು ಸತ್ಯಸ್ಯ ಸತ್ಯ. ಆದರೆ ಅವರು ಬೆಳೆಸಿದ್ದು, ಮುಗಿಸಿದ್ದು, ಈ ಭಯೋತ್ಪಾದನೆಗೆ ಬಳಸಿದ್ದು ಎಲ್ಲ ಮುಸ್ಲಿಂರನ್ನೇ ಅನ್ನುವುದೂ ಅಷ್ಟೇ ಸತ್ಯ. ಇದು ಯಾಕೆ ಸಾಧ್ಯವಾಯಿತು ಎಂಬುದನ್ನು ನಿಮಗೆ ನೀವೇ ಕೇಳಿಕೊಂಡಾಗ ಕುರಾನ್ನಲ್ಲಿ ನಿಜವಾಗೂ '........ತಲೆ ಕಡಿಯಿರಿ...' ಎಂದು ಎಲ್ಲಾದರೂ ( ಯಾವ ಮೂಲೆಯಲ್ಲೂ ಇರಬಹುದು)ಹೇಳಿರಬಹುದು ಅಂತಾ ತಮಗೆ ಖಚಿತವಾದೀತು.
ಆದರೆ,
ವಿಷಯ ಅದಲ್ಲ. ಮುಸ್ಲಿಂರ( ನಾನು ಭಾರತದ ಮುಸ್ಲಿಮರ ಬಗ್ಗೆ ಮಾತ್ರ ಹೇಳುತ್ತಿರುವುದು) ಮೂಲಭೂತ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ, ಅವರ ಭಾವನೆಗಳಿಗೆ ಸ್ಪಂದಿಸದೇ, ಅವರನ್ನು ದ್ವೇಷಿಸುವುದರಲ್ಲಿ ಅರ್ಥವಿಲ್ಲ, ಅದು ದೇಶಭಕ್ತಿಯೂ ಅಲ್ಲ.
 

ಕರುನಾಡ ಕನ್ನಡಿಗ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 04/17/2010 - 20:05

ಕೆಲ್ಕೆ ರವರೆ ನಿಮ್ಮ  ಉತ್ತರ ಸ್ಪಷ್ಟ ಅದಕ್ಕೆ ಒಪ್ಪಿದ್ದೆನೆ.
 ಆದರೆ   ಭೈರಪ್ಪನವರು ಅನಾವರಣ ಬರೆದಿದ್ದು ಸರಿ.  ಅಲ್ಲಿ ಇರುವುದು ಅವರ ಅಬಿಪ್ರಾಯಗಳು ಅಷ್ಟೆ ಅಲ್ಲದೆ ಕುರಾನ್ ಬಗ್ಗೆ ಅವರಿಗೆ ಏನು ಗೊತ್ತಿಲ್ಲಾ ಕಾರಣ ಅದನ್ನು ಅವರು ಒಪ್ಪಿದ್ದಾರೆ. ಅಲ್ಲದೆ ಅವರು ಒ೦ದು ಪ೦ಗಡದ ರೀತಿ ರಿವಾಜುಗಳನ್ನೆ ಒ೦ದು ಧರ್ಮ ಎ೦ದು ಹೇಳ ಹೊರಟಿದ್ದಾರೆ.
ಹಾಗೆ ಬ೦ದಾಗ ದೇವದಾಸಿ ಪದ್ದತಿ, ಸತಿ ಪದ್ದತಿ, ಬಾಲ್ಯ ವಿವಾಹ,  ಶೂದ್ರ-ಬ್ರಾಹ್ಮಣ, ದೆವಸ್ತಾನದಲ್ಲಿ ಪೂಜಾರಿ ಬ್ರಾಹ್ಮಣ ಮಾತ್ರ, ಎ೦ದ ಮಾತ್ರಕ್ಕೆ ಇದನ್ನೆ ಒ೦ದು ಧರ್ಮ ಎ೦ದರೆ ಅಷ್ಟು ಸರಿ ?
ಹೇಗಾದರು ಮಾಡಿ ಹೆಸರುಗಳಿಸಬೇಕೆ೦ದರೆ ಒ೦ದು  ವಿವಾದತ್ಮಕ ಲೆಖನ  ಅಥವ  ಪುಸ್ತಕ  ಒ೦ದು ಚಿತ್ರ ಒ೦ದು ಚಳುವಳಿ ಅದೊ೦ದೆ ಮಾರ್ಗ ಈಗುಳಿದುರಿವ ಮಾರ್ಗ ಅಲ್ಲವೆ.
ಧರ್ಮ ಗ್ರ೦ಥಗಳಲ್ಲಿ ಬರೆದಿರುವ೦ತೆ ಇ೦ದು ಧರ್ಮಗಳು ಇವೆಯಾ ? ಅಥವ ಅದನ್ನು ಅನುಸರಿಸುತ್ತಿದ್ದಾರೆಯೆ.
ಆದ್ದರಿ೦ದ ಒ೦ದು ಪ್ರದೇಶದ ರೀತಿ ರಿವಾಜುಗಳನ್ನೆ ಧರ್ಮ ಎ೦ದರೆ ಹೇಗೆ ?
 
 

ವಸಂತ್ ಶನಿ, 04/17/2010 - 23:29

   ನನಗೆ ತಿಳಿದ ಮಟ್ಟಿಗೆ ಕೇವಲ ಒಂದು ಜಾತಿ ಒಂದು ಮತ ಒಂದು ಪಂತವೆಂದು ಎಲ್ಲರು ನಡೆದಂತೆ ಕಾಣುತ್ತಿದೆ. ಅವರನ್ನು ಬೈದು ಇವನು ಇವರನ್ನು ಬೈದು ಅವನು ಕಚ್ಚಾಟದಂತೆ ತೋರುತ್ತಿದೆ. ಮೋದಲಿಗೆ ನಾವು ಭಾರತೀಯರಂಬ ಪರಮ ಸತ್ಯವನ್ನು ಮರೆಯಬಾರದು ಮತ್ತು ಈ ಪ್ರಪಂಚದಲ್ಲಿ ಗಂಡು ಹೆಣ್ಣುಗಳೆಂಬ ಜಾತೀಗಳನ್ನು ಒರತು ಪಡಿಸಿ ಬೇರೇ ಯಾವ ಜಾತಿಯು ಇಲ್ಲವೆಂಬುದು ನನ್ನ ಬಾವನೆ. ಇಲ್ಲಿ ಯಾರನ್ನೆ ಆಗಲಿ ದಲಿತ ಶೂದ್ರ ರೆಂಬ ಅಕ್ಷರಗಳ ಬಳಕೆ ಸರಿಯಾದುದಲ್ಲ ತಲತಲಾಂತರಗಳಿಂದ ನೋವನ್ನು ಅನುಭವಿಸಿಕೊಂಡು ಬರುತ್ತಿರುವ ಆಮಾಯಕರನ್ನು ಇಂತ ಚರ್ಚೆಗಳಿಗೆ ಯಾಕೆ ತರುತ್ತೀರಿ ಇದು ಶೋಬೆಯಲ್ಲ. ನಿಮ್ಮ ನಿಮ್ಮ ಮತ ನಿಮ್ಮ ನಿಮ್ಮ ಜಾತಿಯ ಬಗ್ಗೆ ಯಾವ ಅಭಿಪ್ರಾಯವಿದೆಯೋ ಅಂತಹುದೆ ಅಭಿಪ್ರಾಯ ಎಲ್ಲರಲ್ಲು ಇರುತ್ತದೆ ಎಂದು ನನ್ನ ಭಾವನೆ. ಪ್ರಿಯ ಶಫೀರ್, ನೀನು ಕೂಡ ಸ್ವಲ್ಪ ಯೋಚಿಸಿ ಬರೆಯುವುದನ್ನು ಕಲೆತುಕೊಳ್ಳುವುದು ಒಳಿತು. ವಿಜಯ ಕರ್ನಾಟಕದಲ್ಲಿ ಅಂಬೇಡ್ಕರ್ ರವರ ಪುಣ್ಯ ತಿಥಿ ಅಂತ ಬರೆದಿದ್ದೀರಿ. ನಮ್ಮ ಭಾರತದ ತುಂಬೆಲ್ಲ ಆ ದಿನ ಡಾII ಬಿ ಆರ್ ಅಂಬೇಡ್ಕರ್ ರವರ ಜನ್ಮದಿನವನ್ನು ಆಚರಿಸುತ್ತಿದ್ದರೆ ನೀವು ಹೀಗೆ ಬರೆಯುವುದು ಸರಿಯೇ?. ನಿಮ್ಮ ಮುಸ್ಲಂ ಜಾತಿಯನ್ನು ಯರೋ ನಿಂದಿಸಿದರು ಎಂಬ ಕಾರಣಕ್ಕೆ ನಿಮಗೆ ಎಷ್ಟು ಕೋಪ ಬಂದಿದೆ ನೋಡಿ. ನೀವು ಒಬ್ಬ ವಿದ್ಯಾವಂತರಾಗಿ ಕೇವಲ ಒಂದು ಜಾತಿಗೆ ಒಂದು ಮತಕ್ಕೆ ಮೀಸಲಾಗುವುದು ಸಮಂಜಸವಲ್ಲ. ನೀವು ಒಂದು ಪಕ್ಷ ಮೇಷ್ಟು ಆದರೆ ವಿದ್ಯಾರ್ಥಿಗಳಿಗೆ ಯಾವ ಪಾಠವನ್ನು ಬೋದಿಸುತ್ತೀರೊ ನಾಕಾಣೆ. ಆದರೆ ದಲಿತರನ್ನು ತಮ್ಮಿಷ್ಟದಂತೆ ಹೀನವಾಗಿ ಕಾಣುವ ಕಾಲ ಎಂದೋ ಹೊರಟು ಹೋಗಿದೆ. ಶಿಕ್ಷಣ ಹೋರಾಟ ಹಕ್ಕು ಗಳೆಂಬ ತತ್ವಗಳು ಎಲ್ಲಾ ದಲಿತರಲ್ಲು ಮನವರಿಕೆ ಯಾಗಿದೆ ಯಾಗಲಿವೆ. ಮೊದಲಿಗೆ ನಾವೆಲ್ಲರು ಮನುಷ್ಯರೆಂಬ ತತ್ವವನ್ನು ಅರಿತು ಕೊಂಡರೆ ನಿಮ್ಮ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗಬಹುದು.  

