Skip to main content

ವೀರ ಸನ್ಯಾಸಿ - ಸ್ವಾಮಿ ವಿವೇಕಾನಂದ

ಬರೆದಿದ್ದುMarch 13, 2007
19ಅನಿಸಿಕೆಗಳು

ಸ್ವಾಮಿ ವಿವೇಕಾನಂದ - ವೀರ ಸನ್ಯಾಸಿ
[img_assist|nid=617|title=ಸ್ವಾಮಿ ವಿವೇಕಾನಂದ ೯|desc=|link=none|align=left|width=534|height=640]ಇವರ ಬಗ್ಗೆ ಯಾರಿಗೆ ಗೊತ್ತಿಲ್ಲ ಅಂತಾ ಹೇಳಿ?ಒಂದು ಸಮಯದಲ್ಲಿ ಭಾರತ ಹಾವಾಡಿಗರ ದೇಶ ಎಂದು ಪಾಶ್ಚಿಮಾತ್ಯರು ನಂಬಿದ್ದರು. ಆ ಸಮಯದಲ್ಲಿ ಹಿಂದುತ್ವ ಮತ್ತು ಭಾರತೀಯ ಸಂಸ್ಕೃತಿಯನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸಿದ ಖ್ಯಾತಿ ಇವರದು.
ಇವರ ಮಾತುಗಳು, ಪುಸ್ತಕಗಳು ಈಗಲೂ ಅನೇಕ ಜನರಿಗೆ ಒಂದು ಸ್ಪೂರ್ತಿ ಹಾಗೂ ಆತ್ಮವಿಶ್ವಾಸ ಮೂಡಿಸುತ್ತದೆ.

ಭಾರತದಲ್ಲಿ ಕ್ರಿಶ್ಚನ್ ಮಿಶನರಿಗಳು ಭಾರೀ ಪ್ರಮಾಣದಲ್ಲಿ ಮತಾಂತರಕ್ಕೆ ಪ್ರಯತ್ನಿಸುತ್ತಿದ್ದಾಗ ಅದರ ವಿರುದ್ದ ಬಂಡಾಯ ನಿಂತು ಹಿಂದೂ ಧರ್ಮದ ಸಾರವನ್ನು ಭಾರತದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆಗ ಕ್ರಿಶ್ಚನ್ ಮಿಶನರಿಗಳು ಮೇಲ್ವರ್ಗದ ಹಿಂದೂಗಳನ್ನು ಬಿಟ್ಟು ಅನಕ್ಷರಸ್ಥ ಕೆಳವರ್ಗ ಹಾಗೂ ಗುಡ್ಡಗಾಡು ಜನಾಂಗ ಇವರ ಮತಾಂತರಕ್ಕೆ ಬದಲಾವಣೆಗೆ ಪ್ರಯತ್ನವನ್ನು ಆರಂಭಿಸಿದರು ಎಂದು ಹೇಳಲಾಗಿದೆ. ಇದರ ಬಗ್ಗೆ ಒಂದು ಲೇಖನವನ್ನು ಇಲ್ಲಿ ಓದಬಹುದು.[img_assist|nid=612|title=ಸ್ವಾಮಿ ವಿವೇಕಾನಂದ ೩|desc=ಲಂಡನ್ ಡಿಸೆಂಬರ್ ೧೮೯೬ ಛಾಯಾಗ್ರಹಣ: ಅಲ್ಫ್ರೆಡ್ ಎಲ್ಲಿಸ್ ಇದು ವಿವೇಕಾನಂದರು ಧ್ಯಾನಮುದ್ರೆಯಲ್ಲಿ ಕುಳಿತಿರುವ ಒಂದೇ ಒಂದು ಚಿತ್ರ.|link=none|align=right|width=430|height=640]

