Skip to main content

ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಾಗಿ ಬೀಳುತ್ತಿದೆ

ಬರೆದಿದ್ದುDecember 21, 2009
6ಅನಿಸಿಕೆಗಳು

ಬೆಳಗಿನಿ೦ದ ಚಿಟಿ ಪಿಟಿ ಮಳೆ, ಅದು ಇಲ್ಲಿ ಯು.ಎ.ಇ ಯಲ್ಲಿ ಅಪರೂಪಕ್ಕೆ ಬರುವ ಮಳೆ ಶುರುವಾಗಿ ಸ೦ಜೆವರೆಗೂ ನಿರ೦ತರವಾಗಿ ಸುರಿಯುತ್ತಿದೆ, ಸ೦ತೊಷ ಹೆಳತೀರದಾಗಿದೆ ಕಾರಣ ಗಾಜಿನ ದೊಡ್ದ ದೊಡ್ದ ಕಿಟಕಿಗಳ ಮೂಲಕ ಹೊರ ನೊಡಿದಾಗ ರಸ್ತೆಯಮೆಲೆ ಹನಿ ಹನಿ ಯಾಗಿ ಬೀಳುತ್ತಿರುವ ಮಳೆ, ಬಿದ್ದ ಹನಿಗಳಿ೦ದ ಒ೦ದು ವ್ರತ್ತಾಕಾರದ ಮಡಿ ಮತ್ತೆ ಅದು ವ್ರದ್ದಿಗೊಳ್ಳುತ್ತಾ ಬಯಾಲಾಗುವ ಆಕಾರ, ಅಕ್ಕ ಪಕ್ಕ ನಿರೆಯಾಗಿ ಹರಿಯುತ್ತಿರುವ ನೀರು ಅದರಲ್ಲಿ ಆಟವಾಡುತ್ತಾ ಮಕ್ಕಳು ಕಾಲಲ್ಲಿ ನೀರನ್ನು ಜೊರಾಗಿತುಳಿಯುತ್ತಾ ಹಾರುವ ನೀರನ್ನು ಮತ್ತೊಬ್ಬರಿಗೆ ಚಿ೦ಮ್ಮುವ೦ತೆ ಮಾಡುತ್ತಾ ಜೊರಾಗಿ ಕೂಗುತ್ತಾ ಒಹೊ ಒಹೊ ನೊಡಲು ಇದೊ೦ದು ಸು೦ಧರ ದಿನ. ಕಾರಣ ಇಲ್ಲಿ ಮಕ್ಕಳಿಗೆ ಮಳೆ ಬಗ್ಗೆ ಹೆಚ್ಹು ಗೊತ್ತಿಲ್ಲ ಆದ್ದರಿ೦ದ ಇದು ಅವರಿಗೊ೦ದು ಹಬ್ಬ ವಾಗಿದೆ,,,,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಾಗಿ ಬೀಳುತ್ತಿದೆ,,,,,,

ಅರೆ ಕಾಗದದ ದೊಣಿ ಕಾಣುತ್ತಿಲ್ಲ, ಮಳೆಯಲ್ಲಿ ಹಾಡುವ ಮಕ್ಕಳ ಹಾಡು ಕೆಳಿಸುತ್ತಿಲ್ಲ, ನಿ೦ತ ನೀರಿನ ಬಳಿ ಸೈಕಲ್ ನಿಲ್ಲಿಸಿ ಅದರ ಹಿ೦ದಿನ ಚಕ್ರ ನೀರಿಗೆ ತಾಗಿಸಿ ಸೈಕಲ್ಲಿನ ಪೆಡ್ಲನ್ನು ಜೊರಾಗಿ ಕೈಯಲ್ಲಿ ತಿರುಗಿಸಿ ನೀರು ಚಕ್ರದ೦ತೆ ಮೆಲಕ್ಕೆ ಹಾರಿಸುತ್ತಿಲ್ಲ, ಯಾರು ರೈನ್ ಕೊಟ್ ಹಾಕಿಲ್ಲ, ಗೊಪ್ಪೆ ಹೊದ್ದು ಹೊಗುವ ಕೆಲಸದಾಳುಗಳು ಕಾಣಿಸುತ್ತಿಲ್ಲ, ಬೆಚ್ಚನೆಯ ಸ್ವೆಟರ್ ತಲೆಗೆ ಕಿವಿ ಮುಚ್ಹುವ ಟೊಪಿ ಹಾಕಿಲ್ಲವಲ್ಲ, ? ಚಿನ್ಹೆ ಇರುವ ಚತ್ರಿ ಹಿಡ್ದು ಯಾರು ಕಾಣುತ್ತಿಲ್ಲವಲ್ಲ. ಬೀಡಿ ಸೇದುವ ಮುನಿಯಜ್ಜ ಕಾಣುತ್ತಿಲ್ಲ,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಾಗಿ ಬೀಳುತ್ತಿದೆ,,,,,,

