ಹಾಕುತ್ತೇವೆ
ಹಾಕುತ್ತೇವೆ
ಒಮ್ಮೆ ನಾವು ದ. ಕ.ದಲ್ಲಿ ಮನೆ ಕಟ್ಟಿಸುತ್ತಿರುವಾಗ ನಮ್ಮ ಸ್ನೇಹಿತರು ಬೆಂಗಳೂರಿನಿಂದ ಬಂದಿದ್ದರು. ನಾವೆಲ್ಲರೂ ಮನೆ ಕಟ್ಟುವ ಮೇಸ್ತ್ರಿಯ ಬಳಿ ಮಾತನಾಡುತ್ತಿದ್ದೆವು. ಮೇಸ್ತ್ರಿಯ ಸಹಾಯಕರಲ್ಲಿ ಕೆಲವರು "ಮನೆಯ ಒಕ್ಕಲು ಯಾವಾಗ?" ಎಂದು ಕೇಳಲಾರಂಭಿಸಿದರು. ಅದಕ್ಕೆ ಬೆಂಗಳೂರು ಮಿತ್ರರು "ಇನ್ನೂ ಮನೆಯೇ ಕಟ್ಟಿ ಆಗಿಲ್ಲ. ಆಗಲೇ ಒಕ್ಕಲಿನ ಚಿಂತೆಯೇ?" ಎಂದು 'ಕೂಸೇ ಇನ್ನೂ ಹುಟ್ಟಿಲ್ಲ; ಆಗಲೇ ಕುಲಾವಿಯ ಚಿಂತೆಯೇ?' ಎಂಬ ಗಾದೆಯ ಧಾಟಿಯಲ್ಲಿ ಕೇಳಿದರು. "ಹಾಗಲ್ಲ. ಮನೆ ಕಟ್ಟಿದ ನಂತರ ನಮ್ಮನ್ನೆಲ್ಲಾ ಒಕ್ಕಲಿಗೆ ಕರೆಯದಿದ್ದರೆ ಎಂದು ಮೊದಲೇ ಕೇಳಿ ಇಟ್ಟುಕೊಳ್ಳುತ್ತಿದ್ದೇವೆ" ಎಂದರು ಮೇಸ್ತ್ರಿಯ ಸಂಗಡಿಗರು.
ಬೆಂಗಳೂರಿನ ಮಿತ್ರರು "ಒಕ್ಕಲಾಗುತ್ತದೋ ಇಲ್ಲವೋ ಆದರೆ ನಿಮ್ಮೆಲ್ಲರಿಗೂ ಊಟ ಹಾಕುತ್ತೇವೆ ಬಿಡಿ" ಎಂದರು. "ನಾವೇನು ನಾಯಿಗಳಾ? ನೀವು ಊಟ ಹಾಕಲಿಕ್ಕೆ" ಎಂದರು ಮೇ. ಸಂ.(ಮೇಸ್ತ್ರಿಯ ಸಂಗಡಿಗರು) ತುಸು ಮುನಿಸಿನಿಂದ. ಬೆಂ. (ಬೆಂಗಳೂರು) ಮಿತ್ರರಿಗೆ ಇವರೆಲ್ಲಾ ಹೀಗೇಕೆ ಹೇಳುತ್ತಿದ್ದಾರೆಂಬುದು ಅರ್ಥವೇ ಆಗಲಿಲ್ಲ. ಅಷ್ಟರಲ್ಲಿ ನಾನು "ಅಯ್ಯೋ ಅವರು ಹೇಳಿದ್ದು 'ಬಡಿಸುತ್ತೇವೆ' ಎಂಬ ಅರ್ಥದಲ್ಲಿ. ಬೆಂಗಳೂರಿನವರಾದ ಅವರಿಗೆ ಅಲ್ಲಿಯ ಮಾತನಾಡುವ ಶೈಲಿ ಗೊತ್ತುಂಟೇ ಹೊರತು ಇಲ್ಲಿಯ ಶೈಲಿ ತಿಳಿಯದೆ ಹಾಗೆಂದಿದ್ದಾರೆ. ನೀವು ಅಪಾರ್ಥ ಮಾಡಿಕೊಂಡಿದ್ದೀರಿ ಅಷ್ಟೆ" ಎಂದು ವಿವರಿಸಿದೆ. ಮೇಸ್ತ್ರಿಯ ಸಂಗಡಿಗರೆಲ್ಲಾ "ಎಷ್ಟೇ ಆದರೂ ಅವರು ನಿಮ್ಮ ಸ್ನೇಹಿತರಲ್ಲವೇ ಅದಕ್ಕೆ ನೀವು ಅವರು ಹೇಳಿದ್ದನ್ನು ಸಮರ್ಥಿಸಿ ಮಾತನಾಡುತ್ತಿದ್ದೀರಿ" ಎಂದರು.