ದೇಶ, ವಿದೇಶದ ಅನೇಕ ಇತಿಹಾಸಕಾರರು ಹಾಗೂ ಲೇಖಕರು ಇವರ ತತ್ವಗಳಿಂದ ಪ್ರಭಾವಿತರಾಗಿದ್ದಾರೆ. ಭಾರತದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇವರಿಂದ ಪ್ರಭಾವಿತರಾಗಿದ್ದರು.[img_assist|nid=609|title=ಸ್ವಾಮಿ ವಿವೇಕಾನಂದ|desc=ಚಿಕಾಗೋ ಸಪ್ಟೆಂಬರ್ ೧೮೯೩ ಛಾಯಾಗ್ರಹಣ : ಥಾಮಸ್ ಹ್ಯಾರಿಸನ್|link=none|align=right|width=467|height=640]

ಇವರು ೧೨ನೇ ಜನವರಿ ೧೮೬೩ರಲ್ಲಿ ಕಲ್ಕತ್ತದಲ್ಲಿ ಜನಿಸಿದರು. ಇವರ ತಂದೆ ವಿಶ್ವನಾಥ ದತ್ತ ಮತ್ತು ತಾಯಿ ಭುವನೇಶ್ವರಿ ದೇವಿ. ಆಗ ಇವರ ಹೆಸರು ನರೇಂದ್ರನಾಥ ದತ್ತ ಆಗಿತ್ತು.

[img_assist|nid=615|title=ಸ್ವಾಮಿ ವಿವೇಕಾನಂದ ೬|desc=ಪ್ರಪಂಚ ಧಾರ್ಮಿಕ ಸಭೆಯಲ್ಲಿ ಹಂಚಲಾದ "ಸ್ವಾಮಿ ವಿವೇಕಾನಂದ, ಭಾರತದ ಹಿಂದೂ ಸನ್ಯಾಸಿ" ೧೧-೨೭ ಸಪ್ಟೆಂಬರ್ ೧೮೯೩ ತಯಾರಿಕೆ: ಗೋಯಸ್ ಲಿಥೋಗ್ರಾಫಿಕ್ಸ್, ಚಿಕ್ಯಾಗೋ|link=none|align=left|width=445|height=640]ಇವರು ಶ್ರೀ ರಾಮಕೃಷ್ಣ ಪರಮಹಂಸರ ಪರಮ ಶಿಷ್ಯರು.

ಇವರು ೧೮೯೩ರಲ್ಲಿ ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ಪ್ರಪಂಚ ಧಾರ್ಮಿಕ ಸಭೆಯಲ್ಲಿ ಹಿಂದೂ ಧರ್ಮವನ್ನು ಪ್ರತಿನಿಧಿಸಿದರು.
[img_assist|nid=610|title=ಸ್ವಾಮಿ ವಿವೇಕಾನಂದ ೧|desc=ಚಿಕ್ಯಾಗೋ ಸಪ್ಟೆಂಬರ್ ೧೮೯೩ ಸ್ವಾಮಿ ವಿವೇಕಾನಂದರು ಪ್ರಪಂಚ ಧಾರ್ಮಿಕ ಸಭೆಯಲ್ಲಿ ಪ್ರತಿನಿಧಿಸಿದ ಉಳಿದ ಭಾರತಿಯರೊಡನೆ ಎಡದಿಮ್ದ ಬಲಕ್ಕೆ:ನರಸಿಂಹ ಆಚಾರ್ಯ, ಲಕ್ಷ್ಮಿ ನಾರಾಯಣ, ಸ್ವಾಮಿ ವಿವೇಕಾನಂದ, ಎಚ್. ಧರ್ಮಪಾಲ, ವೀರಚಂದ ಗಾಂಧಿ|link=none|align=right|width=640|height=495]