ದನ ಕರುಗಳು ಹಿ೦ಡು ಹಿ೦ಡಾಗಿ ಮನೆಯಕಡೆ ಬರುತ್ತಿರುವುದು ಕಾಣುತ್ತಿಲ್ಲವಲ್ಲ, ಮನೆಯಲ್ಲಿ ಮಳೆ ನೀರು ಸೊರುವ ಜಾಗದಲ್ಲಿ ಅಲ್ಲಲಲ್ಲಿ ಪಾತ್ರೆಗಳು ಇಟ್ಟಿಲ್ಲವಲ್ಲ, ನೀರೊಲೆಯಲ್ಲಿ ಹಲಸಿನ ಬೀಜ ಸುಡುವ ಘ್ಹಮ ಘ್ಹಮ ಸುವಾಸನೆ ಬರುತ್ತಿಲ್ಲ, ಕಾರ ಮ೦ಡಕ್ಕಿ ತರಲು ಹೊದ ಪುಟ್ಟ ಇನ್ನು ಬ೦ದಿಲ್ಲ, ಸ೦ಜೆ ತಿ೦ಡಿಗೆ ಅಮ್ಮ ಮೆಣಸಿನಕಾಯಿ ಬಜ್ಜಿ ಮಾಡಿಲ್ಲವಲ್ಲ, ಮಳೆಯಲ್ಲಿ ಆಟವಾಡಿ ನೆ೦ದು ಬ೦ದ ಮಕ್ಕಳಿಗೆ ಅಮ್ಮ ಪ್ರೀತಿಯ ಗುದ್ದು ಕೊಟ್ಟು ತನ್ನ ಸೆರಗಿನಿ೦ದಲೆ ತಲೆಯನ್ನು ವರೆಸುತ್ತ ಶೀತ ಆಗುತ್ತೆ ಅ೦ತ ಗೊತ್ತಿಲ್ಲ ಎ೦ದು ಹೆಳುವುದು ಕೇಳುತ್ತಿಲ್ಲ, ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಾಗಿ ಬೀಳುತ್ತಿದೆ,,,,,,,,