ಆಗ ಬೆಂ. ಮಿತ್ರರು " ಅಲ್ಲೆಲ್ಲಾ ನಿಮ್ಮ ಮದುವೆ ಯಾವಾಗ? ನಮಗೆ ಊಟ ಯಾವಾಗ ಹಾಕುತ್ತೀರಿ / ಹಾಕಿಸುತ್ತೀರಿ?'' ಎಂದೇ ಕೇಳುತ್ತಾರೆ. ಹಾಗಾದರೆ ಅವರುಗಳೆಲ್ಲಾ ಅವರವರನ್ನು ನಾಯಿಗಳು ಎಂದು ಭಾವಿಸಿಕೊಂಡೇ ಹಾಗೆ ಕೇಳುತ್ತಾರೇನು? ನೀವು ಹೇಳುತ್ತಿರುವುದು ನೋಡಿದರೆ ಹಾಗೇ ಇದೆಯಲ್ಲಾ? ಅಷ್ಟೇ ಏಕೆ ನಾನು ನನ್ನ ತಾಯಿಯ ಬಳಿ "ಅಮ್ಮಾ, ನನಗೆ ಊಟ ಹಾಕು" ಎಂದೇ ಹೇಳುವುದು. ಹಾಗಿರುವಾಗ ನೀವು ಸುಮ್ಮ ಸುಮ್ಮನೆ ಹೇಗೆ ಹೇಗೋ ಏನೇನೋ ಅರ್ಥ ಮಾಡಿಕೊಂಡಿದ್ದೀರಿ. ಅಷ್ಟೊಂದು ಸಂಶಯ ನಿಮಗಿದ್ದರೆ ಬೆಂಗಳೂರಿಗೆ ಬಂದು ಯಾರನ್ನು ಬೇಕಾದರೂ ಕೇಳಿ ನೋಡಿ"ಎಂದರು ತುಸು ಗಂಭೀರವಾಗಿ. ಅದಕ್ಕೆ ಮೇಸ್ತ್ರಿಯ ಕಡೆಯವರು "ಹೌದೌದು. ಆ ಒಂದು ಶಬ್ದದ ಅರ್ಥವನ್ನು ತಿಳಿದುಕೊಳ್ಳಲು ನಾವೆಲ್ಲಾ ನಮ್ಮ ಕೆಲಸ ಕಾರ್ಯಗಳನ್ನೆಲ್ಲಾ ಬಿಟ್ಟು ೮-೧೦ ಘಂಟೆಗಳ ಕಾಲ ಪ್ರ್ಅಯಾಣಿಸಿ ದಣಿಯುವುದೂ ಅಲ್ಲದೆ ನೂರಾರು ರೂಪಾಯಿಗಳನ್ನು ಪ್ರಯಾಣಕ್ಕೆ ಬೇರೆ ದಂಡ ಮಾಡುತ್ತೇವೆ. (ಮಾಡಲಾಗುವುದಿಲ್ಲ ಎಂಬರ್ಥದಲ್ಲಿ) "ಊಟವನ್ನು ಬಡಿಸುತ್ತೇವೆ " ಎಂದು ನೀವೇ ತಿದ್ದಿಕೊಂಡು ಹೇಳಿಬಿಡಿ" ಎನ್ನಬೇಕೆ?!!!!!........
ನನ್ನ ನಲ್ಮೆಯ ಸೋದರಿ ಗೆಳತಿಯರೇ ಮತ್ತು ನನ್ನ ನಲ್ಮೆಯ ಸೋದರ ಗೆಳಯರೇ
ನಮಸ್ಕಾರ,
ಇದು ನನ್ನ ತೊದಲು ನುಡಿ ,
ಅಂಬೆಗಾಲಿಡುತ್ತಾ , ಬೆರಳುಗಳಿಂದ ಪಟಪಟಾಯಿಸಿದ್ದೇನೆ.
ಈ ಮುದ್ದು ಕಂದನ ಚೊಚ್ಚಲ ಕೊಡುಗೆಯನ್ನು ಸ್ವೀಕರಿಸಿರಿ.
ನಿಮ್ಮೆಲ್ಲರ ಅತ್ಯಂತ ಪ್ರೀತಿಯ ಮುದ್ದಿನ ಪುಟ್ಟ ಕಂದ.
ಸಾಲುಗಳು
- Add new comment
- 671 views
ಅನಿಸಿಕೆಗಳು
ಬಹುಶ ಈಗ ಓದಲು ಸಾಧ್ಯವಾಗಬಹುದು.
ಬಹುಶ ಈಗ ಓದಲು ಸಾಧ್ಯವಾಗಬಹುದು.