[img_assist|nid=611|title=ಸ್ವಾಮಿ ವಿವೇಕಾನಂದ ೨|desc=ಚಿಕ್ಯಾಗೋ ಸಪ್ಟೆಂಬರ್ ೧೮೯೩ ಪ್ರಪಂಚ ಧಾರ್ಮಿಕ ಸಭೆಯಲ್ಲಿ ವೀರಚಂದ ಗಾಂಧಿ, ಧರ್ಮಪಾಲ, ಸ್ವಾಮಿ ವಿವೇಕಾನಂದ|link=none|align=left|width=640|height=452]

ಇವರು ೧೮೯೩ ರಿಂದ ೧೮೯೫ ರವರೆಗೆ ಅಮೇರಿಕ, ೧೮೯೫-೧೮೯೬ ಇಂಗ್ಲೆಂಡ್ ಹಾಗೂ ೧೮೯೯-೧೯೦೦ ಮತ್ತೆ ಅಮೇರಿಕಕ್ಕೆ ತಮ್ಮ ತತ್ವ ಪ್ರಸಾರಕ್ಕಾಗಿ ಭೇಟಿ ಕೊಟ್ಟರು.

೧೮೯೭ರಲ್ಲಿ ರಾಮಕೃಷ್ಣ ಮಿಶನ್ ಆರಂಭಿಸಿದರು. ಇದರ ಮುಖ್ಯ ಗುರಿ ಆಧ್ಯಾತ್ಮಿಕ ಹಾಗೂ ಮನುಕುಲದ ಉದ್ದಾರ.

[img_assist|nid=613|title=ಸ್ವಾಮಿ ವಿವೇಕಾನಂದ ೪|desc=ಇದು ಸ್ವಾಮಿ ವಿವೇಕಾನಂದರ ನಡೆದಾಡುವ ಸನ್ಯಾಸಿ ಎಂಬ ಹೆಸರಿನಿಂದ ಜನಪ್ರಿಯವಾದ ಚಿತ್ರ.|link=none|align=left|width=373|height=640]

[img_assist|nid=614|title=ಸ್ವಾಮಿ ವಿವೇಕಾನಂದ ೫|desc=ಬೇಲೂರ ಮಠ ಛಾಯಾಗ್ರಹಣ: ಹರಿಪಾದ ಮಿತ್ರ ಚಿತ್ರದಲ್ಲಿರುವವರು: ತೃಗುಣಾತೀತಾನಂದ, ಶಿವಾನಂದ, ವಿವೇಕಾನಂದ, ತುರಿಯಾನಂದ, ಬೃಹ್ಮಾನಂದ.ಕೆಳಗೆ ಸದಾನಂದ|link=none|align=left|width=640|height=478]

ವಿಶ್ರಾಂತಿ ಇಲ್ಲದ ದುಡಿಮೆ, ತಿರುಗಾಟದಿಂದಾಗಿ ಸ್ವಾಮಿ ವಿವೇಕಾನಂದರ ಆರೋಗ್ಯ ಹದಗೆಡುತ್ತಾ ಬಂತು.
ಇವರು ತಮ್ಮ ಮಧ್ಯವಯಸ್ಸಿನಲ್ಲಿ (೩೯ನೇ ವರ್ಷ) ೪ ಜುಲೈ ೧೯೦೨ರಲ್ಲಿ ಸ್ವರ್ಗಸ್ಥರಾದರು.
[img_assist|nid=616|title=ಸ್ವಾಮಿ ವಿವೇಕಾನಂದ ೮|desc=|link=none|align=left|width=407|height=640]

ನಿಮಗೆ ಸ್ವಾಮಿ ವಿವೇಕಾನಂದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಲ್ಲಿ ಅದನ್ನು ವಿಸ್ಮಯ ನಗರಿಯ ಬ್ಲಾಗ್ (ಪಿಸುಮಾತು)ನಲ್ಲಿ ಬರೆಯಬಹುದು. ಅಥವಾ ಕೆಳಗೆ ನಿಮ್ಮ ಅನಿಸಿಕೆಯನ್ನು ಬರೆಯಿರಿ.

