Skip to main content

ಪ್ರಿಯ ವಿಸ್ಮಯನಗರಿಗರೆ,
ಈಗ ತಾನೆ ಬೃ.ಬೆ.ಮ.ಪಾ ಚುನಾವಣೆ ಮುಗಿದಿದೆ. ಆಗ ಚಲಾವಣೆಯಾದ ಮತ ಕೆವಲ ಶೇ.೪೨ ರಷ್ಟು ಮಾತ್ರ. ಇದು ಆರೋಗ್ಯಕರ ಆಡಳಿತ ನೀಡಲು ಬೇಕಾಗುವ ಸರಕಾರವನ್ನು ಚುನಾಯಿಸುವಲ್ಲಿ ಖಂಡಿತಾ ವಿಪಲವಾಗುತ್ತದೆ. ಆದ ಕಾರಣ ಮತದಾನ ಕಡ್ಡಾಯವಾಗಬೇಕು ಎನ್ನುವ ಕೂಗಿಗೆ ನನ್ನ ಪ್ರಬಲ ಬೆಂಬಲವಿದೆ. ಯಾರು ಯಾರಿಗಾದರೂ ಮತಹಾಕಲಿ ಅದು ಬೇರೆಯ ಪ್ರಶ್ನೆ ಒಟ್ಟಿನಲ್ಲಿ ಮತದಾನ ಕಡ್ಡಾಯವಾದರೆ ಹಣದ ಮದದಿಂದ ತೋಳ್ಬಲದಿಂದ ಚುನಾಯಿತರಾಗುತ್ತಿರುವ ರೌಡಿ ರಾಜಕಾರಣಕ್ಕೆ ಸ್ವಲ್ಪವಾದರೂ ಕಡಿವಾಣ ಬಿದ್ದು ಕೆಲವರಾದರೂ ಉತ್ತಮ ರಾಜಕಾರಣಿಗಳನ್ನು ರೂಪಿಸಲು ಸಹಾಯವಾಗುತ್ತದೆ ಎನ್ನುವುದು ನನ್ನ ಅನಿಸಿಕೆ.
ಇದಕ್ಕೆ ನೀವೇನು ಹೇಳುತ್ತೀರಿ?
ದಯವಿಟ್ಟು ಅಭಿಪ್ರಾಯಿಕರಿಸಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/07/2010 - 08:45

ಖಂಡಿತವಾಗಿಯೂ ಕಡ್ಡಾಯವಾಗಲೇ ಬೇಕು ಉಮಾಶಂಕರ್ ರವರೆ, ಆಗ ಮಾತ್ರ ಚುನಾವಣೆ ಬಂದಾಗ ರಜದ ಹೆಸರಿನಲ್ಲಿ ಮಜ ಮಾಡುವ ಅಧಿಕಾರಿವರ್ಗಗಳಿಗೆ, ಸಾಫ್ಟ್-ವೇರ್ ಪ್ರಭೃತಿಗಳಿಗೆ, ಪ್ರಗತಿಪರ ಬುದ್ದುಜೀವಿಗಳಿಗೆ ಸ್ವಲ್ಪವಾದರೂ ಸಾಮಾಜಿಕ ಪ್ರಜ್ನೆ ಬರಬಹುದೇನೋ.
ಒಟ್ಟಿನಲ್ಲಿ ಮತದಾನ ಕಡ್ಡಾಯಾವಾಗಲೇಬೇಕು ಅಷ್ಟೇ ಅಲ್ಲ, ಮತದಾನ ಮಾಡದವರಿಗೆ ಕಠಿಣ ಶಿಕ್ಷೆಯಾಗಲೇಬೇಕು. ಅದಕ್ಕೆ ನಮ್ಮ ಸರಕಾರಗಳು ಸಹ ತಾವಿದ್ದ ಜಾಗದಲ್ಲಿಂದಲೇ ತಮ್ಮ ತಮ್ಮ ಕ್ಷೇತ್ರದ ಅಭ್ಯರ್ಥಿಗಳಿಗೆ ಮತಚಲಾಯಿಸುವ ವ್ಯವಸ್ಥೆಯನ್ನು ಮಾಡಬೇಕು.

g-prasad (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/07/2010 - 08:46

ಹೌದು ಕಡ್ಡಾಯವಾಗಲೇಬೇಕು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/07/2010 - 09:34

ಆಗಲಿ ಅದನ್ನು ಒಂದ್ಸಾರಿ ನೋಡೋಣ, ಏನಾಗುತ್ತೇ ಅಂತಾ

shivaraj (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/12/2010 - 10:17
ಉಮಾಶಂಕರ ಬಿ.ಎಸ್ ಗುರು, 04/15/2010 - 16:35

ಜಿ-ಪ್ರಸಾದ್, ಶಿವರಾಜ್ ಮತ್ತು ಅನಾಮಿಕದ್ವಯರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಾನೂ ಸಹ ಮತದಾನ ಕಡ್ಡಾಯಾವಾಗಲೇಬೇಕೆಂದು ಬಯಸುತ್ತೇನೆ.