Gunda (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 04/18/2010 - 22:22

Anna Shafeeranna, nimge yaake separate constitution beku?? Bhaarateeya constitution follow maadoke nimgenu daadi?? Maadlilla andre neevu desha drohi. 

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/19/2010 - 11:37

ಕೊನೆಗೊಂದು ಮಾತು ಪ್ರತಾಪ್....ಈವತ್ತು ಇಸ್ಲಾಂ ಹೆಸರಿನಲ್ಲಿ ಜಗತ್ತಿನಲ್ಲಿ ಏನು ನಡೆಯುತ್ತಿದೋ ಅದೆಲ್ಲಾ ಇಸ್ಲಾಮ್ ಸಿದ್ದಾಂತವಂತೂ ಖಂಡಿತ ಅಲ್ಲ. ಹಾಗೆ ಈವತ್ತು ಮುಸ್ಲಿಮರು ಅಂತ ಯಾರಿದ್ದಾರೋ ಅವರೆಲ್ಲಾ ನಿಜವಾದ ಮುಸ್ಲಿಮರೂ ಅಲ್ಲ. ಇವತ್ತಿನ ಮುಸ್ಲಿಮರನ್ನು ಇಸ್ಲಾಂನಿಂದ ಬೇರ್ಪಡಿಸಿದಾಗ ಮಾತ್ರ ಇಸ್ಲಾಮಿನ ನಿಜವಾದ ಚೌಕಟ್ಟನ್ನು ಅರ್ಥೈಸಿಕೊಳ್ಳಲು ಸಾಧ್ಯ.
ಎಂದು ಇಷ್ಟೆಲ್ಲಾ ಪ್ರಜ್ಞಾಪೂರ್ವಕವಾಗಿ ಮಾತನಾಡುವ ನೀವು ಯಾವನೋ ಒಬ್ಬ ಪತ್ರಕರ್ತ ಬರೆದಿರುವುದಕ್ಕೆ ಇಷ್ಟೆಲ್ಲಾ ಪ್ರತಿಕ್ರಿಯಿಸುವ ಅಗತ್ಯವಿರಲಿಲ್ಲ ಅಲ್ಲವೆ?
ಆದರೂ ನೀವು ಪ್ರತಿಕ್ರಿಯುಸುತ್ತೀರಿ ಏಕೆಂದರೆ, ನಿಮಗೆ ನಿಮ್ಮ ಧರ್ಮವೇ ಹೆಚ್ಚೆದೆ, ಹಾಗೆ ನಮಗೆ ನಮ್ಮ ಧರ್ಮ ಹೆಚ್ಚಲ್ಲ ಎಂದು ನೀವೇಕೆ ಭಾವಿಸುತ್ತೀರಿ ಷಫೀರ್. ಒಂದತೂ ನಿಜ ಅನಾದಿಕಾಲದಿಂದಲೂ ಮುಸಲ್ಮಾನ ಧರ್ಮವು ಇತರ ಧರ್ಮದೆಡೆಗೆ ತನ್ನ ಕುರುಡು ಮತಾಂದತೆಯನ್ನು ತೋರುತ್ತಾ ದಬ್ಬಾಳಿಕೆ ನಡೆಸುತ್ತಾ ಬಂದಿದೆ, ಅದಕ್ಕೆ ಸಾಕ್ಷಿ ಬೇಕಾದರೆ ಇತಿಹಾಸದ ಯಾವುದೇ ಪುಟ ತಿರುಗಿಸಿ ನಿಮಗೆ ಸತ್ಯ ಗೋಚರಿಸುತ್ತದೆ. offcourse ಅದಕ್ಕೆಲ್ಲಾ ಧರ್ಮದ ಕಟ್ಟುಪಾಡೆಂಬ ಪರದೆ (ಬುರ್ಖಾ) ಹೊದಿಸುತ್ತೀರೆಂದು, ಅದಕ್ಕೆ ತಮ್ಮ ವಿರೋಧವೂ ಇದೆಯೆಂದು ಹೇಳಿಕೆ ನೀಡುತ್ತಾ ಮತ್ತದೇ ಹಿಂದೂ ಧರ್ಮ ನಿಂದನೆಯನ್ನು "ಪಾಂಡುರಂಗ"ನೆಂಬ ಹೆಸರಿನಿಂದ ಮಾಡುತ್ತೀರೆಂದು ಗೊತ್ತಿದ್ದರೂ ಈ ಅಭಿಪ್ರಾಯವನ್ನು ಹೇಳುತ್ತಿರುವುದು ನೀವು ವಿದ್ಯಾವಂತ ಮುಸಲ್ಮಾನರೆಂಬ ಒಂದೇ ಒಂದು ಕಾರಣಕ್ಕಾಗಿ. ಒಂದತೂ ಸತ್ಯ ಶಫೀರ್ " ಪ್ರಪಂಚಕ್ಕೆ, ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ನಾವು ಪ್ರೀತಿಯನ್ನು ಕೊಟ್ಟರೆ ಪ್ರೀತಿಯೇ ನಮಗೆ ಸಿಗುತ್ತದೆ, ಅದೇ ರೀತಿ ದ್ವೇಷವನ್ನು ಕೊಟ್ಟರೆ ದ್ವೇಷವೇ ಸಿಗುತ್ತದೆ". ಮುಸಲ್ಮಾನರಿಂದ ಯಾವತ್ತಿಗೂ ಯಾರೂ ಪ್ರೀತಿಯನ್ನು ನಿರೀಕ್ಷಿಸಲಾಗದು. ಆದ್ರೂ ನಿನ್ನಿಂದ ನೀರೀಕ್ಷಿಸುತ್ತೇನೆ.
ನೀನೊಬ್ಬ ಒೞೆಯ ಬರಹಗಾರ, ಸಂಪದದಲ್ಲಿ ಇದೇರೀತಿತಿಯ ಲೇಖನಗಳನ್ನು ಅಭಿಪ್ರಾಯಗಳನ್ನು ನೀಡಿ ಅಲ್ಲಿನ ಸಹೃದಯ ಓದುಗಾರರು ಕೊಡುವ ಉತ್ತರಗಳಿಗೆ ಪ್ರತ್ಯುತ್ತರ ನೀಡಲಾಅಗದೆ ಇಲ್ಲಿ ಬಂದಿದ್ದೀಯಾ. ಇಲ್ಲಿಯಾದರೂ ನಿನ್ನ ಮರ್ಯಾದೆ ಕಾಪಾಡಿಕೊ
ಇತಿ ನಿಮ್ಮ
ಸ್ನೇಹಿತ
 