ಚಿತ್ರ ಕೃಪೆ: www.vivekananda.net
ಜ್ಯೂನಿಯರ್ ಫ್ರಾಂಕ್ ಪರ್ಲಾಟೋ, ಅನುಮತಿಯೊಂದಿಗೆ ಬಳಸಲಾಗಿದೆ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

chetanbs ಮಂಗಳ, 03/13/2007 - 13:14

ಸ್ವಾಮಿ ವಿವೇಕಾನಂದ ಅವರು ನೀವು ಹೇಳಿದ ಹಾಗೆ ವೀರ ಸನ್ಯಾಸಿಯೇ ಸರಿ. ಅವರಂತಹ ಮಹಾನ್ ಪುರುಷರು ನಮ್ಮ ನಾಡಿನಲ್ಲಿ ಹುಟ್ಟಿದುದೇ ಹೆಮ್ಮೆ. ಅವರ ಜೀವನ ಚರಿತ್ರೆ ಹಾರು ಅವರ ಕೆಲವು ಬರಹ-ಲೇಖನಗಳನ್ನು ಓದಿದರೆ ಮೈ ನವೀರೇಳಿಸುವ ಅನುಭವವಾಗದೇ ಇರಲು ಸಾಧ್ಯವೇ ಇಲ್ಲವೇನೋ ಅನಿಸುತ್ತದೆ. ಅವರ ಮಾತಿನಲ್ಲಿದ್ದ ದಿಟ್ಟತನ, ಜೊತೆಗೆ ಅವರ ಆತ್ಮವಿಶ್ವಾಸ ಭರಿತ ಲೇಖನಗಳು ಭಾಷಣಗಳು ಇಂದಿಗೂ ನಮ್ಮ ಮನ ತಟ್ಟುವಂತಿದೆ. ಭಾರತೀಯ ಸಂಸ್ಕ್ರತಿ ಹಾಗು ಹಿಂದುತ್ವವನ್ನು ಇಡೀ ವಿಶ್ವಕ್ಕೆ ಮನದಟ್ಟು ಮಾಡಿದ ಮಹಾನ್ ಪುರುಷ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದೇನೋ..... ಭಾರತೀಯರ ಸಭ್ಯತೆ ನಡತೆಗಳು ಎಂಥವು ಎಂದು "ಅಮೇರಿಕದ ನನ್ನ ಸೋದರ ಸೋದರಿಯರೇ...." ಎಂದು ಅಮೇರಿಕನ್ನರನ್ನು ಸಂಬೋಧಿಸಿದಾಗಲೇ ಪರಿಚಯಿಸಿದಂಥವರು. ’Arise, Awake and stop not till the goal is reached' ಎಂಬ ಮಹಾನ್ ಸಂದೇಶವನ್ನು ಯುವಪೀಳಿಗೆಗೆ ಪರಿಚಯಿಸಿದ ಇವರನ್ನು ಎಂದೆಂದಿಗೂ ನೆನೆಸುವಂಥವರಾಗಿದ್ದಾರೆ.

ಜಾಗ್ರತ ಮಂಗಳ, 03/13/2007 - 15:05

ಕ್ರತಜ್ಞತೆಗಳು ರಾಜೇಶ್ ಅವರೇ.
ಒಳ್ಳೆಯ ಲೇಖನ. ಇಂದಿನ ಯುವಕರಿಗೆ (ನಮಗೆಲ್ಲ) ಸ್ವಾಮೀಜಿಯವರ ಸಲಹೆಗಳೇ ಆದರ್ಶ. ಅವರ ಸಲಹೆಗಳನ್ನು ಸೇರಿಸಿದರೆ ಇನ್ನೂ ಚೆನ್ನ.