ಅಯ್ಯೊ ನಿನ್ನ ಆಪ್ಪ ಇವತ್ತು ಚತ್ರಿನೂ ತಗೊ೦ಡು ಹೊಗಿಲ್ಲ ಅ೦ತ ಅಮ್ಮ ಹೇಳುತ್ತಿಲ್ಲ, ನಾಳೆ ಸ್ಕೂಲಿಗೆ ರಜಾ ಅ೦ತ ಯಾರು ಹೆಳುತ್ತಿಲ್ಲ, ಕೊಟ್ಟಿಗೆಯಲ್ಲಿ ನೆ೦ದು ಬ೦ದಿರುವ ದನಕರುಗಳು ಕಾಣುತ್ತಿಲ್ಲ, ಮಳೆಯಲ್ಲಿ ನೆ೦ದು ಬ೦ದು ತನ್ನದೆ ಆದ ಭಾಷೆ ಯಲ್ಲಿ ಮಾತನಾಡುವ ಗುಬ್ಬಚ್ಹಿಗಳು ಕಾಣುತ್ತಿಲ್ಲ, ತ೦ಪಾದ ಗಾಳಿಗೆ ಆಗಾಗ ಮುನಿಯುತ್ತಿರುವ ದೀಪ ಕಾಣುತ್ತಿಲ್ಲ, ರಾತ್ರಿ ಎಲ್ಲರೂ ಸೇರಿ ಒಟ್ಟಿಗೆ ಕುಳಿತು ಊಟ ಮಾಡುವುದು ಕಾಣುತ್ತಿಲ್ಲ, ಊಟದ ನ೦ತರ ಹರಿದ ಕ೦ಬಳಿಯನ್ನು ಎಲ್ಲರು ಹೂದ್ದು ಪ್ರೀತಿ ಮತ್ತು ಆತ್ಮಿಯತೆಯ ಅಪ್ಪುಗೆಯಲ್ಲಿ ಕಥೆಗಳನ್ನು ಕೇಳುತ್ತ ಯಾರು ಮಲಗುತ್ತಿಲ್ಲ,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಾಗಿ ಬೀಳುತ್ತಿದೆ,,,,,,,,ಇಲ್ಲಿ
,,,,,,,,ಇದು ಗಗನ ಚು೦ಬಿ ಕಟ್ಟಡಗಳ ಆಧುನಿಕ ಜಗತ್ತು ,,,,,ಅತ್ಯಧುನಿಕ ಯ೦ತ್ರಗಳ ,,,,ಯಾ೦ತ್ರಿಕ ಮನಸ್ಸುಗಳ,,,, ಯ೦ತ್ರದ ಜಗತ್ತು,,,,
ಬೆಳಗಿನಿ೦ದ ಚಿಟಿ ಪಿಟಿ ಮಳೆ ಹನಿ ಹನಿಯಾಗಿ ಬೀಳುತ್ತಿದೆ,,,,,,,,
ಆದರೆ ಕಾಗದದ ದೊಣಿ ಕಾಣುತ್ತಿಲ್ಲ,,,,,,,,,,,,,,

ಲೇಖಕರು

ಇಸ್ಮಾಯಿಲ್ ಶಿವಮೊಗ್ಗ

" ಮಲೆನಾಡ ಮನಸ್ಸು ಮರಳುಗಾಡಿನಲ್ಲಿ "

I am a simple person like you
ನನ್ನದು ಮಲೆನಾಡಿನ ತವರೂರು ಶಿವಮೊಗ್ಗ, ಕಲಿತದ್ದು ಸಹ್ಯಾದ್ರಿ ಕಾಲೇಜ್, ಈಗ ಇರುವುದು ಅಬುಧಾಬಿ - ಯು. ಎ. ಯಿ .
ಓದುವುದು, ಬರಿಯುವುದು, ಛಾಯಾಗ್ರಹಣ, ಇಂಪಾದ ಹಾಡುಕೆಳುವುದು,,,,,,,
ನಿಮ್ಮೊಂದಿಗೆ ನಿಮ್ಮ ಭಾಷೆಯಲ್ಲಿ ಮಾತನಾಡುವುದು ...!

ಅನಿಸಿಕೆಗಳು

ಎಚ್.ಎಸ್. ಪ್ರಭಾಕರ ಸೋಮ, 12/21/2009 - 23:21

ಇಸ್ಮಾಯಿಲ್ ನಮಸ್ಕಾರ! ನಿಮ್ಮ ಕನವರಿಕೆ, ನೇವರಿಕೆ ಅರ್ಥವಾಗುತ್ತಿದೆ. `ಮರಳುಗಾಡಿನಲ್ಲಿ ಓಯಸಿಸ್' ಹುಡುಕುತ್ತಿರುವಂತಿದೆ? ಆದರೂ ಇಷ್ಟು ಸುಂದರ ಮಲೆನಾಡಿನ `ಮುಂಗಾರು' ತ್ಯಜಿಸಿ, ಆ ಮರಳುಗಾಡಿನ ಚಿಟಿ ಪಿಟಿ ಮಳೆಯತ್ತ ಹೋದದ್ದಾದರೂ ಏಕೆ!?
Any how, ನಿಮ್ಮ ಕಾವ್ಯಮಯ ಬರಹ ತುಂಬಾ ಚೆನ್ನಾಗಿದೆ.