ಉಮಾಶಂಕರ ಬಿ.ಎಸ್ ಸೋಮ, 04/19/2010 - 12:15

ಪ್ರಿಯ ಶಫೀರ್,
ನಿಮ್ಮ ಲೇಖನ ಚಿಂತೆಗೀಡು ಮಾಡುವುದಕ್ಕಿಂತಾ, ನೀವು ಪ್ರಸಿದ್ಧಿಗೆ ಬರಬೇಕೆಂಬ ಹಪಹಪಿ ಕಾಣುತ್ತಿದೆ, ಅದಕ್ಕಾಗಿ ನೀವು ನೆಲೆನಿಂತ ನಿಮ್ಮ ಜನ್ಮಭೂಮಿಯ ಪುರಾತನ ಧರ್ಮದ ಟೀಕೆ ಸಲ್ಲ. ನನಗೆ ಗೊತ್ತು ಮೇಲ್ನೋಟಕ್ಕೆ ಹಾಗೆ ಕಾಣದಿದ್ದರೂ ನಿಮ್ಮ ಬರಹದ ಶೈಲಿ "ರೇಷ್ಮೇ ಸಾಲಿನಲ್ಲಿ ಎಕ್ಕಡ ಸುತ್ತಿಹೊಡೆದಂತಿದೆ" ನೀವೊಬ್ಬ ಉತ್ತಮ ಬರಹಗಾರರು ಕೆಲ ಘಟನೆಗಳಿಂದ ನಿಮಗೆ ಬೇಸರವಾಗಿರಲೂ ಬಹುದು, ಅದೇ ರೀತಿ ಇತರರಿಗೂ ಇನ್ನು ಕೆಲ ಘಟನೆಗಳಿಂದ ಬೇಸರವಾಗಿರುತ್ತದಲ್ಲವೇ? ಈ ಒಂದು ಅಂಶ ನೀವು ಬರೆಯಲು ಕುಳಿತುಕೊೞುವ ಮುನ್ನ ಮನಸ್ಸಿನಲ್ಲಿಟ್ಟುಕೊಂಡರೆ ಒೞೆಯದೇನೋ? ಸ್ವಲ್ಪ ಯೋಚಿಸಿ, ನಾವು ನೀವು ಚಿಂತಿಸಲು ಬಹಳಷ್ಟು ವಿಷಯಗಳು ಬೇಕಾಬಿಟ್ಟಿಯಾಗಿ ಬಿದ್ದಿರುವಾಗ ಇಂತಾ ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪಿಸುವುದು ನಿಮ್ಮ ಹಪಹಪಿಯನ್ನಲ್ಲದೇ ಮತ್ತೇನನ್ನೂ ತೋರಿಸುವುದಿಲ್ಲ, ನೀವು ಇದಕ್ಕೆ ಎಷ್ಟು ಸಮರ್ಥನೆ ಕೊಟ್ಟರೂ 'ಇಲ್ಲ ನಾನೇನು ಹಾಗಿಲ್ಲ' ಎಂದು ನುಣುಚಿಕೊೞಬಹುದು.
ದಯವಿಟ್ಟು ಇನ್ನು ಮುಂದಾದರೂ ಇಂತಹ ಲೇಖನಗಳನ್ನು ಅಭಿಪ್ರಾಯಗಳನ್ನು ಬರೆಯುವಾಗ ಹೆಚ್ಚರವಹಿಸುತ್ತೀರೆಂದು, ಅವುಗಳಿಂದ ಬೇರೆಯವರ ಮನಸ್ಸಿಗೆ ನೋವುಂಟುಮಾಡುವುದಿಲ್ಲವೆಂದು ನಂಬುತ್ತೇನೆ.
ನಿಮ್ಮನ್ನು ನೋಯಿಸಲು ಬರೆದ ಅಭಿಪ್ರಾಯವಲ್ಲ ಇದು, ನಿಮ್ಮ ಲೇಖನದಿಂದ ವಿಸ್ಮಯನಗರಿಯಲ್ಲುಂಟಾದ ಅನಾಹುತಗಳನ್ನು ನಿಮ್ಮ ಗಮನಕ್ಕೆ ತರುವ ಸಣ್ಣ ಪ್ರಯತ್ನ.
ಇಂತು
ಉಮಾಶಂಕರ ಬಿ.ಎಸ್