ಜಾಗ್ರತ ಮಂಗಳ, 03/13/2007 - 15:05

ಕ್ರತಜ್ಞತೆಗಳು ರಾಜೇಶ್ ಅವರೇ.
ಒಳ್ಳೆಯ ಲೇಖನ. ಇಂದಿನ ಯುವಕರಿಗೆ (ನಮಗೆಲ್ಲ) ಸ್ವಾಮೀಜಿಯವರ ಸಲಹೆಗಳೇ ಆದರ್ಶ. ಅವರ ಸಲಹೆಗಳನ್ನು ಸೇರಿಸಿದರೆ ಇನ್ನೂ ಚೆನ್ನ.

siddesha (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 03/13/2007 - 15:52

Hallo sir How R U Thuba Thanks Sir Neeu Kalusirva Subject VERY Good

ಚೇತನಾ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 05/10/2008 - 22:11

ವಿಪರೀತ ತಡವಾಗಿ ನೋಡ್ತಿದೇನೆ.
ಉತ್ತಮ ವಿಷಯ, ಬರಹ. ಸ್ವಾಮೀಜಿ ಎವರ್ ಗ್ರೀನ್ ಹೀರೋ ಅನ್ನೋದ್ರಲ್ಲಿ ಸಂದೇಹವಿಲ್ಲ. ಅವರ ಬಳಿ ಎಲ್ಲದಕ್ಕೂ ಉತ್ತರ ಕಂಡುಕೊಳ್ಳಬಹುದು.
ಧನ್ಯವಾದ
-ಚೇತನಾ ತೀರ್ಥಹಳ್ಳಿ

ವಾಗೀಶ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/16/2009 - 16:34

ಸ್ವಾಮಿ ವಿವೇಕಾನಂದರ ಉತ್ತಮ ಚಿತ್ರಗಳನ್ನು ಒದಗಿಸಿದಕ್ಕೆ ದನ್ಯವಾದಗಳು, ಅವರ ಬಗ್ಗೆ ಏನು ಹೇಳಿದರೂ , ಕೇಳಿದರೂ ಸಾಲದು !?

Vi (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/16/2009 - 16:50

ತುಂಬ ಚೆನ್ನಾಗಿದೆ, ಉಪಯುಕ್ತವಾದ ಮಾಹಿತಿ ನೀಡಿದಿರಿ ನೀವು..

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 05/05/2009 - 09:26

Manjunatha.G.K (ಪ್ರಮಾಣಿಸಲ್ಪಟ್ಟಿಲ್ಲ.) ಧ, 05/13/2009 - 15:58

hello rajesh, nimage ee kannadigana koti koti namanagalu,,
hasanmukhi, veerasanyasi swami vivekanandara mahitiyanna sookshmavagi antarjaladalli vivarisiddiri, idu tumba anukoolakaravagide.....

Arun (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/16/2009 - 14:44

ತುಂಬಾ ಚೆನ್ನಾಗಿದೆ. ಧನ್ಯವಾದಗಳು,
ಸ್ವಾಮಿ ವಿವೇಕಾನಂದರ ಬಗ್ಗೆ ಇನ್ನು ವಿಷಯ ಓದುವ ಆಸೆ
ಇನ್ಯಾವುದೆ ಬ್ಲಾಗ್ ಗೊತ್ತಿದ್ದರೆ ದಯವಿಟ್ಟು ಮೆಲ್
ಮಾಡಿ ಪ್ಲಿಸ್.....
(naik.arun34@yahoo.com)

ಸಂದೀಪ್ (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/24/2009 - 20:53

ಅವರು ವಿಸ್ಮಯ ಪ್ರಜೆ, ಮಹಾನ್ ಚೆತನ, ಭವ್ಯ ಭರತದ ಅಡಿಗಲ್ಲು, ಕೊಟ್ಯಾಂತರ ಹಿಂದುಗಳ ಅರಾಧಕ, ಅವರ ಕೃತಿಶ್ರೇಣಿಗಳು ಆಧುನಿಕ ಭಗವದ್ಗೀತೆ ................