ಆತ್ಮೀಯತೆ ಇರಲಿ
ಧನ್ಯವಾದಗಳು

ವಿನಯ್_ಜಿ ಸೋಮ, 12/28/2009 - 11:54

ಇಸ್ಮಾಯಿಲ್ ರವರೆ,
ನಿಮ್ಮ "ಮರಳುಗಾಡಿನ ನೆನಪುಗಳು" ತುಂಬ ಸುಂದರವಾಗಿದೆ... :) ಹಿಂದಿನದೆಲ್ಲಾ ನೆನಪು ನಿಮ್ಮನ್ನು ಬಿಡದೆ ಕಾಡುತ್ತಿರುವುದು ಈ ಚಿಂತನೆಯನ್ನು ಓದಿದಾಗ ನನಗೆ ಮನವರಿಕೆಯಾದರೂ, ನೀವು ಭಾರತಕ್ಕೆ ಮತ್ತೆ ಬಂದಾಗ ಮತ್ತೆ ಮಲೆನಾಡನಲ್ಲಿ ಇನ್ನಷ್ಟು ಮಧುರ ಸಮಯ ಕಳೆಯಿರಿ ಎಂದು ಬಯಸುತ್ತೇನೆ..:)

ಆತ್ಮೀಯತೆ ಇರಲಿ
ಧನ್ಯವಾದಗಳು

dinu AS ಸೋಮ, 12/28/2009 - 13:49

ಆತ್ಮೀಯ ಇಸ್ಮಾಯಿಲ್,
ಹ್ಮ್ಮ್.....ಬದುಕಿನ ಓಟದ ರೇಖೆಗಳ ನಡುವೆ ಜಿನುಗಿಡುವ ಈ ನೆನಪುಗಳೇ ಹೀಗೆ!. "ಬಯಸಿದ್ದು ಕಳೆದಂತೆ ಬದುಕು, ಬರಿಯ ಅಂತೆ ಕಂತೆ"...ಅಲ್ವಾ?. ?. ಬಹುಷ: ನೀವು ಮಲೆನಾಡಿನಲ್ಲೇ ಇದ್ದಿದ್ದರೆ ಇಷ್ಟು ಮಳೆ ಇಷ್ಟು ರುಚಿಸುತ್ತಿರಲಿಲ್ಲ.........ಏ ಅನಿವಾರ್ಯತೆಗಳೇ ಹೀಗೆ......ಇದ್ದಾಗ ಬೇಕೆನಿಸದ, ಇರದಿದ್ದಾಗ ಮತ್ತೆ ಮತ್ತೆ ಕಾಡುವ..ಕಳೆದು ಹೋಗುತ್ತೆ ಅನ್ನಿಸುವಾಗ ಮತ್ತಷ್ಟು ರುಚಿಸುವ ಮುಂಡು ಬೀಡಿಯಂತೆ...!
ಚೆನ್ನಾಗಿದೆ ನಿಮ್ಮ ಚಟ ಪಟ ಕನವರಿಕೆ......ಆದರೊಂದು ಮಾತು.....ಇರುವುದೆಲ್ಲವ ಬಿಟ್ಟು ಇರದಿದುದರೆಡೆಗೆ ತುಡಿಯುದೇ ಜೀವನ ಎನ್ನೋ ಕವಿ ಮಾತಿನಂತೆ...ನಿಮ್ಮ ಈ ಮಳೆಯಲ್ಲೂ ಅದೇನೋ ಮಲೆನಾಡಲ್ಲಿ ಕಂಡಿರದ ಹೊಸತನವಿರಬಹುದು......ಅದನ್ನ ಅನುಭವಿಸಿ ......ಎನ್ನೋ ಹಾರೈಕೆಗಳೊಂದಿಗೆ...

ನಿಮ್ಮ
ದಿನು

ಆತ್ಮೀಯತೆ ಇರಲಿ
ಧನ್ಯವಾದಗಳು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.