Shafeer A.A ಸೋಮ, 04/19/2010 - 15:04

ನನ್ನ ಬರಹಕ್ಕೆ ಪ್ರತಿಕ್ರಿಯಿಸಿದ ಎಲ್ಲಾ ಆತ್ಮೀಯ ಮಿತ್ರರಿಗೂ ಹೃದಯಾಳದಿಂದ ಕ್ರ‍ತಜ್ಞತೆಗಳು.. ಚರ್ಚೆಯನ್ನು ಇನ್ನೂ ಅಷ್ಟುದ್ದ ಎಳೆದುಕೊಂಡು ಹೋಗುವುದು  ಯಾಕೋ ಸರಿ ಕಾಣುತ್ತಿಲ್ಲ. ನಲ್ಮೆಯ ಉಮಾಶಂಕರ್ ರವರ ಪ್ರತಿಕ್ರಿಯೆಯಿಂದ ವಿಸ್ಮಯದಲ್ಲಿ ಇಂತಹದ್ದೊಂದು ಚರ್ಚೆಯಿಂದ ಕೆಲವರಿಗಾದರೂ ನೋವಾಗಿದೆ ಅಂತ ಮನನವಾಯಿತು. ಅದಕ್ಕೋಸ್ಕರ ನನ್ನ ವಿಷಾದವಿದೆ. ನನ್ನ ಬರಹಗಳಲ್ಲಿನ ಯಾವುದಾದರೂ ಪ್ರಸ್ತಾಪಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಖಂಡಿತ ವಿಸ್ಮಯದಲ್ಲಿ ವಿದ್ವೇಶ, ಅಸಹಿಷ್ಣುತೆಗಳು ಹೊಗೆಯಾಡುವುದು ಬೇಡ. ಮುಸ್ಲಿಮರು ಮುಗ್ದರು, ಅವರದ್ದೇನೂ ತಪ್ಪಿಲ್ಲ ಅಂತ ನಾನು ನನ್ನ ಯಾವ ಲೇಖನದಲ್ಲೂ ಹೇಳಿಲ್ಲ. ಮುಸ್ಲಿಮರ ಅವಿವೇಕತನದಿಂದ ಆದ ಅನಾಹುತಗಳು ಬಹಳ ಇವೆ. ಕಾನೂನನ್ನು, ಸಂವಿಧಾನವನ್ನು ಗೌರವಿಸದ ಯಾವ ಮುಸ್ಲಿಮನನ್ನೂ, ಹಿಂದೂ, ಕ್ರೈಸ್ತ, ನನ್ನೂ ನಾವು ಸಹಿಸ ಬಾರದು. ಬಾಲ ಚಂದ್ರರವರು ಹೇಳಿದಂತೆ ಬೆಂಗಳೂರಿನಲ್ಲಿ ಮುಸ್ಲಿಂ ರೌಡಿಗಳಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದ್ದರೆ ಖಂಡಿತ ಅದನ್ನು ಮಟ್ಟ ಹಾಕ ಬೇಕು. ಮುಸ್ಲಿಂ ಸಮಾಜದಲ್ಲಿನ ಅಶಿಸ್ತು ಈವತ್ತು ಮುಸ್ಲಿಮರ ಅಧೋಗತಿಗೆ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ರೋಗವನ್ನು ಟ್ರೀಟ್ಮೆಂಟ್ ಮಾಡುವ ಬದಲು ರೋಗಿಯನ್ನೇ ನಿರ್ಮೂಲನೆ ಮಾಡಿಬಿಡಲು ಪ್ರಯತ್ನಿಸುವುದು ಸರಿಯೇ? ಪ್ರತಾಪ್ ಸಿಂಹರಂತವರ ಬರಹಗಳಿಂದ ಒಬ್ಬ Indisciplined ಮುಸ್ಲಿಂ ಪರಿವರ್ತನೆಗೊಳ್ಳುವ ಬದಲು ಮತ್ತಷ್ಟು ಅಂತರ್ಮುಖಿಯಾಗಿ ಬದಲಾಗುವ ಅಪಾಯವೇ ಹೆಚ್ಚು. ಮುಸ್ಲಿಮರು ಕೂಡಿ ಬಾಳುವ ಕಲೆಗೆ ತಮ್ಮನ್ನು ಒಗ್ಗಿಸಿಕೊಳ್ಳ ಬೇಕು ಎಂಬುದನ್ನು ಒತ್ತಿ ಹೇಳುತ್ತಲೇ ಕೇವಲ ಒಂದು ವರ್ಗದ ಮುಸ್ಲಿಂ ನಾಮಧಾರಿಗಳು ಎಸಗುವ ತಪ್ಪಿಗೆ ಇಡೀ ಮುಸ್ಲಿಂ ಸಮಾಜವನ್ನು ದ್ವೇಷಿಸುವ ಫ್ಯಾಸಿಸ್ಟ್ ಪ್ರವೃತ್ತಿಯನ್ನೂ ಅದೇ ಧ್ವನಿಯಲ್ಲಿ ಖಂಡಿಸುತ್ತಿದ್ದೇನೆ.ನಲ್ಮೆಯ ಅನಾಮಿಕ ಮಿತ್ರರೇ.. ನಾನೊಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಮುಸ್ಲಿಮರ ಪರ ಹಾಗೂ ಇತರರ ವಿರೋಧಿ ಅಂತ ದಯವಿಟ್ಟು ಭಾವಿಸ ಬೇಡಿ. ಮುಸ್ಲಿಂಗಿಂತಲೂ ನನಗೆ ಅನೇಕ ಹಿಂದೂ ಮಿತ್ರರಿದ್ದಾರೆ. ಅವರೆಲ್ಲರ ಒಡನಾಟದ ಯಾವುದೇ ಗಳಿಗೆಯಲ್ಲೂ ನನಗೆ ನಾನೊಬ್ಬ ಮುಸ್ಲಿಂ ಹಾಗೂ ಅವರೆಲ್ಲ ಹಿಂದೂ ಅಂತ ಅನ್ನಿಸಲಿಲ್ಲ. ಜಾತಿ ಧರ್ಮಗಳ ಬಂಧನ ಮೀರಿದ ಸ್ನೇಹ ಬಾಂಧವ್ಯಗಳ ಸವಿಯನ್ನು ಅನುಭವಿಸಿರುವ ನನಗೆ ನನ್ನ ಧರ್ಮವೇ ಶ್ರೇಷ್ಟ ಹಾಗೂ ಇತರರು ಮ್ಲೇಚ್ಚ ಅಂತ ಅನ್ನಿಸಲು ಯಾವ ಕಾರಣವೂ ಇಲ್ಲ. Bye the Way ಕೆ.ಎಲ್ಕೆ ರವರ ಪ್ರತಿಕ್ರಿಯೆ ತುಂಬಾ ಸಂತೋಷ ಕೊಟ್ಟಿತು. ಆದರೆ ಭೈರಪ್ಪನವರ ಆವರಣವನ್ನು ಓದಿ ಕುರಾನ್ ಬಗ್ಗೆ ತಿಳಿದುಕೊಳ್ಳಿ ಎಂಬ ಸಲಹೆ ನನ್ನನ್ನು ಚಕಿತಗೊಳಿಸಿದೆ. ಪ್ರೀತಿಯ ಕೆ.ಎಲ್ಕೆರವರೇ.. ಭಗವತ್ ಗೀತೆಯಲ್ಲಿ ಶ್ರೀ ಕೃಷ್ಣ ದುರುಳರನ್ನು ಕೊಲ್ಲಲು ಪಾಂಡವರಿಗೆ ಉಪದೇಶ ನೀಡುವ ಪ್ರಸಂಗವನ್ನೆತ್ತಿಕೊಂಡು ಹಿಂದೂ ಧರ್ಮ ಹಿಂಸೆಯನ್ನು ಭೋಧಿಸುತ್ತದೆ ಎಂದು ವಾದಿಸುವುದು ಎಷ್ಟು ಅಪಕ್ವವೋ ಹಾಗೆಯೇ ಶಾಂತಿ ಕರಾರನ್ನು ಉಲ್ಲಂಘಿಸಿ ಏಕಪಕ್ಷೀಯವಾಗಿ ಯುದ್ದ ಹೇರಿದ ಕುರೀಶಿ ( ಕಾಫಿರ್ ಎಂಬ ಪದಕ್ಕೆ ಅರೇಬಿಕ್ ಭಾಷೆಯಲ್ಲಿ ವಂಚಕರು, ಒಡಂಬಡಿಕೆಯನ್ನು ಉಲ್ಲಂಘಿಸುವವರ ಎಂಬ ಅರ್ಥವಿದೆ) ಗಳನ್ನು ಯುದ್ದದಲ್ಲಿ ಕೊಲ್ಲಿ ಎಂದು ಕುರಾನ್ ಹೇಳಿದ್ದನ್ನು( ಪ್ರವಾದಿ ಮುಹಮ್ಮದರನ್ನು ಊರಿನಿಂದ ಹೊರದಬ್ಬಿದ ಕುರೇಶಿಗಳೊಡನೆ ನಡೆದ ಯುದ್ದದ ಸಂಧರ್ಭದಲ್ಲಿ ಅವತೀರ್ಣಗೊಂಡ ಸೂಕ್ತಿ ಇದು) ವಕ್ರವಾಗಿಸಿ ವ್ಯಾಖ್ಯಾನಿಸುವುದು ಅಷ್ಟೇ ಅಪಕ್ವ ಮತ್ತು UTTER BLUNDER ಆಗುತ್ತೆ. ಆದ್ದರಿಂದ ಕುರಾನ್ ಏನು, ಕುರಾನ್ ಅವತೀರ್ಣಗೊಂಡ ಹಿನ್ನಲೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಲು ಯಾರಿಗಾದರೂ ಆಸಕ್ತಿ ಇದ್ದರೆ ಈವತ್ತು ಅಂತರ್ಜಾಲದಲ್ಲಿ ಸಾಕಷ್ಟು ಸರಕುಗಳಿವೆ. ಅದನ್ನು ಬಿಟ್ಟು ವೃಥಾ ಯಾವ ಧರ್ಮದ ಕುರಿತೂ ಅಪಾರ್ಥಮಾಡಿಕೊಳ್ಳುವುದು ನಮ್ಮ ವಿವೇಚನಾ ಶಕ್ತಿಗೆ ಅವಮಾನ ಮಾಡಿದಂತೆ. ಒಂದು ವೇಳೆ ಇಸ್ಲಾಂ ಎಲ್ಲಿಯಾದರೂ ಇತರರ ಬಗ್ಗೆ ಅಸಹಿಷ್ಣುತೆಯನ್ನು ಬಿತ್ತುವ ಒಂದೇ ಒಂದು ಪದವನ್ನು ಹೇಳಿದ್ದರೆ ಆ ಧರ್ಮವನ್ನು ಅರಬ್ಬೀ ಸಮುದ್ರದಾಚೆಗೆ ಎಸೆದು ಬಿಡಬೇಕು ಎಂದು ನನ್ನ ಖಂಡತುಂಡವಾಗಿ ಹೇಳಬಲ್ಲೆ. ಏಕಂದ್ರೆ ಇತರರ ಬಗ್ಗೆ ಸಹಿಷ್ಣುತೆ ಇಲ್ಲದ ಧರ್ಮ, ಒಂದು ಉತ್ತಮ ಧರ್ಮವಾಗಲು ಅಯೋಗ್ಯ.ನಲ್ಮೆಯ ಬಾಲ ಚಂದ್ರರವರಿಗೆ ಒಂದು ಮಾತು, ನೀವು ಯಾವುದನ್ನು ದೇಶ ಪ್ರ‍ೇಮ ಎಂದು ಕೊಂಡಿದ್ದೀರೋ ಅದರ ಬಗ್ಗೆ ಖಂಡಿತ ನನ್ನ ಭಿನ್ನಾಭಿಪ್ರಾಯವಿದೆ. ನನ್ನ ಪ್ರಕಾರ ದೇಶ ಎಂದರೆ ಇಲ್ಲಿನ ಜನತೆ. ಅವರಿಲ್ಲದೆ ದೇಶವಿಲ್ಲ. ಈ ದೇಶದಲ್ಲಿ ಯಾರು ಬಾಂಬಿಡುತ್ತಾರೋ, ಯಾರು ಇಲ್ಲಿನ ಜನರ ಐಕ್ಯತೆಯನ್ನು ಒಡೆಯುತ್ತಾರೋ ಅವರೆಲ್ಲಾ ದೇಶ ದ್ರೋಹಿಗಳು. ಅದರಲ್ಲಿ ಹಿಂದೂ-ಮುಸ್ಲಿಂ, ಎಡ-ಬಲಗಳೆಂಬ ಬೇಧವಿಲ್ಲ. ಉಳಿದಂತೆ, ಪಾಕಿಸ್ತಾನದ ಧ್ವಜ ಹಾರಿಸಿದವರ ಬಗ್ಗೆ. ಅಂತಹ ಘಟನೆ ನಡೆದಿದ್ದು ನಿಜವೇ ಆಗಿದ್ದರೆ ಅವರೆಡೆಗೆ ಯಾವುದೇ ಅನುಕಂಪ ಬೇಕಾಗಿಲ್ಲ. ಅಂತಹ ಶಕ್ತಿಗಳನ್ನು ಹೊಸಕಿಹಾಕಲೇ ಬೇಕು. ಮುಸ್ಲಿಮರ ಅವಿವೇಕತನವನ್ನು ತಿದ್ದೋಣ. ಅದು ಬಿಟ್ಟು ವಿದ್ವೇಶ ಬಿತ್ತುವ ಬರಹಳಿಂದ ನಾವು ನಾವೇ ಗುದ್ದಾಡೋದು ಬೇಡ. ಕೊನೆಗೊಂದು ಮಾತು:- ಅನಾಮಿಕನಾಗಿ ಕಮೆಂಟ್ ಬರೆಯುವಷ್ಟು ಹೇಡಿ ನಾನಲ್ಲ. ವಿಸ್ಮಯ ಹಾಗೂ ನನ್ನ ಬ್ಲಾಗ್ www.kannadavoice.blogspot.com ಇವೆರಡನ್ನು ಬಿಟ್ಟು ಬೇರೆಲ್ಲೂ ನಾನು ಬರೆದಿಲ್ಲ.  ಹೆಸರು ಮತ್ತು ಫೋಟೊ ಹಾಕಿ ಬರೆಯಲು ನನಗೆ ಯಾವ ಭಯವೂ ಇಲ್ಲ. ನನ್ನ ಬರಹ ಕೆಟ್ಟದ್ದಾಗಿರ ಬಹುದು. ಅದರ ಬಗ್ಗೆ ಟೀಕೆಗಳಿದ್ದರೆ ಒಪ್ಪಿಕೊಳ್ಳಲು ಮುಕ್ತವಾದ ಮನಸ್ಸಿದೆ. ಯಾರೋ ಒಂದಿಬ್ಬರು ನನ್ನ ನೆಲೆಯಲ್ಲಿಯೇ ಆಲೋಚಿಸುವವರು ಚರ್ಚೆಯಲ್ಲಿ ಪಾಲ್ಗೊಂಡ ಮಾತ್ರಕ್ಕೆ ಅದನ್ನು ಬೇನಾಮಿತನ ಎಂದು ಅನುಮಾನಿಸುವುದು ಸಲ್ಲ. ಏಕಂದ್ರೆ ಭಿನ್ನವಾಗಿ ಚಿಂತಿಸುವವರು ನಮ್ಮ ಮಧ್ಯೆ ಧಾರಾಳ ಇದ್ದಾರೆ. ನಾನು ಮಂಡಿಸಿದ ವಿಷಯಗಳ ಬಗ್ಗೆ ಇನ್ನೂ ಹೆಚ್ಚು ಚರ್ಚಿಸಲು ಆಸಕ್ತಿ ಇರುವವರು ನನ್ನ ಬ್ಲಾಗ್ www.kannadavoice.blogspot.com ಗೆ ಬನ್ನಿ. ಅಥವಾ ದಯವಿಟ್ಟು shaf_nfn@yahoo.com, adv.shafeer@gmail.com,shafeershafeer43@gmail.comಗೆ ಮೇಲ್ ಮಾಡಿ.ಎಲ್ಲರಿಗೂ ನನ್ನ SINCERE THANKSಶಫೀರ್ 