ಪ್ರಿಯ ಲಕ್ಷ್ ಅವರೇ, ನಿಮ್ಮ ಅನುಭವ
ಪ್ರಿಯ ಲಕ್ಷ್ ಅವರೇ, ನಿಮ್ಮ ಅನುಭವ ಓದಿದೆ. ಕರ್ನಾಟಕದ ಪ್ರಾದೇಶಿಕ ಭಾಷಾ ಶೈಲಿಗಳಷ್ಟೇ ಸ್ವಾರಸ್ಯಕರವಾಗಿದೆ. ಬಹುಷಃ ನನಗೂ ಇದೇ ಸಮಸ್ಯೆ ಕಾಡುತ್ತಿದೆ. ಈ ಬರಹದಲ್ಲಿ ಬಂದಿರುವ `ಮನೆಯ ಒಕ್ಕಲು ಯಾವಾಗ' ಅಂದರೇನು? ನಮ್ಮ ಕಡೆ `ಒಕ್ಕಲೆಬ್ಬಿಸುವುದು' ಎಂದರೆ ಸ್ಥಳ ಬಿಟ್ಟು ಓಡಿಸುವುದು ಎಂದಾಗುತ್ತದೆ! ಈ ಬರಹದ ಪ್ರಕಾರ ಗೃಹ ಪ್ರವೇಶ ಎಂಬರ್ಥ ಇರಬಹುದೆಂದು ನನ್ನ ಊಹೆ; ಸರಿಯೆ?
ಅದೇ ರೀತಿ ಸೋದರ ಮಾವ, ಸೋದರತ್ತೆ; ಸೋದರಳಿಯ ಪದಗಳನ್ನು ಕೇಳಿದ್ದೇನೆ; ನೀವು ಕರೆಯುವ `ಸೋದರ ಗೆಳೆಯ' ಪದವೂ ಸ್ವಾರಸ್ಯಕರವಾಗಿಯೇ ಇದೆ!
ದ. ಕ. ದಲ್ಲಿ --ಮನೆ ಒಕ್ಕಲು
ದ. ಕ. ದಲ್ಲಿ --ಮನೆ ಒಕ್ಕಲು ಎಂದರೆ ಮನೆಯನ್ನು ಹೊಕ್ಕುವುದು ಅರ್ಥಾತ್ ಗೃಹ ಪ್ರವೇಶವೆ.
ಮತ್ತೊಂದು ಕಡೆ ಇದೇ ಶಬ್ದ (ಒಕ್ಕಲು--ಒಕ್ಕುವುದು) ಎಂದರೆ ಅಗೆಯಲು / ತೋಡಲು ---ತೋಡುವುದು/ಅಗೆಯುವುದು ಎಂದಾಗುತ್ತದೆ.
ಪ್ರದೇಶದಿಂದ ಪ್ರದೇಶಕ್ಕೆ ಹೋಗುತ್ತಿದ್ದಂತೆ ಮಾರ್ಗದಲ್ಲಿ ಇಂತಹ ಸಾಕಷ್ಟು ಶಬ್ದಗಳು ಕಣ್ಣಿಗೆ ಗೋಚರವಾಗತೊಡಗುತ್ತವೆ/ಕಿವಿಗೆ ಕೇಳಿಸತೊಡಗುತ್ತವೆ/ಅರಿವಿಗೆ ಬರತೊಡಗುತ್ತವೆ.
ಕೆಲವೊಮ್ಮೆ ಇಂತಹ ಶಬ್ದಗಳಿಂದಾಗಿಯೇ ಮನೆಯೇ ಒಕ್ಕಲು ಎದ್ದ ಸಾಕಷ್ಟು ಉದಾಹರಣೆಗಳು ಹಿಂದೆ ನಡೆದುಹೋಗಿವೆ+ಹೋಗುತ್ತಿವೆ+ಹೋಗುತ್ತಿರುತ್ತವೆ.
ಕೆಲವೊಮ್ಮೆ ನವಿರಾದ ಹಾಸ್ಯವನ್ನುಣಿಸಿ ಮನವನ್ನು ತಣಿಸುತ್ತವೆ.
ನನ್ನ ಬರಹ "ವಿಸ್ಮಯನಗರಿ" ಯನ್ನು ಮನೆ ಒಕ್ಕಲು ಮಾಡಿ (ಗೃಹ ಪ್ರವೇಶ) , ಹೊಸ ಹೊಸ ವಿಚಾರಗಳನ್ನು ಒಕ್ಕುವ (ಅಗೆಯುವ) ಮತ್ತು
ತಪ್ಪು ಕಲ್ಪನೆಗಳನ್ನು ಒಕ್ಕಲೆಬ್ಬಿಸುವ (ಸ್ಥಳ ಬಿಟ್ಟು ಓಡಿಸುವ) ಸಾಧನವಾಗಲೆಂದು ಹಾರೈಸಿ.,.,.,.,
ಧನ್ಯವಾದಗಳು ಮಾನವ್
ಧನ್ಯವಾದಗಳು ಮಾನವ್
Re: ಹಾಕುತ್ತೇವೆ
ಧನ್ಯವಾದಗಳು ಮಾನವ್ + ಎಚ್.ಎಸ್. ಪ್ರಭಾಕರ