manjunath Kadam (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 09/05/2009 - 13:39

The Great Personality of India. Who has given the
information of Hinduism to the world. He has seen Lord Shiva by the touch of Ramakrishna Paramhamsa.

chilume (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 11/19/2009 - 00:18

ಧನ್ಯವಾದಗಳು ರಾಜೇಶ್.
ಲೇಖನ ಚನ್ನಾಗಿದೆ.
ಸ್ವಾಮೀಜಿಯವರ ಆದರ್ಶ ಇನ್ನೂ ಹೆಚ್ಚಾಗಿ ಮನಮುಟ್ಟಬೇಕು. ಅವರು ಪ್ರತಿಯೊಬ್ಬ ಯುವಕನ ಆದರ್ಶವಾಗಬೇಕೆ0ದು ಹಾರೈಸುತೇನೆ.

siddamma (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/25/2010 - 13:40

hi
ಕ್ರತಜ್ಞತೆಗಳು ರಾಜೇಶ್ ಅವರೇ.
ನಮಸ್ಕಾರಗಳು.ನಿವು ಬರೆದಿರುವ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ತುಂಬಾ ಒಳ್ಳೇಯ ಲೇಕನ.ಸ್ವಾಮಿಜೀಯ ಒಂದೋಂದು ಮಾತು ಇಂದಿನ ಯುವ ಪಿಳಿಗೇಗೆ ದಾರಿದಿಪ ವಾಗಬೆಕು.

pratibha (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 03/25/2010 - 09:42

ನಮಸ್ಕಾರ ರಾಜೇಶ್ ಅವರೇ ನಿಮ್ಮ ಲೇಕನದಿಂದ  ತುಂಬ ಒಳಿತ್ತಾಗಿದೆ ಇದೇ ರೀತಿ ನಿಮ್ಮ ಎಲ್ಲಾ ಲೇಕನಗಳು ಮೂಡಿಬರಲಿ ಎಂದು ಬಯಸುತೆನೆ.  

jagadeesha m k… (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 11/28/2010 - 13:05

ಬಹಳ ಧನ್ಯವದಗಳು ಯುವಕರಿಗೆ ಹೀಗೆಯೆ ಉತ್ತೆಜನ ನೀಡುತ್ತಿರಿ ತಮಗೆ ನಾನು ಚಿರರುಣೀಯಗಿರುತ್ತೆನೆ

ಶೃತಿ ಎಸ್.ವಿ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/25/2011 - 15:39

ತುಂಬಾ ಧನ್ಯವಾದಗಳು ರಜೇಶ ಅವರೆ ತುಂಬಾ ಬೆಲೆ ಕಟ್ಟಲಾಗದಂತಹ ಮಾಹಿತಿಯನ್ನು ನೀಡಿದ್ದಿರಿ ಉತ್ತಮ ಚಿತ್ರಗಳನ್ನು ನೀಡಿ ಮಾಹಿತಿ ತಿಳಿಸಿದ್ದಿರಿ......... ಇಂಥ ಮಹಾನ್ ವ್ಯಕ್ತಿ ಯ ಬಗ್ಗೆ ನಮಗೆ ತಿಳಿಸಿ ಕೊಟ್ಟೊದ್ದೊರೊ ತುಂಬ ಧನ್ಯವಾದಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 02/08/2011 - 16:50

 ಸ್ವಾಮಿ ವಿವೇಕಾನಂದರ ಜಿವನದ ಬಗೆತಿಲಿಸಿದಗಕೆ ನಿಮಗೆ ನನ್ನ್ ದನ್ಯ್ವವಾದಗಲು.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/12/2012 - 17:42

ಸ್ವಾಮಿ ವಿವೇಕಾಂನಂದರ ಬಗ್ಗೆ ತಿಳಿಸಿದ್ದಕ್ಕಾಗಿ ದನ್ಯವಾದಗಳು
 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.