ಸುಪ್ತವರ್ಣ ಸೋಮ, 04/19/2010 - 17:01

ಹಿಂದೂ ಮುಸ್ಲಿಮ್ ಜಗಳಗಳು ನಾವು (ಶ್ರೀಸಾಮಾನ್ಯರು) ತಿಳಿದುಕೊಂಡಷ್ಟು simple ಅಲ್ಲ...ಎಲ್ಲ ಕಡೆಯ ಖದೀಮರೂ ತಮ್ಮ ಬೇಳೆ ಬೇಯಿಸಿಕೊೞಲು ಇದನ್ನು ಹಬ್ಬಿಸಿರುತ್ತಾರೆ. ನಾವು ನಾವು ಸುಖಾ ಸುಮ್ಮನೇ BP ಏರಿಸಿಕೊಂಡಿರುತ್ತೇವೆ.ಶಫೀರ್ ಅವರ ಪ್ರಭುದ್ಧತೆ ಮತ್ತು ತಾಳ್ಮೆ, ಅವರ ಲೇಖನ ಹಾಗೂ ನಂತರದ ಅವರ ಉತ್ತರಗಳಲ್ಲಿ ಖಂಡಿತ ಎದ್ದು ಕಾಣುತ್ತದೆ. ಹಿಂದು ಮುಸ್ಲಿಮ್ ಜಗಳಕ್ಕೆ ಸಂಬಂಧಿಸಿದಂತೆ ಜನ ಕೂಡಲೇ ಸಿಟ್ಟಿಗೇಳುವುದು ಸಹಜ. ಇದಕ್ಕೆ ವಿಸ್ಮಯವೂ ಹೊರತಾಗಿಲ್ಲ. ಆದರೆ ಖಾರದ ಪ್ರತಿಕ್ರಿಯೆಗಳಿಂದಾಗಿ ಲೇಖಕ ಧೃತಿಗೆಡಬಾರದು. ನೀವು ಖಂಡಿತ ಮುಂದಿನ ದಿನಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಕುರಿತು ಬರೆಯಿರಿ. ನಿಮ್ಮ ಬರವಣಿಗೆ ಹಾಗೂ ವಿಚಾರಗಳಲ್ಲಿ maturity ಇದೆ. ನಿಮ್ಮೊಳಗಿನ ಲೇಖಕ ಹಿಂದೂ-ಮುಸ್ಲಿಮ್ ಜಗಳಕ್ಕೆ ಬಲಿಯಾಗಿ waste ಆಗುವುದು ಬೇಡ.ಈ ರಗಳೆಗಳೆಲ್ಲ ಶತಮಾನಗಳಿಂದ ಇವೆ. ಇಂಥವನ್ನೆಲ್ಲ ನೀವ್ಯಾಕೆ ಮೈಮೇಲೆ ಎಳೆದುಕೊೞುತ್ತೀರಿ? ನೀವು ಮತ್ತಿನ್ನೇನಾದರೂ ಬರೆಯಿರಿ....all the best.