ರವಿವರ್ಮ್ ಶನಿ, 04/17/2010 - 12:17

ಉಮಾಶಂಕರ್ ರವರೆಮತದಾನ ಕಡ್ಡಾಯವಾದರೇನೋ ಒೞೆಯದು, ಆದರೆ ಅದಕ್ಕೆ ಯಾವುದೇ ಮೀಸಲಾತಿಗಳು ಇರಬಾರದೆನಿಸುತ್ತದೆ ಏಕೆಂದರೆ ಮೀಸಲಾತಿ ಕ್ಷೇತ್ರಗಳಲ್ಲಿ ಅರ್ಹರಲ್ಲದ ವ್ಯಕ್ತಿಗಳೂ ಸಹ ಕೇವಲ ಮೀಸಲಾತಿ ಆಧಾರದಲ್ಲಿ ಸ್ಪರ್ದಿಸಿರುತ್ತಾರಲ್ಲವೆ? ಆಗ ನಮ್ಮ ಮತ ಅನ್ಯತಾ ಹಾಳಾಗುತ್ತದಲ್ಲವೆ?ಇನ್ನೊಂದು ತೊಡಕೆಂದರೆ ಮೀಸಲಾತಿ ತೆಗೆದು ಹಾಕಿದರೆ ಕೇವಲ ಒಂದೇ ಒಂದು ವರ್ಗ ಮಾತ್ರವೇ ಅಧಿಕಾರ ಹಿಡಿಯುವ ಪರಿಸ್ಥಿತಿಯುಂಟಾಗಬಹುದು, ಒಟ್ಟಿನಲ್ಲಿ ಇದೊಂದು ಸಂಕೀರ್ಣ ವಿಚಾರಏನೇ ಆದರೂ ಮತದಾನ ಕಡ್ಡಾಯವಾಗಲಿ. ಅದನ್ನು ಒಮ್ಮೆ ನೋಡೋಣ

ಉಮಾಶಂಕರ ಬಿ.ಎಸ್ ಸೋಮ, 04/19/2010 - 11:59

ರವಿವರ್ಮ ನಿಮ್ಮ ಸದಭಿಪ್ರಾಯಕ್ಕೆ ವಂದನೆಗಳು

ಪುಂಡರಗಂಡ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 05/04/2010 - 18:41

ಮತದಾನ ಕಡ್ಡಾಯವಾದರೆ ಹರತಾಳ್ ಹಾ'ಳ"ಪ್ಪ ನಂತಹವರು ಮಂತ್ರಿಯಾಗೋದು ತಪ್ಪಿಸೋಕೆ ಆಗುತ್ಯೆ, ನಿಮ್ಗೆಲ್ಲೋ ಭ್ರಾಂತೂ!!!!!!

ಕಾಲಾಯ ತಸ್ಮೈನಮಃ ಎಲ್ಲದಕ್ಕೂ ಕಾಲವೇ ಉತ್ತರಿಸುತ್ತದೆ ಅಲ್ಲವೇ ಪುಂಡರ ಗಂಡ ರವರೆ, ಆದರೂ ನಿಮ್ಮ ಅಭಿಪ್ರಾಯ ಸ್ವಲ್ಪ Pesimistic ಅನ್ನಿಸಿತು.

ತಿಮ್ಮೆಶ್ ಧ, 05/05/2010 - 10:58

ಪ್ರತಿಶತ ಮತದಾನವಾಗುವುದನ್ನು ನೊಡಿದರೆ, ಮತದಾನ ಕಡ್ಡಾಯವಾಗಲೇಬೇಕು. ನಮ್ಮ ಪ್ರಜ್ನಾವಂತ, ವಿದ್ಯಾವಂತ ನಾಗರೀಕರು ಮತದಾನ ಮಾಡುತ್ತಿಲ್ಲ. ಕಡ್ದಾಯ ಮತದಾನದಿಂದಾದರು ನಾವು ಉತ್ತಮ ಸರಕಾರ, ಉತ್ತಮ ಅಡಳಿತ ನಿರೀಕ್ಸಿಸಬಹುದು.

ತಿಮ್ಮೆಶ್ ಧ, 05/05/2010 - 11:04

ಮತದಾನ ಕಡ್ದಾಯವಾಗಬೇಕು, ಆದರೆ, ಸ್ಪದ್ದಿಸಿದ ಅಭ್ಯರ್ಥಿಗಳಲ್ಲಿ ಯಾರು ಉತ್ತಮರು ಇಲ್ಲದಿದ್ದರೆ, ತಮ್ಮ ಅಭಿಪ್ರಾಯ ಸೂಚಿಸಲು ಅವಕಾಶ ಇರಬೇಕು.

ಪ್ರತಿಕ್ರಿಯೆಗೆ ಧನ್ಯವಾದಗಳು ತಿಮ್ಮೇಶ್ ರವರೆ. ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 05/07/2010 - 17:16
  • 1962 views