Skip to main content

'ಬಿಕಾಸ್' 'ಬಿಕಾಸ್'

ಇಂದ ಲಕ್ಷ್
ಬರೆದಿದ್ದುDecember 1, 2009
2ಅನಿಸಿಕೆಗಳು

'ಬಿಕಾಸ್' 'ಬಿಕಾಸ್'

ಒಮ್ಮೆ ನಾನು ಮತ್ತು ನನ್ನ ಸನಿಹವರ್ತಿ ಮಾತಾಡಿಕೊಂಡು ಮಾರ್ಗದ ಬದಿಯಲ್ಲಿ (ಪಕ್ಕದಲ್ಲಿ) / (ಪಾದಚಾರಿಗಳು ಚಲಿಸುವಲ್ಲಿ) ಹೊಗುತ್ತಿದ್ದೆವು. ಮಾತು ಮಾತಿಗೂ 'ಬಿಕಾಸ್' 'ಬಿಕಾಸ್' ಎಂದು ಹೇಳುವುದು ನನ್ನ ಸನಿಹವರ್ತಿಗೆ ಅಭ್ಯಾಸ. ಅಂದು ಕೂಡಾ ಆ ಅಭ್ಯಾಸ ಹಾಗೆಯೇ ಮುಂದುವರೆದಿತ್ತು.

ಸ್ವಲ್ಪ ದೂರ ಸಾಗುತ್ತಿರುವಂತೆಯೇ ಇಗ್ಗಾಲಿ ಸವಾರನೊಬ್ಬ ಬಂದು "ಏನು, ಕರೆದಿರಾ?" ಎಂದ. ನಮಗಿಬ್ಬರಿಗೂ ಆಶ್ಚರ್ಯ "ಇಲ್ಲವಲ್ಲ" ಎಂದೆವು ಒಕ್ಕೊರಲಿನಿಂದ. ಆತ "ಇಲ್ಲ ಇಲ್ಲ, ನೀವು ನನ್ನನ್ನು ಕರೆದದ್ದು ನನಗೆ ಸರಿಯಾಗಿ ಕೇಳಿಸಿದೆ. ಏನೆಂದು ಹೇಳಿ?" ಎಂದೊತ್ತಾಯಿಸಿದ. ಆಗ ನಾನು "ನೀನು ಯಾರು? , ನಿನ್ನ ಹೆಸರೇನೆಂದು ನಮಗೆ ಗೊತ್ತಿಲ್ಲ. ಹಾಗಿರುವಾಗ, ನಾವು ನಿನ್ನನ್ನು ಏನೆಂದು ಕರೆಯಲು ಸಾಧ್ಯ?" ಎಂದೆ ನನ್ನ ಹುಬ್ಬನ್ನು ಅರ್ಧ ಅಂಗುಲ ಮೇಲೆತ್ತಿ. ಆತ "ನನ್ನ ಹೆಸರು 'ಬಿಕಾಸ್'. ನೀವು 'ಬಿಕಾಸ್' 'ಬಿಕಾಸ್' ಎಂದು ಎರಡೆರಡುಸಲ ಕರೆದಿದ್ದೀರಿ. ಹೌದೋ ಅಲ್ಲವೋ?" ಎಂದು ನ.. ಸ..(ನನ್ನ ಸನಿಹವರ್ತಿ)ಯನ್ನು ನೋಡುತ್ತ ಹೇಳಿದ. ಕೂಡಲೇ ನಮಗಿಬ್ಬರಿಗೂ ಎಲ್ಲಿಲ್ಲದ ನಗು ಬರಲಾರಂಭವಾಯಿತು. ಆದಕ್ಕವನು "ಯಾಕೆ ನಗುತ್ತಿದ್ದೀರಿ?" ಎಂದ. ನ.ಸ. "ಯಾರಿಗಾದರೂ ಯಾರದರೂ 'ಬಿಕಾಸ್' ಎಂದು ಹೆಸರಿಡುತ್ತಾರೆಯೇ? ಅಷ್ಟಕ್ಕೂ ನಾನು ಆಂಗ್ಲ ಭಾಷೆಯ -- 'ಬಿ ಇ ಸಿ ಎ ಯು ಎಸ್ ಇ' = 'ಬಿಕಾಸ್' ಎಂಬ ಶಬ್ದವನ್ನು ಬಳಸಿದ್ದಷ್ಟೇ. ಆದರೆ ನಿನ್ನ ಹೆಸರೇನು ವಿಚಿತ್ರವಾಗಿದೆಯಲ್ಲ?" ಎಂದಾಗ, '' 'ಬಿಕಾಸ್' ಎಂದರೆ 'ವಿಕಾಸ್'. ಬೆಂಗಾಲಿಗಳಾದ ನಾವು 'ವ' ಕಾರವನ್ನು 'ಬ' ಕಾರದಂತೆ ಉಚ್ಛರಿಸುತ್ತೇವೆ. ಉದಾ: 'ವಸಂತಿ'-'ಬಸಂತಿ', 'ಕವಿತ'-'ಕಬಿತ', 'ವಾಣಿ'-'ಬಾಣಿ' ಹೀಗೆ.." ಎಂದನಾತ.

ಈಗ ಪೂರ್ಣ ವಿಚಾರಗಳು ಪರಸ್ಪರ ವಿನಿಮಯವಾಗಿದ್ದುದರಿಂದ ಮೂವರಿಗೂ ಪರಿಸ್ಥಿತಿಯ ಸರಿಯಾದ ನೆಲೆ ಅರ್ಥವಾಗಿ ನಗೆಯು ಮುಗಿಲು ಮುಟ್ಟಿತ್ತು.

ಲೇಖಕರು

ಲಕ್ಷ್

K£ÉAzÀÄ §gÉAiÀÄĪÀÅzÀÄ?

ಅನಿಸಿಕೆಗಳು

manav ಮಂಗಳ, 12/01/2009 - 19:44

what is this rETiMg guru?

ಪ್ರಿಯ ಲಕ್ಷ್ ಭಟ್ ರವರೆ ನಿಮ್ಮ ಲೇಖನ ಅರ್ಥವಾಯಿತು. ಚೆನ್ನಾಗಿಯೂ ಇದೆ. ಇನ್ನೂ ಸ್ವಲ್ಪ ವಿಸ್ತೃತವಾಗಿರಬೇಕಿತ್ತೇನೋ ಅನ್ನಿಸಿತು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.