Shafeer A.A ಸೋಮ, 04/19/2010 - 17:20

ಪ್ರೀತಿಯ ಸುಪ್ತವರ್ಣರವರೇ...ನಿಮ್ಮ ಹಿತವಾದ ನಾಲ್ಕು ಮಾತಿಗೆ, ಪ್ರಬುದ್ದವಾದ ದೃಷ್ಟಿಕೋನ ಮತ್ತು ನಿಸ್ಪೃಹ ಮನಸ್ಸಿಗೆ ನಾನು ಬಹಳ ಆಭಾರಿ. ನಮಗಿಂತ ಹೆಚ್ಚಾಗಿ ಜನಸಂಖ್ಯಾ ಸ್ಪೋಟವನ್ನು ಎದುರಿಸುತ್ತಿರುವ ಚೀನಾದಂತಹ ದೇಶಗಳು ಅಭಿವೃದ್ದಿ ಪಥದಲ್ಲಿ ನಾಗಾಲೋಟದಲ್ಲಿರುವಾಗ ನಾವು ಮಾತ್ರ ಹೀಗೆ ಹಿಂದೂ-ಮುಸ್ಲಿಂ ಎಂಬ ವಿದ್ವೇಶದಲ್ಲೇ ಕಾಲಕಳೆಯುತ್ತಿರುವುದು ತುಂಬಾ ನೋವಿನ ಸಂಗತಿ. ನಮ್ಮ ಮಧ್ಯೆ ಇರುವ MISUNDERSTANDINGನ ಮಸುಕು ಸ್ವಲ್ಪವಾದರೂ ಸರಿಯಲಿ ಎಂಬ ಉದ್ದೇಶದಿಂದ ನಾನು ಈ TOPIC ಎತ್ತಿಕೊಂಡನೇ ಹೊರತು ಪರಸ್ಪರ MUDSLINGING ಗೋಸ್ಕರ ಅಲ್ಲ. ಚರ್ಚೆ ಹಾದಿ ತಪ್ಪಿದ್ದರಿಂದ ನನಗೆ ಬಹಳ ವಿಷಾದವಿದೆ..

ಶಿವಾನಂದ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/19/2010 - 18:02

ಶರೀಫ್,
"ಕಂಬಾಲ ಪಲ್ಲಿಯಲ್ಲಿ ಹಿಂದುಗಳೆಂದು ನೀವು ಕರೆಯುವ ದಲಿತರನ್ನು ಬ್ರಾಹ್ಮಣರು ಸುಟ್ಟು ಕೊಂದಾಗ" ಎಂದು ಬರೆದಿದ್ದೀರಿ. ವಿಷಯ ಗೊತ್ತಿಲ್ಲದೇ ಹೀಗೆ ಅಜ್ಞಾನದಿಂದ  ಬರೆಯಬೇಡಿ. ಅಲ್ಲಿ ಯಾವ ಬ್ರಾಹ್ಮಣರೂ ಯಾರನ್ನೂ ಸುಟ್ಟಿಲ್ಲ. ಇಷ್ಟುದ್ದ ಬರೆದು ಮುಸ್ಲಿಂ ಪರ ನಿಲುವು ತೋರಿಸುವ ನಿಮಗೆ ಬರೆಯುವಾಗ ಸರಿಯಾಗಿ ತಿಳಿದುಕೊಂಡು ಬರೆಯಬೇಕು ಎನ್ನುವ ಕಾಮನ್ ಸೆನ್ಸ್ ಇಲ್ಲ.

Nanjunda Raju Raju ಶುಕ್ರ, 11/18/2011 - 19:45

ಮಿತ್ರರೇ, ಷಫೀರ್ ರವರಿಂದ ಒಳ್ಳೆಯ ಅನಿಸಿಕೆ ಮತ್ತು ವಿಮರ್ಶೆ ಬಂದಿದೆ. ಒಪ್ಪಿಕೊಳ್ಳೋಣ.  ಪ್ರಾಮಾಣಿಕ ಮನುಷ್ಯನ ಲೇಖನ ಇದಾಗಿದೆ. ನಿಮ್ಮಂತಹವರಿಂದ ನಮ್ಮ ಭಾರತ ಉಳಿದಿದೆ. ಯಾವ ಧರ್ಮದಲ್ಲೂ ಪರಸ್ಪರ ದ್ವೇಷಿಸಲು ಹೇಳಿಲ್ಲ. ಸಾಮಾನ್ಯವಾಗಿ ಓದುಗರಲ್ಲಿ ನಾನು ಕೇಳಿಕೊಳ್ಳುವುದಿಷ್ಟೆ. ಎಲ್ಲಾ ಧರ್ಮಗಳನ್ನು ಓದಿ. ವಿಮರ್ಶೆ ಮಾಡಿ, ತುಲನೆ ಮಾಡಿ, ಆರೋಗ್ಯಕರ ಚರ್ಚೆಯಾಗಲಿ ಟೀಕೆ ಮಾಡುವುದು ಬೇಡ. ಶಫೀರ್ ಅಂತಹ ಪ್ರಮಾಣಿಕರಿಗೆ ನೋವು ಮಾಡುವುದು ಬೇಡ. ದೇಶ ದ್ರೋಹಿಗಳನ್ನು ಖಂಡಿಸಿದ್ದರೆ. ಅವರ ವಿಚಾರಕ್ಕೆ ಮನ್ನಣೆ ನೀಡೋಣ. ವಂದನೆಗಳೊಡನೆ.

ರವಿವರ್ಮ್ ಧ, 04/21/2010 - 08:10

ಪ್ರಿಯ ಶಫೀರ್,
ನಿಮ್ಮ ಲೇಖನದ ಆಶಯ ಉತ್ತಮವೇ ಆದರೂ ಇದರ ಚರ್ಚೆ ಹಳಿ ತಪ್ಪಿದ್ದು ವಿಷಾದನೀಯ.

BENKY ಧ, 04/21/2010 - 11:28

ಭಾರತದಲ್ಲೇ ಹುಟ್ಟ ಬೇಕು ಅಂತ ನಾನಾಗಲೀ ನೀವಾಗಲಿ ದೇವರಿಗೆ APPLICATION ಏನು ಹಾಕಿರಲಿಲ್ಲ ಅನ್ನೋದು ಸತ್ಯ ತಾನೇ? ಎಂಬ ಒಂದೇ ಮಾತು ನಿಮ್ಮ ದೇಶ ಭಕ್ತಿಯನ್ನು ತೋರಿಸುತ್ತದೆ. ಹಾಗಾದರೆ ತಾವು ಮುಸ್ಲಿಮರಾಗಿ ಹುಟ್ಟಲು ಅಪ್ಲಿಕೇಶನ್ ಹಾಕಿದ್ದಿರಾ? ಇಲ್ಲ ತಾನೆ ?ಹಾಗಾದರೆ  ಯಾಕೆ ಬೇರೆ ಧರ್ಮಕ್ಕೆ ಬದಲಾಗಬಾರದು? ಪ್ರತಾಪ್ ಸಿಂಹ ಎಲ್ಲ ಮುಸ್ಲಿಮರ ಬಗ್ಗೆ ಕಳವಳ ವ್ಯಕ್ತಪಡಿಸಲಿಲ್ಲ. ನಿಮ್ಮಂತಹ ಕೆಲವು ದೇಶಾಭಿಮಾನ ಶೂನ್ಯ ಧರ್ಮಾನುಯಾಯಿ ಮುಸಲ್ಮಾನರನ್ನು ಮಾತ್ರ ಸಂಶಯಿಸಿದ್ದು.
GOOD BALU SHAFEER ENA ONSALI NODI ODIKOLRI

Shafeer A.A ಧ, 04/21/2010 - 15:42

ಬೆಂಕಿಯವರೇ... ದೇಶ, ದೇಶ ಪ್ರೇಮ, ದೇಶಾಭಿಮಾನ ಎಂಬುದನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿಕೊಳ್ಳುತ್ತಿರುವುದರಿಂದಲೇ ನಿಮಗೆ ಉಳಿದವರೆಲ್ಲರೂ ಪರಕೀಯರ ಹಾಗೆ ಕಾಣುತ್ತಿದ್ದಾರೆ. ದ್ವೇಶ ಬೆಳಸುವ ದೇಶ ಪ್ರೇಮದಿಂದ ನೀವು ಸಾಧಿಸ ಹೊರಟಿರುವುದಾದರೂ ಏನು ಅಂಥ ತಿಳಿಯುತ್ತಿಲ್ಲ. ದೇಶ ಪ್ರೇಮ, ದೇಶಾಭಿಮಾನ ಎಂಬ ಕಾನ್ಸೆಪ್ಟ್ ಗಳಿಗೆ ನೀವು ಕಲ್ಪಿಸಿಕೊಳ್ಳುದ್ದಕ್ಕಿಂತ ವಿಶಾಲವಾದ ವ್ಯಾಪ್ತಿಯಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಒಂದು ಲೇಖನ ಅಥವಾ ಪ್ರತಿಕ್ರಿಯೆಯ ಯಾವುದೋ ಒಂದು ವಾಕ್ಯವನ್ನು ಎತ್ತಿಕೊಂಡು ನಿಮಗೆ ಬೇಕಾದ ಹಾಗೆ ವ್ಯಾಖ್ಯಾನಿಸಿಕೊಳ್ಳುವುದು ಚರ್ಚೆಯ ಹಾದಿಯನ್ನು ತಪ್ಪಿಸುವ ಷಡ್ಯಂತ್ರವೇ ಹೊರತು ಆರೋಗ್ಯಕರ ದೃಷ್ಟಿಕೋನವನ್ನಂತೂ ಅದು ಬಿಂಬಿಸಲ್ಲ.  ದೇಶಾಭಿಮಾನದ ಬಗ್ಗೆ ದೊಡ್ಡದಾಗಿ ಮಾತನಾಡುವ ತಾವು ಈ ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿ ನಾನು ಕೂಡಾ ನಿಮ್ಮನ್ನು ಗೊಂದಲಕ್ಕೀಡುಮಾಡಲು ಸಾಧ್ಯವಿದೆ. ನಮ್ಮ ದೇಶ ಜಾತ್ಯಾತೀತ ವ್ಯವಸ್ಥೆಯನ್ನು ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರ ಅನ್ನೋದು ನೆನಪಿನ್ನಲಿರಲಿ. ಹಾಗಾಗಿ ಆ ಸಂವಿಧಾನದ ವಿರುದ್ದ ದಿಕ್ಕಿಗಿರುವ ನಿಮ್ಮ ಚಿಂತನೆಗಳು ದೇಶ ದ್ರೋಹ ಅಂತ ವಾದಿಸಲು ನನಗೆ ಸಾಧ್ಯವಿದೆ. ಚರ್ಚೆಗೆ ಆಸಕ್ತಿ ಇದ್ದರೆ ಮುಖತಃ ಭೇಟಿಯಾಗಿ ಅಥವಾ ಮೇಲ್ ಮಾಡಿಸಸ್ನೇಹಶಫೀರ್

ಶಿವಾನಂದ (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/28/2010 - 14:47

>> ಒಂದು ಲೇಖನ ಅಥವಾ ಪ್ರತಿಕ್ರಿಯೆಯ ಯಾವುದೋ ಒಂದು ವಾಕ್ಯವನ್ನು ಎತ್ತಿಕೊಂಡು ನಿಮಗೆ ಬೇಕಾದ ಹಾಗೆ ವ್ಯಾಖ್ಯಾನಿಸಿಕೊಳ್ಳುವುದು>>
ಇದನ್ನೇ ತಾವು ಪ್ರತಾಪ ಸಿಂಹರ ಲೇಖನಕ್ಕೂ ಮಾಡಿದ್ದು ಅನ್ನಿಸುತ್ತಿದೆ.
 

ಶಫೀರ್ ಅವರಿಗೆ ಹಾಗೂ ಎಲ್ಲಾ ನಲ್ಮೆಯ ಓದುಗರಿಗೆ ನಮನ,
ಯಾವುದೋ ವಿಷಯ ಹುಡುಕುತ್ತಾ ನಾನು ಈ ವೆಬ್ ತಾಣಕ್ಕೆ ತಲುಪಿದ್ದೇನೆ. ಪ್ರತಾಪ್ ಸಿಂಹರ ಲೇಖನಗಳನ್ನು ಕಾಲೇಜು ದಿನಗಳಿಂದ ಓದುತ್ತಿರುವನಾಗಿ ಸಹಜವಾಗಿಯೇ ನಿಮ್ಮ ಲೇಖನ ಆಸಕ್ತಿ ಮೂಡಿಸಿತು. ಪ್ರತಾಪ್ ಕನ್ನಡ ಪತ್ರಿಕೋದ್ಯಮಕ್ಕೆ ಸ್ಟಾರ್ ವರ್ಚಸ್ಸು ಕೊಟ್ಟ ಲೇಖಕ. ಅವರ ಬರಹಗಳಿಂದಾಗಿ ಇಂದು ಅದೆಷ್ಟೋ ಯುವಕರು ದೇಶ ವಿದೇಶದ ವಿದ್ಯನಮಾನಗಳ ಬಗ್ಗೆ ತೆರೆದುಕೊಳ್ಳುತ್ತಿದ್ದಾರೆ. ಆದರೆ, ಒಂದು ಸಮಯದ ಬಳಿಕ ಅವರ ಲೇಖನಗಳ ಶೈಲಿ, ಆಯ್ದುಕೊಳ್ಳುವ ವಿವಾದಾತ್ಮಕ ವಿಚಾರಗಳು ಹಾಗೆ ಭಾವೋದ್ವೇಗ ಲೇಖನದ ವಸ್ತುನಿಷ್ಟತೆಗಿಂತ ಹೆಚ್ಚು ಹೆಸರು ಮಾಡಿದ್ದೂ ನಿಜ. ಒಬ್ಬ ಲೇಖಕನ ಬೆಳವಣಿಗೆಯಲ್ಲಿ ಇದೆಲ್ಲವೂ ಸಹಜ. ಉದಾಹರಣೆಗೆ, ಒಂದು ಸಮಯದಲ್ಲಿ ನನಗೆ ರವಿ ಬೆಳೆಗೆರೆಯವರ ಬರಹಗಳು ಮುದ ನೀಡುತ್ತಿದ್ದವು (ನಾನಿಲ್ಲಿ 'ಹಾಯ್ ಬೆಂಗಳೂರು' ಎಂಬ ಕೀಳು ಅಭಿರುಚಿಯ ಪತ್ರಿಕೆಯ ಬಗ್ಗೆ ಖಂಡಿತಾ ಹೇಳುತ್ತಿಲ್ಲ) ಆದರೆ ಬರಬರುತ್ತಾ ರವಿ ತಮ್ಮ ಬಗ್ಗೆ ತಾವು ಬರೆದುಕೊಳ್ಳುತ್ತಾ ರಸಹೀನವಾದ ಪಾಕವನ್ನು ಓದುಗರಿಗೆ ನೀಡುತ್ತಾ, ತಾವೂ ಬೆಳೆಯದೆ, ಓದುಗರನ್ನೂ ಬೆಳೆಯಲು ಬಿಡದೆ ನಿಂತ ನೀರಾದರು. ಪ್ರತಾಪ್ ಆ ಹಾದಿ ಹಿಡಿಯಲಾರರು ಎಂಬ ನಂಬಿಕೆ ಹಾಗೂ ಆಶಯ ನನ್ನದು.
ಶಫೀರ್ ಅವರೇ, ತಮ್ಮ ಲೇಖನ ಇಷ್ಟವಾಯಿತು. ಅದರಲ್ಲಿ ಇದ್ದ ಎಲ್ಲಾ ವಿಷಯಗಳನ್ನು ನಾನು ಒಪ್ಪುತ್ತೇನೆ ಎಂದು ನಾನು ಖಂಡಿತಾ ಹೇಳಲಾರೆ. ಆದರೆ ನಿಮ್ಮ ಕಳಕಳಿ, ಬಹಳ ಸಮಚಿತ್ತರಾಗಿ ವಿಷಯವನ್ನು ಪ್ರಸ್ತುತಪಡಿಸಿದ ರೀತಿ ತುಂಬಾ ಗೌರವಯುತವಾಗಿತ್ತು. ಭಾಷೆಯ ಮೇಲಿನ ನಿಮ್ಮ ಹಿಡಿತವೂ ಲೇಖನಕ್ಕೆ ಒಂದು ಆಯಾಮವನ್ನು ಒದಗಿಸಿತು.
ಇಸ್ಲಾಮಿಕ್ ಭಯೋತ್ಪಾದನೆ ಇಂದು ಭೀಕರ ಜಾಗತಿಕ ಸಮಸ್ಯೆ. ಇಸ್ಲಾಮಿಕ್ ಭಯೋತ್ಪಾದನೆ ಹಾಗೂ ಇಸ್ಲಾಮ್ ಮತದ ನಡುವೆ ಬಹಳ ವ್ಯತ್ಯಾಸ ಇದೆ ಎಂಬುದನ್ನು ಈ ಶತಮಾನದಲ್ಲಿ ಬಾಳುತ್ತಿರುವ ನಾವು ಮನಗಾಣಬೇಕು. ಇದನ್ನು ಅರಿತರೆ ಭಯೋತ್ಪಾದನೆಯ ಆಪಾದನೆಯನ್ನು ಇಡೀ ಸಮುದಯದ ಮೇಲೆ ಹೇರುವ ಪ್ರವೄತ್ತಿಯೂ ನಿಲ್ಲುತ್ತದೆ ಹಾಗೆ 'ಇಸ್ಲಾಮಿಕ್ ಭಯೋತ್ಪಾದನೆ' ಎಂದ ತಕ್ಷಣ ಮುಸ್ಲಿಮರು ವಿಚಲಿತರಾಗುವ ಪ್ರಮೇಯವೂ ತಪ್ಪುತ್ತದೆ. ನಾನಿಲ್ಲಿ 'ಕೇಸರಿ ಭಯೋತ್ಪಾದನೆ' ಎಂಬ ಶಬ್ದದ ವ್ಯುತ್ಪತ್ತಿಯ ಬಗ್ಗೆಯೂ ಹೇಳಬೇಕು. ಈ ಪದದ ಜನಕರು ಕಾಂಗ್ರೆಸ್ ಪಕ್ಷದ ನಾಯಕರು. ಅವರು ಇದನ್ನು ಇಸ್ಲಂ ಭಯೋತ್ಪಾದನೆ ಎಂಬ ಪದದ ಎದುರಾಗಿ ಜನರಿಗೆ, ಮಾಧ್ಯಮಕ್ಕೆ ತಮ್ಮ ಅಲ್ಪಸಂಖ್ಯಾತ-ಪ್ರೇಮ ತೋರಿಸಿಕೊಳ್ಳಲು ತಯಾರಿಸಿದ ಪದ. ಹೀಗೆ ಮಾಡುತ್ತಾ ಅವರು ಜನ ಮಾನಸದಲ್ಲಿ 'ಇಸ್ಲಾಮ್ ಭಯೋತ್ಪಾದನೆ ಅಂದರೆ ಅದು ಮುಸ್ಲಿಮರ ಕೆಲಸ ಅದಕ್ಕೋಸ್ಕರ ಕಾಂಗ್ರೆಸ್ ಸಂಪ್ರದಾಯದಂತೆ ಅದಕ್ಕೆ ತದ್ವಿರುದ್ದವಾಗಿ ಈ ಪದವನ್ನು ಸೃಷ್ಟಿಸಬೇಕಾದ ಕರ್ತವ್ಯ ನಿರ್ವಹಿಸಿ ಕೈ ತೊಳೆದುಕೊಂಡರು. ಇಸ್ಲಾಮ್ ಹಾಗೂ ಭಯೋತ್ಪಾದನೆ ನಡುವಿನ ವ್ಯತ್ಯಾಸ ಜನರಿಗೆ ತಿಳಿಸುವ ಕರ್ತವ್ಯ ಮುಸ್ಲಿಂ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟ ಕಾಂಗ್ರೆಸ್ ಮೇಲಿತ್ತು ಅಲ್ಲವೇ?
ಇನ್ನು ಇತಿಹಾಸ, ವೇದ, ಕುರಾನ್, ಹದೀತ್, ನಮ್ಮ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆಯಾಗದ್ದು ಏನೂ ಇಲ್ಲ. ಹಲವು ಕೋನಗಳಲ್ಲಿ ನಿಂತು ಜನರು ಹಿಂದು-ಮುಸ್ಲಿಮರ ನಡುವಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. ತಮ್ಮದೇ ಆದ ಒಂದೊಂದು ನೆಲೆಯನ್ನು ಕಾಯ್ದುಕೊಂಡಿದ್ದಾರೆ. ಅವರವರ ವಾದಕ್ಕೆ ಬೇಕಾದಷ್ಟು ಸರಕುಗಳನ್ನು ದಾಸ್ತಾನು ಮಾಡಿದ್ದಾರೆ. ಆದ್ದರಿಂದ ಚರ್ಚೆಗೂ ಮೊದಲು ನಮಗೆ ಇಲ್ಲಿ ಬೇಕಾಗಿರುವುದು ಮಾನವ ಮಾನವರ ನಡುವೆ ನಂಬಿಕೆಯ ಕೊಂಡಿ. ಭರವಸೆಯ ಬುನಾದಿ ಗಟ್ಟಿಯಾದರೆ ಅದರ ಮೇಲೆ ಯಾವ ವಾದಗಳೂ ಮಾನವೀಯ ನೆಲೆಯಲ್ಲಿ ಮೂಡಿಬರಬಹುದು. ವೇದಗಳು ಹುಟ್ಟಿದ ಈ ನಾಡಲ್ಲಿ, ನಿರೀಶ್ವರ ವಾದಿಗಳಿಗೂ ಸ್ಥಾನ ಇತ್ತು. ಆದ್ದರಿಂದ ಎರಡೂ ಮತಗಳ ಜನರೂ ಪ್ರಾಮಾಣಿಕತೆ ಹಾಗೂ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕಾಗಿರುವುದು ಆದ್ಯತೆಯ ವಿಷಯ.
ಶಫೀರ್-ಅವರೇ ತಮ್ಮ ಲೇಖನಕ್ಕೆ ಧನ್ಯವಾದ. ಹಾಗೆ ನಿಮ್ಮ ಲೇಖನದ ಮೇಲಿನ ಚರ್ಚೆ ಹಲವು ಬಾರಿ ಹಾದಿ ತಪ್ಪಿದ ಬಗ್ಗೆ ಖೇದವಿದೆ.
 
 

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 07/17/2012 - 16:29

 ಶರೀಫ್ ಸರ್ ನೀವು ಬರೆದ ಲೇಖನ ತುಂಬಾ ಒಳ್ಳೆಯದು ಯಾಕೆಂದರೆ ದೇಶ ಪ್ರೇಮದ ಜೊತೆಗೆ ಜಾತಿ ಪ್ರೇಮವು ಇದೆ, ಅದು ತಪ್ಪಲ್ಲ ಯಾರೋ ಮಾಡುವ ತಪ್ಪಿಗೆ ಇಡಿ ಸಮಾಜಕ್ಕೆ ಕೆಟ್ಟ ಹೆಸರು . ನಮ್ಮನು ನಾವು ಅರಿತುಕೊಂಡು ನಾವು ಜೀವನ ಮಾಡಬೇಕೆಂದರೆ ಸುಮನ್ನೆ ಬಿಡದ ಈ ಸ್ವಾರ್ಥ ರಾಜಕೀಯ ವ್ಯಕ್ತಿಗಳಿಂದ ಮತ್ತು ಮುಲಭೂತವಾದಿಗಳಿಂದ ನಾನು ಕಷ್ಟ ಅನುಭವಿಸುವಂತಾಗಿದೆ. 

 

ಕೊನೆಯದಾಗಿ ನಾವು ಭಾರತೀಯರು ನಮ್ಮ ಭಾವನೆ ಭಾರತಕ್ಕೆ ಮೀಸಲಾಗಬೇಕೆ ಹೊರತು ಧರ್ಮಕ್ಕಲ್ಲ(ಪಾಕಿಸ್ತಾನಕಲ್ಲ)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.